Shiva Rajkumar ವರುಣಾದಲ್ಲಿ ನಿನ್ನೆ ರ್ಯಾಲಿ ಚೆನ್ನಾಗಿ ಆಯಿತು. ಇಂದು ಶಿರಸಿ ಹೋಗ್ತಾ ಇದ್ದೇನೆ.
ನಾಳೆ ಜಗದೀಶ್ ಶೆಟ್ಟರ್ ಪರವಾಗಿ ಹೋಗ್ತಾ ಇದ್ದೆನೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಹೇಳಿದರು.
ಶಿವಮೊಗ್ಗದಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಬೀದರ್, ಬಸವ ಕಲ್ಯಾಣ, ಮುಂಡಗೋಡು, ಮಂಗಳೂರಿಗೆ ಹೋಗ್ತಾ ಇದ್ದೇನೆ. ಸೋಮಣ್ಣ ಕೂಡ ಆಪ್ತರು, ಪ್ರತಾಪ್ ಸಿಂಹ ಕೂಡ ಪರಿಚಯಸ್ತರು.ಅವರ ಬಗ್ಗೆ ಗೌರವ ಇದೆ. ನಾನೇನು ಹೇಳಲ್ಲ
ಕಾಂಗ್ರೆಸ್ ಬಗ್ಗೆ ಕೂಡ ನಾನು ಮಾತಾಡ್ತಾ ಇಲ್ಲ.
ಕೆಲ ಅಭ್ಯರ್ಥಿಗಳ ಪರ ಹೋಗ್ತಾ ಇದ್ದೇನೆ ಎಂದು ತಿಳಿಸಿದರು.
ಎಲ್ಲಾ ಪಕ್ಷದಲ್ಲೂ ನನಗೆ ಸ್ನೇಹಿತರು ಇದ್ದಾರೆ. ರಾಹುಲ್ ಗಾಂಧಿಯವರು ನನಗೆ ಇಷ್ಟವಾಗಿದ್ದರು. ಅವರನ್ನು ನಾನು ಭೇಟಿ ಮಾಡಿದೆ ಎಂದರು.
ಅವರು ಭಾರತ್ ಜೋಡೋ ಯಾತ್ರೆ ಇಂಪ್ರೆಸ್ ಆಗಿತ್ತು.
ಅವರ ಫಿಟ್ನೆಸ್ ನೋಡಿ ಇಂಪ್ರೆಸ್ ಆಗಿದ್ದೆ ಎಂದು ಹೇಳಿದರು.
Shiva Rajkumar ಚುನಾವಣಾ ಪ್ರಚಾರಕ್ಕೆ ಯಾರು ಪ್ರಭಾವ ಭೀರಿದ್ದು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ನಟ ಶಿವರಾಜ್ ಕುಮಾರ್ ಅವರು,
ಮಧುಗೋಸ್ಕರ ಪ್ರಚಾರಕ್ಕೆ ಬಂದೆ.
ನನಗೆ ಯಾರು ವಿರೋಧಿಗಳಿಲ್ಲ. ಎಲ್ಲ ಪಕ್ಷದಲ್ಲೂ ನನಗೆ ಸ್ನೇಹಿತರು ಇದ್ದಾರೆ ಎಂದರು.
