Narendra Modi ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣೆ ಕೆಲಸ ಭರದಿಂದ ಸಾಗಿದೆ.
ಸಣ್ಣ ಸಣ್ಣ ಸಭೆ, ವೈಯಕ್ತಿಕ ಭೇಟಿ, ವಿವಿಧ ವರ್ಗದ ಸಂಪರ್ಕದ ಮೂಲಕ ಮತದಾರರನ್ನು ತಲುಪಲಾಗುತ್ತಿದೆ.
ಈಗಾಗಲೇ ಎಲ್ಲಾ ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ 3 ಸುತ್ತಿನ ಪ್ರಚಾರ ನಡೆಸಿದ್ದಾರೆ.
ಇದಕ್ಕೆ ಪೂರಕವಾಗಿ ಪ್ರಧಾನಿ ನರೇಂದ್ರ ಮೋದಿ ಮೇ 7 ರಂದು ಬೆಳಗ್ಗೆ 11.30ಕ್ಕೆ ಬೆಂಗಳೂರಿನಿಂದ ನೇರವಾಗಿ ಬರಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್ ಅವರು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ನೆರೆಯ ದಾವಣಗೆರೆ ಹಾಗೂ ಚಿಕ್ಕಮಗಳೂರಿನ ಜಿಲ್ಲೆಯ ಕಾರ್ಯಕರ್ತರೂ ಸೇರಿದಂತೆ ಒಟ್ಟು 10ಕ್ಷೇತ್ರದ ಕಾರ್ಯಕರ್ತರು ಬರಲಿದ್ದಾರೆ.
ಪ್ರತಿ ಕ್ಷೇತ್ರದಿಂದ ಕನಿಷ್ಠ 30 ಸಾವಿರದಂತೆ 3 ಲಕ್ಷ ಜನರ ಬರುವ ನಿರೀಕ್ಷೆ ಇದೆ.
ಕಾರ್ಯಕರ್ತರು ಹೆಚ್ಚಾಗಿ ಬೈಕ್ ಹಾಗೂ ಕಾರ್ ನಲ್ಲಿ ಬರಲಿದ್ದಾರೆ.
ಕೆಲವೆಡೆಯಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ
ಆಯನೂರಿನಲ್ಲಿ ಎಕರೆ ಪ್ರದೇಶದಲ್ಲಿ ಬೃಹತ್ ವೇದಿಕೆ ಸಿದ್ಧಪಡಿಸಲಾಗುತ್ತಿದೆ.
ಪ್ರಧಾನಿ ಜೊತೆ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಎಲ್ಲಾ 10 ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
Narendra Modi ಆಯನೂರಿನ ರೈತರು ತಮ್ಮ ಜಮೀನ ನ್ನು ಕಾರ್ಯಕ್ರಮಕ್ಕೆ ಉಚಿತವಾಗಿ ನೀಡಿದ್ದಾರೆ.
ಈ ಕಾರ್ಯಕ್ರಮ ಕಾರ್ಯಕರ್ತರಿಗೆ ಹೆಚ್ಚಿನ ಶಕ್ತಿ ನೀಡಲಿದೆ.
ಬೆಳಗ್ಗೆ 11.30ಕ್ಕೆ ಬರುವ ಪ್ರಧಾನಿ ಮಧ್ಯಾನ್ಹ 2.30ಕ್ಕೆ ಹೊರಡಲಿದ್ದಾರೆ.
ಸುಮಾರು 50ನಿಮಿಷ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಸಭೆಗೆ ಬರುವ ಕಾರ್ಯಕರ್ತರ ವಾಹನ ನಿಲುಗಡೆ, ಆರೋಗ್ಯ, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಹೇಳಿದರು.