Friday, June 13, 2025
Friday, June 13, 2025

Election Campaign ಮನಸ್ಸಿನಿಂದ ಮನಸ್ಸಿಗೆ ಭಾಗ – 22

Date:

Election Campaign ವಿಚಿತ್ರ ಆದರೂ ಸತ್ಯ……

ಈ ವಿಷಯ ಸ್ವಲ್ಪ ವಿಚಿತ್ರವಾದರು ಇದರಲ್ಲಿರುವ ವಾಸ್ತವ ಮತ್ತು ಸತ್ಯದ ಹುಡುಕಾಟ ನಡೆಸಬೇಕಾಗಿದೆ………

ಚುನಾವಣೆಗಳಲ್ಲಿ ಮತ ಹಾಕಲು ಹಣ ಪಡೆಯುವವರಿಗೆ ಬೇಡ ಎಂದು ಹೇಳುವುದಕ್ಕಿಂತ ಅತಿ ಹೆಚ್ಚಿನ ಮಹತ್ವ ಹಣ ನೀಡುವ ಖದೀಮರಿಗೆ ಕಠಿಣ ಶಿಕ್ಷೆ ನೀಡಲು ಅಥವಾ ಅವರ ಮನಃಪರಿವರ್ತನೆಗೆ ನೀಡಬೇಕು…….

ಲಂಚ ನೀಡುವ ಸಾಮಾನ್ಯ ಜನರಿಗೆ ನೀಡಬೇಡಿ ಎಂದು ಹೇಳುವುದಕ್ಕಿಂತ ಅದನ್ನು ಪಡೆಯುವ ಭ್ರಷ್ಟರಿಗೆ ಬಹಿಷ್ಕಾರ ಹಾಕಬೇಕು…………

ಕೆಟ್ಟ ಕಾರ್ಯಕ್ರಮ ನೋಡಬೇಡಿ ಎಂದು ವೀಕ್ಷಕರಿಗೆ ಹೇಳುವುದಕ್ಕಿಂತ ಆ ರೀತಿಯ ಕೆಟ್ಟ ಕಾರ್ಯಕ್ರಮ ರೂಪಿಸಿ ಪ್ರಸಾರ ಮಾಡುವ ಚಾನಲ್ ಗಳಿಗೆ ಎಚ್ಚರಿಕೆ ಕೊಟ್ಟು ದಂಡ ವಿಧಿಸಬೇಕು………

ಮೌಡ್ಯವನ್ನು ನಂಬಿ ಜ್ಯೋತಿಷಿಗಳ ಮಾತು ಕೇಳುವ ಜನರಿಗೆ ಬುದ್ಧಿ ಹೇಳುವುದಕ್ಕಿಂತ ಜ್ಯೋತಿಷಿಗಳಲ್ಲೇ ವೈಜ್ಞಾನಿಕ ಮನೋಭಾವ ಬೆಳೆಸಲು ಪ್ರಯತ್ನಿಸಬೇಕು ಅಥವಾ ಅವರನ್ನು ಹೊರಹಾಕಬೇಕು…………….

ಸಿಗರೇಟು ಸೇದಬೇಡಿ, ಪ್ಲಾಸ್ಟಿಕ್ ಬಳಸಬೇಡಿ ಎಂದು ಜನಸಾಮಾನ್ಯರಿಗೆ ಹೇಳುವುದಕ್ಕಿಂತ ಅದರ ಉತ್ಪಾದನೆಯನ್ನೇ ನಿಷೇಧಿಸಬೇಕು……..

ಕಲಬೆರಕೆ, ಮೋಸ, ವಂಚನೆಗೆ ಒಳಗಾಗುವ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಿಂತ ಅದನ್ನು ಮಾಡುವ ದುರುಳರನ್ನು ನಿಯಂತ್ರಿಸಲು ಆಸಕ್ತಿ ವಹಿಸಬೇಕು…………..

Election Campaign ಏಕೆಂದರೆ ನಮ್ಮ ದೇಶದ ಜನಸಂಖ್ಯೆ ಸುಮಾರು 140 ಕೋಟಿಗೂ ಹೆಚ್ಚು. ಇಷ್ಟೊಂದು ಬೃಹತ್ ಮತ್ತು ವೈವಿಧ್ಯಮಯ ಜನರಿಗೆ ಸತ್ಯದ ನೆಲೆಯಲ್ಲಿ ವಾಸ್ತವಾಂಶ ತಿಳಿಸಿ ಬದಲಾಯಿಸುವುದು ಎಂತಹ ಮಹಾತ್ಮನಿಗೂ ಸಾಧ್ಯವಿಲ್ಲ. ಅದಕ್ಕೆ ಬದಲು ಹಣ ಹಂಚುವ, ಲಂಚ ಪಡೆಯುವ, ಮೌಡ್ಯ ಬಿತ್ತುವ, ಕೆಟ್ಟ ಕಾರ್ಯಕ್ರಮ ರೂಪಿಸುವ, ಕಲಬೆರಕೆ ಮಾಡುವ ಜನರ ಸಂಖ್ಯೆ ಕಡಿಮೆ ಇದೆ. ಅವರನ್ನೇ ಗುರಿಯಾಗಿಸಿ ದಕ್ಷ ಕಾರ್ಯಪಡೆ ರಚಿಸಿ ಅವರ ಮೇಲೆ ಕಠಿಣ ಕ್ರಮ ಕೈಗೊಂಡು ಅವರ ನಾಗರೀಕ ಹಕ್ಕುಗಳನ್ನು ಕಿತ್ತುಕೊಂಡು ಬಯಲು ಜೈಲುಗಳನ್ನು ನಿರ್ಮಿಸಿ ಅಲ್ಲಿ ಅವರನ್ನು ಕೂಡಿ ಹಾಕಿ ಅಲ್ಲಿಂದಲೇ ಅವರಿಂದ ದುಡಿಸಿಕೊಂಡು ಅವರ ಆತ್ಮಾವಲೋಕನಕ್ಕೆ ಅವಕಾಶ ಕಲ್ಪಿಸಬೇಕು……….

ಅದುಬಿಟ್ಟು ಜನ ಸರಿಯಿಲ್ಲ ಎಂಬುದನ್ನೇ ನೆಪವಾಗಿಟ್ಟುಕೊಂಡು ತಮ್ಮ ಅನೈತಿಕ ದಂಧೆಗಳನ್ನು ಮುಂದುವರಿಸಿಕೊಂಡು ಹೋಗಲು ಅವಕಾಶ ನೀಡಬಾರದು. ಇಷ್ಟೊಂದು ದೊಡ್ಡ ಗಾತ್ರದ, ಅಭಿವ್ಯಕ್ತಿ ಸ್ವಾತಂತ್ರ್ಯವಿರುವ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಮಾನ ಮನಸ್ಸುಗಳ ಒಗ್ಗಟ್ಟು ಪ್ರದರ್ಶಿಸುವುದು ಸಾಧ್ಯವಿಲ್ಲದ ಮಾತು………..

ಸಂಪೂರ್ಣ ಅಧಿಕಾರ ಹೊಂದಿದ ಒಂದು ಒಳ್ಳೆಯ ಸರ್ಕಾರ ಇದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗುತ್ತದೆ. ಅದಕ್ಕಾಗಿ ನಮ್ಮೆಲ್ಲರ ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ ಅಂತರಗದ ಚಳುವಳಿ ರೂಪಿಸಿಕೊಂಡು ಕ್ರಾಂತಿಕಾರಕ ಬದಲಾವಣೆಯ ಮುಖಾಂತರ ಅತ್ಯುತ್ತಮ ಸರ್ಕಾರ ರಚಿಸಿದರೆ ಇದು ಸುಲಭವಾಗುತ್ತದೆ. ನಮ್ಮ ಗಮನ ಆ ಕಡೆಯೇ ಹೆಚ್ಚು ಕೇಂದ್ರೀಕರಿಸಬೇಕಿದೆ……….

ಮುಖವಾಡಗಳ ಮರೆಯಲ್ಲಿ ಆಡಳಿತ ಮಾಡುವ ಜನರ ನಡುವೆ ನಾವು ಬೆಪ್ಪರಂತೆ ಬದುಕುವ ಮನಸ್ಥಿತಿ ತೊರೆಯಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ. ದುರ್ಬಲರಿಗೆ ಬುದ್ದಿ ಹೇಳುತ್ತಾ ಅವರ ಮೇಲೆ ಸವಾರಿ ಮಾಡುವುದಕ್ಕಿಂತ ನಮ್ಮ ಶಕ್ತಿಯನ್ನು ಪ್ರಬಲರ ಮೇಲೆ ತೋರಿಸಬೇಕು……

ಸಣ್ಣ ಪುಟ್ಟ ಬದಲಾವಣೆಗಳಿಂದ ವ್ಯವಸ್ಥೆಯ ಬದಲಾವಣೆ ಸಾಧ್ಯವಿಲ್ಲ. ಅದಕ್ಕಾಗಿ ನಿಮ್ಮೊಂದಿಗೆ ……………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್ ಕೆ.
9844013068……

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಅಪರಿಚಿತ ವ್ಯಕ್ತಿ ಸಾವು

Shivamogga Police ಶಿವಮೊಗ್ಗ ಬಿ.ಹೆಚ್ ರಸ್ತೆಯಲ್ಲಿರುವ ಮಿನಾಕ್ಷಿ ಭವನದ ಬಳಿ ಅಸ್ವಸ್ಥರಾಗಿ...

Shimoga-Bhadravati Urban Development Authority ಸುಂದರ ನಗರ ನಿರ್ಮಾಣಕ್ಕೆ ನಾಗರೀಕರು ಕೈ ಜೋಡಿಸಲು ಮನವಿ : ಹೆಚ್ ಎಸ್ ಸುಂದರೇಶ್

Shimoga-Bhadravati Urban Development Authority ಮಲೆನಾಡು ಭಾಗದಲ್ಲಿ ಹಸಿರು ಉಳಿಸಲು ಮತ್ತು...

CM Siddharamaih ಸಿಎಂ ಸಿದ್ಧರಾಮಯ್ಯ ಅವರಿಂದ ಕುಸುಮ್ ಸೌರೀಕರಣ ಯೋಜನೆಗೆ ಚಾಲನೆ

CM Siddharamaih ನಮ್ಮ ಸರ್ಕಾರ ಪ್ರತೀ ವರ್ಷ ₹19,000 ಕೋಟಿ...

CM Siddharamaih ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಿಎಂ ಸಭೆ

CM Siddharamaih ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಆರೋಗ್ಯ ಸಚಿವರು...