Wednesday, February 4, 2026
Wednesday, February 4, 2026

Drugs Mafia ಮಾದಕ ವಸ್ತುಗಳ ಮಾರಾಟದ ಬಗ್ಗೆ ಶಿವಮೊಗ್ಗ ತುಂಗಾನಗರ ಫೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Date:

Drugs Mafia  ದಿ: 05-03-2023 ರಂದು ಮಾದಕ ವಸ್ತುಗಳ ಮಾರಾಟದ ಬಗ್ಗೆ ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶ್ರೀ ರಾಜು ರೆಡ್ಡಿ ಬೆನ್ನೂರು ಪಿಎಸ್ಐ ತನಿಖೆ ನಡೆಸಿದ್ದಾರೆ.

ಕಾಮತ್ ಲೇಔಟ್ ಪಕ್ಕದಲ್ಲಿ ಸೈಫುಲ್ಲಾ ಖಾನ್ ಮತ್ತು ಗೌಸ್ ಫೀರ್ ಎಂಬವರು ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ತಿಳಿದುಬಂದಿದೆ.

ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಶ್ರೀ ಪ್ರಭು ಡಿಟಿ ಪೊಲೀಸ್ ಉಪಾಧೀಕ್ಷಕರು ಡಿ.ಸಿ.ಆರ್.ಬಿ ವಿಭಾಗ ಜಿಲ್ಲಾ ಪೊಲೀಸ್ ಕಚೇರಿ ಶಿವಮೊಗ್ಗ ರವರ ನೇತೃತ್ವದಲ್ಲಿ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ನಡೆಸಿದ್ದಾರೆ.

ಸೈಫುಲ್ಲಾ ಖಾನ್ , ಸೈಫು ಎಂಬ ಆರೋಪಿಗಳು ಮತ್ತು ಗೌಸ್ ಫೀರ್ ಆರೋಪಿಗಳನ್ನು ತುಂಗಾ ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Drugs Mafia  ಆರೋಪಿತರಿಂದ ಅಂದಾಜು ಮೌಲ್ಯ 10,000/- ರೂಗಳ 250 ಗ್ರಾಂ ತೂಕದ ಒಣ ಗಾಂಜಾ, ರೂ 380/- ನಗದು ಮತ್ತು ಕೃತ್ಯಕ್ಕೆ ಬಳಸಲಾದ 01 ದ್ವಿ ಚಕ್ರವಾಹನವನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ.

ಆರೋಪಿತರ ವಿರುದ್ಧ ಗುನ್ನೇ ಸಂಖ್ಯೆ 0089/2023 ಕಲಂ 20(ಬಿ) 8(ಸಿ) ಎನ್.ಡಿ.ಪಿ.ಎಸ್ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Narayana Super Specialty Hospital ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂಳೆ ಸಾಂದ್ರತೆ ಉಚಿತ ತಪಾಸಣೆ ಶಿಬಿರ

Narayana Super Specialty Hospital ಸಾರ್ವಜನಿಕರಲ್ಲಿ ಮೂಳೆ ಆರೋಗ್ಯದ ಬಗ್ಗೆ ಜಾಗೃತಿ...