Tuesday, May 19, 2026
Tuesday, May 19, 2026

ದಿನಕ್ಕೊಂದು ದ್ವಾದಶ ಜ್ಯೋತಿರ್ಲಿಂಗದ ಮಾಹಿತಿ

Date:

ದ್ವಾದಶ ಜ್ಯೋತಿರ್ಲಿಂಗಗಳು:

ಸರ್ವಮಂಗಳಕರನಾದ ಶಿವನ ಅಸ್ತಿತ್ವ ಸಾರುವ ಲಿಂಗರೂಪೀ ಸಾನಿಧ್ಯವೇ ಜ್ಯೋತಿರ್ಲಿಂಗಗಳೆಂದು ಕರೆಯುತ್ತಾರೆ.
ಇದನ್ನು ಯಾರೂ ಸ್ಥಾಪಿಸಿದ್ದಲ್ಲ!

ಸ್ಯಯಂಭೂ ಆಗಿದ್ದು ಇವನ್ನು ಯಾರೂ ಪ್ರತಿಷ್ಠಾಪಿಸಿರುವುದಿಲ್ಲ.
ಅವುಗಳನ್ನೇ ಜ್ಯೋತಿರ್ಲಿಂಗಗಳೆಂದು ಹೆಸರಿಸಲಾಗಿದೆ.
ಅವು ಹನ್ನೆರಡು ಭಾರತದ ವಿವಿಧ ಭಾಗಗಳಲ್ಲಿವೆ.

ದಕ್ಷಿಣ ಭಾರತದಲ್ಲಿರುವ ಪ್ರಸಿದ್ಧ ಜ್ಯೋತಿರ್ಲಿಂಗ ಕ್ಷೇತ್ರ ಶ್ರೀ ರಾಮೇಶ್ವರ. ತಮಿಳುನಾಡಿನ ರಾಮೇಶ್ವರಂನಲ್ಲಿರುವ ಈ ಪುಣ್ಯ ಕ್ಷೇತ್ರದ ಶಿವಲಿಂಗವನ್ನು ಭಗವಾನ್ ಶ್ರೀರಾಮನೇ ಪ್ರತಿಷ್ಠಾಪಿಸಿದ್ದಾನೆ ಎಂದು ಪುರಾಣ ಹೇಳುತ್ತದೆ. ಶ್ರೀ ರಾಮಚಂದ್ರನು ಬ್ರಹ್ಮ ಕುಲಕ್ಕೆ ಸೇರಿದ ರಾವಣನನ್ನು ಸಂಹರಿಸಿದ ಕಾರಣಕ್ಕೆ ಬ್ರಹ್ಮಹತ್ಯಾ ದೋಷಕ್ಕೆ ಈಡಾಗುತ್ತಾನೆ. ಆಗ ಅಗಸ್ತ್ಯ ಮಹಾಮುನಿಗಳು ಬ್ರಹ್ಮಹತ್ಯಾ ದೋಷ ಪರಿಹಾರಕ್ಕಾಗಿ ಶಿವಲಿಂಗ ಪ್ರತಿಷ್ಠಾಪಿಸಿ ಪೂಜಿಸುವಂತೆ ತಿಳಿಸುತ್ತಾರೆ.ಆಗ ಶ್ರೀರಾಮನಿಂದ ಪ್ರತಿಷ್ಠಾಪಿಸಲ್ಪಟ್ಟ ಶಿವಲಿಂಗವೇ ಶ್ರೀರಾಮೇಶ್ವರ ಅಥವಾ ರಾಮಲಿಂಗ ಎಂದು ಪ್ರಸಿದ್ಧವಾಯಿತು.ಶ್ರೀರಾಮನ ಬಾಣದಿಂದ ಉದ್ಭವವಾದ ಕೋಟಿತರ‍್ಥವೂ ಸೇರಿದಂತೆ ಅನೇಕ ಪುಣ್ಯತರ‍್ಥಗಳಿರುವುದು ಈ ಕ್ಷೇತ್ರದ ವಿಶೇಷತೆ.

ಮುಂದೆ ಅನೇಕ ರಾಜರುಗಳ ಕೊಡುಗೆಯಿಂದ ಇಲ್ಲಿ ಭವ್ಯ ಮಂದಿರ ನರ‍್ಮಾಣವಾಗಿದೆ. 22 ಅಡಿ ಉದ್ದ, 12 ಅಡಿ ಅಗಲ ಮತ್ತು 16 ಅಡಿಗಳಷ್ಟು ಎತ್ತರದ ಭವ್ಯ ನಂದಿ ವಿಗ್ರಹ ಇಲ್ಲಿನ ಪ್ರಮುಖ ಆರ‍್ಷಣೆ. ದೇವಸ್ಥಾನದ ಹೊರಪ್ರಾಂಗಣ 1212 ವಿಧವಿಧವಾದ ಕಲಾ ಕೆತ್ತನೆಗಳಿಂದ ಕೂಡಿದ ಸ್ತ೦ಭಗಳನ್ನು ಒಳಗೊಂಡಿದೆ.

ಆದಿಶಂಕರರಿಂದ ರಚಿತವಾಗಿರುವ ಶ್ಲೋಕ ಈ ತರ‍್ಥಕ್ಷೇತ್ರದ ಪಾವಿತ್ತ್ಯತೆ ಮತ್ತು ಪ್ರಾಮುಖ್ಯತೆಯನ್ನು ಎತ್ತಿಹಿಡಿದಿದೆ.

ಸುತಾಮ್ರರ‍್ಣೇ ಜಲರಾಶಿಯೋಗೇ ನಿಬಧ್ಯ೦ ಸೇತು೦ ವಿಶಿಖೈರಸಂಖೈಃ|
ಶ್ರೀರಾಮಚಂದ್ರೇಣ ಸರ‍್ಪಿತಂ ತಂ ರಾಮೇಶ್ವರಾಖ್ಯಂ
ನಿಯತಂ ನಮಾಮಿ.||

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ನಿಗದಿತ ಅವಧಿಯೊಳಗೆ ಅತ್ಯಂತ ಗುಣಮಟ್ಟದಲ್ಲಿ ಕಾಮಗಾರಿಗಳನ್ನ ಪೂರ್ಣಗೊಳಿಸಿ- ಸಚಿವ ಮಧು ಬಂಗಾರಪ್ಪ

Madhu Bangarappa ತಾಳಗುಪ್ಪ ಹೋಬಳಿ ಮರತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಹಳ್ಳಿ...

MESCOM ಆನವಟ್ಟಿ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಮೇ 19 ಜನ ಸಂಪರ್ಕ ಸಭೆ

MESCOM ಆನವಟ್ಟಿ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಮೇ 19 ರಂದು...

B.Y. Vijayendra ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ: ಭಂಡತನದ ಪರಾಕಾಷ್ಠತೆ- ಬಿ.ವೈ.ವಿಜಯೇಂದ್ರ

B.Y. Vijayendra ಯಾವ ಮಹತ್ಸಾಧನೆಗಾಗಿ ಕಾಂಗ್ರೆಸ್ ‌ ಸರ್ಕಾರ ಮೂರು ವರ್ಷದ...