ಶಿವಮೊಗ್ಗ: ದುಶ್ಚಟಗಳಿಗೆ ದಾಸರಾದರೆ ಜೀವನ ಹಾಳಾಗುತ್ತದೆ.
ಆದ್ದರಿಂದ ಯುವಜನರು ಮಾದಕ ವಸ್ತುಗಳಿಂದ
ದೂರವಿರಬೇಕು ಎಂದು ಜೆಸಿಐ ಇಂಡಿಯಾ ರಾಷ್ಟ್ರೀಯ
ತರಬೇತುದಾರ ಪ್ರಜ್ವಲ್ ಎಸ್ ಜೈನ್ ಹೇಳಿದರು.
ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಜೆಸಿಐ ಶಿವಮೊಗ್ಗ
ಸಹ್ಯಾದ್ರಿ ವತಿಯಿಂದ ಶಿವಮೊಗ್ಗ ನಗರದ ಗಾಯತ್ರಿ ಶಾಲೆಯಲ್ಲಿ
ಆಯೋಜಿಸಿದ್ದ ರಾಷ್ಟಿçÃಯ ಯುವ ದಿನ ಕಾರ್ಯಕ್ರಮ ಹಾಗೂ
ಮಾದಕ ವಸ್ತು ವಿರೋಧಿ ಅಭಿಯಾನದಲ್ಲಿ ಮಾತನಾಡಿ,
ಯುವಜನತೆ ಉತ್ತಮ ಜೀವನ ರೂಪಿಸಿಕೊಳ್ಳಲು ಸ್ವಾಮಿ
ವಿವೇಕಾನಂದರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು.
ಸ್ವಾಮಿ ವಿವೇಕಾನಂದರ ಬಗ್ಗೆ ಹೆಚ್ಚು ಅಧ್ಯಯನ ನಡೆಸಬೇಕು
ಎಂದು ತಿಳಿಸಿದರು.
ಶಾಲಾ ವಿದ್ಯಾರ್ಥಿಗಳಿಗೆ ವಿವೇಕಾನಂದರ ಜೀವನದ ಪ್ರಮುಖ
ಘಟನೆಗಳು, ತತ್ವ ಸಿದ್ಧಾಂತಗಳು ಮತ್ತು ಈಗಿನ
ಯುವಜನತೆಗೆ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ
ಅರಿವು ಮೂಡಿಸಲಾಯಿತು. ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.
ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷೆ ಸುಷ್ಮಾ ಬಿ ಹಿರೇಮಠ ಅವರು
ಕಾರ್ಯಕ್ರಮದ ಪ್ರಾಸ್ತವಿಕ ನುಡಿಯನ್ನು ಮಾತನಾಡಿ, ರಾಷ್ಟç
ನಿರ್ಮಾಣದ ಕಾರ್ಯದಲ್ಲಿ ಯುವಜನತೆಯ ಪಾತ್ರದ ಬಗ್ಗೆ ಅರಿವು
ಮೂಡಿಸಿದರು.
ಕಾರ್ಯಕ್ರಮದಲ್ಲಿ ವಲಯ ಉಪಾಧ್ಯಕ್ಷ ಸತೀಶ್ ಚಂದ್ರ, ಜೆಸಿಐ
ಶಿವಮೊಗ್ಗ ಸಹ್ಯಾದ್ರಿ ಕಾರ್ಯದರ್ಶಿ ಡಾ. ಲಲಿತಾ, ಕಾರ್ಯಕ್ರಮ
ನಿರ್ದೇಶಕಿ ಸುಷ್ಮಾ ಅರವಿಂದ್, ಟ್ರಸ್ಟ್ ಖಜಾಂಚಿ ಚಂದ್ರಹಾಸ ಪಿ.ರಾಯ್ಕರ್
ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ೪೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು
ಸದುಪಯೋಗ ಪಡೆದುಕೊಂಡರು. ಶಾಲೆಯ ಅಧ್ಯಾಪಕರು
ಮತ್ತು ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.
ಯುವಜನರು ದುಶ್ಚಟಗಳ ದಾಸರಾಗಬಾರದು-ಪ್ರಜ್ವಲ್ ಎಸ್.ಜೈನ್
Date: