Rotary Shimoga ರೋಟರಿ ದತ್ತಿನಿಧಿ ಮುಖಾಂತರ ಕೋಟ್ಯಂತರ ರೂ.ಗೂ ಅಧಿಕ ಮೊತ್ತದ ಹಣವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸಲಾಗಿದೆ.
ಪೊಲಿಯೋ ಲಸಿಕೆ, ಶಿಕ್ಷಣ, ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಬಳಸಲಾಗಿದೆ ಎಂದು ರೋಟರಿ ದತ್ತಿನಿಧಿ ವಲಯ ಸಂಯೋಜಕಿ, ಸಾಗರ ರೋಟರಿ ಕ್ಲಬ್ ಮಾಜಿ ಅಧ್ಯಕ್ಷೆ ಡಾ. ರಾಜನಂದಿನಿ ಕಾಗೋಡು ಹೇಳಿದರು.
ರೋಟರಿ ಶಿವಮೊಗ್ಗ ಸೆಂಟ್ರಲ್ ಕ್ಲಬ್‌ನಲ್ಲಿ ರೋಟರಿ ಫೌಂಡೇಷನ್ ಡೇ ಅಂಗವಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ರೋಟರಿ ದತ್ತಿನಿಧಿಗೆ ಯಾರು ಬೇಕಾದರೂ ದೇಣಿಗೆ ನೀಡಬಹುದು. ನಾವು ನೀಡುವ ದೇಣಿಗೆ ತುಂಬಾ ಪವಿತ್ರ ಕಾರ್ಯಕ್ಕೂ ಸದ್ವಿನಿಯೋಗವಾಗುತ್ತದೆ ಎಂದು ತಿಳಿಸಿದರು.
Rotary Shimoga ಇದೇ ಸಂದರ್ಭದಲ್ಲಿ ರೋಟರಿ ಫೌಂಡೇಷನ್‌ಗೆ ಪ್ರತಿ ವರ್ಷ 1,000 ಡಾಲರ್ ದೇಣಿಗೆ ನೀಡುತ್ತಿರುವ ಜಿಲ್ಲಾ ಮಾಜಿ ಗವರ್ನರ್ ಜಿ.ಎನ್.ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ರೋಟರಿ ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಕುರಿತು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, 2013ರಲ್ಲಿ ಸಿಎಸ್‌ಆರ್ ನೀತಿ ಜಾರಿಗೆ ಬಂದಿದ್ದು, ಸಾವಿರಾರು ಕೋಟಿ ರೂ. ವ್ಯವಹಾರ ನಡೆಸುತ್ತಿರುವ ಸಂಸ್ಥೆಗಳು, ಕಂಪನಿಗಳು, ಬ್ಯಾಂಕ್‌ಗಳು ಲಾಭಾಂಶದಲ್ಲಿ ಶೇ. 2ರಷ್ಟನು ಸಮಾಜದ ಉನ್ನತಿಗೆ ವೆಚ್ಚ ಮಾಡಲು ಕಾನೂನು ಅನುಕೂಲ ಮಾಡಿದೆ. ಪರಿಸರ ಕಾರ್ಯ, ಆರೋಗ್ಯ ರಕ್ಷಣೆ, ಮಹಿಳಾ ಸಬಲೀಕರಣ ಸೇರಿ ಸಮಾಜಮುಖಿ ಕೆಲಸಗಳಿಗೆ ಸಿಎಸ್‌ಆರ್ ಫಂಡ್ ಉಪಯೋಗವಾಗಲಿದೆ ಎಂದು ತಿಳಿಸಿದರು.
ರೋಟರಿ ಸೆಂಟ್ರಲ್ ಕ್ಲಬ್ ಅಧ್ಯಕ್ಷ ಜಿ.ಕಿರಣಕುಮಾರ್ ಮಾತನಾಡಿ, ರೋಟರಿ ಫೌಂಡೇಷನ್‌ಗೆ ಹೆಚ್ಚಿನ ದೇಣಿಗೆ ನೀಡುವ ಮೂಲಕ ನಮ್ಮ ಕ್ಲಬ್ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಪ್ರಮುಖರಾದ ಸುರೇಖಾ ಮುರಳೀಧರ್, ಜಿ.ಎನ್.ಪ್ರಕಾಶ್, ಕಾರ್ಯದರ್ಶಿ ಈಶ್ವರ್, ಚುಡಾಮಣಿ ಪವಾರ್, ವಿಜಯಪ್ರಕಾಶ್, ಗೀತಾ ಜಗದೀಶ್, ರಾಜಶ್ರೀ ಬಸವರಾಜ್, ಧರ್ಮೇಂದ್ರಸಿಂಗ್, ರವಿ ಕೋಟೋಜಿ, ಅರುಣ್ ದೀಕ್ಷಿತ್, ಮಂಜುನಾಥರಾವ್ ಕದಂ, ಆನಂದ್, ಅರುಣ್‌ಕುಮಾರ್, ರಾಜೀವ್ ಉಪಸ್ಥಿತರಿದ್ದರು.