Tuesday, March 31, 2026
Tuesday, March 31, 2026

ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಒತ್ತಾಯಿಸಿ ಭೋವಿ ಜನಾಂಗದ ಬೃಹತ್ ಸಮಾವೇಶ

Date:

ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಅಥವಾ ಜಿಲ್ಲೆಯ ಯಾವುದೇ ವಿಧಾನ ಸಭಾ ಕ್ಷೇತ್ರದಲ್ಲಿ ಭೋವಿ ಸಮಾಜಕ್ಕೆ ರಾಜಕೀಯ ಪಕ್ಷಗಳು ಟಿಕೆಟ್ ನೀಡಲೇಬೇಕೆಂದು ಒತ್ತಡ ಹೇರಲು ಜಿಲ್ಲಾ ಭೋವಿ ಸಮಾಜ ಮತ್ತೆ ನಗರದಲ್ಲಿ ಬೃಹತ್ ಸಮಾವೇಶ ನಡೆಸಲು ಮುಂದಾಗಿದೆ.

ಮುಂಬರುವ ಶ್ರೀ ಸಿದ್ದರಾಮೇಶ್ವರ ಜಯಂತಿ ಆಚರಣೆಯ ಮೂಲಕ ಜಿಲ್ಲಾದ್ಯಂತ ಭೋವಿ‌ ಸಮಾಜದ‌ ಜನರನ್ನು ಸಂಘಟಿಸಿ, ಅವರನ್ನು ಸಮಾವೇಶಕ್ಕ ಕರೆ ತರುವ ಮೂಲಕ ಬೃಹತ್ ಸಮಾವೇಶ ನಡೆಸಲು ಭೋವಿ ಸಮಾಜ ನಿರ್ಧರಿಸಿದೆ.ಸೋಮವಾರ ಬೆಳಗ್ಗೆ ಜಿಲ್ಲಾ ಭೋವಿ ಸಮಾಜದಲ್ಲಿ ನಡೆದ ಸಿದ್ದರಾಮೇಶ್ವರ ಜಯಂತಿ ಆಚರಣೆಯ ಪೂರ್ವ ಭಾವಿ ಸಭೆಯಲ್ಲಿ ಮುಖಂಡರು ಈ‌ನಿರ್ಧಾರ ತೆಗೆದುಕೊಂಡಿದ್ದಾರೆ.

ಜಿಲ್ಲೆಯ ಭೋವಿ ಸಮಾಜದ ಮುಖಂಡರು ಬಿಜೆಪಿ, ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳಲ್ಲೂ ಗುರುತಿಸಿಕೊಂಡಿದ್ದಾರೆ. ಆಯಾ ಪಕ್ಷಗಳಲ್ಲಿ ಯೋಗ್ಯತೆ ಇರುವ ಭೋವಿ ಸಮಾಜದ ಮುಖಂಡರನ್ನು ಗುರುತಿಸಿ ಟಿಕೆಟ್ ಘೋಷಣೆ ಮಾಡಬೇಕೆಂದು ಒತ್ತಡ ಹೇರುವ ಸಲುವಾಗಿಯೇ ಮತ್ತೊಮ್ಮೆ ನಗರದಲ್ಲಿ ಬೃಹತ್ ಸಮಾವೇಶ ನಡೆಸಲು ಜಿಲ್ಲಾ ಭೋವಿ ಸಮಾಜ ನಿರ್ಧರಿಸಿತು.

ಜಿಲ್ಲಾ ಭೋವಿ‌ಸಮಾಜದ ಅಧ್ಯಕ್ಷ ಎಸ್. ರವಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ‌ ಸಭೆಯಲ್ಲಿ ರಾಜಕೀಯ ಪ್ರಾತ್ಯನಿಧ್ಯಕ್ಕೆ ಪಕ್ಷಾತೀತವಾಗಿ ಹೋರಾಟ‌ನಡಸಲು ಸಭೆ ನಿರ್ಧರಿಸಿತು. ಹಾಗೊಂದು ವೇಳೆ ಬಿಜೆಪಿ. ಕಾಂಗ್ರೆಸ್ ಸೇರಿದಂತೆ ರಾಜಕೀಯ ಪಕ್ಷಗಳು ಜಿಲ್ಲಾ ಭೋವಿ ಸಮಾಜವನ್ನು‌ಕಡೆಗಣಿಸಿದರೆ ಪಕ್ಷೇತರವಾಗಿಯೂ ಸ್ಪರ್ಧೆ ಮಾಡುವುದಕ್ಕೂ ಸಭೆ ನಿರ್ಧರಿಸಿತು.

ಸಭೆಯಲ್ಲಿ ಪಾಲಿಕೆ ಸದಸ್ಯ ಧೀರರಾಜ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗೂ ಬಿಜೆಪಿ‌ಮುಖಂಡ ವೀರಭದ್ರಪ್ಪ ಪೂಜಾರಿ, ಭದ್ರಾವತಿ ನಗರಸಭೆ ಮಾಜಿ‌ಅಧ್ಯಕ್ಷ ಬಿ.ಟಿ.ನಾಗರಾಜ್, ಜಿಲ್ಲಾ ಭೋವಿ ಸಮಾಜದ ಕಾರ್ಯದರ್ಶಿ ರಾಮಕೃಷ್ಣ ಪ್ಪ, ಮುಖಂಡರಾದ ಕೃಷ್ಣಪ್ಪ, ತಿಮ್ಮರಾಜು, ಹೊಂಗಿರಣ ಲೋಕೇಶ್, ಬಸವರಾಜ್, ಮುರುಳಿ, ಹರ್ಷ ಭೋವಿ, ಮಂಜಣ್ಣ, ವಿಜಯ್ ಕುಮಾ್, ಶ್ರೀನಿವಾಸ್ , ಗಣೇಶ್ ಸೇರಿದಂತೆ ಹಲವರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಎಲ್ಲರೂ ಸಹಬಾಳ್ವೆ,ಸಹಕಾರ ಸೇವಾ ಮನೋಭಾವನೆಯಿಂದ ಬಾಳಬೇಕೆಂಬುದೇ ಮಹಾವೀರರ ಸಂದೇಶ- ಕೆ. ರಂಗನಾಥ್

ನಮ್ಮೂರ ಬಳಗದ ವತಿಯಿಂದ ಭಾರತೀಯ ಧಾರ್ಮಿಕ ಸುಧಾರಕರು ಮತ್ತು ಆಧ್ಯಾತ್ಮಿಕ ನಾಯಕರು...

Adichunchabagiri Education Trust ದೇಹ ಆರೋಗ್ಯವಾಗಿದ್ದರೆ, ದೇಶವೂ ಆರೋಗ್ಯ- ಶ್ರೀನಾದಮಾಯಾನಂದನಾಥಶ್ರೀ

ದೇಹದ ಆರೋಗ್ಯ ಉತ್ತಮವಾಗಿದ್ದರೆ, ದೇಶದ ಆರೋಗ್ಯವೂ ಚೆನ್ನಾಗಿರುತ್ತದೆ ಎಂದು ಶ್ರೀ ಆದಿ...

Klive Special Article ಮರೆಯಲಾಗದ ಮಾನವೀಯ ಸಂದೇಶ ಸಾರಿದ ಶ್ರೀಮಹಾವೀರ. ...

Klive Special Article ಜನ ಸಂಸ್ಕೃತಿಗಳು ನಿಂತ ನೀರಾದಾಗಲೆಲ್ಲಾ ಅದನ್ನು...