ನಮ್ ಟೀಮ್ ತಂಡವು ಕಳೆದ 20 ವರ್ಷದಿಂದ ನಿರಂತರವಾಗಿ ಶಿವಮೊಗ್ಗದಲ್ಲಿ ನೀನಾಸಂ ನಾಟಕೋತ್ಸವವನ್ನು ಆಯೋಜಿಸುತ್ತಾ ಬಂದಿದೆ.
ಭಾರತದಲ್ಲೇ ಅತ್ಯಂತ ಪ್ರಸಿದ್ಧಿ ಪಡೆದ ಸಾಗರ ತಾಲೂಕು ಹೆಗ್ಗೋಡಿನ ನೀನಾಸಂ ರೆಪರ್ಟರಿ ಕಲಾವಿದರು ಈ ನಾಟಕಗಳನ್ನು ಅಭಿನಯಿಸುತ್ತಾರೆ. ಕರೋನಾ ಇತ್ಯಾದಿ ಕಾರಣದಿಂದ ಸ್ಥಗಿತವಾಗಿದ್ದ ನೀನಾಸಂ ತಿರುಗಾಟವು ಈ ವರ್ಷದಿಂದ ಮತ್ತೆ ಆರಂಭವಾಗಿದ್ದು, ನಾಡಿನಾದ್ಯಂತ ನಾಟಕ ಪ್ರದರ್ಶನ ನಡೆಯಲಿದೆ.
ಈ ಬಾರಿಯೂ ಸಹ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಇದೇ 2022ರ ನವೆಂಬರ್ 22 ಹಾಗೂ 23ರಂದು ಸಂಜೆ 6:45ಕ್ಕೆ ನಾಟಕ ಪ್ರದರ್ಶನವಿರುತ್ತದೆ.
ನವೆಂಬರ್ 22ರಂದು ಸಂಜೆ ಮಾಧವ ಚಿಪ್ಪಳಿ ಅವರು ಅನುವಾದಿಸಿರುವ ಯೂರಿಪಿಡೀಸ್ ರಚಿತ ಇಫಿಜೀನಿಯಾ ನಾಟಕಗಳು ಪ್ರದರ್ಶನವಾಗಲಿದೆ. ನವೆಂಬರ್ 23ರ ಸಂಜೆ ಪ್ರವೀಣ್ ಕುಮಾರ್ ಎನ್.ಎ. ಎಡಮಂಗಲ ಅವರ ನಿರ್ದೇಶನದಲ್ಲಿ ರವೀಂದ್ರ ನಾಥ ಟ್ಯಾಗೋರರ ಮೂಲ ರಚನೆ, ಅಹೋಬಲ ಶಂಕರರಾವ್ ಅವರ ಅನುವಾದದ ಮುಕ್ತಧಾರ ನಾಟಕ ಪ್ರದರ್ಶನವಾಗುವುದು. ನಾಟಕಕ್ಕೆ ಪ್ರವೇಶ ದರ ಒಂದು ನಾಟಕಕ್ಕೆ ಒಬ್ಬರಿಗೆ ರೂ. 50 ಆಗಿರುತ್ತದೆ.
ಹೆಚ್ಚಿನ ವಿವರಕ್ಕೆ 9844518866 ಸಂಪರ್ಕಿಸಬಹುದು ಎಂದು ನಮ್ ಟೀಮ್ ಅಧ್ಯಕ್ಷ ಅ.ಮ. ಶಿವಮೂರ್ತಿ ಅವರು ತಿಳಿಸಿದ್ದಾರೆ.