Sunday, April 20, 2025
Sunday, April 20, 2025

ಯುಎಇ ಯಿಂದ ಉದ್ಯೋಗ ಸಂಬಂಧಿ ಕಾಯ್ದೆ ಆಧುನೀಕರಣ ಅನುಕೂಲ

Date:

ಯುಎಇಯ ಮಾನವ ಸಂಪನ್ಮೂಲ ಇಲಾಖೆಯು ಇತ್ತೀಚೆಗೆ ಹೆಚ್ಚಿನ ನಮ್ಯತೆ(ಫ್ಲೆಕ್ಸಿಬಿಲಿಟಿ) ಒದಗಿಸುವ ಉದ್ದೇಶದಿಂದ ಉದ್ಯೋಗ ಸಂಬಂಧಗಳ ಮೇಲಿನ ತನ್ನ ಕಾಯಿದೆಯನ್ನು ಆಧುನೀಕರಿಸಿದ್ದು ಇದರಿಂದ ಬಾರತೀಯರಿಗೆ ಅನುಕೂಲವಾಗಬಹುದು ಎಂದು ಮೂಲಗಳು ಹೇಳಿವೆ.

ಉದ್ಯೋಗ ಒಪ್ಪಂದಗಳ ಅವಧಿಯ ಮೇಲಿನ ಮಿತಿಯನ್ನು ಯುಎಇ ತೆಗೆದುಹಾಕಿದ್ದು ಈ ಕ್ರಮವು ದೇಶವನ್ನು ‘ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಹೆಚ್ಚು ಸಮತೋಲಿತ’ ಪ್ರದೇಶವಾಗಿ ರೂಪಿಸಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.

ಹೊಸ ಕಾನೂನಿನ ಹಿನ್ನೆಲೆಯಲ್ಲಿ, ಅನಿರ್ದಿಷ್ಟ ಒಪ್ಪಂದಗಳನ್ನು ಸ್ಥಿರ ಅವಧಿಯ ಒಪ್ಪಂದಗಳಿಗೆ ಬದಲಾಯಿಸಲಾಗುತ್ತದೆ. ಈ ಹಿಂದೆ ಕೆಲಸಗಾರರನ್ನು ಮೂರು ವರ್ಷದ ಸ್ಥಿರ ಅವಧಿಯ ಉದ್ಯೋಗ ಒಪ್ಪಂದದ ಅನ್ವಯ ನೇಮಿಸಿಕೊಳ್ಳಲಾಗುತ್ತಿತ್ತು. ಈಗ ಈ ಮಿತಿಯನ್ನು ತೆಗೆದು ಹಾಕಲಾಗಿದೆ. ಹೊಸ ತಿದ್ದುಪಡಿಯ ಪ್ರಕಾರ, ಎಲ್ಲಾ ಉದ್ಯೋಗ ಒಪ್ಪಂದಗಳು ನಿರ್ಧಿಷ್ಟ ಅವಧಿಯನ್ನು ಒಳಗೊಂಡಿರಬೇಕು, ಆದರೆ ಅವಧಿಗೆ ಯಾವುದೇ ಮಿತಿಯನ್ನು ಹೇರಲಾಗಿಲ್ಲ. ಆದ್ದರಿಂದ ಉದ್ಯೋಗ ಒಪ್ಪಂದವನ್ನು ನವೀಕರಿಸಬಹುದು.

ಈ ಹಿಂದೆ ಉದ್ಯೋಗ ಒಪ್ಪಂದಗಳನ್ನು ಉದ್ಯೋಗಿಯ ವೀಸಾ ಸ್ಥಿತಿ(ಸ್ಟೇಟಸ್)ನೊಂದಿಗೆ ಹೊಂದಿಸಲಾಗುತ್ತಿತ್ತು. ಇದರಿಂದಾಗಿ ಒಪ್ಪಂದಗಳು ಈ ಹಿಂದಿನ ನಿವಾಸ ವೀಸಾದ ವಾಯಿದೆಯಾದ 2 ಅಥವಾ 3 ವರ್ಷಕ್ಕೆ ಸೀಮಿತವಾಗಿರುತ್ತಿತ್ತು. ಆದರೆ ಈಗಿನ ನವೀಕರಣದಿಂದಾಗಿ, ಉದ್ಯೋಗ ಒಪ್ಪಂದವು ಅರ್ಜಿದಾರನ ವೀಸಾ ಸ್ಥಿತಿಗಿಂತ ಹೆಚ್ಚಿನ ಅವಧಿಯನ್ನು ಹೊಂದಿರಲು ಸಾಧ್ಯವಾಗಲಿದೆ.

ಆದ್ದರಿಂದ ಈ ಮಾರ್ಪಾಡು ಭಾರತೀಯರಿಗೆ ಹೆಚ್ಚಿನ ಪ್ರಯೋಜನಕಾರಿಯಾಗಬಹುದು ಎಂದು ವರದಿ ಹೇಳಿದೆ.
ಹೊಸ ನಿಯಮದ ಪ್ರಕಾರ, ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವಾಗ ಹೊಂದಿಕೊಳ್ಳುವ(ಫ್ಲೆಕ್ಸಿಬಲ್), ತಾತ್ಕಾಲಿಕ ಅಥವಾ ಅರೆಕಾಲಿಕ ಒಪ್ಪಂದಗಳನ್ನು ಪಡೆಯಲು ಮತ್ತು ಒಂದಕ್ಕಿಂತ ಹೆಚ್ಚು ಉದ್ಯೋಗ ಮಾದರಿಗಳನ್ನು ಸಂಯೋಜಿಸಲು ಅವಕಾಶವಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Karnataka Sports Karate Association ಕರಾಟೆ ತೀರ್ಪುಗಾರರ ಪರೀಕ್ಷೆಯಲ್ಲಿ ಶಿವಮೊಗ್ಗದ ಶ್ರೀಹರ್ಷ ಉತ್ತೀರ್ಣ

Akhila Karnataka Sports Karate Association ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ಅಖಿಲ...

ಶಿವಮೊಗ್ಗದಲ್ಲಿ ಯಶಸ್ವಿಯಾಗಿ ನಡೆದ ಕನಕದಾಸರ ಕೀರ್ತನೆ ಗಾಯನ ಸ್ಪರ್ಧೆ

ಶಿವಮೊಗ್ಗ ಕನಕ ಭಜನಾ ಮಂಡಳಿಯವರು ದಶಮಾನೋತ್ಸವ ಕಾರ್ಯಕ್ರಮವನ್ನು ಜಯಂತಿ ಪರಮೇಶ್ವರ್ ರವರ...

Madhu Bangarappa ವಿದ್ಯಾರ್ಥಿಯ ಜನಿವಾರ ತೆಗೆಸಿದ ಪ್ರಕರಣ ಖಂಡನೀಯ- ಸಚಿವ‌ ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಯ...