Thursday, June 18, 2026
Thursday, June 18, 2026

ನನ್ನ ಖಾತೆಯನ್ನೂ ಹ್ಯಾಕ್ ಮಾಡಲಾಗಿತ್ತು- ಸಂಸದ ರಾಘವೇಂದ್ರ

Date:

ಹ್ಯಾಕರ್ಸ್ ನನ್ನ ಬ್ಯಾಂಕ್​​ ಖಾತೆಯನ್ನು ಹ್ಯಾಕ್​ ಮಾಡಿ, ಖಾತೆಯಲ್ಲಿದ್ದ 16 ಲಕ್ಷ ರೂ ದೋಚಿದ್ದರು ಎಂದು ಸಂಸದ ಬಿ ವೈ ರಾಘವೇಂದ್ರ ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ ಬ್ಯಾಂಕ್‌ ಡಿಜಿಟಲ್‌ ಪಾವತಿ ಕಾರ್ಯಾಗಾರದಲ್ಲಿ ಹೇಳಿದ್ದಾರೆ.

ಮುಂಬೈನಿಂದ ಓರ್ವ ವ್ಯಕ್ತಿ ನನ್ನ ಅಕೌಂಟ್​ನ್ನು ಹ್ಯಾಕ್ ಮಾಡಿ ಸುಮಾರು 16 ಲಕ್ಷ ರೂಪಾಯಿ ದೋಚಿದ್ದನು. ಈ ಸಂಬಂಧ ನಾನು ಯಾವುದೇ ವ್ಯವಹಾರ ಮಾಡದೇ ಡ್ರಾ ಆಗಿದೆ ಎಂದು ದೂರು ನೀಡಿದ್ದೆ. ಶಿವಮೊಗ್ಗ ಪೊಲೀಸರು ಮುಂಬೈಗೆ ಹೋಗಿ ಆತನನ್ನ ಬಂಧಿಸಿ ಕರೆತಂದಿದ್ದರು.

ಆತ ಅಂತಾರಾಷ್ಟ್ರೀಯ ಮಟ್ಟದ ಸೈಬರ್‌ ಹ್ಯಾಕರ್‌. ಈ ತರಹದ ಸಾಕಷ್ಟು ಜನರನ್ನ ಮೋಸಗೊಳಿಸಿ ಕೋಟಿಗಟ್ಟಲೇ ಹಣ ಮಾಡಿಕೊಂಡಿದ್ದನು. ಆತನ ಇತಿಹಾಸ ತೆಗೆದು ನೋಡಿದರೆ ನೂರಾರು ಜನರಿಗೆ ಮೋಸ ಮಾಡಿ ಹಣ ಲಪಟಾಯಿಸಿದ್ದನು. ನನ್ನ ಹಣ ವಾಪಸ್‌ ಬಂತು ಅದರ ಜೊತೆ ಹಲವರ ಹಣವೂ ಸಹ ಬಂತು. ನಾವು ಎಚ್ಚರಿಕೆಯಿಂದ ವ್ಯವಹರಿಸಬೇಕೆಂದು ಆನ್‌ಲೈನ್‌ನಲ್ಲಿ ಬಲೆ ಬೀಸುವ ಹ್ಯಾಕರ್‌ಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...