Friday, January 24, 2025
Friday, January 24, 2025

ಯುಎಇ ಯಿಂದ ಉದ್ಯೋಗ ಸಂಬಂಧಿ ಕಾಯ್ದೆ ಆಧುನೀಕರಣ ಅನುಕೂಲ

Date:

ಯುಎಇಯ ಮಾನವ ಸಂಪನ್ಮೂಲ ಇಲಾಖೆಯು ಇತ್ತೀಚೆಗೆ ಹೆಚ್ಚಿನ ನಮ್ಯತೆ(ಫ್ಲೆಕ್ಸಿಬಿಲಿಟಿ) ಒದಗಿಸುವ ಉದ್ದೇಶದಿಂದ ಉದ್ಯೋಗ ಸಂಬಂಧಗಳ ಮೇಲಿನ ತನ್ನ ಕಾಯಿದೆಯನ್ನು ಆಧುನೀಕರಿಸಿದ್ದು ಇದರಿಂದ ಬಾರತೀಯರಿಗೆ ಅನುಕೂಲವಾಗಬಹುದು ಎಂದು ಮೂಲಗಳು ಹೇಳಿವೆ.

ಉದ್ಯೋಗ ಒಪ್ಪಂದಗಳ ಅವಧಿಯ ಮೇಲಿನ ಮಿತಿಯನ್ನು ಯುಎಇ ತೆಗೆದುಹಾಕಿದ್ದು ಈ ಕ್ರಮವು ದೇಶವನ್ನು ‘ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಹೆಚ್ಚು ಸಮತೋಲಿತ’ ಪ್ರದೇಶವಾಗಿ ರೂಪಿಸಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.

ಹೊಸ ಕಾನೂನಿನ ಹಿನ್ನೆಲೆಯಲ್ಲಿ, ಅನಿರ್ದಿಷ್ಟ ಒಪ್ಪಂದಗಳನ್ನು ಸ್ಥಿರ ಅವಧಿಯ ಒಪ್ಪಂದಗಳಿಗೆ ಬದಲಾಯಿಸಲಾಗುತ್ತದೆ. ಈ ಹಿಂದೆ ಕೆಲಸಗಾರರನ್ನು ಮೂರು ವರ್ಷದ ಸ್ಥಿರ ಅವಧಿಯ ಉದ್ಯೋಗ ಒಪ್ಪಂದದ ಅನ್ವಯ ನೇಮಿಸಿಕೊಳ್ಳಲಾಗುತ್ತಿತ್ತು. ಈಗ ಈ ಮಿತಿಯನ್ನು ತೆಗೆದು ಹಾಕಲಾಗಿದೆ. ಹೊಸ ತಿದ್ದುಪಡಿಯ ಪ್ರಕಾರ, ಎಲ್ಲಾ ಉದ್ಯೋಗ ಒಪ್ಪಂದಗಳು ನಿರ್ಧಿಷ್ಟ ಅವಧಿಯನ್ನು ಒಳಗೊಂಡಿರಬೇಕು, ಆದರೆ ಅವಧಿಗೆ ಯಾವುದೇ ಮಿತಿಯನ್ನು ಹೇರಲಾಗಿಲ್ಲ. ಆದ್ದರಿಂದ ಉದ್ಯೋಗ ಒಪ್ಪಂದವನ್ನು ನವೀಕರಿಸಬಹುದು.

ಈ ಹಿಂದೆ ಉದ್ಯೋಗ ಒಪ್ಪಂದಗಳನ್ನು ಉದ್ಯೋಗಿಯ ವೀಸಾ ಸ್ಥಿತಿ(ಸ್ಟೇಟಸ್)ನೊಂದಿಗೆ ಹೊಂದಿಸಲಾಗುತ್ತಿತ್ತು. ಇದರಿಂದಾಗಿ ಒಪ್ಪಂದಗಳು ಈ ಹಿಂದಿನ ನಿವಾಸ ವೀಸಾದ ವಾಯಿದೆಯಾದ 2 ಅಥವಾ 3 ವರ್ಷಕ್ಕೆ ಸೀಮಿತವಾಗಿರುತ್ತಿತ್ತು. ಆದರೆ ಈಗಿನ ನವೀಕರಣದಿಂದಾಗಿ, ಉದ್ಯೋಗ ಒಪ್ಪಂದವು ಅರ್ಜಿದಾರನ ವೀಸಾ ಸ್ಥಿತಿಗಿಂತ ಹೆಚ್ಚಿನ ಅವಧಿಯನ್ನು ಹೊಂದಿರಲು ಸಾಧ್ಯವಾಗಲಿದೆ.

ಆದ್ದರಿಂದ ಈ ಮಾರ್ಪಾಡು ಭಾರತೀಯರಿಗೆ ಹೆಚ್ಚಿನ ಪ್ರಯೋಜನಕಾರಿಯಾಗಬಹುದು ಎಂದು ವರದಿ ಹೇಳಿದೆ.
ಹೊಸ ನಿಯಮದ ಪ್ರಕಾರ, ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವಾಗ ಹೊಂದಿಕೊಳ್ಳುವ(ಫ್ಲೆಕ್ಸಿಬಲ್), ತಾತ್ಕಾಲಿಕ ಅಥವಾ ಅರೆಕಾಲಿಕ ಒಪ್ಪಂದಗಳನ್ನು ಪಡೆಯಲು ಮತ್ತು ಒಂದಕ್ಕಿಂತ ಹೆಚ್ಚು ಉದ್ಯೋಗ ಮಾದರಿಗಳನ್ನು ಸಂಯೋಜಿಸಲು ಅವಕಾಶವಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Fisheries ಪ್ರಧಾನ ಮಂತ್ರಿ‌ ಮತ್ಸ್ಯ ಸಂಪದ & ನೀಲಿಕ್ರಾಂತಿ‌‌ ಯೋಜನೆಯಡಿ ಅರ್ಜಿ‌ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು ೨೦೨೨-೨೩ ರಿಂದ ೨೦೨೪-೨೫ನೇ ಸಾಲಿನವರೆಗೂ...

Republic Day ಲಕ್ಕುಂಡಿಯ ಶಿಲ್ಪಕಲೆ ಸ್ಥಬ್ಧಚಿತ್ರವು ಗಣರಾಜ್ಯೋತ್ಸವ‌ ಪ್ರಶಸ್ತಿ‌‌ ಪಡೆಯುವ ವಿಶ್ವಾಸವಿದೆ- ಹೇಮಂತ್ ನಿಂಬಾಳ್ಕರ್

Republic Day ಕರ್ನಾಟಕ ರಾಜ್ಯದ ಪರವಾಗಿ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪಾಲ್ಗೊಳ್ಳುವ ವಾರ್ತಾ...

Shivaganga Yoga Centre ನಿತ್ಯ ಯೋಗಾಭ್ಯಾಸದಿಂದ ಮಾನಸಿಕ ಸಾಮರ್ಥ್ಯ,ನೆಮ್ಮದಿ ಲಭ್ಯ-ಜಿ.ಎಸ್.ಓಂಕಾರ್

Shivaganga Yoga Centre ಒತ್ತಡಮುಕ್ತ ಜೀವನಶೈಲಿ ರೂಢಿಸಿಕೊಳ್ಳಲು ಯೋಗ, ಪ್ರಾಣಾಯಾಮ...

National Voter’s Day ರಾಷ್ಟ್ರೀಯ ಮತದಾರರ ದಿನಾಚರಣೆ.ಪ್ರತಿಜ್ಞಾ ವಿಧಿ‌ ಸ್ವೀಕಾರ

National Voter's Day ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಶುಕ್ರವಾರ ಜಿಲ್ಲಾಡಳಿತ...