ದೇಶದಲ್ಲಿ ರಸಗೊಬ್ಬರ ಉತ್ಪಾದನೆ ಹೆಚ್ಚಿಸಲು ಹಾಗೂ ಸಮರ್ಪಕ ಗೊಬ್ಬರ ಪೂರೈಕೆಗಾಗಿ ಭಾರತೀಯ ಸಾರ್ವಜನಿಕ ವಲಯದ ಉದ್ಯಮಗಳು (ಪಿಎಸ್‌ಯು) ರಷ್ಯಾದ ಉದ್ಯಮದ ಫೋಸ್ ಆಗ್ರೋದೊಂದಿಗೆ ದೀರ್ಘಕಾಲದ ಒಪ್ಪಂದ ಮಾಡಿಕೊಂಡಿವೆ ಎಂದು ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಮನ್ಸೂಖ್ ಮಾಂಡವೀಯ ತಿಳಿಸಿದ್ದಾರೆ.
ಭಾರತಕ್ಕೆ ಡೈ ಅಮೋನಿಯಂ ಫಾಸ್ಫೇಟ್ (ಡಿಎಪಿ) ಹಾಗೂ ಅದರ ಕಚ್ಚಾ ಸಾಮಗ್ರಿಗಳ ನಿಯಮಿತ ಮತ್ತು ಸಕಾಲಕ್ಕೆ ಸಮರ್ಪಕ ಒದಗಿಸುವ ಪ್ರಮಾಣವನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ. ಈಗಾಗಲೇ ಗೊಬ್ಬರದ ಕಚ್ಚಾ ಸಾಮಾಗ್ರಿಗಳನ್ನು ಪೈಪೋಟಿ ದರದಲ್ಲಿ ಭಾರತಕ್ಕೆ ನೀಡಲು ಸೌದಿ ಅರೇಬಿಯಾ, ರಷ್ಯಾ ಸೇರಿದಂತೆ ಇತರ ದೇಶಗಳು ಸಿದ್ಧವಿರುವುದಾಗಿ ವಿವರಿಸಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಮಾಡಿಕೊಂಡ ಈ ಒಪ್ಪಂದದಿಂದಾಗಿ ಡೈಅಮೋನಿಯಂ ಫಾಸ್ಫೇಟ್ (ಡಿಎಪಿ) ಸೇರಿದಂತೆ ಐದು ರೀತಿಯ ರಸಗೊಬ್ಬರಗಳು ಭಾರತಕ್ಕೆ ಪೂರೈಕೆ ಆಗಲಿವೆ ಎಂದು ಮನ್ಸೂಖ್ ಮಾಂಡವೀಯ ರಾಜ್ಯಸಭೆಗೆ ಸಲ್ಲಿಸಿದ ಕಡತದಲ್ಲಿ ಉಲ್ಲೇಖಿಸಲಾಗಿದೆ.