ಗರ್ಭದಲ್ಲಿರುವ ಮಗುವನ್ನು ದತ್ತು ತೆಗೆದುಕೊಳ್ಳುವಂತಿಲ್ಲ ಎಂದು ಪಂಜಾಬ್,ಹರಿಯಾಣ ಹೈಕೋರ್ಟ್ ಅತ್ಯಂತ ಮಹತ್ವದ ತೀರ್ಪು ನೀಡಿದೆ.
ಪಟಿಯಾಲ ನಿವಾಸಿ ಪೂಜಾ ರಾಣಿ ಎಂಬ ಮಹಿಳೆ ದತ್ತು ಪಡೆದ ಪೋಷಕರಿಂದ ತನ್ನ ನವಜಾತ ಶಿಶುವನ್ನು ಮರಳಿ ಕೊಡಿಸಬೇಕೆಂದು ಹೈಕೋರ್ಟ್ ಮೊರೆ ಹೋಗಿದ್ದಾರೆ.
ನನ್ನ ಮಗು ಗರ್ಭದಲ್ಲಿದ್ದಾಗಲೇ ಅದನ್ನು ದತ್ತು ಪಡೆಯಲು ದಂಪತಿಗಳಿಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ನಾನು ಕೂಡ ಸಮ್ಮತಿಸಿದ್ದೆ. ಮಗು 23 ಮೇ 2022 ರಂದು ಜನಿಸಿದಾಗಿನಿಂದ ದಂಪತಿಗಳ ಬಳಿಯೇ ಇದೆ. ಮಗುವನ್ನು ದತ್ತು ಪಡೆದಿರುವ ಯಾವುದೇ ನೋಂದಾಯಿತ ಪ್ರಮಾಣಪತ್ರವನ್ನು ಹೊಂದಿಲ್ಲ. ನನ್ನ ಮಗುವನ್ನು ತನಗೆ ಮರಳಿ ಕೊಡಿಸಬೇಕೆಂದು ಮಹಿಳೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆಯ ನಂತರ ಮಗುವನ್ನು ವಾಪಸ್ ನೀಡಲು ದಂಪತಿಗೆ ಕೋರ್ಟ್ ತಾಕೀತು ಮಾಡಿದೆ. ಹಿಂದೂ ದತ್ತು ಸ್ವೀಕಾರ ಕಾಯ್ದೆಯಲ್ಲಿ ಅಂತಹ ಯಾವುದೇ ಅವಕಾಶವಿಲ್ಲ. ಇದು ಕಾನೂನು ಬಾಹಿರ. ದತ್ತು ಸ್ವೀಕಾರಕ್ಕೆ ಸಂಬಂಧಿಸಿದಂತೆ ಯಾವುದೇ ನೋಂದಾಯಿತ ದಾಖಲೆ ಇಲ್ಲದಿದ್ದಲ್ಲಿ ಮಗುವನ್ನು ಮೂಲ ಪೋಷಕರಿಗೆ ಒಪ್ಪಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಮಗುವನ್ನು ಅವರ ಮೂಲ ಪೋಷಕರಿಗೆ ಹಸ್ತಾಂತರಿಸುವಂತೆ ನ್ಯಾಯಾಲಯವು ಆದೇಶಿಸಿದೆ.