ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೇ. ಇದರ ಜೊತೆಗೆ 4ನೇ ಅಲೆಯ ಭೀತಿ ಕೂಡ ಹೆಚ್ಚಾಗಿದೆ.
ಕಳೆದ ಒಂದು ದಿನದಲ್ಲಿ 18,819 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.
ಸಾವಿನ ಸಂಖ್ಯೆಯಲ್ಲಿಯೂ ಏರಿಕೆ ಕಂಡು ಬಂದಿದೆ. 24 ಗಂಟೆಯಲ್ಲಿ 39 ಮಂದಿ ಮಹಾಮಾರಿಗೆ ಸಾವನ್ನಪ್ಪಿದ್ದಾರೆ.
ಈ ಮೂಲಕ ದೇಶದಲ್ಲಿ ಈವರೆಗೆ ಕೊರೋನಾಕ್ಕೆ ಸಾವನ್ನಪ್ಪಿದವರ ಸಂಖ್ಯೆ 5,25,116 ಕ್ಕೆ ಹೆಚ್ಚಾಗಿದೆ.
ಇನ್ನು ದೇಶದಲ್ಲಿ 1,04,555 ಕೊರೋನಾ ಸಕ್ರಿಯ ಪ್ರಕರಣಗಳಿದೆ. 24 ಗಂಟೆಯಲ್ಲಿ 13,827 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಇದುವರೆಗೆ 4,28,22,493 ಜನರು ಕೊರೋನಾ ದಿಂದ ಗುಣಮುಖರಾಗಿದ್ದಾರೆ.
14,17,217 ಜನರಿಗೆ ಕೊರೋನಾ ಲಸಿಕೆ ನೀಡಲಾಗಿದೆ. ದೇಶದಲ್ಲಿ ಇದುವರೆಗೆ 1,97,61,91,554 ಡೋಸ್ ಲಸಿಕೆ ಹಾಕಲಾಗಿದೆ. 24 ಗಂಟೆಯಲ್ಲಿ 4,52,430 ಜನರಿಗೆ ಕೊರೋನಾ ಪರೀಕ್ಷೆ ಮಾಡಲಾಗಿದೆ.