Wednesday, August 26, 2026
Wednesday, August 26, 2026

ರಷ್ಯವನ್ನು ವಿಶ್ವಸಂಸ್ಥೆಯಿಂದ ಹೊರಹಾಕಿ- ಝೆಲೆನ್ಸ್ಕಿ

Date:

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಒಬ್ಬ ಭಯೋತ್ಪಾದಕ. ಆದ್ದರಿಂದ ವಿಶ್ವಸಂಸ್ಥೆಯಿಂದ ರಷ್ಯಾವನ್ನು ಕೂಡಲೇ ಹೊರಹಾಕುವಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಒತ್ತಾಯಿಸಿದ್ದಾರೆ.

ಯುಎನ್ ಸೆಕ್ಯುರಿಟಿ ಕೌನ್ಸಿಲ್‌ ಭಾಷಣದಲ್ಲಿ ಮಾತನಾಡಿದ ಝೆಲೆನ್ಸ್ಕಿ, ಉಕ್ರೇನಿಯನ್ ನೆಲದಲ್ಲಿ ರಷ್ಯಾದ ಆಕ್ರಮಣಕಾರರ ಕ್ರಮಗಳನ್ನು ತನಿಖೆ ಮಾಡಲು ಹಾಗೂ ದೇಶವನ್ನು ಹೊಣೆಗಾರರನ್ನಾಗಿ ಮಾಡಲು ಅಂತರರಾಷ್ಟ್ರೀಯ ನ್ಯಾಯಮಂಡಳಿಯನ್ನು ಸ್ಥಾಪಿಸಲು ಯುಎನ್‌ಗೆ ಒತ್ತಾಯಿಸಿದರು.

ನಾವು ರಷ್ಯಾ ನಡೆಸಿದ ಹತ್ಯೆಯ ಚಟುವಟಿಕೆಯನ್ನು ನಿಲ್ಲಿಸಲು ತುರ್ತಾಗಿ ಕಾರ್ಯನಿರ್ವಹಿಸಬೇಕಾದೆ. ಇಲ್ಲದಿದ್ದರೆ ರಷ್ಯಾದ ಭಯೋತ್ಪಾದಕ ಚಟುವಟಿಕೆ ಇತರ ಯುರೋಪಿಯನ್ ರಾಷ್ಟ್ರಗಳು ಮತ್ತು ಏಷ್ಯಾಕ್ಕೆ ಹರಡುತ್ತದೆ. ಇದರಿಂದ ಬಾಲ್ಟಿಕ್ ರಾಜ್ಯಗಳು, ಪೋಲೆಂಡ್, ಮೊಲ್ಡೊವಾ ಮತ್ತು ಕಝಾಕಿಸ್ತಾನ್ ಅನ್ನು ಪ್ರತ್ಯೇಕಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

193 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ವಿಶ್ವಸಂಸ್ಥೆಯಿಂದ ರಷ್ಯಾವನ್ನು ಹೊರಹಾಕುವಂತೆ ಝೆಲೆನ್ಸ್ಕಿ ಒತ್ತಾಯಿಸಿದ್ದಾರೆ. ಯುಎನ್ ಚಾರ್ಟರ್ನ ಆರ್ಟಿಕಲ್ 6 ಅನ್ನು ಉಲ್ಲೇಖಿಸಿ, ಪ್ರಸ್ತುತ ಚಾರ್ಟರ್‌ನಲ್ಲಿರುವ ಭದ್ರತಾ ಮಂಡಳಿಯ ಶಿಫಾರಸಿನ ಮೇರೆಗೆ ಜನರಲ್ ಅಸೆಂಬ್ಲಿಯಿಂದ ಸಂಘಟನೆಯಿಂದ ಹೊರಹಾಕಬಹುದು ಎಂದಿದ್ದಾರೆ.

ರಷ್ಯಾದ ಉಚ್ಚಾಟನೆಯು ವಾಸ್ತವಿಕವಾಗಿ ಅಸಾಧ್ಯವಾಗಿದೆ. ಖಾಯಂ ಕೌನ್ಸಿಲ್ ಸದಸ್ಯರಾಗಿ ರಷ್ಯಾ ತನ್ನ ವೀಟೋವನ್ನು ಬಳಸಿ ಅದನ್ನು ಹೊರಹಾಕುವ ಯಾವುದೇ ಪ್ರಯತ್ನವನ್ನು ತಡೆಯಲು ಸಾಧ್ಯವಾಗುತ್ತದೆ.

ಕೇಂದ್ರ ನಗರವಾದ ಕ್ರೆಮೆನ್‌ಚುಕ್‌ನಲ್ಲಿರುವ ಸೋಮವಾರ ಕಿಕ್ಕಿರಿದ ಶಾಪಿಂಗ್ ಮಾಲ್‌ ಮೇಲೆ ನಡೆದ ವೈಮಾನಿಕ ದಾಳಿ ಸೇರಿದಂತೆ, ರಷ್ಯಾದ ಇತ್ತೀಚಿನ ದಾಳಿಯ ಬಗ್ಗೆ ಚರ್ಚಿಸಲು ಉಕ್ರೇನ್ ಕೌನ್ಸಿಲ್ ಸಭೆಯನ್ನು ಕರೆದಿತ್ತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಬೈಂದೂರು ರೈಲ್ವೇ ನಿಲ್ದಾಣ ಅಭಿವೃದ್ಧಿಗೆ ₹86 ಕೋಟಿ ಪ್ರಸ್ತಾವನೆ: ಸಂಸದ ಬಿ.ವೈ.ರಾಘವೇಂದ್ರ ಭೇಟಿ

B.Y. Raghavendra ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂಕಾಂಬಿಕಾ ರೋಡ್ ಬೈಂದೂರು...

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...