Tuesday, August 25, 2026
Tuesday, August 25, 2026

ಮಹಾರಾಷ್ಟ್ರದಲ್ಲಿ ಬಂಡು ಶಾಸಕರ ಕುಟುಂಬಗಳ ಭದ್ರತೆ ಹಿಂಪಡೆಯಲಾಗಿದೆ

Date:

ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಸಿರುವ ಬಂಡಾಯ ಶಾಸಕರ ಕುಟುಂಬದವರಿಗೆ ನೀಡಿದ್ದ ಭದ್ರತೆಯನ್ನು ಅಲ್ಲಿನ ಸರ್ಕಾರ ಹಿಂಪಡೆದಿದೆ. ಈ ಕ್ರಮವನ್ನು ಅಮರಾವತಿ ಸಂಸದೆ ನವನೀತ್‌ ರಾಣಾ ಟೀಕಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಣಾ ಅವರು, ‘ಉದ್ಧವ್‌ ಠಾಕ್ರೆ ಸರ್ಕಾರ ತೊರೆದು, ತಮ್ಮದೇ ನಿರ್ಧಾರ ಕೈಗೊಂಡಿರುವ ಹಾಗೂ ಬಾಳಾ ಸಾಹೇಬರ ಚಿಂತನೆಗಳಿಗೆ ಬದ್ಧವಾಗಿರುವ ಶಾಸಕರ ಕುಟುಂಬಗಳಿಗೆ ಭದ್ರತೆ ಒದಗಿಸುವಂತೆ ಅಮಿತ್‌ ಶಾ ಅವರಲ್ಲಿ ಮನವಿ ಮಾಡುತ್ತೇನೆ.
ಉದ್ಧವ್‌ ಠಾಕ್ರೆ ಅವರ ಗೂಂಡಾಗಿರಿ ಕೊನೆಯಾಗಬೇಕು. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ವಿನಂತಿಸುತ್ತೇನೆ’ ಎಂದು ಹೇಳಿರುವುದಾಗಿ ಎಎನ್‌ಐ ಟ್ವೀಟ್ ಮಾಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಶಿವಸೇನಾದ ಪುಣೆ ನಗರ ಘಟಕದ ಮುಖ್ಯಸ್ಥ ಸಂಜಯ್‌ ಮೋರೆ, ‘ನಮ್ಮ ಪಕ್ಷದ ಕಾರ್ಯಕರ್ತರು ತಾನಾಜಿ ಸಾವಂತ್‌ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ. ನಮ್ಮು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ತೊಂದರೆ ನೀಡುತ್ತಿರುವ ಎಲ್ಲಾ ಬಂಡಾಯ ಶಾಸಕರು ಇಂತಹ ಸಮಸ್ಯೆಗಳನ್ನು ಎದುರಿಸಲಿದ್ದಾರೆ. ಅವರ ಕಚೇರಿಗಳ ಮೇಲೂ ದಾಳಿ ನಡೆಸಲಾಗುತ್ತದೆ. ಇದರಿಂದ ಯಾರೂ ತಪ್ಪಿಸಿಕೊಳ್ಳಲಾರರು’ ಎಂದು ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ನೇಮಕಾತಿ ಪ್ರಕಟಣೆ

ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ...