Thursday, July 9, 2026
Thursday, July 9, 2026

ಕೋಟಿ ಕೋಟಿ ಗಳಿಸಿ ಲೌಕಿಕ ದಾಟಿದವರು…

Date:

ಪ್ರಸ್ತುತ ದಿನಗಳಲ್ಲಿ ಹಣಕ್ಕೆ ಇರುವ ಬೆಲೆ ಮನುಷ್ಯನಿಗಿಲ್ಲ.
ಹಣ ಎಂದರೆ, ಹೆಣ ಕೂಡ ಬಿಡುತ್ತೆ ಅನ್ನೊದನ್ನ ನಾವೆಲ್ಲ ಕೇಳಿದ್ದೇವೆ. ಯಾರಿಗಾದರೂ ಹತ್ತು ರೂಪಾಯಿ ವ
ನೀಡಿದರೂ ನೂರು ಜನಕ್ಕೆ ಹೇಳಿಕೊಂಡು ಡಂಗುರ ಸಾರುವವರಿದ್ದಾರೆ.

ಆದರೆ, ಇದೆಲ್ಲದರ ನಡುವೆ ಒಂದು ಸಿರಿವಂತ ಕುಟುಂಬ ಬರೊಬ್ಬರಿ 11 ಕೋಟಿ ರೂ.ಮೌಲ್ಯದ ಆಸ್ತಿಯನ್ನ ದಾನ ಮಾಡಿ ಆಧ್ಯಾತ್ಮದ ಮೊರೆ ಹೋಗಿದೆ.

ಮಧ್ಯಪ್ರದೇಶದ ಬಾಲಘಾಟ್​ ಜಿಲ್ಲೆಯಲ್ಲಿ ಆಭರಣ ವ್ಯಾಪಾರಿಯೊಬ್ಬರು 11 ಕೋಟಿ ರೂ. ಮೌಲ್ಯದ ಆಸ್ತಿಯನ್ನು ದಾನ ಮಾಡಿ, ಇಡೀ ಕುಟುಂಬದ ಜತೆಗೆ ಲೌಕಿಕ ಜೀವನ ತೊರೆದು, ಆಧ್ಯಾತ್ಮಿಕ ದೀಕ್ಷೆಯನ್ನು ಪಡೆದುಕೊಂಡಿದ್ದಾರೆ.

ಆಭರಣ ವ್ಯಾಪಾರಿ ರಾಕೇಶ್​ ಸುರಾನ 11 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಗೋಶಾಲೆ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ದಾನ ಮಾಡಿದ್ದಾರೆ.
ಇವರೊಬ್ಬರೇ ಅಲ್ಲದೆ,ಇವರೊಂದಿಗೆ ತನ್ನೊಂದಿಗೆ ಪತ್ನಿ ಲೀನಾ (36) ಮತ್ತು ಪುತ್ರ ಅಮಯ್​ (11) ಕೂಡ ಜತೆ ಲೌಕಿಕ ಜೀವನ ತೊರೆದು ಆಧ್ಯಾತ್ಮಿಕತೆ ದಾರಿಯನ್ನು ಹಿಡಿದಿದ್ದಾರೆ.

.ಜೈನ ಸಮಾಜದವರು ಕೂಡ ರಾಕೇಶ್​ ಕುಟುಂಬವನ್ನು ಅದ್ಧೂರಿಯಾಗಿ ಬೀಳ್ಕೊಟ್ಟರು.
ರಾಕೇಶ್​ ಕುಟುಂಬದ ನಡೆಯನ್ನು ಜೈನ ಸಮಾಜ ಸ್ವಾಗತಿಸಿ, ಗೌರವಿಸಿದೆ.

ಸಕಾಲ್​ ಜೈನ ಸಮಾಜ ಮಂಗಳವಾರ ಸಮಾರಂಭವನ್ನು ಏರ್ಪಡಿಸಿತ್ತು. ಈ ವೇಳೆ ಸಾಕಷ್ಟು ಜನರು ಸೇರಿದ್ದರು. ಎಲ್ಲರು ಸೇರಿ ದೀಕ್ಷೆ ತೆಗೆದುಕೊಳ್ಳಲು ಇಚ್ಛಿಸಿರುವ ರಾಕೇಶ್​ ಕುಟುಂಬಕ್ಕೆ ಗೌರವದಿಂದ ಬೀಳ್ಕೊಟ್ಟರು

ಮಹೇಂದ್ರ ಸಾಗರ್ ಮಹಾರಾಜ್ ಮತ್ತು ಮನೀಷ್ ಸಾಗರ್ ಮಹಾರಾಜ್ ಅವರ ಪ್ರವಚನಗಳಿಂದ ಪಡೆದ ಸ್ಫೂರ್ತಿಯಿಂದ ನನ್ನ ಮನಸ್ಸು ಬದಲಾಗಿದೆ. ಆ ಕಾರಣದಿಂದಾಗಿ ಧರ್ಮ, ಆಧ್ಯಾತ್ಮಿಕತೆ ಮತ್ತು ಸ್ವಯಂ ಸ್ವರೂಪವನ್ನು ಗುರುತಿಸುವ ಸ್ಫೂರ್ತಿ ನನಗೆ ಸಿಕ್ಕಿತು ಎಂದು ರಾಕೇಶ್​ ಅವರು ತಿಳಿಸಿದ್ದಾರೆ.

ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡಿರುವ ರಾಕೇಶ್​ ಪತ್ನಿ ಲೀನಾ ಅವರಿಗೆ ಬಾಲ್ಯದಿಂದಲೂ ಆಧ್ಯಾತ್ಮಿಕ ಹಾದಿಯಲ್ಲಿ ಸಾಗಬೇಕೆಂಬ ಆಸೆ ಇತ್ತಂತೆ. ಅಷ್ಟೇ ಅಲ್ಲದೇ ಮಗ ಅಮಯ್ 4 ವರ್ಷದವನಿದ್ದಾಗ ಆಧ್ಯಾತ್ಮಿಕ ಹಾದಿಯಲ್ಲಿ ಸಾಗುವ ಬಗ್ಗೆ ಮಾತನಾಡುತ್ತಿದ್ದರು. ಆದರೆ, ಮಗ ತುಂಬಾ ಚಿಕ್ಕವನಾಗಿದ್ದರಿಂದ ತಮ್ಮ ಇಚ್ಛೆಯ ಹಾದಿಯನ್ನು ಅನುಸರಿಸಲು ಏಳು ವರ್ಷಗಳ ಕಾಲ ಕಾಯ ಬೇಕಾಯಿತು.

ರಾಕೇಶ್ ಅವರು ಬಾಲಘಾಟ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ಅಂಗಡಿಯನ್ನು ಹೊಂದಿದ್ದರು. ಆದರೆ ಕ್ರಮೇಣ ಅವರ ವ್ಯಾಪಾರವು ಬೆಳೆದು ಕೋಟಿಗಟ್ಟಲೆ ಆಸ್ತಿಯನ್ನು ಸಂಪಾದಿಸಿದರು. ಹೆಸರು, ಕೀರ್ತಿ ಎರಡನ್ನೂ ಹೊಂದಿದ್ದರು. ಎಲ್ಲ ಆಸ್ತಿಯನ್ನು ದಾನ ಮಾಡುವ ಮೂಲಕ ಆಧ್ಯಾತ್ಮಿಕ ಹಾದಿಯಲ್ಲಿ ನಡೆಯಲು ನಿರ್ಧರಿಸಿದ್ದಾರೆ. ಆಧುನಿಕತೆಯ ಯುಗದಲ್ಲಿ ಸುಖೀ ಜೀವನ ನಡೆಸಲು ಬೇಕಾದ ಎಲ್ಲಾ ಸೌಲಭ್ಯಗಳೂ ರಾಕೇಶ್​ ಅವರ ಕುಟುಂಬದಲ್ಲಿ ಇದ್ದವು. ಅವರು ಕೋಟಿಗಟ್ಟಲೆ ಆಸ್ತಿ ಗಳಿಸಿದ್ದಾರೆ. ಆದರೆ, ಇಡೀ ಕುಟುಂಬ ತಮ್ಮ ವರ್ಷಗಳ ಸಂಪಾದನೆಯನ್ನು ದಾನ ಮಾಡುವ ಮೂಲಕ ಆಧ್ಯಾತ್ಮಿಕತೆಯತ್ತ ಮುಖ ಮಾಡುತ್ತಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಸಾಮಾಜಿಕ ಸೇವೆಗಳು ಮನುಷ್ಯನ ಬದುಕನ್ನ ಸಾರ್ಥಕಗೊಳಿಸುತ್ತವೆ : ಬಿ.ವೈ.ರಾಘವೇಂದ್ರ

B.Y. Raghavendra ‘ಸೇವೆಯೇ ಸಾರ್ಥಕ ಸ್ನೇಹವೇ ಅಮರ’ ಎಂದು ಸಂಸದ ಬಿ.ವೈ....

Sri Sonda Swarnavalli Mahasansthan 2026 ರ ಭಗವದ್ಗೀತಾ ಅಭಿಯಾನ: ವಿಜಯನಗರದಲ್ಲಿ ಆಯೋಜನೆ, ಸ್ವರ್ಣವಲ್ಲಿಶ್ರೀಗಳಿಂದ ಸಭೆ

Sri Sonda Swarnavalli Mahasansthan ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ...

S.N. Channabasappa ಶಿವಮೊಗ್ಗ ನ್ಯೂ ಮಂಡ್ಲಿಯಲ್ಲಿ ಮಳೆಗೆ ಮನೆ ಕುಸಿತ.: ಶಾಸಕ ಚನ್ನಬಸಪ್ಪ ಪರಿಶೀಲನೆ

S.N. Channabasappa ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ...