ರಾಜ್ಯದ ಪ್ರತಿ ಜಿಲ್ಲೆಯಲ್ಲಿ 5 ಸಿಎನ್ ಜಿ ಬಸ್ ಗಳನ್ನು ಪ್ರಾಯೋಗಿಕವಾಗಿ ಪರಿಚಯಿಸಲಾಗುತ್ತದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ತಿಳಿಸಿದ್ದಾರೆ.
ನಿನ್ನೆ ಗುರುವಾರ ಸಾರಿಗೆ ಸಂಸ್ಥೆಯ ಘಟಕ ಆವಾರಣದಲ್ಲಿ ಹೊಸ ಘಟಕದ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದ ಸಾರಿಗೆ ಸಂಸ್ಥೆಗೆ ಪ್ರತಿದಿನ 3 ಕೋಟಿಯಷ್ಟು ಡೀಸೆಲ್ ಗೆ ಖರ್ಚಾಗುತ್ತಿದೆ. ಈ ಹೊರೆ ತಪ್ಪಿಸಲು ಪ್ರತಿ ಜಿಲ್ಲೆಗೆ 5 ರಂತೆ ಪ್ರಾಯೋಗಿಕವಾಗಿ ಪರಿಚಯಿಸಲಾಗುತ್ತದೆ ಎಂದು ಶ್ರೀ ರಾಮುಲು ಅವರು ಹೇಳಿದ್ದಾರೆ.
ರಾಜ್ಯದ ಸಾರಿಗೆ ನಿಗಮದ 4 ವಿಭಾಗಗಳಲ್ಲಿ 45 ಸಾವಿರ ಬಸ್ ಗಳಿದೆ. ಹಳೆಯ ಬಸ್ ಗಳನ್ನು ಬದಲಿಸಿ ಎಲೆಕ್ಟ್ರಿಕ್ ಬಸ್ ಗಳನ್ನು ಓಡಿಸುವ ಯೋಜನೆ ಜಾರಿಯಲ್ಲಿದೆ ಎಂದು ಶ್ರೀ ರಾಮುಲು ಮಾಹಿತಿ ನೀಡಿದ್ದಾರೆ.