Friday, May 22, 2026
Friday, May 22, 2026

ರೈತರ ಮನೆಬಾಗಿಲಿಗೇ ಪಶುವೈದ್ಯಕೀಯ ಅಂಬುಲೆನ್ಸ್ ಸೇವೆ

Date:

ರಾಜ್ಯದ ರೈತರಿಗೆ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಜಾನುವಾರುಗಳಿಗೆ ಮನೆಬಾಗಿಲಲ್ಲೇ ಚಿಕಿತ್ಸೆ ನೀಡಲು ಪಶು ಅಂಬುಲೆನ್ಸ್ ಸೇವೆ ಆರಂಭಿಸಲಾಗುತ್ತಿದೆ. ಮೇ 7 ರಂದು ಇದಕ್ಕೆ ಚಾಲನೆ ದೊರೆಯಲಿದೆ ಎಂದು ತಿಳಿದುಬಂದಿದೆ.

ವಿಕಾಸಸೌಧದಲ್ಲಿ ಸಂಚಾರಿ ಪಶು ಅಂಬುಲೆನ್ಸ್ ಅನ್ನು ಪರೀಕ್ಷಿಸಿದ ಬಳಿಕ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಈ ಮಾಹಿತಿ ನೀಡಿದ್ದಾರೆ.

ಮೇ 7ರಂದು ಕೇಂದ್ರ ಪಶುಸಂಗೋಪನಾ ಸಚಿವ ಪುರುಷೋತ್ತಮ ರೂಪಾಲ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಆಂಬುಲೆನ್ಸ್ ಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ ಎಂದು ತಿಳಿಸಿದರು.

ಒಟ್ಟು 275 ಪಶು ಅಂಬುಲೆನ್ಸ್ ಗಳನ್ನು ಬಿಡುಗಡೆ ಮಾಡಲು ಉದ್ದೇಶಿಸಲಾಗಿದ್ದು ಈ ಪೈಕಿ ಮೇ 7ರಂದು 70 ಅಂಬುಲೆನ್ಸ್ ಗಳನ್ನು ಜಾನುವಾರಗಳ ಸೇವೆಗೆ ಲೋಕಾರ್ಪಣೆ ಮಾಡುತ್ತಿರುವುದಾಗಿ ತಿಳಿಸಿದರು.

ಇದರಿಂದ ಜಾನುವಾರುಗಳನ್ನು ಸಾಕುತ್ತಿರುವ ರೈತರಿಗೆ ಅನುಕೂಲವಾಗಲಿದೆ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Adichunchanagiri Education Trust ವೃತ್ತಿಗೆ ಗೌರವಕೊಡಿ, ಅದರಿಂದ ವ್ಯಕ್ತಿಯ ಬದುಕು ಹಸನಾಗುತ್ತದೆ : ಶ್ರೀಪ್ರಸನ್ನನಾಥಶ್ರೀ

Adichunchanagiri Education Trust ವೃತ್ತಿಗೆ ಗೌರವ ಕೊಡಿ, ಯಾವ ವ್ಯಕ್ತಿ ವೃತ್ತಿಗೆ...

B.Y. Raghavendra ಬೇಸೂರು ಅಣುಸ್ಥಾವರದ ಬಗ್ಗೆ ರಾಜ್ಯ ಸರ್ಕಾರಕ್ಕೆ ಯಾವುದೇ ಪ್ರಸ್ತಾಪ ಸಲ್ಲಿಸಿಲ್ಲ- ಬಿ.ವೈ.ರಾಘವೇಂದ್ರ

B.Y. Raghavendra ಸಾಗರ ತಾಲ್ಲೂಕಿನ ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ...

Madhu Bangarappa ಸಚಿವ ಮಧು ಬಂಗಾರಪ್ಪ ಪತ್ರಿಕಾ ಗೋಷ್ಠಿ: ನೀಟ್ ಪರೀಕ್ಷೆ ಪ್ರಸ್ತಾಪ. ಬಿಜೆಪಿ ಯವರ ವಿರುದ್ಧ ಕೆಂಡ

ಶಿವಮೊಗ್ಗದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಹತ್ವದ ಹೇಳಿಕೆ ನೀಡಿದ್ದಾರೆ.ಶಿವಮೊಗ್ಗ ಜಿಲ್ಲೆಯಲ್ಲಿ...

Madhu Bangarappa ಜೂನ್ 1. ಶಿವಮೊಗ್ಗದಲ್ಲಿ ಸಾವಿರ ಕೆಪಿಎಸ್ ಶಾಲೆಗಳಿಗೆ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ – ಮಧು ಬಂಗಾರಪ್ಪ

Madhu Bangarappa ಬೆಲೆ ಕಟ್ಟಲಾಗದ ಗ್ಯಾರಂಟಿಯಾದ ಶಿಕ್ಷಣವನ್ನು ಇಡೀ ದೇಶಕ್ಕೇ ಮಾದರಿಯಾಗಿ...