ಸಮಾಜದ ಎಲ್ಲರಿಗೂ ಯಾವುದೇ ಬೇಧವಿಲ್ಲದೆ ಅನುಗ್ರಹ ಮಾಡುತ್ತಿರುವ ಗುರುಗಳೆಂದರೆ
ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳು. ಹೀಗಾಗಿ ಸಮಾಜದ ಎಲ್ಲ ವರ್ಗ,ಜನಾಂಗದವರು ಶ್ರೀರಾಯರ ಭಕ್ತರಾಗಿದ್ದಾರೆ.
ಚನ್ನಗಿರಿಯು ಐದನೇ ಮೃತ್ತಿಕಾ ಬೃಂದಾವನ ಕ್ಷೇತ್ರವಾಗಿದೆ. ಈ ಪ್ರಾಂತದ ಜನರೆಲ್ಲರೂ ಪುಣ್ಯವಂತರು.ಗುರುಗಳೇ ಸಂಕಲ್ಪಮಾಡಿ ಚನ್ನಗಿರಿಗೆ ದಯಮಾಡಿಸಿದ್ದಾರೆ. ಇಲ್ಲಿಯ ಮಣ್ಣಿನ ಕಣಕಣ ಪವಿತ್ರವಾಗಿದೆ.
ಕುರುಡನಿಗೆ ದೃಷ್ಟಿಕೊಟ್ಟು ರಾಯರೇ ಸ್ವತಃ ಬೃಂದಾವನ ಕೆತ್ತಲು ಶಿಲ್ಪಿಗೆ
ಅನುಗ್ರಹಿಸಿದ್ದಾರೆ. ಈಗ್ಯೆ 239 ವರ್ಷಗಳ ಹಿಂದೆ ಶ್ರೀವರದೇಂದ್ರರು ಪ್ರತಿಷ್ಠಾಪಿಸಿದ ಬೃಂದಾವನ ಈಗ
ಕಟ್ಟಡ ಜೀರ್ಣೋದ್ಧಾರದೊಂದಿಗೆ
ಪುನಃಪ್ರತಿಷ್ಠಾಪನೆಯಾಗಿದೆ.ಈ ಕಾರ್ಯ ನಮಗೆ ಅತ್ಯಂತ ಸಂತೋಷವುಂಟುಮಾಡಿದೆ. ಚನ್ನಗಿರಿ ಶ್ರೀಕೃಷ್ಣ ಉಪಾದ್ಯ ಮತ್ತು
ಟ್ರಸ್ಟಿನ ಪದಾಧಿಕಾರಿಗಳು ಹಾಗೂ ಈ ಭಾಗದ ಎಲ್ಲ ಭಕ್ತಾದಿಗಳ ನೆರವು,ಸಹಕಾರದಿಂದ ಈ ಕಾರ್ಯ ಆಗಿದೆ ಎಂದು ಮಂತ್ರಾಲಯ ಪೀಠಾಧಿಪತಿಗಳಾದ
ಶ್ರೀ ಸುಬುಧೇಂದ್ರ ತೀರ್ಥರು ನುಡಿದಿದ್ದಾರೆ.
ಅವರು ಚನ್ನಗಿರಿಯಲ್ಲಿ ಏಪ್ರಿಲ್ 24 ಮತ್ತು 25 ರಂದು ನಡೆದ ಶ್ರೀರಾಘವೇಂದ್ರ ಸ್ವಾಮಿಗಳ ಬೃಂದಾವನ ಪುನಃಪ್ರತಿಷ್ಠಾಪನಾ ಕಾರ್ಯ ನೆರವೇರಿಸಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು..
ಚನ್ನಗಿರಿ ಕ್ಷೇತ್ರದ ಜನಪ್ರಿಯ ಶಾಸಕ
ಶ್ರೀ ಮಾಡಾಳ್ ವಿರೂಪಾಕ್ಷಪ್ಪ ಮುಖ್ಯ ಅತಿಥಯಾಗಿ ಉಪಸ್ಥಿತರಿದ್ದರು.
ನಮ್ಮ ಸಮಾಜ ಎಲ್ಲ ಧರ್ಮಗಳಿಂದ ಕೂಡಿ ಸಾಮರಸ್ಯಹೊಂದಿದೆ. ಎಲ್ಲ ಧರ್ಮಗಳೂ ಇಲ್ಲಿ ಸಮಾನವಾಗಿವೆ. ಯಾರೂ ಕೂಡ
ನನ್ನ ಧರ್ಮ ಶ್ರೇಷ್ಠ ಎನ್ನದೆ ಮನುಷ್ಯರೆಲ್ಲ ಒಂದೆ ಎಂಬ
ಭಾವನೆ ಬೆಳೆಸಿಕೊಂಡರೆ ನಾವು
ಬೆಳೆಯುತ್ತೇವೆ.ದೇಶದಲ್ಲಿ ಶಾಂತಿ ನೆಲೆಸುತ್ತದೆ ಎಂದು ಹೇಳಿದರು.
ಶ್ರೀರಾಯರನ್ನ ನಂಬಿದೆರೆ ಸಾಕು ನಮ್ಮ ಎಷ್ಟೋ ಸಮಸ್ಯೆಗಳು ಪರಿಹಾರವಾಗುತ್ತವೆ. ಮನುಷ್ಯನಿಗೆ
ದೇವರು,ಗುರುಗಳಲ್ಲಿ ನಂಬಿಕೆ, ವಿಶ್ವಾಸವಿರಬೇಕು. ಆ ನಂಬಿಕೆ ,ಶ್ರದ್ಧೆ ಮತ್ತು ವಿಶ್ವಾಸದಿಂದಲೇ ಶಾಸಕನಾಗಲು ಸಾಧ್ಯವಾಯಿತು.
ಜನತೆಯ ಪ್ರೀತಿ ಗಳಿಸಲು ಸಾಧ್ಯವಾಯಿತು.ಇಡೀ ತಾಲೂಕಿನ ಪ್ರಗತಿಗೆ ಶ್ರಮಿಸಲು ಚೈತನ್ಯ ಲಭಿಸಿತು ಎಂದು ಶ್ರೀರಾಘವೇಂದ್ರ ಸ್ವಾಮಿಗಳ ಮಹಿಮೆಯ ಬಗ್ಗೆ ವಿಚಾರಪೂರ್ಣವಾಗಿ ಮಾತನಾಡಿದರು.
ಶ್ರೀರಾಘವೇಂದ್ರ ಸ್ವಾಮಿ ಟ್ರಸ್ಟ್ ನ
ಅಧ್ಯಕ್ಷ ಶ್ರೀಕೃಷ್ಣ ಉಪಾಧ್ಯ ಅವರು
ಮಾತನಾಡಿ, ಇಡೀ ಈ ಜೀರ್ಣೋದ್ಧಾರ ಕಾರ್ಯವನ್ನ ಕೈಗೆತ್ತಿಕೊಂಡಾಗ ಆರ್ಥಿಕ ವಾಗಿ ಹಿಂಜರಿಕೆಯಾಗುತ್ತದೇನೋ ಎಂಬ ಸಹಜ ಅಳುಕಿತ್ತು.ಅದರ ಬಗ್ಗೆ ಮಂತ್ರಾಲಯದ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ನಿಮಗೆ ಎಲ್ಕ ರೀತಿಯ ಬೆಂಬಲ ನೀಡಲು
ಮಂತ್ರಾಲಯ ಸಂಸ್ಥಾನ ಸಿದ್ಧವಿದೆ.
ಎಂದು ಅಭಯ ನೀಡಿದರು .ಅಂದಿನಿಂದ ಶ್ರೀಮಠದ ಅಭಿವೃದ್ದಿ ಕಾರ್ಯ ವೇಗದಿಂದ ನಡೆದಿದೆ.
ಪ್ರಸ್ತುತ ಸ್ಥಳೀಯವಾಗಿ ಪೂಜಾಕೈಂಕರ್ಯಗಳನ್ನ ಮಂತ್ರಾಲಯದ ಶ್ರೀಮಠದ ಪರಂಪರೆಗನುಸಾರವಾಗಿಯೇ ನಡೆಸಿಕೊಂಡು ಹೋಗುತ್ತೇವೆ.
ನಮ್ಮೆಲ್ಲರ ಕರೆಗೆ ಓಗೊಟ್ಟು ಸ್ಥಳೀಯರು ಮತ್ತು ನಾಡಿನ ಎಲ್ಲ ಭಕ್ತಾದಿಗಳು ತನುಮನಧನ ನೀಡಿ
ಈ ಕಾರ್ಯ ಸುಲಭಗೊಳಸಿದ್ದಾರೆ.
ಅದರಲ್ಲೂ ಶಾಸಕರಾದ ವಿರೂಪಾಕ್ಷಪ್ಪನವರು ನಲವತ್ತೈದು ಲಕ್ಷ ರೂಪಾಯಿಗಳ ಬೃಹತ್ ನೆರವನ್ನ
ಸರ್ಕಾರದಿಂದ ಬಿಡುಗಡೆ ಮಾಡಿಸಿದ್ದಾರೆ .ಪ್ರಸ್ತುತ ಜೀರ್ಣೋದ್ಧಾರಕ್ಕೆ ಅವರೇ ಬೆನ್ನೆಲುಬಾಗಿದ್ದಾರೆ. ಅವರೆಲ್ಲರ ಸಹಕಾರದಿಂದ ಈ ಕೆಲಸ ಸುಗಮವಾಗಿದೆ ಎಂದು ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಇದೇ ಸಂದರ್ಭದಲ್ಲಿ ವಿಪ್ರ ಮುಖಂಡರ ಪರವಾಗಿ ಕೆ ಲೈವ್ ಮಾಧ್ಯಮದ ಪ್ರಧಾನ ಸಂಪಾದಕ
ಡಾ.ಚನ್ನಗಿರಿ ಸುಧೀಂದ್ರ ಅವರು
ಟ್ರಸ್ಟ್ ನ ಪ್ರಯತ್ನವನ್ನ ಕೊಂಡಾಡಿದರು. ಟ್ರಸ್ಟಿನ ಅಧ್ಯಕ್ಷರಾದ ಶ್ರೀಕೃಷ್ಣ ಅವರ ಬಗ್ಗೆ ಅಭಿನಂದನಾ ಭಾ಼ಷಣ ಮಾಡಿ ಕೃಷ್ಣ ಅವರು ಮಹಾಭಾರತದ ಕೃಷ್ಣನಂತೆ ಎಲ್ಲರಿಗೂ ಹುರಿದುಂಬಿಸಿ ಈ ಮಹತ್ಕಾರ್ಯ ನಡೆಸಿದ್ದಾರೆ. ಅವರಿಗೆ
ಶ್ರೀರಾಯರು ಹೆಚ್ಚಿನ ಸಾಮರ್ಥ್ಯ
ಕೃಪೆಮಾಡಲಿ ಎಂದರು.

ಶ್ರೀಮಠದ ಕನ್ವಿನರ್ ಗಳಾಗಿ ಸೇವೆ ಸಲ್ಲಿಸಿದ ಎಲ್ಲರನ್ನೂ ಸ್ಮರಿಸಿದರು.
ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಶ್ರೀ ಸಿ ವಿ ತಿರುಮಲರಾವ್ ಮಾತನಾಡಿ
ಚನ್ನಗಿರಿಯ ಬೃಂದಾವನಾ ಸ್ಥಾಪನೆಯ ವರ್ಷಗಳಲ್ಲಿ ಭಾರತೀಯ ಸಮಾಜದಲ್ಲಿ ಸ್ವಾತಂತ್ರ್ಯ ಹೋರಾಟದ ಚಕಮಕಿಯಿತ್ತು.ಆಗಿನ ಸನ್ನಿವೇಶ ದಲ್ಲಿ ಶ್ರೀರಾಯರನ್ನ ಆಗಿನ ಮಂತ್ರಾಲಯ ಪೀಠಾಧಿಪತಿಗಳಾಗಿದ್ದ
ಶ್ರೀ ವರದೇಂದ್ರ ತೀರ್ಥರು ಚನ್ನಗಿರಿಗೆ
ಆಗಮಿಸಿ ಶ್ರೀರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ
ಪ್ರತಿಷ್ಠಾಪನೆ ಮಾಡಿದ್ದುದು ಒಂದು ಸಾಹಸ.ಚನ್ನಗಿರಿಯವರ ಪುಣ್ಯ ವಿಶೇಷ ಎಂದರು.
ಪ್ರತೀವರ್ಷ ಶೀಮಠದಿಂದ ಪ್ರಕಟಿಸುವ ಪಂಚಾಂಗದಲ್ಲಿ ಮೊದಲ ಪ್ರತಿಷ್ಠಾಪನೆಯ ದಿನ
ಮಾಘ ಶುದ್ಧ ಪಂಚಮಿ ಚನ್ನಗಿರಿಯಲ್ಲಿ ಶ್ರೀವರದೇಂದ್ರ ತೀರ್ಥ ಪ್ರತಿಷ್ಠಾಪಿತ ಶ್ರೀರಾಯರ
ಬೃಂದಾವನ ವರ್ಧಂತಿ ಎಂದು ಮಾಹಿತಿ ಪ್ರಕಟಿಸಲು ಮನವಿ ಅರ್ಪಿಸಿದರು.
ಕಾರ್ಯಕ್ರಮವು ಡಾ.ವಾದಿರಾಜಾಚಾರ್ ಅವರ ವೇದಘೋಷ ನಂತರ ತೇಜಸ್ ಶಾಸ್ತ್ರಿಯವರ ಪ್ರಾರ್ಥನೆಯೊಂದಿಗೆ
ಆರಂಭವಾಯಿತು.
ಟ್ಟಸ್ಪಿ ಗುರುಪ್ರಸಾದ್ ಎಲ್ಲರಿಗೂ ಸ್ವಾಗತ ಕೋರಿದರು.
ವೇ.ಮೂ.ವಾದಿರಾಜ್ ಕಾರ್ಯಕ್ರಮ ನಿರೂಪಿಸಿದರು.ಟ್ರಸ್ಟಿ ಸುಮತೀಂದ್ರ
ಅವರು ವಂದಿಸಿದರು.