ಹಳೇ ಹುಬ್ಬಳ್ಳಿಯಲ್ಲಿ ಗಲಭೆ ಹಾಗೂ ಈ ಹಿಂದೆ ಕೆಜೆ ಹಳ್ಳಿ,ಡಿಜೆ ಹಳ್ಳಿ ಗಲಭೆಗೂ ಸಾಮ್ಯತೆ ಇರುವುದು ಕಂಡುಬಂದಿದೆ. ಪೋಲಿಸರು ಸ್ವಲ್ಪ ವೀಕ್ ಆಗಿದ್ದರೆ, ಹುಬ್ಬಳ್ಳಿ ಹೊತ್ತಿ ಉರಿಯುತ್ತಿತ್ತು. ಈ ಕಾರಣ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ವಿಕಾಸ ಸೌಧದಲ್ಲಿ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಪ್ರಕರಣದಲ್ಲಿ ಸಾಕಷ್ಟು ವಿಚಾರಣೆ ಆಗಬೇಕು. ಇದರ ಹಿಂದೆ ಇರುವ ದೇಶದ್ರೋಹಿ ಸಂಘಟನೆಗಳು ಹೊರಬರಬೇಕು. ತಪ್ಪಿತಸ್ಥರು ಅಲ್ಲದೇ ಇರುವವರನ್ನ ಬಂಧನ ಮಾಡುವ ಅವಶ್ಯಕತೆ ಇಲ್ಲ. ನಮ್ಮ ಪೋಲೀಸರು ಸರಿ ದಾರಿಯಲ್ಲಿ ಹೋಗುತ್ತಿದ್ದಾರೆ. ಇದು ಕಾಂಗ್ರೆಸ್ ಸರ್ಕಾರ ಅಲ್ಲ. ಅವರನ್ನು ಹಿಡಿ,ಇವರನ್ನು ಬಿಡಿ ಎನ್ನುವುದಕ್ಕೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಅಬ್ಬಯ್ಯನವ್ರ ವೋಟ್ ಬ್ಯಾಂಕ್ ರಾಜಕಾರಣಕ್ಕಿಂತ ರಾಜ್ಯದ ನೆಮ್ಮದಿ ಮುಖ್ಯ. ಇದು ಕಣ್ಣು ಒರೆಸುವ ತಂತ್ರ ಅಲ್ಲ. ನಮಗೆ ದೇಶದ ನೆಮ್ಮದಿ ಮೊದಲು, ದೇಶದ ಏಕತೆ ಮೊದಲು. ಯಾವ ಸಂಘಟನೆಯನ್ನ ರದ್ದು ಮಾಡಬೇಕು ಎನ್ನುವುದು ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರ. ಸಿದ್ದರಾಮಯ್ಯ ಸರ್ಕಾರದಲ್ಲಿ ಸಾಕಷ್ಟು ಜನರ ಕೇಸ್‌ಗಳನ್ನ ವಾಪಸ್ ತೆಗದುಕೊಂಡರು. ಅದರ ಪರಿಣಾಯವನ್ನು ನಾವು ಅನುಭವಿಸುತ್ತಿದ್ದೇವೆ. ಕೆಜಿ ಹಳ್ಳಿ ಡಿಜೆ ಹಳ್ಳಿಯಲ್ಲಿ ಎಷ್ಟು ಜನರನ್ನು ಅರೆಸ್ಟ್ ಮಾಡಿದ್ದೇವೆ. ಇದು ಕಾಂಗ್ರೆಸ್ ಸರ್ಕಾರ ಇದ್ದಿದ್ರೆ ಆಗ್ತಿತ್ತಾ ಎಂದು ಆರಗಜ್ಞಾನೇಂದ್ರ ಅವರು ಪ್ರಶ್ನಿಸಿದ್ದಾರೆ.
ಅವರನ್ನು ಹಿಡಿಯದೆ ಬಿಟ್ರೆ ಅದು ವೈಫಲ್ಯ. ನಾನೇ ಅದನ್ನು ಸಿಐಡಿಗೆ ಕೊಟ್ಟಿದ್ದು. ಎಲ್ಲಿದ್ದರೂ ಅರೆಸ್ಟ್ ಮಾದುತ್ತರೆ. ಅವರು ನಿನ್ನೆ ಕೋರ್ಟ್‌ಗೆ ಹೋಗಿದ್ದರು. ಬೇಲ್ ಸಿಕ್ಕಿಲ್ಲ ಎನ್ನುವ ಮಾಹಿತಿ ಇದೆ. ಅವರಿಗೊಂದು, ಇವರಿಗೊಂದು ಇಲ್ಲ. ನಮ್ಮ ಆಡಳಿತದಲ್ಲಿ ಕಾನೂನು ಎಲ್ಲರಿಗೂ ಒಂದೇ. ಎಲ್ಲರನ್ನು ಅರೆಸ್ಟ್ ಮಾಡುತ್ತೇವೆ. ಪಿಎಸ್‌ಐ ಪರೀಕ್ಷೆ ವಿಚಾರದಲ್ಲಿ ಬಹಳ ಬಿಗಿ ಕ್ರಮ ತೆಗದುಕೊಂಡಿದ್ದೇವೆ ಎಂದು ಸಮರ್ಥನೆ ನೀಡಿದ್ದಾರೆ.
ಸಣ್ಣ ದಾಖಲಾತಿ ಸಿಕ್ಕ ಎರಡು ಮೂರು ಗಂಟೆ ಒಳಗೆ ಸಿಎಂ ಅನುಮತಿ ಪಡೆದು ಸಿಐಡಿ ಟೀಮ್ ಮಾಡಿದ್ದೇವೆ. ಎಲ್ಲವನ್ನೂ ಬಗೆದು, ಬೇರು ಸಹಿತ ಕಿತ್ತು ಹೊರ ತರಬೇಕು ಎಂದು ಹೇಳಿದ್ದೇವೆ. ಸಿಐಡಿ ಟೀಮ್ ಅತ್ಯಂತ ಒಳ್ಳೆಯ ಟೀಮ್. ಪ್ರಮಾಣಿಕವಾಗಿ ತನಿಖೆಯಾಗುತ್ತದೆ. ಈಗಾಗಲೇ ತನಿಖೆಯಾಗುತ್ತಿದೆ. ತನಿಖೆ ನಂತರ ಪರೀಕ್ಷೆ ವಿಚಾರವಾಗಿ ತೀರ್ಮಾನ ಮಾಡುತ್ತೇವೆ ಎಂದು ಮಾಹಿತಿ ತಿಳಿಸಿದ್ದಾರೆ.