ಎಸ್‌ಎಸ್ ಎಲ್ ಸಿ ಮೌಲ್ಯ ಮಾಪಕರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಪ್ರಸಕ್ತ ಸಾಲಿನ ಎಸ್‌ಎಸ್ ಎಲ್ ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪಕರ ಭತ್ಯೆಯನ್ನು ಶೇ.5 ರಷ್ಟು ಹೆಚ್ಚಳ ಮಾಡಿದೆ.
ಎಸ್‌ಎಸ್ ಎಲ್ ಸಿ ಮೌಲ್ಯಮಾಪನ ಕೇಂದ್ರಗಳ ಅಧೀಕ್ಷರ ಸಂಭಾವನೆ, ಮೌಲ್ಯಮಾಪಕರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ದರ ಮತ್ತು ವಿವಿಧ ಭತ್ಯೆಗಳನ್ನು ಶೇ.5 ರಷ್ಟು ಹೆಚ್ಚಳ ಮಾಡಿದೆ. ಪರಿಷ್ಕೃತ ದರದಲ್ಲಿ 6,924 ರೂ. ಇದ್ದ ಜಂಟಿ ಮುಖ್ಯ ಅಧೀಕ್ಷರ ಸಂಭಾವನೆಯನ್ನು 7,270 ರೂ.ಗೆ ಏರಿಕೆ ಮಾಡಲಾಗಿದೆ. ಉಪ ಮುಖ್ಯ ಅಧೀಕ್ಷಕರ ಸಂಭಾವನೆ ಇದುವರೆಗೆ 5,204 ರೂ. ಇತ್ತು.ಇದನ್ನು 5,464 ರೂ. ಗೆ ಹೆಚ್ಚಿಸಲಾಗಿದೆ.
ಮೌಲ್ಯಪಾಕರಿಗೆ ಪ್ರತಿ ಉತ್ತರ ಪತ್ರಿಕೆ ಮೌಲ್ಯಮಾಪನ ದರವನ್ನು ಒಂದು ರೂ. ನಷ್ಟು ಹೆಚ್ಚಿಸಲಾಗಿದೆ. ಇದರಿಂದ 22 ರೂ. ಇದ್ದ ಪ್ರಥಮ ಭಾಷೆ ಪತ್ರಿಕೆ ದರ 23 ರೂ. ದ್ವೀತಿಯ, ತೃತೀಯ ಭಾಷೆ ಮತ್ತು ಐಚ್ಛಿಕ ವಿಷಯಗಳಿಗೆ 20 ರೂ. ಇದ್ದ ಪ್ರತಿ ಉತ್ತರ ಪ್ರತಿಕೆಗಳ ಮೌಲ್ಯಮಾಪನ ದರ 21 ರೂ.ಗೆ ಹೆಚ್ಚಿಸಲಾಗಿದೆ. ಅದೇ ರೀತಿ ದಿನ ಭತ್ಯೆ ಬೆಂಗಳೂರಿನಲ್ಲಿ 596ರೂ. ಇತರೆ ನಗರಗಳಲ್ಲಿ 469 ರೂ. ಸ್ಥಳೀಯ ಭತ್ಯೆ ಬೆಂಗಳೂರಿಗೆ 223 ರೂ. ಇತರೆ ನಗರಗಳಲ್ಲಿ ಸ್ಥಳೀಯ ಭತ್ಯೆಯನ್ನು 180 ರೂ.ಗೆ ಹೆಚ್ಚಿಸಲಾಗಿದೆ.