ಉಕ್ರೇನ್ ಮೇಲಿನ ಸೇನಾ ಕಾರ್ಯಾಚರಣೆಯ ಮೂಲಕ ಅಂದುಕೊಂಡ ಭವ್ಯ ಉದ್ದೇಶವನ್ನು ಖಚಿತವಾಗಿ ಈಡೇರಿಸಿಕೊಳ್ಳುತ್ತೇವೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿನ್ನೆ ಸ್ಪಷ್ಟಪಡಿಸಿದ್ದಾರೆ.
ವೊಸ್ಟೋಚ್ನಿ ಕೋಸ್ಮೊಡ್ರೋಮ್ಲ್ಲಿ ನಡೆದ ಸಮಾರಂಭದಲ್ಲಿ ಪುಟಿನ್ ಈ ವಿಚಾರ ತಿಳಿಸಿದೆ. ಉಕ್ರೇನ್ನ ರಷ್ಯಾ ವಿರೋಧಿ ಪಡೆಗಳನ್ನು ಮಟ್ಟ ಹಾಕುವುದಕ್ಕೆ ಸೇನಾ ಕಾರ್ಯಾಚರಣೆಯ ಹೊರತು ಬೇರೆ ಮಾರ್ಗವಿರಲಿಲ್ಲ.
ರಷ್ಯಾದ ಗುರಿ ಮತ್ತು ಉದ್ದೇಶ ಬಹಳ ಸ್ಪಷ್ಟವಾಗಿದೆ ಎಂದು ವಿವರಿಸಿದ್ದಾರೆ. ರಷ್ಯಾದ ಹಿತಾಸಕ್ತಿಗೆ ವಿರುದ್ಧವಾಗಿ ನ್ಯಾಟೋ ಕೂಟ ಸೇರ್ಪಡೆಯಾಗುವ ಉಕ್ರೇನ್ ನಡೆಯ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಲೇ ಬರಲಾಗಿತ್ತು. ಇದಲ್ಲದೆ, ರಷ್ಯಾ ಬೆಂಬಲಿತ ಭಿನ್ನಮತೀಯರನ್ನು ಹತ್ತಿಕ್ಕಲು ಉಕ್ರೇನ್ 2014ರಿಂದ ಈಚೆಗೆ ಪ್ರಯತ್ನಿಸುತ್ತಿದೆ. ಒಂದು ಕಡೆಗೆ ರಷ್ಯಾ ಜನರಿಗೆ ನೆರವು ನೀಡುತ್ತ ಅವರನ್ನು ರಕ್ಷಿಸುತ್ತಿದೆ. ಇನ್ನೊಂದೆಡೆ ರಷ್ಯಾದ ಸುರಕ್ಷತೆಯನ್ನು ಗಮನಿಸಲಾಗುತ್ತಿದೆ ಎಂದು ಪುಟಿನ್ ಅವರು ತಿಳಿಸಿದ್ದಾರೆ.