Sunday, October 11, 2026
Sunday, October 11, 2026

ಒಂದು ಹಳ್ಳಿಯ ಯಶೋಗಾಥೆ

Date:

ಉತ್ತಮ ಪಂಚಾಯತಿಗಳನ್ನ ಈಗ ಆಯ್ಕೆ ಮಾಡುವ ಪ್ರಕ್ರಿಯೆ ಶುರುವಾಗಿದೆ. ಒಳ್ಳೆಯ ಕ್ರಮ.
ಮೂಲ ಹಳ್ಳಿಗಳು ಸುಧಾರಿಸಿದರೆ ದೇಶಕ್ಕೆ ಒಳ್ಳೆಯದೆ. ಆದರೆ ಈ
ಹಂತವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ನಾವು ತಡಮಾಡುತ್ತಿದ್ದೇವೆ ಅನಿಸುತ್ತದೆ.
ಮೂಲ ಕಸಬು‌ ಕೃಷಿ.
ಈಗ ಉಪಕಸಬುಗಳ ಮೂಲಕವೂ ಕೃಷಿ ಕುಟುಂಬದ ವರಮಾನ ಹೆಚ್ಚಿಸುವ ಯೋಜನೆಗಳೂ ಬಂದಿವೆ. ಅಲ್ಲೂ ಕೃಷಿಕ ಸಾಧನೆ ತೋರುತ್ತಿದ್ದಾನೆ.
ಸಾಮೂಹಿಕವಾಗಿ
ಒಂದು ಪಂಚಾಯಿತಿ
ಸ್ವರೂಪದಲ್ಲೂ ಈಗ ಸಾಧನೆ ಎಲ್ಲರ ಗಮನ ಸೆಳೆಯುತ್ತಿದೆ.
ತುಮಕೂರು ಜಿಲ್ಲೆಯ
ಕೊರಟಿಗೆರೆ ತಾಲೂಕಿನ ಕೋಳಾಲ ಹೋಬಳಿಯ ಎಲೆರಾಂಪುರ ಈಗ ಸುದ್ದಿಯಲ್ಲಿದೆ.
ಕೇಂದ್ರ ಸರ್ಕಾರವು ನೀಡುವ ಉತ್ತಮ ಪಂಚಾಯತಿ ಪುರಸ್ಕಾರ ದೊರೆತಿದೆ.

ಈಗ ಏಕೆ ಈ ಗ್ರಾಮದ ಪ್ರಸ್ತಾಪ ಬಂತು ಎಂದರೆ ಬೇಸಿಗೆಯಲ್ಲಿ ನೀರಿನ ಬರ . ಹೀಗಾಗಿ ಈಗಲೇ ಮಳೆಗಾಲದಲ್ಲಿ ಬೀಳುವ ನೀರನ್ನ ಹಿಡಿದಿಟ್ಟು ಸಂಗ್ರಹಿಸುವ ಕೆಲಸಕ್ಕೆ ಸಜ್ಜಾಗಬೇಕಿದೆ.
ಈ ಪಂಚಾಯತಿ ವ್ಯಾಪ್ತಿಯ ಡಿ.ನಾಗೇನಹಳ್ಳಿಯಲ್ಲಿ
ಅಂತರ್ಜಲ ಸಂರಕ್ಷಣೆ ಕಾರ್ಯ ನಡೆದಿದೆ.
ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರವು ಈ ಗ್ರಾಮವನ್ನ ಇದಕ್ಕೆ ಅರಿಸಿಕೊಂಡಿತು.
ಹಳ್ಳಿಯ 400 ಹೆಕ್ಟೇರ್ ನೆಲದಲ್ಲಿ 85 ಕೃಷಿಹೊಂಡ 5 ಚೆಕ್ ಡ್ಯಾಂ ಮತ್ತು
8 ಹಳೇಚೆಕ್ ಡ್ಯಾಂ
ನಿರ್ಮಿಸಲಾಗಿದೆ.

ಜೊತೆಗೆ ಕೆರೆ ಅಭಿವೃದ್ಧಿ, ತಿರುವುಗಾಲುವೆಗಳ ಮೂಲಕವೂ ನೀರನ್ನ ಸಂಗ್ರಹಣೆ ಮಾಡಲಾಗಿದೆ. ಈ ಕ್ರಮದಿಂದ ಸುತ್ತಮುತ್ತ ಬತ್ತಿದ್ದ 25 ಕೊಳವೆ ಬಾವಿಗಳು ಮರುಪೂರಣಗೊಂಡಿವೆ. ಬೆಟ್ಟಗುಡ್ಡಗಳಿಂದ ಹರಿದು ವ್ಯರ್ಥವಾಗುತ್ತಿದ್ದ ಮಳೆನೀರಿಗೆ ಕಟ್ಟೆಪ್ಪಣೆ ಮಾಡಿದ್ದಾರೆ !.ಬೆಟ್ಟದ ಜಾಗಗಳಲ್ಲಿ ನೆಲ್ಲಿ, ಗೋಡಂಬಿ,ಹುಣಸೆ,ಗಿಡಗಳನ್ನ ನೆಡಲಾಗಿದೆ. ನಂತರ ಕೃಷಿಹೊಂಡದ ನೀರಿನ ನೆರವಿನಿಂದ ಹೆಬ್ಬೇವು ಸೇರಿದಂತೆ ಅರಣ್ಯ ಮರಗಳನ್ನ ಬೆಳೆಸಲಾಗಿದೆ.
ಇನ್ನೇನು ಬೇಕು
ಇವರ ಯಶೋಗಾಥೆಗೆ ಸಾಕ್ಷಿ?
ಪ್ರಶಸ್ತಿ ಪುರಸ್ಕಾರಗಳು ಗ್ರಾಮವನ್ನು ಹುಡುಕಿಕೊಂಡೇ ಬಂದಿವೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...