ಸಂಸ್ಕೃತಿ ಮತ್ತು ಸಂಸ್ಕೃತವನ್ನು ಉಳಿಸಿದ ಕೀರ್ತಿ ಮತ್ತುರಿನ ಹಿರಿಯರಿಗೆ ಸಲ್ಲುತ್ತದೆ ಎಂದು ಸಂಸದ ಬಿ. ವೈ. ರಾಘವೇಂದ್ರ ಅವರು ತಿಳಿಸಿದ್ದಾರೆ.
ಶಿವಮೊಗ್ಗ ತಾಲೂಕಿನ ಮತ್ತೂರು ಗ್ರಾಮದಲ್ಲಿ ತುಂಗಾ ನದಿಗೆ ತಡೆಗೋಡೆ ನಿರ್ಮಾಣ ಕಾರ್ಯದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಬಾಗಿನ ಅರ್ಪಿಸಿ ಮಾತನಾಡುತ್ತಿದ್ದರು.
ಮತ್ತೂರು ಗ್ರಾಮ ನಮ್ಮ ದೇಶದ ಆಸ್ತಿ. ತುಂಗಾ ನದಿಯ ದಂಡೆಗಳು ಮಳೆಗಾಲದಲ್ಲಿ ಹೆಚ್ಚು ಹಾನಿಗೊಳಗಾಗಿತ್ತು. ಈ ಕಾರಣದಿಂದ ತಡೆಗೋಡೆ ನಿರ್ಮಿಸುವ ಕೆಲಸ ಚಾಲನೆ ದೊರೆಯುತ್ತಿದೆ ಎಂದು ರಾಘವೇಂದ್ರ ಅವರು ಹೇಳಿದರು.
ಆದಷ್ಟು ಶೀಘ್ರದಲ್ಲೇ ಕಾಮಗಾರಿ ಮುಗಿದು. ಇಲ್ಲಿನ ಜನರಿಗೆ ಉಪಯೋಗವಾಗಲಿ. ನಾನು ಇಲ್ಲಿ ಕೇವಲ ಸೇತುವೆಯಾಗಿ ಕಾರ್ಯನಿರ್ವಹಿಸಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ್ಯ ಕಾರ್ಯ ವಾಹ ಪಟ್ಟಾಭಿರಾಮ್, ಕುಮದ್ವತಿ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ರಾಘವೇಂದ್ರ, ಭಾನುಪ್ರಕಾಶ್, ಶಿವನಂಜಪ್ಪ, ಮಹೇಶ್ ಇನ್ನಿತರರು ಉಪಸ್ಥಿತರಿದ್ದರು.