Friday, April 3, 2026
Friday, April 3, 2026

ಅಮೇರಿಕ ಕೆನಡಾ ಗಡಿಯಲ್ಲಿ ನಾಲ್ವರು ಭಾರತೀಯರ ಸಾವು

Date:

ಕೆನಡಾ-ಅಮೆರಿಕ ಗಡಿಯಲ್ಲಿ ಅತಿಯಾದ ಶೀತ ಗಾಳಿಯಿಂದಾಗಿ ನಾಲ್ವರು ಭಾರತೀಯರು ಮೃತಪಟ್ಟಿದ್ದಾರೆ.
ಇದೇ ಗಡಿಯಲ್ಲಿ ಅಮೆರಿಕ ಪೊಲೀಸರು ಕೆನಡಾದ ಒಬ್ಬನನ್ನು ಮಾನವ ಕಳ್ಳಸಾಗಣೆ ಆರೋಪದಲ್ಲಿ ಬಂಧಿಸಿದ್ದಾರೆ.
ಅವರು ಭಾರತೀಯರು ಅಕ್ರಮವಾಗಿ ಅಮೆರಿಕ ಗಡಿ ಪ್ರವೇಶಿಸಲು ತೆರಳುವಾಗ ಒಬ್ಬರು ದಾರಿತಪ್ಪಿ ಬೇರ್ಪಟ್ಟಿದ್ದಾರೆ. ನಾಲ್ವರು ಅತಿಯಾದ ಚಳಿಯಿಂದ ಮೃತಪಟ್ಟಿದ್ದಾರೆ. ಬಹುಶಃ ಅವರೆಲ್ಲರೂ 11 ಗಂಟೆ ಕಾಲ ನಡೆದಿದ್ದಾರೆ. ಡಿ ಗುಂಪು ಅವರನ್ನು ಕರೆದೊಯ್ಯಬೇಕಿತ್ತು. ಅಷ್ಟರಲ್ಲಿ ಚಳಿ ತಾಳಲಾಗದೆ ಮೃತಪಟ್ಟಿದ್ದಾರೆ ಎಂದು ಅಮೆರಿಕ ಅಧಿಕಾರಿಗಳು ಶಂಕಿಸಿದ್ದಾರೆ.
ಶುಕ್ರವಾರ ಅಮೆರಿಕ ಪೊಲೀಸರು ಗಡಿಯಲ್ಲಿ ಕೆನಡಾದ ಸ್ಟೀವ್ ಶಾಂಡ್ ಎಂಬುವನನ್ನು ಬಂಧಿಸಿದ್ದಾರೆ. ಈತನು ಬುಧವಾರ ದಾಖಲೆ ಇಲ್ಲದ ಇಬ್ಬರು ಭಾರತೀಯರನ್ನು ವಾಹನದಲ್ಲಿ ಕರೆದುಕೊಂಡು ಹೋಗುವಾಗ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಹಾಗಾಗಿ ಕೆನಡಾ- ಅಮೆರಿಕ ಗಡಿಯಲ್ಲಿ ಮಾನವ ಕಳ್ಳಸಾಗಣೆ ಆರೋಪ ಕೇಳಿಬಂದಿದೆ.
ಮಿನ್ನೆಸೋಟ ಗಡಿಯ ಕೆನಡಾ ಪ್ರದೇಶದಲ್ಲಿ ಇಬ್ಬರು ತರುಣರು, ಒಬ್ಬ ಬಾಲಕಿ ಹಾಗೂ ಒಂದು ಶಿಶು ಮೃತಪಟ್ಟಿದ್ದು, ಇವರೆಲ್ಲರೂ ಭಾರತೀಯರೆಂದು ತಿಳಿದು ಬಂದಿದೆ.
ಕಳೆದ ಮಂಗಳವಾರ ನಾಲ್ವರೂ ಮೃತಪಟ್ಟಿದ್ದಾರೆ. ಮೈನಸ್ ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವುದರಿಂದ ಚಳಿಯಲ್ಲಿ ಮರಗಟ್ಟಿ ಮೃತಪಟ್ಟಿರಬಹುದು ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Hanuman Jayanti ಪಾರಂಪರಿಕ ಶ್ರದ್ದಾಭಕ್ತಿಗಳಿಂದ ದಾವಣಗೆರೆಯಲ್ಲಿ ಹನುಮ ಜಯಂತಿ

Hanuman Jayanti  ದಾವಣಗೆರೆ.ಏ.2. ನಗರದ ಜಯದೇವ ವೃತ್ತದಲ್ಲಿರುವ ಅಧ್ಯಾತ್ಮ ಮಂದಿರದಲ್ಲಿ ಶ್ರೀ...

Shivamogga Minority Welfare Department ಜಿಲ್ಲೆಯಲ್ಲಿನ ಬೌದ್ಧವಿಹಾರಗಳ ಧಮ್ಮಾಚಾರಿಗಳಿಗೆ ಮಾಸಿಕ ಗೌರವಧನ ಬಗ್ಗೆ ಸರ್ಕಾರದ ಪ್ರಕಟಣೆ.

Shivamogga Minority Welfare Department ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ...

Sandalwood Trees ಶಿವಮೊಗ್ಗದ ಎಲ್ ಬಿ ಎಸ್ ನಗರದಲ್ಲಿ ಶ್ರೀಗಂಧ ಮರ ಕಡಿತಲೆ. ಕ್ರಮ ಕೈಗೊಳ್ಳಲು ನಿವಾಸಿಗಳ ಆಕ್ರೋಶ.

Sandalwood Trees ಶಿವಮೊಗ್ಗ ಎಲ್‌ಬಿಎಸ್ ನಗರದಲ್ಲಿರುವ ಶ್ರೀ ಚೌಡೇಶ್ವರಿ ದೇವಾಲಯದ ಆವರಣದಲ್ಲಿದ್ದ...

Shivaganga Yoga Center ಪ್ರತಿಯೊಬ್ಬರಿಗೂ ಧ್ಯಾನ ಮತ್ತು ಯೊಇಗ್ದ ಅವಶ್ಯಕತೆ ಇದೆ- ಎಸ್.ಎಸ್.ಜ್ಯೋತಿಪ್ರಕಾಶ್

Shivaganga Yoga Center ಶಿವಮೊಗ್ಗದ ವಿನೋಬನಗರ -ಕಾಶಿಪುರದ ಕಲ್ಲಳ್ಳಿ ಶ್ರೀ ಶಿವಗಂಗಾ ಯೋಗ...