ಬಸವಣ್ಣ, ಸಿದ್ದರಾಮ, ಅಲ್ಲಮಪ್ರಭು ಸೇರಿದಂತೆ ವಿವಿಧ ದಾರ್ಶನಿಕರ ನೀಡಿದ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಶಿಕಾರಿಪುರದ ಗುರುಭವನದಲ್ಲಿ ಜನಸ್ಪಂದನಾ ಟ್ರಸ್ಟ್ ಹಾಗೂ ಸುವ್ವಿ ಪಬ್ಲಿಕೇಷನ್ಸ್ ಆಶ್ರಯದಲ್ಲಿ ನಡೆದ ಉಪನ್ಯಾಸಕ ಪುಟ್ಟಪ್ಪ ಕೆ.ಎಚ್. ಬಿಳವಾಣಿ ಬರೆದ ಲೋಕ ಚಿಂತಕ ಸಿದ್ಧರಾಮ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜ ಚಿಂತಕ ಸೊರಬದ ರಾಜಪ್ಪ ಮಾಸ್ತರ್, ಸಿದ್ದರಾಮರು ಸೇರಿದಂತೆ ಅನೇಕ ದಾರ್ಶನಿಕರು ಸಮಾಜದಲ್ಲಿರುವ ಮೌಡ್ಯವನ್ನು ತೊಲಗಿಸಲು ಶ್ರಮಿಸಿದ್ದರು. ಈ ದಾರ್ಶನಿಕರನ್ನು ಪೌರಾಣಿಕ ಹಿನ್ನೆಲೆಯಿಂದ ನೋಡದೇ ವೈಚಾರಿಕ ಮನೋಭಾವದಿಂದ ನೋಡಬೇಕು. ದಾರ್ಶನಿಕರ ತತ್ವ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಭೋವಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್. ಜಯಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಡಿ. ಮಧುಕೇಶವ, ಜಾನಪದ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಸಾಹಿತಿ ಡಾ. ಸುಧಾಕರ ಹಿರೇಕಸವಿ, ಸುನಿಲ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ದಾರ್ಶನಿಕರನ್ನ ವೈಚಾರಿಕವಾಗಿ ನೋಡಬೇಕು.
Date: