ರಾಜ್ಯ ಸರ್ಕಾರ ಹಸುಗಳ ಸಂಖ್ಯೆ ವೃದ್ಧಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಲಿಂಗ ನಿರ್ಧಾರಿತ ವೀರ್ಯ ಬಳಕೆ ಪ್ರಕ್ರಿಯೆ ಚುರುಕುಗೊಳಿಸಲು 2022 ಜನವರಿಯಿಂದ ಅಭಿಯಾನ ಆರಂಭಿಸಲಿದೆ.
ದೇಶಾದ್ಯಂತ ಕೇಂದ್ರ ಸರ್ಕಾರ ಮೂರು ಕಡೆ ಪ್ರಯೋಗಾಲಯಗಳನ್ನು ಆರಂಭಿಸಿದೆ. ಈ ಪ್ರಯೋಗಾಲಯದಲ್ಲಿ ರೈತರಿಗೆ ಆರ್ಥಿಕ ಹೊರೆಯಾಗಿ ಬಾದಿಸಿರುವ ಗಂಡು ಕರುಗಳ ಬದಲಾಗಿ ಹೆಣ್ಣು ಕರು ಜನಿಸುವಂತೆ ವೀರ್ಯವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಈ ಮೂಲಕ ರಾಜ್ಯಕ್ಕೆ 2ಲಕ್ಷ ವೀರ್ಯ ಪೂರೈಕೆಯಾಗುವ ಸಾಧ್ಯವಿದೆ.
ವೀರ್ಯ ಬಳಕೆ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದ್ದರೂ ಒಂದು ಬಾರಿಗೆ 900 ರಿಂದ 1000 ದರ ನಿಗದಿಗೊಳಿಸಲಾಗಿದೆ. ಸರ್ಕಾರ ಸಬ್ಸಿಡಿಯೊಂದಿಗೆ ರೈತರಿಗೆ 450 ಸೌಲಭ್ಯ ನೀಡಲಾಗುತ್ತಿದೆ. ಆದರೆ ಲಿಂಗ ನಿರ್ಧರಿತ ವಿಜಯಕ್ಕೆ 450.ರೂ ನೀಡಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಗಂಡುಗಳ ಜನನವಾಗುತ್ತದೆ. ಈ ನಿಟ್ಟಿನಲ್ಲಿ ರೈತರಿಗೆ ವೆಚ್ಚ ತಗ್ಗಿಸಲು 90% ಸಬ್ಸಿಡಿ ನೀಡುವ ಚಿಂತನೆಯನ್ನು ಪಶುಸಂಗೋಪನಾ ಇಲಾಖೆ ಹೊಂದಿದೆ. ಜನವರಿಯಿಂದ 50 ರೂಪಾಯಿಗೆ ಹೆಣ್ಣು ಕರು ಜನನಕ್ಕೆ ಪೂರಕವಾದ ವೀರ್ಯ ಸಿಗಲಿದ್ದು 92% ದರಕ್ಕೆ ಇಳಿಸಲಾಗುವುದೆ. ಅಭಿಯಾನದಿಂದ ರಾಜ್ಯದ ಹೈನೋದ್ಯಮ ಮತ್ತಷ್ಟು ಸುಧಾರಿಸುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ.
“ಗೋಶಾಲೆ ಮತ್ತು ರೈತರ ಆರ್ಥಿಕ ನಷ್ಟ ಕಡಿಮೆಗೊಳಿಸಲು ಹೆಣ್ಣು ಕರುಗಳ ಜನನ ಪ್ರಮಾಣ ಹೆಚ್ಚಿಸುವ ಚಿಂತನೆಯಿದೆ. ಈ ಪ್ರಯೋಗಕ್ಕೆ ಪ್ರತ್ಯೇಕಗೊಂಡ ವೀರ್ಯ ಬಳಕೆಯ ಮೊತ್ತಕ್ಕೆ ಸಬ್ಸಿಡಿ ಹೆಚ್ಚಿಸುವ ಚಿಂತನೆ ಇದೆ” ಎಂದು ಪಶುಸಂಗೋಪನಾ ಇಲಾಖೆ ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.