ಟಿ – 20 ವಿಶ್ವಕಪ್ ಟೂರ್ನಿಯ ಸೂಪರ್ – 12 ರ A – ಗುಂಪಿನಲ್ಲಿರುವ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಪಂದ್ಯ ನಡೆಯಿತು. ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ರೋಚಕ ಜಯವನ್ನು ಸಾಧಿಸಿತು.
ಶಾರ್ಜಾ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮೊದಲು ಆಡಿದ ದಕ್ಷಿಣ ಆಫ್ರಿಕಾ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 189 ರನ್ ಅನ್ನು ಬಾರಿಸಿತು. ರಾಸೀ ವ್ಯಾನ್ ಡೆರ್ ಡುಸ್ಸೆನ್ 60 ಎಸೆತಗಳಲ್ಲಿ 5 ಬೌಂಡರಿ ಹಾಗೂ 6 ಸಿಕ್ಸರ್ ಗಳನ್ನು ಸಿಡಿಸಿ 94 ರನ್ ಗಳನ್ನ ಗಳಿಸಿಕೊಂಡರು. ಅಂತೆಯೇ ಯಾಡೆಂ ಮಾರ್ಕ್ರಮ್ 25 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಸಿಕ್ಸರ್ ಗಳನ್ನ ಸಿಡಿಸಿ 52 ರನ್ ಗಳನ್ನ ಗಳಿಸಿಕೊಂಡರು ಇವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ದಕ್ಷಿಣ ಆಫ್ರಿಕಾ ತಂಡ ಟಿ – 20 ವಿಶ್ವಕಪ್ ಟೂರ್ನಿಯ ಸೂಪರ್ – 12 ರ ಹಂತದ ಒಂದನೇ ಗುಂಪಿನ ಕೊನೆಯ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡಕ್ಕೆ 190 ರನ್ ಗಳನ್ನ ಸವಾಲೋಡ್ಡಿತು.
T20 ದ.ಆಫ್ರಿಕ ರೋಚಕ ಜಯ.
Date: