Saturday, March 22, 2025
Saturday, March 22, 2025

ದೇವನೊಬ್ಬನೇ :ಆತನಿಗೆ ಸರಿಸಮಾನ ಯಾರಿಲ್ಲ – ಪ್ರವಾದಿ ಮಹಮ್ಮದ್ ಪೈಗಂಬರ್

Date:

ಪ್ರವಾದಿ ಮಹಮ್ಮದ್ ರವರು ಅತ್ಯಂತ ಬಡತನದಲ್ಲಿ ಬೆಳೆದವರು. ವಾಸಿಸಲು ಗುಡಿಸಲೊಂದೆ. ಅವರು ತೊಡುವ ಚರ್ಮದ ಅಂಗಿಯನ್ನು ಅವರೇ ಹೊಲಿಯುತ್ತಿದ್ದರು.
ಅವರು ಅತ್ಯಂತ ಸಾಧಾರಣ ಮತ್ತು ವಿನಮ್ರರಾಗಿದ್ದರು. ಹೀಗಾಗಿ ತಮ್ಮ ಸಹವರ್ತಿಗಳೊಂದಿಗೆ ಸುಲಭವಾಗಿ ಬೆರೆಯುತ್ತಿದ್ದರು. ಕುಟುಂಬದಲ್ಲಿ ಮನೆಗೆಲಸಕ್ಕೆ ನೆರವಾಗುತ್ತಿದ್ದರು. ಮದೀನ ಪಟ್ಟಣದಲ್ಲಿ ವಾಸಮಾಡುತ್ತಿದ್ದ ಅವರ ಜೀವಿತಾವಧಿಯಲ್ಲಿ ಇಡೀ ನಗರವೇ ಬೆಳ್ಳಿ- ಬಂಗಾರಗಳಿಂದ ತುಂಬಿತ್ತು . ಹೀಗಾಗಿ ಅವರನ್ನು “ಅರೇಬಿಯಾದ ರಾಜ “ಎಂದು ಕರೆಯುತ್ತಿದ್ದರು.
ಇವರ ಸರಳತೆಯನ್ನು ಕುರಿತು ಜಾರ್ಜ್ ಬರ್ನಾಡ್ ಶಾ ” ಇಸ್ಲಾಂ ನಲ್ಲಿರುವ ಜೀವಸತ್ವದಿಂದಾಗಿ ನಾನು ಯಾವಾಗಲೂ ಅದನ್ನು ಗೌರವಾನ್ವಿತ ಸ್ಥಾನದಲ್ಲೇ ಕಾಣುತ್ತಿರುವೆನು” ಎಂದಿದ್ದಾರೆ. ಮಹಾತ್ಮ ಗಾಂಧೀಜಿಯವರು “ಮಾನವ ಸಮೂಹದ ಕೋಟ್ಯಂತರ ಹೃದಯಗಳಲ್ಲಿ ವಿವಾದ ರಹಿತವಾದ ಪ್ರಭುತ್ವವನ್ನು ಸ್ಥಾಪಿಸಿದರು. ಅತ್ಯುನ್ನತ ವ್ಯಕ್ತಿಯ ಕುರಿತು ತಿಳಿಯ ಬಯಸಿದ್ದೆ…. ಅಂದಿನ ಜೀವನರಂಗದಲ್ಲಿ ಇಸ್ಲಾಮಿಗೆ ಸ್ಥಾನವನ್ನು ಗಳಿಸಿಕೊಟ್ಟಿದ್ದು ಖಡ್ಗವಲ್ಲ ಬದಲಾಗಿ ಪ್ರವಾದಿಯ ನಿರಾಡಂಬರತೆ , ಪರಿಪೂರ್ಣ ನಿಷ್ಕಪಟತೆ, ವಾಗ್ದಾನಗಳ ಕುರಿತು ಆತ್ಯಂತಿಕವಾದ ನಿಷ್ಠೆ, ನನ್ನ ಸ್ನೇಹಿತರು ಮತ್ತು ಸಹವರ್ತಿಗಳಿಗೆ ಅವರು ನೀಡುತ್ತಿದ್ದ ತೀವ್ರ ಪರಿಗಣನೆ, ಮತ ಪ್ರಚಾರ ಕಾರ್ಯದ ಕುರಿತು ಅವರಿಗಿದ್ದ ಎದೆಗಾರಿಕೆ, ನಿರ್ಭಯತೆ ಮತ್ತು ದೇವನಲ್ಲಿದ್ದ ಪರಿಪೂರ್ಣ ನಂಬಿಕೆ ಮತ್ತು ಭರವಸೆಗಳಾಗಿದ್ದವು ಮತ್ತು ವಾಸ್ತವತೆಯನ್ನು ನಾನು ಚೆನ್ನಾಗಿ ಮನದಟ್ಟು ಮಾಡಿಕೊಂಡೆ. ಇವುಗಳಾದ್ದವು ಅವರ ಮುಂದಿದ್ದ ಸರ್ವ ಅಡೆತಡೆಗಳನ್ನು ನಿವಾರಿಸಿದ ಅಸ್ತ್ರವೇ ಹೊರತು ಖಡ್ಗ ವಾಗಿರಲಿಲ್ಲ” ಎಂದಿದ್ದಾರೆ.

ಮಹಾತ್ಮ ಗಾಂಧೀಜಿಯವರು ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಬಗ್ಗೆ ತಾವು ತಿಳಿದುಕೊಂಡ ಸಂಗತಿಯ ಬಗ್ಗೆ ಬಹಳ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಹೀಗೆ ಇನ್ನೂ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗಣ್ಯ ವ್ಯಕ್ತಿಗಳು , ಲೇಖಕರು, ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಸಂದೇಶಗಳ ಪ್ರಭಾವಕ್ಕೆ ಒಳಗಾಗಿದ್ದಾರೆ.
ಪ್ರವಾದಿ ಮುಹಮ್ಮದ್ ಪೈಗಂಬರ್ ರವರ ಪ್ರೀತಿ ಮತ್ತು ವಾತ್ಸಲ್ಯಭರಿತ ಭಾವನೆ ನಮ್ಮೆಲ್ಲರಿಗೂ ಮಾದರಿ. ಎಲ್ಲಾ ಜನರನ್ನು ಒಬ್ಬನೇ ದೇವನು ಸೃಷ್ಟಿಸಿದ್ದಾನೆ ಎಂದು ಭೋದಿಸಿ, ಎಲ್ಲರನ್ನೂ ಒಂದೇ ಕುಟುಂಬದ ಸದಸ್ಯರ ಹಾಗೆ ಕಾಣುತ್ತಿದ್ದ ಅವರ ಸ್ವಭಾವ ಮಾನವರ ಕೌಟುಂಬಿಕ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರವನ್ನು ನೀಡುವುದರಲ್ಲಿ ಸಂದೇಹವಿಲ್ಲ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kumsi MESCOM ಕುಂಸಿ ಮೆಸ್ಕಾಂ ಕಛೇರಿಯಲ್ಲಿ ಮಾರ್ಚ್ 18. ಜನಸಂಪರ್ಕ ಸಭೆ

Kumsi MESCOM ಕುಂಸಿ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಮಾ.18 ರಂದು ಬೆಳಿಗ್ಗೆ...

Karnataka Legislative Council ಇಡೀ ರಾಷ್ಟ್ರವೇ ಮೆಚ್ಚುವ ‌ಕಾನೂನು ಶಿಕ್ಷಣ ಸಿಗಲಿ- ಮಾಜಿ ನ್ಯಾ.ಎಂ.ಎನ್.ವೆಂಕಟಾಚಲಯ್ಯ

Karnataka Legislative Council ಪ್ರವಾಹೋಪಾದಿಯಲ್ಲಿ ಸಾಧನೆ ಮಾಡುವ ಹಂಬಲ ಉಳ್ಳವರನ್ನು ತಡೆಯಲು...

District Consumer Disputes Redressal Commission ರೆಫ್ರಿಜಿರೇಟರ್ ಸೇವಾನ್ಯೂನತೆ. ಜಿಲ್ಲಾ ವ್ಯಾಜ್ಯ ಪರಿಹಾರ ಆಯೋಗದಿಂದ ಗ್ರಾಹಕರಿಗೆ ಸಿಕ್ಕಿತು ನ್ಯಾಯ

District Consumer Disputes Redressal Commission ದೂರುದಾರರಾದ ಎಸ್.ವಿ.ಲೋಹಿತಾಶ್ವ ಇವರು ಎದುರುದಾರರಾದ...