Thursday, February 13, 2025
Thursday, February 13, 2025

ಶ್ರೀ ಮಠದ ಪೀಠಾಧಿಪತಿ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಸುದ್ದಿಗೋಷ್ಠಿ

Date:

ನಗರದ ಬೆಕ್ಕಿನ ಕಲ್ಮಠ ಆವರಣದಲ್ಲಿ ಶ್ರೀ ಗುರುಬಸವ ಮಹಾಸ್ವಾಮಿಗಳ  ಶಿಲಾ ಮಂಟಪ ಹಾಗೂ ಶಿವಾಲಯ ನಿರ್ಮಾಣ ಕಾರ್ಯಕ್ಕೆ ಅ.೧೫ರಂದು  ಮಧ್ಯಾಹ್ನ ೧೨ ಗಂಟೆಗೆ ಚಾಲನೆ ನೀಡಲಾಗುವುದು ಎಂದು ಶ್ರೀ ಮಠದ ಪೀಠಾಧಿಪತಿ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೦ ವರ್ಷಗಳ ಹಿಂದೆ ಗುರುಬಸವ ಶ್ರೀಗಳು ಶ್ರೀ ಮಠವನ್ನು ಸ್ಥಾಪನೆ ಮಾಡಿದರು. ಆಗಿನ ಕಾಲದಲ್ಲಿಯೇ ಅವರು,  ಸಂಸ್ಕೃತ ಸಮಾವೇಶದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ, ಮೌಢ್ಯಗಳ ವಿರುದ್ಧ ಜನಸಾಮಾನ್ಯರಲ್ಲಿ ಅರಿವು ಮೂಡಿಸಿದ್ದರು ಎಂದರು.
ಆನಂದಪುರದಲ್ಲಿರುವ ಮುರುಘಾಮಠದ ಆವರಣದಲ್ಲಿ ೩ ಕೋಟಿ ರೂ. ವೆಚ್ಚದಲ್ಲಿ ಉಚಿತ ವಿದ್ಯಾರ್ಥಿ ನಿಲಯವನ್ನು  ನಿರ್ಮಿಸಲಾಗ್ಠುತ್ತಿದೆ. ನಗರಕ್ಕೆ ಸಮೀಪದ ಮಲ್ಲಿಗೇನಹಳ್ಳಿಯಲ್ಲಿ ೩ ಕೋಟಿ ರೂ. ವೆಚ್ಚದಲ್ಲಿ ಮ್ಯೂಸಿಯಂ ನಿರ್ಮಿಸಲಾಗುತ್ತಿದ್ದು, ಇದು ಮುಗಿಯುವ ಹಂತಕ್ಕೆ ತಲುಪಿದೆ. ಜನವರಿಯಲ್ಲಿ ಉದ್ಘಾಟನೆಯಾಗಲಿದೆ ಎಂದರು.
ನಗರದ ತುಂಗಾನದಿ ದಡದಲ್ಲಿ ಬೆಕ್ಕಿನ ಕಲ್ಮಠ ಅತ್ಯಂತ ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ. ಶ್ರೀಮಠದಲ್ಲಿ ಗುರುಬಸವ ಶ್ರೀಗಳ ಶಿಲಾ ಮಂಟಪವನ್ನು ಸ್ಥಾಪನೆ ಮಾಡಬೇಕೆಂಬ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಅಡಿಪಾಯವನ್ನು ಹಾಕಲಾಗಿತ್ತು. ಸತತ ಎರಡು ವರ್ಷಗಳ ಕೋವಿಡ್  ಹಿನ್ನೆಲೆಯಲ್ಲಿ ನಿರ್ಮಾಣ ಕಾರ್ಯ ವಿಳಂಬವಾಗಿದ್ದು, ಇದೀಗ ಈ ಕಾರ್ಯ ಆರಂಭಗೊಳ್ಳಲಿದೆ ಎಂದರು.
ನಗರದ ನಾಗರೀಕರು  ಆಧುನಿಕ ಬದುಕಿನಲ್ಲಿ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀಗಳ ಶಿಲಾಮಂಟಪದ ಆವರಣದಲ್ಲಿ  ಧ್ಯಾನ ಹಾಗೂ ಮೌನ ವ್ರತಕ್ಕೆ ಸ್ಥಳಾವಕಾಶವನ್ನು ಕಲ್ಪಿಸಲಾಗುವುದು ಎಂದ ಅವರು, ಇದರಿಂದ ಪ್ರತಿಯೊಬ್ಬರಿಗೂ ಮಾನಸಿಕ ಶಾಂತಿ ಹಾಗೂ ಸದೃಢತೆ ದೊರೆಯಲಿದೆ ಎಂದರು.
ಸುಮಾರು ೧.೫ ಕೋಟಿ ರೂ. ವೆಚ್ಚದಲ್ಲಿ  ಶಿಲಾ ಮಂಟಪವನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಕಾರ್ಕಳದ ಮಹೇಶ್ ಭಟ್ ಕಟ್ಟಡದ ಕಾರ್ಯನಿರ್ವಹಣೆ ಕೈಗೊಳ್ಳಲಿದ್ದಾರೆ ಎಂದರು.
ಕತೃ ಗದ್ದುಗೆ ಹಾಗೂ ಶಿವಾಲಯ ಕಟ್ಟಡ ನಿರ್ಮಾಣ ಸಮಿತಿಯ ಮಹಾ ಪೋಷಕರಾಗಿ  ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಪೋಷಕರಾಗಿ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಆಯನೂರು ಮಂಜುನಾಥ್, ಎಸ್. ರುದ್ರೇಗೌಡ, ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ ಕಾರ್ಯ ನಿರ್ವಹಿಸಿದರೆ,  ಕಾರ್ಯಾಧ್ಯಕ್ಷರಾಗಿ  ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್, ಅಧ್ಯಕ್ಷರಾಗಿ ಹೆಚ್.ವಿ. ಮಹೇಶ್ವರಪ್ಪ, ಉಪಾಧ್ಯಕ್ಷರಾಗಿ  ಎಸ್.ಎಸ್. ಜ್ಯೋತಿಪ್ರಕಾಶ್, ಎನ್.ಜೆ. ರಾಜಶೇಖರ್, ಸಿ.ಎಸ್. ಷಡಾಕ್ಷರಿ, ಗೋವಿಂದ ನಾಯರ್  ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ   ಕಾರ್ಯಾಧ್ಯಕ್ಷ ಎಂ.ಶ್ರೀಕಾಂತ್, ಅಧ್ಯಕ್ಷ ಹೆಚ್.ವಿ. ಮಹೇಶ್ವರಪ್ಪ, ಶ್ರೀಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎನ್.ಜೆ. ರಾಜಶೇಖರ್, ಪಾಲಿಕೆ ಸದಸ್ಯ ಹೆಚ್.ಸಿ. ಯೋಗೀಶ್,  ಎಂ.ಆರ್. ಪ್ರಕಾಶ್ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rapido Bike ಶಿವಮೊಗ್ಗಕ್ಕೂ ಎಂಟ್ರಿ ಕೊಟ್ಟ ರ್ಯಾಪಿಡೊ ಬೈಕ್

Rapido Bike ಶಿವಮೊಗ್ಗ ನಗರದಲ್ಲಿ ರ್ಯಾಪಿಡೋ ಬೈಕ್ ಓಡಾಟ ಶುರುವಾಗಿದೆ.ರ್ಯಾಪಿಡೋ...

MESCOM ಫೆ.14. ಆಲ್ಕೊಳ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಶಿವಮೊಗ್ಗ ನಗರದ ಆಲ್ಕೋಳ ವಿ.ವಿ.ಕೇಂದ್ರದಿಂದ ತುರ್ತು ಕಾಮಗಾರಿ ಇರುವುದರಿಂದ ಫೆ.14...

Shri Sewalal Jayanti ಶ್ರೀ ಸೇವಾಲಾಲ್ ಜಯಂತಿಗೆ ಸರ್ವ ಸಿದ್ಧತೆ

Shri Sewalal Jayanti ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ,...

MESCOM ಫೆ.15. ಮಾಚೇನಹಳ್ಳಿ‌‌ ಸುತ್ತಮುತ್ತ ವಿದ್ಯುತ್ಸರಬರಾಜು ವ್ಯತ್ಯಯ

MESCOM ಫೆ. 15 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6...