Lok Sabha Election ಹೊಸನಗರ ತಾಲ್ಲೂಕಿನ ನಗರ ಹೋಬಳಿ ಕುಂಭತ್ತಿ ಗ್ರಾಮದ ಸ.ನಂ.5ರಲ್ಲಿ ಇಬ್ಬರು ಜಂಟಿಯಾಗಿ ನಡೆಸುತ್ತಿರುವ ಕಲ್ಲು ಗಣಿಗಾರಿಕೆಯಿಂದ ಗ್ರಾಮಸ್ಥರಿಗೆ ಪ್ರತೀದಿನವೂ ಒಂದಲ್ಲ ಒಂದು ಸಮಸ್ಯೆಯಾಗುತ್ತಿದ್ದು, ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವಂತಹ ಸ್ಥಿತಿ ಬಂದಿದೆ.
ಈ ಬಗ್ಗೆ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳಿಗೆ ದೂರು ಕೊಟ್ಟರೂ ಈವರೆಗೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನದಿಂದ ದೂರವೇ ಉಳಿದು ಚುನಾವಣೆ ಬಹಿಷ್ಕರಿಸುವುದಾಗಿ ನಿರ್ಧರಿಸಿರುವ ಕುಂಭತ್ತಿ ಗ್ರಾಮಸ್ಥರು ತಹಶೀಲ್ದಾರ್ ಮೂಲಕ ಇಂದು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.
Lok Sabha Election ಕಾರಣಗಿರಿಯ ಬಸ್ ನಿಲ್ದಾಣದಲ್ಲಿ ಶುಕ್ರವಾರ ಗಣಿಗಾರಿಕೆಯನ್ನು ವಿರೋಧಿಸಿ ಸಾಮೂಹಿಕ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಗಣಿಗಾರಿಕೆ ವಿರೋಧಿ ಭಿತ್ತಿಪತ್ರಗಳನ್ನು ಹಿಡಿದು ಗಣಿಗಾರಿಕೆಯ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೇ, ತಮಗೆ ನ್ಯಾಯ ದೊರೆಯುವವರೆಗೂ ಹೋರಾಟವನ್ನು ಮುಂದುವರಿಸುವುದಾಗಿ ಘೋಷಿಸಿದರು.
Amith Shah ಲೋಕಸಭೆ ಚುನಾವಣೆ ಹಿನ್ನೆಲೆ ಮುಸ್ಲಿಮರನ್ನೇ ಟಾರ್ಗೆಟ್ ಮಾಡಿಕೊಂಡು ದ್ವೇಷದ ಹೇಳಿಕೆ ನೀಡುತ್ತಾ ಬಿಜೆಪಿ ನಾಯಕರು ಹಿಂದೂ ಸಮುದಾಯದ ಜನರ ಓಲೈಕೆ ರಾಜಕೀಯ ಮಾಡುತ್ತಿರುವುದು ವ್ಯಾಪಕವಾಗಿದೆ. ಇದರ ಮುಂದುವರಿದ ಭಾಗವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು ಬಿಆರ್ಎಸ್ ನೀಡಿರುವ ಮುಸ್ಲಿಂ ಮೀಸಲಾತಿಯನ್ನು ಬಿಜೆಪಿ ಕೊನೆಗೊಳಿಸಲಿದೆ ಮತ್ತು ಅದನ್ನು ಎಸ್ಸಿ, ಎಸ್ಟಿ ಮತ್ತು ಒಬಿಸಿಗಳಿಗೆ ನೀಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
Amith Shah ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮುಸ್ಲಿಮರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ನೀಡಿರುವ ಶೇ.4ರಷ್ಟು ಮೀಸಲಾತಿಯನ್ನು ರಕ್ಷಿಸಲಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಈ ಮೊದಲು ಹೇಳಿದ್ದರು. ಅವಿಭಜಿತ ರಾಜ್ಯದಲ್ಲಿ ಅಂದಿನ ಕಾಂಗ್ರೆಸ್ ಸಿಎಂ ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರು ಪ್ರಾರಂಭಿಸಿದ 4% ಮುಸ್ಲಿಂ ಕೋಟಾವನ್ನು ಷಾ ಅಥವಾ ಪ್ರಧಾನಿ ನರೇಂದ್ರ ಮೋದಿ ರದ್ದುಗೊಳಿಸಲು ಸಾಧ್ಯವಿಲ್ಲ. ಬಿಜೆಪಿಯ ಟೀಕೆಗಳ ನಡುವೆ ರಾಜ್ಯದ ಹಿಂದಿನ ಬಿಆರ್ಎಸ್ ಸರ್ಕಾರವೂ ಮೀಸಲಾತಿಯನ್ನು ತೆಗೆದುಹಾಕಲು ನಿರಾಕರಿಸಿತ್ತು. 4% ಮುಸ್ಲಿಂ ಮೀಸಲಾತಿ ಧರ್ಮದ ಆಧಾರದ ಮೇಲೆ ಅಲ್ಲ. ಅದು ಸಾಮಾಜಿಕ-ಆರ್ಥಿಕ ಸ್ಥಾನಮಾನದ ಆಧಾರದ ಮೇಲೆ ಎಂದು ನವೆಂಬರ್ನಲ್ಲಿ ಅಂದಿನ ರಾಜ್ಯ ಸಚಿವ ಕೆ.ಟಿ.ರಾಮರಾವ್ ಹೇಳಿದ್ದರು.
Shivamogga DVS College ದ್ವಿತೀಯ ಪಿಯುಸಿ ಪರೀಕ್ಷೆ ಕಲಾ ವಿಭಾಗದಲ್ಲಿ ಶಿವಮೊಗ್ಗ ಡಿವಿಎಸ್ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಿಂಚನ ಹೆಚ್ ಎಂ 600ಕ್ಕೆ 593 ಅಂಕಗಳಿಸಿ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಪಡೆದಿದ್ದಾರೆ.
ಸಿಂಚನ ಎಚ್ ಎಂ ಶಿವಮೊಗ್ಗದ ಶಿಕ್ಷಕಿ ವಾಣಿ ಆರ್ ಜೆ, ದಿ ಹಾಲೇಶ್ ಎನ್ ದಂಪತಿ ಪುತ್ರಿ, ಎಸೆಸೆಲ್ಸಿ ಯಲ್ಲಿ ಶೇ. 92.3 ಅಂಕ ಪಡೆದು ಕಲಾ ವಿಭಾಗವನ್ನು ಆಯ್ದುಕೊಂಡಿದ್ದ ಸಿಂಚನ ಮುಂದೆ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸುವುದಾಗಿ ಪ್ರತಿಕ್ರಿಯೆ ನೀಡಿದ್ದಾರೆ.
Shivamogga DVS College ಮರು ಮೌಲ್ಯಮಾಪನದಲ್ಲಿ 2ಅಂಕ ಹೆಚ್ಚುವರಿ ಬಂದಿದ್ದು ಮೊದಲಿಗೆ 600 ಕ್ಕೆ 591 ಅಂಕ ಪಡೆದು ಕಲಾ ವಿಭಾಗದಲ್ಲಿ ರಾಜ್ಯಕ್ಕೆ 6 ನೇ ರ್ಯಾಂಕ್ ಪಡೆದಿದ್ದ ಸಿಂಚನ, ಇತಿಹಾಸ ಪತ್ರಿಕೆಯನ್ನು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ವೇಳೆ 2 ಅಂಕ ಹೆಚ್ಚು ಬಂದಿದೆ ಒಟ್ಟು 593 ಅಂಕದೊಂದಿಗೆ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಆಗಿ ಹೊರಹೊಮ್ಮಿದ್ದಾರೆ. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ.
Shivamogga Police ಶಿವಮೊಗ್ಗ ನಗರದ ಗಾಂಧಿ ಬಜಾರ್ನಲ್ಲಿ ಮೂಗುತಿ ಖರೀದಿಸಿದ ಮಹಿಳೆಯರು ಒಂದುವರೆ ಲಕ್ಷ ಮೌಲ್ಯದ ಸರ ಕದ್ದೊಯ್ದ ಘಟನೆ ಬಗ್ಗೆ ವರದಿಯಾಗಿದೆ.
ಗಾಂಧಿ ಬಜಾರ್ನಲ್ಲಿರುವ ಚಿನ್ನಾಭರಣ ಅಂಗಡಿಯಲ್ಲಿ ಇಬ್ಬರು ಮಹಿಳೆಯರು ಆಗಮಿಸಿದ್ದರು. ಅಂಗಡಿ ಮಾಲೀಕರಿಗೆ ಚಿನ್ನದ ಸರದ ಡಿಸೈನ್ ತೋರಿಸುವಂತೆ ತಿಳಿಸಿದಾಗ ಮಾಲೀಕರು ಚಿನ್ನದ ಸರವಿದ್ದ ಟ್ರೇ ತೆಗೆದು ತೋರಿಸಿದ್ದಾರೆ. ಅದೇ ವೇಳೆ ಇನ್ನೊಬ್ಬ ಗ್ರಾಹಕರು ಅಲ್ಲಿಗೆ ಬಂದಿದ್ದಾರೆ. ಮಾಲೀಕರು ಅವರತ್ತ ಗಮನ ಹರಿಸಿದ ಬೆನ್ನಲ್ಲೆ ಮಹಿಳೆಯರು ಟ್ರೇನಲ್ಲಿದ್ದ ಚಿನ್ನದ ಸರವನ್ನು ಕದ್ದಿದ್ದಾರೆ.
Shivamogga Police ಚಿನ್ನದ ಮೂಗುತಿಯೊಂದನ್ನು ಖರೀದಿಸಿ ಅಲ್ಲಿಂದ ವಾಪಸ್ ಆಗಿದ್ದಾರೆ. ಅಂಗಡಿ ಮಾಲೀಕನಿಗೆ ಆ ಸಂದರ್ಭದಲ್ಲಿ ಅನುಮಾನ ಬಂದಿರಲಿಲ್ಲ. ಆನಂತರ ಅಂಗಡಿಯಲ್ಲಿ ಸ್ಟಾಕ್ ಪರಿಶೀಲಿಸುತ್ತಿದ್ದಾಗ ಚಿನ್ನದ ಸರ ಕಳುವಾಗಿರುವ ಅಂಶ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣವನ್ನು ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Kateel Ashok Pai Memorial College ಮಾನಸ ಟ್ರಸ್ಟ್ ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಎನ್ಎಸ್ಎಸ್ ಘಟಕ ಹಾಗೂ ಶಿವಮೊಗ್ಗ ಜಿಲ್ಲಾ ಪಂಚಾಯತ್, ಸ್ವೀಪ್ ಶಿವಮೊಗ್ಗ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಕಾಲೇಜಿನ ದತ್ತು ಗ್ರಾಮವಾದ ಕೋನಗನವಳ್ಳಿ ತಾಂಡದಲ್ಲಿ ಉದ್ಘಾಟಿಸಲಾಯಿತು.
ವಿದ್ಯಾರ್ಥಿಗಳು “ಮತದಾನ ಮಹಾದಾನ” ಎಂಬ ಬೀದಿ ನಾಟಕವನ್ನು ಮಾಡುವುದರೊಂದಿಗೆ ಪ್ರತಿ ಮನೆಗೂ ಭೇಟಿ ನೀಡಿ ಮತದಾನ ಮಾಡಲು ಪ್ರೇರೇಪಿಸಿದರು.
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಸ್ವೀಪ್ ಶಿವಮೊಗ್ಗ ವತಿಯಿಂದ ಶಿವಮೊಗ್ಗ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾ ದ ಶ್ರೀ ಸ್ನೇಹಲ್ ಸುಧಾಕರ್ ಲೋಖಂಡೆಯವರು ಯುವ ಮತದಾರರನ್ನುದೇಶಿಸಿ ಮಾತನಾಡಿದರು.
ಅವರು “ನಮ್ಮ ದೇಶದಲ್ಲಿ 18 – 30 ವರ್ಷದೊಳಗಿನ ಯುವಜನರ ಸಂಖ್ಯೆಯೇ ಪ್ರಧಾನವಾಗಿದ್ದು ಯುವಜನರ ಜವಾಬ್ದಾರಿಯುತ ಮತದಾನವೇ ಭವಿಷ್ಯದಲ್ಲಿ ದೇಶದ ಅಭಿವೃದ್ಧಿಯನ್ನು ನಿರ್ಧರಿಸುತ್ತದೆ” ಎಂದು ತಿಳಿಸಿದರು.
ಎಲ್ಲಾ ಯುವ ಜನರು ಕಡ್ಡಾಯವಾಗಿ ಮತದಾನ ಮಾಡುವುದರೊಂದಿಗೆ ಎಲ್ಲಾ ಅರ್ಹ ಮತದಾರರನ್ನು ಮೇ 7 ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾನ ಮಾಡುವಂತೆ ಪ್ರೇರೇಪಿಸಿರಿ ಎಂದು ಕರೆ ನೀಡಿದರು.
Kateel Ashok Pai Memorial College ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಸ್ವೀಪ್ ತರಬೇತುದಾರರಾದ ಶ್ರೀ ನವೀನ್ ಅಹಮದ್ ಪರ್ವಿಜ್ ರವರು ವಿದ್ಯಾರ್ಥಿಗಳಿಗೆ ಮತದಾನದ ಮಹತ್ವದ ಕುರಿತು ಅರಿವು ಮೂಡಿಸುವುದರೊಂದಿಗೆ ಜವಾಬ್ದಾರಿಯುತ ಮತದಾನದ ಅಂಶಗಳನ್ನು ತಿಳಿಸಿಕೊಟ್ಟರು. “ಯಾವ ಕಾರಣಕ್ಕೂ ಯಾವುದೇ ಆಮಿಷಗಳಿಗೆ ಬಲಿಯಾಗದೇ ಮತದಾನ ನಡೆಸುವುದು ಜವಾಬ್ದಾರಿಯುತ ಪೌರರ ಕರ್ತವ್ಯ” ಎಂದು ತಿಳಿಸಿದರು.
ಎನ್ ಎಸ್ ಎಸ್ ವಿದ್ಯಾರ್ಥಿಗಳೇ ನಡೆಸಿದ ಕಾರ್ಯಕ್ರಮದಲ್ಲಿ ಶ್ರೀಯುತ ಮಂಜುನಾಥ್ ಸ್ವಾಮಿಯವರು ನಿರ್ದೇಶಿಸಿದ ಬೀದಿ ನಾಟಕವು ಎಲ್ಲರ ಗಮನ ಸೆಳೆಯಿತು. ಈ ಬೀದಿ ನಾಟಕವು ನಗರದ ಪ್ರಮುಖ ಪ್ರದೇಶಗಳಲ್ಲಿ ಪ್ರದರ್ಶಿಸಿ ಜಾಗೃತಿ ಮೂಡಿಸಲಾಗುವುದು ಎಂದು ಪ್ರಾಂಶುಪಾಲರು ತಿಳಿಸಿದರು. ಎಲ್ಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಮತದಾನ ಮಾಡುವ ಪ್ರತಿಜ್ಞೆಯನ್ನು ಕೈಗೊಂಡರು.
ಈ ಕಾರ್ಯಕ್ರಮದಲ್ಲಿ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿ, ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿಗಳಾದ ಡಾ.ಸುಕೀರ್ತಿ, ಶ್ರೀ ರಾಬರ್ಟ್ ರಾಯಪ್ಪ, ಎಂಸಿಸಿಎಸ್ ನ ನಿರ್ದೇಶಕರಾದ ಡಾ.ರಾಜೇಂದ್ರ ಚೆನ್ನಿ, ಉಪನ್ಯಾಸಕರಾದ ಡಾ.ಅರ್ಚನಾ ಭಟ್, ಶ್ರೀ ಮಂಜುನಾಥ ಸ್ವಾಮಿ, ಕಾವ್ಯ, ಗೌರಿ ಶ್ರೀ, ಮೋಹನ್ ಕುಮಾರ್, ಶ್ರೀಮತಿ ಮಾಲತಿ ಉಪಸ್ಥಿತರಿದ್ದರು.
K.S.Eshwarappa ರಾಹುಲ್ ಗಾಂಧಿ ಶಿವಮೊಗ್ಗಕ್ಕೆ ಬರಬೇಕು ಎಂಬುದು ನನ್ನ ಆಸೆ. ಅವರು ಎಲ್ಲಿಲ್ಲಿ ಕಾಲಿಟ್ಟದ್ದಾರೋ ಅಲ್ಲೆಲ್ಲ ಸೋತಿದ್ದಾರೆ.ಮೀಗ ಶಿವಮೊಗ್ಗಕ್ಕೆ ಬರುತ್ತಾರೆ ಎಂದರೆ ದಯವಿಟ್ಟು ಬೇಗಾ ಕರೆಸಿ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.
ನನಗೆ ಸಿನಿಮಾ ನಟರ ಬಗ್ಗೆ ಅಪಾರ ಗೌರವ ಇದೆ. ನಟರನ್ನು ನೋಡಲು ಜನರನ್ನು ಬರುತ್ತಾರೆ ವಿನಾ ಅವರು ಬಂದ ಮಾತ್ರಕ್ಕೆ ಕಾಂಗ್ರೆಸ್ಗೆ ಮತ ಕೊಡುವುದಿಲ್ಲ. ಯಡಿಯೂರಪ್ಪ ಅವರೇ ರಾಘವೇಂದ್ರ ಅವರನ್ನು ಗೆಲ್ಲಿಸಿಕೊಡುವ ಸಲುವಾಗಿ ಗೀತಾ ಅವರನ್ನು ಇಲ್ಲಿಗೆ ಹಾಕಿಸಿಕೊಂಡು ಬಂದಿದ್ದಾರೆ. ಹೀಗಾಗಿ ಕಾಂಗ್ರೆಸ್, ಬಿಜೆಪಿ ಪರಸ್ಪರ ಟೀಕೆ ಮಾಡಿಕೊಳ್ಳುವುದಿಲ್ಲ. ಇಬ್ಬರು ಸೇರಿ ನನ್ನನ್ನು ಟೀಕೆ ಮಾಡುತ್ತಿದ್ದಾರೆ. ಇವರಿಬ್ಬರ ಸೋಲು ಖಚಿವಾಗಿದೆ ಎಂದರು.
K.S.Eshwarappa ಒಂದು ರಾಜಕೀಯ ಪಕ್ಷ ಅಣ್ಣಮಲೈ ಅವರನ್ನು ಕರೆಸಿ ಪ್ರಚಾರ ಮಾಡಿದ್ದು ತಪ್ಪಲ್ಲ. ಆದರೆ, ಅವರನ್ನು ನೋಡಲು ಜನ ಹೋಗಲಿಲ್ಲ. ತಮಿಳು ಬೆಂಬಲ ಅವರಿಗೆ ಇಲ್ಲ ಎಂಬುದು ಬಿಜೆಪಿಗೆ ಗೊತ್ತಾಗಿದೆ. ನನ್ನ ಜೀವನದಲ್ಲಿ ಪಕ್ಷದ ನಾಯಕರು ಹೇಳಿದ ಯಾವ ಮಾತನ್ನು ನಾನು ಮೀರಿಲ್ಲ. ಅವತ್ತು ಸಂಗೊಳ್ಳಿ ರಾಯಣ್ಣ ಬ್ರೀಗೇಡ್ ಬಿಟ್ಟಿದ್ದರ ಪರಿಣಾಮ ಹಿಂದುಳಿದವರು, ದಲಿತರು ಎಲ್ಲ ಕಾಂಗ್ರೆಸ್ಗೆ ಹೋಗಿದ್ದಾರೆ ಎಂದು ಟೀಕಿಸಿದರು.
CM Siddharamaih ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತೀಚಿಗೆ ದುಷ್ಕರ್ಮಿಯಿಂದ ಕೊಲೆಯಾದ ಹುಬ್ಬಳ್ಳಿಯ ನೇಹಾ ಹಿರೇಮಠ್ ಅವರ ನಿವಾಸಕ್ಕೆ ಭೇಟಿ ನೀಡಿ, ಮೃತ ಯುವತಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಫೋಷಕರಿಗೆ ಸಾಂತ್ವನ ಹೇಳಿದರು.
ಆರೋಪಿಯ ಕೃತ್ಯಕ್ಕೆ ಸರಿ ಸಮನಾದ ಶಿಕ್ಷೆ ಕೊಡಿಸಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ. ಈಗಾಗಲೇ ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದೆ. ತನಿಖೆ ಅತ್ಯಂತ ತ್ವರಿತವಾಗಿ ನಡೆಯುತ್ತದೆ ಎಂದು ಭರವಸೆ ನೀಡಿದರು.
CM Siddharamaih ಮುಂದೆ ಯಾರೊಬ್ಬರೂ ಇಂಥಾ ಹೀನ ಕೃತ್ಯಕ್ಕೆ ಕೈ ಹಾಕಬಾರದು ಎನ್ನುವ ಸ್ಪಷ್ಟ ಎಚ್ಚರಿಕೆ ನೀಡುವ ರೀತಿಯಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಭರವಸೆಯನ್ನು ಕುಟುಂಬ ಸದಸ್ಯರಿಗೆ ನೀಡಿದ್ದೇನೆ. ಕೊಟ್ಟ ಮಾತಿನಂತೆ ಯುವತಿಯ ಸಾವಿಗೆ ನ್ಯಾಯ ದೊರಕಿಸಿಕೊಡುತ್ತೇನೆ ಎಂದರು.
Geeta Shivaraj kumar ಹಣೆಯ ಕುಂಕುಮ ಅಳಿಸಿಕೊಂಡ ವಿಚಾರವಾಗಿ ಈಶ್ವರಪ್ಪನವರಿಂದ ನಾನೂ ಏನು ಕಲಿಯ ಬೇಕಾಗಿಲ್ಲ ಎಂದು ಈಶ್ವರಪ್ಪನವರಿಗೆ ಗೀತಾ ಶಿವರಾಜ್ ಕುಮಾರ್ ಅವರು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್. ಕುಂಕುಮ ಅಳಿಸಿಕೊಂಡಿದ್ದಕ್ಕೆ ಗೀತಾ ಶಿವರಾಜ್ ಕುಮಾರ್ ಕ್ಷಮೆ ಕೇಳಬೇಕು ಎಂದು ಈಶ್ವರಪ್ಪ ಹೇಳಿದ್ದರು.
Geeta Shivaraj kumar ಈ ಹಿನ್ನೆಲೆಯಲ್ಲಿ ಅವರಿಂದ ನಾನೂ ಏನನ್ನೂ ಕಲಿಯ ಬೇಕಿಲ್ಲ. ನಮ್ಮ ಸಂಸ್ಕೃತಿ ಮತ್ತು ಪರಂಪರೆ ಬಗ್ಗೆ ನನಗೆ ಗೊತ್ತಿದೆ. ನನ್ನ ಅಮ್ಮ ದೇವರ ಮನೆಯಲ್ಲಿ ಪೂಜೆ ಹೇಳಿಕೊಟ್ಟಿದ್ದಾರೆ. ನನ್ನ ಅತ್ತೆ ಬಾಗಿಲು ಪೂಜೆ, ತುಳಸಿ ಪೂಜೆ ಮಾಡುವುದನ್ನು ಹೇಳಿಕೊಟ್ಟಿದ್ದಾರೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮಂಗಳಸೂತ್ರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು ಇದು ಅತಿ ಸೂಕ್ಷ್ಮ ವಿಚಾರ.ಈ ರೀತಿ ಮಾತನಾಡುವುದು ಪ್ರಧಾನಿಗಳಿಗೆ ಸೂಕ್ತ ಅಲ್ಲ. ಅದನ್ನು ನಾನೂ ಖಂಡಿಸುತ್ತೇನೆ, ಅವರ ಬಾಯಿಂದ ಈರೀತಿ ಹೇಳಿಕೆ ಬರಬಾರದು ಎಂದಿದ್ದಾರೆ
Lok Sabha Election ಶಿವಮೊಗ್ಗ ಲೋಕಸಭಾ ಮತ ಕ್ಷೇತ್ರದಲ್ಲಿ 862789 ಪುರುಷ, 890061 ಮಹಿಳೆ, 03 ತೃತೀಯಲಿಂಗಿ ಸೇರಿದಂತೆ 1752885 ಮತದಾರರಿದ್ದಾರೆ. ವಿಕಲಚೇತನ 10925 ಪುರುಷ, 8340 ಮಹಿಳೆ ಸೇರಿ ಒಟ್ಟು 19265 ಮತದಾರರು ಇದ್ದಾರೆ. 18 ರಿಂದ 19 ವರ್ಷದೊಳಗಿನ 22067 ಮತ್ತು 19861 ಯುವತಿ, 3 ತೃತೀಯಲಿಂಗಿ ಸೇರಿದಂತೆ ಒಟು 41931 ಯುವ ಮತದಾರರು ಇದ್ದಾರೆ.
Lok Sabha Election 85 ವರ್ಷ ಮೀರಿದ 6214 ಪುರುಷ, 9114 2 2 15328 ಮತದಾರರು ಇದ್ದಾರೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರು ತಿಳಿಸಿದ್ದಾರೆ.
Lok Sabha Shivamogga ಶಿವಮೊಗ್ಗ ಲೋಕಸಭಾ ಚುನಾವಣೆ-2024 ರ ಶಿವಮೊಗ್ಗ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಅಂಗವಾಗಿ ದಿನಾಂಕ: 27.04.2024 ರಂದು ಎನ್.ಇ.ಎಸ್ ಮೈದಾನದಲ್ಲಿ ಟೆನಿಸ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. 12 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, Lok Sabha Shivamogga ಸದರಿ ಪಂದ್ಯಾವಳಿಯನ್ನು ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ರವರು ಬೆಳಿಗ್ಗೆ 8.00 ಗಂಟೆಗೆ ಉದ್ಘಾಟನೆ ಮಾಡಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಸಾರ್ವಜನಿಕರು ಭಾಗವಹಿಸಿ ಕ್ರೀಡಾ ಪಟುಗಳಿಗೆ ಪ್ರೊತ್ಸಾಹಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ನೇಹಲ್ ಸುಧಾಕರ ಲೋಖಂಡೆ ಅವರು ಕೋರಿದ್ದಾರೆ.