Independence day ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ 2024 ರ ಆಗಸ್ಟ್ ತಿಂಗಳು ಪೂರ್ತಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು 50% ರ ರಿಯಾಯಿತಿ ದರಗಳಲ್ಲಿ ಮಾರಾಟ ಮಾಡಲಾಗುವುದು.
ಪುಸ್ತಕಪ್ರಿಯರು ಈ ಅವಕಾಶ ಬಳಸಿಕೊಳ್ಳಲು ಕೋರಿದೆ. ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಹಾಗೂ ಎಲ್ಲಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದಿಂದ ತೆರೆಯಲಾದ ಎಲ್ಲಾ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಈ ರಿಯಾಯಿತಿ ಸೌಲಭ್ಯ ದೊರೆಯಲಿದೆ. ಅಲ್ಲದೆ ಕನ್ನಡ ಪುಸ್ತಕ ಪ್ರಾಧಿಕಾರದ ಆನ್‌ಲೈನ್ https://kpp.karnataka.gov.in ನಲ್ಲಿ ಕೂಡ ಈ ಶೇ.50% ರಿಯಾಯಿತಿ ಲಭ್ಯವಿದೆ.
Independence day ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಂಬAಧಿಸಿದAತೆ, ಎಲ್ಲಾ ಪ್ರಕಾರದ ಸಾಹಿತ್ಯ ಕೃತಿಗಳನ್ನು ಈವರೆಗೆ ಪ್ರಕಟಿಸುತ್ತಾ ಬಂದಿದೆ. ಇವುಗಳಲ್ಲಿ ವ್ಯಕ್ತಿಚಿತ್ರಗಳು, ನಾಟಕಗಳು, ಅಲೆಮಾರಿ ಸಮುದಾಯ, ವೈದ್ಯಕೀಯ, ಪ್ರಾಚೀನ ಕನ್ನಡ ಸಾಹಿತ್ಯ, ಜಾನಪದ, ಪರಿಸರ, ಕೃಷಿ ಹೀಗೆ ಹಲವು ಹತ್ತು ಪ್ರಕಾರಗಳಲ್ಲಿ ಸಾಹಿತ್ಯ ಕೃತಿಗಳನ್ನು ಇದುವರೆಗೆ ಸುಮಾರು 704 ಶೀರ್ಷಿಕೆಗಳನ್ನು ಮುದ್ರಿಸಿ ಪ್ರಕಟಿಸಿದೆ. ಅತ್ಯಂತ ಮೌಲಿಕವಾದ, ಪ್ರಾಜ್ಞರಿಂದ ರಚಿತವಾದ ಈ ಕೃತಿಗಳನ್ನು ಜನಸಾಮಾನ್ಯರಿಗೆ ಸುಲಭ ಬೆಲೆಯಲ್ಲಿ ತಲುಪಿಸಬೇಕೆಂಬ ಉದ್ದೇಶ ಕನ್ನಡ ಪುಸ್ತಕ ಪ್ರಾಧಿಕಾರದ್ದಾಗಿದೆ ಎಂದು ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ.ಕಿರಣ್ ಸಿಂಗ್ ತಿಳಿಸಿದ್ದಾರೆ.
Independence day ಪುಸ್ತಕ ಪ್ರಿಯರಿಗೆ ಸಿಹಿಸುದ್ದಿ ಆಗಸ್ಟ್ ನಲ್ಲಿ ಪುಸ್ತಕ ಪಾಧಿಕಾರದ ಎಲ್ಲಾ ಪುಸ್ತಕಗಳಿಗೆ ಶೇ.50 ರಿಯಾಯಿತಿ
Sagara Police ಸಾಗರದಲ್ಲಿ ಯುವಕನೇಣಿಗೆ ಶರಣಾದ ಘಟನೆ
Sagara Police ಸಾಗರದ ಸೊರಬ ರಸ್ತೆ ಬಡಾವಣೆಯೊಂದರಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಾಗರದ ಜೆ.ಪಿ. ನಗರ ನಿವಾಸಿ ಅರುಣ (24) ಎಂಬುವವರು ಆತ್ಮಹತ್ಯೆ ಮಾಡಿಕೊಂಡವನು. ಈತನು ಬೈಕ್ ಮೇಲೆ ನಿಂತು ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.
Sagara Police ಸೋಮವಾರದಿಂದ ಕಾಣೆಯಾಗಿದ್ದ ಈತನನ್ನು ಕುಟುಂಬಸ್ಥರು ಎಲ್ಲೆಡೆ ಹುಡುಕಾಡಿದ್ದಾರೆ. ಮಂಗಳವಾರ ಸಂಜೆ ಶವ ಪತ್ತೆಯಾಗಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
Ghataprabha river ನದಿ,ಜಲಪಾತಗಳ ಬಳಿ ಅನಗತ್ಯ “ಸೆಲ್ಫಿ ಹುಚ್ಚು” ಪ್ರದರ್ಶಿಸುವವರಿಗೆ “ಲಾಠಿ ರುಚಿ” ತೋರಿಸಲು ಸಚಿವರ ಸೂಚನೆ
Ghataprabha river ರಾಜ್ಯದ ಜನರು ನಮ್ಮ ಬಗ್ಗೆ ತಪ್ಪು ತಿಳಿದುಕೊಂಡರೂ ಪರವಾಗಿಲ್ಲ. ಆದರೆ, ಅವರ ಜೀವ ಉಳಿಸುವುದು ಮುಖ್ಯ. ಹೀಗಾಗಿ, ಅಧಿಕಾರಿಗಳ ಮಾತು ಕೇಳದೆ ನದಿಗೆ ಇಳಿಯುವವರಿಗೆ ಲಾಠಿ ರುಚಿ ತೋರಿಸಿ ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸೂಚನೆ ನೀಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ಘಟಪ್ರಭಾ ನದಿಯಿಂದ ಪ್ರವಾಹ ಉಂಟಾಗಿದ್ದು, ವಿವಿಧ ಗ್ರಾಮಗಳಿಗೆ ಕೃಷ್ಣ ಬೈರೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Ghataprabha river ಈ ವೇಳೆ ಮಾತನಾಡಿದ ಅವರು, ಮೀನು ಹಿಡಿಯಲು, ಕೃಷಿ ಚಟುವಟಿಕೆ, ಸೆಲ್ಫಿಗಾಗಿ ಯಾರೂ ನದಿ ಅಥವಾ ಹೊಳೆಗೆ ಇಳಿಯಬಾರದು. ಒಂದು ವೇಳೆ ಒಳ್ಳೆ ಮಾತಿಗೆ ಗೌರವ ಕೊಡದೆ ನದಿಗೆ ಇಳಿದವರಿಗೆ ಲಾಠಿ ಏಟು ನಿಶ್ಚಿತ. ನಮ್ಮ ರಾಜ್ಯದಲ್ಲಿ ಪ್ರಾಣಹಾನಿಯಾಗಲು ನಾವು ಬಿಡುವುದಿಲ್ಲ ಎಂದು ಹೇಳಿದರು.
ನಮ್ಮ ಪುಣ್ಯ ಎರಡು ದಿನಗಳಿಂದ ಮಳೆಯ ಅಬ್ಬರ ಕಡಿಮೆಯಾಗಿದೆ. 2019-20ರಲ್ಲಿ 272 ಮಂದಿ ಮಳೆಯ ಅಬ್ಬರದಿಂದ ಸಾವನ್ನಪ್ಪಿದ್ದರು. 2022 ರಲ್ಲಿ 249 ಮಂದಿ ಸಾವನ್ನಪ್ಪಿದ್ದಾರೆ. ಕಳೆದ ವರ್ಷ 243 ಸಾವುಗಳು ಸಂಭವಿಸಿವೆ. ಈ ಬಾರಿ, ಮಳೆಗೆ ಹೆಚ್ಚಿನ ಪ್ರಾಣಹಾನಿಯಾಗದಂತೆ ತಡೆಯಬೇಕು. ಅದಕ್ಕಾಗಿ, ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ತಿಳಿಸಿದರು.
Chamber Of Commerce ಎಲ್ಲರ ಗಮನ ಸೆಳೆದ ಕುಟುಂಬ ಮಿಲನ & ಸಾಂಸ್ಕೃತಿಕ ಕಾರ್ಯಕ್ರಮ
Chamber Of Commerce ಕುಟಂಬ ಮಿಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಇಂತಹ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಖಿನ್ನತೆ ದೂರವಾಗಿಸುತ್ತದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಹೇಳಿದರು.
ನಗರದ ಐಎಂಎ ಸಭಾಂಗಣದಲ್ಲಿ ಭಾವಸಾರ ವಿಷನ್ ಇಂಡಿಯಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಸಾಂಸ್ಕೃತಿಕ ಸ್ಪರ್ಧೆ, ಕ್ರೀಡೆ ಹಾಗೂ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪ್ರತಿಯೊಬ್ಬರು ತಮ್ಮದೇ ಆದ ವ್ಯವಹಾರದಲ್ಲಿ ತೊಡಗಿರುತ್ತಾರೆ. ಒತ್ತಡದ ಜೀವನಶೈಲಿಯಲ್ಲಿ ಒಂದಿಷ್ಟ ಮನರಂಜನೆ, ಹಾಡು, ಸಾಂಸ್ಕೃತಿಕ ಕಾರ್ಯಕ್ರಮ ಹೊಸ ಚೈತನ್ಯ ನೀಡುತ್ತದೆ. ಪ್ರತಿಭೆ ಅನಾವರಣಗೊಳಿಸಲು ವೇದಿಕೆ ಸಿಗುತ್ತದೆ ಎಂದು ತಿಳಿಸಿದರು.
ಭಾವಸಾರ ಇಂಡಿಯಾ ವಿಷನ್ ಸಂಸ್ಥೆಯ ಸದಸ್ಯರು ಕರೋನಾ ಸಂದರ್ಭದಲ್ಲಿ ಸಾಕಷ್ಟು ಸಮಾಜಮುಖಿ ಕಾರ್ಯಕ್ರಮ ಮಾಡಿರುವುದು ಶ್ಲಾಘನೀಯ. ಸಂಸ್ಥೆಯಿಂದ ಇನ್ನಷ್ಟು ಸೇವಾ ಕಾರ್ಯಗಳನ್ನು ನೀಡುವ ಶಕ್ತಿ ದೊರಕಲಿ ಎಂದು ಆಶಿಸಿದರು.
Chamber Of Commerce ಅಂತ್ಯಾಕ್ಷರಿ ಸ್ಪರ್ಧೆ ಹಾಗೂ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಹಳೇ ಚಿತ್ರಗೀತೆಗಳನ್ನು ಹಾಡಿ ರಂಜಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾವಸಾರ ವಿಷನ್ ಇಂಡಿಯಾ ಸಂಸ್ಥೆ ಅಧ್ಯಕ್ಷ ದಿನೇಶ್ ಕುಂಟೆ ವಹಿಸಿ ಮಾತನಾಡಿ, ನಮ್ಮ ಸಂಸ್ಥೆ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಮಾಡುವ ಜತೆಯಲ್ಲಿ ಸದಸ್ಯರಿಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಸೇವಾ ಚಟುವಟಿಕೆಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯದರ್ಶಿ ಡಿ.ಪಿ.ಕಮಲಾಕರ, ಚೇತನಾ ಅಂಬೋರೆ, ಸುನೀಲ್ ಬೇಂದ್ರೆ, ಡಿ.ಎನ್.ವಿನಾಯಕ, ಪಾಂಡುರಂಗ ಕುಂಟೆ ಹಾಗೂ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.
Chamber Of Commerce ಕೈಗಾರಿಕಾ & ವಾಣಿಜ್ಯ ಇಲಾಖೆಯ ವಿವಿಧ ಯೋಜನೆಗಳಿಗೆ ಅರ್ಜಿಸಲ್ಲಿಸಲು ಆನ್ ಲೈನ್ ಸೌಲಭ್ಯ
Chamber Of Commerce ಶಿವಮೊಗ್ಗ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು 2024-25ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ಬಂಡಾವಳ ಹೂಡಿಕೆ ಸಹಾಯಧನ, ತರಬೇತಿ ಹಾಗೂ ತರಬೇತಿ ಪಡೆದ ಫಲಾನುಭವಿಗಳಿಗೆ ಸುಧಾರಿತ ಉಪಕರಣ ವಿತರಣೆ, ವೃತ್ತಿಪರ/ವೃತ್ತಿ ನಿರತ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ ಸರಬರಾಜು ಮತ್ತು ಬಡ್ಡಿ ಸಹಾಯಧನ ಸೌಲಭ್ಯ ನೀಡಲು ಆಸಕ್ತ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
ಆಸಕ್ತರು ಇಲಾಖೆಯ https://shimoga.nic.in ಪೊರ್ಟಲ್ ಮೂಲಕ ದಿ: 30/08/2024 ರೊಳಗಾಗಿ ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸುವಂತೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Chamber Of Commerce ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ.ಸಂ.: 08182-223376, ಶಿವಮೊಗ್ಗ, ಭದ್ರಾವತಿ ಮತ್ತು ತೀರ್ಥಹಳ್ಳಿ ಕೈಗಾರಿಕಾ ವಿಸ್ತರಣಾಧಿಕಾರಿ ದೂ.ಸಂ.: 9380561275, ಸೊರಬ, ಶಿಕಾರಿಪುರ, ಹೊಸನಗರ ಕೈಗಾರಿಕಾ ವಿಸ್ತರಣಾಧಿಕಾರಿ ದೂ.ಸಂ.: 9481743640 ಹಾಗೂ ಸಾಗರ ಕೈಗಾರಿಕಾ ವಿಸ್ತರಣಾಧಿಕಾರಿ ದೂ.ಸಂ.: 9448401714 ಇವರುಗಳನ್ನು ಸಂಪರ್ಕಿಸುವುದು.
Kateel Ashok Pai College ಪ್ರತಿಯೊಬ್ಬ ಸೈನಿಕನಿಗೂ ದೇಶದ ಹಿತವೇ ಮುಖ್ಯ- ನಿವೃತ್ತ ಯೋಧ ರಾಜಶೇಖರ್
Kateel Ashok Pai College ಕೇಂದ್ರ ಸಂವಹನ ಇಲಾಖೆ, ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಶಿವಮೊಗ್ಗ ಹಾಗೂ ಮಾನಸ ಟ್ರಸ್ಟ್ ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಗದೊಂದಿಗೆ ಕಾರ್ಗಿಲ್ ವಿಜಯೋತ್ಸವದ ವಿವಿಧ ಕಾರ್ಯಕ್ರಮಗಳ ಸಮಾರೋಪ ಸಮಾರಂಭವನ್ನು ಕಾಲೇಜಿನ ಬಹುಮುಖಿ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಈ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನಾಡಿದ ಭಾರತೀಯ ಸೇನೆಯ ನಿವೃತ್ತ ಯೋಧರಾದ ಶಿವಮೊಗ್ಗದ ಶ್ರೀ ರಾಜಶೇಖರ್ ರವರು ಮಾತನಾಡುತ್ತಾ ದೇಶದ ಪ್ರತಿಯೊಬ್ಬ ಸೈನಿಕನಿಗೂ ದೇಶದ ರಕ್ಷಣೆ ಹಾಗೂ ದೇಶದ ಹಿತವೇ ಆದ್ಯತೆಯಾಗಿರುತ್ತದೆ ಎಂದು ತಿಳಿಸಿದರು. ಭಾರತೀಯ ಸೇನೆಗೆ ತಾನು ಆಯ್ಕೆಯಾದ ಪ್ರಕ್ರಿಯೆಯನ್ನು ವಿವರಿಸುತ್ತಾ ಶ್ರೀಯುತರು ಸೇನೆಯ ಆಯ್ಕೆಗೆ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಗಳೆರಡೂ ಮುಖ್ಯ ಎಂದರು. ಮುಂದುವರೆದು ತಾನು ಕಾರ್ಯ ನಿರ್ವಹಿಸಿದ ವಿವಿಧ ಸ್ಥಳಗಳು, ಅನುಭವಗಳು ಹಾಗೂ ಸವಾಲುಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ತನ್ನ ಅನುಭವಗಳನ್ನು ಹೇಳುತ್ತಾ ಗಾಯಗೊಂಡ ಹಾಗೂ ಮಡಿದ ವೀರ ಯೋಧರನ್ನು ಸ್ಮರಿಸಿದರು. ಭಾರತದ ಸೇನೆ ಯಾವುದೇ ದೇಶದ ದಾಳಿಯನ್ನು ಎದುರಿಸಬಲ್ಲಷ್ಟು ಸಮರ್ಥವಾಗಿದೆ. ಮಾತ್ರವಲ್ಲ, ದೇಶದ ಜನರನ್ನು ಯಾವುದೇ ಸಂಕಷ್ಟದಿಂದಲೂ ಪಾರು ಮಾಡಬಲ್ಲ ಸಾಮರ್ಥ್ಯವನ್ನೂ ಹೊಂದಿದೆ ಎಂದು ರಾಜಶೇಖರ್ ರವರು ಹೆಮ್ಮೆಯಿಂದ ತಿಳಿಸಿದರು.
Kateel Ashok Pai College ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಮಾನಸ ಟ್ರಸ್ಟ್ ನ ನಿರ್ದೇಶಕರಾದ ಡಾ.ರಜನಿ.ಎ.ಪೈರವರು ಮಾತನಾಡುತ್ತಾ ಭಾರತೀಯ ಸೇನೆಯ ಕಾರ್ಯಗಳನ್ನು ಶ್ಲಾಘಿಸಿದರು. ಕಾರ್ಗಿಲ್ ವಿಜಯೋತ್ಸವದ ರಜತ ಸಂದರ್ಭದಲ್ಲಿ ಛಾಯಾಚಿತ್ರ ಪ್ರದರ್ಶನ ಹಾಗೂ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ದೇಶಭಕ್ತಿ ಸಮೂಹ ಗಾಯನ ಸ್ಪರ್ಧೆಯಲ್ಲಿ ಸ್ನಾತಕೋತ್ತರ ಮನಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯರಾದ ಕೀರ್ತನ ಮತ್ತು ತಂಡ ಪ್ರಥಮ ಬಹುಮಾನ ಹಾಗೂ ಪದವಿ ವಿದ್ಯಾರ್ಥಿನಿಯರಾದ ತನ್ಮಯಿ ಮತ್ತು ತಂಡ ದ್ವಿತೀಯ ಬಹುಮಾನವನ್ನು ಪಡೆದರು. ಹಾಗೆಯೇ ಆಶುಭಾಷಣ ಸ್ಪರ್ಧೆಯಲ್ಲಿ ಎನ್ ಸಿ ವಿ ಆರ್ ಟಿ (ನರ್ಸಿಂಗ್) ವಿದ್ಯಾರ್ಥಿನಿಯರಾದ ಚಂದನ.ಎಸ್ ಪ್ರಥಮ ಬಹುಮಾನ, ಮೇಘನಾ ದ್ವಿತೀಯ ಬಹುಮಾನ ಹಾಗೂ ನಫೀಸಾ ತೃತೀಯ ಬಹುಮಾನವನ್ನು ಪಡೆದರು. “ನಮ್ಮ ಸೈನಿಕ – ನಮ್ಮ ಹೆಮ್ಮೆ” ಎಂಬ ವಿಷಯದ ಕುರಿತ ವಿಚಾರ ಮಂಡನೆಯಲ್ಲಿ ಸ್ನಾತಕೋತ್ತರ ಮನಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯರಾದ ಪ್ರಜ್ಞಾ ಪ್ರಥಮ ಬಹುಮಾನ ಹಾಗೂ ಅಮೃತ ದ್ವಿತೀಯ ಬಹುಮಾನವನ್ನು ಗಳಿಸಿದರು.
ಕಾರ್ಯಕ್ರಮದ ಅಂಗವಾಗಿ ಶಿವಮೊಗ್ಗದ ಪ್ರಖ್ಯಾತ ವಕೀಲರಾದ ಶ್ರೀ ಬಸವರಾಜ್ ರವರು ಹೊಸ ಕ್ರಿಮಿನಲ್ ಕಾಯ್ದೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿ ಸಂವಾದ ನಡೆಸಿದರು. ಕ್ಷೇತ್ರ ಪ್ರಚಾರಾಧಿಕಾರಿಗಳಾದ ಶ್ರೀಮತಿ ಅಕ್ಷತಾ ಭಟ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು, ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಐಕ್ಯೂಎಸಿಯ ಸಂಯೋಜಕರಾದ ಡಾ.ಅರ್ಚನಾ ಭಟ್, ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿಗಳಾದ ಡಾ.ಸುಕೀರ್ತಿ ಹಾಗೂ ಶ್ರೀ ರಾಬರ್ಟ್ ರಾಯಪ್ಪ, ಕಾಲೇಜಿನ ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅಶ್ವಿನಿ ನಿರೂಪಿಸಿ, ಸಮಂತಾ ಸ್ವಾಗತಿಸಿ, ಕ್ಷೇತ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಶ್ರೀ ಲಕ್ಷ್ಮಿಕಾಂತ್.ಸಿ.ವಿರವರು ಎಲ್ಲರನ್ನೂ ವಂದಿಸಿದರು.

Thirtahalli Police ಮದ್ಯಸೇವಿಸಿ ವಾಹನ ಚಾಲನೆ. ಚಾಲಕನಿಗೆ ₹10.000 ದಂಡ ವಿಧಿಸಿದ ಸಂಚಾರಿ ಪೊಲೀಸ್
Thirtahalli Police ಮದ್ಯಪಾನ ಮಾಡಿ ಆಲ್ಟೊ ಕಾರು ಚಲಾಯಿಸಿದ ವ್ಯಕ್ತಿಗೆ ನ್ಯಾಯಾಲಯ ೧೦ ಸಾವಿರ ರೂ ದಂಡ ವಿಧಿಸಿದೆ.
ಆಗುಂಬೆ ಫಾರೆಸ್ಟ್ ಚೆಕ್ ಪೋಸ್ಟ್‌ನಲ್ಲಿ ಪೊಲೀಸರು ತಪಾಸಣೆ ಮಾಡುವ ವೇಳೆ ಬೇಗಾರಿನ ಸಚಿನ್ ಎಂಬಾತ ಕುಡಿದು ಚಾಲನೆ ಮಾಡುತ್ತಿದ್ದುದು ಪತ್ತೆಯಾಗಿತ್ತು. ಈ ಬಗ್ಗೆ ಕೇಸು ದಾಖಲಿಸಿ ಪ್ರಕರಣವನ್ನು ನ್ಯಾಯಾಲಯಕ್ಕೆ ಕಳುಹಿಸಲಾಗಿತ್ತು. ತೀರ್ಥಹಳ್ಳಿಯ Thirtahalli Police ಪ್ರಥಮ ದರ್ಜೆ ವ್ಯವಹಾರಗಳ ನ್ಯಾಯಾಲಯದ ನ್ಯಾಯಾಧೀಶರು ೧೦ ಸಾವಿರ ರೂ. ದಂಡ ವಿಧಿಸಿ ತಿರ್ಪು ನೀಡಿದ್ದಾರೆ ಪಿಎಸ್‌ಐ ರಂಗನಾಥ್ ಅಂತರಗಟ್ಟಿ, ಎ ಎಸ್ ಐ .ನಾಗೇಶ್, ದಿವಾಕರ್, ಅನಿಲ್ ರವರು ವಾಹನ ತಪಾಸಣೆ ಮಾಡಿದ್ದರು.
Shivamogga Police ಅರಣ್ಯ ಜಾಗದಲ್ಲಿ ಮಂಜೂರಾದ ಹಕ್ಕುಪತ್ರ ವಜಾ ವಿರೋಧಿಸಿ ಕೆಲವು ಸಂಘಟನೆಗಳ ಪ್ರತಿಭಟನೆ ಜಿಲ್ಲಾಧಿಕಾರಿಗಳ ಮೌಖಿಕ ಭೇಟಿ
Shivamogga Police ಹೊಳೆಹೊನ್ನೂರು ಚಂದನಕೆರೆ ಸರ್ವೆ ನಂ. 12 ಎಂ.ಪಿ.ಎಂ. ನೆಡುತೋಪು ಮತ್ತು ಯಡೇಹಳ್ಳಿ ಸರ್ವೆ ನಂ. 66 ರಲ್ಲಿನ ಅರಣ್ಯ ಪ್ರದೇಶದಲ್ಲಿ ಮಂಜೂರಾದ ಹಕ್ಕುಪತ್ರಗಳನ್ನು ವಜಾ ಮಾಡಿರುವ ವಿರುದ್ಧ ದಲಿತ ಸಂಘಟನೆಗಳು ಹಾಗೂ ಮಾನವ ಹಕ್ಕು ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ನಿರತ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ನಿರ್ದೇಶಕರು ಅರಣ್ಯ ಭದ್ರಾವತಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ತಂಡವು ಪ್ರತಿಭಟನೆ ಅಂತ್ಯಗೊಳಿಸುವಂತೆ ಮನವಿ ಮಾಡಿದರು.
ಚಂದನಕೆರೆ ಸ.ನಂ.12ರಲ್ಲಿ 1980 ರಿಂದ ಎಂ.ಪಿ.ಎಂ. ರವರ ಸ್ವಾಧೀನದಲ್ಲಿದ್ದು, ನೀಲಗಿರಿ ನೆಡುತೋಪು ಇರುತ್ತದೆ. 2012-13 ರಲ್ಲಿ ಭದ್ರಾವತಿ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಸ್ವಾಧೀನ ಕೋರಿದ ಪ್ರಕರಣಗಳು ವಜಾ ಆಗಿದ್ದು, ನ್ಯಾಯಾಲಯದಲ್ಲಿ ಪ್ರಕರಣಗಳು ಬಾಕಿ ಇರುವುದರಿಂದ ಪ್ರತಿಭಟನಾಕಾರರ ಮನವಿಯನ್ನು ವಿಲೇ ಮಾಡಲು ಕಷ್ಟಸಾಧ್ಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆರವರು ಪ್ರತಿಭಟನಾಕಾರರಿಗೆ ತಿಳುವಳಿಕೆ ನೀಡಿದರು.
ಪ್ರತಿಭಟನೆ ಮಾಡುತ್ತಿರುವ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳು ಓಡಾಡುವ ಸ್ಥಳವಾಗಿದ್ದು, ಮಳೆಗಾಲ ಆಗಿದ್ದರಿಂದ ಗುಡುಗು ಮಿಂಚಿಗೆ ಪ್ರಾಣ ಹಾನಿಯಾಗುವ ಸಂಭವವಿರುತ್ತದೆ. ಇದು ಪ್ರತಿಭಟನೆ ಮಾಡಲು ಸೂಕ್ತ ಸ್ಥಳವಲ್ಲದ್ದರಿಂದ ಈ ಪ್ರದೇಶದಲ್ಲಿ ಶಾಂತಿ ಸುವ್ಯವಸ್ಥೆ ದಕ್ಕೆ ಆಗುವ ಸಂಭವವಿರುತ್ತದೆ. ಮತ್ತು ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿಯುವುದು ಅಪರಾಧವಾಗಿರುತ್ತದೆ ಆದ್ದರಿಂದ ಪ್ರತಿಭಟನೆಯನ್ನು ಬೇರೆಡೆಗೆ ಸ್ಥಳಾಂತರಿಸಿ ಪ್ರತಿಭಟನೆಯನ್ನು ಕೈ ಬಿಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ತಿಳಿಸಿದರು.
Shivamogga Police ಚಂದನಕೆರೆ ಸ. ನಂ. 12 ಎಂ.ಪಿ.ಎಂ. ನೆಡುತೋಪು ಪ್ರದೇಶವಾಗಿದ್ದು, ತೀವ್ರತರವಾದ ಅರಣ್ಯ ಪ್ರದೇಶವನ್ನು ಹೊಂದಿದೆ. ಅರಣ್ಯ ನಾಶವು ಉಪಗ್ರಹ ಆಧಾರಿತವಾಗಿ ಗುರುತಿಸಿ ದಾಖಲಾಗಿರುತ್ತದೆ. ಯಡೇಹಳ್ಳಿ ಸ.ನಂ.66 ಕಿರು ಅರಣ್ಯ ಪ್ರದೇಶವಾಗಿದ್ದು, ಅರಣ್ಯ ಪ್ರದೇಶದಲ್ಲಿ ಮಂಜೂರಾದ ಹಕ್ಕು ಪತ್ರಗಳನ್ನು ಪ್ರಾದೇಶಿಕ ನ್ಯಾಯಾಲಯವು ವಜಾ ಮಾಡಿರುತ್ತದೆ. ಅರಣ್ಯ ಪ್ರದೇಶದಲ್ಲಿ ಮಂಜೂರಾತಿ ಮತ್ತು ಸಾಗುವಳಿ ನೀಡುವುದು ಅರಣ್ಯ ಸಂರಕ್ಷಣಾ ಕಾಯ್ದೆ-1980ರ ಅನ್ವಯ ನಿಷಿದ್ಧವಾಗಿರುತ್ತದೆ. ಹಾಗೂ ಉಚ್ಛ ನ್ಯಾಯಾಲಯ ಮತ್ತು ಸರ್ವೋಚ್ಛ ನ್ಯಾಯಾಲಯಗಳು ಅರಣ್ಯ ಪ್ರದೇಶಗಳಲ್ಲಿ ಮಂಜೂರಾತಿ ವಿರುದ್ಧ ನೀಡಿದ ತೀರ್ಪುಗಳನ್ನು ಉಲ್ಲೇಖಿಸಿ ಸಾಗುವಳಿ ಮಾಡುವುದು ತಪ್ಪಾದ ಕ್ರಮವಾಗಿದೆ ಎಂದು ಭದ್ರಾವತಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರತಿಭಟನಾ ನಿರತರಿಗೆ ವಿವರಿಸಿದರು.
ಚಂದನಕೆರೆ ಮತ್ತು ಯಡೇಹಳ್ಳಿ ಪ್ರದೇಶವು ಎಂ.ಪಿ.ಎಂ. ನೆಡುತೋಪು ಮತ್ತು ಅರಣ್ಯ ಪ್ರದೇಶವಾಗಿದ್ದು, ಈ ಪ್ರದೇಶಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ತೀರ್ಪುಗಳು ಇರುವುದರಿಂದ ಮಂಜೂರಾತಿಗಳನ್ನು ಕಾನೂನುಗಳ ವ್ಯಾಪ್ತಿಯಲ್ಲಿ ಪರಿಶೀಲಿಸಲಾಗುವುದು. ಆದ್ದರಿಂದ ಪ್ರತಿಭಟನೆಯನ್ನು ಕೈಬಿಡುವಂತೆ ಜಿಲ್ಲಾಡಿಳಿತದವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಭದ್ರಾವತಿ ತಹಶೀಲ್ದಾರರು ಮತ್ತು ತಾಲೂಕಿನ ಕಂದಾಯ, ಅರಣ್ಯ, ಎಂ.ಪಿ.ಎಂ. ಮತ್ತು ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.
Klive News Special ವ್ಯಸನ ಮುಕ್ತ ದಿನಾಚರಣೆ ದುಶ್ಚಟಗಳಿಂದ ದೂರವಿರಿ
Klive News Special ವ್ಯಸನ ಮುಕ್ತ ದಿನಾಚರಣೆ
ಜೋಳಿಗೆ ಮೂಲಕ ‘ದುಶ್ಚಟಗಳ ಭಿಕ್ಷೆ ಪಡೆದ ಡಾ.ಮಹಾಂತ ಶಿವಯೋಗಿಗಳು
ಬಾಗಲಕೋಟೆಯ ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನವನ್ನು ರಾಜ್ಯದಲ್ಲಿ ವ್ಯಸನ ಮುಕ್ತ ದಿನಾಚರಣೆಯಾಗಿ ಆಚರಣೆ ಮಾಡಲಾಗುತ್ತದೆ. ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಸ್ಸು ಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಡಾ. ಮಹಾಂತ ಶಿವಯೋಗಿಗಳು.
ಬಾಗಲಕೋಟೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ 1930 ರ ಆಗಸ್ಟ್ 1 ರಂದು ಜನಿಸಿದ ಅವರು ತಮ್ಮ 10ನೇ ವಯಸ್ಸಿಗೆ ಸವದಿಯ ವಿರಕ್ತಮಠದ ಕಿರಿಯ ಸ್ವಾಮೀಜಿಗಳಾದರು.
Klive News Special ಡಾ. ಮಹಾಂತ ಶಿವಯೋಗಿ ಸ್ವಾಮೀಜಿಯವರು ‘ವ್ಯಸನ ಮುಕ್ತ ಸಮಾಜ’ ನಿರ್ಮಾಣಕ್ಕೆ 1975 ರಿಂದ ಸಾಮಾಜಿಕ ಕ್ರಾಂತಿಗೆ ಮುನ್ನಡಿ ಬರೆದರು. ಮಹಾಂತ ಜೋಳಿಗೆ ಕಾರ್ಯಕ್ರಮ ಅತ್ಯಂತ ವಿಶಿಷ್ಟವಾದುದು. ಕುಡಿತದ ಚಟದಿಂದ ಪರಿಶಿಷ್ಟ ಜಾತಿಯ ಯುವಕನೊಬ್ಬ ನಿಧನ ಹೊಂದಿದ ಸುದ್ದಿ ಕೇಳಿ ಅವನ ಕೇರಿಗೆ ಸಾಂತ್ವನ ಹೇಳಲು ತೆರಳಿದ್ದ ಸ್ವಾಮಿಗಳಿಗೆ ಆತನ ಪತ್ನಿ ಮತ್ತು ಮಕ್ಕಳು ಉಪವಾಸದಿಂದ ದು:ಖಿಸುವುದನ್ನು ಕಂಡರು. ಇಂತಹ ಸಾವಿರಾರು ಕುಟುಂಬಗಳ ಕುಡಿತ ಮತ್ತು ಇತರೇ ದುಶ್ಚಟಗಳಿಂದ ಹಾಳಾಗಿರುವುದನ್ನು ಅರಿತು ಇಂತಹ ದುಶ್ಚಟಗಳಿಗೆ ಒಳಗಾಗಿರುವವನ್ನು ಮುಕ್ತಿಗೊಳಿಸುವ ಉದ್ದೇಶದಿಂದ ಮಹಾಂತ ಜೋಳಿಗೆ ಯೋಜನೆ ಆರಂಭಿಸಿದರು.
ಮದ್ಯಪಾನ ಸ್ಮಶಾನಕ್ಕೆ ಆಹ್ವಾನ:
ವಿಶ್ವಾದ್ಯಂತ ಮದ್ಯ ಸೇವನೆಯಿಂದ 2.6 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ. ಅದರಲ್ಲಿ 2 ಮಿಲಿಯನ್ ಪುರುಷರು ಮತ್ತು 0.6 ಮಿಲಿಯನ್ ಮಹಿಳೆಯರು. ಅತಿ ಹೆಚ್ಚು ಆಲ್ಕೊಹಾಲ್ ಸೇವನೆಯಿಂದ ಸಾವು ಸಂಭವಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಯುರೋಪಿಯನ್ ಮತ್ತು ಆಫ್ರಿಕನ್ ದೇಶಗಳಲ್ಲಿ 52.2 ಸಾವುಗಳು 2019 ವರದಿ ಪ್ರಕಾರ ಕಂಡು ಬಂದಿದೆ ಎಂದು ತಿಳಿಸಿದೆ. ಕಿರಿಯ ವಯಸ್ಸಿನ (20-39 ವರ್ಷಗಳು) ಜನರು ಆಲ್ಕೋಹಾಲ್ ಸೇವನೆಯಿಂದ ಗುಲಾಮರಾಗಿದ್ದು ಈ ವಯೋಮಾನದಲ್ಲಿ ಆಲ್ಕೋಹಾಲ್‌ನಿಂದ (13%) ಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಾವು ಕಂಡು ಬಂದಿದೆ.
ವ್ಯಸನ ಮರಣ ಶಾಸನ:
ಇಂದು ವಿಶ್ವಾದ್ಯಂತ ಮಾದಕವಸ್ತು ಸೇವನೆಯಿಂದ 2019ರ ವರದಿ ಪ್ರಕಾರ ಸುಮಾರು 6 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಾಪ್ಪಿದ್ದಾರೆ. ಈ ಸಾವುಗಳಲ್ಲಿ ಸುಮಾರು 80% ನಷ್ಟು ಅಫೀಮು ಸಂಬAಧಿಸಿದೆ. ಅದರಲ್ಲಿ ಸುಮಾರು 25% ನಷ್ಟು ಅಫೀಮು ಮಿತಿ ಮೀರಿದ ಸೇವನೆಯಿಂದ ಉಂಟಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿನ ಪ್ರಕಾರ, 2019 ರಲ್ಲಿ ಅಫೀಮು ಮಿತಿ ಮೀರಿದ ಸೇವನೆಯಿಂದ ಸುಮಾರು 1.5 ಲಕ್ಷ ಜನರು ಸಾವನ್ನಪ್ಪಿದ್ದಾರೆ.
ಬದುಕನ್ನು ಸುಡುವ ತಂಬಾಕು:
ತAಬಾಕು ಜಗತ್ತು ಎದುರಿಸುತ್ತಿರುವ ಅತಿದೊಡ್ಡ ಸಾರ್ವಜನಿಕ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ, ಪ್ರಪಂಚದಾದ್ಯAತ ವರ್ಷಕ್ಕೆ 8 ಮಿಲಿಯನ್ ಜನರು ಸಾವನ್ನುಪ್ಪುತ್ತಿದ್ದಾರೆ. ಇದರಲ್ಲಿ ನೇರ ತಂಬಾಕು ಸೇವನೆಯ 7 ಮಿಲಿಯನ್‌ಗಿಂತಲೂ ಹೆಚ್ಚು ಜನರು ಸಾಯುತ್ತಿದ್ದಾರೆ. ಸುಮಾರು 1.3 ಮಿಲಿಯನ್ ವ್ಯಕ್ತಿಗಳು ನೇರವಾಗಿ ತಂಬಾಕು ಸೇವನೆಯಿಂದ ಸಾಯುತ್ತಿದ್ದಾರೆೆ.
ತಂಬಾಕು ಸೇವನೆಯಲ್ಲಿ ಭಾರತವು ಜಾಗತಿಕವಾಗಿ 2 ನೇ ಸ್ಥಾನದಲ್ಲಿದ್ದು ತಂಬಾಕು ಸೇವನೆಯಿಂದ ಭಾರತದಲ್ಲಿ ಪ್ರತಿ ವರ್ಷ 1 ಮಿಲಿಯನ್‌ಗಿಂತಲೂ ಹೆಚ್ಚು ವಯಸ್ಕರು ಸಾಯುತ್ತಾರೆ. ಒಟ್ಟಾರೆ 9.5% ರಷ್ಟು ಸಾವುಗಳು ಭಾರತವು ಧೂಮಪಾನ ಮತ್ತು ನೇರ ತಂಬಾಕು ಬಳಕೆಯಿಂದ ಸಾಯುತ್ತಿದ್ದಾರೆ ಎಂದು ವರದಿಯಾಗಿದ್ದು 253 ಮಿಲಿಯನ್ ಜನರು ಭಾರತದಲ್ಲಿ ತಂಬಾಕು ಬಳಕೆ ಮಾಡುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಎಸ್‌ಇಎಆರ್) ತಿಳಿಸಿದೆ.
ವಿಶ್ವದಲ್ಲಿ ದೂಪಪಾನ, ಮದ್ಯಪಾನ ಮಾತ್ರವಲ್ಲದೇ ಅನೇಕ ರೀತಿಯ ವ್ಯಸನಗಳಿಂದ ಇಂದಿನ ಯುವ ಜನತೆ ದಾರಿ ತಪ್ಪುತ್ತಿದ್ದು ತಮ್ಮ ಜೀವನವನ್ನು ನಶೆಯಲ್ಲಿ ನಾಶ ಮಾಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ 70 ರ ದಶದಲ್ಲಿಯೇ ಮಹಾಂತ ಸ್ವಾಮಿಜಿ ಅವರು ಮಾಡಿದ ಸಾಮಾಜಿಕ ಕ್ರಾಂತಿ ಅತ್ಯಂತ ವಿಶೇಷವಾದದ್ದು.
ಮಹಾಂತ ಜೋಳಿಗೆ ದುಶ್ಚಟಗಳ ಭಿಕ್ಷೆ:
ಡಾ.ಮಹಾಂತ ಶಿವಯೋಗಿ ಸ್ವಾಮಿಜಿ ಜಾತಿ, ಮತ, ಪಂಗಡ, ಧರ್ಮ, ಭಾಷೆ ಗಳನ್ನು ಮೀರಿ 42 ವರ್ಷಗಳ ಕಾಲ ದೇಶದಲ್ಲಿ ಮಾತ್ರವಲ್ಲದೇ ಇಂಗ್ಲೆಡ್ ಸೇರಿದಂತೆ ವಿದೇಶದಲ್ಲೂ ಮಹಾಂತರು ತಮ್ಮ ಜೋಳಿಗೆ ಹಿಡಿದು ಜನರಲ್ಲಿನ ದುಶ್ಚಟಗಳ ಭಿಕ್ಷೆ ಬೇಡಿದರು.
ವ್ಯಸನವು ದೇಹಕ್ಕೆ ಮತ್ತು ದೇಶಕ್ಕೆ ಮಾರಕವಾಗಿದೆ ಎಂದು ಮಹಾಂತ ಶಿವಯೋಗಿಗಳು ವ್ಯಸನ ಮುಕ್ತ ವ್ಯಕ್ತಿ ನಿರ್ಮಾಣ, ಕುಟುಂಬ, ಸಮಾಜ, ಗ್ರಾಮಗಳ ಕಲ್ಯಾಣದ ಪರಿಕಲ್ಪನೆ ಇಟ್ಟುಕೊಂಡು ಜೋಳಿಗೆ ಕಾರ್ಯಕ್ರಮದ ಮೂಲಕ ನಾಡಿನ ಪ್ರಖ್ಯಾತ ವೈದ್ಯರು, ಸಮಾಜ ವಿಜ್ಞಾನಿಗಳು,ಸಾಹಿತಿಗಳು, ಸಮಾಜ ಕಳಕಳಿಯ ಕವಿಗಳು, ಧರ್ಮ ಗುರುಗಳನ್ನು ಆಹ್ವಾನಿಸಿ ಅವರಿಂದ ಜಾಗೃತಿ ಮೂಡಿಸುವ ಮೂಲಕ ವ್ಯಸನಗಳಿಂದ ಮನಪರಿವರ್ತನೆ ಜೊತೆಗೆ ಮಕ್ಕಳು, ವಿದ್ಯಾರ್ಥಿಗಳು, ಯುವ ಜನಾಂಗ ಇಂತಹ ಚಟಗಳಿಗೆ ಬಲಿಯಾದಂತೆ ಅರಿವು ಮೂಡಿಸುತ್ತಿದ್ದರು. ಇದರಿಂದ ಲಕ್ಷಾಂತರ ಜನರು ವ್ಯಸನಗಳಿಂದ ಮುಕ್ತರಾಗಿ ಅವರ ಕುಟುಂಬಗಳು ನೆಮ್ಮದಿಯ ಜೀವನ ಸಾಗಿಸುವಂತೆ ಮಾಡಿದ್ದರು.
ಡಾ.ಮಹಾಂತ ಶಿವಯೋಗಿ ಅವರ ಜನ್ಮದಿನ ಆಗಸ್ಟ್ 1 ರಂದು ಕರ್ನಾಟಕ ಸರ್ಕಾರದಿಂದ ರಾಜ್ಯಾದ್ಯಂತ ವ್ಯಸನ ಮುಕ್ತ ದಿನವನ್ನಾಗಿ ಆಚರಿಸಲಾಗುತ್ತಿದ್ದು ಕರ್ನಾಟಕ ರಾಜ್ಯವನ್ನು ವ್ಯಸನ ಮುಕ್ತ ರಾಜ್ಯವಾಗಿ ಮಾಡಲು ಸಾರ್ವಜನಿಕರು ಹಾಗೂ ಯುವಜನತೆ ವ್ಯಸನಗಳಿಂದ ಮುಕ್ತವಾಗಲು ಈ ದಿನಾಚರಣೆಯು ಪ್ರೇರಣೆಯಾಗಲಿದೆ.
ರಘು ಆರ್
ಅಪ್ರೆಂಟಿಸ್ ವಾರ್ತಾ ಇಲಾಖೆ.
ಶಿವಮೊಗ್ಗ.
Tunga River ತುಂಗಾ ಡ್ಯಾಂ ಒಳಹರಿವು ಹೆಚ್ಚಳ.ಶಾಸಕ ಚೆನ್ನಿ ಅವರಿಂದ ಸುರಕ್ಷತಾ ಕ್ರಮಗಳ ಪರಿಶೀಲನೆ
Tunga River ತೀರ್ಥಹಳ್ಳಿ ಹಾಗೂ ಶೃಂಗೇರಿಯ ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಾ ಜಲಾಶಯದ (ಗಾಜನೂರು ಡ್ಯಾಮ್) ಒಳ ಹರಿವು ಹೆಚ್ಚಾಗಿದ್ದು, ಭಾರಿ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಸುರಕ್ಷತಾ ದೃಷ್ಟಿಯಿಂದ ಹಾಗೂ ನದಿ ತೀರದ ನಿವಾಸಿಗಳಿಗೆ ಪ್ರವಾಹದ ಭೀತಿ ಉಂಟಾದ ಕಾರಣಕ್ಕೆ ಶಿವಮೊಗ್ಗ ನಗರದ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ನಿನ್ನೆ ತಡರಾತ್ರಿ ತುಂಗಾ ಜಲಾಶಯ ಹಾಗೂ ಪಂಪ್ ಹೌಸ್ ಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ವಾಸ್ತವಿಕ ಪರಿಸ್ಥಿತಿಯನ್ನು ಪರಿಶೀಲಿಸಿದರು.
