Sunday, March 22, 2026
Sunday, March 22, 2026
Home Blog Page 471

Thirthahalli News ಕರ್ತವ್ಯ ನಿರ್ವಹಣೆಯಲ್ಲಿದ್ದಾಗಲೇ ಕಾಲನ ಕರೆಗೆ ಓಗೊಟ್ಟ ಪರಶುರಾಮ್

0

Thirthahalli News ತೀರ್ಥಹಳ್ಳಿ ಪೊಲೀಸ್ ಪೇದೆ ಹೃದಯಾಘಾತದಿಂದ ನಿಧನ! ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಹೈವೇ ಪೆಟ್ರೋಲ್ (112) ವಾಹನದ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆ ಹೃದಯಘಾತದಿಂದ ನಿಧನ ಪರಶುರಾಮ್ (43) ವರ್ಷ ಶಿವಮೊಗ್ಗಕ್ಕೆ ಕಾರ್ಯ ನಿಮ್ಮಿತ್ತ ಹೋಗಿದ್ದ ಸಂದರ್ಭದಲ್ಲಿ ಹೃದಯಘಾತ 2005 ರ ಬ್ಯಾಚ್ ನಲ್ಲಿ ಪೊಲೀಸ್ ಕೆಲಸಕ್ಕೆ ಸೇರಿದ್ದ Thirthahalli News ಪರುಶುರಾಮ್. ತೀರ್ಥಹಳ್ಳಿಯಲ್ಲಿ ಹೈವೇ ಪೆಟ್ರೋಲ್ ವಾಹನದ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಇವರ ನಿಧನಕ್ಕೆ ಡಿವೈಎಸ್’ಪಿ ಗಜಾನನ ವಾಮನ ಸುತಾರ ಸೇರಿ ಪೊಲೀಸ್ ಸಿಬ್ಬಂದಿಗಳು ಸಂತಾಪ

Gajanana sharma ಚನ್ನಭೈರಾದೇವಿ” ಕಾದಂಬರಿಕಾರ ಡಾ.ಗಜಾನನ ಶರ್ಮ ಡಿಸೆಂಬರ್ 16 ರಂದುಡಯಾನ ಬುಕ್ ಗ್ಯಾಲರಿಯಲ್ಲಿ ಉಪಸ್ಥಿತಿ

0

SN Channabasappa ನಾಡಿನ ಖ್ಯಾತ ಕಾದಂಬರಿಕಾರ, ನಾಟಕಕಾರ, “ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ” ಖ್ಯಾತಿಯ ಗೀತ ರಚನೆಕಾರ ಡಾ. ಗಜಾನನ ಶರ್ಮ ರವರು ಡಿ. 16ರ ಸೋಮವಾರ ದಂದು ಬೆಳಿಗ್ಗೆ 10.30ಕ್ಕೆ ಡಯಾನಾ ಬುಕ್ ಗ್ಯಾಲರಿಗೆ ಭೇಟಿ ನೀಡಲಿದ್ದಾರೆ..

ಅವರೊಂದಿಗೆ ತಾವು ಇದ್ದರೆ ಇನ್ನಷ್ಟು ಮೆರಗು…
ದಯಮಾಡಿ ಬನ್ನಿ, ಜೊತೆಗಿರಿ..

Gajanana sharma ಡಾ. ಗಜಾನನ ಶರ್ಮಾ ರವರ ಎಲ್ಲಾ ಕೃತಿಗಳು ರಿಯಾಯಿತಿ ದರದಲ್ಲಿ ಲಭ್ಯವಿದ್ದು, ಅಂದು ವಿಶೇಷವಾಗಿ ಅವರ ಹಸ್ತಾಕ್ಷರದೊಂದಿಗೆ ಪಡೆದುಕೊಳ್ಳಬಹುದು ಎಂದು ಡಯಾನ ಬುಕ್ ಗ್ಯಾಲರಿ ಮಾಲೀಕರಾದ
ಕೆ. ಎಲ್. ಈಶ್ವರ ಪುಸ್ತಕ ಪ್ರಿಯರನ್ನ ಕೋರಿಕೊಂಡಿದ್ದಾರೆ.

Priyank Kharge ಗ್ರಾಮ ಪಂಚಾಯತ್ ಅಧ್ಯಕ್ಷರು/ಉಪಾಧ್ಯಕ್ಷರು/ಸದಸ್ಯರ ಗೌರವಧನ ಹೆಚ್ಚಳ ಸೀಎಂ ಗಮನಕ್ಕೆ- ಪ್ರಿಯಾಂಕ ಖರ್ಗೆ

0

Priyank Kharge ರಾಜ್ಯದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಮಾಸಿಕ ಗೌರವ ಧನವನ್ನು ಹೆಚ್ಚಳ ಮಾಡುವ ಬೇಡಿಕೆಯನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗುವುದು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟಗಳು ಸಲ್ಲಿಸಿರುವ ಬೇಡಿಕೆಗಳ ಕುರಿತು ಪರಿಶೀಲಿಸಲಾಗಿದ್ದು, ವರದಿಯನ್ನು ಸಲ್ಲಿಸಲು 3 ತಿಂಗಳ ಕಾಲಾವಕಾಶ ನೀಡಲಾಗಿದೆ. ಸಮಿತಿ ವರದಿ ಸಲ್ಲಿಸಿದ ನಂತರ ಬೇಡಿಕೆಗಳ ಕುರಿತು ಪರಿಶೀಲಿಸಲಾಗುವುದು. ಎಂದು
Priyank Kharge ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಹಾಗೂ ಡಿ.ಎಸ್ ಅರುಣ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ ಖರ್ಗೆ ಉತ್ತರಿಸಿದ್ದಾರೆ

Byrathi Suresh ಗಾಜನೂರು ನೀರು ಶುದ್ಧೀಕರಣ ಘಟಕ ನಿರ್ಮಾಣಕ್ಕೆಅರಣ್ಯ ಇಲಾಖೆ ನಿರಾಕ್ಷೇಪಣೆ ಪತ್ರಕ್ಕೆ ಪ್ರಯತ್ನ-ಸಚಿವ ಭೈರತಿ ಸುರೇಶ್

0

Byrathi Suresh ಬೆಳಗಾವಿ ಸುವರ್ಣಸೌಧ,ಡಿ.13 ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಗಾಜನೂರು ಬಳಿ ಹೊಸದಾಗಿ ನೀರು ಶುದ್ಧೀಕರಣ ಘಟಕ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಸ್ಥಳ ಅರಣ್ಯ ಪ್ರದೇಶದಲ್ಲಿ ಇರುವುದರಿಂದ ಶೀಘ್ರವೇ ಅರಣ್ಯ ಇಲಾಖೆಯಿಂದ ಎನ್.ಓ.ಸಿ ಪಡೆದು ಕಾಮಗಾರಿ ಪ್ರಾರಂಭಿಸಲು ಪ್ರಯತ್ನಿಸಲಾಗುತ್ತಿದೆ. ಒಂದು ವೇಳೆ ಎನ್.ಓ.ಸಿ ಲಭಿಸದಿದ್ದರೆ, ಸೂಕ್ತವಾದ ಬದಲಿ ಜಾಗವನ್ನು ಸಹ ಗುರುತಿಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಹೇಳಿದರು.

ಬೆಳಗಾವಿ ಸುವರ್ಣಸೌಧಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಶುಕ್ರವಾರ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಚನ್ನಬಸಪ್ಪ ಅವರ ಚುಕ್ಕೆ ಗುರುತಿನ ಪ್ರಶ್ನಗೆ ಅವರು ಉತ್ತರಿಸಿದರು.

ಶಿವಮೊಗ್ಗ ನಗರಕ್ಕೆ ನೀರು ಸರಬರಾಜು ಮಾಡುತ್ತಿರುವ ಕೃಷ್ಣ ರಾಜೇಂದ್ರ ನೀರು ಸರಬರಾಜು ಕೇಂದ್ರದಲ್ಲಿ 1976ರಲ್ಲಿ 13.62 ಎಂ.ಎಲ್.ಡಿ, 1996ರಲ್ಲಿ 13.38 ಎಂ.ಎಲ್.ಡಿ ಹಾಗೂ 2009 ರಲ್ಲಿ 57 ಎಂ.ಎಲ್.ಡಿ ಸೇರಿ ಒಟ್ಟು 84 ಎಂ.ಎಲ್.ಡಿ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ 1976 ಮತ್ತು 1996ರಲ್ಲಿ ನಿರ್ಮಿಸಿರುವ ಶುದ್ಧೀಕರಣ ಘಟಕಗಳು ಶಿಥಿಲಾವಸ್ಥೆಯಲ್ಲಿವೆ. ಇವುಗಳ ಬದಲು ಹೊಸದಾಗಿ ಶುದ್ಧೀಕರಣ ಘಟಕ ನಿರ್ಮಿಸಲು ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸ್ಥಳಾವಕಾಶ ಇಲ್ಲದ ಕಾರಣ, ಗಾಜನೂರು ಅರಣ್ಯ ಪ್ರದೇಶದಲ್ಲಿ ಸ್ಥಳ ಗುರುತಿಸಲಾಗಿದೆ. ಈ ಸ್ಥಳದಿಂದ ಗುರುತ್ವಾಕರ್ಷಣೆ ಮೂಲಕ ಶಿವಮೊಗ್ಗ ನೀರು ಸರಬರಾಜು ಮಾಡಬಹುದು. ಈ ಸಂಬAಧ ಸರ್ವೆ ಕಾರ್ಯ ಹಾಗೂ ವಿಸ್ತೃತ ಯೋಜನಾ ವರದಿಯನ್ನು ಸಿದ್ದಪಡಿಸಲಾಗಿದೆ ಎಂದು ಸಚಿವ ಬಿ.ಎಸ್.ಸುರೇಶ ತಿಳಿಸಿದರು.

Byrathi Suresh ಶಿವಮೊಗ್ಗ ನಗರದಲ್ಲಿ ಶೇ.74 ರಷ್ಟು ಒಳಚರಂಡಿ ವ್ಯವಸ್ಥೆ ಇದೆ. ರೂ.115 ಕೋಟಿ ವೆಚ್ಚದಲ್ಲಿ 3ನೇ ಹಂತದ ಸಮಗ್ರ ಒಳಚರಂಡಿ ಯೋಜನೆಯಡಿ, ಏರೇಟೆಡ್ ಲಗೂನ್ ತಂತ್ರಜ್ಞಾನ ಆಧರಿಸಿ 35.58 ಎಂ.ಎಲ್.ಡಿ ತ್ಯಾಜ್ಯ ನೀರು ಶುದ್ದೀಕರಣ ಘಟಕ, 03 ವೆಟ್‌ವೆಲ್, 262 ಕಿ.ಮೀ ಉದ್ದದ ಗ್ರಾಮಸಾರ ಕೊಳವೆ ಮಾರ್ಗವನ್ನು ನಿರ್ಮಿಸಲಾಗಿದೆ. ಅಮೃತ್ ಯೋಜನೆಯಡಿ ರೂ.58 ಕೋಟಿ ಹಾಗೂ ರೂ.7 ಕೋಟಿ ಹೆಚ್ಚುವರಿ ಅನುದಾನದಡಿ ಮಹಾನಗರ ವ್ಯಾಪ್ತಿಯ ವಿವಿಧ ಪ್ರದೇಶದಲ್ಲಿ ಗೃಹ ಸಂಪರ್ಕಿತ ಒಳಚರಂಡಿ ಕೊಳವೆ ಮಾರ್ಗ, ಹಳೆ ಕೊಳವೆ ಮಾರ್ಗಗಳ ಪುನರುಜ್ಜೀವನ, 4 ವೆಟ್‌ವಲ್, 6 ಪಂಪಿAಗ್ ಮೆಷನರಿ, ಡಿ.ಜಿ. ರೂಮ್, ಡಿ.ಜೆ.ಸೆಟ್ ಮತ್ತು ಟ್ರಾನ್ಸ್ ಫಾರ್ಮರ್ ಸಬ್ ಸ್ಟೇಷನ್, 11 ಕೆ.ವಿ. ಎಕ್ಸ್ ಪ್ರೆಸ್ ಫೀಡರ್ ವಿದ್ಯುತ್ ಲೈನ್, 5.13 ಎಂ.ಎಲ್.ಡಿ ಸಾಮರ್ಥ್ಯದ ತ್ಯಾಜ್ಯ ನೀರಿನ ಶುದ್ದೀಕರಣ ಘಟಕ ನಿರ್ಮಿಸಲಾಗಿದೆ. ಈ ಎಲ್ಲಾ ಕಾಮಗಾರಿಗಳು ಸುಸ್ಥಿತಿಯಲ್ಲಿದ್ದು, ಶಿವಮೊಗ್ಗ ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗಿದೆ. ನಗರದಲ್ಲಿ ಹಾದುಹೋಗಿರುವ ತುಂಗಾ ನದಿಗೆ ಕೊಳಚೆ ನೀರು ಸೇರೆದಂತೆ ತಡೆಯಲು ಒಳಚರಂಡಿ ವ್ಯವಸ್ಥೆಯಲ್ಲಿನ ಮಿಸಿಂಗ್ ಲಿಂಕ್ಸ್ ಸ್ಥಳಗಳಲ್ಲಿಯೂ ರಾಷ್ಟಿçÃಯ ಹಸಿರು ನ್ಯಾಯಮಂಡಳಿಯ ರೂ.40 ಕೋಟಿ ಅನುದಾನದಲ್ಲಿ ಒಳಚರಂಡಿ ವ್ಯವಸ್ಥೆಯನ್ನು ನಿರ್ಮಿಸಿ, ತ್ಯಾಜ್ಯ ನೀರು ಸಂಸ್ಕರಣ ಘಟಕ ನಿರ್ಮಿಸುವುದಾಗಿ ಸಚಿವ ಬಿ.ಎಸ್.ಸುರೇಶ್ ಹೇಳಿದರು.

ಮಹಾನಗರಗಳಿಗೆ ರೂ.2000 ಕೋಟಿ ಅನುದಾನ:
ಸರ್ಕಾರ ರಾಜ್ಯ ಹಣಕಾಸು ನಿಗಮದಿಂದ ಬೃಹತ್ ಬೆಂಗಳೂರು ಸೇರಿ ಇತರೆ 10 ಮಹಾನಗರ ಪಾಲಿಕೆಗಳಿಗೆ ಒಟ್ಟು ರೂ.2000 ಕೋಟಿ ಅನುದಾನ ನೀಡಿದೆ. ಇದರಲ್ಲಿ ಶಿವಮೊಗ್ಗ ನಗರಕ್ಕೆ ರೂ.140 ಕೋಟಿ ಅನುದಾನವನ್ನು ಒದಗಿಸಲಾಗಿದೆ ಎಂದು ಸಚಿವ ಬಿ.ಎಸ್.ಸುರೇಶ್ ಸದನದಲ್ಲಿ ಮಾಹಿತಿ ನೀಡಿದರು.
ಶಾಸಕ ಚನ್ನಬಸಪ್ಪ ನವರು ರಾಜ್ಯ ಹಣಕಾಸು ನಿಗಮದಿಂದ ನೀಡಿದ ಅನುದಾನದಲ್ಲಿ ಶೇ.20 ರಷ್ಟು ಮಾತ್ರ ಕುಡಿಯುವ ನೀರಿನ ಕಾಮಗಾರಿಗಳಿಗೆ ಬಳಸಿಕೊಳ್ಳಲು ಅವಕಾಶವಿದೆ. ಈ ಮಿತಿಯನ್ನು ಸಡಿಲಗೊಳಿಸಿ ಹೆಚ್ಚಿನ ಅನುದಾನವನ್ನು ಕುಡಿಯುವ ನೀರಿನ ಕಾಮಗಾರಿಗಳಿಗೆ ಬಳಸಿಕೊಳ್ಳಲು ಸರ್ಕಾರ ಅನುಮತಿ ನೀಡುವಂತೆ ಕೋರಿದರು.

Congress Guarantee Scheme ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿಲ್ಲ- ಸಿದ್ಧರಾಮಯ್ಯ

0

Congress Guarantee Scheme ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿಲ್ಲ. 2023-24ನೇ ಸಾಲಿನಲ್ಲಿ ಅಭಿವೃದ್ಧಿ ಕೆಲಸಗಳಿಗೆಂದೇ 1 ಲಕ್ಷದ 20 ಸಾವಿರ ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಧಾನಸಭೆಯ ಅಧಿವೇಶನದಲ್ಲಿ ಹೇಳಿದ್ದಾರೆ.

ಸರ್ಕಾರವು 5 ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪ್ರಸಕ್ತ ಸಾಲಿನಲ್ಲಿ 52,009 ಕೋಟಿ ರೂ.ಗಳನ್ನು ಒದಗಿಸಿದೆ.

ರಾಜ್ಯ ಸರ್ಕಾರವು 2023-24 ರಲ್ಲಿ 90,280 ಕೋಟಿ ರೂ.ಗಳನ್ನು ಸಾಲ ಪಡೆದಿದ್ದು, ರಾಜ್ಯದ ವಿತ್ತೀಯ ಕೊರತೆ 2.6% ಇದ್ದು, ರಾಜ್ಯ ಸರ್ಕಾರವು ಪಡೆದ ಒಟ್ಟು ಸಾಲ ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಮಾನದಂಡ ಮತ್ತು ಕೇಂದ್ರ ಸರ್ಕಾರ ನಿಗದಿಪಡಿಸಿರುವ ಸಾಲಮಿತಿಗೆ ಒಳಪಟ್ಟಿದೆ.

Congress Guarantee Scheme ರಾಜ್ಯ ಸರ್ಕಾರವು ರಾಜಸ್ವ ಹಾಗೂ ಬಂಡವಾಳ ಸ್ವೀಕೃತಿಗಳಿಂದ ಮತ್ತು ಕೇಂದ್ರ ಸರ್ಕಾರ ನಿಗದಿಪಡಿಸುವ ಮಿತಿಯೊಳಗೆ ಸಾಲವನ್ನು ಪಡೆಯುವ ಮೂಲಕ ಆಯವ್ಯಯದಲ್ಲಿ ಅಂದಾಜಿಸಿರುವ ವೆಚ್ಚವನ್ನು ಭರಿಸುತ್ತದೆ. ಈ ಸ್ವೀಕೃತಿಗಳನ್ನು ಮೀರಿ ಈವರೆಗೂ ಯಾವುದೇ ವೆಚ್ಚದ ಹೊರೆ ರಾಜ್ಯ ಸರ್ಕಾರಕ್ಕೆ ಉಂಟಾಗಿರುವುದಿಲ್ಲ.

ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಅಭಿವೃದ್ಧಿ ಕುಂಠಿತವಾಗಿದೆ ಎಂಬ ವಿರೋಧ ಪಕ್ಷಗಳ ಆರೋಪ ಸುಳ್ಳು ಹಾಗೂ ಸತ್ಯಕ್ಕೆ ದೂರವಾಗಿದ್ದು. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್‌ ಸದಸ್ಯ ಕೆ. ಎ. ತಿಪ್ಪೇಸ್ವಾಮಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಉತ್ತರಿಸಿದರು.

Darshan Bail ಡಿ’ ಬಾಸ್ ಜೊತೆ ಪವಿತ್ರಾಗೌಡ ಸೇರಿದಂತೆ ಏಳು ಮಂದಿಗೆ ಜಾಮೀನು ಮಂಜೂರು

Darshan Bail ಈಗಾಗಲೇ ರೇಣುಕಾಸ್ವಾಮಿ ಕೊಲೆ ಪ್ರಕರಣ ವಿಚಾರಣೆ ಹೈಕೋರ್ಟಿನಲ್ಲಿ ನಡೆಯುತ್ತಿದೆ. ನಡುವೆ ಬೆನ್ನು ನೋವಿನ ಬಗ್ಗೆ ಆಪರೇಷನ್ ಸಂಬಂಧಿತ ಮನವಿ ಮೇರೆಗೆ ಆರುವಾರಗಳ ಬೈಲ್ ಸಿಕ್ಕಿತ್ತು. ಆದರೆ ನಟ ದರ್ಶನ್ ಆಪರೇಷನ್ ಗೆ ಒಳಗಾಗಿರಲಿಲ್ಲ. ಪೊಲೀಸ್ ಇಲಾಖೆ ಬೈಲ್ ರದ್ದು ಪಡಿಸಲು ಮೇಲ್ಮನವಿ ಸಲ್ಲಿಸಿತ್ತು.

ಈಗ ವೈದ್ಯಕೀಯ ಶಿಫಾರಸಿನ ಮೇರೆ ಅವರಿಗೆ ‌ಮತ್ತೆ ಬೈಲ್
ಸಿಕ್ಕಿದೆ.

Darshan Bail ದರ್ಶನ್, ಪವಿತ್ರ ಗೌಡ, ಅನು ಕುಮಾರ್ ಅಲಿಯಾಸ್ ಅನು, ಲಕ್ಷ್ಮಣ್ ಎಂ, ಜಗದೀಶ್,ನಾಗರಾಜು ಆರ್, ಪ್ರದೂಷ್ ಎಸ್ ರಾವ್, ಮತ್ತು ಅಲಿಯಾಸ್ ಜಗ್ಗ, ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ವಿಚಾರಣೆ ನಡೆಸಿದೆ.ಹೈಕೋರ್ಟ್ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿಂದ ಆದೇಶ ಹೊರಬಿದ್ದಿದೆ.

ಗಮನಾರ್ಹವೆಂದರೆ ಇದು ಸಾಮಾನ್ಯ ಸ್ವರೂಪದ ಬೈಲ್ ಆಗಿದೆ. ಹಿಂದಿನ ಬೈಲ್ ನೀಡಿದ ಆದೇಶದಲ್ಲಿ ಆಪರೇಷನ್ ಗೋಸ್ಕರ ಆರುವಾರಗಳ ಷರತ್ತುಬದ್ಧ ಬೈಲ್ ನೀಡಲಾಗಿತ್ತು.

Bhadravathi News ಭದ್ರಾವತಿಯಲ್ಲಿ ದ್ವಿಚಕ್ರ ವಾಹನ ಕದ್ದ ಕಳ್ಳನ ಸೆರೆ

Bhadravathi News ಪಿ.ಎಸ್.ಐ ನ್ಯೂಟೌನ್ ಪೊಲೀಸ್ ಠಾಣೆ ಭದ್ರಾವತಿ ಇವರ ನೇತೃತ್ವದ ತನಿಖಾ ತಂಡವು, ದ್ವಿಚಕ್ರವಾಹನ ಕಳ್ಳತನ ಆರೋಪಿಯನ್ನು ದಸ್ತಗಿರಿ ಮಾಡಿ ಅಂದಾಜು ಮೌಲ್ಯ 1,10,000/- ರೂಗಳ 02 ದ್ವಿ ಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ ಎಂದು‌ ಜಿಲ್ಲಾ ಪೊಲೀಸ್
ಪ್ರಕಟಣೆ ತಿಳಿಸಿದೆ

MESCOM ಡಿಸೆಂಬರ್ 16. ಮಂಡ್ಲಿ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

0

MESCOM ಶಿವಮೊಗ್ಗ: ಡಿಸೆಂಬರ್. 16 ಶಿವಮೊಗ್ಗ ಮಂಡ್ಲಿ 110/11 ಕೆವಿ ವಿದ್ಯುತ್ ವಿತರಣ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ ಈ ಮಾರ್ಗಗಳಿಂದ ವಿದ್ಯುತ್ ಸರಬರಾಜಾಗುವ ಪಿಯರ್‌ಲೈಟ್, ಶಂಕರ್ ಕಣ್ಣಿನ ಆಸ್ಪತ್ರೆ, ಗಾಜನೂರು ರೂರಲ್, ಕಲ್ಲೂರು ಮಂಡ್ಲಿ, ಊರುಕಡೂರು, ರಾಮಿನಕೊಪ್ಪ, ಗೋಪಿಶೆಟ್ಟಿಕೊಪ್ಪ, ಇಲಿಯಾಸನಗರ, ಕೆ.ಹೆಚ್.ಬಿ.ಕಾಲೋನಿ, ಸಿದ್ದೇಶ್ವರ ಸರ್ಕಲ್ 100 ಅಡಿರಸ್ತೆ, ಮಂಡ್ಲಿ, ಎನ್.ಟಿ.ರಸ್ತೆ, ಮರ‍್ನಾಮಿ ಬೈಲು, ಬಿ.ಹೆಚ್.ರಸ್ತೆ, ಹಳೆಮಂಡ್ಲಿ, ಹರಕೆರೆ, ವಾದಿಹುದ, ಸೂಳೆಬೈಲು ಸುತ್ತಮುತ್ತ, ಕಲ್ಲೂರ ಮಂಡ್ಲಿ ಕೈಗಾರಿಕಾ ಪ್ರದೇಶ, ಕೃಷ್ಣರಾಜ ನೀರು ಶುದ್ಧೀಕರಣ ಘಟಕ, ಕುರುಬರಪಾಳ್ಯ, MESCOM ಸವಾಯಿಪಾಳ್ಯ, ಮುರಾದ್‌ನಗರ, ಓ.ಟಿ.ರಸ್ತೆ, ಬಿ.ಬಿ.ರಸ್ತೆ, ಕುಂಬಾರಕೇರಿ, ವಂದನ ಟಾಕೀಸ್ ಸುತ್ತಮುತ್ತ, ಆರ್.ಎಂ.ಎಲ್.ನಗರ 1 ಮತ್ತು 2ನೇ ಹಂತ, ಎಲ್.ಎಲ್.ಆರ್.ರಸ್ತೆ, ಜೆಸಿನಗರ, ಎಲ್.ಎಲ್.ಬಿ.ರಸ್ತೆ, ದುರ್ಗಿಗುಡಿ, ನೆಹರು ರಸ್ತೆ ಎಡಭಾಗ, ಗಾರ್ಡನ್ ಏರಿಯಾ, ಖಾಸಗಿ ಮತ್ತು ಸರ್ಕಾರಿ ಬಸ್ ನಿಲ್ದಾಣ, ಆನಂದ್‌ರಾವ್ ಬಡಾವಣೆ, ಮಂಜುನಾಥ ಬಡಾವಣೆ, ಟಿಪ್ಪುನಗರ, ಮಿಳಘಟ್ಟ, ಅಣ್ಣಾನಗರ, ತಿಮ್ಮಪ್ಪನಕೊಪ್ಪಲು, ಕೆ.ಆರ್.ಪುರಂ, ಸಿದ್ದಯ್ಯರಸ್ತೆ, ಗಾಂಧಿಬಜಾರ್, ಕುಂಬಾರಗುAಡಿ, ಉಪ್ಪಾರಕೇರಿ, ಓ.ಟಿ.ರಸ್ತೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಡಿ.16 ರಂದು ಬೆಳಗ್ಗೆ 9.30 ರಿಂದ ಸಂಜೆ 6.00ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

S.S. Mallikarjun ಅಡಿಕೆ ಬೆಳೆ ಎಲೆಚುಕ್ಕೆ ರೋಗ‌ ನಿಯಂತ್ರಣ.ಸಂಶೋಧನೆಗೆ ₹ 50 ಲಕ್ಷ ಅನುದಾನ- ಸಚಿವ ಎಸ್.ಎಸ್. ಮಲ್ಲಿಕಾರ್ಜುನ್

0

S.S. Mallikarjun ಎಲೆ ಚುಕ್ಕೆ ರೋಗದಿಂದ ರಾಜ್ಯದಲ್ಲಿ ಸುಮಾರು 53,977 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಅಡಿಕೆ ಬೆಳೆಗೆ ಹಾನಿಯಾಗಿದೆ. ರೋಗ ಹರಡದಂತೆ ನಿಯಂತ್ರಿಸಲು ಶಿವಮೊಗ್ಗ ತೋಟಗಾರಿಕೆ ವಿಶ್ವವಿದ್ಯಾಲಯದ ತಜ್ಞರ ನೇತೃತ್ವದ ತಂಡ ರಚನೆಯಾಗಿದ್ದು, ಸಂಶೋಧನೆಗೆ ₹50 ಲಕ್ಷ ಅನುದಾನ ಒದಗಿಸಿದೆ. ರೋಗದ ನಿಯಂತ್ರಣ ಕುರಿತು ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ
S.S. Mallikarjun ವಿಶ್ವ ವಿದ್ಯಾಲಯದ ತಜ್ಞರ ಸಹಯೋಗದಲ್ಲಿ ರೈತರಿಗೆ ತರಬೇತಿ, ಪ್ರಾತ್ಯಕ್ಷಿಕೆಗಳನ್ನು ನೀಡಿ, ಮಾಹಿತಿ ಹಾಗೂ ಪ್ರಚಾರ ಕಾರ್ಯ ಮಾಡಲಾಗುವುದು ಎಂದು ತೋಟಗಾರಿಕೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ತಿಳಿಸಿದ್ದಾರೆ.

Micro Irrigation scheme ಜೆಟ್ ಪೈಪು/ಸ್ಪಿಂಕ್ಲಲ್ ಸೌಲಭ್ಯ ಪಡೆಯಲು ಕೃಷಿ ಇಲಾಖೆ ವತಿಯಿಂದ ಅರ್ಹ ರೈತರಿಂದ ಅರ್ಜಿ ಆಹ್ವಾನ

0

Micro Irrigation scheme ಸೂಕ್ಷ್ಮ ನೀರಾವರಿ ಯೋಜನೆಯಡಿ ತುಂತುರು ನೀರಾವರಿ ಯೋಜನೆಯಡಿ ಜೆಟ್ ಪೈಪು/ಸ್ಪಿಂಕ್ಲಲ್ ಸೌಲಭ್ಯ ಪಡೆಯಲು ಕೃಷಿ ಇಲಾಖೆ ಶಿವಮೊಗ್ಗ ವತಿಯಿಂದ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸೂಕ್ಷ್ಮ ನೀರಾವರಿ ಯೋಜನೆಯಡಿ ತುಂತುರು ನೀರಾವರಿ ಘಟಕವನ್ನು ಶೇ. 90 ರ ಸಹಾಯಧನದಲ್ಲಿ ಸಾಮಾನ್ಯ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ವಿತರಿಸಲಾಗುತ್ತಿದ್ದು, ಅವಶ್ಯಕತೆ ಇರುವ ರೈತರು ಸದರಿ ಯೋಜನೆಯ ಉಪಯೋಗ ಪಡೆಯಲು ಅರ್ಜಿಯೊಂದಿಗೆ ಆಧಾರ್ ಕಾರ್ಡ್ ಜೆರಾಕ್ಸ್, ಪಹಣ, 2 ಪಾಸ್‌ಪೋರ್ಟ್ ಸೈಜ್ ಪೋಟೋ, ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್, ನೋಟರಿ, ಜಾತಿ ಪ್ರಮಾಣ ಪತ್ರ (ಪ.ಜಾತಿ ಹಾಗೂಪ.ಪಂಗಡ) ಈ ದಾಖಲೆಯೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು.

Micro Irrigation scheme ಪ.ಜಾತಿ ಹಾಗೂ ಪ.ಪಂಗಡ ರೈತರು 7 ವರ್ಷಕೊಮ್ಮೆ ಮತ್ತು ಸಾಮಾನ್ಯ ರೈತರಿಗೆ ಒಮ್ಮೆ ಮಾತ್ರ ಈ ಸ್ವೌಲಭ್ಯ ಪಡೆಯಲು ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ತಾಲ್ಲೂಕಿನ ಹೋಬಳಿ ಮಟ್ಟದ ಕೃಷಿ ಅಧಿಕಾರಿಗಳನ್ನು ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದೆಂದು ಶಿವಮೊಗ್ಗ ಸಹಾಯಕ ಕೃಷಿ ನಿರ್ದೇಶಕರು ರಮೇಶ್ ಎಸ್ ತಿಳಿಸಿದ್ದಾರೆ.