Friday, February 6, 2026
Friday, February 6, 2026
Home Blog Page 1866

ಕುಲ್ಗಾಂ : ಉಗ್ರನ ಹತ್ಯೆ, ವಿದ್ಯಾರ್ಥಿಗಳ ರಕ್ಷಣೆ

0

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾಪಡೆಗಳು ಕಾರ್ಯಾಚರಣೆ ನಡೆಸಿದರು. ಈ ಸಂದರ್ಭದಲ್ಲಿ ಅರವತ್ತು ವಿದ್ಯಾರ್ಥಿಗಳ ರಕ್ಷಣೆ ಮಾಡಿ, ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಒಬ್ಬ ಉಗ್ರನನ್ನು ಹತ್ಯೆಗೈಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅಶ್ ಮುಂಜಿ ಪ್ರದೇಶದಲ್ಲಿ ಉಗ್ರರು ಅಡಗಿರುವ ಗುಪ್ತಚರ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ಮತ್ತು ಸ್ಥಳೀಯ ಪೊಲೀಸರ ತಂಡವೂ ಕಾರ್ಯಾಚರಣೆಗೆ ಮುಂದಾಗಿದೆ.
ಮೃತ ಉಗ್ರನನ್ನು ಮುದಾಸಿರ್ ಅಹಮದ್ ಎಂದು ಗುರುತಿಸಲಾಗಿದ್ದು, 2018 ರಿಂದಲೂ ದಕ್ಷಿಣ ಕುಲ್ಗಾಮ್ ನಲ್ಲಿ ಸಕ್ರಿಯನಾಗಿದ್ದ ಎನ್ನಲಾಗಿದೆ. ಭದ್ರತಾ ಪಡೆಗಳು ಕಾರ್ಯಾಚರಣೆ ಪ್ರಾರಂಭಿಸುವ ಮೊದಲೇ ಉಗ್ರರು ಅಡಗಿದ್ದ ಪ್ರದೇಶದ ಸುತ್ತಮುತ್ತಲಿದ್ದ ಶಾಲೆಗಳಲ್ಲಿನ 60 ಮಕ್ಕಳು ಹಾಗೂ ಸ್ಥಳೀಯರನ್ನು ಸುರಕ್ಷಿತವಾಗಿ ಬೇರೆ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು. ನಂತರ ಉಗ್ರರನ್ನು ಸದೆಬಡಿಯಲಾಗಿದೆ ಎಂದು ಮೂಲಗಳು ತಿಳಿಸಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಬಲವಾದ ಸಾಕ್ಷ್ಯ ಇಲ್ಲ : ಜಾಮೀನು ನೀಡಲಾಗಿದೆ

ಐಷಾರಾಮಿ ಹಡಗಿನಲ್ಲಿನ ಡ್ರಗ್ಸ್ ಪಾರ್ಟಿ ಪ್ರಕರಣದ ಆರೋಪಿಯಾಗಿರುವ ಖ್ಯಾತ ಬಾಲಿವುಡ್ ನಟ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಹಾಗೂ ಇತರ ಇಬ್ಬರು ಅಪರಾಧ ಎಸಗಿದ್ದಾರೆ ಎಂಬುದಕ್ಕೆ ಯಾವುದೇ ಬಲವಾದ ಸಾಕ್ಷಿಗಳು ಮೇಲ್ನೋಟಕ್ಕೆ ಕಂಡು ಬಂದಿಲ್ಲ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ಪ್ರಕರಣದ ಸಂಬಂಧ ಆರ್ಯನ್ ಖಾನ್, ಅರ್ಬಾಜ್ ಹಾಗೂ ಧಮೇಚಾ ಅವರಿಗೆ ಅಕ್ಟೋಬರ್ 28ರಂದು ಜಾಮೀನು ನೀಡಲಾಗಿತ್ತು.

ಡ್ರಗ್ಸ್ ಪಾರ್ಟಿ ಪ್ರಕರಣದ ಈ ಮೂವರು ಆರೋಪಿಗಳ ವಾಟ್ಸಪ್ ಚಾಟ್ ಗಳಲ್ಲಿ ಆಕ್ಷೇಪಾರ್ಹ ಎನ್ನಬಹುದಾದಂತಹ ಯಾವುದೇ ಅಂಶಗಳಿಲ್ಲ, ಅಪರಾಧ ಎಸಗಲು ಆರೋಪಿಗಳು ಪಿತೂರಿ ನಡೆಸಿದ್ದಾರೆ ಎಂಬುದನ್ನು ಸಹ ಈ ಚಾಟ್ ಗಳು ತೋರಿಸುತ್ತಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ತಾಳಗುಪ್ಪದಲ್ಲಿ ಸಂಭ್ರಮಾಚರಣೆ

0

ತಾಳಗುಪ್ಪ: ಕೇಂದ್ರ ಸರ್ಕಾರದ ಕೃಷಿ ಮಸೂದೆ ವಾಪಸಾತಿ ನಿರ್ಧಾರ ರೈತ ತಾಳಗುಪ್ಪ: ಕೇಂದ್ರ ಸರ್ಕಾರದ ಕೃಷಿ ಮಸೂದೆ ವಾಪಸಾತಿ ನಿರ್ಧಾರ ರೈತ ಹೋರಾಟಕ್ಕೆ ಸಂದ ಜಯ ಎಂದು ಶಿವಮೊಗ್ಗ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಚಂದ್ರಶೇಖರ  ಗೂರ್ಲುಕೆರೆ ಹೇಳಿದರು. ಅವರು ತಾಳಗುಪ್ಪದಲ್ಲಿ ಸಂಭ್ರಮಾಚರಣೆಯ ಪ್ರಯುಕ್ತ ಪಟಾಕಿ ಸಿಡಿಸಿ ಮಾತನಾಡಿದರು. 

ರೈತರ ವಿರೋಧವಾಗಿ ಯಾವುದೇ ಸರ್ಕಾರ ನಿರ್ಧಾರ ತೆಗೆದುಕೊಂಡರು ಅದು ಅಸಾದ್ಯ ಎಂಬುದು ಈ ಕೃಷಿ ಮಸೂದೆ ವಾಪಸಾತಿ ನಿಲುವಿನಿಂದ ತಿಳಿದಿದೆ. ಸರ್ಕಾರಗಳು ರೈತ ಸ್ನೇಹಿಯಾಗಿದ್ದರೆ ಮಾತ್ರಾ ಉಳಿಯಲು ಸಾದ್ಯ, ರಾಜ್ಯ ಸರ್ಕಾರವೂ ರೈತ ವಿರೋಧಿ ಮಸೂದೆಗಳನ್ನು ವಾಪಸು ಪಡೆಯಬೇಕು, ಇಲ್ಲದಿದ್ದಲ್ಲಿ ಇದೇ ಮಾದರಿ ಹೋರಾಟ ಮಾಡಲಾಗುವುದು ಎಂದರು.

ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮೂಗೀಮನೆ ಗಣಪತಿ ಹೆಗಡೆ, ಮೆಡಿಕಲ್ ರಾಮಣ್ಣ, ಆಟೋ ಚಾಲಕರ ಸಂಘದ ಅಧ್ಯಕ್ಷ ಮಾದೇವ್, ಮತ್ತಿತರರು ಪಾಲ್ಗೊಂಡಿದ್ದರು. 

ವರದಿ ಕೃಪೆ – ರಾಘವೇಂದ್ರ ಶರ್ಮ ತಲವಾಟ

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಬಿಡಿಎ ಗೆ ಎಸಿಬಿ ಧಾಳಿ

0

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕೇಂದ್ರ ಕಚೇರಿಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಧಾಳಿ ನಡೆಸಿ ನೂರಾರು ಕೋಟಿ ರೂಪಾಯಿ ಮೌಲ್ಯದ ಅಕ್ರಮಗಳನ್ನು ಪತ್ತೆಹಚ್ಚಿದೆ.

ನಿವೇಶನ ಹಂಚಿಕೆ ಭೂಸ್ವಾಧೀನ ಮತ್ತು ಜಮೀನು ಮಾಲೀಕರಿಗೆ ಪರಿಹಾರ ವಿತರಣೆಯಲ್ಲಿ ಅವ್ಯವಹಾರ ನಡೆಯುತ್ತಿರುವ ಬಗ್ಗೆ ದೂರುಗಳನ್ನು ಆಧರಿಸಿ ಎಸಿಬಿ ಅಧಿಕಾರಿಗಳು ಧಾಳಿ ನಡೆಸಿದ್ದಾರೆ. ಬೆಂಗಳೂರು ನಗರದ ಘಟಕದ ಕಚೇರಿಯಲ್ಲಿ ಬಿಡಿಎ ಅಧಿಕಾರಿಗಳ ವಿರುದ್ಧ ಎಸಿಬಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದೆ. ಈ ಕಾರ್ಯಾಚರಣೆಯಲ್ಲಿ ಏಕಕಾಲಕ್ಕೆ 30 ಹೆಚ್ಚು ಕಚೇರಿಗಳಲ್ಲಿ ಎಸಿಬಿ ಶೋಧ ನಡೆಸಿ ನೂರಾರು ಕಡತಗಳನ್ನು ತನಿಖಾ ತಂಡ ವಶಪಡಿಸಿಕೊಂಡಿದೆ.

ಬೆಂಗಳೂರು ನಗರದ ವಿವಿಧೆಡೆ ನಿರ್ಮಾಣವಾಗುತ್ತಿರುವ ಅಂತಹ ಬಡಾವಣೆಗಳಲ್ಲಿ ಕೆಲವರಿಗೆ ಅರ್ಹತೆ ಇಲ್ಲದಿದ್ದರೂ ಮೂಲಸೌಕರ್ಯಕ್ಕೆ ಕಾಯ್ದಿರಿಸಿದ ನಿವೇಶನಗಳ ಹಂಚಿಕೆ ಮಾಡಲಾಗಿದೆ. ಬಿಡಿಎ ಅಧಿಕಾರಿಗಳು ಕೆಲವು ಖಾಸಗಿ ಸಂಘಗಳ ಪಾತ್ರ ಅಧಿಕಾರಿಗಳ ಜೊತೆಗೂಡಿ ಅಕ್ರಮವಾಗಿ ನಿವೇಶನಗಳನ್ನು ಹಂಚಿಕೆ ಮಾಡಿರುವುದು, ಒಂದೇ ನಿವೇಶನವನ್ನು ಇಬ್ಬರಿಗೆ ಹಂಚಿಕೆ ಮಾಡಿ ಆದೇಶ ಹೊರಡಿಸಿರುವುದು ಹಾಗೂ ಫಲಾನುಭವಿಗಳು ಪಾವತಿಸಿದ ಹಣವನ್ನು ಪ್ರಾಧಿಕಾರದ ಬ್ಯಾಂಕ್ ಖಾತೆಗೆ ವರ್ಗಾಯಿಸುವ ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಸಾಕ್ಷಿಗಳು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಧಾಳಿಯಲ್ಲಿ ಬೆಂಗಳೂರು ನಗರದ ಎಸಿಬಿ ಎಸ್ಪಿ ಜಿ.ಹೆಚ್.ಸತೀಶ್ ಚಂದ್ರ, ಆಡಳಿತ ವಿಭಾಗದ ಎಸ್ಪಿ ಅಬ್ದುಲ್ ಅಹದ್ ಮತ್ತು ಕೇಂದ್ರ ಸ್ಥಾನದ ಎಸ್ಪಿ ಉಮಾ ಪ್ರಶಾಂತ್ ಈ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಉತ್ತರಕರ್ನಾಟಕ:ಮಳೆಗೆ ತತ್ತರ!

0

ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೆಳೆ ನಾಶ ಹಾಗೂ ಜೀವ ಹಾನಿಯಾಗಿದೆ.

ಧಾರವಾಡ, ಹಾವೇರಿ, ವಿಜಯನಗರ, ಉತ್ತರ ಕನ್ನಡ ಇನ್ನು ಹಲವಾರು ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಅಪಾರ ಪ್ರಮಾಣದ ಈರುಳ್ಳಿ, ಮೆಣಸಿನಕಾಯಿ, ಭತ್ತ ಬೆಳೆಗಳಿಗೆ ಹಾನಿಯಾಗಿವೆ.

ಹಾವೇರಿ ಜಿಲ್ಲೆಯಲ್ಲಿ 567 ಮನೆಗಳು, ವಿಜಯನಗರ ಜಿಲ್ಲೆಯಲ್ಲಿ 65 ಮನೆಗಳು ಹಾನಿಯಾಗಿವೆ. ಹುಬ್ಬಳ್ಳಿಯಲ್ಲಿ 9 ಮನೆಗಳು ಕುಸಿದಿದೆ. ಒಟ್ಟು 1331 ಹೆಕ್ಟೇರ್ ಬೆಳೆ ಹಾಳಾಗಿದೆ.

ನವೆಂಬರ್ 23ರ ವರೆಗೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಕೋಲಾರ ತಾಲೂಕಿನ ಕೆಂದಟ್ಟಿ ಗ್ರಾಮದಲ್ಲಿ ರಾತ್ರಿ ಮನೆ ಕುಸಿದು ಪ್ರಭಾಕರ್ ಎಂಬಾತ ಮೃತಪಟ್ಟಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ನಾಯಕನಹಟ್ಟಿಯಲ್ಲಿ ರಾತ್ರಿ ಇಡೀ ಸುರಿದ ಮಳೆಯಿಂದಾಗಿ ಗೋಡೆ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತುಂಗಭದ್ರ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಹಂಪಿ ಸ್ನಾನಘಟ್ಟ, ಚಕ್ರತೀರ್ಥ, ವಿಜಯನಗರ ಕಾಲದ ಕಾಲುಸೇತುವೆ, ಪುರಂದರ ಮಂಟಪ ಸ್ಮಾರಕಗಳು ಜಲಾವೃತಗೊಂಡಿವೆ.1633 ಅಡಿ ಸಾಮರ್ಥ್ಯದ ತುಂಗಭದ್ರಾ ಜಲಾಶಯ ಪೂರ್ಣ ವಾಗಿ ಭರ್ತಿಯಾಗಿದ್ದು,ನದಿಗೆ ನೀರು ಹರಿಸಲಾಗುತ್ತಿದೆ. ಒಳಹರಿವಿನ ಪ್ರಮಾಣ 50ಸಾವಿರ ಕ್ಯೂಸೆಕ್ ಇದೆ. ಅಷ್ಟೇ ಪ್ರಮಾಣದ ನೀರು ನದಿಗೆ ಹರಿಸಲಾಗುತ್ತಿದೆ. 12 ಕ್ರಸ್ಟ್ ಗೇಟ್ ಗಳಿಂದ ನೀರು ಹರಿಸಲಾಗುತ್ತಿದೆ. ನದಿಯಂಚಿನಲ್ಲಿ ವಾಸಿಸುತ್ತಿರುವ ಜನರಿಗೆ ಎಚ್ಚರಿಕೆ ಯಲ್ಲಿ ಇರುವಂತೆ ತಿಳಿಸಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಶಿಥಿಲ ಕಟ್ಟಡದಲ್ಲಿ ಶಾಲೆ ನಡೆಸ ಕೂಡದು

ಅಪಾಯದ ಸ್ಥಿತಿಯಲ್ಲಿರುವ ಶಾಲಾ ಕಟ್ಟಡ ಮತ್ತು ಶಿಥಿಲಗೊಂಡಿರುವ ಕೊಠಡಿಗಳನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಬಳಕೆ ಮಾಡದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಆರ್. ವಿಶಾಲ್ ತಿಳಿಸಿದ್ದಾರೆ.

ಕಳೆದ ಒಂದೂವರೆ ವರ್ಷದಿಂದ ಕೊರೋನಾ ಕಾರಣ ಸ್ಥಗಿತಗೊಂಡಿದ್ದ ಶಾಲೆಗಳು ಪುನರಾರಂಭಗೊಂಡಿದೆ. ಆದರೆ ಕಳೆದೆರಡು ವಾರಗಳಿಂದ ರಾಜ್ಯದಾದ್ಯಂತ ಮಳೆರಾಯನ ಅಬ್ಬರ ಹೆಚ್ಚಾಗಿದೆ. ಇದರಿಂದ ಅನೇಕ ಕಡೆ ಶಿಥಿಲಗೊಂಡಿರುವ ಶಾಲಾ ಕಟ್ಟಡಗಳು ನೆಲಕ್ಕುರುಳಿವ ಸಾಧ್ಯತೆ ಹೆಚ್ಚಾಗಿದೆ. ಒಂದು ವೇಳೆ ಅವಘಡ ಸಂಭವಿಸಿದರೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಇವರ ಹಿತದೃಷ್ಟಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಥಿಲಗೊಂಡಿರುವ, ಅಪಾಯ ಸ್ಥಿತಿಯಲ್ಲಿರುವ ಶಾಲಾಕಟ್ಟಡ ದ ಕೊಠಡಿಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ನಡೆಸ ಕೂಡದು ಎಂದು ತಿಳಿಸಿದೆ.

ಎಲ್ಲಾ ಉಪನಿರ್ದೇಶಕರು, ಡಯಟ್ ಪ್ರಾಂಶುಪಾಲರು, ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಗೆ ಸೇರುವ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಕೂಡ ಸೂಚನೆ ನೀಡಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಯುವಜನ ಸಮೀಕ್ಷೆ : ಯೂನಿಸೆಫ್ ವರದಿ

0

ಕೋವಿಡ್ ಪೂರ್ವ ಪರಿಸ್ಥಿತಿಯಲ್ಲಿದ್ದ ಶಿಕ್ಷಣದ ಗುಣಮಟ್ಟ ಈಗ ಮತ್ತಷ್ಟು ಉತ್ತಮವಾಗಿದೆ ಎಂದು ಭಾರತೀಯ ಯುವಜನತೆ ಅಭಿಪ್ರಾಯಪಟ್ಟಿದೆ. ಯುನಿಸೆಫ್ ಗ್ಯಾಲಪ್ ಇಂಟರ್ನ್ಯಾಷನಲ್ ಸರ್ವೇ ಪ್ರಕಾರ ಈ ಅಭಿಪ್ರಾಯ ಹೊರಹೊಮ್ಮಿದೆ.

ಜಗತ್ತಿನ 21 ರಾಷ್ಟ್ರಗಳಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು. ಅದರಲ್ಲಿ ಭಾರತದ 1500 ಜನರನ್ನು ಈ ಬಗ್ಗೆ ಸಮೀಕ್ಷೆಗೆ ಒಳಪಡಿಸಲಾಗಿತ್ತು. 40 ವರ್ಷಕ್ಕೂ ಮೀರಿದ ಶೇ. 45 ಮಂದಿ ಶಿಕ್ಷಣವು ಜೀವನದ ಯಶಸ್ಸನ್ನು ನಿರ್ಧರಿಸುವಲ್ಲಿ ದೊಡ್ಡ ಪಾತ್ರ ವಹಿಸುತ್ತದೆ ಎಂದು ಹೇಳಿದ್ದಾರೆ. ಶೇ.58 ರಷ್ಟು ಯುವಜನರ ಪ್ರಕಾರ ಇಂದಿನ ಎಳೆಯರು ಬಹಳಷ್ಟು ಒತ್ತಡಕ್ಕೆ ಈಡಾಗುತ್ತಿದ್ದಾರೆ ಎಂದಿದ್ದಾರೆ. 15 ರಿಂದ 24 ವರ್ಷದೊಳಗಿನ ಯುವಜನತೆ ಇಂದಿನ ಶೈಕ್ಷಣಿಕ ಗುಣಮಟ್ಟ ಹಿಂದಿಗಿಂತಲೂ ಉತ್ತಮವಾಗಿದೆ ಎಂದಿದ್ದಾರೆ.ಈ ಯುವ ಜನತೆಗೆ ಜಗತ್ತು ಪ್ರಶಸ್ತವಾಗಿದೆ ತಿಳಿಸಿದ್ದಾರೆ ಎಂಬ ವಿಷಯವನ ಭಾರತದ ಯುನಿಸೆಫ್ ಪ್ರತಿನಿಧಿಯಾಗಿರುವ ಯಸುಮಾಸ ಕಿಮುರ ಹೇಳಿದ್ದಾರೆ.

ಈ ವರದಿಯ ಪ್ರಕಾರ ಶೇ.55 ರಷ್ಟು ಯುವಜನ ಹವಾಮಾನ ವೈಪರೀತ್ಯದ ಬಗ್ಗೆ ತಿಳಿದುಕೊಂಡಿದ್ದಾರೆ. ಶೇ.65 ರಷ್ಟು ಯುವಜನತೆ ರಾಜಕಾರಣಿಗಳು ಮಕ್ಕಳ ಅಭಿಪ್ರಾಯಗಳನ್ನು ಆಲಿಸಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.

ಬಹುಪಾಲು ಶೇ.57 ರಷ್ಟು ಯುವಜನತೆ ಹೆಣ್ಣುಮಕ್ಕಳ ಮದುವೆ ವಯಸ್ಸು 18ಕ್ಕೂ ಹೆಚ್ಚಿರಬೇಕು ಎಂದು ಬಯಸುತ್ತಾರೆ.

ಮತ್ತಷ್ಟು ಕುತೂಹಲಕರ ಸಮೀಕ್ಷೆ ಎಂದರೆ ಶೇ.57 ರಷ್ಟು ಯುವಜನತೆ ನಿತ್ಯ ಇಂಟರ್ನೆಟ್ ಬಳಸುತ್ತಾರೆ ಎಂದು ವಿವಿಧ ಸಮೀಕ್ಷೆಗಳ ಮೂಲಕ ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸಾಗರದಲ್ಲಿ ರಾಷ್ಟ್ರೀಯ ಸಂಗೀತೋತ್ಸವ

0

ಸಾಗರದಲ್ಲಿ ಸದ್ಗುರು ಹಿಂದೂಸ್ತಾನಿ ಸಂಗೀತ ವಿದ್ಯಾಲಯ , ಭಾರತ ಸರ್ಕಾರ ಸಂಸ್ಕೃತಿ ಸಚಿವಾಲಯ, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಸಂಗೀತೋತ್ಸವ ನಡೆಯಲಿದೆ.

ನವೆಂಬರ್ 20,21 ಮತ್ತು 22ರಂದು 21 ನೇ ವರ್ಷದ ‘ಏಕವಿಂಶ’ ರಾಷ್ಟ್ರೀಯ ಸಂಗೀತೋತ್ಸವ ನಡೆಯಲಿದೆ ಎಂದು ವಿದುಷಿ ವಸುಧಾ ಶರ್ಮ ಮಾಧ್ಯಮ ಮಿತ್ರರಿಗೆ ತಿಳಿಸಿದರು.

ನವೆಂಬರ್ 21ರಂದು ಬೆಂಗಳೂರಿನ ಅನಿರುದ್ಧ ಐತಾಳ್ ಅವರಿಂದ ಹಿಂದುಸ್ತಾನಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ರಾತ್ರಿಯ ವೇಳೆ ಯಕ್ಷ ಸಂಗೀತ ವಿಶೇಷ ಕಾರ್ಯಕ್ರಮ ನಡೆಯಲಿದೆ.

ನವೆಂಬರ್ 22 ರಂದು ಧಾರವಾಡದ ವಿದ್ವಾನ್ ವಿಜಯ ಪಾಟೀಲ್ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೆ ವಿದ್ವಾನ್ ನಿರಂಜನ ದಿಂಡೋಡಿ ಬೆಂಗಳೂರು ಅವರಿಂದ ಕರ್ನಾಟಕಿ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಈ ಮೂರು ದಿನಗಳು ಸಹ ಸಂಗೀತ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ದೇಶದ ವಿವಿಧ ಕಡೆಯಿಂದ ಹೆಸರಾಂತ ಗಾಯಕರು ಆಗಮಿಸಲಿದ್ದಾರೆ. ತಮ್ಮ ಸ್ವರ ತರಂಗಗಳ ಮೂಲಕ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. 21ನೇ ವರ್ಷದ ‘ಏಕ ವಿಂಶ ‘ ರಾಷ್ಟ್ರೀಯ ಸಂಗೀತೋತ್ಸವದಲ್ಲಿ ಸಂಗೀತದ ಸಂಗೀತದ ಸವಿ ಸವಿಯಲು ಆಸಕ್ತರು ಪಾಲ್ಗೊಳ್ಳಬಹುದಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಪ್ರತಿಭಟನೆ ಹಿಂಪಡೆಯುವುದಿಲ್ಲ-ಟಿಕಾಯತ್

0

ದೇಶವ್ಯಾಪಿ ಕಳೆದ ಒಂದು ವರ್ಷದಿಂದ ಭಾರೀ ವಿವಾದವನ್ನು ಹುಟ್ಟುಹಾಕಿದ್ದ ಕೇಂದ್ರ ಸರ್ಕಾರ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಮಾನ್ಯ ಪ್ರಧಾನ ಮಂತ್ರಿ ಅವರು ವಾಪಸ್ ಪಡೆಯುವುದಾಗಿ ಈಗಾಗಲೇ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯನ್ನು ದೇಶದಾದ್ಯಂತ ರೈತರು ವಿರೋಧಿಸಿದ್ದರು. ಈ ಸಂಬಂಧ ಮೋದಿ ಅವರು “ಕಾಯ್ದೆಯ ಗುರಿಯು ಸಣ್ಣ ರೈತರನ್ನು ಬಲಪಡಿಸುವುದೇ ಆಗಿದೆ ಆದರೆ ಕೆಲವು ವರ್ಗದ ಕೃಷಿಕರನ್ನು ಮನವರಿಕೆ ಮಾಡಿಕೊಡಲು ಆಗಲಿಲ್ಲ. ನಾನು ಮತ್ತಷ್ಟು ಕಠಿಣವಾಗಿ ಶ್ರಮಿಸುತ್ತೇನೆ. ನಿಮ್ಮ ಕನಸುಗಳನ್ನು, ದೇಶದ ಕನಸುಗಳನ್ನು ಈಡೇರಿಸಲು ಸಾಧ್ಯ ಮಾಡುತ್ತೇನೆ” ಎಂದು ಭರವಸೆ ನೀಡಿದ್ದಾರೆ.

ಕೃಷಿ ಕಾಯಿದೆ ಹಿಂಪಡೆಯುವ ಬಗ್ಗೆ ಪ್ರಧಾನಿಯವರ ನಿರ್ಧಾರ ತಿಳಿದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಪ್ರತಿಕ್ರಿಯಿಸಿದ್ದಾರೆ. “ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ. ಸಂಸತ್ತಿನಲ್ಲಿ ಈ ಕಾಯ್ದೆಗಳನ್ನು ರದ್ದುಪಡಿಸುವವರೆಗೂ ಕಾಯುತ್ತೇವೆ” ಎಂದು ತಿಳಿಸಿದ್ದಾರೆ.

“ದೇಶದ ಅನ್ನದಾತರು ಸತ್ಯಾಗ್ರಹದ ಮೂಲಕ ದುರಹಂಕಾರವನ್ನು ಮಣಿಸಿದ್ದಾರೆ. ಅನ್ಯಾಯದ ವಿರುದ್ಧ ವಿಜಯಕ್ಕೆ ಅಭಿನಂದನೆಗಳು ಜೈಹಿಂದ್, ದೇಶದ ರೈತರಿಗೆ ಜೈ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.

ಕೃಷಿ ಕಾಯ್ದೆ ಹಿಂಪಡೆ ಕುರಿತಂತೆ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ” ಎನ್ ಡಿ ಎ ಸರ್ಕಾರ ಸ್ಪಂದನಾಶೀಲ. ಹೀಗಾಗಿಯೇ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎನ್ನುವ ರೈತರ ಬೇಡಿಕೆಗಳಿಗೆ ಸ್ಪಂದಿಸಿದೆ. ಚುನಾವಣೆ ಉದ್ದೇಶಕ್ಕಾಗಿ ಕಾಯ್ದೆ ಹಿಂದಕ್ಕೆ ಪಡೆದಿಲ್ಲ” ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು “ಒಣ ಪ್ರತಿಷ್ಠೆಗೆ ಒಳಗಾಗದೇ ಕೃಷಿ ಕಾಯ್ದೆಗಳನ್ನು ಹಿಂಪಡೆದ ಮೋದಿ ನಿರ್ಧಾರ ಸ್ವಾಗತಾರ್ಹ” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

“ಸರ್ವಾಧಿಕಾರಿ ಎಷ್ಟೇ ಶಕ್ತಿಶಾಲಿಯಾಗಿರಲಿ, ಎದೆಯಗಲ ಎಷ್ಟೇ ಇಂಚಿನದ್ದಾಗಿರಲಿ, ಜನ ಶಕ್ತಿಯ ಎದುರು ಆತ ಮಣಿಯಲೇಬೇಕು. ಇದುವೇ ಪ್ರಜಾಪ್ರಭುತ್ವದ ಸೊಗಸು. ಇದುವೇ ರೈತರ ಸ್ವಾತಂತ್ರ್ಯೋತ್ಸವ” ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಕೃಷಿ ಕಾಯ್ದೆ ಹಿಂಪಡೆ ಕುರಿತಂತೆ ಪ್ರತಿಕ್ರಿಯಿಸಿದರು.

“ಮೋದಿ ಅವರ ಏಕಾಏಕಿ ನಿರ್ಧಾರದಲ್ಲಿ ವಿಶ್ವಾಸದ ಕೊರತೆ ಕಾಣುತ್ತಿದೆ. ಮೊದಲೇ ಸ್ಪಂದಿಸಿದ್ದರೆ ಮುಜುಗರ ಆಗುತ್ತಿರಲಿಲ್ಲ. ಚುನಾವಣೆಗಳ ಲಾಭ-ನಷ್ಟ ಇಟ್ಟುಕೊಂಡು ಅವರು ತೀರ್ಮಾನ ತೆಗೆದುಕೊಂಡಿದ್ದಾರೆ” ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೋದಿ ಅವರ ಈ ನಿರ್ಧಾರ ಕುರಿತು ಟೀಕಿಸಿದ್ದಾರೆ.

ಏನೇ ಆಗಲಿ ಒಂದು ವರ್ಷದಿಂದ ಮಳೆ, ಗಾಳಿ, ಚಳಿ ಎನ್ನದೇ ನಿರಂತರ ಹೋರಾಟ ಕೈಗೊಂಡಿದ್ದ ರೈತರಿಗೆ ಜಯ ಸಿಕ್ಕಂತಾಗಿದೆ. ಕೃಷಿ ಕಾಯ್ದೆ ವಾಪಸ್ ಪಡೆಯುವುದಾಗಿ ಘೋಷಿಸಿದ್ದ ಪ್ರಧಾನಿ ಮೋದಿ ಅವರ ನಿರ್ಧಾರದಿಂದ ದೇಶದಾದ್ಯಂತ ರೈತ ಸಂಘಟನೆಗಳಿಂದ ವಿಜಯೋತ್ಸವ ಆಚರಣೆ ನಡೆಯುತ್ತಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಟಿ-20 ಸರಣಿ : ಭಾರತದ ವಶ

0

ಟಿ – 20 ಕ್ರಿಕೆಟ್ ಟೂರ್ನಿಯ 2ನೇ ಪಂದ್ಯವು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯಿತು.
3 ಪಂದ್ಯಗಳ ಟಿ – 20 ಸರಣಿಯ ಹಣಾಹಣಿಯಲ್ಲಿ ಭಾರತ ತಂಡವು ನ್ಯೂಜಿಲೆಂಡ್ ತಂಡದ ವಿರುದ್ಧ ರೋಚಕ ಜಯ ಸಾಧಿಸಿ ಸರಣಿ ತನ್ನದಾಗಿಸಿಕೊಂಡಿದೆ.
ರಾಂಚಿಯ ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಎದುರಾಳಿ ತಂಡಕ್ಕೆ ಮೊದಲಿಗೆ ಬ್ಯಾಟಿಂಗ್ ಆಡಲು ಅವಕಾಶ ಮಾಡಿಕೊಟ್ಟಿತು. ಈ ಹಣಾಹಣಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಗಳಿಗೆ 153 ರನ್ ಗಳಿಸಿತು.
ಆರಂಭಿಕ ಜೋಡಿ ಮಾರ್ಟಿನ್ ಗಪ್ಟಿಲ್ 15 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿ 31 ರನ್ ಗಳಿಸಿಕೊಂಡರು ಮತ್ತು ಡೇರಿಲ್ ಮಿಚೆಲ್ 28 ಎಸೆತಗಳಲ್ಲಿ 31 ರನ್ ಗಳಿಸಿಕೊಂಡರು ಆತಿಥೇಯ ಬೌಲರ್ ಗಳಿಗೆ ಬಿಸಿ ಮುಟ್ಟಿಸಿದರು. ಕೇವಲ 4 ಓವರ್ ಗಳಲ್ಲಿ 48 ರನ್ ಗಳುನ್ನು ಸೇರಿಸಿದರು. ಮಧ್ಯಮವೇಗಿ ದೀಪಕ್ ಚಾಹರ್ ಅವರು ಹಾಕಿದ ಎಸೆತ ಅನೀರಿಕ್ಷಿತವಾಗಿ ತುಸು ಎತ್ತರಕ್ಕೆ ಪುಟಿಯಿತು. ಗಪ್ಟಿಲ್ ತಳ್ಳಲು ಪ್ರಯತ್ನಿಸಿದರು. ಬ್ಯಾಟಿನ ಮೇಲ್ಭಾಗಕ್ಕೆ ಬಡಿದ ಚೆಂಡು ಚೆಂಗ್ಗನೆ ಮೇಲಕ್ಕೆ ಹಾರಿತು. ವಿಕೆಟ್ ಕೀಪರ್ ರಿಷಾಬ್ ಪಂತ್ ಚೆಂಡನ್ನು ಕ್ಯಾಚ್ ಇಡಿದರು.
ಮಾರ್ಕ್ ಚಾಪ್ ಮನ್ 17 ಎಸೆತಗಳಲ್ಲಿ 21 ರನ್ ಗಳಿಸಿ ಬಿರುಸಿನ ಆಟ ಆರಂಭಿಸಿದರು. ಆದರೆ ಒಂಭತ್ತನೇ ಓವರ್ ನಲ್ಲಿ ಅಕ್ಷರ್ ಪಟೇಲ್ ಸ್ಪಿನ್ ಮೋಡಿಗೆ ಶರಣಾದರು. 2 ಓವರ್ ಗಳ ನಂತರ ಡೆರಿಲ್ ಮಿಚೆಲ್ ಕೂಡ ಔಟಾದರು. ಅಂತರಾಷ್ಟ್ರೀಯ ಟಿ – 20 ಕ್ರಿಕೆಟ್ ನಲ್ಲಿ ಚೊಚ್ಚಲ ವಿಕೆಟ್ ಗಳಿಸಿದ ಹರ್ಷಲ್ ಸಂಭ್ರಮಿಸಿದರು.
ಈ ಹೊತ್ತಿನಲ್ಲಿ ಗ್ಲೆನ್ ಫಿಲಿಪ್ಸ್ ತಂಡಕ್ಕೆ ಅಸರೆಯಾದರು. 21 ಎಸೆತಗಳಲ್ಲಿ 34 ರನ್ ಗಳಿಸಿದರು. 3 ಸಿಕ್ಸರ್ ಸಿಡಿಸಿದ ಅವರು ತಂಡವನ್ನು ದೊಡ್ಡ ಮೊತ್ತದತ್ತ ಮುನ್ನಡೆಸುವ ಭರವಸೆ ಮೂಡಿಸಿದರು. ಅಷ್ಟರಲ್ಲಿಯೇ ಫಿಲಿಪ್ಸ್ ವಿಕೆಟ್ ಗಳಿಸಿ ಹರ್ಷಲ್ ಪಟೇಲ್ ಮಿಂಚಿದರು. ಆರಂಭದಲ್ಲಿ ಗಪ್ಟಿಲ್ ರಿಂದ ದಂಡನೆಗೊಳಗಾಗಿದ್ದ ಭುವನೇಶ್ವರ್ ಕುಮಾರ್ 18ನೇ ಓವರ್ ನಲ್ಲಿ ಜಿಮ್ಮಿ ನಿಷಾಮ್ ವಿಕೆಟ್ ಗಳಿಸುವಲ್ಲಿ ಸಫಲರಾದರು.
ಆದರೆ ಅಶ್ವಿನ್ ಶಿಸ್ತಿನ ದಾಳಿಯ ಮುಂದೆ ರನ್ ಗಳಿಗೆ ಸುಲಭವಾಗಿರಲಿಲ್ಲ. ಟಿಮ್ ಸೀಫರ್ಟ್ 15 ಎಸೆತಗಳಲ್ಲಿ 13 ರನ್ ಗಳಿಸಿದರು. ವಿಕೆಟ್ ಗಳಿಸಿದ ಅಶ್ವಿನ್ ಹೆಚ್ಚು ರನ್ ಬಿಟ್ಟುಕೊಡದೆ ದಾಂಡಿಗರನ್ನ ಕಾಡಿದರು.
154 ರನ್ ಗಳ ಗೆಲುವಿನ ಗುರಿಯನ್ನಿಟ್ಟುಕೊಂಡು ಆಡಿದ ಭಾರತ ತಂಡದ ರೋಹಿತ್ ಶರ್ಮಾ ಬಳಗ 16 ಎಸೆತ ಬಾಕಿ ಉಳಿದಿರುವಾಗಲೇ ಗೆಲುವಿನ ದಡ ಸೇರಿತು.
ಆರಂಭಿಕ ಜೋಡಿ ಮೊದಲ ವಿಕೆಟ್ ಗೆ ರಾಹುಲ್ ಮತ್ತು ರೋಹಿತ್ 80 ಎಸೆತಗಳಲ್ಲಿ 117 ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು.ನಂತರ ಟಿಮ್ ಸೌಧಿ 3 ವಿಕೆಟ್ ಕಬಳಿಸಿದರು ರಿಷಬ್ ಪಂತ್ ಮತ್ತು ವೆಂಕಟೇಶ್ ಅಯ್ಯರ್ ಜೊತೆಗೂಡಿ ಜಯದತ್ತ ಮುನ್ನುಗ್ಗಿದರು.
ಭರವಸೆ ಇರಿಸಿದಂತೆ ರಿಷಬ್ ಪಂತ್ ಸಿಕ್ಸರ್ ಸಿಡಿಸಿ ಗೆಲುವಿನ ಕಹಳೆ ಊದಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.