Saturday, February 7, 2026
Saturday, February 7, 2026
Home Blog Page 1855

ಎಚ್ಚರವಿದ್ದರೆ ಓಮಿಕ್ರಾನ್ ತಡೆ – ಡಾ.ಸುಧಾಕರ್

0

ಕರೋನವೈರಸ್ ರೂಪಾಂತರ ತಳಿ ಓಮಿಕ್ರಾನ್ ಅನೇಕ ದೇಶದಲ್ಲಿ ಕಾಣಿಸಿಕೊಂಡಿದೆ. ಇದು ಅತಿವೇಗವಾಗಿ ಹರಡುವುದರಿಂದ ರಾಜ್ಯದ ಜನರು ಎಚ್ಚರಿಕೆ ವಹಿಸುವಂತೆ ಆರೋಗ್ಯ ಸಚಿವ ಡಾ. ಸುಧಾಕರ್ ಮನವಿ
ಮಾಡಿಕೊಂಡಿದ್ದಾರೆ.

ರೂಪಾಂತರಿ ಕೊರೋನಾ ವೈರಸ್ ಅತೀ ವೇಗವಾಗಿ ಹರಡುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯೇ ಇದರ ಬಗ್ಗೆ ಮಾಹಿತಿ ನೀಡಿದೆ. ವೈರಸ್ ಬಗ್ಗೆ ಸದ್ಯಕ್ಕೆ ಆತಂಕ ಬೇಡ. ಈ ಸಂಬಂಧ ರಾಜ್ಯದಲ್ಲಿ ಈಗಾಗಲೇ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ರೂಪಾಂತರಿ ವೈರಸ್ ಇರುವ ದೇಶದಿಂದ ಬಂದರೆ ವಿಮಾನ ನಿಲ್ದಾಣದಲ್ಲಿಯೇ ಸಂಪೂರ್ಣ ಪರೀಕ್ಷೆ ನಡೆಸಲಾಗುತ್ತಿದೆ. ಕೋಫಿ ಕರೆದಿ ಪಾಸಿಟಿವ್ ಬಂದರೆ ಪ್ರತ್ಯೇಕವಾಗಿ ಇಡಲಾಗುತ್ತದೆ. ಒಂದು ವಾರದ ಬಳಿಕ ಮತ್ತೊಂದು ಪರೀಕ್ಷೆ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಅವರು ತಿಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಓಮಿಕ್ರಾನ್ ತಡೆ: ಪ್ರಧಾನಿ ಪೂರ್ವ ಸಿದ್ಧತಾ ಸಭೆ

0

ಕೋವಿಡ್-19 ಎರಡನೇ ಅಲೆ ಬಳಿಕ ಈಗ ವಿಶ್ವದಲ್ಲಿ ಓಮಿಕ್ರೋನ್ ರೂಪಾಂತರ ವೈರಸ್ ಅತ್ಯಂತ ಅಪಾಯಕಾರಿಯಾಗಿದೆ. ಭಾರತದಲ್ಲಿ ಮತ್ತೊಂದು ಅಲೆಯನ್ನು ತಪ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಜ್ಜಾಗುತ್ತಿವೆ.

ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಅತ್ಯಂತ ಮಾರಕ ಎನ್ನಲಾಗುತ್ತಿರುವ ‘ಓಮಿಕ್ರಾನ್’ ರೂಪಾಂತರಿ ವೈರಸ್ ಹಲವು ದೇಶಗಳಲ್ಲಿ ಆತಂಕವನ್ನು ಉಂಟುಮಾಡಿದೆ.

ಭಾರತದಲ್ಲಿ ಈ ವೈರಸ್ ಪತ್ತೆಯಾಗಿಲ್ಲದಿದ್ದರೂ ಸಹ ಮುಂಜಾಗೃತಾ ಕ್ರಮವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿವೆ.

ರೂಪಾಂತರಿ ಓಮಿಕ್ರಾನ್ ಪತ್ತೆ ಹಿನ್ನೆಲೆಯಲ್ಲಿ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ವಿವಿಧ ಸಚಿವಾಲಯಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಹೊಸ ರೂಪಾಂತರಿ ಏನು-ಎತ್ತ? ಅದರ ಅಪಾಯಗಳೇನು? ಯಾವ ರಾಷ್ಟ್ರಗಳಲ್ಲಿ ಈ ವೈರಸ್ ಪತ್ತೆಯಾಗಿದೆ ಹಾಗೂ ಇನ್ನು ಹಲವು ಮಾಹಿತಿಯನ್ನು ಅಧಿಕಾರಿಗಳು ಪ್ರಧಾನಿ ಅವರಿಗೆ ವಿವರಿಸಿದರು.

ಪ್ರಧಾನಿ ಮೋದಿ ಅವರು ಅಧಿಕಾರಿಗಳಿಗೆ ಅಂತರಾಷ್ಟ್ರೀಯ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇರಿಸುವುದು. ವಿದೇಶಗಳಿಂದ ಬರುವವರನ್ನು ವಾರೆಂಟ್ ಎಂಗೆ ಒಳಪಡಿಸಿ ಜಿನೋಮ್ ಸೀಕ್ವೆನ್ಸ್ ನಡೆಸಬೇಕು. ಸೋಂಕು ಕಾಣಿಸಿಕೊಂಡಿರುವ ದೇಶದಿಂದ ಬಂದವರ ಮೇಲೆ ಹೆಚ್ಚು ನಿಗಾ ಇರಿಸಬೇಕು. ಹೆಚ್ಚು ಸೋಂಕು ಇರುವೆಡೆ ಕಂಟೈನ್ ಮೆಂಟ್ ಮತ್ತು ನಿಗಾ ಚಟುವಟಿಕೆ ತೀವ್ರಗೊಳಿಸಬೇಕು. ಅಂತರ್ರಾಷ್ಟ್ರೀಯ ವಿಮಾನ ನಿರ್ಬಂಧ ಸಡಿಲಗೊಳಿಸುವ ಯೋಜನೆಯು ಮುಂದೂಡಬೇಕು. ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳ ಜೊತೆ ನಿಕಟವಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೇ ನೀಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಶಿವಮೊಗ್ಗ-ಭದ್ರಾವತಿ ಪೋಲಿಸ್ ಕಮೀಷನರೇಟ್ ಪ್ರಸ್ತಾವನೆ.

0

ಶಿವಮೊಗ್ಗ ಭದ್ರಾವತಿ ಕಮಿಷನರೇಟ್ ಮಾಡಲು ಪ್ರಸ್ತಾವನೆ ಇದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದರು.

ಭದ್ರಾವತಿಗೆ ಇನ್ನೊಬ್ಬರು ಐಪಿಎಸ್ ಅಧಿಕಾರಿ ಹಾಕಲಾಗಿದೆ. ಲಕ್ಷಾಂತರ ಪ್ರಕರಣಗಳಿವೆ. ಎಫ್ ಎಸ್ ಎಲ್ ಆರಂಭ ಮಾಡುವ ಚಿಂತನೆ ಇದೆ. ಪ್ರಸ್ತುತ ಬಳ್ಳಾರಿಯಲ್ಲಿ ಎಫ್ ಎಸ್ ಎಲ್ ಆರಂಭ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು.

ಶಿವಮೊಗ್ಗದಲ್ಲಿ ಇತ್ತೀಚಿಗೆ ಹಫ್ತಾ ವಸೂಲಿ ಪ್ರಕರಣದಬಗ್ಗೆ ಮಾತನಾಡಿದರು. ಇಂತಹ ಪ್ರಕರಣಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಒಂದೊಂದೇ ಠಾಣೆಯಲ್ಲಿ ಎಂಟರಿಂದ ಹತ್ತು ವರ್ಷಗಳ ಕಾಲ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ವೇಳೆ ಅಪರಾಧಿಗಳ ಜೊತೆಗೆ ಕೈಜೋಡಿಸಿದರೆ ಅಂತವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಶಿವಮೊಗ್ಗದಲ್ಲಿ ಎಫ್ ಎಸ್ ಎಲ್ ಆಗಬೇಕೆಂಬ ಬೇಡಿಕೆಯಿದೆ. ಪೊಲೀಸ್ ಠಾಣೆಗಳನ್ನು ಸದ್ಯಕ್ಕೆ ಅಪ್ ಗ್ರೇಡ್ ಮಾಡಲಾಗಿದೆ. ಜನಸಂಖ್ಯೆ ಆಧಾರದ ಮೇಲೆ ಠಾಣೆಗಳನ್ನು ಮಾಡಲಾಗುವುದು ಎಂದು ಮಾನ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾಧ್ಯಮ ಮಿತ್ರರಿಗೆ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮೆಸ್ಕಾಂ ‘ಬೆಳಕು’ ವಿದ್ಯುತ್ ಯೋಜನೆ.

0

ವಿದ್ಯುತ್ ರಹಿತ ಮನೆಗಳಿಗೆ ಮೆಸ್ಕಾಂ ವತಿಯಿಂದ ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ಹೊಳೆಹೊನ್ನೂರು ಮೆಸ್ಕಾಂ ಉಪ ವಿಭಾಗ ಕಚೇರಿಯ ಎ ಇ ಇ ವಿಜಯ್ ಕುಮಾರ್ ತಿಳಿಸಿದರು.

ಬೆಳಕು ಯೋಜನೆಯ ಬಗ್ಗೆ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಪತ್ರ ಕಳುಹಿಸಿಕೊಡಲಾಗಿದೆ. ಪಂಚಾಯಿತಿ ಅಧಿಕಾರಿಗಳು ಅವರ ಪಂಚಾಯಿತಿ ವ್ಯಾಪ್ತಿಯಲ್ಲಿರುವ ವಿದ್ಯುತ್ ರಹಿತ ಮನೆಗಳ ಪಟ್ಟಿ ಮಾಡಬೇಕು. ಫಲಾನುಭವಿಗಳ ಪಡಿತರ ಚೀಟಿ, ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಮಾಹಿತಿಯನ್ನು. ಸದರಿ ಪಟ್ಟಿಯಂತೆ ಯೋಜನಾ ವರದಿ ತಯಾರಿಸಿ ವಿದ್ಯುತ್ ರಹಿತ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ. ಈ ಸೌಲಭ್ಯವನ್ನು ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಜಯ್ ಕುಮಾರ್ ಮಾಧ್ಯಮ ಮಿತ್ರರಿಗೆ ತಿಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ರಾಜ್ಯದಲ್ಲಿ ಕ್ಷೇತ್ರ ಪುನರ್ವಿಂಗಡಣೆ ಆಯೋಗ

0

ಕ್ಷೇತ್ರ ಮರು ವಿಂಗಡಣೆ ಆಯೋಗದ ರಚನೆಗೆ ಆದೇಶ ಹೊರಡಿಸಿದ ರಾಜ್ಯ ಸರ್ಕಾರ. ಜನಸಂಖ್ಯೆ ಆಧಾರದಲ್ಲಿ ಪಂಚಾಯ್ತಿಗಳ ಕ್ಷೇತ್ರ ಮರುವಿಂಗಡನೆ ಮತ್ತು ಮೀಸಲು ನಿಗದಿಗೆ ರಾಜ್ಯ ಸರ್ಕಾರ ರಚಿಸಿದ್ದ ಪಂಚಾಯಿತಿಗಳ ಸೀಮಾ ನಿರ್ಣಯಕ್ಕೆ ಚಾಲನೆ ಸಿಕ್ಕಿದೆ.

ಈ ಆಯೋಗದ ಅಧ್ಯಕ್ಷರಾಗಿ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಸದಸ್ಯರಾಗಿ ಸರ್ಕಾರದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟಿ, ಪಂಚಾಯತ ತಜ್ಞರಾಗಿ ರಾಮಪ್ರಿಯ ಮತ್ತು ಪದನಿಮಿತ್ತ ಸದಸ್ಯರಾಗಿ ಆರ್ ಡಿ ಪಿ ಆರ್ ಇಲಾಖೆಯ ಆಯುಕ್ತರು ಸೀಮಾ ನಿರ್ಣಯ ಅಂತಿಮಗೊಳಿಸಲಿದ್ದಾರೆ.

ಪ್ರತಿ ಕ್ಷೇತ್ರಗಳ ಜನಸಂಖ್ಯೆಯು ಕಾರ್ಯ ಸಾಧ್ಯವಾಗುವಷ್ಟು ಸಮಾನವಾಗಿರುವಂತೆ ಸೀಮಾ ನಿರ್ಣಯ ಗೊಳಿಸುವುದು. ಜನಸಂಖ್ಯೆ ಆಧಾರದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯಿತಿ ಚುನಾಯಿಸಬೇಕು ಸದಸ್ಯರ ಸಂಖ್ಯೆ ನಿಗದಿಪಡಿಸುವುದು. ಪಂಚಾಯಿತಿಗೆ ಚುನಾಯಿಸಲು ಅಗತ್ಯವಾದ ಸದಸ್ಯರ ಸಂಖ್ಯೆಯನ್ನು ಕ್ಷೇತ್ರಗಳಾಗಿ ವಿಂಗಡಿಸಲು ಶಿಫಾರಸು ಮಾಡುವುದು. ಪ್ರತಿಯೊಂದು ಕ್ಷೇತ್ರವು ಭೌಗೋಳಿಕವಾಗಿ ನಿಬಿಡತೆ ಇರುವಂತೆ ಸೀಮಾ ನಿರ್ಣಯಿಸುವುದು. ಸರ್ಕಾರ ನಿಗದಿಪಡಿಸಿದ ಪ್ರಕಾರ್ಯಗಳನ್ನು ನೆರವೇರಿಸುವುದು ಈ ಆಯೋಗದ ಕಾರ್ಯಗಳಾಗಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಆಫ್ಘನ್ ಹಿತಚಿಂತನೆಯೇ ನಮ್ಮ ಅಪೇಕ್ಷೆ

0

ಅಫ್ಘಾನಿಸ್ತಾನದ ಭೂಪ್ರದೇಶದ ಮೇಲೆ ಭಾರತ, ರಷ್ಯಾ ಮತ್ತು ಚೀನಾ ಯಾವುದೇ ದೇಶವು ಮೇಲೆ ದಾಳಿ ಮಾಡ ಬಳಸಲಾಗುವುದಿಲ್ಲ, ನಿಜವಾದ ಅಂತರ್ಗತ ಸರ್ಕಾರದ ರಚನೆಗಾಗಿ ಚಿಂತಿಸಲಾಗುತ್ತಿದೆ. ಯುದ್ಧ-ಹಾನಿಗೊಳಗಾದ ದೇಶಕ್ಕೆ ತಕ್ಷಣದ ಮತ್ತು ಅಡೆತಡೆಯಿಲ್ಲದ ಮಾನವೀಯ ಸಹಾಯಕ್ಕಾಗಿ ಒತ್ತಾಯಿಸಲಾಗಿದೆ. ಮೂರು ದೇಶಗಳ ವಿದೇಶಾಂಗ ಮಂತ್ರಿಗಳು, ರಷ್ಯಾ ಇಂಡಿಯಾ ಚೀನಾ (RIC) ಚೌಕಟ್ಟಿನ ಅಡಿಯಲ್ಲಿ ನಡೆದ ವರ್ಚುವಲ್ ಸಭೆಯಲ್ಲಿ ಭಾಗವಹಿಸಿ, ಅಫಘಾನ್ ನೇತೃತ್ವದ ಮತ್ತು ಅಫ್ಘಾನ್ ಒಡೆತನದ ಶಾಂತಿ ಪ್ರಕ್ರಿಯೆಯ ಮೂಲ ತತ್ವಕ್ಕೆ ಬೆಂಬಲವನ್ನು ಪುನರುಚ್ಚರಿಸಿದರು.
ಯುಎನ್ ಭದ್ರತಾ ಮಂಡಳಿಯು ಸೂಚಿಸಿದ ಅಲ್ ಖೈದಾ, ಐಎಸ್‌ಐಎಲ್, ಅಫ್ಘಾನಿಸ್ತಾನ ಮತ್ತು ಅಲ್ಲಿನ ಪ್ರದೇಶದಲ್ಲಿ ಇತರ ಶಾಶ್ವತ ಶಾಂತಿಯಂತಹ ಭಯೋತ್ಪಾದಕ ಗುಂಪುಗಳನ್ನು ತುರ್ತಾಗಿ ನಿರ್ಮೂಲನೆ ಮಾಡುವ ಅಗತ್ಯವನ್ನು ಸಚಿವರು ಒತ್ತಿ ಹೇಳಿದರು ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅಧ್ಯಕ್ಷತೆ ವಹಿಸಿದ್ದರು. ಮತ್ತು ಅವರ ಚೀನಾದ ಸಹವರ್ತಿ ವಾಂಗ್ ಯಿ ಮತ್ತು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಉಪಸ್ಥಿತರಿದ್ದರು. ದೇಶದ ಪ್ರಮುಖ ಜನಾಂಗೀಯ ಮತ್ತು ರಾಜಕೀಯ ಗುಂಪುಗಳನ್ನು ಮಾತ್ರ ಪ್ರತಿನಿಧಿಸುವ ನಿಜವಾದ ಅಂತರ್ಗತ ಸರ್ಕಾರವನ್ನು ರಚಿಸಲು ಮಂತ್ರಿಗಳು ಕರೆ ನೀಡಿದ್ದಾರೆ ಎಂದು ಹೇಳಿದರು.

ಸಂಸದರೆಲ್ಲರೂ ಸಂಸತ್ತಿನ ಘನತೆಯ ರಕ್ಷಕರು – ರಾಷ್ಟ್ರಪತಿ

0

ಆಡಳಿತ ಪಕ್ಷ ಅಥವಾ ವಿರೋಧ ಪಕ್ಷವನ್ನು ಪ್ರತಿನಿಧಿಸುವ ಎಲ್ಲಾ ಎಂಪಿಗಳು ಸಂಸತ್ತಿನ ಘನತೆಯ ರಕ್ಷಕರು ಮತ್ತು ಸ್ಪರ್ಧೆಯಲ್ಲಿ ಪೈಪೋಟಿ ಇರಬೇಕೆ ಹೊರತು ಗೊಂದಲಗಳು ಇರಬಾರದು ಎಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ಸಂವಿಧಾನ ದಿನಾಚರಣೆ ಸಂದರ್ಭದಲ್ಲಿ ಈ ಅನಿಸಿಕೆ ವ್ಯಕ್ತಪಡಿಸಿದರು.


ಯಾವುದೇ ಭಿನ್ನಾಭಿಪ್ರಾಯಗಳು ಸಾರ್ವಜನಿಕ ಸೇವೆಯ ನಿಜವಾದ ಉದ್ದೇಶಕ್ಕೆ ಅಡ್ಡಿಯಾಗಬಾರದು. ಸ್ಥಾನವು ವಾಸ್ತವವಾಗಿ ಪ್ರಜಾಪ್ರಭುತ್ವದ ಪ್ರಮುಖ ಅಂಶವಾಗಿದೆ ಎಂದು ಅವರು ಹೇಳಿದರು. ಪರಿಣಾಮಕಾರಿ ವಿರೋಧವಿಲ್ಲದೆ, ಪ್ರಜಾಪ್ರಭುತ್ವವು ನಿಷ್ಪರಿಣಾಮಕಾರಿಯಾಗುತ್ತದೆ. ಸರ್ಕಾರ ಮತ್ತು ಪ್ರತಿಪಕ್ಷಗಳು ತಮ್ಮ ಭಿನ್ನಾಭಿಪ್ರಾಯಗಳ ಹೊರತಾಗಿಯೂ ನಾಗರಿಕರ ಹಿತದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರೆಸುತ್ತವೆ ಎಂದು ನಿರೀಕ್ಷಿಸಲಾಗಿದೆ. ನಮ್ಮ ಸಂವಿಧಾನ ತಯಾರಕರು ಇದನ್ನು ಕಲ್ಪಿಸಿದ್ದರು. ರಾಷ್ಟ್ರ ನಿರ್ಮಾಣಕ್ಕೆ ಇದು ಅಗತ್ಯವಾಗಿದೆ ಎಂದು ಅವರು ಹೇಳಿದರು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರು ಪೈಪೋಟಿ ನಡೆಸುವುದು ಸಹಜ ಆದರೆ ಈ ಸ್ಪರ್ಧೆಯು ಉತ್ತಮವಾಗಿ ಪ್ರತಿನಿಧಿಸುವ ಪ್ರಜೆಗಳು ಮತ್ತು ಸಾರ್ವಜನಿಕ ಒಳಿತಿಗಾಗಿ ಉತ್ತಮ ಕೆಲಸಗಳನ್ನು ಮಾಡುವ ಬಗ್ಗೆ ಯೋಚನೆ ಮಾಡಬೇಕು ಎಂದು ಕೊವಿಂದ್ ಹೇಳಿದರು. ಸಂಸತ್ತಿನ ಎಲ್ಲಾ ಸದಸ್ಯರು ಸಂಸತ್ತಿನ ಘನತೆಯ ರಕ್ಷಕರು, ಆಡಳಿತ ಪಕ್ಷ ಅಥವಾ ವಿರೋಧ ಪಕ್ಷವನ್ನು ಪ್ರತಿನಿಧಿಸುತ್ತಾರೆ. ಆದರೆ ಪ್ರಜಾಪ್ರಭುತ್ವಕ್ಕೆ ಯಾವುದೇ ತೊಂದರೆ ಉಂಟಾಗದಂತೆ ನಡೆದುಕೊಳ್ಳುವುದು ಎಲ್ಲರ ಕರ್ತವ್ಯ ಎಂದು ಅವರು ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಭಾರತೀಯ ಸಂಸದೀಯ ಗುಂಪು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದರು.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ಗ್ರಾಮ ಸಭೆ, ವಿಧಾನ ಸಭೆ ಮತ್ತು ಸಂಸತ್ತಿನ ಚುನಾಯಿತ ಪ್ರತಿನಿಧಿಗಳು ಒಂದೇ ಆದ್ಯತೆಯನ್ನು ಹೊಂದಿರಬೇಕು. ತಮ್ಮ ಕ್ಷೇತ್ರಗಳ ಎಲ್ಲಾ ಜನರ ಕಲ್ಯಾಣಕ್ಕಾಗಿ ಮತ್ತು ರಾಷ್ಟ್ರದ ಹಿತಾಸಕ್ತಿಗಾಗಿ ಕೆಲಸ ಮಾಡುವುದು ಏಕ ಆದ್ಯತೆಯಾಗಿದೆ ಎಂದು ರಾಷ್ಟ್ರಪತಿಯವರು ತಿಳಿಸಿದ್ದಾರೆ.

ಕಸಾಪ ಅಧ್ಯಕ್ಷರಾಗಿ ಡಾ.ಮಹೇಶ್ ಜೋಶಿ ಪದಗ್ರಹಣ.

0

ಕಸಾಪ ಅಧ್ಯಕ್ಷರನ್ನಾಗಿ ಮತದಾರರು ನನ್ನನ್ನು ಚುನಾಯಿಸಿದ್ದಾರೆ. ನನ್ನನ್ನು ಐದು ವರ್ಷಗಳ ಕಾಲ ಯಾರು ಅಲುಗಾಡಿಸವಾಗುವುದಿಲ್ಲ . ಬೇರೆ ಅಕಾಡೆಮಿ, ಸಂಸ್ಥೆಗಳಲ್ಲಾದರೆ ಸರಕಾರ ನೇಮಕ ಮಾಡುತ್ತದೆ. ಯಾವಾಗ ಬೇಕೋ ಆಗ ತೆಗೆಯುವ ಅಧಿಕಾರವು ಸರ್ಕಾರಕ್ಕೆ ಇರುತ್ತದೆ. ಆದರೆ ಕಸಾಪ ಅಧ್ಯಕ್ಷ ಸ್ಥಾನ ಅಂಥದಲ್ಲ ಎಂದು ಮಹೇಶ್ ಜೋಶಿ ತಿಳಿಸಿದರು.
ಕಸಾಪದ 26ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆಗಳಿಗೆ ಅಮೂಲಾಗ್ರ ಬದಲಾವಣೆ ತರಲು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತಜ್ಞರು ಸಮಿತಿ ರಚಿಸಲಾಗುವುದು. ಕಸಾಪ ಆಡಳಿತ ಮಂಡಳಿಗೆ 1915 ರಲ್ಲಿ ನಿಯಮಾವಳಿಗಳನ್ನು ಜಾರಿಗೆ ತರಲಾಯಿತು. ತದನಂತರ ತಿದ್ದುಪಡಿ ಮಾಡಿಲ್ಲ. ಇದರಲ್ಲಿ ಸಾಕಷ್ಟು ಲೋಪದೋಷಗಳಿವೆ. ಹೀಗಾಗಿ ನಿಬಂಧನೆ ಅಥವಾ ನಿಯಮಗಳನ್ನು ಅಮೂಲಾಗ್ರವಾಗಿ ಬದಲಾಯಿಸಬೇಕಾಗಿದೆ ಎಂದರು.
ಪರಿಷತ್ತಿನ ಗೌರವಕ್ಕೆ ಧಕ್ಕೆ ತರುವಂತಹ ಕೆಲಸ ಮಾಡಲು ಬಿಡುವುದಿಲ್ಲ. ಅಂತಹ ಸಂಗತಿಗಳು ನನ್ನ ಗಮನಕ್ಕೆ ಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಅಂತವರ ಸದಸ್ಯತ್ವವನ್ನು ಮೂರು ವರ್ಷಗಳ ಕಾಲ ಅಮಾನತು ಮಾಡಲಾಗುವುದು ಜೋಶಿ ತಿಳಿಸಿದರು.
ಕಸಾಪಗೆ ದೊಡ್ಡ ಇತಿಹಾಸವಿದೆ. ಈ ಸಂಸ್ಥೆಗೆ ನನ್ನ ಪತಿ ಚುನಾಯಿತರಾಗಿರುವುದು ಖುಷಿಯ ವಿಚಾರ. ಅವರು ರಾಜ್ಯಕ್ಕೆ, ಭಾಷೆಗೆ ಪ್ರತಿನಿಧಿಯಾಗಿದ್ದಾರೆ. ಅವರದ್ದು ಹೋರಾಟದ ಮನೋಭಾವ. ಹೀಗಾಗಿ ಅವರನ್ನು ಸಮಾಜಕ್ಕೆ ಮುಡುಪಾಗಿಟ್ಟಿದ್ದೇವೆ. ಅದಕ್ಕೆ ನಮ್ಮ ಕುಟುಂಬದ ಎಲ್ಲರೂ ಸಹಕಾರ ನೀಡುತ್ತೇವೆ ಎಂದು ಮಹೇಶ್ ಜೋಶಿ ಅವರ ಪತ್ನಿ ಮಾಲತಿ ಜೋಶಿಯವರು ಹೇಳಿದ್ದಾರೆ.

ಜನೌಷಧಿ ಕೇಂದ್ರ : ಅರ್ಜಿ ಆಹ್ವಾನ

0

ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರ ಪ್ರಾರಂಭಿಸುವ ಬಗ್ಗೆ ಸರಕಾರ ಆದೇಶ ಹೊರಡಿಸಿದೆ.
ಈ ಕುರಿತು, ಅರ್ಹ ಸರ್ಕಾರೇತರ ಸಂಸ್ಥೆಗಳು, ದತ್ತಿ ಸಂಸ್ಥೆಗಳು, ನಿರುದ್ಯೋಗ ಯುವಕರು, ಪದವಿ ಫಾರ್ಮಾಸಿಸ್ಟ್ ಗ ಗಮನಕ್ಕೆ ತರುವ ಉದ್ದೇಶದಿಂದ ಪತ್ರಿಕೆಯಲ್ಲಿ ಪ್ರಕಟಣೆ ನೀಡುವಂತೆ ತಿಳಿಸಲಾಗಿದೆ. ಅರ್ಜಿಗಳನ್ನು ಆರೋಗ್ಯ ಇಲಾಖೆ ನಿರ್ದೇಶನಾಲಯಕ್ಕೆ ಕಳುಹಿಸಿಕೊಡಲು ಸೂಚಿಸಲಾಗಿದೆ.
ಈಗಾಗಲೇ ಕೆಲವು ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಜನೌಷಧ ಮಳಿಗೆ ತೆರೆಯಲಾಗಿದೆ. ಇನ್ನುಳಿದ ಜಿಲ್ಲಾ, ತಾಲ್ಲೂಕಾ ಸಮುದಾಯ ಹಾಗೂ ಪ್ರಾರ್ಥಮಿಕ ಆರೋಗ್ಯ ಕೇಂದ್ರದಲ್ಲಿ ಮಳಿಗೆ ತೆರೆಯಲು ಸರ್ಕಾರ ಉದ್ದೇಶಿಸಿದ್ದು, ಈ ಕುರಿತು ಸುತ್ತೋಲೆ ಹೊರಡಿಸಿದೆ.

ಗುತ್ತಿಗೆ ಕಮಿಷನ್ ಆರೋಪ: ಹೆಸರು ಬಹಿರಂಗಮಾಡಿ

0

ಗುತ್ತಿಗೆದಾರರಿಂದ ಶೇ.40 ರಷ್ಟು ಲಂಚ ಪಡೆದವರ ಹೆಸರನ್ನು ಗುತ್ತಿಗೆದಾರರ ಸಂಘದವರು ದಾಖಲೆ ಸಮೇತ ಬಹಿರಂಗಪಡಿಸಬೇಕು ಎಂದು ರಾಜ್ಯ ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ ಅವರು ತಿಳಿಸಿದ್ದಾರೆ.

ಗುತ್ತಿಗೆದಾರರ ಸಂಘದವರು ದೂರಿನಲ್ಲಿ ಖಚಿತವಾದ ವಿವರಗಳಿಲ್ಲ. ಶೇ.40 ರಷ್ಟು ಲಂಚ ಕೊಡಲಾಗುತ್ತಿದೆ ಎಂಬ ದೂರನ್ನು ಯಾರು ಒಪ್ಪಲಿಕ್ಕೆ ಸಾಧ್ಯವಾಗುವುದಿಲ್ಲ. ನಿಜವಾಗಿಯೂ ಹಣ ಕೊಟ್ಟಿದ್ದರೆ ಗುತ್ತಿಗೆದಾರರೇ ಬಹಿರಂಗಪಡಿಸಲಿ. ಲಂಚ ಪಡೆದಿರುವ ಯಾರೇ ಸಚಿವರಾಗಲಿ ಅವರ ಹೆಸರನ್ನು ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಗುತ್ತಿಗೆದಾರರ ಸಂಘದ ದೂರಿನ ಹಿನ್ನೆಲೆ ಯಾವುದೋ ತಂತ್ರ ಇದ್ದಂತೆ ಕಾಣಿಸುತ್ತಿದೆ. ಈ ಆರೋಪಗಳಿಗೆ ಯಾವುದೇ ಆಧಾರಗಳಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶೇ.10ರಷ್ಟು ಲಂಚ ಪಾವತಿ ಯಾಗುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ಈಗ ಅದೇ ರೀತಿ ಆರೋಪ ಮಾಡುತ್ತಿರುವ ಬಗ್ಗೆ ಅನುಮಾನ ಇದೆ ಎಂದು ರಾಜ್ಯ ಲೋಕೋಪಯೋಗಿ ಸಚಿವ ಸಿಸಿ ಪಾಟೀಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.