Monday, February 16, 2026
Monday, February 16, 2026
Home Blog Page 1732

Honey ಇಂದ Money

0

ಆ್ಯಂಕರ್ : ವೀಕ್ಷಕರೆ ನಿಮಗೆಲ್ಲಾ ನಮಸ್ಕಾರ ನಾನು ಅಶ್ವಿನಿ ನಾಯಕ ನಿಮಗೆಲ್ಲ ಕೆ-ಲೈವ್ ಯುಟ್ಯೂಬ್ ಚಾನೆಲ್ ಗೆ ಸ್ವಾಗತ.

ಇಂದಿನ ವಿಶೇಷ ಕಾರ್ಯಕ್ರಮ Hony ಇಂದಾ Mony

ಅಬ್ಬಾ..!! ಅಲ್ಲೆಲ್ಲಾ ಜೇನುನೊಣಗಳ ಝೇಂಕಾರ… ಮೂಗಿಗೆ ಬಡಿಯುತ್ತಿರುವ ಜೇನುತುಪ್ಪದ ಸುವಾಸನೆ..(.ವಿ ) ಸುಂದರ ಪ್ರಕೃತಿಯ ಮಧ್ಯೆ ನೂರಾರು ಜೇನುಪೆಟ್ಟಿಗೆಗಳು…(. ) ಜೇನಿನ ಲೋಕದಲ್ಲಿ ವಿಹರಿಸಿದ ಅನುಭವ..(ಜೇನು ಪೆಟ್ಟಿಗೆ ಫೋಟೋ) ಇವನ್ನೆಲ್ಲಾ ನೀವೂ ನೋಡ್ಬೇಕಾ…? ಹಾಗಾದ್ರೆ ಬನ್ನಿ ಸೊರಬದ ನಿಸರಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲಕಾಲುಕೊಪ್ಪ ಎಂಬ ಪುಟ್ಟ ಊರಿಗೆ.(. ವಿ) ಅತಿಥಿ ಉಪನ್ಯಾಸಕ ವೃತ್ತಿ ಬದುಕಿನ ಜೊತೆ ಜೇನು ಕೃಷಿಗೆ ಕೈ ಜೋಡಿಸಿರುವ ಆ ಯುವ ರೈತನ ಯಶೋಗಾಥೆ. ವೀಕ್ಷಕರೆ ನಮಗೆಲ್ಲ ತಿಳಿದಿರುವ ಹಾಗೆ ಇತ್ತೀಚೆಗೆ ಹನಿಟ್ರ್ಯಾಪ್ ಬಹಳ ಸುದ್ದಿ ಮಾಡುತ್ತಿದೆ ಆದರೆ ಬೆವರು ಸುರಿಸಿ ಹನಿಯಿಂದ ಮನಿ ಟ್ರ್ಯಾಪ್ ಮಾಡೋದನ್ನ ವಿಘ್ನೇಶ್ ಅವರಿಂದ ತಿಳ್ಕೊಳೋಣ. ಲಾಕ್ ಡೌನ್ ವೇಳೆ ಈತ ಮಾಡಿದ ಜೇನು ಕೃಷಿಯ ಕಥೆ ನಾವ್ ಹೇಳ್ತಿವಿ ನೋಡಿ….(ಜೇನುಕೃಷಿ ವಿಡಿಯೋ)

ವಾಯ್ಸ್ ಓವರ್ 1: ಹೌದು.. ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಪುಟ್ಟಗ್ರಾಮ ತಲಕಾಲುಕೊಪ್ಪ.(ವಿ) ಸಾಗರ ಲಾಲ್ ಬಹದ್ದೂರ್ ಕಾಲೇಜಿನಲ್ಲಿ ಎಂಕಾಂ ಮುಗಿಸಿ ಸೊರಬದ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವ ವಿಘ್ನೇಶ್ ಜೇನು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. (ವಿಘ್ನೇಶ್ ಫೋಟೋ, ವಿ) ಕೋವಿಡ್ ಲಾಕ್ ಡೌನ್ ನಿಂದಾಗಿ ಹಲವರು ಕೆಲಸಗಳನ್ನು ತೊರೆದು ಹಳ್ಳಿಗಳತ್ತ ಮುಖ ಮಾಡಿದ್ದರು. ಇವರು ಪ್ರವೃತ್ತಿ 20 ವರ್ಷದಿಂದಲೂ ಜೇನುಕೃಷಿ. ಆದರೆ ಲಾಕ್ ಡೌನ್ ಸಮಯದಲ್ಲಿ ವಿಘ್ನೇಶ್ ಅವರು ಕಂಗೆಡದೆ ಜೇನುಕೃಷಿಯತ್ತ ಮುಖ ಮಾಡಿ ಯಶಸ್ಸಿನ ದಾರಿ ಹಿಡಿದು ಯುವಕರಿಗೆ ಮಾದರಿಯಾಗಿದ್ದಾರೆ.(ವಿ) ವಿಘ್ನೇಶ್ ಅವರು ಬಳಿ 31 ಗುಂಟೆ ಜಮೀನಿದೆ. ಪ್ರಾರಂಭದಲ್ಲಿ 30 ಜೇನುಪೆಟ್ಟಿಗೆಗಳಿಂದ ಆರಂಭವಾದ ಇವರ ಕೆಲಸ, 370 ಜೇನುಪೆಟ್ಟಿಗೆಗಳನ್ನ ಮುಟ್ಟಿದೆ(ವಿಡಿಯೋ, ಜೇನು ಪೆಟ್ಟಿಗೆ). ಇವರು ಇಲ್ಲಿಯವರೆಗೆ ಸಾವಿರಕ್ಕೂ ಅಧಿಕ ರೈತರಿಗೆ ಜೇನು ಕೃಷಿಯ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದಾರೆ. (ಜೇನು ಕೃಷಿ ತರಬೇತಿ ವಿಡಿಯೋ) ಇವರಿಂದ ಪ್ರೇರಿತರಾದ ರೈತರು ಇವರಿಂದ ಜೇನುಪೆಟ್ಟಿಗೆಗಳನ್ನ ಕೊಂಡೊಯ್ದಿದ್ದಾರೆ. ಅಷ್ಟೆ ಅಲ್ಲದೆ ಜೇನು ಕೃಷಿ ಕುರಿತು ಅತಿ ಹೆಚ್ಚು ಆಸಕ್ತಿ ನೀಡುವುದಲ್ಲದೆ ಇತರೆ ರೈತರಿಗೂ ಜೇನು ಕೃಷಿ ಕುರಿತು ಅಧ್ಯಯನ‌ ಶಿಬಿರವನ್ನೂ ಮಾಡುತ್ತಿದ್ದಾರೆ.

ಜೇನುನೊಣಗಳು ಪರಿಸರದಲ್ಲಿನ ಸಸ್ಯಗಳಿಗೆ ಸಂಬಂಧಿಸಿದಂತೆ ಪರಾಗಸ್ಪರ್ಶ ಉಂಟುಮಾಡುವಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ ಎಂಬುದನ್ನು ಸಸ್ಯವಿಜ್ಞಾನಿ ಕೆಂಗ್ ಲೋ ಜೇಮ್ಸ್ ಹಂಗ್ ಅವರು ಹೇಳಿದ್ದಾರೆ.

ಪರಿಸರದ ಸಮೃದ್ಧಿಯಲ್ಲಿ ಜೇನುನೊಣಗಳ ಪಾತ್ರ ಬಹಳ ಹಿರಿದಾಗಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ವಿಘ್ನೇಶ್ ರೈತರಿಗೆ ತಿಳಿಸುತ್ತಾರೆ.(ವಿಡಿಯೋ) …

ತೋಟಗಾರಿಕೆ ಇಲಾಖೆಗೆ ಅಧಿಕೃತವಾಗಿ ಜೇನು ಸಾಕಾಣಿಕೆ ಉಪಕರಣಗಳು ಹಾಗೂ ಜೇನುಗೂಡು ಸರಬರಾಜು ಕೂಡ ಮಾಡುತ್ತಾರೆ. ರಾಜ್ಯದಲ್ಲಿ 19 ಜನರನ್ನು ಜೇನುಕೃಷಿಯಲ್ಲಿ ಪರಿಗಣಿಸಿದ್ದಾರೆ ಅದರಲ್ಲಿ ನಾನು ಕೂಡ ಒಬ್ಬ ಎಂದು ಹೇಳುತ್ತಾರೆ ವಿಘ್ನೇಶ್.

ಬೈಟ್: ವಿಘ್ಬೇಶ್. ಜೇನು ಕೃಷಿಕ

ವಾಯ್ಸ್ ಓವರ್ ೨: ಜಿಲ್ಲೆಯಲ್ಲಿ ಜೇನು ಕೃಷಿಯನ್ನು ಪ್ರಾರಂಭಿಸಿವರಲ್ಲಿ ವಿಘ್ನೇಶ್ ಅವರು ಮೊದಲಿಗರು. ಶಿವಮೊಗ್ಗ ತೋಟಗಾರಿಕೆ ಇಲಾಖೆಯಿಂದ ವಾರಕ್ಕೆ ಒಂದು ಬ್ಯಾಚ್ ನಂತೆ ಜಿಲ್ಲೆಯ ನಾನಾ ಭಾಗಗಳಿಂದ ರೈತರು ಅವರ ಬಳಿ ಜೇನು ಕೃಷಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲು ಬರುತ್ತಾರೆ. ಈ ಮೂಲಕ ಜೇನುಕೃಷಿಯನ್ನು ಮುಂದುವರೆಸುತ್ತಿದ್ದಾರೆ. ಕಡಿಮೆ ಖರ್ಚಿನಲ್ಲಿ ಆದಾಯ ಗಳಿಸಲು ಸಾಧ್ಯ ಎಂಬುದಕ್ಕೆ ವಿಘ್ನೇಶ್ ಅವರು ರೈತರಿಗೆ ಮಾದರಿಯಾಗಿದ್ದಾರೆ.

ಬೈಟ್ ೨: ತೋಟಗಾರಿಕೆ ಇಲಾಖೆ.

ಆ್ಯಂಕರ್….: ಒಟ್ಟಾರೆ ರಾಜ್ಯದಲ್ಲಿ ಲಾಕ್ ಡೌನ್ ಹಲವರನ್ನ ಬೀದಿಗೆ ಬೀಳಿಸಿದ್ರೆ, ಇನ್ನೊಂದೆಡೆ ಇಂತಹ ಕೃಷಿಗೆ ಒತ್ತು ಕೊಡುವಲ್ಲಿ ಯುವ ಸಮೂಹ ಹೆಜ್ಜೆ ಇಟ್ಟಿರುವುದು ಸಂತಸ ತಂದಿದೆ. ಸದ್ಯ ಅತಿಥಿ ಉಪನ್ಯಾಸಕರಾಗಿ ವೃತ್ತಿ ಬದುಕು ರೂಪಿಸಿಕೊಂಡ ವಿಘ್ನೇಶ್ ಇದೀಗ ಜೇನುಕೃಷಿಯತ್ತ ಮುಖ ಮಾಡಿ ರೈತರಿಗೆ ಹಾಗೂ ಯುವಕರಿಗೆ ಮಾದರಿಯಾಗಿದ್ದಾರೆ. ಇವರ ಈ ಯಶಸ್ಸು ಹೀಗೆ ಮುಂದುವರೆಯಲಿ ಎಂಬುವುದೇ ಕೆ-ಲೈವ್ ಮೀಡಿಯಾದ ಆಶಯವಾಗಿದೆ.

ಈ ಕಾರ್ಯಕ್ರಮ ನಿಮಗೆ ಇಷ್ಟ ಆಯ್ತಲ್ಲ ಹಾಗಿದ್ರೆ ಲೈಕ್ ಮಾಡಿ ಶೇರ್ ಮಾಡಿ ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿ.

ಮುಖ್ಯಮಂತ್ರಿ ರೈತ ವಿದ್ಯಾನಿಧಿ: ರೈತ ಕುಟುಂಬದ ಮಕ್ಕಳು ಅರ್ಹರು

0

ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಹೊಸ ಶಿಷ್ಯ ವೇತನ ಯೋಜನೆಯಾದ “ಮುಖ್ಯಮಂತ್ರಿ ರೈತ ವಿದ್ಯಾನಿಧಿ” ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದ್ದು ಜಿಲ್ಲೆಯಲ್ಲಿ ಜನವರಿ ಅಂತ್ಯದವರೆಗೆ ಒಟ್ಟು 12,611 ವಿದ್ಯಾರ್ಥಿಗಳಿಗೆ ರೂ. 3,25,05500/- ವಿದ್ಯಾರ್ಥಿವೇತನ ನೀಡಲಾಗಿದೆ.

ರೈತ ಕುಟುಂಬದ ಎಲ್ಲ ಮಕ್ಕಳು “ಮುಖ್ಯಮಂತ್ರಿ ರೈತ ವಿದ್ಯಾನಿಧಿ ” ವಿದ್ಯಾರ್ಥಿ ವೇತನ ಪಡೆಯಲು ಆರ್ಹರಾಗಿರುತ್ತಾರೆ. ರೈತ ಕುಟುಂಬ ಎಂದರೆ ರಾಜ್ಯದ ಈ-ಆಡಳಿತ ಇಲಾಖೆಯು ನಿರ್ವಹಿಸುತ್ತಿರುವ “ಕುಟುಂಬ” ತಂತ್ರಾಂಶದ ದತ್ತಾಂಶದಲ್ಲಿ ದಾಖಲಾಗಿರುವ ಸದಸ್ಯರಾಗಿದ್ದು, ವಿದ್ಯಾರ್ಥಿಯು ಯಾವುದೇ ವಿದ್ಯಾರ್ಥಿ ವೇತನ ಪಡೆಯತ್ತಿದ್ದರೂ, “ಮುಖ್ಯಮಂತ್ರಿ ರೈತ ವಿದ್ಯಾನಿಧಿ” ವಿದ್ಯಾರ್ಥಿವೇತನ ಪಡೆಯಲು ಆರ್ಹರಾಗಿರುತ್ತಾರೆ.

ಮುಖ್ಯಮಂತ್ರಿ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನವನ್ನು ವಿತರಿಸಲು ರಾಜ್ಯದ ವಿವಿಧ ಇಲಾಖೆಗಳು ನಿರ್ವಹಿಸುತ್ತಿರುವ ಶೈಕ್ಷಣಿಕ ಹಾಗೂ ಇತರೆ ದತ್ತಾಂಶ ಆಧಾರದ ಮೇಲೆ ಅರ್ಹ ಫಲಾನುಭವಿಗಳನ್ನು ಗುರತಿಸಲಾಗುವುದು. (On Entitlement Basis). ವಿದ್ಯಾರ್ಥಿಗಳು ನೇರವಾಗಿ ಅರ್ಜಿ ಸಲ್ಲಿಸಿದ್ದಲ್ಲಿ, ಅಂತಹ ಪ್ರಕರಣಗಳನ್ನು ಸಹ ಪರಿಗಣಿಸಿ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೇರ ನಗದು ವರ್ಗಾವಣೆ ಮೂಲಕ ಮಾಡಲಾಗುವುದು.

ಪದವಿ ಮುಂಚಿನ ಕೋರ್ಸ್ ಗಳು, ಪದವಿ, ವೃತ್ತಿಪರ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುವ ರೈತರ ಮಕ್ಕಳಿಗೆ ಈ ಕೆಳಕಂಡಂತೆ ಶಿಷ್ಯವೇತನ ನೀಡಲಾಗುವುದು.

ಕ್ರ. ಸಂ ಕೋರ್ಸ್ ನ ಹೆಸರು/ ವಿವಿಧ ಕೋರ್ಸ್ ಗಳು ಹುಡುಗರು/
ಪುರುಷರು ಹುಡುಗಿಯರು/ ಅನ್ಯ ಲಿಂಗದವರು
1 ಪದವಿಗೆ ಮುಂಚಿನ ಕೋರ್ಸ್ ಗಳು
ಪಿ.ಯು.ಸಿ/ಐ.ಟಿ.ಐ/ಡಿಪ್ಲೋಮಾ ರೂ.2500/- ರೂ.3000/-
2 ಎಲ್ಲ ಬಿ.ಎ/ಬಿ.ಎಸ್.ಸಿ/ಬಿ.ಕಾಂ ರೂ.5000/- ರೂ.5500/-
3 ಎಲ್.ಎಲ್.ಬಿ/ ಪ್ಯಾರಾ ಮೆಡಿಕಲ್/
ಬಿ.ಫಾರ್ಮ್/ ಇತ್ಯಾದಿ ವೃತ್ತಿಪರ ಕೋರ್ಸ್‍ಗಳು ರೂ.7500/- ರೂ.8000/-
4 ಎಂ.ಬಿ.ಬಿ.ಎಸ್/ಬಿ.ಇ/ ಬಿ.ಟೆಕ್/ ಮತ್ತು
ಎಲ್ಲಾ ಸ್ನಾತಕೋತ್ತರ ಕೋರ್ಸ್ ಗಳು ರೂ.10000/- ರೂ.11000/-

ಪ್ರೌಢಶಾಲಾ ಹೆಣ್ಣುಮಕ್ಕಳಿಗೂ ವಿದ್ಯಾನಿಧಿ : ದಿನಾಂಕ 10-12-2021 ಆದೇಶ ಸಂಖ್ಯೆ AGRI-AML/141/2021 ಮೂಲಕ 8 ರಿಂದ 10 ನೇ ತರಗತಿಯಲ್ಲಿ ಓದುತ್ತಿರುವ ರೈತರ ಹೆಣ್ಣು ಮಕ್ಕಳಿಗೂ ಸಹ ವಾರ್ಷಿಕವಾಗಿ ರೂ.2000/- ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.

ಈ ಶಿಷ್ಯ ವೇತನವನ್ನು ಯಾವುದಾದರು ಒಂದು ವಿಧದ ಕೋರ್ಸ್ ಗೆ ನೀಡಲಾಗುವುದು. ಉದಾಹರಣೆಗೆ ಸ್ನಾತಕೋತ್ತರ ಪದವಿ ಪೂರೈಸಿದ ನಂತರ ಕೂಡ ಬೇರೆ ವಿಷಯದಲ್ಲಿ ಸ್ನಾತಕೋತ್ತರ ಪದವಿಗೆ ಮತ್ತೆ ಪ್ರವೇಶಾತಿ ಪಡೆದರೆ ಆ ವಿದ್ಯಾರ್ಥಿ ಮತ್ತೆ ಶಿಷ್ಯ ವೇತನವನ್ನು ಪಡೆಯಲು ಅರ್ಹರಾಗುವುದಿಲ್ಲ.

ಜಿಲ್ಲೆಯಲ್ಲಿ ಜನವರಿ ಅಂತ್ಯದವರೆಗೆ ಒಟ್ಟು 12,611 ವಿದ್ಯಾರ್ಥಿಗಳಿಗೆ (ಹೊಸನಗರ 945, ಶಿವಮೊಗ್ಗ 3131, ಶಿಕಾರಿಪುರ 2404, ಭದ್ರಾವತಿ 1452, ತೀರ್ಥಹಳ್ಳಿ 906, ಸೊರಬ 1866 ಮತ್ತು ಸಾಗರ 1907) ಒಟ್ಟು ರೂ. 3,25,05500/- ಮೊತ್ತ ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿಗಳಿಗೆ ನೇರ ನಗದು ವರ್ಗಾವಣೆ ಮೂಲಕ ಜಮೆ ಮಾಡಲಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕ ಡಾ.ಕಿರಣ್‍ಕುಮಾರ್ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪುಸ್ತಕ ಬಹುಮಾನ ನೀಡಲು ಅರ್ಜಿ ಆಹ್ವಾನ

0

ಕರ್ನಾಟಕ ಯಕ್ಷಗಾನ ಅಕಾಡೆಮಿಯು ಯಕ್ಷಗಾನ (ತೆಂಕು, ಬಡಗು ಬಡಾಬಡಗು, ಯಕ್ಷಗಾನ ಗೊಂಬೆಯಾಟ), ಮೂಡಲಪಾಯ ಯಕ್ಷಗಾನ, ಕೇಳಿಕೆ, ಘಟ್ಟದಕೋರೆ ಮತ್ತು ತಾಳಮದ್ದಲೆ, ಇತ್ಯಾದಿ ಕಲಾಪ್ರಕಾರಗಳಲ್ಲಿ 2019ನೇ ಸಾಲಿನ ದಿ: 1.1.2019 ರಿಂದ 31.12.2019 ರ ಒಳಗೆ ಪ್ರಕಟಿಸಿರುವ ಪುಸ್ತಕಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲು ಲೇಖಕರಿಂದ/ಪ್ರಕಾಶಕರಿಂದ ಅರ್ಜಿ ಆಹ್ವಾನಿಸಿದೆ.

ಆಯ್ಕೆಯಾದ ಪುಸ್ತಕಕ್ಕೆ ರೂ.25,000/-ಗಳ ಬಹುಮಾನವನ್ನು ನೀಡಲಾಗುವುದು.ಯಕ್ಷಗಾನದ ವಿವಿಧ ಆಯಾಮಗಳ ಬಗ್ಗೆ ಸಂಗೀತ, ಆಹಾರ್ಯ, ಅಭಿನಯ, ಸಂಶೋಧನೆ, ವಿಮರ್ಶೆ, ಜೀವನಚರಿತ್ರೆ, ಪ್ರಸಂಗ ಪುಸ್ತಕ ಇತ್ಯಾದಿ ಪ್ರಕಾರಗಳನ್ನು ಒಳಗೊಂಡ ಪುಸ್ತಕಗಳನ್ನು ಬಹುಮಾನಕ್ಕಾಗಿ ಆಹ್ವಾನಿಸಿದೆ.

ಅರ್ಜಿ ಸಲ್ಲಿಸಲು ಫೆ.23 ಅಂತಿಮ ದಿನವಾಗಿದ್ದು, ಪುಸ್ತಕ ಬಹುಮಾನಕ್ಕೆ ಸಲ್ಲಿಸುವ ಪುಸ್ತಕವನ್ನು ಪಠ್ಯಕ್ಕಾಗಿ ಸಿದ್ಧಪಡಿಸಿರಬಾರದು. ಸಂಪಾದಿತ, ಅಭಿನಂದನ ಕೃತಿಯಾಗಿರಬಾರದು, ಸ್ವರಚಿತವಾಗಿರಬೇಕು. ಪ್ರಥಮ ಮುದ್ರಣ ಆವೃತ್ತಿಯಾಗಿರಬೇಕು.

ಬಹುಮಾನಕ್ಕೆ ಪುಸ್ತಕಗಳನ್ನು ಕಳುಹಿಸುವವರು ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕನ್ನಡ ಭವನ, ಎರಡನೇ ಮಹಡಿ, ಚಾಲುಕ್ಯ ವಿಭಾಗ, ಜೆ.ಸಿ.ರಸ್ತೆ, ಬೆಂಗಳೂರು 560 002, ಇವರಿಗೆ ಅರ್ಜಿಯೊಂದಿಗೆ ಪುಸ್ತಕದ ನಾಲ್ಕು ಪ್ರತಿಗಳನ್ನು ಕಡ್ಡಾಯವಾಗಿ ಕಳುಹಿಸುವುದು. ಯಾವುದೇ ಕಾರಣಕ್ಕೂ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ. ಅರ್ಜಿಯನ್ನು ಅಕಾಡೆಮಿ ಕಚೇರಿಯಲ್ಲಿ ಮತ್ತು ಆಯಾ ಜಿಲ್ಲೆಯ ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇಲ್ಲಿ ಹಾಗೂ ಹೆಚ್ಚಿನ ವಿವರಗಳನ್ನು ಕಚೇರಿಯ ವೇಳೆಯಲ್ಲಿ ಅಕಾಡೆಮಿಯ ದೂ ಸಂ: 080-22113146 ಮೂಲಕ ಪಡೆಯಬಹುದು ಎಂದು ಅಕಾಡೆಮಿಯ ರಿಜಿಸ್ಟ್ರಾರ್ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಏಕದಿನ ಕ್ರಿಕೆಟ್ವೆಸ್ಟ್ ಇಂಡೀಸ್ ವಿರುದ್ಧ ಭಾರತ ಜಯ

0

ಭಾರತ ತಂಡವು ಭಾನುವಾರ ಆಡಿದ 1000ದ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯಕ್ಕೆ ರೋಹಿತ್ ಶರ್ಮಾ ಬಳಗವು ಗೆಲುವಿನ ಮೆರುಗು ತಂದಿದೆ.

ಮೋಟೆರಾದ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು 6 ವಿಕೆಟ್ ಗಳಿಂದ ವೆಸ್ಟ್ ಇಂಡಿಯಾ ವಿರುದ್ಧ ಜಯಗಳಿಸಿದೆ.

ಟಾಸ್ ಗೆದ್ದ ಅತಿಥೇಯ ತಂಡವು ಫೀಲ್ಡಿಂಗ್ ಆಯ್ಕೆಮಾಡಿಕೊಂಡು ವೆಸ್ಟ್ ಇಂಡೀಸ್ ಬ್ಯಾಟರ್ ಗಳನ್ನು 176 ರನ್ಗಳಿಗೆ ನಿಯಂತ್ರಿಸಿತು. ಗುರಿ ಬೆನ್ನತ್ತಿದ ರೋಹಿತ್ ಬಳಗ 28 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 178 ರನ್ ಗಳಿಸಿತು. ಪ್ರವಾಸಿ ಬಳಗ ವಾಷಿಂಗ್ಟನ್ ಸುಂದರ್ ಹಾಗೂ ಚಹಾಲ್ ದಾಳಿಯ ಮುಂದೆ 79 ರನ್ ಗಳಿಗೆ ಏಳು ವಿಕೆಟ್ ಗಳನ್ನು ಕಳೆದುಕೊಂಡಿತು. ಈ ಹಂತದಲ್ಲಿ ಜೇಸನ್ ಹೋಲ್ಡರ್ ದಿಟ್ಟತನದಿಂದ ಆಡಿದರು.

ಸ್ಪಿನ್ನರ್ ಗಳು ಮತ್ತು ಮಧ್ಯಮ ವೇಗಿ ಸಿರಾಜ್ ಅವರ ಶಿಸ್ತಿನ ಬೌಲಿಂಗ್ ಅನ್ನು ಎದುರಿಸಿದ ಹೋಲ್ಡರ್ ಅರ್ಧಶತಕ ಗಳಿಸಿದರು. ಅವರಿಗೆ ಫ್ಯಾಬಿಯನ್ ಅಲೆನ್ 29ರನ್ ಉತ್ತಮ ಜೊತೆ ನೀಡಿದರು. ಇಬ್ಬರ ಜೊತೆಯಾಟ ಮುರಿದರು.ಹೋಲ್ಡರ್ ಆಟಕ್ಕೆ ಕನ್ನಡಿಗ ಪ್ರಸಿದ್ಧ ಕೃಷ್ಣ ತಡೆಯೊಡ್ಡಿದರು. ರಿಷಭ್ ಪಂತ್ ಪಡೆದ ಅಮೋಘ ಕ್ಯಾಚ್ ಗೆ ಹೋಲ್ಡರ್ ಔಟದರು.

ಆದರೆ ಮೊತ್ತ ಬೆನ್ನತ್ತಿದ್ದ ಭಾರತದ ತಂಡ ರೋಹಿತ್ ಹಾಗೂ ಇಶಾನ್ ಕಿಶನ್ ಜೋಡಿಯ ಉತ್ತಮ ಆರಂಭ ನೀಡಿತು. ಮೊದಲ ವಿಕೆಟ್ ಜೊತೆಯಾಟದಲ್ಲಿ ಇವರಿಬ್ಬರು 84 ರನ್ ಸೇರಿಸಿದರು.

ವಿಂಡೀಸ್ ಬೌಲರ್ ಅಲ್ಜರಿ ಜೋಸೆಫ್ ಭಾರತ ತಂಡಕ್ಕೆ ಸುಲಭ ಜಯ ಸಿಗದಂತೆ ಮಾಡಲು ಪ್ರಯತ್ನಿಸಿದರು. ಅವರು 14ನೇ ಓವರ್ ನಲ್ಲಿ ರೋಹಿತ್ ವಿಕೆಟ್ ಗಳಿಸಿ, ಜೊತೆ ಆಟ ಮುರಿದರು. ಅದೇ ಓವರ್ನಲ್ಲಿ ವಿರಾಟ್ ಕೊಹ್ಲಿಯನ್ನು ಪೆವಿಲಿಯನ್ ಗೆ ಮರಳುವಂತೆ ಮಾಡಿದರು. ಔಟಾಗುವ ಎರಡು ಬೌಂಡರಿ ಬಾರಿಸಿದ ವಿರಾಟ್, ತವರಿನಲ್ಲಿ 5000 ರನ್ ಗಳಿಸಿದ ಸಾಧನೆ ಮಾಡಿದರು.

ಸಚಿನ್ ತೆಂಡೂಲ್ಕರ್ ಅವರ ನಂತರ ಈ ಸಾಧನೆ ಮಾಡಿದ ಭಾರತದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆ ವಿರಾಟ್ ಅವರದ್ದಾಗಿದೆ.

ಇಶಾನ್ ಕಿಶಾನ್ ಔಟಾದ ಕೆಲವೇ ಕೆಲವು ಹೊತ್ತಿನಲ್ಲಿ ರಿಷಬ್ ಪಂತ್ ಕೂಡ ರನ್ ಔಟ್ ಆದರು. ಈ ಹೊತ್ತಿನಲ್ಲಿ ತುಸು ಆತಂಕ ಮೂಡಿತ್ತು. ಆದರೆ ಸೂರ್ಯಕುಮಾರ್ ಯಾದವ್ ಮತ್ತು ದೀಪಕ್ ಹೂಡಾ ಅಜೇಯ ಜೊತೆ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮೂವರು ಪಾಕ್ ಡ್ರಗ್ ಪೆಡ್ಲರ್ ಗಳ ಹತ್ಯೆ

0

ಮಾದಕ ವಸ್ತುಗಳನ್ನು ಗೌಪ್ಯವಾಗಿ ಅಂತಾರಾಷ್ಟ್ರೀಯ ಗಡಿಯ ಒಳಗೆ ಸಾಗಿಸಲು ಯತ್ನಿಸಿದ ಪಾಕಿಸ್ತಾನದ ಮೂವರು ನುಸುಳುಕೋರರನ್ನು ಗಡಿ ಭದ್ರತಾ ಪಡೆ ಯೋಧರು ಗುಂಡಿಕ್ಕಿ ಹತ್ಯೆಗೈದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಸಾಂಬಾ ಸೆಕ್ಟರ್ ನಲ್ಲಿ ಭಾನುವಾರ ನಸುಕಿನಲ್ಲಿ ಘಟನೆ ನಡೆದಿದೆ. ಮೃತ ನುಸುಳುಕೋರರ ಬಳಿಯಿದ್ದ ಹಲವು ಪ್ಯಾಕೆಟ್ ಗಳಲ್ಲಿ ಒಟ್ಟಾರೆ 180 ಕೋಟಿ ರೂ. ಮೌಲ್ಯದ 36.ಕೆ.ಜಿ. ಹೆರಾಯಿನ್ ವಶಕ್ಕೆ ಪಡೆಯಲಾಗಿದೆ.

ಇದು ಈ ವರ್ಷದ ನಾಲ್ಕನೇ ಡ್ರಗ್ಸ್ ಸಾಗಣೆ ವಿರುದ್ಧ ಯಶಸ್ವಿ ಕಾರ್ಯಾಚರಣೆ, ದೊಡ್ಡ ಮೊತ್ತದ ಮಾದಕ ವಸ್ತುಗಳು ಜಮ್ಮು ಮತ್ತು ಕಾಶ್ಮೀರದ ಯುವಕರ ಕೈಗೆ ಸಿಗದಂತೆ ಬಿಎಸ್ಎಫ್ ತಡೆದಿದೆ.
ಇದುವರೆಗೂ ಒಟ್ಟಾರೆ 9 ಪಾಕಿಸ್ತಾನಿ ನುಸುಳುಕೋರರನ್ನು ಹತ್ಯೆ ಗೈಯಲಾಗಿದೆ ಎಂದು ತಿಳಿದುಬಂದಿದೆ.

ಮಾದಕ ವಸ್ತುಗಳ ಜೊತೆಗೆ ಒಂದು ಪಿಸ್ತೂಲ್, ಒಂಬತ್ತು ಸುತ್ತು ಹಾರಿಸಬಲ್ಲಷ್ಟು ಗುಂಡುಗಳು ಗುಂಡುಗಳು, ಒಂದು ಸಣ್ಣ ಕತ್ತಿ, ಪಾಕಿಸ್ತಾನದಲ್ಲಿ ತಯಾರಾದ ಕೆಮ್ಮಿನ ಔಷಧ ಬಾಟಲಿ , ಸುಮಾರು ಒಂಬತ್ತು ಸಾವಿರ ರೂಪಾಯಿ ಪಾಕಿಸ್ತಾನ ಕರೆನ್ಸಿ ಮೃತರ ಬಳಿ ಸಿಕ್ಕಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಾಯಚೂರು ಕೃಷಿ ವಿವಿ ಎಫ್ಎಂ ಕೇಂದ್ರಪ್ರಾರಂಭಕ್ಕೆ ಸಜ್ಜು

0

ರಾಯಚೂರು ಕೃಷಿ ವಿಶ್ವವಿದ್ಯಾಲಯವು ಕಲ್ಯಾಣ ಕರ್ನಾಟಕ ರೈತರ ಕೃಷಿಗೆ ನೇರವಾಗುವ ನಿಟ್ಟಿನಲ್ಲಿ ಈಗ ತನ್ನದೇ ಆದ ಬಾನುಲಿ ಕೇಂದ್ರವನ್ನು ಪ್ರಾರಂಭಿಸಲು ಸಜ್ಜಾಗಿದೆ.

ಕೇಂದ್ರ ಸರ್ಕಾರದ ಜೊತೆಗೆ ಮಾರ್ಚ್ನಲ್ಲಿ ಒಪ್ಪಂದ ಮಾಡಿಕೊಳ್ಳುವ ಕಾರ್ಯಕ್ಕೆ ಚಾಲನೆ ಸಿಗಲಿದೆ. ರೈತರಿಗೆ ನಿರಂತರವಾಗಿ ಮಾಹಿತಿ ರವಾನಿಸುತ್ತಿರುವುದೆ. ವಿಶ್ವವಿದ್ಯಾಲಯ ಸ್ವಂತ ಆಕಾಶವಾಣಿ ಕೇಂದ್ರದ ಆರಂಭಕ್ಕೆ ಸಿದ್ಧತೆ ನಡೆಸಿದೆ.

ರೈತರಿಗೆ ಕೃಷಿ ವಿಜ್ಞಾನಿಗಳು ಕೈಗೊಳ್ಳುವ ಆವಿಷ್ಕಾರವನ್ನು ತಲುಪಿಸುವುದು ಬಾನುಲಿ ಕೇಂದ್ರ ಸ್ಥಾಪನೆಯ ಉದ್ದೇಶವಾಗಿದೆ.

ಸದ್ಯಕ್ಕೆ 40 ಸಾವಿರಕ್ಕೂ ಹೆಚ್ಚಿನ ರೈತರ ಮೊಬೈಲ್ ಮೂಲಕ ಮಾಹಿತಿ ರವಾನಿಸುವ ಕಾರ್ಯ ನಡೆದಿದೆ. ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಆಮೇಲೆ ಹಾಗೂ ಬೆಳೆಗಳಿಗೆ ಕೀಟ ಕಾಟ ಶುರುವಾದಾಗ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿರಂತರ ಮಾಹಿತಿಯನ್ನು ರೈತರ ಮೊಬೈಲ್ ಗೆ ಸಂದೇಶದ ಮೂಲಕ ರವಾನಿಸಲಾಗುತ್ತಿದೆ.

ಸುಮಾರು 40 ಲಕ್ಷ ರೂ ವೆಚ್ಚದ ಆಕಾಶವಾಣಿ ಕೇಂದ್ರ ಸ್ಥಾಪನೆಗೆ ಕಳೆದ ವರ್ಷ ನಿರ್ಧರಿಸಿತ್ತು.

“ರಾಯಚೂರು ಕೃಷಿ ವಿವಿಯಿಂದ ಆಕಾಶವಾಣಿ ಕೇಂದ್ರ ಪ್ರಾರಂಭಕ್ಕೆ ಕೇಂದ್ರ ಸರ್ಕಾರದ ಜೊತೆ ಒಪ್ಪಂದಕ್ಕೆ ಸಿದ್ಧತೆ ನಡೆದಿದೆ” ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎನ್. ಕಟ್ಟಿಮನಿ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet

ಬೃಹತ್ ಜಾಥಾಗಳಿಗೆ ಚುನಾವಾಣಾ ಆಯೋಗ ಅನುಮತಿ

0

ಪಂಚರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗವು ಬೃಹತ್ ಜಾಥಾಗೆ ಅನುಮತಿ ನೀಡಿದೆ.

ಉತ್ತರಪ್ರದೇಶದಲ್ಲಿ ಮೊದಲ ಹಂತದಲ್ಲಿ ಮತದಾನಕ್ಕೆ ಇನ್ನೇನೂ 4 ದಿನ ಬಾಕಿ ಇರುವ ಮೊದಲೇ ಚುನಾವಣೆ ಆಯೋಗದ ತೀರ್ಮಾನ ಹೊರಬಿದ್ದಿದೆ.

ಕೋವಿಡ್ ನಿಂದಾಗಿ ಇದುವರೆಗೆ ವರ್ಚ್ಯುವಲ್ ರಾಜಕೀಯ ನಾಯಕರು ನಡೆಸುತ್ತಿದ್ದರು. ಚುನಾವಣೆ ಆಯೋಗದ ನಿರ್ಧಾರದಿಂದಾಗಿ ಬೃಹತ್ ಜಾಥಗಳನ್ನು ಉದ್ದೇಶಿಸಿ ರಾಜಕೀಯ ನಾಯಕರು ಮಾತಾಡಬಹುದಾಗಿದೆ.

ಫೆಬ್ರವರಿ 14ರಂದು ಪಂಜಾಬ್ ಉತ್ತರಗಳಲ್ಲಿ ಚುನಾವಣೆ ನಡೆಯಲಿದೆ ಹೀಗಾಗಿ ಈ ರಾಜ್ಯಗಳಲ್ಲಿ ಹೆಚ್ಚಿನ ಜಾಥಗಳನ್ನು ಆಯೋಜಿಸಲು ಪಕ್ಷಗಳಿಗೆ ಅವಕಾಶ ಸಿಗುವುದಿಲ್ಲ. ಪ್ರಬ್ರವರಿ 27 ಮಾರ್ಚ್ 3ರಂದು ಮಣಿಪುರದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಮಾರ್ಚ್ 7ರಂದು ಉತ್ತರಪ್ರದೇಶದಲ್ಲಿ 7ನೇ ಹಂತದ ಮತದಾನ ನಡೆಯಲಿದೆ ಹೀಗಾಗಿ ಈ ಎರಡು ರಾಜ್ಯಗಳ ಬಗ್ಗೆ ಹೆಚ್ಚು ಗಮನ ಹರಿಸಲು ರಾಜಕೀಯ ಪಕ್ಷಗಳು ಸಿದ್ಧಗೊಂಡಿವೆ.

“ಒಳಾಂಗಣದಲ್ಲಿ ನಡೆಯುವ ಸಭೆಗಳಲ್ಲಿ ಶೇ. 50ರಷ್ಟು ಆಸನಗಳ ಭರ್ತಿಗೆ ಅವಕಾಶವಿದೆ. ಬಹಿರಂಗವಾಗಿ ನಡೆಯುವ ಜಾಥಾಗಳಲ್ಲಿ ಕ್ರೀಡಾಂಗಣ ಅಥವಾ ಆ ಪ್ರದೇಶದ ವ್ಯಾಪ್ತಿಯ ಶೇ. 30ರಷ್ಟು ಭಾಗದಲ್ಲಿ ಚೆನ್ನ ಸೇರಬಹುದು ಇಲ್ಲವೇ ಸಾಮಾಜಿಕ ಅಂತರ, ಅಗತ್ಯ ಮುಂಜಾಗೃತಾ ಕೈಗೊಂಡು ಗೃಹ ಸಭೆ ನಡೆಸಲು ಚುನಾವಣಾ ಅಧಿಕಾರಿ ಅನುಮತಿ ನೀಡಬಹುದು” ಎಂದು ಚುನಾವಣಾ ಆಯೋಗ ತಿಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet

ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಡಿಎಸ್ಎನ್ ಅವರಿಗೆ” ಸನ್ಮಾನ

0

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ‘ಗಾಂಧಿ ಕಥನ’ ಕೃತಿಯ ಲೇಖಕ ಡಿ.ಎಸ್. ನಾಗಭೂಷಣ ಅವರಿಗೆ ಅಭಿನಂದನೆ ಮತ್ತು ಅವರ “ವಿಧ ವಿಧ” ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಸ್ನೇಹ ಬಳಗವು ಪತ್ರಿಕಾ ಭವನದಲ್ಲಿ ಆಯೋಜಿಸಿತ್ತು.

“ಕೊಡಗಿನ ಜಲಪ್ರಳಯವನ್ನು ವೈಜ್ಞಾನಿಕವಾಗಿ ನಾನಾ ರೀತಿಯಲ್ಲಿ ಅರ್ಥೈಸಲಾಗುತ್ತಿದೆ ಆದರೆ ಪ್ರಕೃತಿಯನ್ನು ಆಧಾರವಾಗಿಟ್ಟುಕೊಂಡು ಏನು ಮನಗಂಡರೆ ಅದರ ಅರ್ಥ ತಿಳಿಯಬಹುದು. ಪುಸ್ತಕದಲ್ಲಿ ಅರ್ಥಪೂರ್ಣವಾಗಿ ತಿಳಿಸಲಾಗಿದೆ” ಎಂದು ಸಾಹಿತಿ ಡಾ. ರಾಜೇಂದ್ರ ಚೆನ್ನಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

“ಗಾಂಧೀಜಿಯವರು ಒಬ್ಬ ವ್ಯಕ್ತಿಯಾಗಿ ಉಳಿದಿಲ್ಲ ಅವರು ಅಧ್ಯಯನದ ವಿಷಯವಾಗಿದ್ದಾರೆ. ವಿಶ್ವದ ಹಲವೆಡೆ ಅವರ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ. ಗಾಂಧಿ ಕಥನದಲ್ಲಿ ಡಿ.ಎಸ್.ನಾಗಭೂಷಣ್ ಇರುವುದನ್ನು ಇರುವಂತೆ ನೇರವಾಗಿ ಹೇಳಿದ್ದಾರೆ. ಗಾಂಧೀಜಿಯವರನ್ನು ಸಾಮಾಜಿಕ ರಾಜಕೀಯವಾಗಿ ಬೇರೆಯ ರೀತಿಯಲ್ಲಿ ಅರ್ಥೈಸಲು ಅವರ ವಿಚಾರಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಕೆಲಸ ಕೃತಿಯಲ್ಲಿ ಮಾಡಲಾಗಿದೆ” ಎಂದು ಸಹ್ಯಾದ್ರಿ ಕಾಲೇಜಿನ ಸಹ ಪ್ರಾಧ್ಯಾಪಕ ಮೇಟಿ ಮಲ್ಲಿಕಾರ್ಜುನ ಅವರು ತಿಳಿಸಿದರು.

ಡಿ.ಎಸ್.ನಾಗಭೂಷಣ ಅವರು ಮಾತನಾಡಿ “ಗಾಂಧೀಜಿ ಅವರು ಮೊಟ್ಟಮೊದಲು ತನ್ನ ಮನಸ್ಸಿಗೆ ಅಚ್ಚೊತ್ತಿ ನಿಂತ ಘಟನೆ ಹಸಿರಾಗಿದೆ.ಎಳೆತನದಲ್ಲಿ ತಂದೆಯವರು ನ್ಯಾಮಗೊಂಡ್ಲಿಗೆ ವರ್ಗವಾದರು.ಅಲ್ಲಿ ಬಸ್ ನಿಲ್ದಾಣದಲ್ಲಿ ಶ್ರೀಕಂಠ ಶೆಟ್ಟರು ಗಾಂಧೀ ಪೋಟೋ ಇಟ್ಟುಕೊಂಡು ಉಪವಾಸ ಕೂತಿದ್ದನ್ನ ನೋಡಿದೆ. ಆ ಘಟನೆ ನನಗನ ಮನದೊಳಗೇ ಗಾಂಧೀಜಿಯ ಚಿಂತನೆಗಳನ್ನ ಸ್ಫುರಿಸಲು ಕಾರಣವಾಗಿರಬಹುದು. ಅಲ್ಲಿಂದ ನನ್ನೊಳಗೇ ಗಾಂಧಿ ಮನದ ಮೂಲೆಯಲ್ಲಿದ್ದರು.
ಸರ್ಕಾರಿ ನೌಕರಿ ಸೇರಿದ ನಂತರ ಲೋಹಿಯ,ಅಂಬೇಡ್ಕರ್ ವಿಚಾರಧಾರೆಗಳ ಬಗ್ಗೆ ಓದುತ್ತಾ ಬಂದೆ” ಎಂದು ಹೇಳಿದರು.

“ಹೀಗೆ ಒಂದಲ್ಲ ಒಂದು ಘಟನೆಗಳು ,ಪುಸ್ತಕದ ಓದು,ವಿಚಾರವಂತರೊಂದಿಗಿನ ವೈಚಾರಿಕ ಚರ್ಚೆ ನನ್ನೊಳಗೆ ಗಾಂಧಿಯನ್ನ ಬೆಲಕೆಸುತ್ತಾ ಬಂದವು.
ಮುಖ್ಯವಾಗಿ ವಿದ್ವಾಂಸ ರಾಮಚಂದ್ರ ಗುಹ ಅವರೊಂದಿಗಿನ ವೈಚಾರಿಕ ಸಂಘರ್ಷ ಗಾಂಧಿಯವರ ಚಿಂತನೆಗಳನ್ನ ಅಧ್ಯಯನ ಮಾಡಲು ಬಲವಾದ ಪ್ರೇರೇಪಣೆ ನೀಡಿತೆನ್ನಬಹುದು.
ಅವರು ನೀಡಿದ ಗಾಂಧೀಜಿ ಬಿಫೋರ್ ಇಂಡಿಯ ಕೃತಿ ನನ್ನಲ್ಲಿ ಇದೂವರೆಗೂ ನಾನು ಕಂಡಿರದ ಗಾಂಧಿಯ ಅಸ್ತಿತ್ವ,ಹಿನ್ನೆಲೆಗಳನ್ನ
ನೀಡಿತು.
ನಿಜಕ್ಕೂ ಗಾಂಧಿ ಇವರೇನ? ಎಂದು ವಿಸ್ಯಯಗೊಂಡೆ.

ಬಹುಷಃ ಆ ಗಾಂಧಿಯನ್ನ ಅಂಬೇಡ್ಕರ್ ಕಂಡುಕೊಂಡಿದ್ದರೆ ಅವರೀರ್ವರಲ್ಲಿ ಅಭಿಪ್ರಾಯ ಭೇದಗಳು ಇರುತ್ತಿಲಿರಲ್ಲ. ದಕ್ಷಣ ಆಫ್ರಿಕಾದಿಂದ ಬಂದ ಗಾಂಧೀಜಿಯವರಲ್ಲಿ ಒಬ್ಬ ಅಪ್ಪಟ ಸುಧಾರಕ, ಬದಲಾವಣೆಯ ಹರಿಕಾರ ರೂಪಗೊಂಡಿದ್ದ.
ಅದೇ ನಮಗೆ ಲಾಭವಾಗಿದ್ದು.
ಅಂತಹ ಗಾಂಧೀ ಚಿಂತನೆಗಳನ್ನ ಕಾಂಗ್ರೆಸ್ ಬರುಬರುತ್ತಾ ಮೂಲೆಗುಂಪು ಮಾಡಿ ಹಾಳಾಯಿತು. ಅವರ ಬುದ್ಧಿಗೇಡಿತನದ ಅವಕಾಶಗಳನ್ನ ಬಳಸಿ ಬೇರೆ ಪಕ್ಷಗಳು ಅಧಿಕಾರಕ್ಕೆ ಬಂದಿವೆ.
ಇದೊಂದು ದುರಂತ.
ಗಾಂಧಿ ತತ್ವಗಳು ಎಲ್ಲರಿಗೂ ನಿಲುಕುವಂತಿವೆ.ಆದರೆ ಅರ್ಥೈಸುವಲ್ಲಿ ಎಡವಿದರೆ ಗಾಂಧಿ ಅಪಾರ್ಥವಾಗುತ್ತಾರೆ.
ಅಂಬೇಡ್ಕರ್ ಅವರು ಗಾಂಧೀಜಿಯವರನ್ನ ತಿಳಿದುಕೊಂಡಿದ್ದರೆ ಚೆನ್ನಾಗಿರುತ್ತಿತ್ತು” ಎಂದು ಡಿ.ಎಸ್.ನಾಗಭೂಷಣ್ ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ಸ್ನೇಹ ಬಳಗವು ಡಿ.ಎಸ್.ನಾಗಭೂಷಣ್ ಮತ್ತು ಅವರ ಪತ್ನಿ ಶ್ರೀಮತಿ ಸವಿತಾ ಅವರನ್ನೂ ಸನ್ಮಾನಿಸಿತು.

ಈ ಕಾರ್ಯಕ್ರಮದಲ್ಲಿ ಪ್ರೊ. ಸತ್ಯನಾರಾಯಣರಾವ್ ಅಣತಿ, ಚಂದ್ರಶೇಖರಯ್ಯ, ಸೇರಿದಂತೆ ಹಲವರು ಗಣ್ಯರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet

ಕ.ವಿ.ಪ್ರ. ನಿಗಮ ವ್ಯಾಪ್ತಿಯ ವಿವಿಧ ಎಸ್ಕಾಂಗಳಲ್ಲಿ ಉದ್ಯೋಗ: ಕನ್ನಡಿಗರಿಗೆ ಪ್ರಾಶಸ್ತ್ಯ

0

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವ್ಯಾಪ್ತಿಯ 5 ಕಂಪನಿಗಳಲ್ಲಿ ಬೆಸ್ಕಾಂ, ಸೆಸ್ಕಾಂ, ಹೆಸ್ಕಾಂ, ಮೆಸ್ಕಾಂ ಮತ್ತು ಜೆಸ್ಕಾಂ ಖಾಲಿ ಇರುವ ಸಹಾಯಕ ಇಂಜಿನಿಯರ್, ಕಿರಿಯ ಸಹಾಯಕ ಎಂಜಿನಿಯರ್ ಮತ್ತು ಕಿರಿಯ ಸಹಾಯಕ ಹುದ್ದೆಗಳಿಗೆ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ತೇರ್ಗಡೆ ಆದವರಿಗೆ ಮಾತ್ರ ಅರ್ಹತಾ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.

ಸರ್ಕಾರದ ಈ ಕ್ರಮದಿಂದಾಗಿ ವಿವಿಧ ಎಸ್ಕಾಂ ಗಳಲ್ಲಿ ಕನ್ನಡಿಗರೇ ಉದ್ಯೋಗ ಪಡೆಯಲು ಸಹಾಯಕವಾಗಲಿದೆ. ಈ ಬಾರಿ 1,456 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ನೇಮಕಾತಿ ಅಧಿಸೂಚನೆಯನ್ನು ಈಗಾಗಲೆ ಹೊರಡಿಸಲಾಗಿದೆ.

ಏಳರಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಮಾರ್ಚ್ 7ಕೊನೆಯ ದಿನ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಯ್ಕೆ ಪರೀಕ್ಷೆ ನಡೆಸಲಿದೆ. ಕೆಇಎ ನಡೆಸುವ ಆಪ್ಟಿಟ್ಯೂಡ್ ಪರೀಕ್ಷೆಗೆ ಅರ್ಹತೆ ಪಡೆಯಲು ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕ ಪಡೆಯಬೇಕು.

2015ರಲ್ಲಿ ಡಿ.ಕೆ. ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ಸಹಾಯಕ ಇಂಜಿನಿಯರ್, ಕಿರಿಯ ಎಂಜಿನಿಯರ್ ಮತ್ತು ಇತರೆ ತಾಂತ್ರಿಕ ಹುದ್ದೆಗಳ ನೇಮಕ ಗಳಲ್ಲಿ ಕಡ್ಡಾಯ ಕನ್ನಡ ಪರೀಕ್ಷೆ ಯಿಂದ ವಿನಾಯಿತಿ ನೀಡಲಾಗಿತ್ತು. ಇದರಿಂದ 60ಕ್ಕೂ ಅಧಿಕ ಹುದ್ದೆಗಳು ಆಂಧ್ರಪ್ರದೇಶ ಸೇರಿದಂತೆ ಅಭ್ಯರ್ಥಿಗಳ ಪಾಲಾಗಿತ್ತು. ಈ ಬಗ್ಗೆ ಕನ್ನಡ ಪರ ಸಂಘಟನೆಗಳು, ವಿದ್ಯಾರ್ಥಿ ಕೂಟಗಳು ವಿರೋಧಿಸಿದರೂ ಸಹ ಪ್ರಯೋಜನವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಈಗ ಕನ್ನಡಿಗರು ಅವಕಾಶ ವಂಚಿತರಾಗದಂತೆ ಎಚ್ಚರಿಕೆ ಬಯಸಲು ಸಚಿವ ವಿ. ಸುನಿಲ್ ಕುಮಾರ್ ಅವರು ಸೂಚಿಸಿದ್ದಾರೆ. ಆದ್ದರಿಂದ ಕನ್ನಡ ಪರೀಕ್ಷೆ ಅಳವಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet

ಪ್ರಸಿದ್ಧ ಬ್ರೌಸರ್ ಗೂಗಲ್ ಈಗ ಬಣ್ಣ ಮತ್ತು ಚಹರೆಯಲ್ಲಿ ಬದಲಾವಣೆ

0

ವಿಶ್ವಾದ್ಯಂತ ಜಾಲತಾಣ ಬಳಕೆದಾರರ ಅಚ್ಚುಮೆಚ್ಚಿನ ಬ್ರೌಸರ್ ಎಂಬ ಖ್ಯಾತಿಯ ಗೂಗಲ್ ಕ್ರೋಮ್ ನ ಲಾಂಛನ (ಲೋಗೊ) ವನ್ನು ಕಂಪನಿಯು ಪರಿಷ್ಕರಿಸುತ್ತಿದೆ. ಎಂಟು ವರ್ಷಗಳ ಬಳಿಕ ಜನಪ್ರಿಯ ಬ್ರೌಸರ್ ಗೆ ಹೊಸ ಲೋಗೋ ಸಿಗುತ್ತಿದೆ.

2011ರಲ್ಲಿ ಲೋಗೋ ಸುಧಾರಣೆಗೊಂಡು 2ಡಿ ವಿನ್ಯಾಸಕ್ಕೆ ತಿರುಗಿತು. ಆಮೇಲೆ ಮಧ್ಯದಲ್ಲಿ ನೀಲಿ ಬಣ್ಣದ ಗುಂಡಾಕಾರದ ಸುತ್ತಲೂ ತೆಳ್ಳನೆಯ ಬಿಳಿಗೆರೆಯನ್ನು ಎಳೆಯಲಾಗಿತ್ತು. ಇದನ್ನು 2014ರವರೆಗೆ ಮುಂದುವರಿಸಿದ ಗೂಗಲ್ ಕಂಪನಿಯು ಬಳಿಕ ಪರಿಷ್ಕೃತ ಗೊಳಿಸಿ ಕೆಂಪು, ಹಳದಿ ಮತ್ತು ತಿಳಿಹಸಿರನ್ನು ಮತ್ತಷ್ಟು ಗಾಢವಾಗಿಸಿತು. ಮಧ್ಯದಲ್ಲಿನ ಬಿಳಿಯಾದ ಔಟ್ಲೈನ್ ದಪ್ಪಗಾಗಿಸಿತು. ಸತ್ಯ ಅದೇ ಔಟ್ಲೈನ್ ಇನ್ನೂ ದಪ್ಪವಾಗಿದೆ. ಮತ್ತು ಅದರ ಸುತ್ತಲೂ ವಿನ್ಯಾಸಗೊಂಡಿರುವ ಕೆಂಪು, ಹಳದಿ ಮತ್ತು ಹಸಿರು ಮತ್ತಷ್ಟು ಗಾಢ ಬಣ್ಣಕ್ಕೆ ತಿರುಗಿವೆ.
ಗೂಗಲ್ ಕ್ರೋಮ್ ನ 100ನೇ ಆವೃತ್ತಿಯ ಅಪ್ ಡೇಟ್ ಶೀಘ್ರವೇ ಬಿಡುಗಡೆಯಾಗಲಿದ್ದು, ಅದನ್ನು ಡೌನ್ ಲೋಡ್ ಮಾಡಿ ಬಳಸಿದವರ ಕಂಪ್ಯೂಟರ್ ಗಳಲ್ಲಿ ಹೊಸ ಲೋಗೋ ಗೋಚರಿಸಲಿದೆ. ಬ್ರೌಸರ್ ನ ವಿನ್ಯಾಸಕಾರ ಎಲ್ವಿನ್ ಹೂ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೊಸಲೋಕ ವಿಚಾರವನ್ನು ಬಹಿರಂಗಪಡಿಸಿದ್ದಾರೆ.