Saturday, February 21, 2026
Saturday, February 21, 2026
Home Blog Page 1674

ಗ್ರಾಮ ಒನ್ ಯೋಜನೆ ರಾಜ್ಯದಾದ್ಯಂತ ವಿಸ್ತರಣೆ

0

ರಾಜ್ಯದ ಗ್ರಾಮೀಣ ಜನತೆಗೆ ರಾಜ್ಯ ಸರ್ಕಾರ ಮತ್ತೊಂದು ಸಿಹಿಸುದ್ದಿ ನೀಡಿದೆ. ಗ್ರಾಮ ಒನ್ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆಧಾರ್ ಸಂಖ್ಯೆ ಅಥವಾ ನೋಂದಣಿ ಐಡಿ ಇಲ್ಲದೆ ಕಳೆದುಹೋದ ಆಧಾರ್ ಕಾರ್ಡನ್ನು ಡೌನ್‌ಲೋಡ್ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ, ಗ್ರಾಮ ಒನ್ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸುವ ಕುರಿತು ಚರ್ಚೆ ನಡೆದಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಅನುಷ್ಠಾನವಾಗುತ್ತಿರುವ ಯೋಜನೆಯನ್ನು ಎಲ್ಲ ಗ್ರಾಮಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ತಮ್ಮ ಬಜೆಟ್ ಭಾಷಣದಲ್ಲಿ, ರಾಜ್ಯ ಸರ್ಕಾರವು ಗ್ರಾಮೀಣ ಜನರಿಗೆ ಪಂಚಾಯಿತಿ ಹಂತದಲ್ಲಿಯೇ ನಾಗರಿಕ ಸೇವೆಗಳನ್ನು ಒದಗಿಸುವ ಗ್ರಾಮ ಒನ್ ಯೋಜನೆಯನ್ನು ಜಾರಿಗೊಳಿಸಿದೆ.ಇದರಿಂದ ಜನರ ಅಲೆದಾಟ ತಪ್ಪಲಿದೆ ಎಂದು ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಷ್ಯ ದಾಳಿ ನಿಂತಿಲ್ಲ ಉಕ್ರೇನ್ ನಾಶ ತಪ್ಪಿಲ್ಲ!

0

ಉಕ್ರೇನ್ ನಲ್ಲಿ ರಷ್ಯಾ ಸೇನೆ ಮಾರಣ ಹೋಮ ಮುಂದುವರೆಸಿದೆ. ಆಸ್ಪತ್ರೆ, ಜನವಸತಿ ಪ್ರದೇಶಗಳ ಮೇಲೆ ಭೀಕರ ಶೆಲ್ ದಾಳಿ ನಡೆಸಿದೆ. ಈ ನಡುವೆ ಮರಿಯಪೋಲ್ ನಲ್ಲಿ ರಷ್ಯಾ ನಡೆಸಿದ ದಾಳಿಗೆ 1500 ಜನರು ಮೃತಪಟ್ಟಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ.

ಮರಿಯಪೋಲ್ ನಲ್ಲಿ ಕಳೆದ 12 ದಿನಗಳ ರಷ್ಯಾ ದಾಳಿಯಲ್ಲಿ 1500 ಜನರು ಸಾವನ್ನಪ್ಪಿದ್ದಾರೆ. ನಿರಾಶ್ರಿತರಾಗಿರುವ ಜನರಿಗೆ ಆಹಾರ, ನೀರು ಒದಗಿಸುವುದು ಕಷ್ಟಕರವಾಗಿದೆ ಎಂದು ಮರಿಯಪೋಲ್ ಮೇಯರ್ ಕಚೇರಿ ತಿಳಿಸಿದೆ.

ಇನ್ನೊಂದು ಕಡೆ, ರಷ್ಯಾ ಸೇನೆ ಉಕ್ರೇನ್ ನ ಮೈಕೋಲೈವ್ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ದಾಳಿ ನಡೆಸಿದೆ. ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಉಕ್ರೇನ್ ಆರೋಪಿಸಿದೆ. ಉಕ್ರೇನ್ ನ ಲುಟ್ಸ್ಕ್, ಇವಾನೊ-ಫ್ರಾಂಕಿವ್ಸ್ ನಗರಳ ಮೇಲೆ ವಾಯು ದಾಳಿ ನಡೆಸಿದೆ. ರಾಜಧಾನಿ ಕೀವ್ ನಗರವನ್ನು ರಷ್ಯಾ ಸೇನೆ ಸುತ್ತುವರೆದಿದೆ.

ಉಕ್ರೇನ್ ನಿಂದ ನಿನ್ನೆ ಒಂದೇ ದಿನದಲ್ಲಿ 7,144 ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಉಕ್ರೇನ್ ಸರ್ಕಾರ ತಿಳಿಸಿದೆ. ಇಡೀ ಉಕ್ರೇನ್ ಈಗ ಸ್ಮಶಾನವಾಗಿದೆ.ಎಲ್ಲೆಲ್ಲೂ ಹೆಣಗಳ ರಾಶಿ, ಜನರ ಆಕ್ರಂದನ, ಬಾಂಬ್ ದಾಳಿ, ಆಹಾರ, ನೀರಿಗಾಗಿ ಪರದಾಟ ರಣಭೀಕರತೆಯ ದೃಶ್ಯಗಳು ಕಂಡುಬರುತ್ತಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಗೆಲುವು ನಮ್ಮ ಗುರಿ-ಝೆಲೆನ್ಸ್ಕಿ

0

ವಿಜಯದತ್ತ ಉಕ್ರೇನ್ ಸೇನೆ ದಾಪುಗಾಲು ಇಡುತ್ತಿದೆ. ಯಾವಾಗ ಜಯ ಸಿಗುತ್ತದೆ ಎಂದು ಹೇಳಲಾಗುವುದಿಲ್ಲ. ಯುದ್ಧದಲ್ಲಿ ರಷ್ಯಾ ವಿರುದ್ಧ ಗೆಲ್ಲುವುದೇ ನಮ್ಮ ಗುರಿ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ತಿಳಿಸಿದ್ದಾರೆ.

ಉಕ್ರೇನ್​- ರಷ್ಯಾ ಯುದ್ಧ ಹಿನ್ನೆಲೆಯಲ್ಲಿ ರಷ್ಯಾದಲ್ಲಿ ಡೊಮಿನೋಸ್ ಪಿಜ್ಜಾ ಹೂಡಿಕೆ ಸ್ಥಗಿತಗೊಳಿಸಿದೆ. ಆದರೆ 188 ರೆಸ್ಟೋರೆಂಟ್​ಗಳು​ ಕೆಲಸ ಇನ್ನೂ ಮುಂದುವರಿಸುತ್ತಿವೆ. ಟರ್ಕಿ ಮೂಲದ ಬಜೆಟ್ ವಾಹಕವಾದ ಪೆಗಾಸಸ್ ಏರ್‌ಲೈನ್ಸ್, ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಮುಂದುವರಿ ಸಿರುವ ಹಿನ್ನೆಲೆಯಲ್ಲಿ ರಷ್ಯಾಕ್ಕೆ ಹೊರಡುವ ವಿಮಾನಗಳನ್ನು ಮತ್ತು ರಷ್ಯಾದಿಂದ ಇಸ್ತಾಂಬುಲ್​ಗೆ ಬರುವ ವಾಹನವನ್ನು ಸ್ಥಗಿತಗೊಳಿಸಿದೆ ಎಂದು ಪೆಗಾಸಸ್ ತಡವಾಗಿ ಪ್ರಕಟಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಹಳೇ ನೋಟು ನಾಣ್ಯ ಖರೀದಿ ಬಗ್ಗೆ ಆರ್ ಬಿಐ ಮಹತ್ವದ ಸೂಚನೆ

0

ಭಾರತೀಯ ರಿಸರ್ವ್ ಬ್ಯಾಂಕ್ ಹಳೆಯ ನೋಟುಗಳು ಮತ್ತು ನಾಣ್ಯಗಳನ್ನು ಖರೀದಿಸುವ ಅಥವಾ ಮಾರಾಟ ಮಾಡುವ ಕೊಡುಗೆಗಳಿಗೆ ಬಲಿಯಾಗದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

ಅಪೆಕ್ಸ್ ಬ್ಯಾಂಕ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡಿದೆ. ಕೆಲವು ಅಂಶಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೆಸರು ಮತ್ತು ಲಾಂಛನವನ್ನು ತಪ್ಪಾಗಿ ಬಳಸುತ್ತಿವೆ. ಹಾಗೂ ಹಳೆಯ ನೋಟುಗಳು ಮತ್ತು ನಾಣ್ಯಗಳನ್ನು ವಿವಿಧ ಆನ್‌ಲೈನ್ ಮತ್ತು ಆಫ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾರಾಟ ಮಾಡಲು ಜನರನ್ನು ಒತ್ತಾಯಿಸುತ್ತಿವೆ.ಶುಲ್ಕಗಳು, ಆಯೋಗಗಳು ಅಥವಾ ತೆರಿಗೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಟ್ವೀಟ್ ಮಾಡಿದೆ.

ಆರ್‌ಬಿಐ ಅಂತಹ ವಿಷಯಗಳಲ್ಲಿ ವ್ಯವಹರಿಸುವುದಿಲ್ಲ ಮತ್ತು ಅಂತಹ ಶುಲ್ಕ ಅಥವಾ ಕಮಿಷನ್‌ಗಳನ್ನು ಯಾರಿಂದಲೂ ಕೇಳುವುದಿಲ್ಲ ಎಂದು ಎಚ್ಚರಿಕೆ ನೀಡಿದೆ. ಇಂತಹ ಸುಳ್ಳು ಮತ್ತು ವಂಚನೆಯ ಪ್ರಸ್ತಾಪಗಳಿಗೆ ಬಲಿಯಾಗಬೇಡಿ ಎಂದು ರಿಸರ್ವ್ ಬ್ಯಾಂಕ್ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತದೆ.

ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಪರವಾಗಿ ಅಂತಹ ವಹಿವಾಟುಗಳಿಗೆ ಯಾವುದೇ ಶುಲ್ಕ ಅಥವಾ ಆಯೋಗವನ್ನು ವಿಧಿಸಲು ಯಾವುದೇ ವ್ಯವಹಾರ, ಕಂಪನಿ ಅಥವಾ ವ್ಯಕ್ತಿಗೆ ಯಾವುದೇ ಅಧಿಕಾರವನ್ನು ನಿಯೋಜಿಸಿಲ್ಲ ಎಂದು ಹೇಳಿದೆ.

ಮಾರ್ಚ್ 31 ರ ನಂತರ ಡಿಮ್ಯಾಟ್ ಖಾತೆಯನ್ನು ಮುಚ್ಚಬಹುದು.

ನೀವು ಷೇರುಗಳನ್ನು ಖರೀದಿಸಿದ್ದರೆ ಅಥವಾ ಮಾರಾಟ ಮಾಡಿದ್ದರೆ ಅಥವಾ ಈಕ್ವಿಟಿ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದರೆ ಮತ್ತು ನಿಮ್ಮ ಡಿಮ್ಯಾಟ್ ಖಾತೆಯಲ್ಲಿ ಕೆವೈ ಸಿ ಅನ್ನು ಪೂರ್ಣಗೊಳಿಸದಿದ್ದರೆ, ಸಾಧ್ಯವಾದಷ್ಟು ಬೇಗ ಅದನ್ನು ಮಾಡಿ ಅಥವಾ ನಿಮ್ಮ ಖಾತೆಯನ್ನು ರದ್ದುಗೊಳಿಸಲಾಗುತ್ತದೆ. ಮಾರುಕಟ್ಟೆ ನಿಯಂತ್ರಕ ಸೆಬಿ ಇದನ್ನು ಮಾರ್ಚ್ 31 ರವರೆಗೆ ನೀಡಿದೆ. ಇಲ್ಲದಿದ್ದರೆ ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಆಪರೇಷನ್ ಗಂಗಾ ಯಶಸ್ವಿಯಾಗಿದೆ-ಸಚಿವ ಅಶೋಕ್

0

ಯುದ್ಧಪೀಡಿತ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಆಪರೇಷನ್ ಗಂಗಾ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಆರ್. ಅಶೋಕ್ ಅವರು, ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ಹಿನ್ನೆಲೆಯಲ್ಲಿ ಉಕ್ರೇನ್ ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ತೆರಳಿದ್ದ ಭಾರತೀಯ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದರು.
ಭಾರತೀಯರನ್ನು ತಾಯ್ನಾಡಿಗೆ ಕರೆತರಲು ಆಪರೇಶನ್ ಗಂಗಾ ಕಾರ್ಯಾಚರಣೆ ನಡೆಸಲಾಗಿತ್ತು. ಈಗ ಆಪರೇಷನ್ ಗಂಗಾ ಯಶಸ್ವಿಯಾಗಿದೆ ಎಂದು ಆರ್. ಅಶೋಕ್ ಅವರು ಹೇಳಿದ್ದಾರೆ.

ಎಲ್ಲಾ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಪ್ರಧಾನಿ ಮೋದಿ ನಾಲ್ಕು ಜನ ಸಚಿವರನ್ನು ಕಳುಹಿಸಿಕೊಟ್ಟು ಸುರಕ್ಷಿತವಾಗಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದಿದ್ದಾರೆ ಎಂದು ಆರ್. ಅಶೋಕ್ ಅವರು ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ನ್ಯಾಟೋ ದೇಶಗಳ ರಕ್ಷಣೆಗೆ ಸೇನೆ ನಿಯೋಜನೆ-ಬೈಡೆನ್

0

ಲಾಟ್ವಿಯಾ, ಎಸ್ಟೋನಿಯಾ, ಲಿಥುವೇನಿಯಾ ಮತ್ತು ರೊಮೇನಿಯಾದಂತಹ ರಷ್ಯಾದ ಗಡಿಯಲ್ಲಿ 12,000 ಸೈನಿಕರನ್ನು ನಿಯೋಜಿಸಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ. ಉಕ್ರೇನ್ ವಿರುದ್ಧ ನಡೆಸುತ್ತಿರುವ ಯುದ್ಧದಲ್ಲಿ ವ್ಲಾಡಿಮಿರ್ ಪುಟಿನ್ ಅವರು ವಿಜಯಶಾಲಿಯಾಗುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಡೆಮಾಕ್ರಟಿಕ್ ಕಾಕಸ್‌ನ ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಉಕ್ರೇನ್‌ನಲ್ಲಿ ನಡೆಯುತ್ತಿರುವುದು ಮೂರನೇ ಮಹಾಯುದ್ಧವಲ್ಲ ಎಂದು ಒತ್ತಿ ಹೇಳಿದ್ದಾರೆ. ಆದರೆ ನಾಟೊ ಒಕ್ಕೂಟದ ದೇಶಗಳ ಪ್ರತಿ ಇಂಚು ಭೂಮಿಯನ್ನೂ ನಾವು ರಕ್ಷಿಸುತ್ತೇವೆ ಎಂಬ ಸಂದೇಶ ರವಾನಿಸುವ ಭರವಸೆ ನೀಡಿದ್ದಾರೆ.

ನ್ಯಾಟೊ, ಉತ್ತರ ಅಮೆರಿಕ ಮತ್ತು ಯುರೋಪಿನ 30 ರಾಷ್ಟ್ರಗಳ ಗುಂಪಾಗಿದೆ. ರಾಜಕೀಯ ಮತ್ತು ಮಿಲಿಟರಿ ವಿಧಾನಗಳ ಮೂಲಕ ಅದರ ಸದಸ್ಯ ರಾಷ್ಟ್ರಗಳ ಸ್ವಾತಂತ್ರ್ಯ ಮತ್ತು ಭದ್ರತೆಯನ್ನು ಖಾತರಿಪಡಿಸುವುದು ನ್ಯಾಟೊ ಉದ್ದೇಶವಾಗಿದೆ.

ರಷ್ಯಾದ ಮಿಲಿಟರಿ ಆಕ್ರಮಣವನ್ನು ಎದುರಿಸುವಲ್ಲಿ ಉಕ್ರೇನ್ ಜನರು ಗಮನಾರ್ಹವಾದ ಶೌರ್ಯ ಮತ್ತು ಧೈರ್ಯವನ್ನು ಪ್ರದರ್ಶಿಸಿದ್ದಾರೆ. ಆದರೆ, ಅಮೆರಿಕ ಒದಗಿಸುವ ಭದ್ರತಾ ನೆರವು ಅವರ ರಕ್ಷಣೆಯಲ್ಲಿ ನಿರ್ಣಾಯಕವಾಗಿದೆ ಎಂದು ಬೈಡನ್ ಅವರು ಹೇಳಿದ್ದಾರೆ.

ನಾವು ಉಕ್ರೇನ್‌ಗೆ ಬೆಂಬಲವನ್ನು ನೀಡುವ ಮೂಲಕ ಯುರೋಪ್‌ನಲ್ಲಿನ ನಮ್ಮ ಮಿತ್ರರಾಷ್ಟ್ರಗಳೊಂದಿಗೆ ನಿಲ್ಲುವುದನ್ನು ಮುಂದುವರಿಸಲಿದ್ದೇವೆ ಮತ್ತು ನ್ಯಾಟೊ ದೇಶಗಳ ಪ್ರತಿ ಇಂಚು ಭೂಮಿಯನ್ನೂ ರಕ್ಷಿಸುತ್ತೇವೆ ಎಂಬ ನಿಸ್ಸಂದಿಗ್ಧ ಸಂದೇಶವನ್ನು ಕಳುಹಿಸುತ್ತೇವೆ ಎಂದು ಅಮೆರಿಕ ಅಧ್ಯಕ್ಷರು ತಿಳಿಸಿದ್ದಾರೆ.

ಅದಕ್ಕಾಗಿಯೇ ನಾನು, ರಷ್ಯಾದ ಗಡಿಯಲ್ಲಿ ಅಮೆರಿಕದ 12,000 ಯೋಧರನ್ನು ನಿಯೋಜಿಸಿಸಿದ್ದೇನೆ. ಲಾಟ್ವಿಯಾ, ಎಸ್ಟೋನಿಯಾ, ಲಿಥುವೇನಿಯಾ, ರೊಮೇನಿಯಾ ಮತ್ತು ಸೆಟ್ರಾ ದೇಶಗಳ ರಷ್ಯಾಗೆ ಹೊಂದಿಕೊಂಡ ಗಡಿಗಳಲ್ಲಿ ಈ ನಿಯೋಜನೆ ಮಾಡಲಾಗಿದೆ. ನ್ಯಾಟೊ ದೇಶಗಳ ಪ್ರದೇಶಗಳ ರಕ್ಷಣೆಯ ಬಾಧ್ಯತೆ ನಮ್ಮ ಮೇಲಿದೆ. ಆದರೂ ನಾವು ಉಕ್ರೇನ್‌ನಲ್ಲಿ ಮೂರನೇ ಮಹಾಯುದ್ಧ ನಡೆಸಲು ಹೋರಾಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ತಿಳಿಸಿದ್ದಾರೆ.

ಫೆಬ್ರವರಿ 24 ರಿಂದ, ರಷ್ಯಾದ ಪಡೆಗಳು ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಗಳನ್ನು ಪ್ರಾರಂಭಿಸಿವೆ. ಉಕ್ರೇನ್‌ನ ಪ್ರದೇಶಗಳಾದ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಅನ್ನು ಸ್ವತಂತ್ರ ಪ್ರದೇಶಗಳೆಂದು ಗುರುತಿಸಿದ ಮೂರು ದಿನಗಳ ನಂತರ ಈ ಆಕ್ರಮಣ ಆರಂಭವಾಯಿತು.

ಪ್ರಸ್ತುತ ಯುದ್ಧದ ಭೀಕರ ಸನ್ನಿವೇಶದಲ್ಲಿ, ಅಮೆರಿಕದ ಈ ನಡೆ ರಷ್ಯಾದ ಪುಟಿನ್ ಗೆ ಯುದ್ದ ಮುಂದುವರೆಸುವುದೋ, ಬಿಡುವುದೋ? ಎಂದು ಮರು ಆಲೋಚಿಸ ಬಹುದೇನೋ…

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸದ್ಯ ಪೇಟಿಎಂ ಗೆ ಹೊಸ ಗ್ರಾಹಕರ ಸೇರ್ಪಡೆ ಬೇಡ ಆರ್ ಬಿ ಐ ಸೂಚನೆ

0

ಸಂಸ್ಥೆಯ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯಲ್ಲಿ ಆಡಿಟ್​ ಮಾಡಬೇಕಾದ ಹಿನ್ನೆಲೆಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳದಂತೆ ಪೇಟಿಎಂಗೆ ಭಾರತೀಯ ರಿಸರ್ವ್​ ಬ್ಯಾಂಕ್​ ಸೂಚನೆ ನೀಡಿದೆ.

ಐಟಿ ವ್ಯವಸ್ಥೆಯ ಸಮಗ್ರ ಲೆಕ್ಕಪರಿಶೋಧನೆ ನಡೆಸಲು ಆಡಿಟ್​ ಸಂಸ್ಥೆಯನ್ನು ನೇಮಿಸುವಂತೆ ಬ್ಯಾಂಕ್​ಗೆ ಸೂಚಿಸಲಾಗಿದೆ ಎಂದು ಆರ್.​ಬಿ.ಐ.ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಬ್ಯಾಂಕಿಂಗ್​ ರೆಗ್ಯೂಲೇಶನ್​ ಆಯಕ್ಟ್​ 1949ರ ಸೆಕ್ಷನ್​ 35 ಎ ಅಡಿಯಲ್ಲಿ ಪೇಮೆಂಟ್ಸ್​ ಬ್ಯಾಂಕ್​ ಲಿಮಿಟೆಡ್​​ ವಿರುದ್ಧ ಕ್ರಮ ಎಂದು ಸುತ್ತೋಲೆಯನ್ನು ಆರ್​.ಬಿ.ಐ. ತನ್ನ ಟ್ವಿಟರ್​ನಲ್ಲಿ ಪ್ರಕಟಿಸಿದೆ.

ಐಟಿ ಲೆಕ್ಕ ಪರಿಶೋಧಕರ ವರದಿಯನ್ನು ಪರಿಶೀಲಿಸಿದ ನಂತರ ಆರ್.​ಬಿ.ಐ.ನಿಂದ ನಿರ್ದಿಷ್ಟ ಅನುಮತಿಗೆ ಒಳಪಟ್ಟು ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್​ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳಲು ಸಾಧ್ಯವಾಗುತ್ತದೆ.

ಪೇಟಿಎಂ 2017ರ ಮೇ 23ರಿಂದ ತನ್ನ ಕಾರ್ಯಾಚರಣೆಯನ್ನು ಆರಂಭಗೊಳಿಸಿತ್ತು. ಜೂನ್​ ತಿಂಗಳಲ್ಲಿ ಸಣ್ಣ ಹಣಕಾಸು ಬ್ಯಾಂಕ್​ ಪರವಾನಿಗೆಗೆ ಆರ್.​ಬಿ.ಐ.ಗೆ ಪೇಟಿಎಂ ಸಂಸ್ಥಾಪಕ ವಿಜಯ್​ ಶೇಖರ್​ ಶರ್ಮಾ ಅರ್ಜಿ ಸಲ್ಲಿಸುತ್ತಾರೆ ಎನ್ನಲಾಗಿತ್ತು. ಆದರೆ ಇದೀಗ ಆರ್.​ಬಿ.ಐ. ಈ ಕ್ರಮವನ್ನು ಕೈಗೊಂಡಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಆಕಸ್ಮಿಕವಾಗಿ ಕ್ಷಿಪಣಿ ಉಡಾವಣೆ ಭಾರತದ ವಿಷಾದ

0

ಭಾರತೀಯ ಸೂಪರ್‍ಸಾನಿಕ್ ಕ್ಷಿಪಣಿ ಆಕಸ್ಮಿಕವಾಗಿ ಉಡಾವಣೆಯಾಗಿ, ಪಾಕಿಸ್ತಾನದ ವಾಯುನೆಲೆ ಸಮೀಪ ಬಿದ್ದಿತ್ತು.ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಭಾರತ ಸರ್ಕಾರ, ಮಾರ್ಚ್ 9ರಂದು ತಾಂತ್ರಿಕ ದೋಷದಿಂದಾಗಿ ಆಕಸ್ಮಿಕವಾಗಿ ಕ್ಷಿಪಣಿ ಉಡಾವಣೆ ಆಗಿತ್ತು. ಘಟನೆಯು ತೀವ್ರ ವಿಷಾದನೀಯವಾಗಿದ್ದರೂ, ಅಪಘಾತದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದು ಸಮಾಧಾನದ ವಿಷಯವಾಗಿದೆ ಎಂದು ರಕ್ಷಣಾ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪಾಕಿಸ್ತಾನಕ್ಕೆ ಬಂದಿಳಿದ ಕ್ಷಿಪಣಿಯೊಂದು ಆಕಸ್ಮಿಕವಾಗಿ ಉಡಾಯಿಸಿರುವುದನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ. ತಾಂತ್ರಿಕ ದೋಷದಿಂದ ನಿತ್ಯ ನಿರ್ವಹಣೆ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಈ ಘಟನೆಯ ಬಗ್ಗೆ ವಿವರವಾದ ತನಿಖೆಗಾಗಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಘಟನೆಯ ಎಲ್ಲಾ ಸಂಭಾವ್ಯ ಅಂಶಗಳನ್ನು ತನಿಖಾ ತಂಡವು ಪರಿಶೀಲಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಪಾಕಿಸ್ತಾನವು ಇಂದು ಇಸ್ಲಾಮಾಬಾದ್‌ನಲ್ಲಿ ತನ್ನ ವಿದೇಶಾಂಗ ಕಚೇರಿಗೆ ಭಾರತದ ರಾಯಭಾರಿ ಅಧಿಕಾರಿಗಳನ್ನು ಕರೆಸಿ, ಭಾರತೀಯ ಮೂಲದ ಸೂಪರ್-ಸಾನಿಕ್ ಫ್ಲೈಯಿಂಗ್ ಆಬ್ಜೆಕ್ಟ್ ಮೂಲಕ ತನ್ನ ವಾಯುಪ್ರದೇಶವನ್ನು ಅಪ್ರಚೋದಿತವಾಗಿ ಉಲ್ಲಂಘಿಸಿದ ಆರೋಪದ ಬಗ್ಗೆ ತನ್ನ ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ. ಘಟನೆಯ ಬಗ್ಗೆ ಸಂಪೂರ್ಣ ಮತ್ತು ಪಾರದರ್ಶಕ ತನಿಖೆಗೆ ಕೋರಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ಹಿಂದಿನ ದಿನ ವರದಿ ಮಾಹಿತಿ ನೀಡಿದೆ.

ಮಾರ್ಚ್ 9ರಂದು ಸಂಜೆ 6:43ಕ್ಕೆ ಭಾರತದ ಸೂರತ್‌ಗಢದಿಂದ ಪಾಕಿಸ್ತಾನಕ್ಕೆ ಪ್ರವೇಶಿಸಿದ ಭಾರತೀಯ ಮೂಲದ ಸೂಪರ್-ಸಾನಿಕ್ ಫ್ಲೈಯಿಂಗ್ ಆಬ್ಜೆಕ್ಟ್ ತನ್ನ ವಾಯುಪ್ರದೇಶವನ್ನು ಉಲ್ಲಂಘಿಸಿದೆ ಎಂದು ವಿದೇಶಾಂಗ ಕಚೇರಿಗೆ ಕರೆಸಲಾದ ಭಾರತೀಯ ರಾಜತಾಂತ್ರಿಕರಿಗೆ ತಿಳಿಸಲಾಗಿದೆ.

ಭಾರತೀಯ ಸೂಪರ್‍ಸಾನಿಕ್ ಕ್ಷಿಪಣಿಯು ಸಿರ್ಸಾದಿಂದ ಉಡಾವಣೆಗೊಂಡು ಪಾಕಿಸ್ತಾನದ ಭೂಪ್ರದೇಶದ ಸುಮಾರು 124 ಕಿ.ಮೀ. ದೂರದಲ್ಲಿರುವ, ಖನೇವಾಲ್ ಜಿಲ್ಲೆಯ ಮಿಯಾನ್ ಚನ್ನು ಬಳಿ ಇಳಿಯಿತು ಎಂದು ಪಾಕಿಸ್ತಾನದ ಮಿಲಿಟರಿ ವಕ್ತಾರ ಮೇಜರ್ ಜನರಲ್ ಬಾಬರ್ ಇಫ್ತಿಕರ್ ಸಂಜೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.

ಕ್ಷಿಪಣಿಯು 40,000 ಅಡಿ ಎತ್ತರದಲ್ಲಿ ಪ್ರಯಾಣಿಸುತ್ತಿತ್ತು. ಭಾರತೀಯ ಮತ್ತು ಪಾಕಿಸ್ತಾನ ವಾಯುಪ್ರದೇಶದಲ್ಲಿ ಪ್ರಯಾಣಿಕರ ವಿಮಾನಗಳು ಮತ್ತು ನೆಲದ ಮೇಲಿನ ನಾಗರಿಕರ ಆಸ್ತಿಗೆ ಅಪಾಯ ತರುತ್ತಿತ್ತು ಎಂದು ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಎನ್ಇಟಿ ಪರೀಕ್ಷೆಯನ್ನ ಕನ್ನಡದಲ್ಲೇ ನಡೆಸಿ- ನಾಗಾಭರಣ

0

ಮಕ್ಕಳು ತಮ್ಮ ಹಕ್ಕುಗಳಿಂದ ಭಾಷಾ ಕಾರಣಕ್ಕಾಗಿ ವಂಚಿತ ರಾಗುತ್ತಿರುವುದರಿಂದ ಯುಜಿಸಿ ಇನ್ನು ಮುಂದೆ ಎನ್‍ಇಟಿ ಪರೀಕ್ಷೆಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ನಡೆಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರು ಒತ್ತಾಯಿಸಿದ್ದಾರೆ.

ಕನ್ನಡದ ಮಕ್ಕಳು ಈ ಪರೀಕ್ಷೆಗಳನ್ನು ಅವರಿಗೆ ಬರದ ಭಾಷೆಗಳಲ್ಲಿ ಬರೆಯುವ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಫೆಲೋಶಿಪ್‍ಗೆ ಆಯ್ಕೆಯಾಗುತ್ತಿಲ್ಲ. ಯುಜಿಸಿ ಕನ್ನಡದಲ್ಲಿ ಪರೀಕ್ಷೆಗಳನ್ನು ನಡಿಸದೇ ಇರುವುದರಿಂದ ಹಿಂದಿಯೇತರ ಭಾಷೆಯ ಮಕ್ಕಳು ತಮ್ಮ ಹಕ್ಕುಗಳಿಂದ ಭಾಷಾ ಕಾರಣಕ್ಕಾಗಿ ವಂಚಿತರಾಗುತ್ತಿದ್ದಾರೆ.

ಈ ಬಾರಿಯ ಎನ್‍ಇಟಿ ಅಥವಾ ಜೆಆರ್ ಎಫ್ ಪರೀಕ್ಷೆಯಲ್ಲಿ ಕನ್ನಡ ಸ್ನಾತಕೋತ್ತರ ಪದವೀಧರರು ಎದುರಿಸಿದ ಸಮಸ್ಯೆಗಳು ತೀವ್ರ ಸ್ವರೂಪದವು. ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಹಿಂದಿ ಪ್ರಶ್ನೆಗಳು ಬಂದವು. ಕೆಲವು ಅಭ್ಯರ್ಥಿಗಳಿಗೆ ಕಂಪ್ಯೂಟರ್ ನಲ್ಲಿ ಪ್ರಶ್ನೆಪತ್ರಿಕೆಯೇ ತೆರೆದು ಕೊಳ್ಳಲಿಲ್ಲ. ಯುಜಿಸಿಯು ಹಲವು ಕನ್ನಡದ ವಿದ್ಯಾರ್ಥಿಗಳಿಗೆ ಮರುಪರೀಕ್ಷೆಯ ಅವಕಾಶ ನಿರಾಕರಿಸಿತು. ನಂತರ ಪ್ರಕಟವಾದ ಕೀ ಉತ್ತರಗಳಲ್ಲೂ ಈ ಸಮಸ್ಯೆ ಉಂಟಾಯಿತು.

ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ 2-3 ಬಾರಿ ಪತ್ರ ಬರೆದು ಗಮನ ಸೆಳೆದಿತ್ತು. ಈ ಕುರಿತು ರಾಜ್ಯಸಭಾ ಸದಸ್ಯ ಹನುಮಂತಯ್ಯ ಅವರು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ್ದರು. ಆದರೆ ಇವೆಲ್ಲವನ್ನು ಕಡೆಗಣಿಸಿದ ಯುಜಿಸಿ ಫೆ.19ರಂದು ಫಲಿತಾಂಶ ಪ್ರಕಟಿಸಿತು. ಕನ್ನಡದಲ್ಲಿ 100 ಅಭ್ಯರ್ಥಿಗಳು ಬೋಧನೆಯ ಅರ್ಹತೆ ಗಳಿಸಿದರೆ, ಕೇವಲ 15 ಅಭ್ಯರ್ಥಿಗಳು ಫೆಲೊಶಿಪ್‍ಗೆ ಆಯ್ಕೆಯಾಗಿದ್ದಾರೆ.

ವರ್ಷದಿಂದ ವರ್ಷಕ್ಕೆ ಹಿಂದಿ ಮತ್ತು ಸಂಸ್ಕತ ಅಭ್ಯರ್ಥಿಗಳ ಆಯ್ಕೆಯಲ್ಲಿ ಗಣನೀಯ ಏರಿಕೆ ಕಂಡುಬಂದರೆ, ಕನ್ನಡದ ಅಭ್ಯರ್ಥಿಗಳ ಆಯ್ಕೆಯಲ್ಲಿ ಆಶ್ಚರ್ಯಕರ ಇಳಿಕೆ ಇದೆ. ಅಲ್ಲದೆ, ಪ್ರಸಕ್ತ ಸಾಲಿನಲ್ಲಿ ಹಿಂದಿಗೆ ಅಂದಾಜು 182 ಕೋಟಿ ರೂ., ಸಂಸ್ಕತಕ್ಕೆ ಅಂದಾಜು 47 ಕೋಟಿ ರೂ.ಮೀಸಲಿಡಲಾಗಿದೆ. ಕನ್ನಡ ಭಾಷೆಗೆ ಕೇವಲ 3.3 ಕೋಟಿ ಮೀಸಲಿಟ್ಟಿದೆ.

ಕನ್ನಡವೂ ಸೇರಿದಂತೆ ಇತರ ದೇಶಭಾಷೆಗಳ ಅಧ್ಯಯನಗಳ ಅವಕಾಶಗಳನ್ನು ಹೀಗೆ ಮುಚ್ಚುತ್ತಾ ಬರುತ್ತಿರುವುದು ಒಕ್ಕೂಟ ವ್ಯವಸ್ಥೆಗೆ ಮಾಡುತ್ತಿರುವ ಹಾನಿಯೇ ಆಗಿದೆ. ಯುಜಿಸಿಯಿಂದ ಕನ್ನಡ ಸಂಶೋಧನೆಗೆ ಪ್ರೋತ್ಸಾಹವೇ ಇಲ್ಲವಾದಲ್ಲಿ ಸಹಜವಾಗಿಯೇ ಕರ್ನಾಟಕದ ವಿಶ್ವವಿದ್ಯಾಲಯಗಳ ಮೌಲ್ಯಾಂಕನ ಕುಸಿದು, ಯುಜಿಸಿಯಿಂದ ಬರುವ ಧನಸಹಾಯ ಕಡಿಮೆಯಾಗಿ ವಿಶ್ವ ವಿದ್ಯಾಲಯಗಳು ದುರ್ಬಲಗೊಳ್ಳುತ್ತವೆ. ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸಂಬಂಧ ಸಡಿಲವಾದರೆ ಈ ಟಿಪ್ಸ್ ನಿಮಗೆ ಅಗತ್ಯ

0

ನಮ್ದು ಏಳು ವರ್ಷದ ಪ್ರೆಂಡ್ ಶಿಪ್. ಒಂದು ದಿನ ಕಾರಣ ಇಲ್ಲದೆ ಅವಳು ಮಾತನಾಡುವುದನ್ನೇ ನಿಲ್ಲಿಸಿಬಿಟ್ಟಳು. ಲೆಕ್ಕವಿಲ್ಲದಷ್ಟು ಬಾರಿ ನಾನಾಗೇ ಮಾತನಾಡಿಸಿದರೂ ಅವಳು ಹ್ಞಾಂ, ಹ್ಞೂಂ, ಹಾಗೇನಿಲ್ಲ ಸುಮ್ನೆ ಅಂತಷ್ಟೇ ಉತ್ತರಿಸುತ್ತಿದ್ಲು.ಅವಳ ನೆನಪಾದಾಗಲೆಲ್ಲ ನನಗೆ ಯಾವ ಕೆಲಸಾನು ಮಾಡೋಕೆ ಮನ್ಸಾಗಲ್ಲ. ಕಾರಣ ಹೇಳದೆ ದೂರ ಆಗಿದ್ದು ಮನಸ್ಸಿಗೆ ಒಂಥರಾ ಹಿಂಸೆ ಆಗುತ್ತೆ. ….ಇದು ನನ್ನ ಜೊತೆ ಕಾಲೇಜಿಗೆ ಬರುತ್ತಿದ್ದ ಗೆಳತಿ ತಾನಿರುವ ಪಿಜಿ ಸ್ನೇಹಿತರೊಂದಿಗೆ ಆಗಾಗ ಹೇಳುವ ಮಾತು.

ನಾವಿಬ್ರೂ ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ವಿ. ಆರಂಭದಲ್ಲಿ ನಮ್ಮ ರಿಲೇಷನ್ಶಿಪ್ ಚೆನ್ನಾಗಿಯೇ ಇತ್ತು. ನನ್ನ ಫೋನ್ ಬ್ಯೂಸಿ ಬಂದಾಗಲೆಲ್ಲಾ ಸುಮ್ಮನಿರುತ್ತಿದ್ದ ಆತ ದಿನಕಳೆದಂತೆ ಅನುಮಾನಿಸೋಕೆ ಶುರುಮಾಡಿದ. ನಾನು ಮನೆಯವರೊಂದಿಗೆ ಮಾತನಾಡುವುದನ್ನೂ ಸಹಿಸಿಕೊಳ್ಳದಷ್ಟು ಪೊಸೆಸಿವ್ ಆದ. ಇದೇ ಕಾರಣಕ್ಕೆ ಅವನಿಗೂ ನನಗೂ ಯಾವಾಗಲೂ ಜಗಳ. ಕೆಲವೊಮ್ಮೆ ವಾರಗಟ್ಟಲೆ ಮಾತು ಬಿಡುತ್ತೇವೆ. ನಮ್ಮ ಸಂಬಂಧ ಬ್ರೇಕ್ ಆಗುವ ಭಯ ಕಾಡುತ್ತಿದೆ ಇದು ಶಿವಮೊಗ್ಗದ ಎಂಬಿಬಿಎಸ್ ವಿದ್ಯಾರ್ಥಿನಿ ರಮ್ಯಾಳ ಅಳಲು.

ಹೌದು ಇಂತಹ ಸಮಸ್ಯೆಗಳು ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಫ್ರೆಂಡ್ಸ್ ಅಷ್ಟೇ ಅಲ್ಲದೆ, ರಕ್ತಸಂಬಂಧಿ, ಒಡನಾಡಿಗಳ ನಡುವೆಯೂ ಚಿಕ್ಕಪುಟ್ಟ ಕಾರಣಕ್ಕೆ ಸಂಬಂಧ ಮುರಿದು ಬೀಳುತ್ತವೆ. ಕೆಲವೊಮ್ಮೆ ಸನ್ನಿವೇಶಗಳು ಕೂಡ ಇದಕ್ಕೆ ಕಾರಣವಾಗಬಹುದು.ಮಾನವ ಸಂಘಜೀವಿ. ಒಂಟಿಯಾಗಿ ಬದುಕಲಾರ. ಪ್ರತಿಯೊಬ್ಬರಿಗೂ ತಮ್ಮ ಕಷ್ಟ ಸುಖ ಹಂಚಿಕೊಳ್ಳಲು ಆತ್ಮೀಯರೊಬ್ಬರು ಇರಲೇಬೇಕು.

ತಿಳಿದೋ, ತಿಳಿಯದೋ ನಮ್ಮಿಂದ ಆಗುವ ಕೆಲವು ವರ್ತನೆಗಳು ಆತ್ಮೀಯರನ್ನು ಶಾಶ್ವತವಾಗಿ ನಮ್ಮಿಂದ ದೂರಸರಿಸಿ ಬಿಡುತ್ತದೆ. ಈ ಬಗ್ಗೆ ಸ್ವಲ್ಪ ಎಚ್ಚರ ವಹಿಸುವುದು ಉತ್ತಮ.

ಸಂಬಂಧ ಶಾಶ್ವತವಾಗಿ ಇರಬೇಕಾದರೆ ಒಳ್ಳೆಯ ಹಾಗೂ ಸಕಾರಾತ್ಮಕ ಆಲೋಚನೆಗಳು ಇರಬೇಕು. ಎಲ್ಲದಕ್ಕಿಂತ ಮಿಗಿಲಾಗಿ ಅವರ ನಡುವೆ ವಿಶ್ವಾಸ ,ಪ್ರೀತಿ ,ನಂಬಿಕೆ ಗೌರವಗಳು ನಿರಂತರವಾಗಿರಬೇಕು. ಸಣ್ಣದೊಂದು ಜಗಳ, ರಾಜಿ , ಮುನಿಸು ಎಲ್ಲವೂ ಕ್ಷಣಿಕವಾಗಬೇಕು. ಆಗಾಗೆ ತಮಾಷೆಯೂ ಇರಬೇಕು. ಸರಿ-ತಪ್ಪುಗಳು ಅವಲೋಕನದ ಜೊತೆಗೆ ತಾಳ್ಮೆಯು ಮುಖ್ಯ.

ಮಾತು ನಿಲ್ಲಿಸಿದರೆ ಸಮಸ್ಯೆ ಜಾಸ್ತಿಯೇ ಹೊರತು ನಿಲ್ಲುವುದಿಲ್ಲ. ಆದರೆ ವಾತಾವರಣ ತಿಳಿಯಾಗುವವರೆಗೂ ಕೋಪ ಹೆಚ್ಚಿದ್ದವರು ಮಾತು ಕಡಿಮೆ ಮಾಡುವುದು ಉತ್ತಮ.ಆತ್ಮೀಯರಿಂದ ಆಕಸ್ಮಿಕವಾಗಿ ನಡೆದ ಘಟನೆಯೊಂದು ನೋವುಂಟು ಮಾಡಿತು ಎಂದಾಕ್ಷಣ ಅವರನ್ನು ಶತ್ರುಗಳಂತೆ ಕಾಣದಿರು.

ಉದ್ದೇಶಪೂರ್ವಕವಲ್ಲದ ಆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಬಿಟ್ಟರೆ ,ಅಷ್ಟು ವರ್ಷದ ಬಾಂಧವ್ಯದಲ್ಲಿ ಸಣ್ಣದೊಂದು ಬಿರುಕು ಮೂಡಲು ಶುರುವಾಗುತ್ತದೆ.ಇದು ಮುಂದೊಂದು ದಿನ ಶಾಶ್ವತವಾಗಿ ಸಂಬಂಧವನ್ನೇ ಬೇರ್ಪಡಿಸುತ್ತವೆ.
ಪ್ರಾಮಿಸ್ ಮಾಡಿಯೂ ತಡವಾಗಿ ಬಂದರೆ ಅಥವಾ ಕೆಲಸ ಮಾಡದಿದ್ದರೆ ಸಣ್ಣದೊಂದು ಕೋಪದಲ್ಲಿ ಇಟ್ಸ್ ಓಕೆ .ಇನ್ನೊಂದು ಸಲ ಹೀಗೆ ಮಾಡಬೇಡ ಅನ್ನಿ.
ಆ ಮಾತು ಅವರ ಮನ ಕಟ್ಟುವಂತಿರಲಿ.
ಇನ್ನೊಮ್ಮೆ ಹೀಗಾಗುವುದು ಅಪರೂಪ.

ತಪ್ಪುಗಳಾಗುವುದು ಸಹಜ. ಅದನ್ನು ತಿದ್ದಿ ಅರ್ಥಮಾಡಿಸಿ, ಅದನ್ನೇ ಪದೇಪದೇ ಹೇಳುತ್ತಿರಬೇಡಿ.ಹೀಗೆ ಮಾಡಿದರೆ ನಿಮ್ಮ ಮೇಲಿರುವ ಧನಾತ್ಮಕ ಭಾವನೆ ಶಾಶ್ವತವಾಗಿ ಅಳಿಯಬಹುದು.

ಜಗಳ ಮಾಡದ ಮನುಷ್ಯನಿಲ್ಲ. ಇದು ತೀವ್ರ ಸ್ವರೂಪ ಪಡೆದುಕೊಳ್ಳುವ ಮುನ್ನವೇ ಸಂತಾನವಾಗಲಿ.ಈ ನಡುವೆ ನೀವು ಬೇಜಾರು ಅಥವಾ ಕೋಪದಲ್ಲಿ ಇತರೆ ಸ್ನೇಹಿತರೊಂದಿಗೆ ಕಾಲಕಳೆಯಲು ಪ್ರಾರಂಭಿಸಿದರೆ ಅವರಿಗೆ ಸಹಿಸಿಕೊಳ್ಳಲು ಕಷ್ಟ.

ನಿಮಗೆ ಅವರು ಬೇಕಿದ್ದರೆ ಹೇಗೆ ಮಾಡುವುದು ಸೂಕ್ತವಲ್ಲ. ಒಬ್ಬರಿಂದ ತಪ್ಪುಗಳು ಸಂಭವಿಸಿದಕ್ಕಿಂತ ಎರಡೂ ಕಡೆಯಿಂದಲೂ ಆಗಬಹುದಲ್ಲವೇ ? ಸಮಸ್ಯೆ ಏನೆಂದು ಅರಿತು ಕುಳಿತು ಬಗೆಹರಿಸಿಕೊಳ್ಳಿ. ಕೆಲವೊಮ್ಮೆ ಸಣ್ಣಪುಟ್ಟ ಜಗಳಗಳೇ ದೊಡ್ಡದಾಗಿ ಬೆಳೆದು ಮನಸ್ತಾಪ ಉಂಟಾಗುತ್ತವೆ. ದೂರ ಆಗುವ ಮುನ್ನವೇ ಈ ಬಗ್ಗೆ ತಾಳ್ಮೆಯಿಂದ ಮಾತನಾಡಿ. ತಪ್ಪು ಆಗಿರುವುದೆಲ್ಲಿ ಎಂಬುದನ್ನು ಅರಿತು ಸಾರಿ ಹೇಳಿ.
ಆತ್ಮೀಯರು ಹೊಸ ಬಟ್ಟೆ ಹಾಕಿಕೊಂಡು ಬಂದಾಗ ಅವರೊಡನೆ ಮೆಚ್ಚುಗೆಯ ನೋಟ ಬೀರಿ. ಅಡುಗೆ ರುಚಿಸದಾದಾಗ ನೀನು ತುಂಬಾ ಚೆನ್ನಾಗಿ ಅಡುಗೆ ಮಾಡ್ತಿಯ. ಆದ್ರೂ ಇವತ್ತು ಏನೋ ಬದಲಾಗಿದೆಯಲ್ಲ ?ಎಂದು ಹೇಳಿ. ಇದು ಅವರಿಗೆ ನಿಮ್ಮಲ್ಲಿರುವ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ.

ಹೇಳಿದ್ದನ್ನೆಲ್ಲವೂ ಕೇಳಿಸಿಕೊಳ್ಳುವ ಎರಡು ಕಿವಿಗಳು ಇರಬೇಕು. ಅದು ಆತ್ಮೀಯರದ್ದೇ ಆದರೆ ಅವರಷ್ಟು ಸಂತೃಪ್ತರು ಯಾರೂ ಇಲ್ಲ. ಕೆಲವೊಮ್ಮೆ ಇಡೀ ಆಯಾಸ, ಟೆನ್ಶನ್ ಎಲ್ಲದಕ್ಕೂ ನಿಮ್ಮ ನಗುವೆ ರಾಮಬಾಣವಾಗಬಹುದು.

ದಿನಕ್ಕೊಮ್ಮೆಯಾದರೂ ಒಟ್ಟಿಗೆ ಕೂತು ಪ್ರೀತಿಯಿಂದ ಮಾತನಾಡಿ. ಅವರ ಸಮಸ್ಯೆಗಳನ್ನು ಆಲಿಸಿ. ನೀವು ಆತ್ಮೀಯರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗದೇ ಇದ್ದರೂ, ತನ್ನ ನೋವು ದುಃಖವನ್ನು ಕೇಳುವವರು ಇದ್ದಾರೆ ಏನ್ನುವ ತೃಪ್ತಿ ಅವರಿಗಿರುತ್ತದೆ.

ಬದುಕಿನ ಪ್ರತಿಕ್ಷಣವನ್ನೂ, ಸಣ್ಣಪುಟ್ಟ ಸಂತೋಷಗಳನ್ನು ಅನುಭವಿಸುವುದೇ ಸ್ನೇಹ. ಪರಸ್ಪರ ವ್ಯಕ್ತಿತ್ವ, ಅಭಿಪ್ರಾಯ, ಕನಸು ,ಗುರಿಗಳನ್ನು ಗೌರವಿಸುವುದು ಜೀವನ ಪ್ರೀತಿ. ಇವೆರಡಿದ್ದರೆ ಸುಖಮಯ ಜೀವನ ನಿಮ್ಮದು…