ನಮ್ಮ ಕನ್ನಡ ನಾಡಿನ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಹತ್ವದ ಸ್ಥಾನ ಪಡೆದಿರುವ ಮೇಲುಕೋಟೆಯಲ್ಲಿನ ಬ್ರಹ್ಮೋತ್ಸವ ಕಾರ್ಯಕ್ರಮಗಳು ಪ್ರಸಿದ್ಧವಾಗಿವೆ. ಭೂ ವೈಕುಂಠ ಎಂಬ ಖ್ಯಾತಿಯ ಮಂಡ್ಯ ಜಿಲ್ಲೆ ಮೇಲುಕೋಟೆ ಹಲವು ಹತ್ತು ಪುರಾಣೇತಿಹಾಸಗಳನ್ನು ತನ್ನೊಡಲಲ್ಲಿ ತುಂಬಿಕೊಂಡ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದೆ.
ಕೊರೊನಾ ಕಾರಣದಿಂದ ಕಳೆದ 2 ವರ್ಷಗಳಿಂದ ಸರಳವಾಗಿ ನಡೆದಿದ ವೈರಮುಡಿ ಉತ್ಸವ ಈ ಬಾರಿ ಅದ್ಧೂರಿಯಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಸಿದ್ಧತೆ ಮತ್ತು ಕ್ರಮಗಳನ್ನು ವಹಿಸಲಾಗಿದೆ.
ಇಂದು ರಾತ್ರಿ 8 ಗಂಟೆಗೆ ನಡೆಯುವ ವೈರಮುಡಿ ಉತ್ಸವಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ವೈರಮುಡಿ ಉತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಕ್ಷೇತ್ರಕ್ಕೆ ಭಕ್ತರನ್ನು ಕರೆತರಲು ಕೆಎಸ್ ಆರ್ ಟಿಸಿ 150 ಬಸ್ ಗಳನ್ನು ವ್ಯವಸ್ಥೆ ಮಾಡಲಾಗಿದೆ. 1,500 ಕ್ಕೂ ಹೆಚ್ಚು ಮಂದಿ ಪೊಲೀಸರನ್ನು ಇಲಾಖೆ ಸಜ್ಜುಗೊಳಿಸಿದೆ ಎಂದು ತಿಳಿದುಬಂದಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ರಾಘವೇಂದ್ರ ರಾಜ್ ಕುಮಾರ್ಗೆ ಹುಷಾರಿಲ್ಲದಂತಾಗಿದೆ. ಅಪ್ಪು ನಮ್ಮನ್ನು ಅಗಲಿದ್ದಾರೆ. ಇದನ್ನೆಲ್ಲಾ ನೋಡಿಕೊಂಡು ನಾನು ಇರಬೇಕಲ್ಲ. ಏನ್ ಮಾಡೋದು ಹೇಳಿ, ನಾವೆಲ್ಲಾ ಒಟ್ಟಿಗೆ ಬೆಳೆದವರು ಎಂದು ನಟ, ಸಹೋದರ ಶಿವರಾಜ್ ಕುಮಾರ್ ಭಾವುಕರಾದರು.
ಈ ಹಿಂದೆಯೇ ಅಪ್ಪುವಿಗಾಗಿ ನಾನು ಒಂದು ಕಥೆ ಕೇಳಿದ್ದೆ. ಆ ಕಥೆಯಲ್ಲಿ ನನ್ನನ್ನ ಹಾಗೂ ಅಪ್ಪು ಅವರನ್ನ ಒಟ್ಟಿಗೆ ನೀವು ನೋಡ್ತೀರಿ. ಅದೊಂದು ಎಮೋಷನಲ್ ಸ್ಕ್ರಿಪ್ಟ್. ಇದೊಂದು ಡೆಡಿಕೇಷನ್ ಎಂದು ನಟ ಶಿವರಾಜ್ ಕುಮಾರ್ ಹೇಳಿದರು.
ನಟ ಶಿವರಾಜ್ಕುಮಾರ್ ನಟ ಪುನೀತ್ ರಾಜ್‍ಕುಮಾರ್ ಅಭಿನಯದ ಜೇಮ್ಸ್ ಚಿತ್ರತಂಡ ಪ್ರೀ ರಿಲೀಸ್ ಇವೆಂಟ್ ಅನ್ನು ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ದೊಡ್ಮನೆ ಕುಟುಂಬ ಸೇರಿದಂತೆ ವಿವಿಧ ತಾರೆಯರು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ನಟ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ಗೆ ಹುಷಾರಿಲ್ಲದಂತಾಗಿದೆ. ಅಪ್ಪು ನಮ್ಮನ್ನು ಅಗಲಿದ್ದಾರೆ. ಇದನ್ನೆಲ್ಲಾ ನೋಡಿಕೊಂಡು ನಾನು ಇರಬೇಕಲ್ಲ. ಏನ್ ಮಾಡೋದು ಹೇಳಿ, ನಾವೆಲ್ಲಾ ಒಟ್ಟಿಗೆ ಬೆಳೆದವರು ಎಂದು ಭಾವುಕರಾದರು. ನಾವು ಐದು ಜನ ಮಕ್ಕಳು. ಆದ್ರೆ ಒಬ್ಬ ಇಲ್ಲವಾದ. ಇದನ್ನ ಹೇಳಿಕೊಳ್ಳೋಕೆ ಒಂಥರಾ ಬೇಸರ. ಈ ಟೈಮ್ ಬರುತ್ತೆ ಅಂತಾ ನಾನು ಅಂದುಕೊಂಡಿರಲಿಲ್ಲ.
ಅಪ್ಪ-ಅಮ್ಮ 100 ವರ್ಷ ಇರಬೇಕು ಅಂತ ಆಸೆ ಇತ್ತು. ಆದ್ರೆ ಅವರು ಹೋದ್ರು. ಆದ್ರೆ ಅಪ್ಪುವಿಗೆ ತುಂಬಾ ಚಿಕ್ಕ ವಯಸ್ಸು. ನಟನೆಗೂ ಮೀರಿ ಅವನ್ನಲ್ಲಿ ಮಾನವೀಯತೆ ಇತ್ತು ಎಂದು ನೆನೆದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಕೆನಡಾದಲ್ಲಿ ಸಂಭವಿಸಿದ ಆಟೋ ಅಪಘಾತದಲ್ಲಿ ಕನಿಷ್ಠ 5 ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
ಇಬ್ಬರು ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೆನಡಾದಲ್ಲಿನ ಭಾರತದ ಕಮಿಷನರ್ ಅಜಯ್ ಬಿಸಾರಿಯಾ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
ಮಾರ್ಚ್ 13 ರಂದು ಟೊರೊಂಟೊ ಬಳಿ ಅಪಘಾತ ಸಂಭವಿಸಿದೆ. ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ತಂಡವು ಸಹಾಯಕ್ಕಾಗಿ ಸಂತ್ರಸ್ತರ ಸ್ನೇಹಿತರೊಂದಿಗೆ ಸಂಪರ್ಕದಲ್ಲಿದೆ. ಅಪಘಾತದಲ್ಲಿ ಹರ್ ಪ್ರೀತ್ ಸಿಂಗ್, ಜಸ್ಪಿಂದರ್ ಸಿಂಗ್, ಕರಣ್ ಪಾಲ್ ಸಿಂಗ್, ಮೋಹಿತ್ ಚೌಹಾನ್, ಮತ್ತು ಪವನ್ ಕುಮಾರ್ ಸಿಂಗ್ ಅವರು ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ.
ಟ್ವಿಟರ್‌ನಲ್ಲಿ ಅಜಯ್ ಬಿಸಾರಿಯಾ ಅವರು ಸಂತ್ರಸ್ತರ ಕುಟುಂಬಗಳಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಶ್ರೇಯಸ್ ಅಯ್ಯರ್ (92) ಅವರು ಬಾರಿಸಿದ ಅರ್ಧ ಶತಕ ಹಾಗೂ ಬೌಲರ್ ಗಳ ಸಾಂಘಿಕ ಹೋರಾಟದ ಮೂಲಕ ಭಾರತ ತಂಡ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಹಾಗೂ ಕೊನೆಯ ಪಂದ್ಯದ ಮೊದಲ ದಿನದಾಟದಲ್ಲಿ ಪಾರಮ್ಯ ಮೆರೆದಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಆರಂಭಗೊಂಡ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು . ಆದರೆ ಆರಂಭದಲ್ಲಿ ಶ್ರೀಲಂಕಾ ಬೌಲರ್ ಗಳು ಮುನ್ನಡೆ ಸಾಧಿಸಿದ್ದರಿಂದ ಭೋಜನ ವಿರಾಮಕ್ಕೂ ಮೊದಲು ಭಾರತ 59.1 ಓವರ್ ಗಳಲ್ಲಿ 252 ರನ್ ಗಳಿಗೆ ಆಲ್ ಔಟ್ ಆಯಿತು.
ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ತಂಡ ದಿನದಾಟದ ಅಂತ್ಯಕ್ಕೆ 30 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 86 ರನ್ ಬಾರಿಸಿದ್ದು, 166 ರನ್ ಗಳ ಹಿನ್ನಡೆ ಉಂಟಾಯಿತು.
ಮೊದಲ ದಿನದಾಟದಲ್ಲಿ ಈ ತಂಡಗಳು ಒಟ್ಟಾರೆ 338 ರನ್ ಕ್ರೋಢೀಕರಿಸಿದರೆ ಒಟ್ಟು 16 ವಿಕೆಟ್ ಗಳು ಪತನಗೊಂಡವು. ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ರೋಹಿತ್ ಶರ್ಮಾ (15) ಮಯಾಂಕ್ ಅಗರ್ವಾಲ್ (4) ವಿಕೆಟ್ ಪತನಗೊಳ್ಳುವ ಮೂಲಕ ಆರಂಭಿಕ ಹಿನ್ನಡೆ ಉಂಟಾಯಿತು.
ನಂತರ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ಶ್ರೇಯಸ್ ಅಯ್ಯರ್ ಉಪಯುಕ್ತ ಅರ್ಧ ಶತಕ ಬಾರಿಸಿದರು. 98 ಎಸೆತಗಳನ್ನು ಎದುರಿಸಿದ ಅವರು 4 ಸಿಕ್ಸರ್ ಹಾಗೂ ಹತ್ತು ಬೌಂಡರಿ ಗಳೊಂದಿಗೆ 92 ರನ್ ಕಲೆಹಾಕಿದರು. ಅಂತಿಮವಾಗಿ ಶತಕ ಬಾರಿಸುವ ಯತ್ನದಲ್ಲಿದ್ದ ಅವರು ಪ್ರವೀಣ್ ವಿಕ್ರಮ ಅವರ ಬೌಲಿಂಗ್ ನಲ್ಲಿ ಸ್ಟಂಪ್ ಆದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿರುವ ಮೈಸೂರು ವಿಶ್ವವಿದ್ಯಾನಿಲಯವು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡುವುದಾಗಿ ಘೋಷಿಸಿದೆ.
ವಿಶೇಷವೆಂದರೆ 46 ವರ್ಷದ ಹಿಂದೆ ವರನಟ ಡಾ.ರಾಜ್‍ಕುಮಾರ್ ಅವರಿಗೂ ಮೈಸೂರು ವಿವಿ ಗೌರವ ಡಾಕ್ಟರೇಟ್ ನೀಡಿತ್ತು. ಸದ್ಯ ಪುನೀತ್ಗೆ ಮಾರ್ಚ್ 15ರಂದು ನಡೆಯುವ ವಿವಿ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳ ನಿಯೋಗವನ್ನು ಭೇಟಿ ಮಾಡಿದ್ದರು. ಶತಮಾನೋತ್ಸವ ಪೂರೈಸಿರುವ ವಿವಿಯಿಂದ ಡಾಕ್ಟರೇಟ್ ಸ್ವೀಕರಿಸಲು ಅಶ್ವಿನಿ ಕೂಡಾ ಒಪ್ಪಿಕೊಂಡಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ರಿಂದ ಘಟಿಕೋತ್ಸವದಲ್ಲಿ ದಿವಂಗತ ನಟ ಪುನೀತ್ ರಾಜ್‌ಕುಮಾರ್‌ಗೆ ಮರಣೋತ್ತರ ಪ್ರಶಸ್ತಿ ಪ್ರಧಾನ ಕಾರ್ಯ ನಡೆಸಲಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಳೆದ ವರ್ಷ ಅಕ್ಟೋಬರ್ 29ರಂದು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದು ಅವರ ಕುಟುಂಬ ವರ್ಗಕ್ಕೆ ರಾಜ್ಯ-ಪರರಾಜ್ಯಗಳು, ಪರ ದೇಶಗಳ ಅಭಿಮಾನಿಗಳು, ಕುಟುಂಬವರ್ಗ, ಬಂಧು-ಮಿತ್ರರಿಗೆ ತೀವ್ರ ದುಃಖವನ್ನುಂಟು ಮಾಡಿತ್ತು. ಕನ್ನಡ ಸಿನಿಮಾ ಕ್ಷೇತ್ರಕ್ಕೆ ಮತ್ತು ಅವರ ಸಮಾಜಮುಖಿ ಕೆಲಸಗಳನ್ನು ಪರಿಗಣಿಸಿ ರಾಜ್ಯ ಸರ್ಕಾರ ಅವರಿಗೆ ಕರ್ನಾಟಕ ರತ್ನ ಗೌರವ ಘೋಷಿಸಿದ್ದು, ಸಮಾರಂಭ ನಡೆಯಬೇಕಿದೆ. ಸಿನಿಮಾ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಪ್ಪು ಅವರನ್ನು ನೆನಪಿಸಿಕೊಳ್ಳಲಾಗುತ್ತಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಸಂತೋಷ ಎಂಬುದಕ್ಕೆ ಯಾವುದೇ ಆದ ನಿರ್ದಿಷ್ಟ ಕಾರಣಗಳಿಲ್ಲ. ಸಂತೋಷ ಎನ್ನುವುದು ಯಾವುದೋ ನಿರ್ದಿಷ್ಟವಾದ ಕೆಲಸವನ್ನು ಮಾಡಿದರೆ, ಯಾವುದೋ ಒಂದು ನಿರ್ದಿಷ್ಟ ಸಾಧನೆಯನ್ನ ಮಾಡಿದರೆ ,ಯಾವುದೋ ಜಯಗಳಿಸಿದರೆ ಸಿಗುವಂತಹದಲ್ಲ.
ಪ್ರತಿಯೊಬ್ಬರೂ ಸಂತೋಷಕ್ಕೆ ತಮ್ಮದೇ ಆದ ವ್ಯಾಖ್ಯಾನವನ್ನು ಸಿದ್ಧಪಡಿಸಿಕೊಂಡಿದ್ದಾರೆ. ಸಂತೋಷ ಎನ್ನುವುದು ಹೀಗೆಯೇ ಇರುತ್ತದೆ ಎಂದು ಹೇಳಲಾಗದು. ಹಾಗಂದ ಮಾತ್ರಕ್ಕೆ ಇದು ಇಲ್ಲದೇ ಮನುಷ್ಯ ಬಹುಕಾಲ ತೃಪ್ತಿಯಿಂದ ಇರಲಾರ.
ಜೀವನದಲ್ಲಿ ಉತ್ಸಾಹದಿಂದ ಇರಲು ಈ ಸಂತೋಷ ಎನ್ನುವುದು ನಮ್ಮೆಲ್ಲರಿಗೂ ಬಹಳ ಮುಖ್ಯ. ಎಲ್ಲರ ಮನಸ್ಸಿನಲ್ಲಿಯೂ ಒಂದೇ ಆಸೆ. ಜೀವನ ಸಂತೋಷದಿಂದ, ನೆಮ್ಮದಿಯಿಂದ ಕಳೆದರೆ ಸಾಕು ಎನ್ನುವ ಅಭಿಪ್ರಾಯ ಎಲ್ಲರದ್ದೂ ಆಗಿದೆ.
ಹಾಗಾದ್ರೆ ಈ ಸಂತೋಷ ಎಲ್ಲಿ ಸಿಗುತ್ತೆ ? ಹೇಗೆ ಸಿಗುತ್ತೆ ? ಅದನ್ನು ಯಾವ ರೀತಿ ಪಡೆಯಬಹುದು ಎನ್ನುವ ಹಲವಾರು ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಹುಟ್ಟಿಕೊಳ್ಳುತ್ತವೆ.
ಬಹಳಷ್ಟು ಮಂದಿ ಸಂತೋಷವನ್ನು ಹಣದಿಂದ ಕೊಡುವ ಪ್ರಯತ್ನ ಮಾಡುತ್ತಾರೆ. ಇನ್ನು ಕೆಲವರು ಬೇಕಾದಷ್ಟು ಸಂಪಾದನೆ ಇದ್ದರೆ ಸಂತೋಷ ತಾನಾಗಿಯೇ ಬರುತ್ತದೆ ಎಂದು ನಂಬುತ್ತಾರೆ. ಇನ್ನೂ ಕೆಲವರು ನೆಮ್ಮದಿ ಇದ್ದ ಕಡೆ ಸಂತೋಷ ತಾನಾಗಿಯೇ ಅರಸಿ ಬರುತ್ತದೆ ಎಂದು ಕಾಯುತ್ತಾರೆ. ಆದರೆ, ಸಂತೋಷಕ್ಕೆ ಇಂಥದೇ ನಿರ್ದಿಷ್ಟ ಕಾರಣಗಳಿಲ್ಲ. ಅದು ನಮ್ಮೊಳಗೇ ಇದೆ. ತಜ್ಞರ ಪ್ರಕಾರ ಯಾವ ಮನುಷ್ಯ ಪ್ರತಿ ಕೆಲಸದಲ್ಲೂ ನೆಮ್ಮದಿ ಕಾಣುತ್ತಾನೆ ಸಂತೋಷವು ಸಹ ಅವನೇನು ಹಿಂಬಾಲಿಸುತ್ತದೆ.
ಜೀವನದಲ್ಲಿ ಸಂತೋಷವಾಗಿರಲು ಯಾವುದೇ ಸಂದರ್ಭ ಬಂದರೂ ಎಲ್ಲವನ್ನೂ ಎದುರಿಸಿ, ಬಂದದ್ದನ್ನು ಬಂದಹಾಗೆ ಸ್ವೀಕರಿಸುವ ಮನಸ್ಥಿತಿ ಉಳ್ಳವರಿಗೆ ಸಂತೋಷವಾಗಿರಲು ಯಾವುದೇ ಕಾರಣಗಳ ಬೇಕಿಲ್ಲ.
ಸಂಶೋಧನೆಗಳ ಪ್ರಕಾರ, ಪ್ರಪಂಚದಲ್ಲಿಯೇ ಅತಿ ಹೆಚ್ಚು ಮಂದಿ ಸಂತೋಷದಿಂದ ಇರುವಂತಹ ದೇಶ ನೈಜೀರಿಯಾ ಆಗಿದೆ. ಇಂದಿಗೂ ಆನಂದದ ಸ್ಥಿತಿಯ ವಿಷಯದಲ್ಲಿ ಭಾರತವು 133ನೇ ಸ್ಥಾನದಲ್ಲಿದೆ ಎನ್ನಲಾಗುತ್ತದೆ. ಆಫ್ರಿಕಾ ದೇಶಗಳಲ್ಲಿ ಇರುವವರು ತುಂಬಾ ಆನಂದದಿಂದ ಜೀವನ ಸಾಧಿಸಲಿಕ್ಕೆ ಕಾರಣವೆಂದರೆ ಮೊದಲನೆಯದು ಸಂಗೀತ, ಎರಡನೆಯದು ದೈವ ಎನ್ನಲಾಗುತ್ತದೆ. ಸಂಗೀತ ಹಾಗೂ ದೇವರಮೊರೆ ಹೋದವರ ಮನಸ್ಸು ಆಹ್ಲಾದಕರವಾಗಿರುತ್ತದೆ ಎಂದು ತಿಳಿದವರು ಹೇಳುತ್ತಾರೆ.
ಸಾಮಾನ್ಯವಾಗಿ ಸಂತೋಷವನ್ನು ಕಾಣುವುದರ ಬಗ್ಗೆ ಮಾತನಾಡುವುದಾದರೆ ಹಾಸ್ಯದಲ್ಲಿ ನಾವು ಸಂತೋಷವನ್ನ ಕಾಣಬಹುದು. ಯಾರಾದರೂ ಜೋಕ್ಸ್ ಹೇಳಿದರೆ, ಹಾಸ್ಯ ಪ್ರದರ್ಶನಗಳನ್ನು ಅವರು ಮಾಡುವ ವ್ಯಾಖ್ಯೆಗಳಿಗೆ ನಾವು ಗಂಭೀರವಾಗಿ ಸ್ಪಂದಿಸುವುದಿಲ್ಲ. ಏಕೆಂದರೆ ವಿಷಯಗಳನ್ನು ನಾವು ಹಾಸ್ಯಕ್ಕೆಂದೇ ಸೀಮಿತಗೊಳಿಸಿದ್ದೇವೆ. ಅದರಿಂದಾಗಿಯೇ ನಮಗೆ ಹಾಸ್ಯದ ನಗುವಿನಲ್ಲಿ ಸಂತೋಷ, ನಿಶ್ಚಿಂತೆ ಇರುತ್ತದೆ.
ಸಂತೋಷಗಳಲ್ಲಿಯೂ ಹಲವು ಪ್ರಕಾರಗಳಿವೆ ಎಂದರೆ ತಪ್ಪಾಗಲಾರದು. ಕೆಲವರು ಸಾಧನೆಯಿಂದ ಸಂತೋಷಪಡುತ್ತಾರೆ. ಒಂದು ಗುರಿಯನ್ನು ಇಟ್ಟುಕೊಂಡು ಅದನ್ನು ತಲುಪಲು ತೀವ್ರವಾದ ಪ್ರಯತ್ನ ನಡೆಸಿ ಕೊನೆಗೆ ಸಫಲತೆಯನ್ನು ಕಂಡಾಗ ಸಂತೋಷ ಪಡುವವರು ಹಲವರು. ಪ್ರತಿಸ್ಪರ್ಧಿಗಳನ್ನು ಪರಾಭವಗೊಳಿಸಿ ಸಂಪಾದಿಸಿದ ಸಂತೋಷವು ಕೂಡ ತುಂಬಾ ವಿಶೇಷತೆಯನ್ನು ಹೊಂದಿರುತ್ತದೆ. ಅದನ್ನು ಸಮರ ಸಂತೋಷ ಎನ್ನಬಹುದೇನೋ….
ಇದರಲ್ಲಿ ಆಧ್ಯಾತ್ಮಿಕ ಸಂತೋಷವು ಒಂದು. ಮನಃಪೂರ್ವಕವಾಗಿ ಸಂಪೂರ್ಣವಾಗಿ ದೇವರನ್ನು ನಂಬುವುದು. ಈ ಪ್ರಾಪಂಚಿಕ ಭಾರವನ್ನೆಲ್ಲಾ ದೇವರಿಗೆ ಅರ್ಪಿಸುವುದರಿಂದ ಮನುಷ್ಯನ ಮನಸ್ಸು ತುಂಬಾ ಹಗುರವಾಗುತ್ತದೆ. ಇಂತಹ ಭಾವನೆ ಮನುಷ್ಯನಿಗೆ ಹೆಚ್ಚಿನ ಸಂತೋಷವನ್ನುಂಟು ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
ಅದೇನೇ ಇರಲಿ, ಇಂದು ಹುಟ್ಟಿ ನಾಳೆ ಸಾಯುವ ಈ ನಾಲ್ಕು ದಿನದ ಜೀವನದಲ್ಲಿ ಅಸೂಹೆ, ಹೊಟ್ಟೆಕಿಚ್ಚು, ದುಷ್ಟಬುದ್ಧಿ ಗಳನ್ನು ದೂರವಿಟ್ಟು ಜೀವನದ ಪ್ರತಿ ಕ್ಷಣವನ್ನು ಅನುಭವಿಸುತ್ತ ಸಂತೋಷದಿಂದ ಬದುಕನ್ನು ಸಾಗಿಸಿದಾಗಲೇ ಈ ಬದುಕಿಗೊಂದು ಅರ್ಥ ಸಿಗಬಹುದು…. ಈ ಸಂತೋಷವೇ ನಮ್ಮ ಆರೋಗ್ಯ ಆಯಸ್ಸು ಹಾಗೂ ನೆಮ್ಮದಿಗೆ ಮೂಲಕಾರಣ…
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಅಮೆರಿಕ ಒಪ್ಪುವುದಾದರೆ, ಶಸ್ತ್ರಾಸ್ತ್ರಗಳ ಬಳಕೆಗೆ ಕಡಿವಾಣ ಹಾಕುವ ಕುರಿತು ಆ ದೇಶದ ಜೊತೆ ಮಾತುಕತೆಗೆ ಮಾತುಕತೆಗೆ ಸಿದ್ಧ’ ಎಂದು ರಷ್ಯಾದ ವಿದೇಶಾಂಗ ವ್ಯವಹಾರಗಳ ಉಪ ಸಚಿವ ಸೆರ್ಗಿ ರ‍್ಯಾಬ್‌ಕೋವ್ ಶನಿವಾರ ಹೇಳಿದ್ದಾರೆ.
ಶಸ್ತ್ರಾಸ್ತ್ರಗಳ ಕಡಿವಾಣ ಹಾಕುವ ವಿಷಯಕ್ಕೆ ಸಂಬಂಧಿಸಿ ಅಮೆರಿಕ ಮತ್ತು ರಷ್ಯಾ ನಿರಂತರ ಸಂಪರ್ಕದಲ್ಲಿವೆ. ಆದರೆ ಉಕ್ರೇನ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ಮುಂದುವರಿಸಲು ಅಮೆರಿಕ ಸಿದ್ಧವಿರುವಂತೆ ಕಾಣುತ್ತಿಲ್ಲ’ ಎಂದು ತಿಳಿಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಜೀರೋ ಕೊವಿಡ್ ಕಾರ್ಯ ವಿಧಾನದ ನ್ಯೂನತೆಗಳನ್ನು ಹಾಂಗ್ ಕಾಂಗ್‌ನಲ್ಲಿ ಬಹಿರಂಗಪಡಿಸಲಾಗಿದೆ. ಅಲ್ಲಿ ದಕ್ಷಿಣ ಚೀನಾದ ನಗರದ ಸರ್ಕಾರದಿಂದ ಸಂದೇಶಗಳು ಆಹಾರ ಸರಬರಾಜುಗಳ ಸಂಗ್ರಹಣೆಗೆ ಉತ್ತೇಜನ ನೀಡಿವೆ.
ಕೊರೊನಾ ಮೊದಲು ಪತ್ತೆಯಾದ ಚೀನಾದಲ್ಲಿ ಕೊವಿಡ್ 19, ಒಮಿಕ್ರಾನ್ ಸಾಂಕ್ರಾಮಿಕತೆ ಏರಿಕೆಯಾಗುತ್ತಲೇ ಇದೆ. ಈಗಾಗಲೇ ಈಶಾನ್ಯ ಚೀನಾದಲ್ಲಿ ಲಾಕ್‌ಡೌನ್ ಮಾಡಲು ಆದೇಶಿಸಲಾಗಿದೆ.
ಇನ್ನೊಂದೆಡೆ ಹಾಂಗ್ ಕಾಂಗ್‌ನಲ್ಲಿ ಒಮಿಕ್ರಾನ್ ಅತ್ಯಂತ ವೇಗವಾಗಿ ಹರಡುತ್ತಿದೆ. ಅಲ್ಲಿ ಸಾಮೂಹಿಕ ತಪಾಸಣೆ, ಕ್ವಾರಂಟೈನ್ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಮಧ್ಯೆ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಎದುರಾಗಿದೆ. ಮತ್ತೊಮ್ಮೆ ಲಾಕ್‌ಡೌನ್ ಆಗಬಹುದು ಎಂಬ ಭಯದಲ್ಲಿ, ಅಗತ್ಯ ವಸ್ತುಗಳ ಖರೀದಿಗಾಗಿ ಸೂಪರ್ ಮಾರ್ಕೆಟ್, ಮಳಿಗೆಗಳಿಗೆ ಜನರು ಮುಗಿಬೀಳುತ್ತಿದ್ದಾರೆ. ಅದಕ್ಕಿಂತ ಭಯಾನಕವೆಂದರೆ ಶವಾಗಾರಗಳಲ್ಲೂ ಜಾಗವಿಲ್ಲದಂತಾಗಿದೆ.
ಹೀಗಾಗಿ ಆಸ್ಪತ್ರೆ ಆಡಳಿತಗಳು ಶವಗಳನ್ನು ಶೈತ್ಯೀಕರಿಸಿದ ಶಿಪ್ಪಿಂಗ್ ಕಂಟೇನರ್ಗಳಲ್ಲಿ ಇಡುತ್ತಿದ್ದಾರೆ. ಜಾಗತಿಕವಾಗಿ ಕೊರೊನಾದಿಂದ ಮೃತಪಡುವವರ ಸಂಖ್ಯೆ ಹೆಚ್ಚಾಗಿದೆ. ಈ ವಾರದಲ್ಲಿ ಆರು ಮಿಲಿಯನ್ಗೆ ತಲುಪಿದೆ. ಹಾಂಗ್ಕಾಂಗ್ನಲ್ಲಿ 2021ರ ಡಿಸೆಂಬರ್ 31 ರಿಂದ ಇಲ್ಲಿಯವರೆಗೆ ಸುಮಾರು 2000 ಜನರು ಕೊರೊನಾದಿಂದ ಮೃತಪಟ್ಟಿದ್ದಾರೆ. ಲಸಿಕೆ ನೀಡಿಕೆ ವೇಗ ಕುಂಠಿತಗೊಂಡಿದ್ದೇ ಕೊರೊನಾ ಹೆಚ್ಚಲು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಅದರಲ್ಲೂ ವಯಸ್ಸಾದವರಿಗೆ ಲಸಿಕೆ ನೀಡಿಕೆ ಪ್ರಮಾಣ ತುಂಬ ಕಡಿಮೆಯಾಗಿದೆ. ಹಾಂಗ್ಕಾಂಗ್ನಲ್ಲಿ ಪ್ರಾರಂಭವಾದ ಪ್ರಸಕ್ತ ಅಲೆಯಲ್ಲಿ ಸುಮಾರು 1153 ಮಂದಿ ಮೃತಪಟ್ಟವರಲ್ಲಿ ಶೇ.8ರಷ್ಟು ಮಂದಿ ಮಾತ್ರ ಎರಡೂ ಡೋಸ್ ಕೊರೊನಾ ಲಸಿಕೆ ಪಡೆದವರು ಎಂಬುದು ದೃಢಪಟ್ಟಿದೆ.
ಅಲ್ಲಿ ದಕ್ಷಿಣ ಚೀನಾದ ನಗರದ ಸರ್ಕಾರದಿಂದ ಸಂದೇಶಗಳು ಆಹಾರ ಸರಬರಾಜುಗಳ ಸಂಗ್ರಹಣೆಗೆ ಉತ್ತೇಜನ ನೀಡಿವೆ ಮತ್ತು ಜನರನ್ನು ಪ್ರತ್ಯೇಕತೆಗೆ ಕರೆದೊಯ್ಯಲಾಗುತ್ತದೆ ಎಂಬ ಸಾರ್ವಜನಿಕ ಭಯವನ್ನು ಉಂಟುಮಾಡಿದೆ. ಶಾಂಘೈನಲ್ಲಿ, ಕೆಲವು ವಸ್ತುಸಂಗ್ರಹಾಲಯಗಳನ್ನು ಶುಕ್ರವಾರದಿಂದ ತಾತ್ಕಾಲಿಕವಾಗಿ ಮುಚ್ಚಲಾಗುವುದು ಎಂದು ನಗರ ಸರ್ಕಾರ ಹೇಳಿದೆ.
ದಕ್ಷಿಣದ ನಗರವಾದ ಶೆನ್‌ಜೆನ್ ಫೆಬ್ರವರಿಯಲ್ಲಿ ಆನ್‌ಲೈನ್ ಶಿಕ್ಷಣ ಆರಂಭವಾದಾಗಿನಿಂದ ಪ್ರಕರಣಗಳು ಹೆಚ್ಚಾಗಲು ಪ್ರಾರಂಭಿಸಿದವು. ಬೀಜಿಂಗ್‌ನಲ್ಲಿ ಹಲವಾರು ವಸತಿ ಸಮುಚ್ಚಯ ಸಂಪೂರ್ಣವಾಗಿ ಅಥವಾ ಭಾಗಶಃ ಲಾಕ್‌ಡೌನ್ ಮಾಡಲಾಗಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಕರ್ತವ್ಯ ನಿರತ ಸರ್ಕಾರಿ ನೌಕರರ ಮೇಲೆ ಹಲ್ಲೆ ನಡೆಸುವ ಅನಾಗರಿಕ ವ್ಯಕ್ತಿಗಳ ಮೇಲೆ ಜಾಮೀನು ಸಿಗದಂತಹ ಕಠಿಣ ರೀತಿಯ ಎಫ್‌ಐಆರ್ ಹಾಕಿ ಬಂಧನಕ್ಕೆ ಒಳಪಡಿಸುವ ಕಾನೂನು ಜಾರಿಗೆ ತರಲು ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ತಿಳಿಸಿದರು.
ಮಂಗಳೂರು ನಗರದ ಮಂಗಳ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಂಗಳೂರು ಮಹಾನಗರ ಪಾಲಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಅವರು ಮಾತನಾಡಿದರು.
ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಯಾವುದೇ ರೀತಿಯ ವಿಡಿಯೊ ಚಿತ್ರೀಕರಣ ನಡೆಸದಂತೆ ಬಿಗಿ ಕಾನೂನನ್ನು ಮುಂದಿನ ದಿನಗಳಲ್ಲಿ ತರಲು ಸಹ ವಿನಂತಿಸಲಾಗಿದೆ. ಅದೂ ಸಹ ಮುಂದಿನ ದಿನಗಳಲ್ಲಿ ಜಾರಿಗೆ ಬರಲಿದೆ ಎಂದರು. ಸರ್ಕಾರಿ ನೌಕರರ ಸಮಸ್ಯೆಗಳಿಗೆ ರಾಜ್ಯ ಸಂಘ ಸ್ಪಂದಿಸುತ್ತಿದ್ದು, ಸರ್ಕಾರಿ ನೌಕರರಿಗೆ ಸೆಂಟ್ರಲ್ ಪೇ ಸ್ಕೀಂಮ್ ಅನ್ನು ಜಾರಿಗೊಳಿಸಲು ಪ್ರಯತ್ನ ನಡೆಯುತ್ತಿದೆ. ಎನ್‌ಪಿಎಸ್ ನಿವೃತ್ತಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಮಾದರಿಯ ನಿವೃತ್ತಿ ಯೋಜನೆಯನ್ನು ಕಡ್ಡಾಯಗೊಳಿಸುವ ಬಗ್ಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಸರ್ಕಾರಿ ನೌಕರರ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ಸರ್ಕಾರಿ ನೌಕರರ ಸಮಸ್ಯೆಗಳನ್ನು ಸದನದಲ್ಲೂ ಪ್ರಸ್ತಾಪ ಮಾಡಿದ್ದಾರೆ. ಈಗಿನ ಮುಖ್ಯಮಂತ್ರಿ ಬಳಿ ಈಗಾಗಲೇ ಸರ್ಕಾರಿ ನೌಕರರ ಸಮಸ್ಯೆಗಳ ಕುರಿತು ನಿಯೋಗದಲ್ಲಿ ಮಾತುಕತೆ ನಡೆದಿದೆ ಎಂದು ಹೇಳಿದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಕೇರಳದ ಎರ್ನಾಕುಲಂನಲ್ಲಿ ಶನಿವಾರ ಹಿಜಾಬ್ ಧರಿಸಿದ ಅನೇಕ ಮಹಿಳೆಯರು, ಹುಡುಗಿಯರು ದೊಡ್ಡ ಪ್ರಮಾಣದಲ್ಲಿ ಜಾಥಾ,ಹಾಗೂ ಸಭೆ ನಡೆಸಿದರು.
ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಬ್ಯಾನರ್ ಹಿಡಿದು ಜಾಥಾ ನಡೆಸಿದ ಇವರು, ಹಿಜಾಬ್ ನಿಷೇಧದ ವಿರುದ್ಧ ಘೋಷಣೆಗಳನ್ನು ಕೂಗಿದರು. ಶಾಲಾ ಸಮವಸ್ತ್ರದ ಮೇಲೆ ಹಿಜಾಬ್ ಧರಿಸುವಂತಿಲ್ಲ ಎಂಬ ಕರ್ನಾಟಕ ಸರ್ಕಾರದ ಸುತ್ತೋಲೆ ಮತ್ತು ಕೇರಳದ ಶಾಲೆಗಳಲ್ಲಿ ವಿದ್ಯಾರ್ಥಿ ಪೊಲೀಸ್ ಕೆಡೆಟ್ಗಳಲ್ಲಿರುವ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವಂತಿಲ್ಲ ಎಂದು ಕೇರಳ ಸರ್ಕಾರ ಹೊರಡಿಸಿದ್ದ ಸುತ್ತೋಲೆಗಳನ್ನು ಹರಿದು ಹಾಕುವ ಮೂಲಕ ಸರ್ಕಾರಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಹಿಜಾಬ್ ವಿವಾದ ಬೂದಿ ಮುಚ್ಚಿದ ಕೆಂಡದಂತೆ ನಡೆಯುತ್ತಲೇ ಇದೆ. ಅದು ದೇಶವ್ಯಾಪಿ ವಿಸ್ತರಿಸಿದ್ದು ಗೊತ್ತೇ ಇದೆ. ಕೇರಳದ ಶಾಲೆಗಳಲ್ಲಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಎಂಬ ವಿಭಾಗವಿದೆ. ಇದೊಂದು ಯುವಜನ ಅಭಿವೃದ್ಧಿ ಯೋಜನೆಯಾಗಿದ್ದು, ಇದರಲ್ಲಿ ವಿದ್ಯಾರ್ಥಿಗಳಲ್ಲಿ ಕಾನೂನು ಪಾಲನೆ, ಶಿಸ್ತು, ನಾಗರಿಕ ಪ್ರಜ್ಞೆ, ಬಡವರು-ದುರ್ಬಲ ವರ್ಗದವರ ಬಗ್ಗೆ ಸಹಾನುಭೂತಿ, ಸಮಾಜದಲ್ಲಿ ಕೆಟ್ಟದರ ಬಗ್ಗೆ ಪ್ರತಿರೋಧ ಒಡ್ಡುವುದನ್ನು ಕಲಿಸುವ, ಈ ಮೂಲಕ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಭವಿಷ್ಯದಲ್ಲಿ ಒಬ್ಬ ಅತ್ಯುತ್ತಮ ನಾಯಕನನ್ನಾಗಿ ರೂಪಿಸುವ ಪ್ರಯತ್ನಗಳು ನಡೆಯುತ್ತವೆ. ಇಲ್ಲೂ ಸಹ ಸಮವಸ್ತ್ರದ ಮೇಲೆ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ವಿದ್ಯಾರ್ಥಿನಿಯೊಬ್ಬಳು ಹೈಕೋರ್ಟ್ ಮೊರೆ ಹೋಗಿದ್ದಳು. ಆದರೆ ಕೇರಳ ಸರ್ಕಾರ , ಇಲ್ಲಿಯವರೆಗೆ ಇಲ್ಲದ್ದನ್ನು ಈಗ ಮಾಡಲಾಗದು. ಹೀಗೆ ಸ್ಟುಡೆಂಟ್ ಪೊಲೀಸ್ ಕೆಡೆಟ್ ವಿದ್ಯಾರ್ಥಿಗಳಿಗೆ ಹಿಜಾಬ್ ಮತ್ತು ಪೂರ್ಣ ತೋಳಿನ ಅಂಗಿ ಧರಿಸಲು ಕೊಟ್ಟರೆ, ಇನ್ನೂ ಬೇರೆ ಸಂಘಟನೆಗಳವರೂ ಅದಕ್ಕೆ ಬೇಡಿಕೆ ಇಡುತ್ತಾರೆ ಎಂದು ಹೇಳಿತ್ತು.
ಎರ್ನಾಕುಲಂನಲ್ಲಿ ನಡೆದ ಜಾಥಾ ಹಾಗೂ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಿ.ಎ. ಶಬ್ನಾ (ಇವರು ಮೂಲತಃ ಕೇರಳದವರಾಗಿದ್ದು, ಕರ್ನಾಟಕದ ಕಾನೂನು ಕಾಲೇಜಿನಲ್ಲಿ ಓದುತ್ತಿದ್ದಾರೆ. ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಹಿಜಾಬ್ ಪರ ಹೋರಾಟದಲ್ಲಿ ಸಕ್ರಿಯರಾಗಿದ್ದರು),
ಕಳೆದ ವರ್ಷ ಪರೀಕ್ಷೆಯ ವೇಳೆ ನಾನು ಹಿಜಾಬ್ ಧರಿಸಿಯೇ ಕುಳಿತಿದ್ದೆ. ಆಗ ಶಿಕ್ಷಕರು ಮತ್ತು ಪ್ರಿನ್ಸಿಪಾಲ್ ಬಂದು ಹಿಜಾಬ್ ತೆಗೆಯುವಂತೆ ಸೂಚಿಸಿದರು. ಆದರೆ ನಾನು ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತೆ. ಅದು ಅಲ್ಲಿಗೇ ಮುಗಿಯಿತು, ಲಾಕ್‌ಡೌನ್ ಶುರುವಾಯಿತು. ಲಾಕ್‌ಡೌನ್ ಮುಗಿದು ವಾಪಸ್ ಬಂದಾಗ ಶಿಕ್ಷಕರು ಮತ್ತು ಇತರ ಕೆಲವು ವಿದ್ಯಾರ್ಥಿಗಳಲ್ಲಿ ನನ್ನ ಬಗೆಗಿನ ಅಭಿಪ್ರಾಯ ಬದಲಾಗಿತ್ತು. ಅವರೆಲ್ಲ ನನ್ನನ್ನು ನಿರ್ಲಕ್ಷಿಸುತ್ತಿದ್ದರು. ನಾನು ಯಾರೊಂದಿಗೆ ರೂಂನಲ್ಲಿ ಇದ್ದೆನೋ, ಆಕೆಯೂ ಕೂಡ ಅಲ್ಲಿಂದ ಹೋಗುವಂತೆ ಹೇಳಿದಳು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ ಲುಬ್ನಾ ಸರ್ವಥ್ ಸಾವಿತ್ರಿಬಾಯಿ ಪುಲೆ, ಫಾತಿಮಾ ಶೇಖ್ ಅವರೂ ಕೂಡ ತಮ್ಮ ತಲೆಯ ಮೇಲೆ ಪಲ್ಲು ಅಥವಾ ಸ್ಕಾರ್ಫ್ ಕಟ್ಟುತ್ತಿದ್ದರು. ಬೇರೆಬೇರೆ ಹೆಸರಿನಿಂದ ಕರೆದರೂ ಇದು ನಮ್ಮ ದೇಶದಲ್ಲಿ ದೀರ್ಘ ಕಾಲದಿಂದಲೂ ಇರುವ ಒಂದು ಸಂಪ್ರದಾಯ. ತಲೆಗೆ ಸೆರಗು, ಸ್ಕಾರ್ಫ್ ಅಥವಾ ಹಿಜಾಬ್ ಧರಿಸುವುದರಿಂದ ಸಾಮಾಜಿಕವಾಗಿ ಯಾವುದೇ ಅನನುಕೂಲ ತರುವುದಿಲ್ಲ. ಅದರಲ್ಲಿ ಈಗ ಹಿಜಾಬ್ಗೆ ಮಾತ್ರ ನಿರಾಕರಣೆ ಮಾಡುವುದು ಅನ್ಯಾಯ ಎಂದು ಹೇಳಿದರು.
ಹೀಗೆ ಹಲವು ಪ್ರಮುಖರು ಮಾತನಾಡಿ, ಹಿಜಾಬ್ಗೆ ಅವಕಾಶ ಕೊಡಲೇಬೇಕು ಎಂದು ಆಗ್ರಹಿಸಿದರು.