Monday, February 23, 2026
Monday, February 23, 2026
Home Blog Page 1651

ಧಾರ್ಮಿಕ ಸಾಮರಸ್ಯ ಕಾಪಾಡಲು ಸಾಹಿತಿಗಳ ಮನವಿ

0

ರಾಜ್ಯದಲ್ಲಿ ಧರ್ಮ ಸಂಘರ್ಷ ಮುಂದುವರಿದಿದೆ.
ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರಿರುವುದು ಸರಿಯಲ್ಲ. ಮುಸ್ಲಿಂ ವ್ಯಾಪಾರಿಗಳಿಗೆ ತೊಂದರೆಯಾಗದಂತೆ ಕಾನೂನು ತಿದ್ದುಪಡಿ ಮಾಡಬೇಕೆಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ 61 ಸಾಹಿತಿಗಳು ಪತ್ರ ಬರೆದಿದ್ದಾರೆ.

ಡಾ.ಕೆ.ಮರುಳ ಸಿದ್ದಪ್ಪ, ಎಸ್.ಜಿ.ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ರೆಹಮತ್ ತರಿಕೆರೆ ಸೇರಿ ಒಟ್ಟು 61 ಸಾಹಿತಿಗಳು ಈ ಸಂಬಂಧ ಸಿಎಂ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ.

ಸಮವಸ್ತ್ರದೊಂದಿಗೆ ಹಿಜಾಬ್‍ಗೂ ಅವಕಾಶ ಕೊಡಿ, ಪಠ್ಯದಲ್ಲಿ ಭಗವದ್ಗೀತೆಗಿಂತ ಸಂವಿಧಾನವನ್ನು ಓದುವುದು ಅತ್ಯಗತ್ಯ. ಹೀಗಾಗಿ ಭಗವದ್ಗೀತೆಯನ್ನು ಪಠ್ಯದಲ್ಲಿ ಕೈಬಿಡುವಂತೆ ಹಾಗೂ ಸಮವಸ್ತ್ರದ ಭಾಗವಾಗಿಯೇ ಶಿರವಸ್ತ್ರ ಧರಿಸಿ ಪರೀಕ್ಷೆಗೆ ಅನುಮತಿಸಿ. ಸದ್ಯ ಇರುವ ವಸ್ತ್ರಸಂಹಿತೆ ಸುತ್ತೋಲೆ ಅವೈಜ್ಞಾನಿಕ, ಹಿಂತೆಗೆದುಕೊಳ್ಳಿ ಎಂದು ಒತ್ತಾಯಿಸಿದ್ದಾರೆ.

ರಾಜ್ಯಾದ್ಯಂತ ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ನಿಷೇಧ ಸರಿಯಲ್ಲ. ಎಲ್ಲ ಜಾತ್ರೆ, ಉತ್ಸವಗಳು ಒಂದು ಧರ್ಮದ, ಜಾತಿಯ ಉತ್ಸವಗಳಾಗಿ ಜಾತ್ರೆ ನಡೆಯಲ್ಲ. ಸಾಮರಸ್ಯದ ನಾಡಿನಲ್ಲಿ ಮುಸ್ಲಿಂ ವರ್ತಕರ ಬಹಿಷ್ಕಾರ ಅಸಂವಿಧಾನಿಕ ನಡೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ವರ್ಷವಡೀ ಕನ್ನಡಿಗರಾಗಿರಬೇಕು- ಸುಶೀಲಾದೇವಿ ಆರ್ ರಾವ್

0

ಕನ್ನಡಿಗರಿಗೆ ತಾಯಿನಾಡಿನ ಬಗ್ಗೆ ಪ್ರೀತಿ ಬರಬೇಕು. ಕೇವಲ ನವೆಂಬರ್ ಕನ್ನಡಿಗರಾಗದ್ದೇ ವರ್ಷವಿಡಿ ಎಲ್ಲಿದ್ದರೂ ನಾವು ಕನ್ನಡಿಗರಾಗಿರಬೇಕು ಎಂಬ ಭಾಷಾಭಿಮಾನ ಒಡಮೂಡಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಜಿ.ಎಸ್. ಸುಶಿಲಾದೇವಿ ಆರ್. ರಾವ್ ಅವರು ತಿಳಿಸಿದ್ದಾರೆ.

ದಾವಣಗೆರೆಯ ಎಲೆ ಬೇತೂರಿನಲ್ಲಿ ಇರುವ ಮಾಗನಹಳ್ಳಿ ಅಂಬಾಸಪ್ಪನವರ ಮೈದಾನದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಹನ್ನೊಂದನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.

ಎಷ್ಟು ಭಾಷೆಯನ್ನಾದರೂ ಕಲಿಯಬಲ್ಲ ಅದ್ಭುತಶಕ್ತಿ ಕನ್ನಡಿಗರಿಗೆ ಇದೆ‌. ಪರಭಾಷಿಕರಿಗೆ ಅದರ ಭಾಷೆಯ ಮೇಲಿರುವ ಪ್ರೇಮದಂತೆ ಕನ್ನಡಿಗರಿಗೂ ಕನ್ನಡದ ಮೇಲೆ ಪ್ರೀತಿ ಹುಟ್ಟಬೇಕು. ನಾವೆಲ್ಲಿದ್ದರೂ ಕನ್ನಡಿಗರ ಎಂಬುದನ್ನು ಮರೆಯಬಾರದು. ಬಂದವರು ನಮ್ಮೊಡನೆ ಕನ್ನಡದಲ್ಲಿ ವ್ಯವಹರಿಸಬೇಕು. ನಮ್ಮ ಮನೆಗೆ ಬಂದ ಅತಿಥಿ ಮನೆಯ ಯಜಮಾನನಾಗಬಾರದು ಎಂದರು‌.

ಮುಂದಿನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಚೆನ್ನಗಿರಿಯಲ್ಲಿ ನಡೆಸಲು ಚರ್ಚೆ ನಡೆಸಲಾಗುವುದು. ಹಾಗೂ ವಿಶ್ವಕನ್ನಡ ಸಮ್ಮೇಳನವನ್ನು ದಾವಣಗೆರೆಯಲ್ಲಿ ನಡೆಸಲು ಸಂಸದರು, ಶಾಸಕರು ನಿಯೋಗ ತೆರಳಿ ಸಿಎಂ ಬೊಮ್ಮಾಯಿ ಅವರಿಗೆ ಒತ್ತಡ ಹಾಕಲಾಗುತ್ತದೆ ಎಂದು ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ನವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಎಸ್.ಎ. ರವೀಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಸಂಸ್ಕೃತಿ ಚಿಂತಕ, ಸಾಹಿತಿ ಕಾಳೇಗೌಡ ನಾಗವಾರ , ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ.ಹೆಚ್.ಎಸ್‌. ಮಂಜುನಾಥ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು

ಹೆದ್ದಾರಿ ದ್ವಿಪಥ ರಸ್ತೆಗೆ ₹ 96.20 ಕೋಟಿ ಮಂಜೂರು,- ಬಿ,ವೈ.ರಾಘವೇಂದ್ರ

0

ತೀರ್ಥಹಳ್ಳಿ ತಾಲೂಕು ಭಾರತಿಪುರ ಬಳಿಯ ಅಪಾಯಕಾರಿ ತಿರುವಿಗೆ ಚತುಷ್ಪಥ ಮೇಲ್ಸೇತುವೆ ಮತ್ತು ಮೇಗರವಳ್ಳಿ-ಆಗುಂಬೆ ದ್ವೀಪಥ ರಸ್ತೆ ಅಭಿವೃದ್ಧಿ ಯೋಜನೆಗೆ ಕೇಂದ್ರ ಭೂಸಾರಿಗೆ ಸಚಿವಾಲಯವು ಅನುಮೋದನೆ ನೀಡಿದೆ.

ರಾಷ್ಟ್ರೀಯ ಹೆದ್ದಾರಿ 169ಎದಲ್ಲಿ ಭಾರತೀಪುರ ಬಳಿ ಇದ್ದ ಅಪಾಯಕಾರಿ ಹಾಗೂ ಕ್ಲಿಷ್ಟಕರವಾಗಿದ್ದ ಹೇರ್ ಪಿನ್ ತಿರುವಿಗೆ ಬದಲೀ ರಸ್ತೆ ನಿರ್ಮಾಣ ಮಾಡುವಂತೆ ತೀರ್ಥಹಳ್ಳಿ ಹಾಗೂ ಶಿವಮೊಗ್ಗ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು.

ಸಂಸದರ ಪ್ರಯತ್ನದ ಈ ತಿರುವು ಬದಲಿಯಾಗಿ ಸುಮಾರು 1.30 ಕಿ.ಮೀ. ಉದ್ದದ ಚತುಷ್ಪಥ ರಸ್ತೆ ಹಾಗೂ ಮೇಲ್ಸೇತುವೆ ನಿರ್ಮಾಣಕ್ಕೆ 57 ಕೋಟಿ ರೂ.ಗೆ ಮಂಜೂರಾತಿ ನೀಡಲಾಗಿದೆ.

ಇದೇ ಸಮಯದಲ್ಲಿ ಮೇಗರವಳ್ಳಿಯಿಂದ ಆಗುಂಬೆ ನಡುವೆ 14.7 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ವಿಪಥ ರಸ್ತೆ ಅಭಿವೃದ್ಧಿಗೆ 96.20 ಕೋಟಿ ರೂ. ಮಂಜೂರಾಗಿದೆ ಎಂದು ಸಂಸದ ಬಿ‌‌.ವೈ. ರಾಘವೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯಾಟೊ ಸೇರಬೇಕೆ ಬೇಡವೆ? ಜನಮತದ ಆಧಾರದ ಮೇಲೆ ನಿರ್ಧಾರ-ಝೆಲೆನ್ಸ್ಕಿ

0

ರಷ್ಯಾ ಮತ್ತು ಉಕ್ರೇನ್​ ನಡುವೆ ನಡೆಯಲಿರುವ ಶಾಂತಿ ಮಾತುಕತೆ ವೇಳೆ ಉಕ್ರೇನ್​ನ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಮೊದಲ ಆದ್ಯತೆ ನೀಡುವುದಾಗಿ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ ಅವರು ಹೇಳಿದ್ದಾರೆ.

ನಮಗೆ ಶೀಘ್ರವಾಗಿಯೇ ಶಾಂತಿ ಬೇಕಾಗಿದೆ. ತಡಮಾಡದೇ ಶಾಂತಿ ಮಾತುಕತೆ ನಡೆಯಬೇಕಿದೆ ಎಂದಿರುವ ಉಕ್ರೇನ್​ ಅಧ್ಯಕ್ಷರು, ಟರ್ಕಿಯಲ್ಲಿ ಮುಖಾಮುಖಿ ಭೇಟಿಗೆ ಅವಕಾಶ ಕಲ್ಪಿಸಬೇಕಾದ ಅವಶ್ಯಕತೆ ಇದೆ ಎಂದಿದ್ದಾರೆ.

ಮರಿಯುಪೋಲ್​ ನಗರದಲ್ಲಿ ಪರಿಸ್ಥಿತಿ ಭೀಕರವಾಗಿದೆ. ಇಂತಹ ಸನ್ನಿವೇಶಗಳ ಬಗ್ಗೆ ತಾವು ಇತರ ದೇಶಗಳ ಸಂಸತ್​ಗಳ ಗಮನಕ್ಕೆ ತರುವುದನ್ನು ಮುಂದುವರೆಸುತ್ತೇನೆ. ರಷ್ಯಾದ ಮಾರಕ ದಾಳಿಯನ್ನು ಎದುರಿಸಿ ದಿಟ್ಟ ಉತ್ತರ ನೀಡುತ್ತಿರುವ ಉಕ್ರೇನ್‌ನ ಸಶಸ್ತ್ರ ಪಡೆಗಳಿಗೆ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ ಎಂದು ಝೆಲೆನ್ಸ್ಕಿ ಅವರು ತಿಳಿಸಿದ್ದಾರೆ.

ಕೆಲವು ಪ್ರದೇಶಗಳಲ್ಲಿ ರಷ್ಯಾ ಆಕ್ರಮಣವನ್ನು ನಮ್ಮ ಸೈನಿಕರು ಹಿಮ್ಮೆಟ್ಟಿಸುತ್ತಿದ್ದಾರೆ ಎಂದು ಉಕ್ರೇನ್​ ಸೈನಿಕರ ಬೆನ್ನು ತಟ್ಟಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ರಷ್ಯಾ ಪಡೆಗಳು ದೇಶದಿಂದ ಹೊರಹೋದ ನಂತರ ಉಕ್ರೇನ್​​​ ನಾಟೋ ಸೇರಬೇಕೇ ಬೇಡವೆ ಎಂಬ ಬಗ್ಗೆ ಜನಮತಗಣನೆ ಮಾಡಿ ನಿರ್ಧಾರ ಕೈಗೊಳ್ಳುವುದಾಗಿ ಝೆಲೆನ್ಸ್ಕಿ ಅವರು ಸ್ಪಷ್ಟಪಡಿಸಿದ್ದಾರೆ.

ಪಾರಂಪರಿಕ ವೈದ್ಯರಿಗೆ ಕಾನೂನು ಮಾನ್ಯತೆ ಇಲ್ಲ- ಡಾ.ಸುಧಾಕರ್

0

ಪಾರಂಪರಿಕ ವೈದ್ಯರಿಗೆ ಕಾನೂನಿನ ಮಾನ್ಯತೆ ನೀಡಲು ಅವಕಾಶವಿಲ್ಲ ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ. ಸಾಂಪ್ರಾದಾಯಿಕ ವೈದ್ಯ ಪದ್ಧತಿ ಅಧ್ಯಯನ ಮಾಡುವವರಿಗೆ ಶೈಕ್ಷಣಿಕ ಅರ್ಹತೆ ಕಡ್ಡಾಯ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಅವರು ಹೇಳಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಈ ಕುರಿತು ಮಾಹಿತಿ ನೀಡಿದ ಸಚಿವರು, ಆಯುಷ್‌ ವೈದ್ಯ ಪದ್ಧತಿಗಳ ಕುರಿತು ಕೇಂದ್ರ ಸರ್ಕಾರವೇ ನೀತಿ ರೂಪಿಸಿದೆ. ರಾಜ್ಯದಲ್ಲಿ ಪ್ರತ್ಯೇಕ ನೀತಿ ರೂಪಿಸಲು ಅವಕಾಶವಿಲ್ಲ. ಸಾಂಪ್ರಾದಾಯಿಕ ವೈದ್ಯ ಪದ್ಧತಿ ಅಧ್ಯಯನ ಮಾಡುವವರಿಗೆ ಶೈಕ್ಷಣಿಕ ಅರ್ಹತೆ ಕಡ್ಡಾಯ ಎಂದು ಡಾ.ಕೆ. ಸುಧಾಕರ್ ಅವರು ತಿಳಿಸಿದ್ದಾರೆ.

ಇನ್ನು ರಾಜ್ಯದಲ್ಲಿ ಆಯುಷ್‌ ವಿಶ್ವವಿದ್ಯಾಲಯ ಸ್ಥಾಪನೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾಂಪ್ರದಾಯಿಕವಾಗಿ ಆಯುರ್ವೇದವನ್ನು ಅಭ್ಯಾಸ ಮಾಡುತ್ತಿರುವವರು ಬಳ್ಳಾರಿ ಹಾಗೂ ಬೆಂಗಳೂರಿನ ಆಯುರ್ವೇದ ವಿಶ್ವವಿದ್ಯಾಲಯಗಳಲ್ಲಿ ತಮ್ಮನ್ನು ತಾವು ನೋಂದಾಯಿಸಿಕೊಳ್ಳಬಹುದು. ಮತ್ತು ಅವರಿಗೆ ಸರ್ಕಾರ ಉಚಿತ ಸೀಟುಗಳನ್ನು ಕಾಯ್ದಿರಿಸಿದೆ ಎಂದು ಸುಧಾಕರ್ ಅವರು ತಿಳಿಸಿದ್ದಾರೆ.

ಹಿರಿಯ ಗಮಕಿ ಶ್ರೀ ಕೇಶವ ಮೂರ್ತಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ

0

ಶಿವಮೊಗ್ಗದ ಹೊಸಹಳ್ಳಿ ಯ ಹಿರಿಯ ಗಮಕಿಗಳಾದ ಶ್ರೀ ಎಚ್ .ಆರ್ .ಕೇಶವಮೂರ್ತಿ ಅವರು ನವದೆಹಲಿಯಲ್ಲಿ ಇತ್ತೀಚೆಗಷ್ಟೇ ಪದ್ಮಶ್ರೀ ಪ್ರಶಸ್ತಿಯನ್ನ
ರಾಷ್ಟ್ರಪತಿಗಳಾದ ಶ್ರೀ ರಾಮನಾಥ ಕೋವಿಂದ್ ಅವರಿಂದ ಸ್ವೀಕರಿಸಿದ್ದಾರೆ.

ಶಿವಮೊಗ್ಗವೊಂದೇ ಅಲ್ಲ ಇಡೀ ಕರ್ನಾಟಕವೇ ಹೆಮ್ಮೆ ಪಡಬಹುದಾದ ಸಂಗತಿ.
ಶ್ರೀಯುತರು ಗಮಕ ಕಲೆಯ ಉಳಿವಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಹಿರಿಯ ಗಮಕ ಗುರುಗಳಾಗಿ ಅವರು ಅಸಂಖ್ಯ ಶಿಷ್ಯವೃಂದಕ್ಕೆ ಗಮಕ ಗಾಯನವನ್ನ ಹೇಳಿಕೊಟ್ಟಿರುತ್ತಾರೆ.
ಆಕಾಶವಾಣಿ ( ಭದ್ರಾವತಿ) ಮತ್ತು ದೂರದರ್ಶನ ಚಂದನ ಕಾರ್ಯಕ್ರಮ ದಲ್ಲಿ ಅವರ ಗಮಕ ಗಾಯನ ಪ್ರಸಾರವಾಗಿವೆ.

ಕೇಶವ ಮೂರ್ತಿ ಅವರು ಗಮಕ ಗಾಯನ ಕ್ಷೇತ್ರದಲ್ಲಿ ಪರಿಣಿತಿ ಹೊಂದಿದವರು. ಇವರು 22 ಫೆಬ್ರವರಿ 1935 ರಂದು ಜನಿಸಿದರು. ಅವರು ಹೊಸಹಳ್ಳಿಯಲ್ಲಿರುವ ಗಮಕ ಕಲಾ ಪರಿಷತ್‌ನಿಂದ ಲಭ್ಯವಿರುವ ಗಮಕದ ಧ್ವನಿ ಟ್ರ್ಯಾಕ್‌ಗಳಲ್ಲಿ ಧ್ವನಿಮುದ್ರಣಗೊಂಡ ಹಿರಿಯ ಕಲಾವಿದರಲ್ಲಿ ಒಬ್ಬರು. ಅವರು ಪ್ರಾದೇಶಿಕ ದೂರದರ್ಶನ ಮತ್ತು ಉದಯ ಟಿವಿಯಲ್ಲಿ ಮತ್ತೂರು ಕೃಷ್ಣಮೂರ್ತಿ ಅವರೊಂದಿಗೆ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಇವರಿಗೆ ಹಲವಾರು ಸನ್ಮಾನಗಳು ಪ್ರಶಸ್ತಿಗಳು ಪುರಸ್ಕಾರಗಳು ಲಭಿಸಿವೆ.

ಶಾಂತಲಾ ನಾಟ್ಯಶ್ರೀ ಪುರಸ್ಕಾರ 1998, ಕುಮಾರವ್ಯಾಸ ಪ್ರಶಸ್ತಿ 2009, ರಾಜ್ಯೋತ್ಸವ ಪ್ರಶಸ್ತಿ 2009 ಇನ್ನೂ ಅನೇಕ ಪ್ರಶಸ್ತಿಗಳು ಲಭಿಸಿವೆ. ಈ ವರ್ಷ(2022) ಹೆಮ್ಮೆಯ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕೆ ಲೈವ್ ಮೀಡಿಯ ಶ್ರೀ ಎಚ್.ಆರ್.ಕೇಶವಮೂರ್ತಿ ಅವರಿಗೆ
ಹಾರ್ದಿಕವಾಗಿ ಅಭಿನಂದಿಸುತ್ತದೆ.

ಯುದ್ಧ ನಿಲ್ಲಿಸದ ಹೊರತು ಸಂಧಾನ ಅಸಾಧ್ಯ- ಝೆಲೆನ್ಸ್ಕಿ

0

ರಷ್ಯಾದ ಜೊತೆ ನಡೆಯುವ ಮಾತುಕತೆಯ ಭಾಗವಾಗಿ ಉಕ್ರೇನ್ ಒಂದು ತಟಸ್ಥ ನಿಲುವನ್ನು ತಳೆಯಲು ಸಿದ್ಧವಿದೆ. ಆದರೆ ಅಂಥದೊಂದು ಒಪ್ಪಂದವನ್ನು ಜನಮತ ಸಂಗ್ರಹಣೆಗೆ ಹಾಕಬೇಕೆಂದು ರವಿವಾರ ಬಿತ್ತರಗೊಂಡ ತಮ್ಮ ಹೇಳಿಕೆಯಲ್ಲಿ ಜೆಲೆನ್ಸ್ಕಿ ಹೇಳಿದ್ದಾರೆ.

ಸುಮಾರು ಎರಡು ವಾರಗಳ ಅವಧಿಯಲ್ಲಿ ಉಕ್ರೇನ್ ಮತ್ತು ರಷ್ಯಾ ಶಾಂತಿ ಮಾತುಕತೆ ನಡೆಸಲು ಮುಖಾಮುಖಿಯಗಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲೇ ಹೇಳಿಕೆಯೊಂದನ್ನು ನೀಡಿರುವ ಅಮೆರಿಕಾದ ಅಧಿಕಾರಿಯೊಬ್ಬರು ಉಕ್ರೇನಲ್ಲಿ ಯುದ್ಧ ನಿಲ್ಲಿಸುವ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಮನಸ್ಥಿತಿಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇಲ್ಲ ಎಂದು ಹೇಳಿದ್ದಾರೆ.

ನಾನು ಇದುವರೆಗೆ ಮನಗಂಡಿರುವ ಅಂಶಗಳ ಆಧಾರದಲ್ಲಿ ಹೇಳುವುದಾದರೆ, ಈ ಹಂತದಲ್ಲಿ ರಾಜಿಮಡಿಕೊಳ್ಳಲು ಪುಟಿನ್ ತಯಾರಿಲ್ಲ ಎಂದು ಹೆಸರು ಹೇಳಿಕೊಳ್ಳಲಿಚ್ಛಿಸದ ಯುಎಸ್ ಗೃಹ ಇಲಾಖೆಯ ಅಧಿಕಾರಿಯೊಬ್ಬರು ರಾಯಿಟರ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಕಳೆದ ವಾರದ ಅಂತ್ಯದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ ಅವರು ಯುದ್ಧವನ್ನು ನಿಲ್ಲಿಸಲು ಸಾಧ್ಯವಾಗಬಹುದಾದ ಮಾರ್ಗ ರೂಪಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಉಕ್ರೇನ್‌ನ ಸಾರ್ವಭೌಮತ್ವವನ್ನು ಕಡಿಮೆ ಮಾಡುವ ಮತ್ತು ಉಕ್ರೇನಿಯನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ ತೆಗೆದುಕೊಳ್ಳಬಹುದಾದ ನಿರ್ಧಾರಗಳ ಹಿನ್ನೆಲೆಯಲ್ಲಿ ಮುಖ್ಯವಾದ ಮಾತುಕತೆಗೆ ಅನುಕೂಲವಾಗುವಂಥ ಸರಳ ಮಾರ್ಗೋಪಾಯವನ್ನು ನಾವು ಪುಟಿನ್ ಗೆ ಸೂಚಿಸಿದಾಗ್ಯೂ ಯಾವುದೇ ಆಶಾಕಿರಣ ಮೂಡುವ ಲಕ್ಷಣಗಳು ಕಾಣುತ್ತಿಲ್ಲ, ಎಂದು ಯುಎಸ್ ಆಧಿಕಾರಿ ಹೇಳಿದ್ದಾರೆ.

ಟರ್ಕಿಯ ಅಧ್ಯಕ್ಷ ಅಧ್ಯಕ್ಷ ತಯ್ಯಿಪ್ ಎರ್ಡೊಗನ್ ಅವರು ಪುಟಿನ್ ಜೊತೆ ಭಾನುವಾರಂದು ಮಾತಕತೆ ನಡೆಸಿದ ಬಳಿಕ ಟರ್ಕಿಯ ರಾಜಧಾನಿ ಇಸ್ತಾನ್ಬುಲ್ ನಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿ ಮಾತುಕತೆಗಾಗಿ ವೇದಿಕೆ ಸಿದ್ಧವಾಗಿದೆ. ಆದರೆ ಅಲ್ಲಿ ನಡೆಯುವ ಮಾತುಕತೆಯಿಂದ ಯಾವುದೇ ಮಹತ್ತರ ಬದಲಾವಣೆ ಆಗುವ ನಿರೀಕ್ಷೆ ಇಲ್ಲವೆಂದು ಉಕ್ರೇನ್ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ರಷ್ಯಾದ ಜೊತೆ ನಡೆಯುವ ಮಾತುಕತೆಯ ಭಾಗವಾಗಿ ಉಕ್ರೇನ್ ಒಂದು ತಟಸ್ಥ ನಿಲುವನ್ನು ತಳೆಯಲು ಸಿದ್ಧವಿದೆ ಆದರೆ ಅಂಥದೊಂದು ಒಪ್ಪಂದವನ್ನು ತೃತೀಯ ಪಕ್ಷಗಳು ದೃಢೀಕರಿಸಬೇಕು ಮತ್ತು ಜನಮತ ಸಂಗ್ರಹಣೆಗೆ ಹಾಕಬೇಕೆಂದು ಭಾನುವಾರ ಬಿತ್ತರಗೊಂಡ ತಮ್ಮ ಹೇಳಿಕೆಯಲ್ಲಿ ಜೆಲೆನ್ಸ್ಕಿ ಹೇಳಿದ್ದಾರೆ.

ಪುಟಿನ್ ಸೇನೆಗಳು ಫೆಬ್ರುವರಿ 24 ರಂದು ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿದ ಒಂದು ತಿಂಗಳು ಬಳಿಕ ಜೆಲೆನ್ಸ್ಕಿ ಅವರು ರವಿವಾರದಂದು ರಷ್ಯಾದ ಪತ್ರಕರ್ತರೊಂದಿಗೆ ಸುಮಾರು 90 ನಿಮಿಷಗಳ ಕಾಲ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತಾಡಿ, ರಷ್ಯಾ ಯುದ್ಧವಿರಾಮ ಘೋಷಿಸಿ ಮತ್ತು ಪಡೆಗಳನ್ನು ವಾಪಸ್ಸು ಕರೆಸಿಕೊಳ್ಳದ ಹೊರತು ಯಾವುದೇ ರೀತಿಯ ಶಾಂತಿ ಮಾತುಕತೆ ಮತ್ತು ಸಂಧಾನಕ್ಕೆ ಆಸ್ಪದವಿಲ್ಲ ಎಂದು ಹೇಳಿದ್ದಾರೆ. ಆದರೆ, ಮಾಸ್ಕೋ ಅಧಿಕಾರಿಗಳು ಉಕ್ರೇನ್ ಅಧ್ಯಕ್ಷನ ಜೊತೆ ನಡೆಸಿದ ಸಂದರ್ಶನ ಬಿತ್ತರಿಸಬಾರದೆಂದು ರಷ್ಯಾದ ಮಾಧ್ಯಮಗಳಿಗೆ ಕಟ್ಟೆಚ್ಚರಿಕೆ ನೀಡಿದ್ದಾರೆ.

ರಷ್ಯಾ ಆಕ್ರಮಿಸಿಕೊಂಡಿರುವ ಪ್ರಾಂತ್ಯಗಳನ್ನು ಬಲಪ್ರಯೋಗಿಸಿ ವಾಪಸ್ಸು ಪಡೆದುಕೊಳ್ಳುವ ಇರಾದೆ ತಮಗಿಲ್ಲ ಎಂದು ಸ್ಪಷ್ಟಪಡಿಸಿರುವ ಜೆಲೆನ್ಸ್ಕಿ ಅವರು, ತಾವೇನಾದರೂ ಹಾಗೆ ಮಾಡಲು ಮುಂದಾದರೆ ಅದು ಮೂರನೇ ವಿಶ್ವಯುದ್ಧಕ್ಕೆ ನಾಂದಿಯಾಗುತ್ತದೆ ಎಂದು ಹೇಳಿದ್ದಾರಲ್ಲದೆ, ಡೊನ್ಬಾಸ್ ಪೂರ್ವ ಪ್ರಾಂತ್ಯದಲ್ಲಿ ಒಂದು ರಾಜಿ ಸಂಧಾನ ತಮಗೆ ಬೇಕಾಗಿದೆ ಎಂದಿದ್ದಾರೆ. ಈ ಪ್ರಾಂತ್ಯವು 2014ರಿಂದ ರಷ್ಯಾ ಬೆಂಬಲಿತ ಸೇನೆಯ ವಶದಲ್ಲಿದೆ. ತನ್ನ ನೆರೆ ರಾಷ್ಟ್ರವನ್ನು ಸೇನಾಬಲಗಳಿಂದ ಮುಕ್ತಗೊಳಿಸುವ ಉದ್ದೇಶದಿಂದ ಉಕ್ರೇನ್‌ ಮೇಲೆ ವಿಶೇಷ ಸೇನಾ ಕಾರ್ಯಾಚರಣೆ ನಡೆಸುತ್ತಿರುವುದಾಗಿ ರಷ್ಯಾ ಹೇಳಿಕೊಂಡಿದೆ. ಉಕ್ರೇನ್ ಮತ್ತು ಅದರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಇದನ್ನು ಅಪ್ರಚೋದಿತ ಆಕ್ರಮಣಕ್ಕೆ ನೆಪ ಎಂದು ಬಣ್ಣಿಸುತ್ತಿವೆ.

ಜಿಲ್ಲಾಧಿಕಾರಿಗಳಿಗೆ ಬೇಲೂರಿನ‌ ಜನಪರ ಸಂಘಟನೆಗಳ ಮನವಿ

0

ಬೇಲೂರು ಚನ್ನಕೇಶವ ಸ್ವಾಮಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರದಂತೆ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿ ಜನಪರ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಯಿತು.

ದೇವಸ್ಥಾನದ ಹೊರಗೆ ಪ್ರವಾಸಿಗರಿಗೆ ಮಾಹಿತಿ ನೀಡಿ, ಸಣ್ಣಪುಟ್ಟ ವ್ಯಾಪಾರ ನಡೆಸುವ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ, ವಹಿವಾಟು ನಡೆಸದಂತೆ ದೇವಸ್ಥಾನದ ಆಡಳಿತ ಮಂಡಳಿಯ ಅಧಿಕಾರಿಗಳು ಸೂಚಿಸಿದ್ದಾರೆ.

ಇದು ಅಸಾಂವಿಧಾನಿಕ ಕ್ರಮವಾಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಬೇಲೂರು ಸೇರಿದಂತೆ ಜಿಲ್ಲೆಯ ಯಾವುದೇ ಭಾಗದಲ್ಲಿ ನಡೆಯುವ ಜಾತ್ರೆ, ಉತ್ಸವ, ಹಬ್ಬಗಳು ಮತ್ತು ಮಾರುಕಟ್ಟೆಗಳಲ್ಲಿ ಮುಸ್ಲಿಮರಿಗೆ ಆರ್ಥಿಕ ಚಟುವಟಿಕೆ ನಡೆಸಲು ಅವಕಾಶ ನೀಡಬೇಕು. ಹಾಗೂ ಅನಧಿಕೃತವಾಗಿ ನಿರ್ಬಂಧ ಹೇರಿ ಸಾಮಾಜಿಕ ಬಹಿಷ್ಕಾರ ಹಾಕದಂತೆ ಜಿಲ್ಲಾಡಳಿತ ಆದೇಶ ಹೊರಡಿಸಬೇಕು ಎಂದು
ಒತ್ತಾಯಿಸಿದರು.

ಸಾಮಾಜಿಕ ಮಾಧ್ಯಮಗಳಲ್ಲಿ ಮುಸ್ಲಿಮರ ವಿರುದ್ಧ ಸುಳ್ಳು ಮತ್ತು ಅಪಪ್ರಚಾರದ ಮೂಲಕ ಸಮಾಜದಲ್ಲಿ ಕೋಮು ದ್ವೇಷ ಹರಡುತ್ತಿರುವ ಸಂಘಟನೆಗಳು ಮತ್ತು ವ್ಯಕ್ತಿಗಳ ವಿರುದ್ಧ ಪೋಲೀಸರು ಕ್ರಮ ಜರುಗಿಸಬೇಕು. ಬೇಲೂರು ದೇವಸ್ಥಾನವನ್ನು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿಸುವ ಪ್ರಕ್ರಿಯೆ ಆರಂಭವಾಗಿದ್ದು, ಇಂತಹ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ದೇಶ ಮತ್ತು ಜಿಲ್ಲೆಗೆ ಮುಜುಗರ ತರುವಂತಹ ಇಂತಹ ಕೃತ್ಯಗಳು ನಡೆಯದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಅವರಿಗೆ ಮನವಿ ಸಲ್ಲಿಸಿದರು.

ಧರಣಿಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್, ದಲಿತ ಸಂಘರ್ಷ ಸಮಿತಿ ಮುಖಂಡರಾದ ಎಚ್.ಕೆ. ಸಂದೇಶ್, ರಾಜಶೇಖರ್, ಕೃಷ್ಣದಾಸ್, ಕಾಂಗ್ರೆಸ್‌ ಮುಖಂಡ ಅಬ್ದುಲ್ ಸಮದ್, ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್, ಹಿರಿಯ ನಾಗರಿಕರ ವೇದಿಕೆ ಬಿ.ಕೆ.ಮಂಜುನಾಥ್, ಪತ್ರಕರ್ತ ವೆಂಕಟೇಶ್, ಎಚ್‌.ಎಸ್‌.ನಾಗರಾಜು, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ.ಪೃಥ್ವಿ, ಕೆ.ಪಿ.ಆರ್‌.ಎಸ್‌ ಜಿಲ್ಲಾ ಅಧ್ಯಕ್ಷ ಎಚ್.ಆರ್.ನವೀನ್ ಕುಮಾರ್, ಮುಬಾಶಿರ್‌ ಅಹಮದ್‌, ಕೆಪಿಸಿಸಿ ಸದಸ್ಯ ಎಚ್‌.ಕೆ.ಮಹೇಶ್‌, ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ತಾರಾಚಂದನ್‌, ಲೇಖಕಿ ಸುವರ್ಣ ಶಿವಪ್ರಸಾದ್ ಪಾಲ್ಗೊಂಡಿದ್ದರು.

ಇಸ್ರೆಲ್ ಪ್ರಧಾನಿಗೆ ಕೋವಿಡ್ ಪ್ರಧಾನಿ ರಾಜ್ಯ ಪ್ರವಾಸ ರದ್ದು

0

ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಕರ್ನಾಟಕ ಭೇಟಿ ರದ್ದಾಗಿದೆ.
ಏಪ್ರಿಲ್ 5ರಂದು ಉಭಯ ನಾಯಕರು ರಾಜ್ಯಕ್ಕೆ ಆಗಮಿಸಬೇಕಿತ್ತು.

ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್‌ಗೆ ಕೋವಿಡ್ ಸೋಂಕಿ ತಗುಲಿರುವ ಕಾರಣ ಅವರ ಭಾರತ ಭೇಟಿ ರದ್ದಾಗಿದೆ. ಆದ್ದರಿಂದ ನಫ್ತಾಲಿ ಬೆನೆಟ್‌ ಜೊತೆಗಿನ ಮೋದಿ ಕರ್ನಾಟಕ ಪ್ರವಾಸವೂ ರದ್ದುಗೊಂಡಿದೆ.

ಪ್ರಧಾನಮಂತ್ರಿಗಳ ಕಾರ್ಯಾಲಯ ಈ ಕುರಿತು ಕರ್ನಾಟಕ ಸರ್ಕಾರಕ್ಕೆ ಮಾಹಿತಿ ನೀಡಿದೆ. ಏಪ್ರಿಲ್ 5ರಂದು ನಫ್ತಾಲಿ ಬೆನೆಟ್ ಮತ್ತು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಭೇಟಿ ನೀಡಬೇಕಿತ್ತು.
ಬೆಂಗಳೂರಿನಲ್ಲಿ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಉದ್ಘಾಟಿಸಬೇಕಿತ್ತು. ಬೆಂಗಳೂರು ನಗರದ ಬಹು ನಿರೀಕ್ಷಿತ ಸಬ್ ಅರ್ಬನ್ ರೈಲು ಯೋಜನೆಗೆ ಶಂಕು ಸ್ಥಾಪನೆ ಮಾಡಬೇಕಿತ್ತು.

ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಉದ್ಘಾಟನಾ ಕಾರ್ಯಕ್ರಮ 2021ರ ಡಿಸೆಂಬರ್ 6ರಂದು ಮೊದಲು ನಿಗದಿಯಾಗಿತ್ತು. ಆಗಲೂ ಉದ್ಘಾಟನೆಗೆ ನರೇಂದ್ರ ಮೋದಿ ಆಗಮಿಸಬೇಕಿತ್ತು. ಆದರೆ ಆ ಕಾರ್ಯಕ್ರಮ ರದ್ದಾಗಿತ್ತು.
ಬೆಂಗಳೂರು ಸಬ್ ಅರ್ಬನ್ ರೈಲು ಬೆಂಗಳೂರು ನಗರದ ಬಹು ನಿರೀಕ್ಷಿತ ಸಬ್ ಅರ್ಬನ್ ರೈಲು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಶಂಕು ಸ್ಥಾಪನೆ ಮಾಡಬೇಕಿತ್ತು.

ಸೋಮವಾರ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್‌ಗೆ ಕೋವಿಡ್ ಸೋಂಕು ತಗುಲಿದ ಹಿನ್ನಲೆಯಲ್ಲಿ ಏಪ್ರಿಲ್ 3ರ ಭಾರತ ಭೇಟಿಯನ್ನು ಅವರು ರದ್ದುಗೊಳಿಸಿದ್ದಾರೆ. ಕಳೆದ ವರ್ಷ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಮೊದಲ ಬಾರಿಗೆ ಅವರು ಭಾರತ ಪ್ರವಾಸ ಕೈಗೊಂಡಿದ್ದರು.

ತೀರ್ಥಹಳ್ಳಿ- ಶಿವಮೊಗ್ಗ ಹೆದ್ದಾರಿ ಕಾಮಗಾರಿಗೆ ಅನುಮತಿ- ಜ್ಞಾನೇಂದ್ರ

0

ತೀರ್ಥಹಳ್ಳಿ-ಶಿವಮೊಗ್ಗ ರಾಷ್ಟೀಯ ಹೆದ್ದಾರಿ ಯೋಜನೆಯ ಎರಡು ಕಾಮಗಾರಿಗಳಿಗೆ ಕೇಂದ್ರ ಸರ್ಕಾರ 156 ಕೋಟಿ ರೂ. ಮಂಜೂರು ಮಾಡಿದೆ.

ಈ ಕುರಿತು ಮಾಹಿತಿ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ತೀರ್ಥಹಳ್ಳಿ-ಶಿವಮೊಗ್ಗ ರಾಷ್ಟೀಯ ಹೆದ್ದಾರಿಯಲ್ಲಿ ಬರುವ ಭಾರತೀಪುರ ಹೇರ್ ಪಿನ್ ತಿರುವನ್ನು ತಪ್ಪಿಸಿ, ಅತ್ಯಾಧುನಿಕ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ , ಕೇಂದ್ರ ಸರಕಾರದ ಹೆದ್ದಾರಿ ಸಚಿವಾಲಯ ಅನುಮತಿ ನೀಡಿದೆ.

58 ಕೋಟಿ ರೂಪಾಯಿಗಳ ವೆಚ್ಚದ ಈ ಕಾಮಗಾರಿಯನ್ನು ಸದ್ಯದಲ್ಲಿಯೇ ಎತ್ತಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಮೇಲ್ಸೇತುವೆ ನಿರ್ಮಾಣದ ಅಗತ್ಯದ ಕುರಿತು ಈ ಹಿಂದೆ ಸಲ್ಲಿಸಿದ ಮನವಿಗೆ ಸ್ಪಂದಿಸಿ ಅನುದಾನ ಬಿಡುಗಡೆಯಾಗಿದೆ. ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಅವರೂ ಸಹ ಮೇಲ್ಸೇತುವೆ ಅಗತ್ಯದ ಬಗ್ಗೆ ಕೇಂದ್ರ ಸಚಿವರ ಜೊತೆ ಸಮಾಲೋಚಿಸಿದ್ದರು. ಹಾಗೂ ಯೋಜನೆಯನ್ನು ಕಾರ್ಯಗತಗೊಳಿಸಲು ಕೋರಿದ್ದರು ಎಂದೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.

ಭಾರತೀಪುರ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯಷ್ಟೇ ಅಲ್ಲದೆ ತೀರ್ಥಹಳ್ಳಿ ತಾಲೂಕು ಮೇಗರವಳ್ಳಿಯಿಂದ, ಆಗುಂಬೆವರೆಗೆ 14.77 ಕಿಲೊಮೀಟರ್ ರಾಷ್ಟ್ರೀಯ ಹೆದ್ದಾರಿ 169-A ಗೆ ದ್ವಿಪಥ ಪಿಎಸ್‌, ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ರೂ 96.20 ಕೋಟಿಗೆ ಅನುಮೋದನೆ ಸಹ ನೀಡಲಾಗಿದೆ. ಕಾಮಗಾರಿ ಚುರುಕಿಗೆ ಸಹಾಯವಾಗುವುದು ಎಂದೂ ಸಚಿವರು ತಿಳಿಸಿದ್ದಾರೆ.

ಈ ಎರಡೂ ಕಾಮಗಾರಿಗಳಿಗೆ ಅನುಮತಿ ನೀಡಿ ಅನುದಾನ ಬಿಡುಗಡೆ ಮಾಡಿರುವ ಪ್ರಧಾನಿ ನರೇಂದ್ರ ಮೋದೀಜಿ, ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಗೆ, ಹಾಗೂ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಧನ್ಯವಾದ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.