Monday, March 2, 2026
Monday, March 2, 2026
Home Blog Page 1573

ಸಲಹಾ ಸಮಿತಿಗಳ ನಾಮ ನಿರ್ದೇಶನಕ್ಕೆ ಅರ್ಜಿ ಆಹ್ವಾನ

0

ಶಿವಮೊಗ್ಗ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಹಿಂದುಳಿದ ವರ್ಗಗಳ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರಿಗೆ ಸೌಲಭ್ಯ ಹಾಗೂ ಮಿಸಲಾತಿ ಕಲ್ಪಿಸುವಲ್ಲಿ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಸಲಹಾ ಸಮಿತಿಯನ್ನು ರಚಿಸಿ ಮುಂದಿನ ಮೂರು ವರ್ಷಗಳಿಗೆ ವಿಸ್ತರಿಸಲು ಉದ್ದೇಶಿಸಿದ್ದು, ಜಿಲ್ಲಾ ಮಟ್ಟದ ಹಿಂದುಳಿದ ವರ್ಗಗಳ ಅಲೆಮಾರಿ ಜನಾಂಗದ ಅಭಿವೃದ್ಧಿ ಸಂಸ್ಥೆ ಪ್ರತಿನಿಧಿಯನ್ನು ನಾಮ ನಿರ್ದೇಶಿಸುವ ಬಗ್ಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ.
ಜಿಲ್ಲಾ ಮಟ್ಟದ ಅಲೆಮಾರಿ/ಅರೆಅಲೆಮಾರಿ ಜನಾಂಗದ ಅಭಿವೃದ್ಧಿ ಸಂಸ್ಥೆ ಪ್ರತಿನಿಧಿಯವರು ಅಗತ್ಯ ದಾಖಲಾತಿಗಳೊಂದಿಗೆ ದಿ: 31/05/2022 ರೊಳಗಾಗಿ ಜಿಲ್ಲಾ ಅಧಿಕಾರಿಗಳ ಕಚೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಶಿವಮೊಗ್ಗ ಇಲ್ಲಿ ಸಲ್ಲಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಮಾಹಿತಿಗಾಗಿ ದೂ.ಸಂ.: 08182- 222129ನ್ನು ಸಂಪರ್ಕಿಸುವುದು.

ಪಡೆಗಳನ್ನ ಹಿಂಪಡೆಯುವ ತನಕ ಯುದ್ಧ ವಿರಾಮವಿಲ್ಲ- ಝೆಲೆನ್ಸ್ಕಿ

0

ಎಲ್ಲ ಪಡೆಗಳನ್ನು ಹಿಂಪಡೆಯುವವರೆಗೂ ಕದನ ವಿರಾಮ ಒಪ್ಪುವುದಿಲ್ಲ ಎಂದು ಉಕ್ರೇನ್, ರಷ್ಯಾಕ್ಕೆ ಖಡಕ್ಕಾಗಿ ಹೇಳಿದೆ.

ಪೂರ್ವ ಉಕ್ರೇನ್‌ಗೆ ಸಂಬಂಧಿಸಿ 2015ರಲ್ಲಿ ಬೆಲರೂಸ್‌ನ ರಾಜಧಾನಿ ಮಿನ್ಸ್ಕ್‌ನಲ್ಲಿ ಫ್ರಾನ್ಸ್‌ ಮತ್ತು ಜರ್ಮನಿಯ ಮಧ್ಯಸ್ಥಿಕೆಯಲ್ಲಿ ನಡೆದ ಶಾಂತಿ ಒಪ್ಪಂದ ಉಲ್ಲೇಖಿಸಿ ಅವರು, ‘ಉಕ್ರೇನ್ ಹೊಸ ‘ಮಿನ್ಸ್ಕ್‌’ ಒಪ್ಪಂದ ಮತ್ತು ಕೆಲವೇ ವರ್ಷಗಳಲ್ಲಿ ಹೊಸ ಯುದ್ಧ ನಡೆಸುವುದರಲ್ಲಿ ಆಸಕ್ತಿ ಹೊಂದಿಲ್ಲ ಎಂದು ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಅವರ ಸಲಹೆಗಾರ ಮಿಖಾಯಿಲೊ ಪೊಡೊಲ್ಯಾಕ್ ಹೇಳಿದ್ದಾರೆ.

ನಮ್ಮ ಮುಂದೆ ಕದನ ವಿರಾಮದ ಪ್ರಸ್ತಾಪ ಇಡಬೇಡಿ. ರಷ್ಯಾ ಸಂಪೂರ್ಣ ಸೇನೆ ಹಿಂತೆಗೆದುಕೊಳ್ಳದೆ ಕದನ ವಿರಾಮ ಅಸಾಧ್ಯ’ ಎಂದು ರಷ್ಯಾ ಜತೆಗೆ ಹಲವು ಸುತ್ತಿನ ಶಾಂತಿ ಮಾತುಕತೆಗಳಲ್ಲಿ ಭಾಗಿಯಾಗಿ ತಿಳಿಸಿದ್ದಾರೆ.

ಆಕ್ರಮಿತ ಪ್ರದೇಶಗಳನ್ನು ಸಂಪೂರ್ಣ ಸ್ವತಂತ್ರಗೊಳಿಸಲು ರಷ್ಯಾ ಸಿದ್ಧವಾಗುವವರೆಗೆ, ಶಸ್ತ್ರಾಸ್ತ್ರಗಳು, ನಿರ್ಬಂಧಗಳು ಹಾಗೂ ಹಣಕಾಸು ನೆರವು ನಮ್ಮ ಒಟ್ಟು ತೀರ್ಮಾನ ಎಂದು ಅವರು ಹೇಳಿದ್ದಾರೆ.

ಮರಿಯುಪೊಲ್‌ನಲ್ಲಿ ಪ್ರತಿರೋಧ ತೋರುತ್ತಿದ್ದ ಉಕ್ರೇನಿನ 771 ಸೈನಿಕರು ಕಳೆದ 24 ತಾಸುಗಳಲ್ಲಿ ಶರಣಾಗಿದ್ದು, ಭದ್ರಕೋಟೆ ಅಜೋವ್‌ಸ್ಟಾಲ್‌ ಉಕ್ಕಿನ ಸ್ಥಾವರ ತೊರೆದ ಉಕ್ರೇನ್‌ ಸೈನಿಕರ ಸಂಖ್ಯೆ 1,730ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಎಡಬಿಡದ ಮಳೆ ಶಿವಮೊಗ್ಗ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

0

ಕಳೆದ ಮೂರು ನಾಲ್ಕು ದಿನಗಳಿಂದ ರಾಜ್ಯದಲ್ಲಿ ಭಾರೀ ಮಳೆ ಆಗುತ್ತಿದೆ. ಇನ್ನೂ 2 ದಿನ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದಲ್ಲಿ ಭಾರೀ ಮಳೆ ನಿರೀಕ್ಷೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರು, ಹಾಸನ, ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಚಾಮರಾಜನಗರ, ಮೈಸೂರು, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಉಳಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ,ಕೋಲಾರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಎಲ್ಲೋ ಅಲರ್ಟ್ ಘೋಷಿಸಲಾಗಿದೆ.

ಇನ್ನು ಉತ್ತರ ಕನ್ನಡ ಜಿಲ್ಲೆಗಳು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 2 ದಿನ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಒಳನಾಡಿನಲ್ಲಿ ಮೇ. 20 ರಿಂದ ಮೇ. 22 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ತಿಳಿಸಿದೆ.

ಆಕ್ರಮಣಕಾರಿ ಬ್ಯಾಟಿಂಗ್ ನಿಂದ ಲಖನೌ ತಂಡ ಪ್ಲೇ ಆಫ್ ಪಟ್ಟಿಗೆ

ಲಖನೌ ಸೂಪರ್​ ಜೈಂಟ್ಸ್​ ತಂಡವು ಶ್ರೇಯಸ್​ ಅಯ್ಯರ್​ ನೇತೃತ್ವದ ಕೆಕೆಆರ್​ ವಿರುದ್ಧ ಕೇವಲ 2ರನ್​ಗಳ ಅಂತರದ ರೋಚಕ ಗೆಲುವು ದಾಖಲಿಸಿದೆ.
ಇದರೊಂದಿಗೆ ಜೈಂಟ್ಸ್​ ಪ್ಲೇ-ಆಫ್​ ಪ್ರವೇಶ ಪಡೆದುಕೊಂಡಿದೆ.

ಈ ಮೂಲಕ ಗುಜರಾತ್ ಬಳಿಕ ಎರಡನೇ ತಂಡವಾಗಿ ಮುಂದಿನ ಹಂತಕ್ಕೆ ಲಗ್ಗೆ ಹಾಕಿರುವ 2ನೇ ತಂಡವಾಗಿ ಹೊರಹೊಮ್ಮಿದೆ.

ಇನ್ನೊಂದೆಡೆ ಎರಡು ಬಾರಿಯ ಚಾಂಪಿಯನ್ ಕೆಕೆಆರ್ ಸೋಲಿನೊಂದಿಗೆ​ ಅಭಿಯಾನ ಮುಗಿಸಿದೆ.
ವಿಕೆಟ್ ಕೀಪರ್ ಬ್ಯಾಟರ್ ಡಿಕಾಕ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ, ಐಪಿಎಲ್​​ನಲ್ಲಿ ಎರಡನೇ ಶತಕ( ಅಜೇಯ140) ಸಿಡಿಸಿ ಮಿಂಚಿದರು.
ಕ್ಯಾಪ್ಟನ್ ರಾಹುಲ್ 68​​ ರನ್​ಗಳಿಸಿದರು. ಡಿಕಾಕ್​ ತಾವು ಎದುರಿಸಿದ 70 ಎಸೆತಗಳಲ್ಲಿ 10 ಸಿಕ್ಸರ್, 10 ಬೌಂಡರಿ ಸೇರಿ ಅಜೇಯ 140 ರನ್​​ಗಳಿಕೆ ಮಾಡಿದರು. ಕೋಲ್ಕತ್ತಾ ತಂಡದ ಯಾವೊಬ್ಬ ಪ್ಲೇಯರ್ ಕೂಡ ಒಂದೇ ಒಂದು ವಿಕೆಟ್​ ಸಹ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ.

ಟಿಮ್ ಸೌಥಿ ತಾವು ಎಸೆದ 4 ಓವರ್​​ಗಳಲ್ಲಿ 57ರನ್​​ ನೀಡಿದರು.
ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಕ್ಯಾಪ್ಟನ್ ರಾಹುಲ್​ ಹಾಗೂ ಡಿಕಾಕ್​ ಉತ್ತಮ ಜೊತೆಯಾಟವಾಡಿದರು.

ವಿಕೆಟ್​ ಪತನಗೊಳ್ಳದಂತೆ ನಿಗಾ ವಹಿಸಿದ ಈ ಜೋಡಿ ಎದುರಾಳಿ ಬೌಲರ್​​ಗಳನ್ನ ದಂಡಿಸಿದರು.

ಕೊನೆ ಓವರ್​​ವರೆಗೆ ಬ್ಯಾಟ್ ಬೀಸಿದ ಈ ಜೋಡಿ 20 ಓವರ್​ಗಳಲ್ಲಿ 210ರನ್​​ಗಳಿಕೆ ಮಾಡಿದ್ದು, ಎದುರಾಳಿ ತಂಡದ ಮುಂದೆ ಬೃಹತ್ ಟಾರ್ಗೆಟ್​ ನೀಡಿತು.

211ರನ್​ಗಳ ಬೃಹತ್​ ಗುರಿ ಬೆನ್ನತ್ತಿದ ಕೆಕೆಆರ್​, ಆರಂಭಿಕ ಆಘಾತದ ಹೊರತಾಗಿ ನಾಯಕ ಶ್ರೇಯಸ್​ ಅಯ್ಯರ್(50), ರಿಂಕು ಸಿಂಗ್ ಸ್ಫೋಟಕ(40) ಹಾಗೂ ನರೈನ್​ ಅಜೇಯ(21) ಸಹಾಯದಿಂದ ನಿಗದಿತ 20 ಓವರ್​ಗಳಲ್ಲಿ 8ವಿಕೆಟ್​ನಷ್ಟಕ್ಕೆ 208ರನ್​ಗಳಿಕೆ ಮಾಡಿ, 2ರನ್​ಗಳ ರೋಚಕ ಸೋಲು ಕಂಡಿತು.

ಇಬ್ರಾಹಿಂ ಅವರಿಗೆ ಪಕ್ಷದ ಉನ್ನತ ಸ್ಥಾನವಿದೆ, ಪರಿಷತ್ ಗೆ ಅಭ್ಯರ್ಥಿಮಾಡುವುದಿಲ್ಲ

0

ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರಿಗೆ ಟಿಕೆಟ್‌ ಸಿಗುವ ಸಾಧ್ಯತೆ ಕ್ಷೀಣಿಸಿದೆ.

ಈಗಾಗಲೇ ಇಬ್ರಾಹಿಂ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿದ್ದೇವೆ ಎನ್ನುವ ಮೂಲಕ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪರಿಷತ್‌ ಚುನಾವಣೆಯ ಟಿಕೆಟ್‌ ಕೊಡುವುದಿಲ್ಲ ಎಂಬ ಸುಳಿವು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಬ್ರಾಹಿಂ ಅವರೂ ಪರಿಷತ್‌ ಚುನಾವಣೆಯ ಟಿಕೆಟ್‌ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಾಂಗ್ರೆಸ್ಸಿನಲ್ಲಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದಿದ್ದಾರೆ. ಹೀಗಾಗಿ, ನಿರೀಕ್ಷೆ ಇಟ್ಟುಕೊಳ್ಳುವುದು ಸಹಜ. ಆದರೆ, ಈಗಾಗಲೇ ಅವರಿಗೆ ಅಧ್ಯಕ್ಷ ಸ್ಥಾನವನ್ನೇ ಕೊಟ್ಟಿದ್ದೇವೆ’ ಎಂದು ತಿಳಿಸಿದರು.

ವಿಧಾನಪರಿಷತ್‌ ಸದಸ್ಯ ಸ್ಥಾನಕ್ಕೆ ಪಕ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಕಾಂಕ್ಷಿಗಳು ಇದ್ದಾರೆ. ಯಾರಿಗೆ ಕೊಡಬೇಕು ಎನ್ನುವುದನ್ನು ಪಕ್ಷದ ನಾಯಕರ ಸಭೆ ನಡೆಸಿ ತೀರ್ಮಾನಿಸುತ್ತೇವೆ’ ಎಂದು ಹೇಳಿದರು.

ವಿದ್ಯಾರ್ಥಿಗಳು ಶಿಸ್ತು ಮತ್ತು ಒಳ್ಳೆಯ ಮನಸ್ಸನ್ನ ಹೊಂದಿರಬೇಕು-ಲಕ್ಷ್ಮೀಪ್ರಸಾದ್

0

ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡು, ಯಾವುದೇ ಕೆಲಸವನ್ನು ಒಳ್ಳೆಯ ಮನಸ್ಸಿನಿಂದ ಮಾಡುವ ಮೂಲಕ ದೇಶಕ್ಕೆ ಕೊಡುಗೆ ನೀಡುವ ಜವಾಬ್ದಾರಿ ಹೊಂದಿದ್ದಾರೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ಹೇಳಿದರು.
ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಇಂದು ಏರ್ಪಡಿಸಿದ್ದ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಗೂ ಅವರದೇ ಆದ ವ್ಯಕ್ತಿತ್ವ ಇರುತ್ತದೆ. ಹಾಗೆಯೇ ವೈಯಕ್ತಿಕ, ವೃತ್ತಿಪರ ಹಾಗೂ ಸಾಮಾಜಿಕ ಜೀವನವೆಂಬ ಮೂರು ಹಂತಗಳಿದ್ದು ಇವುಗಳಲ್ಲಿ ಒಂದರಲ್ಲಿ ಎಡವಿದರೂ ತಮ್ಮ ಗುರಿ ಮತ್ತು ಕನಸನ್ನು ಪೂರೈಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಸೂಕ್ತ ರೀತಿಯಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಗಾಗಿ ಆದರ್ಶ ವ್ಯಕ್ತಿಗಳನ್ನು ಹಾಗೂ ವೈಯಕ್ತಿಕ ಜೀವನಕ್ಕೆ ತಮ್ಮ ತಂದೆ ತಾಯಿಯನ್ನು ರೋಲ್ ಮಾಡೆಲ್ ಆಗಿ ಸ್ವೀಕರಿಸಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗರಾಜ್ ಪಿ ಮಾತನಾಡಿ, ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ನಾಗರಿಕರನ್ನಾಗಿಸುವುದು ಶಿಕ್ಷಣದ ಮೂಲ ಉದ್ದೇಶವಾಗಿದೆ. ಕೇವಲ ಹೆಚ್ಚಿನ ಅಂಕ ಗಳಿಸುವುದರಿಂದ ಅವರ ಬದುಕು ರೂಪುಗೊಳ್ಳುವುದಿಲ್ಲ. ಅಂಕದೊಂದಿಗೆ ಭೌದ್ಧಿಕ ಸಾಮಥ್ರ್ಯ, ಭಾವನಾತ್ಮಕ ಕೌಶಲ್ಯ, ದೈಹಿಕ ಸಾಮಥ್ರ್ಯ ಹಾಗೂ ಸಾಮಾಜಿಕ ಮತ್ತು ನೈತಿಕ ಅಂಶಗಳಲ್ಲಿ ಶಿಕ್ಷಿತರಾಗಬೇಕೆಂದು ಹೇಳಿದರು.

ಕಾರ್ಯಾಗಾರದಲ್ಲಿ ಮೊಹಮ್ಮದ್ ಇಬ್ರಾಹಿಂ, ಬಶೀರ್ ಅಹ್ಮದ್, ಪತ್ರಕರ್ತರಾದ ಅಮೀನ್ ಮುದಾಸ್ಸಿರ್ ಮತ್ತು ಮುದಾಸ್ಸಿರ್ ಅಹ್ಮದ್ ಲಿಯಾಖತ್ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಎಸ್ಎಸ್ಎಲ್ ಸಿ ಫಲಿತಾಂಶ; ವಿದ್ಯಾರ್ಥಿನಿಯರೇ ಮೇಲುಗೈ

0

ಬಹು ನಿರೀಕ್ಷಿತ 2022ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಂಡಿದೆ.

8,53,436 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಶೇ. 85.53 ಫಲಿತಾಂಶ ಬಂದಿದೆ. 81.03ರಷ್ಟು ಬಾಲಕರು ಹಾಗೂ ಶೇ. 90.29ರಷ್ಟು ಪಾಸ್​ ಆಗಿರುವ ವಿದ್ಯಾರ್ಥಿನಿಯರು ಮತ್ತೊಮ್ಮೆ ಮೇಲುಗೈ ಸಾಧಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ನಾಗೇಶ್​ ಫಲಿತಾಂಶದ ಬಗ್ಗೆ ಮಾಹಿತಿ ನೀಡಿದರು.

8,53,436 ಬರೆದಿದ್ದು, 730,881 ಮಕ್ಕಳು ಪಾಸ್​ ಆಗಿದ್ದು, ಶೇ. 85.63 ತೇರ್ಗಡೆ ಹೊಂದಿದಂತಾಗಿದೆ. ಕಳೆದ 10 ವರ್ಷಗಳಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಪಾಸ್​ ಆಗಿದ್ದಾರೆ. 145 ಮಕ್ಕಳು 625ಕ್ಕೆ 625 ಅಂಕ ಪಡೆದಿದ್ದಾರೆ. 309 ಮಕ್ಕಳು 624 ಅಂಕ ಪಡೆದು ತೇರ್ಗಡೆಯಾಗಿದ್ದಾರೆ ಎಂದು ತಿಳಿಸಿದರು.

ಈ ವರ್ಷ ಮಾರ್ಚ್ 28ರಿಂದ ಏಪ್ರಿಲ್ 11ರವರೆಗೆ ಎಸ್‌ಎಸ್‌ಎಲ್​ಸಿ ಪರೀಕ್ಷೆ ನಡೆದಿತ್ತು. ಈ ಸಲ 15,387 ಶಾಲೆಗಳಿಂದ 8,73,859 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ರಾಜ್ಯಾದ್ಯಂತ 3,444 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆದಿತ್ತು ಎಂದು ಸಚಿವರು ತಿಳಿಸಿದರು.

2019-20ನೇ ಸಾಲಿನಿಂದಲೇ ರ‍್ಯಾಂಕ್ ಬದಲಿಗೆ ಗ್ರೇಡ್ ನೀಡುವ ಪದ್ಧತಿ ಜಾರಿಯಲ್ಲಿದೆ.‌ ಹೀಗಾಗಿ ಈ ವರ್ಷವೂ ಗ್ರೇಡ್ ನೀಡಲಾಗಿದೆ. ಈ ಸಲ ಮೌಲ್ಯಮಾಪನ ವಿದ್ಯಾರ್ಥಿ ಸ್ನೇಹಿಯಾಗಿ ಮಾಡಿದ್ದೇವೆ. ಹೀಗಾಗಿ ಹೆಚ್ಚು ಫಲಿತಾಂಶ ಬಂದಿದೆ. ಪ್ರಶ್ನೆ ಪತ್ರಿಕೆ ಕೂಡಾ ವಿದ್ಯಾರ್ಥಿ ಸ್ನೇಹಿಯಾಗಿತ್ತು. ಶೇ.10 ಮಾತ್ರ ಕಠಿಣ ಪ್ರಶ್ನೆಗಳನ್ನು ಪತ್ರಿಕೆಯಲ್ಲಿ ನೀಡಲಾಗಿದ್ದು, ಶೇ. 10ರಷ್ಟು ಗ್ರೇಸ್ ಮಾರ್ಕ್ಸ್ ನೀಡಲಾಗಿದೆ. 175 ಅಂಕ ಪಡೆದವರು ಮಾತ್ರ ಇದಕ್ಕೆ ಎಲಿಜಬಲ್ ಆಗಿರುತ್ತಾರೆ. 35,931 ವಿದ್ಯಾರ್ಥಿಗಳಿಗೆ ಒಂದು ವಿಷಯದಲ್ಲಿ ಮಾತ್ರ ಗ್ರೇಸ್ ಮಾರ್ಕ್ಸ್ ನೀಡಿದ್ದೇವೆ. 3,940 ವಿದ್ಯಾರ್ಥಿಗಳಿಗೆ 2 ವಿಷಯದಲ್ಲಿ ಗ್ರೇಸ್ ಮಾರ್ಕ್ಸ್ ನೀಡಿದ್ದೇವೆ ಎಂದು ಸಚಿವರು ತಿಳಿಸಿದರು.

ಪೂರಕ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಆಗಿದೆ. ಜೂನ್ 27ರಿಂದ ಜುಲೈ 4ರವರೆಗೆ ನಡೆಯಲಿದೆ ಎಂದು ನಾಗೇಶ್​ ಮಾಹಿತಿ ನೀಡಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸುರಿಮಳೆ..ಬೀದಿಗಳೆಲ್ಲ ಜಲಾವೃತ ಶಿವಮೊಗ್ಗದಲ್ಲಿ ಶಾಲೆಗಳಿಗೆ ಒಂದು ದಿನ ರಜೆ‌ ಘೋಷಣೆ

0

ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದೆ.
ಕೆಲವೆಡೆ ನಿನ್ನೆ ರಾತ್ರಿ ಯಿಂದ ಭಾರಿ ಮಳೆಯಾಗಿದೆ.
ಮತ್ತೆ ಕೆಲವೆಡೆ ಮೋಡ ಕವಿದ ವಾತಾವರಣವಿತ್ತು.

ಆದರೆ ಇಂದು ಬೆಳ್ಳ ಬೆಳಗ್ಗೆಯೇ ಬೆಂಬಿಡದೆ ಮಳೆ ಸುರಿಯುತ್ತಲೆ ಇದೆ. ಸಂಜೆ ವೇಳೆಗೆ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಹೀಗಾಗಿ ಮಂಡ್ಯ, ಶಿವಮೊಗ್ಗ, ಮೈಸೂರು ಭಾಗದಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಮಳೆಯ ಅಬ್ಬರ ಹೆಚ್ಚಾಗುವುದರಿಂದ ಹವಮಾನ ಇಲಾಖೆ ಹಾಸನ, ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಹೀಗಾಗಿ ದಕ್ಷಿಣ ಕನ್ನಡ, ಮೈಸೂರು, ಮಂಡ್ಯ, ಶಿವಮೊಗ್ಗ ಜಿಲ್ಲೆಗಳಲ್ಲಿ ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆ, ಅಂಗನವಾಡಿಗಳಿಗೆ ಇಂದು ರಜೆ ಘೋಷಣೆ ಮಾಡಿದೆ.
ಸುರಕ್ಷತಾ ದೃಷ್ಟಿಯಿಂದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಆಯಾ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಕೆಲವೊಂದು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದು, ತುಮಕೂರು, ಚಿತ್ರದುರ್ಗ, ಬಳ್ಳಾರಿ, ಕೋಲಾರ, ದಾವಣಗೆರೆ, ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಕೊಪ್ಪಳ, ವಿಜಯಪುರ, ಬಳ್ಳಾರಿ, ಗದಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಹಣದ್ವಿಗುಣ ವಂಚನೆಯ ಗ್ಯಾಂಗ್ ಅರೆಸ್ಟ್

0

ಹಣ ದ್ವಿಗುಣಗೊಳಿಸುವ ಆಮಿಷ ಒಡ್ಡಿ ಜನರನ್ನು ವಂಚಿಸುತ್ತಿದ್ದ ಗ್ಯಾಂಗ್‌ನ್ನು ಬಾಲಘಟ ಪೊಲೀಸರು ಸೆರೆ ಹಿಡಿದಿದ್ದಾರೆ.

ಆರೋಪಿಗಳಿಂದ ವಶಪಡಿಸಿಕೊಂಡ ನಗದನ್ನು ಎಣಿಸುವಲ್ಲಿ ಪೊಲೀಸರು ಬೆವರು ಸುರಿಸಿದ್ದಾರೆ.
ನೋಟು ಎಣಿಕೆಗೆ ಯಂತ್ರಗಳನ್ನು ತಂದು ನಗದು ಎಣಿಕೆ ಮುಗಿಸಿ ಡಬ್ಬಿ ತುಂಬಿಕೊಂಡು ಪೊಲೀಸರು ಹೊರಬರುವಾಗ ನೋಟುಗಳ ತೂಕದ ಭಾರವನ್ನು ಹೊರಲು ಪೋಲಿಸರಿಗೆ ಸುಸ್ತಾಗಿದ್ದು ಆರೋಪಿಗಳಿಂದ 10 ಕೋಟಿ ನಗದು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಶಪಡಿಸಿಕೊಂಡ ನಗದನ್ನು ನೋಡಿ ಪೊಲೀಸರು ಅಚ್ಚರಿಗೊಂಡಿದ್ದಾರೆ. ವಂಚನೆ ಪ್ರಕರಣದಲ್ಲಿ ಗ್ಯಾಂಗ್‌ನ 11 ಸದಸ್ಯರನ್ನು ಪೋಲಿಸರು ಬಂಧಿಸಿದ್ದಾರೆ ಮತ್ತು ಅವರ ಮೂವರು ಸಹಚರರು ಇನ್ನೂ ತಲೆಮರೆಸಿಕೊಂಡಿದ್ದಾರೆ.

ಎಸ್ಪಿ ಸಮೀರ್ ಸೌರಭ್ ಮಾತನಾಡಿ, ಜಿಲ್ಲೆಯ ಕಿರ್ನಾಪುರ-ಲಾಂಜಿ ಪ್ರದೇಶದಲ್ಲಿ ಕೆಲವೇ ದಿನಗಳು ಮತ್ತು ತಿಂಗಳಲ್ಲಿ ದುಪ್ಪಟ್ಟು ಹಣವನ್ನು ಹಿಂದಿರುಗಿಸುವ ವಿಷಯದಲ್ಲಿ ಪೊಲೀಸರು ದೊಡ್ಡ ಕ್ರಮ ಕೈಗೊಂಡಿದ್ದಾರೆ. ಈ ಪ್ರಕರಣದಲ್ಲಿ 11 ಆರೋಪಿಗಳನ್ನು ಬಂಧಿಸಲಾಗಿದೆ. ಇವರಿಂದ ನಗದು, ದಾಖಲೆ, ಮೊಬೈಲ್, ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮಾಹಿತಿಯ ಆಧಾರದ ಮೇಲೆ ಪ್ರತ್ಯೇಕ ತಂಡಗಳನ್ನು ರಚಿಸಿ, ಮೊದಲು ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲಾಯಿತು ಎಂದು ಅವರು ಹೇಳಿದರು.

ಗ್ರಾಮಸ್ಥರಿಂದ ಮಾಹಿತಿ ಸಂಗ್ರಹಿಸಿ ನಂತರ ಆರೋಪಿಗಳನ್ನು ಬಂಧಿಸಿದಾಗ ಅವರಿಂದ 10 ಕೋಟಿ ರೂ. ಹಣವನ್ನು ದ್ವಿಗುಣಗೊಳಿಸುವ ಪ್ರಕರಣಗಳು ಸಾಮಾನ್ಯವಾಗಿ ಹಲವು ಬಾರಿ ಮುಂಚೂಣಿಗೆ ಬಂದಿವೆ ಆದರೆ ಮಧ್ಯಪ್ರದೇಶದಲ್ಲಿ ಇದು ಅತಿದೊಡ್ಡ ಗ್ಯಾಂಗ್ ಎಂದು ಹೇಳಲಾಗುತ್ತಿದೆ. ಗ್ಯಾಂಗ್‌ಗಳು ಏಜೆಂಟರ ಮೂಲಕ ದುಪ್ಪಟ್ಟು ಹಣಕ್ಕೆ ಆಮಿಷವೊಡ್ಡಿ ವಂಚನೆ ಮಾಡುತ್ತಿದ್ದರು ಎಂದು ತಿಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮೇ 24 ರಿಂದ ಪಿಯು ಉತ್ತರಪತ್ರಿಕೆ ಮೌಲ್ಯಮಾಪನ ಪ್ರಾರಂಭ

0

ರಾಜ್ಯಾದ್ಯಂತ ನಡೆದ ಹಿಂದಿ ಪರೀಕ್ಷೆಯೊಂದಿಗೆ 2021-22ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಮೇ 24ರಿಂದ ಮೌಲ್ಯಮಾಪನ ಕಾರ್ಯಗಳು ಆರಂಭವಾಗಲಿವೆ.

ಮೌಲ್ಯಮಾಪನ ಕಾರ್ಯಕ್ಕೆ ಸುಮಾರು 19 ಸಾವಿರ ಉಪನ್ಯಾಸಕರು ನೋಂದಣಿ ಮಾಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಮೇ 22 ಮತ್ತು 23ರಂದು ತರಬೇತಿ ನೀಡಲಾಗುತ್ತದೆ. ಮೇ 24ರಿಂದ ಮೌಲ್ಯಮಾಪನ ಕಾರ್ಯಗಳು ಆರಂಭವಾಗಲಿವೆ ಎಂದು ಪಿಯು ಇಲಾಖೆ ತಿಳಿಸಿದೆ.

ಪದವಿ ಪೂರ್ವ ಕಾಲೇಜುಗಳ 2021-22ನೇ ಸಾಲಿನ ಕಾರ್ಯನಿರ್ವಹಣೆ ದಿನವು ಮೇ 19 ಆಗಿದೆ. ಮೇ 20ರಿಂದ ಜೂ.8ರ ವರೆಗೆ ಬೇಸಗೆ ರಜೆ ಘೋಷಿಸಲಾಗಿದೆ.