Monday, March 2, 2026
Monday, March 2, 2026
Home Blog Page 1571

ಇಂದು ಚಹಾ ದಿನ ಆಹ! ಜೊತೆಗೆ ಒಂದಿಷ್ಟು ಚೂಡಾ

0

ಪ್ರತಿಯೊಂದಕ್ಕೂ ಒಂದು ವಿಶಿಷ್ಟ ದಿನ ಇರುವಂತೆ , ಚಹಾಕ್ಕೂ ಕೂಡ ಒಂದು ದಿನವಿದೆ.. ಪ್ರತಿ ವರ್ಷವೂ ಮೇ 21ರಂದು ಅಂತರರಾಷ್ಟ್ರೀಯ ಚಹಾ ದಿನವನ್ನು ಆಚರಿಸಲಾಗುತ್ತಿದೆ.

ಚಹಾ ಸೇವನೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ದಿನವನ್ನು ಮುಖ್ಯವಾಗಿ ಆಚರಿಸಲಾಗುತ್ತದೆ. ಚಹಾ ಉತ್ಪಾದಿಸುವ ಹೆಚ್ಚಿನ ದೇಶಗಳಲ್ಲಿ ಚಹಾ ಉತ್ಪಾದನೆಯ ಋತುಮಾನವು ಮೇ ತಿಂಗಳಲ್ಲಿ ಪ್ರಾರಂಭವಾಗುವುದರಿಂದ ಯುಎನ್ ಮೇ 21 ಅನ್ನು ಅಂತರರಾಷ್ಟ್ರೀಯ ಚಹಾ ದಿನವೆಂದು ಆಚರಿಸಲು ನಿರ್ಧರಿಸಿತು.

ಚಹಾವು ಔಷಧೀಯ ಮೌಲ್ಯವನ್ನು ಹೊಂದಿದೆ. ಜನರಿಗೆ ಆರೋಗ್ಯ ಪ್ರಯೋಜನಗಳನ್ನು ತರುವ ಸಾಮರ್ಥ್ಯವನ್ನು ಹೊಂದಿದೆ ಎಂದು ಯುಎನ್ ಹೇಳಿದೆ.

2019 ರಲ್ಲಿ, ವಿಶ್ವಸಂಸ್ಥೆ (ಯುಎನ್) ವಿಶ್ವದ ಅತ್ಯಂತ ಹಳೆಯ ಪಾನೀಯಗಳ ಮಹತ್ವವನ್ನು ಗುರುತಿಸಿದೆ.

ಚಹಾ ದೈನಂದಿನ ಜೀವನದಲ್ಲಿ ಒಂದು ಅವಿಭಾಜ್ಯ ಅಂಗ ಎಂಬಂತಾಗಿದೆ. ಚಹಾ ಇಲ್ಲದಿದ್ದರೆ ದಿನವೇ ಪ್ರಾರಂಭವಾಗುವುದಿಲ್ಲ ಎನ್ನುವ ಮಟ್ಟಿಗೆ ಕೆಲವು ಜನರು ಚಹಾ ಸೇವನೆ ಮಾಡುತ್ತಾರೆ. ಚಹಾವನ್ನು ಕೆಲವರು ದಿನಕ್ಕೆ 3-4 ಬಾರಿ ಕುಡಿದರೇ ಇನ್ನು ಕೆಲವರು ದಿನಕ್ಕೆ 2 ಬಾರಿ ಕುಡಿಯುತ್ತಾರೆ. ಈ ಕಚೇರಿಗಳಲ್ಲಿ ಕೆಲಸ ಮಾಡೊ ಕೆಲವು ಜನರು ಮೈಂಡ ರಿಲ್ಯಾಕ್ಸ್​ಗಾಗಿ ಚಹಾ ಕುಡಿಯುತ್ತಾರೆ.

ಚಹಾವನ್ನು ಕೆಲವರು ಬೆಳಿಗ್ಗೆ ಮತ್ತು ಸಾಯಂಕಾಲ ಮಾತ್ರ ಕುಡಿದರೇ, ಕೆಲವರು ಮಧ್ಯಾಹ್ನ ಊಟವಾದ ಮೇಲೂ ಚಹಾ ಕುಡಿಯುತ್ತಾರೆ.

ಗಂಡು ಮಕ್ಕಳಿಗೆ ಎಣ್ಣೆ ಪ್ರಿಯವಾದರೆ, ಹೆಣ್ಣು ಮಕ್ಕಳಿಗೆ ಟೀ ಮೇಲೆ ಒಲವು ಜಾಸ್ತಿ ಎಂದರೆ ತಪ್ಪಾಗಲಾರದು.

ವರಕವಿ ದ.ರಾ ಬೇಂದ್ರೆಯವರೂ ಕೂಡ ತಮ್ಮ ನಿ ಹಿಂಗ ನೋಡ ಬ್ಯಾಡ ನನ್ನ ಹಾಡಿನೊಳಗೆ ಒಂದು ಸಾಲು ಬರೆದಿದ್ದಾರೆ. “ಚಾಹಾದ ಜೋಡಿ ಚೂಡಾಧಾಂಗ ನೀ ನನಗಂದಾಂವಾ ಚೌಡಿಯಲ್ಲ ನೀ ಚೂಡಾಮಣಿಯಂತ ರಮೀಸ ಬಂದಾಂವಾ ಎಂದು. ಹೀಗೆ ಪ್ರಯತಮೆ ತನ್ನ ಪ್ರಿಯಕರನನ್ನು ತನ್ನೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತಾಳೆ.

ಚಹಾ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಾ? ಅಥವಾ ಕೆಟ್ಟದ್ದೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ವೈದ್ಯಕೀಯ ಮತ್ತು ವೈಜ್ಞಾನಿಕ ಸಂಶೋಧನೆಯ ಪ್ರಕಾರ ದಿನಕ್ಕೆ ನಾಲ್ಕು ಕಪ್ ಚಹಾ ಕುಡಿಯುವುದರಿಂದ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದೆ.

ಅದೆನೇ ಇರಲಿ, ಇತ್ತೀಚಿನ ದಿನಗಳಲ್ಲಿ ಚಹಾ ಕುಡಿಯುವರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಚಹಾದ ಬೇಡಿಕೆಯು ಹೆಚ್ಚಾಗಿದೆ. ಈ ಮಳೆಗಾಲ ಮತ್ತು ಚಳಿಗಾಲ ಬಂದರೆ ಸಾಕು ಬೆಳಗಿನ ನಸುಕಿನ ಜಾವ ಚುಮು ಚುಮು ಚಳಿಯಲ್ಲಿ ಚಹಾ ಕುಡಿಯುವುದೇ ಒಂದು ಮಜಾ.

ಹಾಗೇ ಸಂಜೆ ಹೊತ್ತು ಜಿಟಿ ಜಿಟಿ ಮಳೆಯಲ್ಲಿ ಬಿಸಿ ಬಿಸಿ ಚಹಾ ಅದರೊಂದಿಗೆ ಮಿರ್ಚಿ ಅಥವಾ ಯಾವುದಾರೂ ಕರೆದಿರುವ ಖ್ಯಾದ್ಯ ತಿಂದರೆ ಅದು ನೀಡುವ ತ್ರಿಲ್ ಬೇರೆಯಾಗಿರುತ್ತದೆ.

ಕೆಲವರಂತೂ ಚಹಾ ಸೇವನೆಗೆ ಅಡಿಕ್ಟ್ ಆಗಿದ್ದಾರೆ. ಅತಿಯಾದರೆ ಅಮೃತವೂ ವಿಷ.. ಹಾಗಾಗಿ ಹಿತಮಿತವಾಗಿ ಚಹಾ ಸೇವಿಸುವುದು ಉತ್ತಮ

ಕರಾವಳಿ ಜಿಲ್ಲೆಗಳಲ್ಲಿ ಆರೇಂಜ್ ಅಲರ್ಟ್ ಘೋಷಣೆ

0

ಕರಾವಳಿಯ ಜಿಲ್ಲೆಗಳಲ್ಲಿ ಮೇ 21 ಮತ್ತು 22ರಂದು ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಕರಾವಳಿಯ ಮೂರು ಜಿಲ್ಲೆಗಳಲ್ಲಿ ನಾಳೆ 115ಮಿ.ಮೀಗೂ ಅಧಿಕ ಮಳೆ ಸುರಿಯುವ ಸಾದ್ಯತೆ ಇದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಅದೇ ರೀತಿ ಮೇ 22ರಂದು 65 ಮಿ.ಮೀ. ಮಳೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಎಲ್ಲೋ ಅಲರ್ಟ್ ನೀಡಲಾಗಿದೆ. ಮಳೆಯೊಂದಿಗೆ ಗುಡುಗು-ಸಿಡಿಲಿನಿಂದ ಕೂಡಿದ ಗಾಳಿಯೂ ಬೀಸುವ ಸಾಧ್ಯತೆ ಇದೆ ಎಂದು ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.

ಕರಾವಳಿಯ ತೀರದಲ್ಲಿ ಗಂಟೆಗೆ 40ರಿಂದ 60 ಕಿ.ಮೀ. ವೇಗದ ಬಿರುಗಾಳಿ ಬೀಸುವ ಸಾಧ್ಯತೆ ಇದ್ದು, ಮುಂದಿನ 24 ಗಂಟೆಗಳ ಕಾಲ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಯಶಸ್ವಿ ನಿರ್ದೇಶಕ ನೀಲ್ ಕೈಯಲ್ಲಿ ಮತ್ತೆರಡು ಸಿನಿಮಾಗಳು

0

ಕೆಜಿಎಫ್ ಮತ್ತು ಕೆಜಿಎಫ್ 2 ಮೂಲಕ ದೇಶದ ಗಮನ ಸೆಳೆದ ನಿರ್ದೇಶಕ ಪ್ರಶಾಂತ್ ನೀಲ್ ಮತ್ತೆರಡು ಚಿತ್ರಗಳನ್ನು ಕೈಗೆತ್ತಿಕೊಂಡಿದ್ದಾರೆಂದು ತಿಳಿದುಬಂದಿದೆ.

ಒಂದು ಚಿತ್ರದಲ್ಲಿ ಜೂ. ಎನ್.ಟಿ.ಆರ್., ಮತ್ತೊಂದು ಚಿತ್ರದಲ್ಲಿ ಶ್ರೀಮುರಳಿ ನಾಯಕರಾಗಿದ್ದಾರೆ.
ಟಾಲಿವುಡ್ ಸೂಪರ್ ಸ್ಟಾರ್ ಜೂನಿಯರ್ ಎನ್ಟಿಆರ್ ಅಭಿನಯದ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿದ್ದಾರೆ. ಚಿತ್ರದ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ನೆನಪಿನಲ್ಲಿ ಉಳಿಯುವ ರಕ್ತದಲ್ಲಿ ನೆನೆದ ನೆಲ, ಅವನ ನೆಲ, ಅವನ ರಾಜ್ಯ, ಆದರೆ ಖಂಡಿತವಾಗಿಯೂ ಅವನ ರಕ್ತವಲ್ಲ’ ಎಂದು ಬರೆದು ಜೂನಿಯರ್ ಎನ್ಟಿಆರ್ ಅವರ ಫಸ್ಟ್ ಲುಕ್ ಫೋಟೋ ಪೋಸ್ಟ್ ಮಾಡಿದ್ದಾರೆ.
ಒಂದು ಚಿತ್ರವನ್ನು ನಿರ್ದೇಶಿಸಲಿರುವ ಅವರು ಮತ್ತೊಂದು ಚಿತ್ರಕ್ಕೆ ಕತೆ ಬರೆದಿದ್ದಾರೆ.

ಎನ್ಟಿಆರ್ ಜನ್ಮದಿನದ ಹಿನ್ನೆಲೆಯಲ್ಲಿ ಅವರ 31 ನೇ ಸಿನಿಮಾ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದು, ಸಂಚಲನ ಮೂಡಿಸಿದೆ.

ಇದರೊಂದಿಗೆ ‘ಬಘೀರ’ ಹೊಸ ಚಿತ್ರವನ್ನು ಪ್ರಶಾಂತ್ ನೀಲ್ ಕೈಗೆತ್ತಿಕೊಂಡಿದ್ದಾರೆ. ಹೊಂಬಾಳೆ ಫಿಲಂಸ್ ನಿರ್ಮಾಣದ ‘ಬಘೀರ’ ಚಿತ್ರಕ್ಕೆ ‘ಕೆಜಿಎಫ್’ ನಿರ್ದೇಶಕ ಪ್ರಶಾಂತ್ ನೀಲ್ ಕತೆ ಬರೆದು ಡಾ. ಸೂರಿ ನಿರ್ದೇಶಿಸಿರುವ ಚಿತ್ರದಲ್ಲಿ ನಾಯಕನಾಗಿ ಶ್ರೀಮುರಳಿ ನಟಿಸಲಿದ್ದಾರೆ.

ಮುಂದಿನ ವರ್ಷ ಚಿತ್ರ ಬಿಡುಗಡೆಯಾಗಲಿದೆ.

ಇಂದು ದಿ.ರಾಜೀವ್ ಗಾಂಧಿ ಅವರ 31ನೇಪುಣ್ಯತಿಥಿ

0

ಇಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 31ನೇ ಪುಣ್ಯತಿಥಿ. ಇದರ ಅಂಗವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಅನೇಕ ಗಣ್ಯರು ದೆಹಲಿಯ ವೀರ ಭೂಮಿಯಲ್ಲಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ್ದಾರೆ.

‌ಸೋನಿಯಾ ಅವರ ಜೊತೆಯಲ್ಲಿ ರಾಹುಲ್ ಗಾಂಧಿ, ಪುತ್ರಿ ಪ್ರಿಯಾಂಕಾ ಗಾಂಧಿ, ಅಳಿಯ ರಾಬರ್ಟ್ ವಾದ್ರಾ ಅವರು ಉಪಸ್ಥಿತರಿದ್ದರು.

ಕಾಂಗ್ರೆಸ್ ನಾಯಕರಾದ ಪಿ. ಚಿದಂಬರಂ, ಸಚಿನ್ ಪೈಲೆಟ್ ಸೇರಿದಂತೆ ಅನೇಕ ಸ್ಮಾರಕಕ್ಕೆ ಭೇಟಿ ಪುಷ್ಪ ನಮನ ಸಲ್ಲಿಸಿದ್ದಾರೆ.

ಮಾಜಿ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸೇರಿದಂತೆ ಹಲವು ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ರಾಜೀವ್‌ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಕನ್ನಡದ ಆಚಂದ್ರಾರ್ಕ ಹೆಸರು,ಚಂದ್ರ ಆರ್ಯ

0

ಎಲ್ಲಾದರು ಇರು ಎಂತಾದರೂ ಇರು ,ಎಂದೆಂದಿಗು ನೀ ಕನ್ನಡವಾಗಿರು…

ಎಂಬ ಕುವೆಂಪು ಅವರ ಪ್ರಸಿದ್ಧ ಕವಿತೆಗೆ ಸಜೀವ ಮಾದರಿಯಾದ ಘಟನೆ 

ಮಾಧ್ಯಮಗಳಲ್ಲಿ ನೀವೀಗ ನೋಡಬಹುದು.

ತುಮಕೂರು ಜಿಲ್ಲೆ ಶಿರಾದ ದ್ವಾರಾಳು ಗ್ರಾಮದವರು.ಅಪ್ಪಟ ಕನ್ನಡ ಪ್ರತಿಭೆ ದೂರದ ಕೆನಡಾದಲ್ಲಿ ಕನ್ನಡದ ಕಂಪು ಬಿತ್ತರಿಸಿದೆ.

ಸದ್ಯ ಒಟಾವ ನಗರದ ತಂತ್ರಜ್ಞನ ಕಂಪನಿಯೊಂದಕ್ಕೆ  ಹೂಡಿಕೆ ನಿರ್ವಹಣಾ ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಚಂದ್ರ ಆರ್ಯ ಅವರು ಕ್ರಿಯಾಶೀಲ ಮತ್ತು ಅನನ್ಯ ಚಿಂತನೆಗಳ ವ್ಯಕ್ತಿ.ದ್ವಿಪಕ್ಷೀಯವಾದ ಒಪ್ಪಂದಗಳಿಗೆ ಚಾಲನೆತುಂಬುವಲ್ಲಿ ಗಾಢಮನಸ್ಸುಳ್ಳವರು ಎಂದು ಮೆಚ್ಚಿಗೆ ನುಡಿಯಾಡಿದವರು ಕೆನಡಾದಲ್ಲಿನ ಭಾರತ ರಾಯಭಾರಿ ಶ್ರೀವಿಷ್ಣು ಪ್ರಕಾಶ್.

ನಮಗೆ ತಿಳಿದಂತೆ ಕನ್ನಡಿಗ  ಜೆ ಎಚ್ ಪಟೇಲ್ ಅವರುಕನ್ನಡದ ಮಾತುಗಳನ್ನ ಮೊದಲಬಾರಿಗೆ ಭಾರತೀಯ ಸಂಸತ್ತಿನಲ್ಲಿ ರಿಂಗಣಗುಡುವಂತೆ ಮಾಡಿದವರು.

ಈಗ ಸಾಗರಾದಾಚೆಯ ಸರ್ಕಾರದ ಸಂಸತ್ತಿನಲ್ಲಿ ಕನ್ನಡ ಕಸ್ತೂರಿ ಘಮಘಮ  ಹರಡುವಂತೆ ಮಾಡಿದವರು ಶ್ರೀ ಚಂದ್ರ ಆರ್ಯ.

ಕೇವಲ ಒಂದು ದಶಕದಲ್ಲ ಅವರ ಕೆನಡಾ ಸಾಧನೆ ಶ್ಲಾಘನೀಯ. 

ಕೆನಡಾಗೆ ಬಂದಿಳಿದಾಗ, ಯಾರ ಹೆಸರಿಲ್ಲ!.ಯಾರ ಫೋನ್ ನಂಬರುಗಳೂ ಇಲ್ಲ. ಇವತ್ತು 1700 ಪ್ರತಿಷ್ಠಿತರ ಹೆಸರುಗಳು ನನ್ನ ಬ್ಲಾಕ್ಬೆರಿ( ಮೊಬೈಲ್) ಯಲ್ಲಿದೆ ಎನ್ನುತ್ತಾರೆ ಚಂದ್ರ.ಈ ಮಾತುಗಳು ಅವರ ಶ್ರಮದ ದುಡಿಮೆಯ ಸಂಕೇತವಾಗಿವೆ. 

ಸದ್ಯ ಅವರು ಕೆನಡಾದ ನೇಪಿಯನ್ ಸಂಸತ್ ಕ್ಷೇತ್ರದ ಪ್ರತಿನಿಧಿಯಾಗಿದ್ದಾರೆ.

ಲಿಬರಲ್ ಪಕ್ಷದ ಅಭ್ಯರ್ಥಿಯಾಗಿ ಗೆದ್ದಿದ್ದಾರೆ. ಸಂಸದ್ ಸದಸ್ಯರ ತಂಡದ ಮುಖ್ಯಸ್ಥರಾಗಿರುವ ಅವರೀಗ ಕೆನಡಾದ ವಿದೇಶಾಂಗ ಮತ್ತು ವ್ಯಾಪಾರ ನೀತಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಭಾರತದ ಸಚಿವರು ಮತ್ತು ಕಾನೂನು ನಿರ್ಮಾತೃಗಳು ಕೆನಡಾಗೆ ಭೇಟಿ ನೀಡಲು ಒತ್ತಾಯಿಸಿದ್ದಾರೆ.

ಕನ್ನಡದವರಾದ ಚಂದ್ರ ಆರ್ಯ ಅವರಿಗೆ  ಕನ್ನಡಿಗರ ಅಭಿನಂದನೆಗಳು.

ಗ್ಯಾಸ್ ಪೂರೈಕೆ ನಿಲ್ಲಿಸಿ ಫಿನ್ ಲೆಂಡ್ ಗೆ ಬೆದರಿಸಿದ ರಷ್ಯ

0

ರಷ್ಯಾದ ಗಾಜ್‌ಪ್ರೊಮ್ ಶನಿವಾರ ಫಿನ್‌ಲ್ಯಾಂಡ್‌ಗೆ ಅನಿಲ ರಫ್ತುಗಳನ್ನು ಸ್ಥಗಿತಗೊಳಿಸಿದೆ ಎಂದು ಫಿನ್ನಿಷ್ ಗ್ಯಾಸ್ ಸಿಸ್ಟಮ್ ಆಪರೇಟರ್ ಹೇಳಿದ್ದಾರೆ.

ಇಮಾತ್ರಾ ಎಂಟ್ರಿ ಪಾಯಿಂಟ್ ಮೂಲಕ ಗ್ಯಾಸ್ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲಾಗಿದೆ’ ಎಂದು ಗ್ಯಾಸ್ಗ್ರಿಡ್ ಫಿನ್ಲ್ಯಾಂಡ್ ಹೇಳಿಕೆಯಲ್ಲಿ ತಿಳಿಸಿದೆ.

ಗಸುಮ್‌ನ ಪೂರೈಕೆ ಒಪ್ಪಂದದ ಅಡಿಯಲ್ಲಿ ಫಿನ್‌ಲ್ಯಾಂಡ್‌ಗೆ ನೈಸರ್ಗಿಕ ಅನಿಲ ಪೂರೈಕೆಯನ್ನು ಕಡಿತಗೊಳಿಸಲಾಗಿದೆ’ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

Gazprom ರಫ್ತು ನಿರ್ಬಂಧಗಳ ಕಾರಣದಿಂದಾಗಿ ಯುರೋಪಿಯನ್ ದೇಶಗಳು ರಷ್ಯಾದ ಅನಿಲ ಪೂರೈಕೆಗಾಗಿ ರೂಬಲ್ಸ್ ನಲ್ಲಿ ಪಾವತಿಸಬೇಕೆಂದು ಒತ್ತಾಯಿಸಿದೆ.

ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರ ಇಗೊರ್ ಕೊನಾಶೆಂಕೊ ಅವರು ಮೇ 16 ರಿಂದ 2,439 ಉಕ್ರೇನಿಯನ್ ಸಿಬ್ಬಂದಿ ಉಕ್ಕಿನ ಕೆಲಸದಲ್ಲಿ ಶರಣಾಗಿದ್ದಾರೆ.

ಫೆಬ್ರವರಿ 24 ರಂದು ರಷ್ಯಾ ಉಕ್ರೇನ್ ಮೇಲೆ ಯುದ್ಧವನ್ನು ಪ್ರಾರಂಭಿಸಿತು. ಮಾಹಿತಿ ಪ್ರಕಾರ, ಉಕ್ರೇನ್ ನಗರದ ಅಜೋವ್‌ಸ್ಟಲ್ ಸ್ಟೀಲ್‌ವರ್ಕ್ಸ್‌ನಲ್ಲಿ ತನ್ನ ಕೊನೆಯ ಪಡೆಗಳಿಗೆ ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ಆದೇಶಿಸಿದ ನಂತರ ಮಾರಿಯುಪೋಲ್‌ನ ಆಯಕಟ್ಟಿನ ಬಂದರನ್ನು ವಶಪಡಿಸಿಕೊಳ್ಳಲು ರಷ್ಯಾ ತನ್ನ ತಿಂಗಳುಗಳ ಅವಧಿಯ ಕಾರ್ಯಾಚರಣೆಯಲ್ಲಿ ವಿಜಯವನ್ನು ಘೋಷಿಸಿದೆ.

ಎಲ್ಲ ಭಾರತೀಯ ಭಾಷೆಗಳು ಭಾರತೀಯತೆಯ ಆತ್ಮ- ಪ್ರಧಾನಿ ಮೋದಿ

0

ಇತ್ತೀಚೆಗೆ ಕೇಂದ್ರ ಸರ್ಕಾರವು ಹಿಂದಿ ಹೇರಿಕೆ ಮಾಡುತ್ತಿದೆ ಎಂಬ ಆರೋಪ ಕೇಳಿಬರುತ್ತಿರುವ ನಡುವೆಯೇ, ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಮೌನ ಮುರಿದಿದ್ದಾರೆ.

ಬಿಜೆಪಿ ಪದಾಧಿಕಾರಿಗಳ ಸಮ್ಮೇಳನವನ್ನು ವರ್ಚುವಲ್‌ ರೂಪದಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಇಡೀ ದೇಶದ ಸಾಂಸ್ಕೃತಿಕ ಹಾಗೂ ಭಾಷಾ ವೈವಿಧ್ಯತೆಯನ್ನು ರಾಷ್ಟ್ರೀಯ ಅಸ್ಮಿತೆಯೊಂದಿಗೆ ಬಿಜೆಪಿ ಒಗ್ಗೂಡಿಸಿದೆ ಎಂದು ಸ್ಪಷ್ಟಪಡಿಸಿದರು

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಗಳಿಗೆ ಪ್ರಾಧಾನ್ಯತೆ ನೀಡಲಾಗಿದೆ. ಇದು ಸ್ಥಳೀಯ ಭಾಷೆಗಳ ಬಗ್ಗೆ ಬಿಜೆಪಿ ಹೊಂದಿರುವ ಬದ್ಧತೆಯ ದ್ಯೋತಕ. ಬಿಜೆಪಿ ಎಲ್ಲ ಭಾರತೀಯ ಭಾಷೆಗಳನ್ನೂ ಭಾರತೀಯತೆಯ ಆತ್ಮ ಎಂದು ಪರಿಗಣಿಸುತ್ತದೆ. ದೇಶದ ಉತ್ತಮ ಭವಿಷ್ಯಕ್ಕೆ ದೇಶದ ಭಾಷೆಗಳು ಕೊಂಡಿ’ ಎಂದು ಹೇಳಿದರು.

ಭಾಷೆಯ ಆಧಾರದಲ್ಲಿ ವಿವಾದ ಹುಟ್ಟಿಸುವ ಯತ್ನಗಳು ನಡೆಯುತ್ತಿದ್ದು, ಈ ಬಗ್ಗೆ ನಾಗರಿಕರು ಎಚ್ಚರದಿಂದ ಇರಬೇಕು.
ಬಿಜೆಪಿ ಎಲ್ಲ ಭಾರತೀಯ ಭಾಷೆಗಳನ್ನು ಭಾರತೀಯತೆಯ ಆತ್ಮ ಎಂದು ಪರಿಗಣಿಸುತ್ತದೆ’ ಎಂದಿದ್ದಾರೆ. ಈ ಮೂಲಕ ಹಿಂದಿ ಹೇರಿಕೆ ಆರೋಪ ಮಾಡುತ್ತಿರುವ ಪಕ್ಷಗಳು ಹಾಗೂ ವ್ಯಕ್ತಿಗಳಿಗೆ ತಿರುಗೇಟು ನೀಡಿದ್ದಾರೆ.

ಭಾರತೀಯ ಜನತಾ ಪಕ್ಷ ಪ್ರತಿ ಭಾಷೆಯಲ್ಲಿ ಭಾರತೀಯ ಸಂಸ್ಕೃತಿಯ ಪ್ರತಿಬಿಂಬ ನೋಡುತ್ತದೆ. ಎಲ್ಲ ಭಾರತೀಯ ಭಾಷೆಗಳೂ ಗೌರವಕ್ಕೆ ಅರ್ಹವಾಗಿವೆ ಎಂದು ತಿಳಿಸಿದರು.

ಯೋಗ ದಿನಾಚರಣೆಯಂದು ಮೈಸೂರಿನಲ್ಲಿ ಪ್ರಧಾನಿ ಮೋದೀಜಿ ಉಪಸ್ಥಿತಿ

0

ಮುಂದಿನ ತಿಂಗಳ ಜೂನ್ 21 ರಂದು ಮೈಸೂರಿಗೆ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಅಂತರಾಷ್ಟ್ರೀಯ ಯೋಗ ದಿನಾಚರಣೆ ಯಲ್ಲಿ ಭಾಗಿಯಾಗಲಿದ್ದಾರೆ. ಜಿಲ್ಲಾಡಳಿತ ಅಗತ್ಯ ಸಿದ್ಧತೆ ಕೈಗೊಂಡಿದೆ.

ಸಂಸದ ಪ್ರತಾಪಸಿಂಹ ಅವರು, ಯೋಗದಿನ ದಂದು ಮೈಸೂರಿಗೆ ಪ್ರಧಾನಿ ಮೋದಿ ಅವರು ಬರುವಂತೆ ತಾವೇ ಖುದ್ದಾಗಿ ದೆಹಲಿಗೆ ಹೋಗಿ ಆಹ್ವಾನಿಸಿದ್ದಾರೆ.

ಕೇಂದ್ರದ ಆಯುಷ್ ತಂಡವೂ ಏ.29ರಂದು ಮೈಸೂರಿಗೆ ಭೇಟಿ ನೀಡಿ ಅಗತ್ಯ ವ್ಯವಸ್ಥೆಗಳನ್ನು ಪರಿಶೀಲಿಸಿ ಹೋಗಿತ್ತು. ಪ್ರಸ್ತುತ ಈ ಎಲ್ಲಾ ಪ್ರಯತ್ನ ಗಳಿಂದ ಮೈಸೂರಿಗೆ ಮೋದಿ ಬರುವುದು ದೃಢವಾಗಿದೆ.

ಮೈಸೂರಿನ ರೇಸ್ ಕೋರ್ಸ್ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗದಿನಾಚರಣೆ ಸಿದ್ಧತೆ ನಡೆಸಲಾಗಿದೆ. ಮೈಸೂರಿನ ಯೋಗ ದಿನಾಚರಣೆ ಕುರಿತು ಪೋಸ್ಟರ್ ಸಹ ಬಿಡುಗಡೆ ಮಾಡಲಾಗಿದೆ. ಮೈಸೂರಿನ ವಿಜಯನಗರ ಯೋಗ ನರಸಿಂಹಸ್ವಾಮಿ ದೇವಾಸ್ಥಾನದಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಬಾರಿ ಯೋಗಾ ದಿನಾಚರಣೆಯಲ್ಲಿ 2 ಲಕ್ಷ ಯೋಗಪಟುಗಳನ್ನು ಭಾಗವಹಿಸಲು ಸಿದ್ದತೆ ಕೈಗೊಳ್ಳಲಾಗಿದೆ.

ದಾವಣಗೆರೆ ಜಿಲ್ಲಾಧಿಕಾರಿಗಳಿಂದ ಮಳೆಹಾನಿ ಪ್ರದೇಶ ವೀಕ್ಷಣೆ

0

ದಾವಣಗೆರೆ ಜಿಲ್ಲೆಯಲ್ಲಿ ಗುರುವಾರ ಸುರಿದ ಭಾರಿ ಮಳೆಯಿಂದಾಗಿ ಚನ್ನಗಿರಿ ತಾಲ್ಲೂಕಿನ ಹಲವು ಗ್ರಾಮಗಳಿಗೆ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚನ್ನಗಿರಿ ತಾಲ್ಲೂಕಿನ ಕತ್ತಲಗೆರೆ ಗ್ರಾಮದ ಮುಸ್ಲಿಂ ಕಾಲೋನಿಯಲ್ಲಿ ಒಂದು ಮನೆ ಸಂಪೂರ್ಣ ಹಾನಿಯಾಗಿರುವುದು ಮತ್ತು ಕೋಟೆಹಾಳ್ ಗ್ರಾಮದಲ್ಲಿನ ಮನೆಯೊಂದರಲ್ಲಿ ನೀರು ನುಗ್ಗಿರುವುದನ್ನು ಪರಿಶೀಲಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ಚನ್ನಗಿರಿ ತಹಶೀಲ್ದಾರ್ ಪುಟ್ಟರಾಜು ಗೌಡ, ರೈತ ಮುಖಂಡ ತೇಜಸ್ವಿ ಪಟೇಲ್ ಉಪಸ್ಥಿತರಿದ್ದರು.

ಕಬ್ಬಿಣ ಅದಿರು ರಫ್ತಿಗೆ ಸುಪ್ರೀಂ ಅನುಮತಿ: ಗರಿಗೆದರಿದ ಗಣಿಗಳು

0

ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿನ ಗಣಿಗಳಿಂದ ಹೊರತೆಗೆಯಲಾದ ಕಬ್ಬಿಣದ ಅದಿರಿನ ರಫ್ತಿಗೆ ಸುಪ್ರೀಂ ಕೋರ್ಟ್ ನಿನ್ನೆ ಶುಕ್ರವಾರ ಅನುಮತಿ ನೀಡಿದೆ.

ಅದಿರು ರಫ್ತಿಗೆ ಅವಕಾಶ ಕೋರಿ ಗಣಿ ಮಾಲೀಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠವು, ಅದಿರು ರಫ್ತಿಗೆ 11 ವರ್ಷಗಳ ನಂತರ ಹಸಿರು ನಿಶಾನೆ ನೀಡಿದೆ.

ಇ ಹರಾಜು ಮೂಲಕ ಅದಿರು ಖರೀದಿಸುವುದಕ್ಕೆ ಸಾಕಷ್ಟು ಸಮಸ್ಯೆಗಳು ಇರುವುದರಿಂದ ಮಾರಾಟ ಪ್ರಕ್ರಿಯೆ ನೀರಸವಾಗಿತ್ತು ಎಂದು ಹೇಳಿರುವ ಪೀಠ, ಇ ಹರಾಜಿನ ಮೂಲಕ ರಾಜ್ಯದಲ್ಲಿ ಅದಿರು ಮಾರಾಟಕ್ಕೆ ಇದ್ದ ಕೆಲವು ಕಠಿಣ ನಿಯಮಗಳನ್ನು ಸಡಿಲಗೊಳಿಸಿ ಆದೇಶವನ್ನು ನೀಡಿದೆ.

ಇದರಿಂದಾಗಿ ಉಕ್ಕು ಉತ್ಪಾದನಾ ಘಟಕಗಳು ಸ್ಥಳೀಯವಾಗಿ ಅದಿರು ಖರೀದಿಸಲು ಇದ್ದ ಕಠಿಣ ನಿಯಮಗಳಿಂದ ರಿಯಾಯಿತಿ ದೊರೆತಂತಾಗಿದೆ.

ರಾಜ್ಯದ ಗಣಿಗಳಿಂದ ಹೊರ ತೆಗೆಯಲಾದ ಕಬ್ಬಿಣದ ಅದಿರನ್ನು ರಫ್ತು ಮಾಡುವ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಕೇಂದ್ರ ಮತ್ತು ಕರ್ನಾಟಕ ಸರ್ಕಾರಗಳಿಗೆ ಸೂಚಿಸಿತ್ತು.

ಇದಕ್ಕೆ ಕಳೆದ ತಿಂಗಳು ಪ್ರತಿಕ್ರಿಯೆ ನೀಡಿದ್ದ ಕರ್ನಾಟಕ ಸರ್ಕಾರ, ಅದಿರು ರಫ್ತಿನ ವಿರುದ್ಧ ತನ್ನ ನಿಲುವು
ಸ್ಪಷ್ಟಪಡಿಸಿತ್ತು.

ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಮತ್ತು ಜಿಲ್ಲೆಗಳಲ್ಲಿನ ಗಣಿಗಳಿಂದ ಅದಿರು ರಫ್ತು ಮಾಡುವುದಕ್ಕೆ ಸುಪ್ರೀಂ ಕೋರ್ಟ್ 2011ರಿಂದ ನಿಷೇಧ ಹೇರಿತ್ತು.

ಅಕ್ರಮ ಗಣಿಗಾರಿಕೆ ತಡೆಯುವ ನಿಟ್ಟಿನಲ್ಲಿ ಅದಿರು ರಫ್ತು ನಿಷೇಧಿಸಬೇಕು. ಅದಿರು ಮಾರಾಟದ ಮೇಲೂ ಕಠಿಣ ಕ್ರಮ ಕೈಗೊಂಡು ನಿಯಮಾವಳಿ ರೂಪಿಸಬೇಕು ಎಂದು ಕೋರಿ ಧಾರವಾಡದ ಸಮಾಜ ಪರಿವರ್ತನಾ ಸಮುದಾಯ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.