Wednesday, November 18, 2026
Wednesday, November 18, 2026
Home Blog Page 1410

Lohit Kumar was Elected as Chikkadevanur Village President ಚಿಕ್ಕದೇವನೂರು ಗ್ರಾಪಂ ಅಧ್ಯಕ್ಷರಾಗಿ ಲೋಹಿತ್ ಕುಮಾರ್ ಆಯ್ಕೆ

0

Lohit Kumar was Elected as Chikkadevanur Village President ಚಿಕ್ಕಮಗಳೂರು, ತಾಲ್ಲೂಕಿನ ಚಿಕ್ಕದೇವನೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಎಂ.ಲೋಹಿತ್‌ಕುಮಾರ್ ಅವರು ಆಯ್ಕೆಯಾಗಿದ್ದಾರೆ.

ಗ್ರಾ.ಪಂ. ಕಚೇರಿಯ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷ ಎಂ.ಲೋಹಿತ್‌ಕುಮಾರ್ ಅವರನ್ನು ಚುನಾವಣಾಧಿಕಾರಿ ವಿಜಯ್‌ಕುಮಾರ್ ಅಧಿಕೃತವಾಗಿ ಘೋಷಿಸಿದರು.

ಈ ವೇಳೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಶಾಸಕ ಹೆಚ್.ಡಿ.ತಮ್ಯಯ್ಯ ಚಿಕ್ಕದೇವನೂರು ಗ್ರಾಮ ಪಂಚಾ ಯಿತಿ ಅನೇಕ ವರ್ಷಗಳಿಂದ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಅದೇ ರೀತಿಯಲ್ಲಿ ಮುಂದಿನ ಜಿ.ಪಂ., ತಾ.ಪಂ. ಹಾಗೂ ಲೋಕಸಭಾ ಚುನಾವಣೆಯಲ್ಲಿ ಗ್ರಾಮ ಸೇರಿದಂತೆ ಜಿಲ್ಲೆಯನ್ನು ಪೂರ್ಣವಾಗಿ ಕಾಂಗ್ರೆಸ್ ಭದ್ರಕೋಟೆ ಯನ್ನಾಗಿ ಮಾಡಲು ಮುಂದಾಗಬೇಕು ಎಂದರು.

ಕಳೆದ ಹಲವಾರು ವರ್ಷಗಳಿಂದ ಈ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಯಾವುದೇ ಶಾಶ್ವತ ಅಭಿವೃದ್ದಿ ಕಾಮಗಾರಿಗಳಾಗಿಲ್ಲ.

ಇದೀಗ ಕ್ಷೇತ್ರ, ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಕಾಂಗ್ರೆಸ್ ಪರ ಅಲೆ ಎದ್ದಿದೆ. ಆ ನಿಟ್ಟಿನಲ್ಲಿ ಮುಂದಿನ ತಮ್ಮ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಮಹಿಳೆಯರಿಗಾಗಿ ಫಾಕ್ಟರಿ ತೆರೆಯುವ ಮೂಲಕ ಉದ್ಯೋಗ ಕಲ್ಪಿಸಿಕೊಡುವ ಭರವಸೆ ವ್ಯಕ್ತಪಡಿಸಿದರು.

ಇದೀಗ ಕ್ಷೇತ್ರದ ಹಲವಾರು ಗ್ರಾಮಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರುಗಳಿಗೆ ಆನೆ ಬಲಬಂದಂತಾಗಿದೆ. ಮುಂದಿನ ಯಾವುದೇ ಸಮಸ್ಯೆಗಳು ಕ್ಷೇತ್ರದಲ್ಲಿ ಎದುರಾದಲ್ಲಿ ನ್ಯಾಯಸಮ್ಮತವಾಗಿ ಬಗೆಹರಿಸುವ ಮೂಲಕ ಕ್ಷೇತ್ರದ ಜನತೆ ಜೊತೆ ಉತ್ತಮ ನಂಟನ್ನು ಹೊಂದುವುದಾಗಿ ಹೇಳಿದರು.

Lohit Kumar was Elected as Chikkadevanur Village President ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಈ.ಕೆ.ವಸಂತ, ಸದಸ್ಯರುಗಳಾದ ಸಿ.ಎಸ್.ಅಶೋಕ್, ಸಿ.ಎಸ್.ಚಂದ್ರ ಶೇಖರ್, ಸುಲೋಚನಾ, ಟಿ.ಆರ್.ರಂಗಮ್ಮ, ಎಂ.ಸಿ.ಶೋಭಾ, ಕೆ.ಸಿ.ಗಂಗಾಧರ್, ಸರಸ್ವತಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಶ್ರೀಮತಿ ಬಿ.ಎಂ.ಶಾರದ ಉಪಸ್ಥಿತರಿದ್ದರು.

Admission of Scheduled Caste Students ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಪ್ರವೇಶ ಸ್ವೀಕಾರಕ್ಕೆ ಪ್ರತಿಷ್ಠಿತ ಶಾಲೆಗಳ ಮಾನ್ಯತೆಗೆ ಅರ್ಜಿ ಆಹ್ವಾನ

0

Admission of Scheduled Caste Students 2023-24ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳನ್ನು ಪ್ರತಿಷ್ಠಿತ ಶಾಲೆಗಳಿಗೆ ದಾಖಲಿಸಲು ಮೊದಲು ಪಿ.ಯು.ಸಿ ಹಂತದಿಂದಲೇ ಕೋಚಿಂಗ್ ನೀಡುತ್ತಿರುವ ಕಾಲೇಜುಗಳಿಗೆ ಹೊಸ ಪ್ರತಿಷ್ಠಿತ ಶಾಲೆಗಳನ್ನು ಗುರುತಿಸಿ ಮಾನ್ಯತೆ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ಉಪನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕರವರ ಕಚೇರಿ, ಸಮಾಜ ಕಲ್ಯಾಣಿ ಇಲಾಖೆಯಲ್ಲಿ ಜೂ.1ರ ಒಳಗಾಗಿ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Admission of Scheduled Caste Students ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ, ಶಿವಮೊಗ್ಗ ಹಾಗೂ ತಾಲ್ಲೂಕಿನ ಎಲ್ಲಾ ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಬಹುದು. ದೂ. ಸಂ. : 08182-249241.

Shivamogga District Social Welfare Department ವಾಜಪೇಯಿ ಮತ್ತು ಮೊರಾರ್ಜಿ ‌ದೇಸಾಯಿ ವಸತಿ ವಿಜ್ಞಾನ ಕಾಲೇಜಿನ ಪ್ರವೇಶಾತಿಗೆ ಕೌನ್ಸೆಲಿಂಗ್ ಪಟ್ಟಿ ಪ್ರಕಟಣೆ

0

Shivamogga District Social Welfare Department ಶಿವಮೊಗ್ಗ, ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ಅಥವಾ ಅಟಲ್ ಬಿಹಾರಿ ವಾಜಪೇಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜುಗಳಿಗೆ 2023-24ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ದಾಖಲಾತಿಗಾಗಿ ಕೌನ್ಸಿಲಿಂಗ್ ಮೂಲಕ ಕಾಲೇಜು ಆಯ್ಕೆ ಪಟ್ಟಿ ತಯಾರಿಸಿ, ಎಲ್ಲಾ ವಸತಿ ಶಾಲೆ/ ಕಾಲೇಜುಗಳಲ್ಲಿ ಪ್ರಕಟಿಸಲಾಗಿದೆ.

ಆಯ್ಕೆ ಪಟ್ಟಿಯಲ್ಲಿರುವ ವಿದ್ಯಾರ್ಥಿಗಳು ದಿ: 1/6/2023ರಂದು ಬೆಳಗ್ಗೆ 9 ಕ್ಕೆ ಅಂಬೇಡ್ಕರ್ ಭವನ, ಗಾಂಧಿ ಪಾರ್ಕ್ ಹತ್ತಿರ, ಶಿವಮೊಗ್ಗ ಇಲ್ಲಿ ನಡೆಯಲಿರುವ ಕೌನ್ಸಿಲಿಂಗ್ ಪ್ರಕ್ರಿಯೆಗೆ ಸೂಕ್ತ ದಾಖಲೆಗಳೊಂದಿಗೆ ಹಾಜರಾಗುವಂತೆ ಸೂಚಿಸಿದೆ.

ಆಯ್ಕೆ ಪಟ್ಟಿಯನ್ನು ಎಲ್ಲಾ ವಸತಿ ಶಾಲೆ/ಕಾಲೇಜುಗಳಲ್ಲಿ ಪ್ರಕಟಿಸಲಾಗಿದೆ. ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ದೂರವಾಣಿ ಮುಖಾಂತರ ತಿಳಿಸಲಾಗುತ್ತದೆ.

Shivamogga District Social Welfare Department ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು ಕಚೇರಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚನ್ನಮ್ಮ/ ಶ್ರೀ ನಾರಾಯಣ ಗುರು/ ಆಟಲ್ ವಾಜಿಪೇಯಿ / ಶ್ರೀಮತಿ ಇಂದಿರಾ ಗಾಂಧಿ/ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ/ ಕಾಲೇಜುಗಳಲ್ಲಿ ಕಚೇರಿ ವೇಳೆಯಲ್ಲಿ ಸಂಪರ್ಕಿಸುವಂತೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

NSS Camp At Kuvempu University ವ್ಯಕ್ತಿತ್ವ ವಿಕಸನಕ್ಕೆ ಎನ್ಎಸ್ಎಸ್ ಶಿಬಿರ ಸಹಕಾರಿ-ಪ್ರೊ.ವೈ.ಎಲ್.ರಾಮಚಂದ್ರ

NSS Camp At Kuvempu University 2023ನೇ ಸಾಲಿನ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಅ೦ತರ್ ಕಾಲೇಜು ಎನ್.ಎಸ್.ಎಸ್. ಶಿಬಿರವನ್ನು ವಿಶ್ವವಿದ್ಯಾಲಯ ಆವರಣ, ಜ್ಞಾನ ಸಹ್ಯಾದ್ರಿ, ಶ೦ಕರಘಟ್ಟ ಇಲ್ಲಿ ದಿನಾ೦ಕ: 25-05-2823 ರಿ೦ದ 31-05-2023 ರವರೆಗೆ ಹಮ್ಮಿಕೊಳ್ಳಲಾಗಿದೆ. ಶಿಬಿರವನ್ನು ಉದ್ಘಾಟಿಸಿದ ಪ್ರೊ. ವೈ. ಎಲ್ ರಾಮಚ೦ದ್ರ, ಹಣಕಾಸು ಅಧಿಕಾರಿಗಳು, ಕುವೆ೦ಪು ವಿಶ್ವವಿದ್ಯಾಲಯ, ಇವರು ಮಾತನಾಡುತ್ತಾ ತಾವೂ ವಿದ್ಯಾರ್ಥಿಯಾಗಿದ್ದಾಗ ಎನ್.ಎಸ್.ಎಸ್. ಸ್ವಯ೦ಸೇವಕನಾಗಿದ್ದೆ. ನಾವು ಎನ್.ಎಸ್.ಎಸ್. ಕಾರ್ಯಕ್ರಮಗಳಲ್ಲಿ ಶಿಬಿರಗಳಲ್ಲಿ ಭಾಗವಹಿಸುವಾಗ ಯಾವುದೇ ಜ್ಯಾತಿ ಧರ್ಮ, ಮತ, ಬಡವ ಶ್ರೀಮಂತ, ಬೇಧ ಭಾವಗಳು ನನ್ನನ್ನು ಭಾಧಿಸಲಿಲ್ಲ ಎಂದರು.

ಈ ಶಿಬಿರದಲ್ಲಿ ಭಾಗವಹಿಸುವುದರ ಮೂಲಕ ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣ, ಸಹಬಾಳ್ವೆ, ತಾಳ್ಮೆ ಮು೦ತಾದ ಸದ್ಗುಣಗಳನ್ನು ಬೆಳೆಸಿಕೊಳ್ಳಿ ಎಂದು ಹೇಳಿದರು.

ಶಿಬಿರದ ಪ್ರಸ್ತಾವನೆ ಮಾತನ್ನಾಡಿದ ಡಾ. ನಾಗರಾಜ ಪರಿಸರ, ಕಾರ್ಯಕ್ರಮ ಸ೦ಯೋಜನಾಧಿಕಾರಿ, ಎನ್.ಎಸ್.ಎಸ್. ಮಾತನಾಡಿ ಎನ್.ಎಸ್.ಎಸ್. ಶಿಬಿರಗಳ ಮೂಲಕ ವಿದ್ಯಾರ್ಥಿಗಳು ಸೇವಾ ಮನೋಭಾವ, ಸ್ವಚ್ಛತೆ ಬಗ್ಗೆ ಅರಿವು, ಪರಿಸರ ಜಾಗೃತಿ ಮೈಗೂಡಿಸಿಕೊಳ್ಳಲು ಸಹಾಯವಾಗುತ್ತದೆ ಎಂದರು.

ಸ್ವಯಂ ಸೇವಕರು ತಾವು ಜಾಗೃತರಾಗುವುದರ ಜೊತೆಗೆ ತಮ್ಮ ಅಕ್ಕಪಕ್ಕದ ಸಮುದಾಯದ ಜನರಲ್ಲಿಯೂ ಸಾಮಾಜಿಕ ಜಾಗೃತಿ ಮೂಡಿಸುತ್ತಾರೆ. ಗಿಡ ನೆಡುವುದು, ರಕ್ತದಾನ ಮು೦ತಾದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಸ್.ಎಂ.ಆರ್. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಧರ್ಮೇಗೌಡ ಇವರು ಮಾತನಾಡಿ, ಎನ್.ಎಸ್.ಎಸ್. ಶಿಬಿರಗಲ ಮೂಲಕ ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿಯನ್ನು ಅರಿಯುತ್ತಾರೆ ಮತ್ತು ಸಾಮಾಜಿಕ ಪಿಡುಗಗಳನ್ನು ತೊಡೆದುಹಾಕಲು ಶ್ರಮಿಸುತ್ತಾರೆ ಎಂದರು.

NSS Camp At Kuvempu University ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಅಧಿಕಾರಿಗಳಾದ ಶ್ರೀ ಶರತ್, ಶ್ರೀ ಲಕ್ಷ್ಮಣ್ ಉಪಸ್ಥಿತರಿದ್ದರು.

ಶಿಬಿರದ ಅಂಗವಾಗಿ ವ್ಯಕ್ತಿತ್ವ ವಿಕಸನ, ರಕ್ತದಾನದ ಮಹತ್ವ, ಆರೋಗ್ಯ ಮತ್ತು ಆನ೦ದ, ಪರಿಸರದ ಸ೦ರಕ್ಷಣೆಯ ಮಹತ್ವ ಮುಂತಾದ ವಿಷಯಗಳ ಕುರಿತು ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಶಿಬಿರದಲ್ಲಿ ಪ್ರತಿದಿನ ಶ್ರಮದಾನದ ಅಂಗವಾಗಿ, ವಿಶ್ವವಿದ್ಯಾಲಯ ಆವರಣ, ಶ೦ಕರಘಟ್ಟ ಗ್ರಾಮದ ಮುಖ್ಯ ಬೀದಿಗಳು ಮತು ಭದ್ರಾ ಜಲಾಶಯದ ಕೆಳಭಾಗದಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಗಿದ್ದು, ಪ್ಲಾಸ್ಟಿಕ್ ಆಯುವ ಮೂಲಕ ಅಂದಾಜು 60 ಬ್ಯಾಗುಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ಗ್ರಾಮ ಪ೦ಚಾಯತಿಗೆ ನೀಡಲಾಯಿತು.

Congress Karnataka ಸಾಗರದಲ್ಲಿ ಅಕ್ರಮ ಚಟುವಟಿಕೆ ನಿರ್ಮೂಲನೆಗೆ ಸೂಚನೆ-ಬೇಳೂರು ಗೋಪಾಲಕೃಷ್ಣ

0

Congress Karnataka ಸಾಗರದಲ್ಲಿ ಅಕ್ರಮ ಚಟುವಟಿಕೆಗಳ ನಿರ್ಮೂಲನೆಗೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ್ದೇನೆ ಎಂದು ಶಾಸಕ ಗೋಪಾಲಕೃಷ್ಣಬೇಳೂರು ಹೇಳಿದರು.

ಅವರು ಸಾಗರ ತಾಲ್ಲೂಕು ಪತ್ರಕರ್ತರ ಸಂಘ ಮತ್ತು ಪ್ರೆಸ್ ಟ್ರಸ್ಟ್ ಆಫ್ ಸಾಗರ್ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ನೂತನ ಶಾಸಕರಿಗೆ ಅಭಿನಂದನೆ ಸ್ವೀಕರಿಸಿ ಮಾತನಾಡಿ ಓಸಿ ಮಟ್ಕ , ದಂಧೆ ಸೇರಿದಂತೆ ರೌಡಿ ಚಟುವಟಿಕೆಗಳ ನಿವಾರಣೆಯಾಗಬೇಕು ಎಂದು ರಕ್ಷಣಾ ಇಲಾಖೆಗೆ ತಿಳಿಸಿದ್ದೇನೆ ಎಂದರು.

ಮಾಧ್ಯಮಗಳು ಮುಕ್ತವಾಗಿ ಕಾರ್ಯನಿರ್ವಹಿಸುವ ಮೂಲಕ ನೈಜ್ಯ ವರದಿಗಳಿಗೆ ಸಹಕರಿಸುವ ಜೊತೆಗೆ ನಿಜವಾದ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲು ಯಾವುದೇ ಅಡಚಣೆಯಾಗದಂತೆ ಶಾಸಕನಾಗಿ ಸಂಪೂರ್ಣ ಪ್ರೋತ್ಸಾಹ ನೀಡುತ್ತೇನೆ ಎಂದರು.

ನಮ್ಮದೆ ಪಕ್ಷದ ಮುಖಂಡರು,ಸದಸ್ಯರುಗಳು ಪತ್ರಕರ್ತರುಗಳಿಗೆ ಯಾವುದೇ ಅಡಚಣೆ ಮಾಡುವುದಿಲ್ಲ.ನಮ್ಮ ವಿರುದ್ಧ ಬರುವ ವರದಿಗಳನ್ನು ಕ್ರೀಡಾಮನೋಭಾವನೆಯಿಂದ ಸ್ವೀಕರಿಸಿ ನಮ್ಮ ತಪ್ಪುಗಳಿದ್ದರೇ ತಿದ್ದಿಕೊಂಡು ನಡೆಯುವ ಮೂಲಕ ಉತ್ತಮ ಆಡಳಿತ ನೀಡಲು ಪ್ರಯತ್ನಿಸುತ್ತೇನೆ ಎಂದರು.

Congress Karnataka ಸಾಗರ ನಗರದ ಮೂಲಭೂತ ಸೌಕರ್ಯಗಳ ಕಲ್ಪಿಸುವಲ್ಲಿ ಮೊದಲ ಆದ್ಯತೆ ನೀಡುತ್ತೇನೆ,ರಸ್ತೆ,ಚರಂಡಿ ,ಕುಡಿಯುವ ನೀರು ,ವಿದ್ಯುತ್ ಹಾಗೂ ನೈರ್ಮಲ್ಯಗಳ ಕಡೆಗೆ ಹೆಚ್ಚು ಗಮನಹರಿಸುವ ಮೂಲಕ ಮಾದರಿ ಸಾಗರವನ್ನಾಗಿ ನಿರ್ಮಿಸಲು ಸಾರ್ವಜನಿಕರ ಹಾಗೂ ಪತ್ರಕರ್ತರುಗಳ ಸಲಹೆ ಸಹಕಾರ ಬೇಕು ಎಂದರು.
ಈ ಸಂದರ್ಭದಲ್ಲಿ ಪ್ರೆಸ್ ಟ್ರಸ್ಟ್ ಆಫ್ ಸಾಗರ್ ಅಧ್ಯಕ್ಷ ಹೆಚ್.ವಿ.ರಾಮಚಂದ್ರರಾವ್ ಅಧ್ಯಕ್ಷತೆ ವಹಿಸಿದ್ದರು.

ಸಾಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಎಸ್.ವಿ.ಹಿತಕರ ಜೈನ್,ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಾಜೇಶ್ ಭಡ್ತಿ,ತಾಲ್ಲೂಕು ಸಂಘದ ಪ್ರಧಾನಕಾರ್ಯದರ್ಶಿ ಗಣಪತಿಶಿರಳಗಿ,ಖಜಾಂಚಿ ರಮೇಶ್ ಎನ್,ಹಿರಿಯ ಪತ್ರಕರ್ತ ಎ.ಡಿ.ಸುಬ್ರಹ್ಮಣ್ಯಭಟ್,ಪತ್ರಕರ್ತ ಕೆ.ಎನ್.ವೆಂಕಟಗಿರಿ ಮೊದಲಾದವರು ಉಪಸ್ಥಿತರಿದ್ದರು.

District Health and Family Welfare Department ಸ್ಕಿಜೋಫ್ರೇನಿಯ ಕಾಯಿಲೆಗೆ ದೂರವಾಣಿ ಮೂಲಕ ಸಲಹೆ ಪಡೆಯಬಹುದು

0

District Health and Family Welfare Department ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಹಾಗೂ ಸಹ್ಯಾದ್ರಿ ಕಲಾ ಕಾಲೇಜು ಶಿವಮೊಗ್ಗ ಇವರ ಸಹಯೋಗದೊಂದಿಗೆ ತೀರ್ಥಹಳ್ಳಿ ತಾಲ್ಲೂಕಿನ ಹೆಗಲತ್ತಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆ ಘಟಕ-1, ಘಟಕ-2 ರ ವಿಶೇಷ ವಾರ್ಷಿಕ ಶಿಬಿರದಲ್ಲಿ ಮೇ 26 ರಂದು ವಿಶ್ವ ಸ್ಕಿಜೋಪ್ರೇನಿಯಾ ದಿನಾಚರಣೆಯನ್ನು ಆಚರಿಸಲಾಯಿತು.

ಘೋಷವಾಕ್ಯ “ಸಮಾಜದ ದಯಾಳುತನದ ಶಕ್ತಿಯ ಆಚರಣೆ”(ಸೆಲಿಬ್ರೇಟಿಂಗ್ ದಿ ಪವರ್ ಆಫ್ ಕಮ್ಯುನಿಟಿ ಕೈಂಡ್‍ನೆಸ್) ಎಂಬ ಘೋಷವಾಕ್ಯದಡಿ ಈ ವರ್ಷ ವಿಶ್ವ ಸ್ಕಿಜೋಫ್ರೇನಿಯಾ ದಿನಾಚರಣೆ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಶಮಾ, ಮನೋವೈಧ್ಯರು ಡಾ. ಸಂತೋಷ್ ಎಂ.ಎನ್, ಸಹ್ಯಾದ್ರಿ ಕಾಲೇಜಿನ ಬಿಎಸ್‍ಡಬ್ಲ್ಯೂ ಪ್ರಾಧ್ಯಾಪಕರಾದ ರವಿ.ಎಂ.ಡಿ, ಸಹ್ಯಾದ್ರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ.ಪ್ರಕಾಶ್ ಮರಗನಹಳ್ಳಿ, ಮನೋಸಾಮಾಜಿಕ ಕಾರ್ಯಕರ್ತ ಶ್ರೀಧರ್.ಎನ್, ಸಹ್ಯಾದ್ರಿ ಕಾಲೇಜಿನ ಸಹಪ್ರಾಧ್ಯಾಪಕರಾದ ಲವ.ಜಿ.ಆರ್ ಮತ್ತಿತರರು ಉಪಸ್ಥಿತರಿದ್ದರು.

District Health and Family Welfare Department ಸ್ಕಿಜೋಫ್ರೇನಿಯಾ ರೋಗ ಲಕ್ಷಣ ಮತ್ತು ಚಿಕಿತ್ಸಾ ವಿಧಾನ:
ಸ್ಕಿಜೋಫ್ರೇನಿಯಾ ರೋಗಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅಪಾಯ, ಅಸಾಧ್ಯ ಎಂದು ಎಲ್ಲರೂ ಹೇಳುವ ಕಾಲವಿತ್ತು. ಅಂತಹ ರೋಗಿಗಳನ್ನು ಮಾನಸಿಕ ಅಸ್ಪತ್ರೆಗೆ ಸೇರಿಸಿ ಆತನನ್ನು ಜೀವನಪಯರ್ಂತ ಅಲ್ಲೇ ಇಡಬೇಕು ಎನ್ನುತ್ತಿದ್ದರು. ಈ ಕಾಯಿಲೆ ವ್ಯಕ್ತಿಯನ್ನು ಸಾಯುವವರೆಗೆ ಕಾಡುತ್ತದೆ ಎಂದೂ ನಂಬಲಾಗುತ್ತಿತ್ತು. ಆದರೆ ಕಳೆದ ಮೂವತ್ತು ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ.

ಪರಿಣಾಮಕಾರಿ ಹಾಗೂ ಸರಳ ಔಷಧಿಗಳ ಆವಿಷ್ಕಾರದಿಂದ ರೋಗಿಗಳನ್ನು ಆಸ್ಪತ್ರೆಗೆ ಸೇರಿಸದೆ, ಅವರನ್ನು ಮನೆಯಲ್ಲೇ ಇಟ್ಟು, ಮನೆಯವರ ನೆರವಿನಿಂದ ಚಿಕಿತ್ಸೆ ಪಡೆದರೆ ಫಲ ಅದ್ಭುತ. ಕಾಯಿಲೆ ಬೇಗ ವಾಸಿಯಾಗುವುದಲ್ಲದೆ ಮತ್ತೆ ಬರುವ ಸಂಭವ ಕಡಿಮೆಯಾಗುತ್ತದೆ. ರೋಗಿ ಪರಾವಲಂಬಿಯಾಗದೆ, ಉದ್ಯೋಗಸ್ತನಾಗಿ, ಉಪಯುಕ್ತ ಪ್ರಜೆಯಾಗಿ ಬಾಳಲು ಒತ್ತಾಸೆ ನೀಡುತ್ತದೆ ಎಂದು ಅಧ್ಯಯನಗಳಿಂದ ಸ್ಪಷ್ಟವಾಗಿದೆ. ಆದ್ದರಿಂದ ಸ್ಕಿಜೋಫ್ರೇನಿಯಾ ರೋಗಿಗಳಿಗೆ ಹೊರರೋಗಿ ವಿಭಾಗದಲ್ಲೇ ಚಿಕಿತ್ಸೆ ನಡೆಸುವುದು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹಾಗೂ ಖಾಸಗಿ ಚಿಕಿತ್ಸಾಲಯಗಳ ಸಾಧಾರಣ ವೈದ್ಯರ ನೆರವಿನಿಂದಲೇ ಚಿಕಿತ್ಸೆ ಮುಂದುವರೆಸುವುದು ಈಗ ಜನಪ್ರಿಯವಾಗುತ್ತಿದೆ.
ಸ್ಕಿಜೋದ್ರೇನಿಯಾ ಖಾಯಿಲೆಯ ಅಂಕಿ ಅಂಶಗಳು:

  • ಭಾರತದಲ್ಲಿ ಸುಮಾರು 20 ಮಿಲಿಯನ್ ಜನರು ಸ್ಕಿಜೋಫ್ರೇನಿಯಾ ಖಾಯಿಲೆಗೆ ಒಳಗಾಗಿರುತ್ತಾರೆ.
  • ಬೆಂಗಳೂರು – ಸುಮಾರು 10 ಸಾವಿರ ಜನರು ಸ್ಕಿಜೋಫ್ರೇನಿಯಾ ಖಾಯಿಲೆಗೆ ಒಳಗಾಗಿರುತ್ತಾರೆ.
  • ಶಿವಮೊಗ್ಗ – ಸುಮಾರು 600 ಜನರು ಸ್ಕಿಜೋಫ್ರೇನಿಯಾ ಖಾಯಿಲೆಗೆ ಒಳಗಾಗಿದ್ದು, ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
    ಸ್ಕಿಜೋಫ್ರೇನಿಯಾ ಕಾಯಿಲೆಯಲ್ಲಿ ಮನಸ್ಸಿನ ಕ್ರಿಯೆಗಳಲ್ಲಿ ಮುಖ್ಯವಾಗಿ ಆಲೋಚನೆ, ಭಾವನೆಗಳು ಮತ್ತು ಪಂಚೇಂದ್ರಿಯಗಳ ಮೂಲಕ ಪರಿಸರವನ್ನು ಅರ್ಥ ಮಾಡಿಕೊಳ್ಳುವ ಸಂವೇದನಾ ಕ್ರಿಯೆ ಏರುಪೇರಾಗುತ್ತದೆ.
    ಅಸ್ತವ್ಯಸ್ತ ಆಲೋಚನೆ : ಅಂದರೆ ಸ್ಕಿಜೋಫ್ರೇನಿಯಾ ರೋಗಿಯ ಆಲೋಚನೆ ಸ್ಪಷ್ಟವಾಗಿರುವುದಿಲ್ಲ. ತರ್ಕಬದ್ದವಾಗಿರುವುದಿಲ್ಲ. ಅಸಂಬದ್ಧವಾಗಿರುತ್ತದೆ. ಅರ್ಥಹೀನವಾಗಿರುತ್ತದೆ. ವಿಚಿತ್ರವಾಗಿರುತ್ತದೆ. ಆತ ವ್ಯಕ್ತಪಡಿಸುವ ನಂಬಿಕೆಗಳಿಗೆ ಯಾವುದೇ ಆಧಾರವಿರುವುದಿಲ್ಲ. ವಿನಾಕಾರಣ ಆತ ಸಂಶಯ ಪೀಡಿತನಾಗಬಹುದು.
    ಭಾವನೆಗಳ ಏರುಪೇರು : ಸ್ಕಿಜೋಫ್ರೇನಿಯಾ ಕಾಯಿಲೆಯಿಂದ ನರಳುತ್ತಿರುವ ವ್ಯಕ್ತಿಗೆ ವಿಪರೀತ ಕೋಪ, ದುಃಖ, ಸಂತೋಷ ಪ್ರಕಟಿಸಬಹುದು. ವಿನಾಕಾರಣ ನಗುವುದು, ಅಳುವುದು ಅಥವಾ ಯಾವುದೇ ಭಾವನೆ ತೋರಿಸದೆ ನಿರ್ಲಿಪ್ತನಂತಿರಬಹುದು.
    ಅಸಹಜ ಹಾಗೂ ವಿಚಿತ್ರ ಅನುಭವಗಳು : ಸ್ಕಿಜೋಫ್ರೇನಿಯಾ ರೋಗಿಯು ಭ್ರಮಾಧೀನನಾಗಿರುತ್ತಾನೆ. ಕಣ್ಣು ನೋಡುವುದೊಂದಾದರೆ ಆತ ಅರ್ಥಮಾಡಿಕೊಳ್ಳುವುದು ಇನ್ನೊಂದಾಗುತ್ತದೆ. ಆತನ ಪ್ರಜ್ಞಾಸ್ಥಿತಿ ನೂರಕ್ಕೆ ನೂರು ಸರಿ ಇದ್ದರೂ ಹಗಲಿನಲ್ಲೂ ಹಗ್ಗವನ್ನು ಕಂಡು ಹಾವೆಂದು ಭೀತನಾಗಬಹುದು. ನೆರಳನ್ನು ಕಂಡು ಭೂತ/ಕಳ್ಳ ಎಂದು ಹೇಳಬಹುದು. ಹಾಗೆಯೇ ಕೇಳಿದ ಧ್ವನಿಗಳು, ಗ್ರಹಿಸಿದ ವಾಸನೆಯನ್ನು, ಸ್ಪರ್ಶವನ್ನು ತಪ್ಪು ತಪ್ಪಾಗಿ ವಿಶ್ಲೇಷಿಸುತ್ತಾನೆ.
    ದೈಹಿಕ ಕ್ರಿಯೆಗಳ ಏರುಪೇರು : ರೋಗಿಯ ಹಸಿವು ಮತ್ತು ಆಹಾರ ಸೇವನೆ ಅಸ್ತವ್ಯಸ್ತವಾಗುತ್ತದೆ. ಮನಸ್ಸಿಗೆ ಬಂದರೆ ತಿನ್ನುವುದು, ಇಲ್ಲದಿದ್ದರೆ ದಿನಗಟ್ಟಲೆ ಉಪವಾಸವಿರಬಹುದು. ಯಾವ ವಸ್ತುವನ್ನು ತಿನ್ನಬೇಕು, ಯಾವುದನ್ನು ತಿನ್ನಬಾರದೆಂದು ಆತನಿಗೆ ಗೊತ್ತಾಗುವುದಿಲ್ಲ. ಈ ಎಲ್ಲಾ ರೋಗ ಚಿಹ್ನೆಗಳು ಪ್ರತಿಯೊಬ್ಬ ರೋಗಿಯಲ್ಲೂ ಇರದೆ ಇರಬಹುದು. ಸಾಮಾನ್ಯವಾಗಿ ಮಂಕುತನ ಜಡತ್ವ, ಗಲಾಟೆ ಹಾಗೂ ಉದ್ರೇಕಾವಸ್ಥೆ ಅಥವಾ ಅತಿ ಸಂಶಯ/ಅನುಮಾನ ಪ್ರವೃತ್ತಿ ಸ್ಥಿತಿ ಕಾಣುತ್ತದೆ.

ಸ್ಕಿಜೋಪ್ರೇನಿಯಾ ಯಾರಿಗೆ ಜಾಸ್ತಿ ಬರುವ ಸಂಭವ ?

  • ಇದು ಸಾಮಾನ್ಯವಾಗಿ 15 ರಿಂದ 25 ವರ್ಷ ವಯಸ್ಸಿನ ಅವಧಿಯಲ್ಲಿ ಕಾಣಿಸಿಕೊಳ್ಳುತ್ತದೆ.
  • ಪದೇ ಪದೇ ಬರುವ ತೀವ್ರತರವಾದ ಸಂಕಷ್ಟಗಳಿಗೆ ವ್ಯಕ್ತಿ ಸಿಲುಕಿದಾಗ ಕಾಯಿಲೆ ಬರಬಹುದು.
  • ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳ ಜನ, ಶ್ರೀಮಂತರು ಹಾಗೂ ಬಡವರು ಎಲ್ಲಾ ಬುಡಕಟ್ಟಿಗೆ ಸೇರಿದವರು ಸಮಾನವಾಗಿ ಈ ರೋಗಕ್ಕೆ ತುತ್ತಾಗುತ್ತಾರೆ.

ಸ್ಕಿಜೋಪ್ರೇನಿಯಾ ಕಾಯಿಲೆಗೆ ಸದ್ಯಕ್ಕೆ ಲಭ್ಯವಿರುವ ಚಿಕಿತ್ಸಾ ಕ್ರಮಗಳು:

ಔಷಧಗಳು : ಈ ಕಾಯಿಲೆಗೆ ಔಷಧ ಕೊಡಲೇಬೇಕು. ಮಾತ್ರೆ ಅಥವಾ ಸೂಜಿಮದ್ದಿನ ರೂಪದಲ್ಲಿ ಅನೇಕ ಬಗೆಯ ಶಮನಕಾರಿ ಚುಚ್ಚುಮದ್ದುಗಳಿವೆ.
1.ಕ್ಲೋರ್ ಪೆÇ್ರಮಜಿನ್, 2.ಹಾಲೋಪೆರಿಡಾಲ್, 3.ರೆಸ್ಬಿರಿಡಾನ್, 4.ಜಿಪ್ರಾಸಿಡಾನ್, 5.ಒಲಾಂಜಿಪಿನ್ ಇತ್ಯಾದಿ
ಪ್ರತಿರೋಗಿಗೆ ಎಷ್ಟು ಪ್ರಮಾಣದ ಔಷಧಿಯ ಅಗತ್ಯವಿದೆಯೆಂದು ಆತನನ್ನು ಪರೀಕ್ಷಿಸುವ ವೈದ್ಯರು ನಿರ್ಧರಿಸುತ್ತಾರೆ.

ಕಾಯಿಲೆ ಕಾಣಿಸಿಕೊಂಡ ಕೆಲವೇ ವಾರಗಳೊಳಗೆ ಔಷಧೋಪಚಾರವನ್ನು ಪ್ರಾರಂಭಿಸಿದರೆ ಕಾಯಿಲೆ ಬೇಗ ಹಾಗೂ ಪೂರ್ತಿ ಹತೋಟಿಗೆ ಬರುತ್ತದೆ. ವೈದ್ಯರನ್ನು ಆಗ್ಗಿಂದಾಗ್ಗೆ ಕಂಡು ಸಲಹೆ ಮಾರ್ಗದರ್ಶನ ಪಡೆಯಬೇಕು. ಮನೆಯವರಿಂದ ಸರಿ ಪ್ರಮಾಣದ ಪ್ರೀತಿ, ವಿಶ್ವಾಸ, ಆಸರೆ ದೊರಕಬೇಕು.

ರೋಗಿ ವಾಸಿಸುವ ಕುಟುಂಬದ, ಕೆಲಸ ಮಾಡುವ ಪರಿಸರ ಚೆನ್ನಾಗಿಲ್ಲದಿದ್ದರೆ(ಅಥವಾ) ಆತನಿಂದ ವಿಪರೀತ ನಿರೀಕ್ಷೆ ಮಾಡುತ್ತಿದ್ದರೆ, ಯಾವುದೇ ಅಹಿತಕರ ವಾತಾವರಣವಿದ್ದರೆ ಕಾಯಿಲೆ ವಾಸಿಯಾಗದು ಹಾಗೂ ಮರುಕಳಿಸಬಹುದು.
ಕೆಲಸ-ಮನೋರಂಜನೆ-ರೋಗಿಯ ಸಾಮಥ್ರ್ಯಕ್ಕೆ ಅನುಗುಣವಾಗಿ ಆತನ ಆತ್ಮವಿಶ್ವಾಸ, ಸ್ವಾವಲಂಬನೆ ಪ್ರೋತ್ಸಾಹಿಸತಕ್ಕಂತಹ ಕೆಲಸ ಸಿಗಬೇಕು. ಮದ್ಯ, ಮಾದಕ ವಸ್ತು, ವಜ್ರ್ಯ – ರೋಗಿ ಯಾವುದೇ ಕಾರಣಕ್ಕಾಗಿ ಮದ್ಯಪಾನ ಮಾಡುವುದು ಗಾಂಜಾ, ಅಫೀಮು ಇತ್ಯಾದಿ ಮಾದಕ ವಸ್ತುಗಳನ್ನು ಸೇವಿಸುವುದರಿಂದ ಕಾಯಿಲೆ ವಾಸಿಯಾಗದೆ ಜಾಸ್ತಿಯಾಗಬಹುದು. ಸ್ಕಿಜೋಪ್ರೇನಿಯಾ ರೋಗಿ ಯಾವುದೇ ರೀತಿ ಆಹಾರ ಪಥ್ಯ ಮಾಡಬೇಕಿಲ್ಲ. ಕ್ರಮವಾದ ಆಹಾರ ಮತ್ತು ಉತ್ತಮ ನಿದ್ರೆ ಮಾಡಬೇಕು.

ಸ್ಕಿಜೋಪ್ರೇನಿಯಾ ಕಾಯಿಲೆಗೆ ತುತ್ತಾದವರಿಗೆ ಔಷಧೋಪಚಾರದ ಅವಶ್ಯಕತೆ ಎಷ್ಟು ಇದೆಯೋ ಅμÉ್ಟೀ ಮುಖ್ಯವಾಗಿ ಕೌಟುಂಬಿಕ ಬೆಂಬಲ ಹಾಗೂ ಪ್ರೀತಿ ಕಾಳಜಿಯ ಅವಶ್ಯಕತೆ ಇದ್ದು, ಈ ಅಂಶಗಳು ದೊರೆತರೆ ವ್ಯಕ್ತಿಯು ಸ್ಕಿಜೋಫ್ರೇನಿಯಾದಂತಹ ತೀವ್ರ ಮಟ್ಟದ ಮಾನಸಿಕ ಖಾಯಿಲೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದರೊಂದಿಗೆ ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲರೊಂದಿಗೆ ಸಾಮರಸ್ಯದ ಜೀವನ ನಡೆಸಬಹುದಾಗಿದೆ.

ಮನೋಚೈತನ್ಯ, ಕಾರ್ಯಕ್ರಮ :
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಕಾರ್ಯಕ್ರಮದಿಂದ ಜಿಲ್ಲೆಯ ಎಲ್ಲಾ ತಾಲೂಕು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆಯ್ದ ದಿನಗಳಂದು ಮಾನಸಿಕ ಸಮಸ್ಯೆಗಳಿಗೆ ಉಚಿತ ಚಿಕಿತ್ಸೆ, ಔಷಧೋಪಚಾರ ಹಾಗೂ ಆಪ್ತ ಸಮಾಲೋಚನೆ ಸೌಲಭ್ಯಗಳನ್ನು ಮನೋಚೈತನ್ಯ ಕಾರ್ಯಕ್ರಮದಡಿ ನೀಡಲಾಗುತ್ತಿದೆ.

ರಾಷ್ಟ್ರೀಯ ಟೆಲಿ -ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ

  • ವ್ಯಥೆಗೆ ಒಳಪಟ್ಟವರು
  • ಪರೀಕ್ಷಾ ಒತ್ತಡಕ್ಕೊಳಗಾದವರು
  • ಕೌಟುಂಬಿಕ ಸಮಸ್ಯೆಗೊಳಗಾದವರು
  • ಆತ್ಮಹತ್ಯೆ ಆಲೋಚನೆಗಳು
  • ಮಾದಕ ವಸ್ತು ವ್ಯಸನದ ಸಮಸ್ಯೆಯಲ್ಲಿರುವವರು
  • ಸಂಬಂಧಗಳ ಸಮಸ್ಯೆಯಲ್ಲಿ ಸಿಲುಕಿರುವವರು
  • ಜ್ಞಾಪಕ ಶಕ್ತಿ ತೊಂದರೆಯುಳ್ಳವರು
  • ಆರ್ಥಿಕ ಒತ್ತಡದಲ್ಲಿರುವವರು
  • ಇತರೆ ಯಾವುದೇ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು.
    ಶುಲ್ಕ ರಹಿತ ದೂರವಾಣಿ ಸಂಖ್ಯೆ: 14416 ಕರೆ ಮಾಡಿ ಸಲಹೆ ಪಡೆಯಬಹುದು.

Power Outage In Shivamogga ಮೇ31 ರಂದು ಶಿವಮೊಗ್ಗ ಬಸವೇಶ್ವರ ನಗರ ಸುತ್ತಮುತ್ತ ವಿದ್ಯುತ್ ವ್ಯತ್ಯಯ

0

Power Outage In Shivamogga ಶಿವಮೊಗ್ಗ ನಗರ ಉಪವಿಭಾಗ-1ರ 11 ಕೆವಿ ಮಾರ್ಗದ ಯು.ಜಿ.ಕೇಬಲ್ ಅಳವಡಿಕೆ ಕೆಲಸ ಹಮ್ಮಿಕೊಂಡಿರುವ ಕಾರಣ ಸವಳಂಗ ರಸ್ತೆ, ಬಸವೇಶ್ವರ ನಗರ 01ರಿಂದ 04ನೇ ಕ್ರಾಸ್, ಬಸವೇಶ್ವರ ನಗರ ಶಿವಾಲಯದ ಹತ್ತಿರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲ್ಲಿ ಮೇ 31 ರ ಬೆಳಿಗ್ಗೆ 10:00 ರಿಂದ ಸಂಜೆ 06:00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಮೆಸ್ಕಾಂನೊಂದಿಗೆ ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

Job Fair In Shivamogga ಮೇ31 ರಂದು ಶಿವಮೊಗ್ಗದಲ್ಲಿ ಉದ್ಯೋಗ ಮೇಳ

0

Job Fair In Shivamogga ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಮೇ-31ರ ಬೆಳಗ್ಗೆ 10 ಗಂಟೆಗೆ ಉದ್ಯೋಗ ಮೇಳವನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ.

ಈ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.

Job Fair In Shivamogga ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮೋ ಮತ್ತು ಇತರೆ ಡಿಗ್ರಿ ತೇರ್ಗಡೆ ಹೊಂದಿದ 10 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಬಯೋಡೆಟಾ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದು. ಉಚಿತ ಪ್ರವೇಶ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಶಿವಮೊಗ್ಗ ಇವರನ್ನು ಖುದ್ದಾಗಿ ಅಥವಾ ದೂರವಾಣ ಸಂಖ್ಯೆ : 08182-255263, 9380663606, 9380693606 ಮತ್ತು ೯೪೮೨೦೨೩೪೧೨, 9535312531 ಮೂಲಕ ಸಂಪರ್ಕಿಸಬಹುದೆಂದು ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.

Kuvempu University Convocation ಜೂನ್ ತಿಂಗಳಿನಲ್ಲಿ ಕುವೆಂಪು ವಿವಿ 33 ನೇ ಘಟಿಕೋತ್ಸವ

0

Kuvempu university Convocation ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯದ 33ನೇ ವಾರ್ಷಿಕ ಘಟಿಕೋತ್ಸವ ಜೂನ್-2023 ಮಾಹೆಯಲ್ಲಿ ಜರುಗಲಿದೆ. ಸೆಪ್ಟೆಂಬರ್/ಅಕ್ಟೋಬರ್-2022 ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ವಿವಿಧ ರೆಗ್ಯೂಲರ್‌ನ ಸ್ನಾತಕ/ಸ್ನಾತಕೋತ್ತರ ಪದವಿ ಡಿಪ್ಲೋಮೊ ಮತ್ತು ಅಕ್ಟೋಬರ್-2022/ಮಾರ್ಚ್-2023 ರ ಬಿ.ಇಡಿ ಪದವಿ/ ಏಪ್ರಿಲ್-2022 ರ ರಿಪಿಟರ್ಸ್ ಪದವಿಧರರು ಹಾಗೂ ದೂರಶಿಕ್ಷಣದ ಮೂಲಕ ನವೆಂಬರ್-2022ರಲ್ಲಿ ನಡೆದ ಅಂತಿಮ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ಹಾಗೂ ಪಿಹೆಚ್.ಡಿ ಪದವಿ ಪಡೆದ ಅರ್ಹ ಅಭ್ಯರ್ಥಿಗಳಿಗೆ ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಪತ್ರ ಪ್ರಧಾನ ಮಾಡಲಾಗುವುದು.

Kuvempu university Convocation ಅರ್ಜಿಯನ್ನು ನೇರವಾಗಿ ವಿಶ್ವವಿದ್ಯಾಲಯದ ವೆಬ್‌ಸೈಟ್ ಮೂಲಕ ಸಲ್ಲಿಸಬಹುದಾಗಿದೆ.
ವಿದ್ಯಾರ್ಥಿಗಳು ನಿಗದಿತ ಅರ್ಜಿ ಶುಲ್ಕ ಮತ್ತು ಇತರೆ ಮಾಹಿತಿಗಳನ್ನು ವಿಶ್ವವಿದ್ಯಾಲಯದ ವೆಬ್‌ಸೈಟ್ ನಲ್ಲಿ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿ ಸಹಾಯವಾಣ ಗೆ ಕರೆ ಮಾಡಬಹುದಾಗಿದೆ. ಸ್ನಾತಕ ಪದವಿ (ರೆಗ್ಯೂಲರ್)-7022254997 ಸ್ನಾತಕೋತ್ತರ ಪದವಿ/ವೃತ್ತಿಪರ ಕೋರ್ಸ್ (ರೆಗ್ಯೂಲರ್)-7022254993 ದೂರಶಿಕ್ಷಣ-70225555891, ತಾಂತ್ರಿಕ ಸಹಾಯಕ್ಕಾಗಿ /7022255745, 8183098136, / 81813098138 ಅನ್ನು ಸಂಪರ್ಕಿಸುವಂತೆ ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರು (ಮೌಲ್ಯಮಾಪನ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Real Estate Developers Shivamogga ಧರ್ಮಸ್ಥಳ ಸನ್ನಿಧಿಯಲ್ಲಿ ದಾಸೋಹಕ್ಕೆ ಅಕ್ಕಿ ಬೇಳೆ ಬೆಲ್ಲ ಕೊಡುಗೆ

0

Real Estate Developers Shivamogga ಶಿವಮೊಗ್ಗದ ರಿಯಲ್ ಎಸ್ಟೇಟ್ ಡೆವಲಪರ್ ಅಂಡ್ ಕನ್ಸಲ್‌ಟೆಂಟ್ ಗಂಗಾಧರವರ ನೇತೃತ್ವದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಗೆ 50 ಅಕ್ಕಿ ಚೀಲ ಮತ್ತು ೩೦ಕೆಜಿ ಬೆಲ್ಲ ೩೦ಕೆಜಿ ತೊಗರಿ ಬೇಳೆಯನ್ನು ಅನ್ನ ದಾಸೋಹಕ್ಕೆ ಕೊಡಲಾಯಿತು.ಈ ಸಂದರ್ಭದಲ್ಲಿ ಸಮಾಜ ಸೇವಕ ಶರಶ್ಚಂದ್ರ, ಶಿವಮೊಗ್ಗದ ಛಾಯಾಗ್ರಾಹಕ ಶ್ರೀಧರ್ ಹಾಗೂ ಎಲ್.ಬಿ.ಎಸ್. ವಿಜಯಕುಮಾರ್ ಇದ್ದರು.