Tuesday, April 7, 2026
Tuesday, April 7, 2026
Home Blog Page 1292

SAIL VISL ವತಿಯಿಂದ ಉಕ್ಕುಂದ ಗ್ರಾಮದಲ್ಲಿ ಆರೋಗ್ಯ ತಪಾಸಣಾ ಶಿಬಿರ

0

SAIL-VISL ವತಿಯಿಂದ VISL ಆಸ್ಪತ್ರೆ, ಸಹ್ಯಾದ್ರಿ ನಾರಾಯಣಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಇವರುಗಳ ಸಹಯೋಗದಲ್ಲಿ ದಿನಾಂಕ ೧-೩-೨೦೨೩ ರಂದು ಉಕ್ಕುಂದ ಗ್ರಾಮದಲ್ಲಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಸಾಮಾನ್ಯ ಆರೋಗ್ಯ, ಹೃದಯ, ಕಣ್ಣಿನ, ಮೂಳೆ, ದಂತ ಚಿಕಿತ್ಸೆಯ ತಪಾಸಣೆಯನ್ನು ಏರ್ಪಡಿಸಲಾಗಿತ್ತು.

SAIL-VISL ಕಾರ್ಯಕ್ರಮವನ್ನು ಕಾರ್ಯಪಾಲಕ ನಿರ್ದೇಶಕರಾದ ಶ್ರೀ ಬಿ.ಎಲ್. ಚಂದ್ವಾನಿ, ಶ್ರೀ ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ), ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕರು (ಸಿಬ್ಬಂದಿ ಮತ್ತು ಸಾರ್ವಜನಿಕ ಸಂಪರ್ಕ), ಡಾ|| ಎಮ್.ವೈ.ಸುರೇಶ್, ಮುಖ್ಯ ವೈಧ್ಯಾಧಿಕಾರಿ, ಶ್ರೀ ರಾಕೇಶ್, ಟೆಕ್ನಿಕಲ್ ಅಧಿಕಾರಿ, ಕೃಷಿ ಇಲಾಖೆ, ಶ್ರೀ ಅನು, ಸದಸ್ಯರು, ಅಂತರಗಂಗೆ ಗ್ರಾಮಪಂಚಾಯಿತಿ, ಶ್ರೀ ತಿಮ್ಮೇಗೌಡ, ಅಧ್ಯಕ್ಷರು, ಸ್ನೇಹಜೀವಿ ರೈತ ಶಕ್ತಿ ಸಂಘ ಉದ್ಘಾಟಿಸಿದರು.

VISL ಆಸ್ಪತ್ರೆಯ ತಜ್ಞರಾದ ಡಾ|| ಎಮ್.ವೈ.ಸುರೇಶ್ ಮತ್ತು ಡಾ|| ಎಸ್.ಎನ್. ಸುರೇಶ್, ಸಾಮಾನ್ಯ ಆರೋಗ್ಯ, ಮೂಳೆ ಮತ್ತು ದಂತ ಸಮಸ್ಯೆಗಳ ಬಗ್ಗೆ ತಜ್ಞರ ಸಲಹೆಯನ್ನು ನೀಡಿದರು. ಶ್ರೀಮತಿ ಅನಿತ, ಶ್ರೀ ಟಿ.ಎನ್. ಕೃಷ್ಣ, ಶ್ರೀ ಅಲೆನ್ ಜುಡೊ ಪಿಂಟೊ, ಶ್ರೀ ಮಧುಕರ್, ಶ್ರೀ ಶಿವಶಂಕರ್ ನಾಯಕ್ ಮತ್ತು ಶ್ರೀ ಆರ್. ಮಂಜುನಾಥ್ ಸಹಕರಿಸಿದರು.

ಶಂಕರ ಕಣ್ಣಿನ ಆಸ್ಪತ್ರೆಯ ತಜ್ಞರಾದ ಡಾ|| ಕೃತಿಕ್, ಶ್ರೀ ಮಹೇಶ್ ರಾಯ್ಕರ್, ಶ್ರೀ ಜಸ್ಟೀನ್ ಮತ್ತು ಸ್ವರ್ಣ ನೇತ್ರ ಪರೀಕ್ಷೆಗಳನ್ನು ನಡೆಸಿ ನೇತ್ರ ಆರೈಕೆಯ ಬಗ್ಗೆ ತಜ್ಞರ ಸಲಹೆಯನ್ನು ನೀಡಿದರು.

SAIL-VISL ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞರಾದ ಡಾ|| ಶರತ್, ಡಾ|| ಮತಿನ್ ಹಯಾತ್, ಶ್ರೀಮತಿ ತಾಸಿನಾ, ಶ್ರೀಮತಿ ಮೋಬಿನಾ, ಶ್ರೀ ಗಣೇಶ್ ಅವರು ಹೃದಯ ಸಂಬಂಧಿ ಪರೀಕ್ಷೆಗಳನ್ನು ನಡೆಸಿ, ಹೃದ್ರೋಗ ಆರೈಕೆಯ ಬಗ್ಗೆ ತಜ್ಞರ ಸಲಹೆಯನ್ನು ನೀಡಿದರು.

203 ಗ್ರಾಮಸ್ಥರು ಈ ಶಿಬಿರದ ಸದುಪಯೋಗ ಪಡೆದುಕೊಂಡರು. ಈ ಸಂದರ್ಭದಲ್ಲಿ ಉಕ್ಕುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕ್ರೀಡಾ ಸಾಮಾಗ್ರಿಗಳನ್ನು SAIL-VISL ವತಿಯಿಂದ ನೀಡಲಾಯಿತು. ಶ್ರೀಮತಿ ಶೋಭ.ಕೆ.ಎಸ್, ಸಹಾಯಕ ಪ್ರಬಂಧಕರು (ಸಿಬ್ಬಂದಿ ಮತ್ತು ಸಿ.ಎಸ್.ಆರ್) ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು VISL ಆಸ್ಪತ್ರೆ, ಸಿಬ್ಬಂದಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಅಂತರಗಂಗೆ ಗ್ರಾಮ ಪಂಚಾಯಿತಿ, ಸ್ನೇಹಜೀವಿ ರೈತ ಶಕ್ತಿ ಸಂಘದವರ ಸಹಯೋಗದೊಂದಿಗೆ ಸಂಯೋಜಿಸಲಾಯಿತು.

Klive Editorial ಸಂಪಾದಕೀಯ

0

Klive Editorial  :ಸಾಕಷ್ಟು ತೀವ್ರತೆ ಪಡೆದಿದ್ದ ರಾಜ್ಯ ಸರ್ಕಾರಿ ನೌಕರರ ಸಂಪಿಗೆ ಈಗ ಏಕ್ ದಂ ಬ್ರೇಕ್ ಹಾಕಿದಂತಾಗಿದೆ.

ಮುಖ್ಯಮಂತ್ರಿ ಬೊಮ್ಮಾಯಿ ಅವರ
ತಕ್ಷಣದ ಭರವಸೆ ಸದ್ಯದ ಮುಷ್ಕರ ಕೊನೆಗಾಣಿಸಿದೆ.

ಶೇ17 ರಷ್ಟು ವೇತನ ಹೆಚ್ಚಳಕ್ಕೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ.
ಬರುವ ಏ1 ರಿಂದ ಜಾರಿಗೆ ತರುವುದಾಗಿ
ಹೇಳಲಾಗಿದೆ.

ಶೇ 17 ರಷ್ಟು ವೇತನ ಹೆಚ್ಚಳ ಸಾಮಾನ್ಯದ್ದಲ್ಲ. ಈಗಾಗಲೇ ಕೋವಿಡ್ ನಂತಹ ಇಕ್ಕಟ್ಟಿಗೆ ಸಿಲುಕಿ ಈಗೀಗ ಸರ್ಕಾರ ಸರಾಗ ಉಸಿರಾಡುತ್ತಿದೆ. ಇಂತಹ ಸನ್ನಿವೇಶದಲ್ಲಿ ಈ ಕೊಡುಗೆಯನ್ನ ನೌಕರರ ಸಂಘಟನೆ ಒಪ್ಪಿರುವುದು ಒಳ್ಳೆಯದಾಗಿದೆ.

ಸಾಮಾನ್ಯರಿಗೆ ಸಾದಾ ದಿನಗಳಲ್ಲೇ ಕೆಲಸಗಳು ಆಗುವುದು ಕಷ್ಟ.ಅಂಥದ್ದರಲ್ಲಿ ಮುಷ್ಕರ ನಡೆಸಿದರೆ
ಸಾರ್ವಜನಿಕರ ಕೋಪಕ್ಕೂ ಗುರಿಯಾಗಬೇಕಾಗುತ್ತದೆ. ಸರ್ಕಾರಿ ಸೇವೆ ಅಂದರೆ ಅದರ ಫಲ ಶ್ರೀಸಾಮಾನ್ಯರಿಗೆ ಸಿಗಬೇಕು. ಈ ತತ್ವಕ್ಕೆ ಸರ್ಕಾರಿ ನೌಕರರ ಸಂಘಟನೆ ತನ್ನ ಬದ್ಧತೆಯನ್ನೂ ತೋರಿಸಬೇಕು.

ಸದ್ಯದ ವೇತನ ಹೆಚ್ಚಳ ಸಂಗತಿ ಎದುರು ನಮ್ಮ ಅಂಗನವಾಡಿ ಕಾರ್ಯಕರ್ತೆಯರ ಸ್ಥಿತಿ ನೋಡಿದರೆ ಕನಿಕರ ಬರುವಂತಿದೆ.
ಸರ್ಕಾರಿ ನೌಕರರಷ್ಟೇ ಪ್ರಮುಖ ಸೇವೆ ನಮ್ಮ
ಅಂಗನವಾಡಿ ಸಿಬ್ಬಂದಿಯವರದೂ ಆಗಿದೆ. ಅವರ ಅಳಲಿನ ಬಗ್ಗೆಯೂ ಸರ್ಕಾರ ತೀವ್ರ ಗಮನ ಕೊಡಬೇಕಿದೆ.

Klive Editorial  ಸರ್ಕಾರಿ ನೌಕರರ ಸಂಘದಲ್ಲಿ ಅಪಸ್ವರವೂ ಎದ್ದಿದೆ.
ಎಂತಹ ಸಂದರ್ಭದಲ್ಲೂ ಒಗ್ಗಟ್ಟನ್ನು ಬಿಟ್ಟುಕೊಡಬಾರದು.
ಸಚಿವಾಲಯ ನೌಕರರು ಭಿನ್ನಮತೀಯರಂತೆ ಹೇಳಿಕೆ ನೀಡುವುದು ಈಗ ಸಮಯೋಚಿತವಲ್ಲ.
ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವಲ್ಲಿ ಮುಷ್ಕರದಂತಹ ಅಸ್ತ್ರ ‌ಬಿಟ್ಟು ಯೋಚನೆ ಮಾಡ ಬೇಕಾದ ಕಾಲವೂ ಈಗ ಸನ್ನಿಹಿತವಾಗಿದೆ ಎಂಬುದನ್ನ ಯಾರೂ ಮರೆಯಬಾರದು.

ook Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Advertisement ಮಾಧ್ಯಮ ಮಿತ್ರರಿಗೆ ಮಾಹಿತಿ… -ವಾರ್ತಾ ಇಲಾಖೆ ಸರಣಿ

0

Advertisement ಮಾಧ್ಯಮಗಳಿಗೆ ಓದುಗರ, ವೀಕ್ಷಕರ ಬೆಂಬಲ ಎಷ್ಟು ಅಗತ್ಯವೋ ಅಷ್ಟೇ ಬೆಂಬಲ ಹಾಗೂ ಬಲ ಈ ಜಾಹಿರಾತುದಾರರದು ಬೇಕೇ ಬೇಕು. ಒಂದು ಅರ್ಥದಲ್ಲಿ ಜಾಹಿರಾತುಗಳು ಮಾಧ್ಯಮದ ಜೀವ ನಾಡಿಗಳೆಂದರೆ ತಪ್ಪಾಗಲಿಕ್ಕಿಲ್ಲ. ಆದ್ದರಿಂದ ಮಾಧ್ಯಮಕ್ಕಿರುವ ಜಾಹಿರಾತಿನ ಅನಿವಾರ್ಯತೆಯನ್ನು ಯಾರೂ ಅಲ್ಲಗಳೆಯಲಾರರು. ಆದರೆ ಜಾಹೀರಾತಿನ ಹೆಸರಿನಲ್ಲಿ ಎಲ್ಲಾ ವಿಷಯಗಳನ್ನು ಪ್ರಕಟಿಸಬಹುದೇ? ಪ್ರಸಾರ ಮಾಡಬಹುದೇ?

ಈ ಕುರಿತಂತೆ ಕೇಂದ್ರ ಸರ್ಕಾರ ಸುದ್ದಿ ವಾಹಿನಿಗಳು ಈ ವಾಣಿಜ್ಯ ಜಾಹಿರಾತುಗಳನ್ನು ಪ್ರಸಾರ ಮಾಡುವ ಬಗ್ಗೆ ಪ್ರತ್ಯೇಕವಾದ ನೀತಿಗಳನ್ನು ಜಾರಿಗೊಳಿಸಿದೆ. ಮಾಧ್ಯಮದವರು ಅದರಲ್ಲೂ ವಿಶೇಷವಾಗಿ ಎಲೆಕ್ಟ್ರಾನಿಕ್ ಸುದ್ದಿ ವಾಹಿನಿಗಳು ಇದರತ್ತ ಚಿತ್ತ ವಹಿಸುವುದು ಅಗತ್ಯ. ಈ ವಾಣಿಜ್ಯ ಜಾಹೀರಾತು ನೀತಿ htts://https://prasarbharati.gov.in/code-for-commercial advertising/#1529430888808-cdb5b52b-a5f95832-5043 ಈ ಲಿಂಕ್‍ಲ್ಲಿ ಲಭ್ಯವಿದೆ.

Advertisement ಇದರ ಜೊತೆ ಭಾರತೀಯ ಜಾಹಿರಾತು ಗುಣಮಟ್ಟ ಪರಿಷತ್ (The Advertising Standards Council Of India-ASCI) ಸಹ ತನ್ನ ಸದಸ್ಯ ಮಾಧ್ಯಮದವರಿಗೂ ಸ್ವ ನಿಯಂತ್ರಿತ ಜಾಹಿರಾತು ಗುಣಮಟ್ಟದ ರಕ್ಷಣೆ ಹಾಗೂ ಕಾನೂನಿನ ಉಲ್ಲಂಘನೆಯಾಗದ ರೀತಿಯಲ್ಲಿ ಪ್ರಕಟಣೆ ಬಗ್ಗೆ ನೀತಿ ಹೊರಡಿಸಿದೆ. ಅದೂ ಕೂಡ ಅಂತರ್ಜಾಲದಲ್ಲಿ ಲಭ್ಯವಿದೆ.

ಮಾಧ್ಯಮದ ಜಾಹಿರಾತು ವಿಭಾಗ ತಮ್ಮ ಮಾಧ್ಯಮದಲ್ಲಿ ಪ್ರಕಟವಾಗುವ ಯಾವುದೇ ಜಾಹಿರಾತು ಕಾನೂನಿನ ನಿಯಮಗಳಿಗೆ ಲೋಪವಾಗದಂತೆ ಎಚ್ಚರಿಕೆ ವಹಿಸುವುದು ಸೂಕ್ತ. ಹಾಗೂ ಈ ಕೆಳಗಿನ ಕಾನೂನುಗಳ ಅನ್ವಯ ಜಾರಿರಾತು ಪ್ರಕಟಣೆ ಇರಬೇಕು.

ದಿ ಪ್ರೆಸ್ ಕೌನ್ಸಿಲ್ ಆಕ್ಟ್ 1978, ಕೇಬಲ್ ಟೆಲಿವಿಷನ್ ನೆಟ್‍ವರ್ಕ್ ರೂಲ್ಸ್ 1994, ಕೋಡ್ ಫಾರ್ ಕಮರ್ಷಿಯಲ್ ಅಡ್ವರ್‍ಟೈಸಿಂಗ್ ಆನ್ ದೂರದರ್ಶನ್ ಅಂಡ್ ಆಲ್ ಇಂಡಿಯಾ ರೇಡಿಯೊ, ಎಲೆಕ್ಟ್ರಾನಿಕ್ ಮೀಡಿಯಾ ಮಾನಿಟರಿಂಗ್ ಸೆಂಟರ್(ಇಎಂಎಂಸಿ), ನಾಮ್ರ್ಸ್ ಫಾರ್ ಜರ್ನಲಿಸ್ಟ್ ಕಂಡಕ್ಟ್ ಇಶ್ಯೂಡ್ ಬೈ ದಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ಕೋಡ್ ಆಫ್ ಕಂಡಕ್ಟ್ ಆಫ್ ದಿ ನ್ಯೂಸ್ ಬ್ರಾಡ್‍ಕಾಸ್ಟರ್ಸ್ ಅಸೋಸಿಯೇಷನ್.
ಈ ಜಾಹಿರಾತಿನ ವಿವರಗಳು, ಮಾಹಿತಿ ಹಾಗೂ ‘ಕಂಟೆಂಟ್’ ಈ ಕೆಳಗಿನ ಕಾನೂನುಗಳಲ್ಲಿ ನಿಯಮಗಳನ್ನು ಉಲ್ಲಂಘಿಸುವಂತಿರಬಾರದು.

ಎಂಬ್ಲೆಮ್ ಅಂಡ್ ನೇಮ್ಸ್ (ಪ್ರಿವೆನ್ಶನ್ ಆಫ್ ಇಂಪ್ರಾಪರ್ ಯೂಸ್) ಆಕ್ಟ್ 1950, ಯಂಗ್ ಪರ್ಸನ್ಸ್ (ಹಾರ್ಮ್‍ಫುಲ್ ಪಬ್ಲಿಕೇಷನ್ಸ್) ಆಕ್ಟ್, 1956, ಕಂಪನೀಸ್ ಆಕ್ಟ್ 1956, ಸ್ಟಾಂಡಡ್ರ್ಸ್ ಆಫ್ ವೇಟ್ & ಮೆಷರ್ಸ್ ಆಕ್ಟ್ 1976, ಇನ್‍ಡೀಸೆಂಟ್ ರೆಪ್ರೆಸೆಂಟೇಷನ್ ಆಫ್ ವಿಮೆನ್(ಪ್ರಾಹಿಬಿಷನ್) ಆಕ್ಟ್ 1986, ಕನ್ಸ್ಯೂಮರ್ ಪ್ರೊಟೆಕ್ಷನ್ ಆಕ್ಟ್ 1986, ಲಾಸ್ ರಿಲೇಟೆಡ್ ಟು ಇಂಟೆಲೆಕ್ಚುವಲ್ ಪ್ರಾಪರ್ಟಿ ರೈಟ್ಸ್.
ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ ಸಂಬಂಧಿಸಿದ ಕಾನೂನುಗಳಾದ ದಿ ಡ್ರಗ್ಸ್ ಆಂಡ್ ಕಾಸ್ಮೆಟಿಕ್ ಆಕ್ಟ್ 1940, ದಿ ಟ್ರಾನ್ಸ್‍ಪ್ಲಾಂಟೇಷನ್ ಆಫ್ ಹ್ಯೂಮನ್ ಆರ್ಗನ್ಸ್ ಆಕ್ಟ್ 1994, ದಿ ಡ್ರಗ್ಸ್ ಆಂಡ್ ಮ್ಯಾಜಿಕಲ್ ರೆಮಿಡಿಸ್(ಅಬ್ಜೆಕ್ಷನಬಲ್ ಅಡ್ವರ್ಟೈಸ್‍ಮೆಂಟ್ಸ್) ಆಕ್ಟ್, 1954, ದಿ ಪೇರೆಂಟಲ್ ಡಯಾಗ್ನೊಸ್ಟಿಕ್ ಟೆಕ್ನಿಕ್ಸ್(ರೆಗ್ಯುಲೇಷನ್ ಆಂಡ್ ಪ್ರಿವೆನ್ಶನ್ ಆಫ್ ಮಿಸ್‍ಯೂಸ್) ಆಕ್ಟ್, 1994, ಅಡ್ವೊಕೇಟ್ಸ್ ಆಕ್ಟ್ 1961, ಇನ್‍ಫ್ಯಾಂಟ್ ಮಿಲ್ಕ್ ಸಬ್ಸ್ಟಿಟ್ಯೂಟ್ಸ್, ಫೀಡಿಂಗ್ ಬಾಟಲ್ಸ್ ಆನ್ ಇನ್‍ಫ್ಯಾಂಟ್ ಫುಡ್ಸ್(ರೆಗ್ಯುಲೇಷನ್ ಆಫ್ ಪ್ರೊಡಕ್ಷನ್, ಸಪ್ಲೈ ಅಂಡ್ ಡಿಸ್ಟ್ರಿಬ್ಯೂಷನ್)ಆಕ್ಟ್ 1992, ಸೆಕ್ಯುರಿಟಿಸ್ ಆಂಡ್ ಎಕ್ಸ್‍ಚೇಂಜ್ ಬೋರ್ಡ್ ಆಫ್ ಇಂಡಿಯಾ ಆಕ್ಟ್ 1992, ದಿ ಪ್ರೈಜ್ ಚಿಟ್ಸ್ ಆಂಡ್ ಮನಿ ಸಕ್ರ್ಯುಲೇಷನ್ ಸ್ಕೀಮ್ಸ್(ಬ್ಯಾನಿಂಗ್) ಆಕ್ಟ್ 1978, ಸಿಗರೇಟ್ಸ್ ಆಂಡ್ ಅದರ್ ಟೊಬ್ಯಾಕೊ ಪ್ರಾಡಕ್ಟ್ಸ್(ಪ್ರಾಹಿಬಿಷನ್ ಆಫ್ ಅಡ್ವರ್ಟೈಸ್‍ಮೆಂಟ್ ಆಂಡ್ ರೆಗ್ಯುಲೇಷನ್ ಆಫ್ ಟ್ರೇಡ್ ಆಂಡ್ ಕಾಮರ್ಸ್, ಪ್ರೊಡಕ್ಷನ್, ಸಪ್ಲೈ ಅಂಡ್ ಡಿಸ್ಟ್ರಿಬ್ಯುಷನ್) ಆಕ್ಟ್ 2003, ಪಬ್ಲಿಕ್ ಗ್ಯಾಂಬ್ಲಿಂಗ್ ಆಕ್ಟ್ 1867, ದಿ ಲಾಟರೀಸ್(ರೆಗ್ಯುಲೆಷನ್) ಆಕ್ಟ್ 1998 ಆಂಡ್ ದಿ ಪ್ರೈಸ್ ಕಂಪಿಟಿಷನ್ಸ್ ಆಕ್ಟ್ 1955, ಇಂಡಿಯನ್ ಮೆಡಿಕಲ್ ಕೌನ್ಸಿಲ್ (ಪ್ರೊಫೆಷನಲ್ ಕಂಡಕ್ಟ್, ಎಟಿಕ್ವಿಟಿ ಆಂಡ್ ಎಥಿಕ್ಸ್)ರೆಗ್ಯುಲೇಷನ್ಸ್ 2002, ದಿ ಫುಡ್ ಸೇಫ್ಟಿ & ಸ್ಟ್ಯಾಂಡಡ್ರ್ಸ್ ಆಕ್ಟ್ 2006.

ಈ ಎಲ್ಲ ಕಾನೂನುಗಳ ಬಗ್ಗೆ ಕೆಲವೊಂದು ಉದಾಹರಣೆ ಮೂಲಕ ನಿಮ್ಮ ಗಮನಕ್ಕೆ ತರಬಹುದು.
ಗುಣಪಡಿಸಲಾಗದ ರೋಗಗಳಿಗೆ ಮದ್ದು ನೀಡಿ ಗುಣ ಪಡಿಸುತ್ತೇವೆ ಎಂಬ ರೀತಿಯ ಜಾಹಿರಾತುಗಳು:
• ತಾವು ತಯಾರಿಸಿದ ಔಷಧಿ ಎಂತಹುದೇ ಲೈಂಗಿಕ ರೋಗಗಳನ್ನು, ದೌರ್ಬಲ್ಯತೆಗಳನ್ನು ಕಳೆದು ನವ ಚೈತನ್ಯ ಉಂಟು ಮಾಡುತ್ತದೆ ಎಂಬ ಜಾಹಿರಾತುಗಳು.
• ತಮ್ಮ ದೇಹದ ಅಂಗಾಂಗಳನ್ನು ಮಾರಾಟಕ್ಕೆ ಇಟ್ಟ ಅಥವಾ ಖರೀದಿಸಲು ತಯಾರಿರುವ ಬಗೆಗಿನ ಜಾಹಿರಾತುಗಳು:
• ವೃತ್ತಿಪರರಾದ ನ್ಯಾಯವಾದಿಗಳು, ವೈದ್ಯರು, ಚಾರ್ಟರ್ಡ್ ಅಕೌಂಟೆಂಟ್‍ಗಳು ತಮ್ಮ ವೃತ್ತಿಯ ಬಗ್ಗೆ ಗ್ರಾಹಕರನ್ನು ಆಕರ್ಷಿಸಲು ನೀಡುವ ಜಾಹಿರಾತುಗಳು:
• ಜೂಜಾಟದ ಜಾಹಿರಾತುಗಳು
• ಮಹಿಳೆಯರನ್ನು ಅಸಭ್ಯವಾಗಿ ತೋರಿಸುವಂತಹ ಅಥವಾ ಅಸಭ್ಯವಾಗಿರುವ ಜಾಹಿರಾತುಗಳು
• ಹಣಕಾಸಿನ ವಿಷಯದ ಬಗೆಗಿನ ಕಾನೂನುಗಳು ಇತ್ಯಾದಿ
ಈ ರೀತಿಯ ಜಾಹಿರಾತುಗಳನ್ನು ಪ್ರಕಟಿಸುವುದು ಜಾಹಿರಾತು ನೀಡಿದ ವ್ಯಕ್ತಿ/ಸಂಸ್ಥೆ ಹಾಗೂ ಪ್ರಕಟಿಸಿದ ಮಾಧ್ಯಮದ ಮೇಲೆ ಕಾನೂನಿನ ಕುಣಿಕೆ ನೇತಾಡುವುದರಲ್ಲಿ ಸಂಶಯವಿಲ್ಲ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shivamogga Good Luck Center ಶಿವಮೊಗ್ಗ ಗುಡ್ ಲಕ್ ಕೇಂದ್ರಕ್ಕೆ ಸೂಕ್ತ ನೆರವು ನೀಡಲು ಅಗತ್ಯ ಕ್ರಮ- ಡಿ.ಎಸ್.ಅರುಣ್

0

Shivamogga Good Luck Center ಅನಾಥರು, ಬುದ್ದಿಮಾಂದ್ಯರು ಸೇರಿದಂತೆ ಸಂಕಷ್ಟದಲ್ಲಿರುವವರಿಗೆ ನೆರವು ನೀಡುತ್ತಿರುವ ಗುಡ್‌ಲಕ್ ಆರೈಕೆ ಕೇಂದ್ರ ಅಗತ್ಯವಿರುವ ನೆರವು ನೀಡಲು ಅಗತ್ಯ ಕ್ರಮ ವಹಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.

ಶಿವಮೊಗ್ಗ ನಗರದ ಕಲ್ಲಹಳ್ಳಿಯಲ್ಲಿರುವ ಅನಾಥರು, ಬುದ್ದಿಮಾಂದ್ಯರ, ಅಶಕ್ತರ ಕೇಂದ್ರ, ಗುಡ್‌ಲಕ್ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಪರಿಸ್ಥಿತಿ ಬಗ್ಗೆ ಸಮಾಲೋಚನೆ ನಡೆಸಿ ಮಾತನಾಡಿದರು.

ಸಂತ್ರಸ್ತರಿಗೆ ಅಗತ್ಯವಾದ ದಾಖಲೆ ಸಿದ್ಧಪಡಿಸಿಕೊಡುವ ಕೆಲಸ, ಮಾಶಾಸನದ ವ್ಯವಸ್ಥೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪ್ರತಿ ದಿನ ಅಗತ್ಯವಿರುವ ರೇಷನ್, ವೈದ್ಯಕೀಯ ವ್ಯವಸ್ಥೆ ಹಾಗೂ ವಸತಿ ಸೌಕರ್ಯಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಗುಡ್‌ಲಕ್ ಆರೈಕೆ ಕೇಂದ್ರದ ಅಧ್ಯಕ್ಷ ರವೀಂದ್ರನಾಥ ಐತಾಳ್ ಮಾತನಾಡಿ, ಶಿವಮೊಗ್ಗದ ಸಹೃದಯ ನಾಗರಿಕರ ಸಹಕಾರದಿಂದ ದಿನ ನಿತ್ಯ ಬೇಕಾದ ಎಲ್ಲಾ ವ್ಯವಸ್ಥೆ ನಡೆಯುತ್ತಿದೆ. ಮುಖ್ಯವಾಗಿ ತನ್ನದೇ ಸೂರಿನ ಅಗತ್ಯವಿದ್ದು, ಇದರ ವ್ಯವಸ್ಥೆಯನ್ನು ಸರ್ಕಾರದ ವತಿಯಿಂದ ಮಾಡಿಕೊಡುವಂತೆ ಮನವಿ ಮಾಡಿದರು.

Shivamogga Good Luck Center ಆರೈಕೆ ಕೇಂದ್ರದ ನಿರ್ದೇಶಕ ವಸಂತ ಹೋಬಳಿದಾರ ಮತ್ತು ಜಿ.ವಿಜಯಕುಮಾರ್ ಅರೈಕೆ ಕೇಂದ್ರದ ಸಮಗ್ರ ಮಾಹಿತಿಯನ್ನು ಶಾಸಕರಿಗೆ ನೀಡಿದರು. ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಡಿ.ಎಸ್.ಅರುಣ್ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಸ್ಥಳೀಯರಾದ ಕೆ.ಪಿ.ಶೆಟ್ಟಿ, ಶರವಣ ಮತ್ತು ಸುಂದರ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಅರೈಕೆ ಕೇಂದ್ರದ ಕಾರ್ಯದರ್ಶಿ ಪಂಚಾಕ್ಷರಿ ಹಿರೇಮಠ ವಂದನಾರ್ಪಣೆ ನಡೆಸಿಕೊಟ್ಟರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budge

Chikmangalur ಚಿಕ್ಕಮಗಳೂರು ಬಸವನಹಳ್ಳಿಕೆರೆ ಕಾಮಗಾರಿಯಲ್ಲಿ ಭ್ರಷ್ಟಾಚಾರದ ಬಗ್ಗೆ ಪ್ರತಿಭಟನೆ

0

Chikmangalur  ನಗರದ ಹೃದಯ ಭಾಗದಲ್ಲಿರುವ ಬಸವನಹಳ್ಳಿಕೆರೆ ಕಾಮಗಾರಿಯಲ್ಲಿ ನಡೆದಿರುವ ಭಾರೀ ಭ್ರಷ್ಟಚಾರವನ್ನು ವಿರೋಧಿಸಿ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ವತಿಯಿಂದ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡರುಗಳು ತಾಲ್ಲೂಕು ಕಚೇರಿ ಆವರಣದಿಂದ ಮೆರವಣಿಗೆಯಲ್ಲಿ ಸಾಗಿ ಕೆರೆ ಸಮೀಪ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್‌ಗೊಳಿಸುವ ಮೂಲಕ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಅಂಶುಮಂತ್ ರೈತರ ಬದುಕಿಗೆ ಕೆರೆ ನೀರು ಕೊಡುವ ಮೂಲವಾದರೆ, ಕ್ಷೇತ್ರದ ಶಾಸಕರು ಅದೇ ಕೆರೆಯನ್ನು ತಮ್ಮ ವೈಯಕ್ತಿಕ ಬದುಕಿನ ಆಧಾಯ ಮಾಡಿಕೊಂಡು ಭಾರೀ ಭ್ರಷ್ಟಚಾರದಲ್ಲಿ ತೊಡಗಿರುವ ಜೊತೆಗೆ ಕಳಪೆ ಕಾಮಗಾರಿ ನಡೆಸಿ ಕೋಟಿಗಟ್ಟಲೇ ಹಣವನ್ನು ಲೂಟಿ ಮಾಡಲಾಗಿದೆ ಎಂದು ಆರೋಪಿಸಿದರು.

Chikmangalur  ಕ್ಷೇತ್ರದ ನಾಗರೀಕರು ಸತತವಾಗಿ ಇಪತ್ತು ವರ್ಷಗಳ ಕಾಲ ಶಾಸಕರಿಗೆ ಅಧಿಕಾರ ನೀಡಿದರೂ ಸಹ ಪ್ರತಿಯೊಂದು ವಿಚಾರದಲ್ಲಿ ತಮ್ಮ ವೈಯಕ್ತಿಕ ಆದಾಯ ಮಾಡಿಕೊಂಡು ಲಾಭ ಗಳಿಸುವ ಜೊತೆಗೆ ಕಳಪೆ ಕಾಮಗಾರಿಯ ಸರದಾರರರಾಗಿ ಸಿ.ಟಿ.ರವಿ ದಾಪುಗಾಲು ಇಟ್ಟು ಸಾರ್ವಜನಿಕರ ತೆರಿಗೆ ಹಣವನ್ನು ಬೇಕಾಬಿಟ್ಟಿ ಯಾಗಿ ಪೋಲು ಮಾಡುತ್ತಿದ್ದಾರೆ ಎಂದು ದೂರಿದರು.

ಕೆರೆ ಕಾಮಗಾರಿ ವಿಚಾರದಲ್ಲಿ ಜಿಲ್ಲಾಡಳಿತವು ಶಾಸಕರ ಕೈಗೊಂಬೆಯಾಗಿ ವರ್ತಿಸುತ್ತಿದೆ. ಕಾಮಗಾರಿಗಳಲ್ಲಿ ಯಾವುದೇ ಕಡಿವಾಣ ಹಾಕದಿರುವುದು ಗಮನಿಸಿದರೆ ಮೇಲ್ನೋಟಕ್ಕೆ ಶಾಮೀಲಾಗಿರುವುದು ಕಂಡುಬರುತ್ತಿದೆ. ಶಾಸಕರು ಕ್ಷೇತ್ರದಲ್ಲಿ ಅಧಿಕಾರ ವಹಿಸಿಕೊಂಡು ನಂತರ ನಿರ್ಲಕ್ಷ್ಯ ಧೋರಣೆ ಹಾಗೂ ಬೇಜವಾಬ್ದಾರಿ ಕಾರ್ಯ ನಿರ್ವಹಿಸಿ ಸಾರ್ವಜನಿಕರ ಹಣವನ್ನು ಸ್ವಂತ ಆದಾಯವನ್ನಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಅರ್ಧದಷ್ಟು ಮುಚ್ಚಿರುವ ಬಸವನಹಳ್ಳಿ ಕೆರೆಯ ಕಾಮಗಾರಿಯ ವಿವರವನ್ನು ಜಿಲ್ಲಾಡಳಿತ ನಾಮಫಲಕದ ಮೂಲಕ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಈ ಕಳಪೆ ಕಾಮಗಾರಿಯ ಹಿಂದೆ ಯಾವ ಯಾವ ಅಧಿಕಾ ರಿಗಳು ಹಾಗೂ ಗುತ್ತಿಗೆದಾರರ ಕೈವಾಡವಿದೆಯೋ ಅವರ ವಿರುದ್ಧ ಸೂಕ್ತ ಕಾನೂನು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ ಮಾತನಾಡಿ ವಿಧಾನಸೌಧದಲ್ಲೂ ಕೂಡಾ ಸಿ.ಟಿ.ರವಿ ಅವರ ಕಳಪೆ ಕಾಮಗಾರಿ, ಭ್ರಷ್ಟಾಚಾರ, ಕೋಟಿ ರವಿ ಎಂದು ಚರ್ಚೆಗಳಾಗುತ್ತಿವೆ. ಜಿಲ್ಲೆಯ ಎಲ್ಲಾ ಗುತ್ತಿಗೆಯನ್ನು ತಮ್ಮ ಭಾವನ ಮೂಲಕ ಮಾಡಿಕೊಳ್ಳುತ್ತಿರುವುದರಿಂದ ಸಣ್ಣಪುಟ್ಟ ಗುತ್ತಿಗೆದಾರರು ಆತ್ಮಹತ್ಯೆ ಮಾಡಿ ಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ದೂರಿದರು.

ಕೆರೆಯನ್ನು ಮುಚ್ಚದಂತೆ ಸುಪ್ರೀಂ ಕೋರ್ಟ್ ಆದೇಶವಿದ್ದರೂ ಸಹ ಶಾಸಕರು ಆ ಕಾರ್ಯದಲ್ಲಿ ನಿರತರಾಗಿದ್ದು, ಇವೆಲ್ಲವುಗಳನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಸಿ.ಟಿ.ರವಿ ಜಿಲ್ಲೆಯನ್ನು ಮಾರಾಟ ಮಾಡುವುದರಲ್ಲಿ ಸಂಶಯವಿಲ್ಲ. ಇವುಗಳನ್ನು ಜನತೆ ಗಮನದಲ್ಲಿಟ್ಟುಕೊಂಡು ಮುಂದೆ ಕಾಂಗ್ರೆಸ್ ಅಭ್ಯರ್ಥಿಯನ್ನು ಗುರುತಿಸಿ ಆಯ್ಕೆ ಮಾಡುವುದರೊಂದಿಗೆ ಭ್ರಷ್ಟಚಾರಕ್ಕೆ ಮುಕ್ತಾಯ ಹಾಡಬೇಕು ಎಂದು ಹೇಳಿದರು.

ಎಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್, ಮಾತನಾಡಿ ಶಾಸಕ ಸಿ.ಟಿ.ರವಿ ಏಕಾಪಾತ್ರಾಭಿನಯವನ್ನು ಹೆಚ್ಚು ಅಭ್ಯಾಸ ಮಾಡಿಕೊಂಡಿದ್ದಾರೆ. ಕೆರೆಯ ಕಾಮಗಾರಿ ವಿಚಾರದಲ್ಲಿ ಗುತ್ತಿಗೆದಾರರಾಗಿ ಅವರ ಸಂಬಂಧಿಕರನ್ನು ಶಾಸಕರೇ ಆಯ್ಕೆ ಮಾಡುತ್ತಾರೆ. ನಂತರ ತೆರಳಿ ಪರಿಶೀಲನೆ ನಡೆಸಿ ಕಳಪೆಯಾಗಿದ್ದರೆ ಸಾರ್ವಜನಿಕರೆದುರು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡು ನಂತರ ಸಂಧಾನಕ್ಕೂ ಶಾಸಕರು ಮುಂದಾಗುತ್ತಾರೆ ಎಂದು ಟೀಕಿಸಿದರು.

ಕೆಪಿಸಿಸಿ ರಾಜ್ಯ ವಕ್ತಾರ ಹೆಚ್.ಹೆಚ್.ದೇವರಾಜ್ ಮಾತನಾಡಿ ಕೆರೆಯ ಮಧ್ಯದಲ್ಲಿ ವಿವೇಕಾನಂದರ ಪ್ರತಿಮೆ ಸ್ಥಾಪಿಸಿ ಐಲ್ಯಾಂಡ್ ಮಾಡುವುದಾಗಿ ಹೇಳಿದ ಶಾಸಕರು ಹೈಜಾಕ್ ಮಾಡಿದ್ದಾರೆ. ಕೆರೆಯ ಅಭಿವೃದ್ದಿ ವಿಚಾರದಲ್ಲಿ ಕೋಟಿಗಟ್ಟಲೇ ಹಣವನ್ನು ಸರ್ಕಾರದಿಂದ ಮಂಜೂರು ಮಾಡಿಕೊಂಡು ಮನಸ್ಸಿಗೆ ಬಂದಂತೆ ಖರ್ಚು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕೂಡಲೇ ಮುಖ್ಯಮಂತ್ರಿಗಳು ಹಾಗೂ ಉಸ್ತುವಾರಿ ಸಚಿವರು ಜಿಲ್ಲೆಯ ಬಗ್ಗೆ ಅಪಾರ ಗೌರವ ಹೊಂದಿದ್ದರೆ ಕಾಮಗಾರಿ ವಿಚಾರವನ್ನು ಕೂಡಲೇ ತನಿಖೆಗೊಳಪಡಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಮಾತನಾಡಿ ಕೆರೆಯ ಅಭಿವೃದ್ದಿಗಾಗಿ ಸರ್ಕಾರದಿಂದ ಸುಮಾರು 30 ಕೋಟಿ ಅನುದಾನ ಮಂಜೂರು ಮಾಡಿಕೊಂಡಿದ್ದು, ಸ್ಥಳೀಯರಿಂದ ಕಾಮಗಾರಿ ಕೆಲಸ ಮಾಡಿಸಿ ಕೊಂಡರೆ ತಮ್ಮ ಬಂಡವಾಳ ತಿಳಿಯುತ್ತದೆಯೋ ಎಂಬ ಆತಂಕದಿಂದ ಇತರೆ ಜಿಲ್ಲೆಯವರಿಂದ ಜನರನ್ನು ಕರೆಸಿ ಕಾಮಗಾರಿ ನಡೆಸಲು ಮುಂದಾಗುತ್ತಿದ್ದಾರೆ ಎಂದು ದೂರಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಶ್ರೀನಿವಾಸ್, ಪಕ್ಷದ ಮಾಜಿ ಅಧ್ಯಕ್ಷ ಡಾ. ಡಿ.ಎಲ್.ವಿಜಯ್‌ಕುಮಾರ್, ಮುಖಂಡರುಗಳಾದ ಎ.ಎನ್.ಮಹೇಶ್, ಎಂ.ಸಿ.ಶಿವಾನಂದಸ್ವಾಮಿ, ರೇಖಾ ಹುಲಿಯಪ್ಪಗೌಡ, ಸಿ.ಎನ್.ಅಕ್ಮಲ್, ಹಿರೇಮಗಳೂರು ಪುಟ್ಟಸ್ವಾಮಿ, ರವೀಶ್ ಬಸಪ್ಪ, ಹಿರೇಮಗಳೂರು ರಾಮಚಂದ್ರ, ಉಪ್ಪಳ್ಳಿ ಅನ್ಸರ್, ನಯಾಜ್, ನೂರ್ ಅಹ್ಮದ್, ನಾಗಭೂಷಣ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Malaria ಕ್ಷಯ ಮಲೇರಿಯಾದಿಂದ ಭಾರತವನ್ನ ಮುಕ್ತಗೊಳಿಸಲು ಎಲ್ಲರ ಸಹಕಾರ ಅಗತ್ಯ-ಜಿ.ವಿಜಯ್ ಕುಮಾರ್

Malaria  2025ಕ್ಕೆ ಮಲೇರಿಯಾ, ಕ್ಷಯ ಹಾಗೂ ಅನಿಮಿಯ ಮುಕ್ತ ಭಾರತಕ್ಕೆ ಸಾರ್ವಜನಿಕರು, ಸಂಘ ಸಂಸ್ಥೆಗಳ ನೆರವು ಅತ್ಯಂತ ಅಗತ್ಯ ಎಂದು ಶಿವಮೊಗ್ಗ ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಾನಿಕ ಆಯುಕ್ತ ಜಿ.ವಿಜಯ್‌ಕುಮಾರ್ ಹೇಳಿದರು.

ಶಿವಮೊಗ್ಗ ನಗರದಲ್ಲಿರುವ ಸ್ಕೌಟ್ ಭವನದಲ್ಲಿ ವಿವಿಧ ಪ್ರೌಢಶಾಲೆಯ ಗೈಡ್ಸ್ ಮಕ್ಕಳಿಗೆ ಆಯೋಜಿಸಿದ್ದ ಉಚಿತ ಆರೋಗ್ಯ ಮಾಹಿತಿ ಹಾಗೂ ಜಂತುಹುಳ ನಿವರಣಾ ಮಾತ್ರೆ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅದ್ಭುತ ಯೋಜನೆ ಸಾಕಾರಕ್ಕೆ ಎಲ್ಲರ ಪಾಲ್ಗೊಳ್ಳುವಿಕೆ ಮುಖ್ಯ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ನೀರಿಕ್ಷಕ ಎಂ.ಎ.ಅತ್ತರ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪ್ರಾಮುಖ್ಯತೆ ನೀಡಬೇಕು. ಆರೋಗ್ಯ ಸದೃಢವಾಗಿದ್ದರೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಸಾಧಿಸಲು ಸಹಕಾರಿ ಆಗುತ್ತದೆ. ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿರಲು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು ಎಂದರು.

ಅನಿಮಿಯದಿಂದ ಸಾಕಷ್ಟು ಜನರು ತೊಂದರೆಗೆ ಒಳಗಾಗುತ್ತಿದ್ದಾರೆ. ಅಸಾಂಕ್ರಾಮಿಕ ರೋಗಗಳಿಗೆ ಹೃದಯಾಘಾತ, ಕಿಡ್ನಿ ವೈಫಲ್ಯ, ದೃಷ್ಠಿ ಹೀನತೆ, ಗ್ಯಾಂಗ್ರೀನ್, ರೋಗನಿರೋಧಕ ಶಕ್ತಿ ಕುಂದುವುದು, ಲೈಂಗಿಕ ದೌರ್ಬಲ್ಯ ಉಂಟಾಗಬಹುದು ಎಂದು ತಿಳಿಸಿದರು.

ತಾಲೂಕು ಹಿರಿಯ ಆರೋಗ್ಯ ನೀರಿಕ್ಷಕ ಎಸ್,ಆರ್.ಮಂಜುನಾಥ್ ಮಾತನಾಡಿ, ಕುಷ್ಠರೋಗದ ಅರಿವು ಮತ್ತು ಕ್ಷಯರೋಗದ ಲಕ್ಷಣಗಳು, ಪರಿಹಾರದ ಬಗ್ಗೆ ಮಕ್ಕಳಿಗೆ ಸವಿಸ್ತಾರವಾಗಿ ತಿಳಿಸಿದರು.

Malaria  ಸ್ಥಳೀಯ ಸಂಸ್ಥೆಗಳ ಕಾರ್ಯದರ್ಶಿ ರಾಜೇಶ್ ಅವಲಕ್ಕಿ ಮಾತನಾಡಿ, ಪ್ರತಿ ವರ್ಷ ಆರೋಗ್ಯ ಇಲಾಖೆಯ ಸೇವೆ ನಾವು ಮರೆಯುವಂತಿಲ್ಲ. ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಸಹಕಾರ ನೀಡುತ್ತ ಬಂದಿದ್ದಾರೆ ಎಂದು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಮಕ್ಕಳಿಗೆ ಕಬ್ಬಿಣಾಂಶ ಇರುವ ಮಾತ್ರೆಗಳನ್ನು ವಿತರಿಸಲಾಯಿತು. ಜಂತುಹುಳ ನಿವಾರಣಾ ಮಾತ್ರೆಗಳನ್ನು ವಿತರಿಸಲಾಯಿತು.

ಸಮಾರಂಭದಲ್ಲಿ ರಾಜ್ಯ ಸಂಘಟನಾ ಆಯುಕ್ತ ಭಾರತಿ ಡಯಾಸ್, ಜಿ.ವಿಜಯ್‌ಕುಮಾರ್, ಮಂಜುನಾಥ, ಅತ್ತರ್, ದೇವಪ್ಪ, ರುಕ್ಸಾನಾ, ಭರತ್ ಹಾಗೂ ವಿವಿಧ ಶಾಲೆಯಿಂದ ಆಗಮಿಸಿದ್ದ ಮಕ್ಕಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Science Day ಪ್ರತಿ ಮಗುವಿನಲ್ಲಿಯೂ ವಿಶೇಷ ಕೌಶಲ ಹುದುಗಿದೆ-ಪ್ರೊ.ಪ್ರಭಾಕರ್

0

Science Day ಶಿವಮೊಗ್ಗ : ಮೇಲಿನ ಹನಸವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ವಿಭಿನ್ನವಾಗಿ ಆಚರಿಸಲಾಯಿತು.

5,6ಮತ್ತು 7ನೇ ತರಗತಿಯ ಮಕ್ಕಳು ಸಣ್ಣ, ಸಣ್ಣ ಪ್ರಯೋಗಗಳನ್ನು ಪ್ರದರ್ಶಿಸಿದ್ದು, ಮಕ್ಕಳಲ್ಲಿ ಏಕೆ, ಏನು, ಹೇಗೆ ಎಂಬ ಪ್ರಶ್ನೆಗಳನ್ನು ಮನಸ್ಸಿನಲ್ಲಿ ಹುಟ್ಟು ಹಾಕಿತು. ಜೊತೆಗೆ ವೈಜ್ಞಾನಿಕ ಮನೋಭಾವ ಬೆಳೆಸುವ ಸಂಶೋದನೆ ಕೈಗೊಳ್ಳುವ ಪ್ರೇರಣೆಯನ್ನು ಉಂಟು ಮಾಡಿತು.ಕಾರ್ಯಕ್ರಮವನ್ನು ವೈಜ್ಞಾನಿಕ ಪರಿಕರಗಳನ್ನು ಉಪಯೋಗಿಸಿ ಉದ್ಘಾಟಿಸಲಾಯಿತು.

ಇದು ನೆರೆದಿದ್ದ ಪೋಷಕರು ಹಾಗೂ ಗಣ್ಯರಲ್ಲಿ ಅಚ್ಚರಿ ಮತ್ತು ಕುತೂಹಲ ಉಂಟು ಮಾಡಿತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಹ್ಯಾದ್ರಿ ವಿಜ್ಞಾ ಕಾಲೇಜಿನ ಪ್ರೊ.ಪ್ರಭಾಕರ್ ಅತ್ಯಂತ ಸರಳವಾಗಿ ಮಕ್ಕಳಿಗೆ ಅರ್ಥವಾಗುವಂತೆ ವಿಜ್ಞಾನ ದಿನಾಚರಣೆಯ ಹಿನ್ನೆಲೆ, ಅದರ ಮಹತ್ವ ವಿವರಿಸಿದರು.

ನಮ್ಮ ಸುತ್ತ ಮುತ್ತ ನಡೆಯುವ ಪ್ರತಿಯೊಂದು ಚಟುವಟಿಕೆಯಲ್ಲೂ ವಿಜ್ಞಾನ ಅಡಗಿರುತ್ತದೆ. ನಾವು ಅದನ್ನು ಅವಲೋಕನ, ವೀಕ್ಷಣೆ ಮಾಡುವುದರಿಂದ ನಮ್ಮಲ್ಲಿ ಏಕೆ, ಹೇಗೆ ಎಂಬ ಪ್ರಶ್ನೆಗಳು ಮೂಡಿ ಅದನ್ನು ತಿಳಿಯುವ ಆಸಕ್ತಿ ಬೆಳೆಯುತ್ತದೆ ಎಂದರು.ಥಾಮಸ್ ಆಲ್ವಾ ಎಡಿಸನ್, ಆರ್ಕಿಮಿಡೀಸ್‌ರವರ ಕಥೆ ಹೇಳುತ್ತ, ಪ್ರತಿ ಮಗುವಿನಲ್ಲಿ ವಿಶೇಷವಾದ ಕೌಶಲ್ಯ ಹುದುಗಿದೆ. ಅದನ್ನು ಹೆಕ್ಕಿ ತೆಗೆಯಬೇಕಾದ್ದು ಶಿಕ್ಷöಕರ, ಪೋಷಕರ ಕರ್ತವ್ಯ ಎಂದು ತಿಳಿಸಿದರು.ಪಿಹೆಚ್‌ಡಿ ವಿದ್ಯಾರ್ಥಿಗಳಾದ ಕಿರಣ್, ಸಿದ್ದೇಶ್ ಮಕ್ಕಳೊಂದಿಗೆ ತಮ್ಮ ಅನುಭವ ಹಂಚಿಕೊಂಡರು.

Science Day ಮಕ್ಕಳೇ ತಯಾರಿಸಿ ಅಚ್ಚುಕಟ್ಟಾಗಿ ಜೋಡಿಸದ್ದ ಇತರ ಕಲಿಕೋಪಕರಣಗಳನ್ನು ವೀಕ್ಷಿಸಿ ಮಕ್ಕಳೊಂದಿಗೆ ಸಂವಹನ ನಡೆಸಿ ಮಾಹಿತಿ ತಿಳಿದರು.ಜಿಲ್ಲಾ ಶಿಕ್ಷöಕರ ಸಂಘದ ಅಧ್ಯಕ್ಷ ಡಿ.ಬಿ.ರುದ್ರಪ್ಪ, ತಾಲ್ಲೂಕು ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಚನ್ನಮಲ್ಲಪ್ಪ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಯೋಗೀಶ್ ಕಾರ್ಯಕ್ರಮವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಎಸ್‌ಡಿಎಂಸಿ ಅಧ್ಯಕ್ಷöರು, ಸದಸ್ಯರು, ಪೋಷಕರು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷöರು ಉಪಸ್ಥಿತರಿದ್ದರು. 

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Criticism From Journalist ಹಿರಿಯ ಪತ್ರಕರ್ತ ಹಾಲಸ್ವಾಮಿ ಅವರಿಗೆ ಪೊಲೀಸ್ ಇಲಾಖೆ ಅಧಿಕಾರಿಯಿಂದ ಕಿರುಕುಳ ಪತ್ರಕರ್ತರಿಂದ ಖಂಡನೆ

0



 Criticism From Journalist  ಸೋಗಾನೆಯ ನೂತನ ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭದ ವರದಿಗಾಗಿ ತೆರಳಿದ್ದ ಹಿರಿಯ ಪತ್ರಕರ್ತ ಆರ್.ಎಸ್ ಹಾಲಸ್ವಾಮಿ ( ಟಿ ವಿ ಭಾರತ್ ) ಅವರನ್ನು ಅಕ್ರಮವಾಗಿ ಪೊಲೀಸ್ ವ್ಯಾನಿನಲ್ಲಿ ಕೂಡಿಟ್ಟು, ಉದ್ದಟನತದಿಂದ ವರ್ತಿಸಿದ ದಾವಣಗೆರೆ ಜಿಲ್ಲಾ ರಕ್ಷಣಾಧಿಕಾರಿ ಸಿ. ಬಿ. ರಿಷ್ಯಂತ್ ಅವರನಡೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆ ತೀವ್ರವಾಗಿ ಖಂಡಿಸುತ್ತದೆ ಅಲ್ಲದೇ ಉದ್ಧಟನ ತೋರಿದ ಅವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರವರಿಗೆ ಪತ್ರವನ್ನೂ ಸಹ ಬರೆದಿದೆ.

ಫೆ. 27 ರಂದು ಶಿವಮೊಗ್ಗ ನಗರದ ಸೋಗಾನೆಯ ನೂತನ ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭ ಮುಕ್ತಾಯವಾಗಿ ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲಾ ಅತಿಗಣ್ಯರು ವೇದಿಕೆಯಿಂದ ನಿರ್ಗಮಿಸಿದ್ದರು.

ಈ ಸಂದರ್ಭದಲ್ಲಿ ಸಾರ್ವಜನಿಕರು ಸಭಾಸ್ಥಳದಿಂದ ಹೊರ ಬರಲಾರಂಭಿಸಿದ್ದು, ವಿಮಾನ ನಿಲ್ದಾಣದ ಕಡೆಗೆ ಹೋಗುವ ಉತ್ಸಾಹದಲ್ಲಿದ್ದರು. ಆದರೆ ಅವರನ್ನು ತಡೆಯುವಲ್ಲಿ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ದಾವಣಗೆರೆಯ ಎಸ್ಪಿ ಸಿ.ಬಿ ರಿಷ್ಯಂತ್ ಅವರು ಸಮಯ ಪ್ರಜ್ಞೆಯಿಂದ ಕೆಲಸ ಮಾಡದೆ, ಪರಿಸ್ಥಿತಿ ಅಂತಹ ಗಂಭೀರವಲ್ಲದಿದ್ದರೂ ಲಾಠಿ ಚಾರ್ಜ್ ನಡೆಸಿ, ಉದ್ಧಟತನ ಪ್ರದರ್ಶಿಸಿದ್ದಾರೆ ಎಂದು ದೂರಲಾಗಿದೆ.

ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಟಿವಿ ಭಾರತ್‌ನ ಸಂಪಾದಕರಾದ ಆರ್.ಎಸ್ ಹಾಲಸ್ವಾಮಿ ಅವರು ಒಟ್ಟಾರೆ ಪರಿಸ್ಥಿತಿಯ ಚಿತ್ರೀಕರಣದಲ್ಲಿ ತೊಡಗಿದೆ. ಲಾಠಿ ಚಾರ್ಜ್ ಘಟನೆಯನ್ನು ಚಿತ್ರೀಕರಿಸಿಕೊಂಡಿದ್ದರು.

 Criticism From Journalist  ಇದನ್ನು ಕಂಡ ಎಸ್ಪಿ ರಿಷ್ಯಂತ್ ಅವರು ತಕ್ಷಣವೆ ಪೊಲೀಸ್ ಸಿಬ್ಬಂದಿಗಳ ಮೂಲಕ ಅವರನ್ನು ಬಲವಂತವಾಗಿ ಹಿಡಿದು ಎಳೆದೊಯ್ಯದು ಪೊಲೀಸ್ ವ್ಯಾನಿನಲ್ಲಿ ಕೂಡಿ ಹಾಕಿದ್ದಲ್ಲದೆ , ಮೊಬೈಲ್ ಕಿತ್ತುಕೊಂಡು ಅದರಲ್ಲಿದ್ದ ವಿಡಿಯೋಗಳನ್ನು ಡಿಲಿಟ್ ಮಾಡಿದ್ದಾರೆ ಎಂದು ಆರೋಪಿಸಿರುವ ಸಂಘದ ಪದಾಧಿಕಾರಿಗಳು, ಪತ್ರಕರ್ತರ ಆರ್ ಎಸ್ ಹಾಲಸ್ವಾಮಿ ತಾನೊಬ್ಬ ಪತ್ರಕರ್ತ ಎಂದೂ ಮತ್ತು ಜಿಲ್ಲಾ ಪೊಲೀಸ್ ಇಲಾಖೆ -ಜಿಲ್ಲಾಡಳಿತ ನೀಡಿದ ಗುರುತಿನ ಚೀಟಿ ಧರಿಸಿದ್ದರೂ ಅದಾವುದನ್ನು ಮಾನ್ಯ ಮಾಡದೆ ದಾವಣಗೆರೆ ಎಸ್ಪಿ ಅತಿರೇಕದಿಂದ ವರ್ತಿಸಿದ್ದಾರೆ. ಅಸಭ್ಯ ಮಾತುಗಳಿಂದ ಅವಮಾನಿಸಿದ್ದಾರೆ. ಸುಮಾರು ಒಂದು ಗಂಟೆಗೂ ಹೆಚ್ಚಿನ ಕಾಲ ಪತ್ರಕರ್ತ ಹಾಲಸ್ವಾಮಿ ಅವರನ್ನು ವ್ಯಾನಿನಲ್ಲಿ ಅಕ್ರಮವಾಗಿ ಕೂಡಿಟ್ಟು, ಗಂಭೀರ ಕೇಸುಗಳನ್ನಾಕಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಕೊನೆಗೆ ಮೊಬೈಲ್‌ನಲ್ಲಿದ್ದ ಎಲ್ಲಾ ವಿಡಿಯೋಗಳನ್ನು ಡಿಲಿಟ್ ಮಾಡಿ ಬಿಟ್ಟು ಕಳುಹಿಸಿದ್ದಾರೆ ಎಂದಿದ್ದಾರೆ.

ದಾವಣಗೆರೆ ಎಸ್ಪಿಯ ಈ ವರ್ತನೆ ಆಘಾತಕಾರಿಯಾದದ್ದು, ಸ್ಥಳದ ಸನ್ನಿವೇಶವನ್ನು ಪೊಲೀಸ್ ಅಧಿಕಾರಿಯಾಗಿ ನಿರ್ವಹಿಸುವಲ್ಲಿ ವಿಫಲವಾಗಿದ್ದಾರೆ. ತಾನೊಬ್ಬ ಐಪಿಎಸ್ ಅಽಕಾರಿ ಎಂಬ ಅಹಂಕಾರ ಪ್ರದರ್ಶಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ಹತ್ತಿಕ್ಕುವ ಅವರಲ್ಲಿನ ಧೋರಣೆ ಅಪಾಯಕಾರಿಯಾಗಿ ಕಂಡು ಬರುತ್ತಿದೆ ಎಂದಿರುವ ಅವರು, ಟವಿ ಭಾರತ್ ಸಂಪಾದಕರಾದ ಆರ್.ಎಸ್ ಹಾಲಸ್ವಾಮಿ ಅವರು ಕಳೆದ 25 ವರ್ಷಗಳಿಂದ ಕರ್ನಾಟಕದ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಬಂದಿದ್ದಾರೆ. ಅಪಾರವಾದ ಅನುಭವ, ಎಂತಹುದ್ದೇ ಪರಿಸ್ಥಿತಿಯಲ್ಲೆ ಹೇಗೆ ತನ್ನ ಕಾರ್ಯನಿರ್ವಹಿಸಬೇಕೆಂಬ ಅರಿವು ಅವರಿಗಿದೆ. ಇಂತಹ ಪತ್ರಕರ್ತರನ್ನು ಅಕ್ರಮವಾಗಿ ಕೂಡಿಟ್ಟು, ಅವಮಾನಿಸಿ, ಪತ್ರಕರ್ತನ ಕೆಲಸಕ್ಕೆ ಅಡ್ಡಿಪಡಿಸಿರುವ ದಾವಣಗೆರೆ ಎಸ್ಪಿ ರಿಷ್ಯಂತ್ ಅವರ ವರ್ತನೆ ಅತ್ಯಂತ ಖಂಡನೀಯವಾದುದ್ದು, ಅವರ ಇಂತಹ ಅತಿರೇಕದ ವರ್ತನೆಗಳು ಪೊಲೀಸ್ ಇಲಾಖೆಯ ಘನತೆಗೆ ಕಪ್ಪುಮಸಿ ಬಳಿಯುವಂತದ್ದಾಗಿದೆ. ಎಸ್ಪಿ ರಿಷ್ಯಂತ್ ವಿರುದ್ದ ಶಿಸ್ತುಕ್ರಮ ಜರುಗಿಸಬೇಕು ಎಂದು ರಾಜ್ಯಗೃಹ ಸಚಿವರಿಗೆ , ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಮೂಲಕ ಆಗ್ರಹಿಸಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆಯ ಅಧ್ಯಕ್ಷರಾದ ಕೆ. ವಿ. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ವಿ.ಟಿ ರಾಜ್ಯ ಸಮಿತಿ ನಿರ್ದೇಶಕರಾದ ಎನ್.ರವಿಕುಮಾರ್ ಅವರುಗಳು ಎಸ್ಪಿ ರಿಷ್ಯಂತ್ ಅವರು ಪತ್ರಕರ್ತ ಹಾಲಸ್ವಾಮಿ ಅವರಲ್ಲಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Government Employee Strike ಸರ್ಕಾರಿ ನೌಕರರ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ-ಮಧುಕುಮಾರ್

0



Government Employee Strike ಸರ್ಕಾರಿ ನೌಕರರ ಮುಷ್ಕರದಿಂದ ಉಂಟಾಗುತ್ತಿರುವ ಸಾರ್ವಜನಿಕರ ತೊಂದರೆಗೆ ಸರ್ಕಾರವೇ ನೇರ ಕಾರಣ ಎಂದು ಶಿವಮೊಗ್ಗದ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ ಜಿ.ಮಧುಕುಮಾರ್ ಅವರು ಕಿಡಿ ಕಾರಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ‘ಸರ್ಕಾರಿ ನೌಕರರು 7ನೇ ವೇತನ ಆಯೋಗ, ಹಿಂದಿನ ಪಿಂಚಣಿ ಯೋಜನೆ ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸುತ್ತಿರುವುದು ತಪ್ಪೇನಲ್ಲ. ಆದರೆ, ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರ ನಡೆಸುತ್ತಿರುವುದರಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ನೌಕರರು ಹಾಗೂ ಸರ್ಕಾರದ ನಡುವಿನ ಹಗ್ಗ ಜಗ್ಗಾಟದಲ್ಲಿ ಜನಸಾಮಾನ್ಯರು ಹೈರಾಣಾಗುತ್ತಿದ್ದಾರೆ ಎಂದು ಮಧು ಬೇಸರ ವ್ಯಕ್ತಪಡಿಸಿದ್ದಾರೆ.

ಪೂರ್ವ ನಿಯೋಜಿತ ಮುಷ್ಕರ ಇದಾಗಿದ್ದರೂ ಸರ್ಕಾರ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಇದರಿಂದ ಜನರು ಪರದಾಡುವಂತಾಗಿದೆ. ಹಲವೆಡೆ ವೃದ್ಧರು, ಮಹಿಳೆಯರು, ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಸರ್ಕಾರಿ ಕಚೇರಿಗಳಲ್ಲಿ ಕಾದು ಕಾದು ಹಿಡಿಶಾಪ ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ತಾಲ್ಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಗ್ರಾಮ ಪಂಚಾಯಿತಿ, ಸರ್ಕಾರಿ ಶಾಲೆಗಳು, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ, ಸರ್ಕಾರಿ ಹಾಸ್ಟೆಲ್, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಹೀಗೆ ಹಲವೆಡೆ ಜನರು ತತ್ತರಿಸಿ ಹೋಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕು ಕಚೇರಿಗಳಲ್ಲಿ ಸಾಮಾನ್ಯವಾಗಿ ಜಮೀನುಗಳಿಗೆ ಸಂಬಂಧಿಸಿದ ವಿಚಾರಗಳನ್ನು
ಮುಂದಿಟ್ಟು ಕೊಂಡು ತಾಲೂಕಿನ ವಿವಿಧ ಭಾಗಗಳಿಂದ ರೈತರು, ಕೃಷಿ ಕಾರ್ಮಿಕರು ಮತ್ತು ನಾಗರಿಕರು ಆಗಮಿಸಿ ಬರಿಗೈಲಿ ವಾಪಾಸಾಗುತ್ತಿದ್ದಾರೆ.
ಇನ್ನೂ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣಪತ್ರ ಸೇರಿದಂತೆ ತುರ್ತಾಗಿ ಪಡೆಯಬೇಕಾದ ಪ್ರಮಾಣ ಪತ್ರಗಳು ಪಡೆಯಲಾಗದೇ ತೊಂದರೆಗೆ ಸಿಲುಕಿದ್ದಾರೆ ಎಂದಿದ್ದಾರೆ.

Government Employee Strike ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಸೌಲಭ್ಯಗಳನ್ನು 2022 ಜುಲೈ 1ರಿಂದಲೇ ಜಾರಿಗೊಳಿಸಬೇಕಾಗಿತ್ತು. ಆದರೆ ಸರ್ಕಾರ ಇದುವರೆಗೂ ಜಾರಿಗೊಳಿಸಿಲ್ಲ. ಅಲ್ಲದೇ, ರಾಜ್ಯದ 2023-24ನೇ ಸಾಲಿನ ಬಜೆಟ್‍ನಲ್ಲಿ ಸರ್ಕಾರಿ ನೌಕರರ ವೇತನ-ಭತ್ಯೆಗಳ ಪರಿಷ್ಕರಣೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಪ್ರಸ್ತಾಪ ಮಾಡಿಲ್ಲ. ನೌಕರರ ವೇತನ ಪರಿಷ್ಕರಣೆ ಮಾಡಿ ಆರ್ಥಿಕ ವ್ಯತ್ಯಾಸಗಳನ್ನು ಸರಿಪಡಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು ಈ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರಿರುವುದೇ ಇಷ್ಟೆಲ್ಲಾ ಅನಾಹುತಕ್ಕೆ ಕಾರಣ ಎಂದು ಅವರು ಆರೋಪಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Grammar Test ಶ್ರೀಮತಿ ಶ್ರೀಲಕ್ಷ್ಮೀ ಶ್ರೀಪತಿರಾವ್ ಗಮಕ ಪರೀಕ್ಷೆಯಲ್ಲಿ ತೃತೀಯ ಶ್ರೇಣಿ

0



Grammar Test ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು. ಇವರು ನಡೆಸುವ ಗಮಕ ಪ್ರಥಮ ಹಂತ ದ ಪರೀಕ್ಷೆ ಯಲ್ಲಿ ಹೊಸನಗರ ದ ಶ್ರೀಲಕ್ಷ್ಮಿ ಶ್ರೀಪತಿ ರಾವ್ ಇವರಿಗೆ ತೃತೀಯ ರ್ಯಾಂಕ್ ಬಂದಿದೆ.

Grammar Test ಇವರು ಹೊಸನಗರ ದ ರಾಗ ಲಹರಿ ಸಂಗೀತ ಮತ್ತು ಗಮಕ ಶಾಲೆ ಯ ಶಿಕ್ಷಕಿ ಶ್ರೀಮತಿ ಅನುಪಮ ಸುರೇಶ್ ಇವರ ಬಳಿ ಗಮಕ ಪಾಠ ಕಲಿತು ಪರೀಕ್ಷೆ ತೆಗೆದುಕೊಂಡಿದ್ದರು.

ಇವರಿಗೆ ಗಮಕ ಶಾಲೆ ಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು. ಇವರು ಹೊಸನಗರ ದ ಶ್ರೀ ರಾಮಕೃಷ್ಣ ಶಾಲೆ ಯ ಶಿಕ್ಷಕಿ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.