Thursday, November 19, 2026
Thursday, November 19, 2026
Home Blog Page 1166

B.Y.Raghavendra ಅಭಿವೃದ್ಧಿಯು ದೇಶದ ಕಟ್ಟಕಡೆಯ ವ್ಯಕ್ತಿಗೂ ತಲುಪಿರುವುದು ಮೋದೀಜಿ ಅವರ ಸಾಧನೆ- ಸಂಸದ ರಾಘವೇಂದ್ರ

0

B.Y.Raghavendra ಸ್ವಾತಂತ್ರ್ಯ ಬಂದು ಆರು ದಶಕದಲ್ಲಿ ಕಾಣದ ಅಭಿವೃದ್ಧಿ, ಕೇವಲ 10 ವರ್ಷಗಳಲ್ಲಿ ಗ್ರಾಮೀಣ ಪ್ರದೇಶದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿರುವುದು ಕೇಂದ್ರದ ಮೋದಿಜಿ ಸರ್ಕಾರದ ಸಾಧನೆಯಾಗಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ ವೈ ರಾಘವೇಂದ್ರ ಹೇಳಿದರು.

ರಿಪ್ಪನ್ ಪೇಟೆ ಪಟ್ಟಣದ ಭೂಪಾಳ ಚಂದ್ರಶೇಖರಯ್ಯ ಸಭಾಭವನದಲ್ಲಿ ಆಯೋಜಿಸಿದ್ದ ಕೇಂದ್ರದ ವಿಕಸಿತ ಸಂಕಲ್ಪ ಯಾತ್ರೆ ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಅಭಿವೃದ್ಧಿಯನ್ನು ಹೊಂದಿದ, ಅಭಿವೃದ್ಧಿ ಹೊಂದುತ್ತಿರುವ ಹಾಗೂ ಅಭಿವೃದ್ಧಿ ಹೊಂದದ ದೇಶಗಳಾಗಿ ಪ್ರಪಂಚವನ್ನು ಮೂರು ವಿಭಜನೆ ಮಾಡಿದರೆ, ಭಾರತವು ಎರಡನೇ ಪಟ್ಟಿಯಲ್ಲಿದೆ.ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಯನ್ನು ಇಟ್ಟುಕೊಂಡು, ಕೇಂದ್ರ ಸಚಿವರ ಸಮ್ಮುಖದಲ್ಲಿ ಸುಮಾರು ನಾಲ್ಕು ತಿಂಗಳಲ್ಲಿ ರೂ 2500 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿ ಜರುಗಲಿದೆ ಎಂದರು.

ಈಗಾಗಲೇ 16,000 ಕೋಟಿ ಕಾಮಗಾರಿ ಪೂರ್ಣವಾಗಿದ್ದು, ತುಂಗಾ ಸೇತುವೆ ಬಳಿ 22 ಕೋಟಿ ವೆಚ್ಚದ ಕಾಮಗಾರಿ ಲೋಕಾರ್ಪಣೆಗೊಳ್ಳಲಿದೆ ಎಂದರು.

2.25 ಲಕ್ಷ ಜನರಿಗೆ 128 ಕೋಟಿ ರೂ ವೆಚ್ಚದಲ್ಲಿ ಕೇಂದ್ರ ಸರ್ಕಾರದ ಆರ್ಥಿಕ ನೆರವಿನ ಸೌಲಭ್ಯ ಪಡೆದಿದ್ದಾರೆಂದು ವಿವರಿಸಿದರು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಆ ಕಿಸಾನ್ ಸನ್ಮಾನ ಫಸಲು ಭೀಮಾ ಕೃಷಿ ಸಿಂಚೆಯ ಮಹಿಳಾ ಸಬಲೀಕರಣ ಜನೌಷಧಿ ಉಜಾಲ ಯೋಜನೆ ಜನಧನ್ ಮುದ್ರಾ ಯೋಜನೆ ಯಿಂದ ರೈತ ಕುಟುಂಬಗಳು ಸೇರಿದಂತೆ ಕುಶಲ ಕಸುಬುದಾರರು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಕೇಂದ್ರ ಸರ್ಕಾರ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.

B.Y.Raghavendra ಈ ಕುರಿತು ವಿಕಸಿತ ಸಂಕಲ್ಪ ಕಾರ್ಯಕ್ರಮವನ್ನು ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪ್ರಚಾರಪಡಿಸಲಾಗುತ್ತಿದ್ದ. ಈ ಯೋಜನೆಯ ಬಗ್ಗೆ ನಮ್ಮ ಪಕ್ಷದ ಕಾರ್ಯಕರ್ತರು ತಲುಪಿಸುವ ಎಂದು ಕರೆ ನೀಡಿದರು.

ಮಾಜಿ ಸಚಿವ ಹರತಾಳು ಹಾಲಪ್ಪ ಧನಲಕ್ಷ್ಮಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ ಗ್ರಾಮ ಪಂಚಾಯತ್ ಸದಸ್ಯ ಪಿಪಿ ರಮೇಶ್ ಮಂಜುಳಾ. ಅಶ್ವಿನಿ ರವಿಶಂಕರ್ ದೀಪ ಸುಧೀರ್ ವಿನೋದ ಹಿರಿಯಣ್ಣ ಜಿ.ಡಿ ಮಲ್ಲಿಕಾರ್ಜುನ ಮಧುಸೂದನ್ ಸುಂದರೇಶ್ ನವಾಡ್ ಯೋಜನೆಯ ಜಿಲ್ಲಾ ವ್ಯವಸ್ಥಾಪಕ ಶರತ್. ವ್ಯವಸ್ಥಾಪಕ ದೇವರಾಜ್ ಇನ್ನಿತರ ಹಾಜರಿದ್ದರು ನಾಗರತ್ನ ಪ್ರಾರ್ಥಿಸಿದರು ಸ್ವಾಗತಿಸಿದರು ನಿರೂಪಿಸಿದರು.

DVS School Shivamogga ರಾಜ್ಯಮಟ್ಟದ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಶ್ರೀನಿವಾಸ್ ಗೆ ದ್ವಿತೀಯ ಸ್ಥಾನ

0

DVS School Shivamogga ಶಾಲಾ ಶಿಕ್ಷಣ ಇಲಾಖೆ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಆಯೋಜಿಸಿದ ಬಾಲಕ ಬಾಲಕಿಯರ 14/17 ವಯೋಮಿತಿ ಒಳಗಿನ ರಾಜ್ಯ ಮಟ್ಟದ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಶಿವಮೊಗ್ಗ ಜಿಲ್ಲೆಯನ್ನು ಪ್ರತಿನಿಧಿಸಿದ ಕಲ್ಲುಗಂಗೂರು ಗ್ರಾಮದ ಶ್ರೀಮತಿ ಸುಮಾ ಹಾಗೂ ರಾಮಚಂದ್ರ ದಂಪತಿಗಳ ಪುತ್ರ ಶಿವಮೊಗ್ಗ ನಗರದ ಡಿ ವಿ ಎಸ್ ಶಾಲೆಯ ವಿದ್ಯಾರ್ಥಿ ಶ್ರೀನಿವಾಸ್ 14 ವರ್ಷ ವಯೋಮಿತಿ ಒಳಗಿನ 48-50 ಕೆಜಿ ತೂಕದ ವಿಭಾಗದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದಿದ್ದು ಶಿಕ್ಷಣ ಇಲಾಖೆ ಯು ಇದೇ ಮೊದಲ ಬಾರಿಗೆ ರಾಜ್ಯದಿಂದ ತಂಡ ಕಳುಹಿಸಲು ರಾಜ್ಯಮಟ್ಟದ ಬಾಕ್ಸಿಂಗ್ ಪಂದ್ಯಾವಳಿ ಆಯೋಜಿಸಲಾಗಿದೆ.

DVS School Shivamogga ಈ ಪಂದ್ಯಾವಳಿಯಲ್ಲಿ ಬಾಕ್ಸಿಂಗ್ ಕ್ರೀಡೆಯಲ್ಲಿ ಜಿಲ್ಲೆಗೆ ಪದಕ ತಂದ ಮೊದಲ ಕ್ರೀಡಾಪಟು ಶ್ರೀನಿವಾಸ್ ಆಗಿದ್ದು ವಿಜೇತ ಕ್ರೀಡಾಪಟುವಿಗೆ
ಕೋಚ್ ಮೀನಾಕ್ಷಿ ತರಬೇತಿ ನೀಡಿದ್ದು ಸಹ ತರಬೇತಿದಾರನಾಗಿ ದಿಗಂತ್ ಕ್ರೀಡಾಪಟುವಿಗೆ ತರಬೇತಿ ನೀಡಿದ್ದು ಕ್ರೀಡಾಪಟುವಿಗೆ ಕಲ್ಲು ಗಂಗೂರು ಗ್ರಾಮಸ್ಥರು ಸೇರಿದಂತೆ ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಸಹ ಕಾರ್ಯದರ್ಶಿ, ಶಿವಮೊಗ್ಗ ವಿನೋದ್ ಅಭಿನಂದನೆಗಳನ್ನು ತಿಳಿಸಿದ್ದಾರೆ

Sri Ramakrishna Residential Vidyalaya ಸಂಸ್ಕಾರವಂತ ಶಿಕ್ಷಣದಿಂದ ಮಾತ್ರ ಭವ್ಯಭಾರತದ ಕನಸು ನನಸಾಗಲು ಸಾಧ್ಯ

0

Sri Ramakrishna Residential Vidyalaya ಸಂಸ್ಕಾರವಂತ ಶಿಕ್ಷಣದಿಂದ ಮಾತ್ರ ಭವ್ಯ ಭಾರತದ ಕನಸು ನನಸಾಗಿಸಲು ಸಾಧ್ಯ ಎಂದು ತಾಳಗುಪ್ಪದ ಕೂಡಲಿಮಠದ ವಿದ್ವಾನ್ ಸಿದ್ದವೀರ ಮಹಾಸ್ವಾಮಿಗಳು ಹೇಳಿದರು.

ಅವರು ಸಾಗರದ ಎಂ.ಎಲ್.ಹಳ್ಳಿಯಲ್ಲಿರುವ ಶ್ರೀ ರಾಮಕೃಷ್ಣ ವಸತಿ ವಿದ್ಯಾಲಯದ ಆವರಣದಲ್ಲಿ ಶ್ರಿಮಾತೆ ಶಾರದಾದೇವಿ ಜಯಂತಿ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಆಶಿರ್ವಚನ ನೀಡಿದರು.

ಗುರುಕುಲ ಮಾದರಿಯ ಶಿಕ್ಷಣ ನೀಡುತ್ತಿರುವ ರಾಮಕೃಷ್ನ ವಸತಿ ಶಾಲೆಯ ವಾತಾವರಣವೇ ಹಸಿರೀಕರಣದಿಂದ ಆವರಿಸಿದೆ.ಜೊತೆಗೆ ಮಕ್ಕಳಿಗೆ ಸಂಸ್ಕೃತಿ,ಸಾಹಿತ್ಯ,ಕ್ರೀಡೆ ಹಾಗೂ ಸಂಸ್ಕಾರಯುತ ಗುಣಮಟ್ಟದ ಶಿಕ್ಷಣದ ಮೂಲಕ ಸಮಾಜಕ್ಕೆ ಗೌರವಯುತ ವ್ಯಕ್ತಿತ್ವದ ವಿದ್ಯಾರ್ಥಿಗಳನ್ನು ಸೃಷ್ಟಿಸಿ ಕೊಡುಗೆಯಾಗಿ ನೀಡುತ್ತಿರುವ ಕಾರಣ ಇಲ್ಲಿನ ವಿದ್ಯಾರ್ಥಿಗಳು ಗುರು ಹಿರಿಯರನ್ನು ಗೌರವಿಸುವ ಮೂಲಕ ಪೋಷಕರನ್ನು ವೃದ್ಧಾಶ್ರಮದತ್ತ ಕಳುಹಿಸದೇ ಜೀವಿತಾವಧಿಯ ಕೊನೆಯವರೆಗೂ ಶ್ರದ್ದಾ ಭಕ್ತಿಯಿಂದ ಬಾಂಧವ್ಯದಿಂದ ಪೋಷಿಸುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಮಾನವೀಯತೆಯ ಮೌಲ್ಯವನ್ನು ವೃದ್ದಿಸುತ್ತಿರುವ ಗುಣಾತ್ಮಕ ಶಿಕ್ಷಣ ನೀಡುತ್ತಿರುವ ರಾಮಕೃಷ್ಣ ವಸತಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಸೌಭಾಗ್ಯದ ಜೊತೆಗೆ ಪೋಷಕರ ಪೂರ್ವಜನ್ಮದ ಪುಣ್ಯದ ಫಲ ಎಂದು ಇಲ್ಲಿನ ಶಿಕ್ಷಕ ವೃಂದ ಹಾಗೂ ಶಾಲೆಯ ಮುಖ್ಯಸ್ಥರಾದ ದೇವರಾಜ್ ಅವರ ಪರಿಶ್ರಮವನ್ನು ಶ್ಲಾಘಿಸಿದರು.
ಸಾಗರದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಜ್ಞಾನಾನಂದ ಮಹಾರಾಜ್ ಮಾತನಾಡಿ ನವಭಾರತದ ನಿರ್ಮಾಣಕ್ಕೆ ಸಂಸ್ಕೃತಿ ಸಂಸ್ಕಾರವಂತ ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ನೀಡುವಂತಹ ಶಿಕ್ಷಣ ನೀಡುತ್ತಿರುವ ರಾಮಕೃಷ್ಣ ವಸತಿ ಶಾಲೆಯಿಂದ ದೇಶಕ್ಕೆ ಉತ್ತಮ ಯುವ ಶಕ್ತಿಯ ಕೊಡುಗೆ ದೊರೆಯುತ್ತಿದೆ ಎಂದರು.

ಹಣ ಮತ್ತು ಅಧಿಕಾರ ದೊರೆಯುವಂತಹ ಶಿಕ್ಷಣ ಎಲ್ಲಾ ಕಡೆ ದೊರೆಯುತ್ತದೆ.ಆರ್ಥಿಕ ದಾಹದ ಹಿನ್ನೆಲೆಯಲ್ಲಿ ಮಾನವಿಯತೆಯನ್ನೇ ಮರೆಮಾಚಿ ಪೋಷಕರನ್ನು ಪೋಷಿಸುವ ಬದಲಿಗೆ ಹಣ ಕೊಟ್ಟರೇ ವೃದ್ಧಾಶ್ರಮದವರು ನೋಡಿಕೊಳ್ಳುತ್ತಾರೆ ಎಂಬ ತೀರ್ಮಾನಕ್ಕೆ ಬರುವಂತಹ ಅಮಾನವೀಯ ಹಾಗೂ ಬಾಂದವ್ಯರಹಿತ ವರ್ತನೆಗಳ ಯುವಕರ ಸಂಖ್ಯೆ ಹೆಚ್ಚುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದರು.

ಬಲೀಷ್ಠ ಭಾರತದ ನಿರ್ಮಾಣಕ್ಕೆ ರಾಜಕೀಯ,ಆರ್ಥಿಕ ಮತ್ತು ಸೈನಿಕ ಶಕ್ತಿಗಿಂತ ಸಂಸ್ಕಾರಯುತ ಉತ್ತಮ ವ್ಯಕ್ತಿತ್ವದ ಯುವ ಸಮೂಹದ ಅಗತ್ಯ ಹೆಚ್ಚಿದೆ ಎಂದು ವಿದ್ಯಾರ್ಥಿಗಳಿಗೆ ಮತ್ತು ಪೋಷಕರುಗಳಿಗೆ ಕಿವಿಮಾತು ಹೇಳಿದರು.

ಶಿವಮೊಗ್ಗದ ದೊಡ್ಡಮ್ಮ ಮತ್ತು ಜಲದುರ್ಗಮ್ಮ ದೇವಿ ಉಪಾಸಕರಾದ ಸಿದ್ದಪ್ಪಾಜಿ ಮಾತನಾಡಿ ಶಾರದೆಯ ಕೃಪೆಯಿಂದ ಸುಶೀಕ್ಷಿತರಾಗಿ ಜ್ಞಾನದಿಂದ ವಿವೇಕಾಯುತ ಜೀವನ ನಿರ್ವಹಣೆಯ ಮೂಲಕವೇ ಜಗತ್ತನ್ನು ಸೆಳೆಯಲು ಸಾಧ್ಯ ಎಂದರು.

ವಿದ್ಯಾರ್ಥಿಗಳಿಗೆ ಏಕಾಗ್ರತೆ ಮುಖ್ಯವಾಗಿದ್ದು,ನಿರಂತರ ಪರಿಶ್ರಮದ ಮೂಲಕ ಶ್ರದ್ದೆಯಿಂದ ಜ್ಞಾನವಂತರಾದಲ್ಲಿ ಯಾವುದೇ ಆಯುದವಿಲ್ಲದೇ ಸನ್ಮಾರ್ಗದಲ್ಲಿ ಜಗತ್ತನ್ನೇ ಗೆಲ್ಲಲು ಸಾಧ್ಯ ಎನ್ನುವ ಮೂಲಕ ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಪಠೇತರ ಚಟುವಟಿಕೆಗಳ ಮೂಲಕ ಆದ್ಯಾತ್ಮದ ತಳಹದಿಯಲ್ಲಿ ಗುಣಾತ್ಮಕ ಮಾದರಿ ಜೀವನ ನಿರ್ವಹಿಸುವಂತಹ ವ್ಯಕ್ತಿತ್ವ ವಿಕಸನಕ್ಕೆ ಪ್ರಯತ್ನಿಸುವಂತೆ ಕರೆ ನೀಡಿದರು.

ಶ್ರೀ ರಾಮಕೃಷ್ಣ ವಸತಿ ವಿದ್ಯಾಲಯದ ಹಳೆಯ ವಿದ್ಯಾರ್ಥಿ ವೈದ್ಯಕೀಯ ಪ್ರಾಧ್ಯಾಪಕರಾದ ಡಾ.ಶರದ್ ಕುಮಾರ್ ಸನ್ಮಾನ ಸ್ವೀಕರಿಸಿ ಮಾತನಾಡಿ ರಾಮಕೃಷ್ಣ ವಸತಿ ಶಾಲೆಯಲ್ಲಿ ಪ್ರೌಢಶಾಲಾ ಹಂತದಲ್ಲಿ ನನಗೆ ದೊರೆತಿರುವ ಗುಣಾತ್ಮಕ ಹಾಗೂ ಸಂಸ್ಕಾರಯುತ ಶಿಕ್ಷಣ ನನ್ನ ಉನ್ನತ ಶಿಕ್ಷಣ ಹಾಗೂ ವೈದ್ಯಕೀಯ ಪ್ರಾಧ್ಯಪಕನಾಗುವವರೆಗೂ ಅತ್ಯಂತ ಪರಿಣಾಮಕಾರಿ ಅಡಿಪಾಯದಂತೆ ಸಹಕಾರಿಯಾಗಿದೆ ಎಂದು ಸ್ಮರಿಸಿದರು.

Sri Ramakrishna Residential Vidyalaya ಶ್ರೀ ರಾಮಕೃಷ್ಣ ಶಾಲೆಯ ಸಂಸ್ಥಾಪಕರಾದ ದೇವರಾಜ್ ಮಾತನಾಡಿ ವಿದ್ಯಾರ್ಥಿಗಳು ಮತ್ತು ಪೋಷಕರು ಬೇರೆಯವರ ಕೊಳಕನ್ನು ಮತ್ತು ಕೆಟ್ಟದನ್ನು ನೋಡದೇ ಕೇವಲ ಒಳಿತನ್ನು ನೋಡಿ ಒಳ್ಳೆಯವರಾಗುವತ್ತ ಕೇಂದ್ರೀಕೃತವಾಗಬೇಕು ಎಂದು ಕಿವಿಮಾತು ಹೇಳಿದರು.

ಜಗತ್ತಿನಲ್ಲಿ ಹೊಟ್ಟೆಪಾಡಿನ ವಿದ್ಯೆ ಬೇಡ.ಆದರೇ ಆತ್ಮಾನಂದ ನೀಡುವ ಉತ್ತಮ ಜೀವನಕ್ಕೆ ಮಾರ್ಗದರ್ಶನ ನೀಡುವ ಹಾಗೂ ಬೌದ್ಧಿಕ ಮಟ್ಟ ಹೆಚ್ಚಿಸುವ ವ್ಯಕ್ತಿತ್ವ ವಿಕಸನ ಹೊಂದುವಂತಹ ಮಾನವೀಯ ಮೌಲ್ಯಗಳ ಜಾಗೃತಿಗೊಳಿಸುವ ದಿಕ್ಕಿನಲ್ಲಿ ಉತ್ತಮ ಸಂಸ್ಕಾರ ಸಂಸ್ಕೃತಿಯ ತಳಹದಿಯ ಶಿಕ್ಷಣಕ್ಕಾಗಿ ಕಳೆದ 28 ವರ್ಷಗಳಿಂದ ರಾಮಕೃಷ್ಣ ವಿದ್ಯಾ ಸಂಸ್ಥೆ ಟೊಂಕಕಟ್ಟಿ ಶ್ರಮಿಸುತ್ತಿದೆ ಎಂದರು.
ಶಿಕ್ಷಣ ಸಂಸ್ಥೆಯ ನಿರ್ವಹಣೆ ಸುಲಭದ ತುತ್ತಲ್ಲ.ಸವಾಲುಗಳಿವೆ.ಈ ಎಲ್ಲಾ ಸಮಸ್ಯೆಗಳ ನಡುವೆಯೂ ಪೋಷಕರ ಸಹಕಾರವಿದ್ದಲ್ಲಿ ವಿದ್ಯಾರ್ಥಿಗಳಲ್ಲಿ ಕಲಿಯುವ ಆಸಕ್ತಿಯನ್ನು ಕೆರಳಿಸಿ ಸತತ ಶ್ರಮದಿಂದ ಕಲಿಸುವ ಮೂಲಕ ಪೋಷಕರ ನಿರೀಕ್ಷೆಗೂ ಮೀರಿದ ಉತ್ತಮ ವಿದ್ಯಾರ್ಥಿಗಳನ್ನಾಗಿ ಪರಿವರ್ತಿಸುವ ಮೂಲಕ ಸಮಾಜಮುಖಿ ಯುವ ಸಮೂಹವನ್ನು ಸೃಷ್ಟಿಸುವದೇ ನಮ್ಮ ವಿದ್ಯಾ ಸಂಸ್ಥೆಯ ತಪಸ್ಸು ಎಂದು ಘೋಷಿಸಿದರು.

ವೇದಿಕೆಯಲ್ಲಿ ಶಿವಮೊಗ್ಗ ರಾಮಕೃಷ್ಣ ವಿದ್ಯಾ ಸಂಸ್ಥೆಯ ಮುಖ್ಯಸ್ಥೆ ಶೋಭಾವೆಂಕಟರಮಣ,ಮಾತಾ ಭಾಗಿರಥಮ್ಮ,ಮುಖ್ಯ ಶಿಕ್ಷಕಿ ಸವಿತಾದೇವರಾಜ್,ಶಿಕ್ಷಕ ಮನಸೂರ್ ಮೊದಲಾದವರು ಉಪಸ್ಥಿತರಿದ್ದರು

Chikkamagaluru District Ex-Servicemen’s Association ದೇಶ ಕಾಯುವ ಸೈನಿಕರ ಸೇವೆ ಅವಿಸ್ಮರಣೀಯ- ಶಾಸಕ ಎಚ್.ಡಿ.ತಮ್ಮಯ್ಯ

0

Chikkamagaluru District Ex-Servicemen’s Association ಯುದ್ಧಭೂಮಿಯಲ್ಲಿ ಪ್ರಾಣದಹಂಗು ತೊರೆದು ದೇಶವನ್ನು ಕಾಯುತ್ತಿ ರುವ ಸೈನಿಕರ ಸೇವೆ ಅಸ್ಮರಣೀಯ. ಇವರ ತ್ಯಾಗ, ಬಲಿದಾನದಿಂದ ದೇಶದ ಜನತೆ ಪ್ರತಿನಿತ್ಯವು ನೆಮ್ಮದಿಯಿಂದ ಜೀವನ ಸಾಗಿಸಲು ಕಾರಣ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ಚಿಕ್ಕಮಗಳೂರು ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘ ವತಿಯಿಂದ ಏರ್ಪಡಿಸಿದ್ದ 1971ರ ಯುದ್ಧದ 53ನೇ ವಿಜಯೋತ್ಸವ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಇತಿಹಾಸದಲ್ಲಿ ಇಂಡೋ ಪಾಕಿಸ್ತಾನ ಯುದ್ಧ, ಭಾರತ, ಪಾಕಿಸ್ತಾನ ಯುದ್ಧ ಹಾಗೂ ಈಚೆಗೆ ನಡೆದ 2019ರಲ್ಲಿ ನಡೆದ ಪುಲ್‌ವಾಮಾ ದಾಳಿ ದೇಶ ಪ್ರಜೆಗಳು ಎಂದಿಗೂ ಮರೆಯುವಂತಿಲ್ಲ ಎಂದ ಅವರು ಇಷ್ಟೆಲ್ಲಾ ಸಾಧನೆ ಮಾಡಿರುವ ಭಾರತೀಯ ಸೇನಪಡೆಗಳು ನಮ್ಮೆಲ್ಲರಿಗೂ ಕಿರೀಟವಿದ್ದಂತೆ ಎಂದು ಹೇಳಿದರು.

ಹುತಾತ್ಮಕ ಸೈನಿಕರ ತ್ಯಾಗ, ಶೌರ್ಯ ಹಾಗೂ ಬಲಿದಾನದಿಂದ ದೇಶ ನೆಮ್ಮದಿ ಜೀವನಕ್ಕೆ ದಾರಿ ಮಾಡಿ ಕೊಟ್ಟಿದೆ. ಅಂತಹ ಮಹಾನ್ ಯೋಧರನ್ನು ದೇಶದ ಪ್ರತಿಪ್ರಜೆಯು ಸ್ಮರಿಸಬೇಕು. ಜೊತೆಗೆ ನಿವೃತ್ತಿಗೊಂಡ ಬಂದA ತಹ ಸೈನಿಕರಿಗೆ ಗೌರವ ಸೂಚಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಯಾವುದೇ ಫಲಾಪೇಕ್ಷೆ ಇಲ್ಲದೇ ತನ್ನ ಇಡೀ ಕುಟುಂಬವನ್ನೇ ತೊರೆದು ದೇಶದ ಹಿತ ಕಾಪಾಡುವಲ್ಲಿ ತೆರಳುವ ಸೈನಿಕರು ನಮಗೆಲ್ಲಾ ಸ್ಪೂರ್ತಿಯಾಗಿರಬೇಕು. ವಿದ್ಯಾರ್ಥಿಗಳು ಕೂಡಾ ಮುಂದಿನ ಭವಿಷ್ಯದಲ್ಲಿ ಸೈನಿಕರಾಗ ಬೇಕೆಂಬ ಕನಸು ಕಂಡು ಮುನ್ನೆಡೆದರೆ ಅದಕ್ಕಿಂತ ದೊಡ್ಡಭಾಗ್ಯ ಬೇರೊಂದಿಲ್ಲ ಎಂದು ಹೇಳಿದರು.

ಮಾಜಿ ಸೈನಿಕರ ಸಂಘದ ಮಾಜಿ ಅಧ್ಯಕ್ಷ ಪಿ.ಎನ್.ನಾಗರಾಜ್ ಮಾತನಾಡಿ ನಿವೃತ್ತ ಸೈನಿಕರು ಸಣ್ಣಪುಟ್ಟ ಸಭೆ ಅಥವಾ ಇನ್ನಿತರೆ ಕಾರ್ಯಚಟುವಟಿಕೆ ರೂಪಿಸಲು ಕಚೇರಿಯ ಸಮಸ್ಯೆಯಾಗಿದೆ. ಆ ನಿಟ್ಟಿನಲ್ಲಿ ಬೇಲೂರು ರಸ್ತೆ ಸಮೀಪವಿರುವ ಹಳೇ ತಾಲ್ಲೂಕು ಕಚೇರಿಯನ್ನು ಸಂಘಕ್ಕೆ ನೀಡಿದರೆ ಬಹಳಷ್ಟು ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.

Chikkamagaluru District Ex-Servicemen’s Association ಸಂಘದ ಅಧ್ಯಕ್ಷ ಸಿ.ಎಸ್.ಮಂಜುನಾಥ ಮಾತನಾಡಿ 1971ರ ಭಾರತ-ಪಾಕಿಸ್ತಾನ ಯುದ್ಧವು ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಒಂದು ಪ್ರಮುಖ ಸೈನಿಕ ಸಂಘರ್ಷವಾಗಿದೆ. ಈ ಯುದ್ಧವು ಬಾಂಗ್ಲಾ ವಿಮೋಚನೆಗೆ ಸಂಬಂಧಿಸಿದ್ದು ಅದನ್ನು ಕೆಲವು ಸಲ ಪಾಕಿಸ್ತಾನದ ಆಂತರಿಕ ಯುದ್ಧವಾಗಿತ್ತು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಗೋಪಾಲಕೃಷ್ಣ, ಸಹ ಕಾರ್ಯದರ್ಶಿ ರಾಜೇಗೌಡ, ಖಜಾಂಚಿ ಎಸ್.ಪಾಯಿಸ್, ನಿರ್ದೇಶಕ ಕೃಷ್ಣೇಗೌಡ, ಸದಸ್ಯರಾದ ಕುಮಾರಸ್ವಾಮಿ, ರೇವಣ್ಣ, ಮಂಜುನಾಥಸ್ವಾಮಿ, ರಾಮಚಂದ್ರ, ಫರ್ನಾಂಡೀಸ್, ಸುರೇಶ್ ಮತ್ತಿತರರಿದ್ದರು.

Chikmagalur Tailors Association ಪ್ರತೀ ವ್ಯಕ್ತಿಗೂ ಧರಿಸುವ ಉಡುಪು ಉತ್ತಮವಾಗಿರದಿದ್ದರೆ ಸಮಾಜದಲ್ಲಿ ಬೆಲೆಸಿಗದು-ಎಚ್.ಡಿ.ತಮ್ಮಯ್ಯ

0

Chikmagalur Tailors Association ಅಸಂಘಟಿತ ಕಾರ್ಮಿಕರಾದ ಟೈಲರ್ಸ್ ವೃತ್ತಿಬಾಂಧವರಿಗೆ ಸರ್ಕಾರದಿಂದ ದೊರೆಯುವ ಪ್ರತಿ ಸೌಲಭ್ಯಗಳನ್ನು ಒದಗಿಸಿಕೊಡುವ ಮೂಲಕ ಆರ್ಥಿಕವಾಗಿ ಸದೃಢಗೊಳಿಸುವ ಕಾರ್ಯಕ್ಕೆ ಪ್ರಾಮಾಣಕ ಪ್ರಯತ್ನ ನಡೆಸಲಾಗುವುದು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ಚಿಕ್ಕಮಗಳೂರು ನಗರದ ಟಿಎಂಎಸ್ ರೋಟರಿ ಸಭಾಂಗಣದಲ್ಲಿ ಚಿಕ್ಕಮಗಳೂರು ಟೈಲರ್ಸ್ ಅಸೋಸಿಯೇಷನ್, ಟೈಲರ್ಸ್ ಸಹಕಾರ ಸಂಘದ ವತಿಯಿಂದ ಏರ್ಪಡಿಸಿದ್ದ ಹಿರಿಯ ವೃತ್ತಿ ಬಾಂಧವರು, ಪೌರಕಾರ್ಮಿಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿ ವೇತನ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಬಡವನಿಂದ ಹಿಡಿದು ಶ್ರೀಮಂತನವರೆಗೂ ಪ್ರತಿ ವ್ಯಕ್ತಿಗೂ ಧರಿಸುವ ಉಡುಪು ಉತ್ತಮವಾಗಿರದಿದ್ದರೆ ಸಮಾ ಜದಲ್ಲಿ ಬೆಲೆ ಸಿಗುವುದು ಕಷ್ಟಸಾಧ್ಯ. ಆ ನಿಟ್ಟಿನಲ್ಲಿ ವ್ಯಕ್ತಿಯ ಗೌರವ ಒದಗಿಸಿಕೊಡುವ ಟೈರ‍್ಸ್ ವೃತ್ತಿಬಾಂಧವರ ಸೇವೆ ಅವಿಸ್ಮರಣೀಯವಾಗಿದೆ. ಇಂತಹ ಟೈಲರ್ಸ್ಳು ಹೆಚ್ಚಿನ ಮಟ್ಟದಲ್ಲಿ ಬೆಳೆದು ಇತರರಿಗೆ ಮಾದರಿಯಾಗಬೇಕು ಎಂದು ಆಶಿಸಿದರು.

ಯಾವುದೇ ವ್ಯಕ್ತಿ ತನ್ನ ವೃತ್ತಿಯನ್ನು ಗೌರವಿಸಿ ಪ್ರೀತಿಸುವವರಿಗೆ ಕಾಯಕದಲ್ಲಿ ಕಷ್ಟ ಎಂಬುದಿರುವುದಿಲ್ಲ. ಆದರೆ ಸೋಮಾರಿತನದಿಂದ ವೃತ್ತಿಗೂ ಗೌರವ ಸಲ್ಲಿಸದೇ ಅಸಡ್ಡೆವಹಿಸುವವರು ಜೀವನದಲ್ಲಿ ಸಣ್ಣ ಕೆಲಸವು ಭಾರವಾಗಲಿದೆ. ಆ ಸಾಲಿನಲ್ಲಿ ಟೈಲರ್ಸ್ ವೃತ್ತಿಬಾಂಧವರು ಅತ್ಯಂತ ಚುರುಕುತನದಿಂದ ಕೆಲಸ ನಿರ್ವಹಿಸುತ್ತಿರು ವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಅತ್ಯಂತ ಸಣ್ಣ ಸಮಾಜದಿಂದ ಬಂದವರು ಟೈಲರ್ಸ್ ವೃತ್ತಿಯಲ್ಲಿ ತೊಡಗಿಕೊಂಡು ತಕ್ಕಮಟ್ಟಿನ ಜೀವನ ನಡೆ ಸುತ್ತಿದ್ದಾರೆ. ಜೊತೆಗೆ ಸಂಘಟನೆಗಳ ನೇತೃತ್ವದಲ್ಲಿ ಒಗ್ಗಟ್ಟಾಗಿ ಮುನ್ನೆಡೆಯುವುದನ್ನು ರೂಢಿಸಿಕೊಂಡಾಗ ಆರ್ಥಿಕ ಸಂಕಷ್ಟ ಎದುರಾಗ ಸಂಘಗಳು ಸಹಕಾರ ನಿಡಲಿದೆ. ಜೊತೆಗೆ ಸರ್ಕಾರದೊಂದಿಗೆ ಚರ್ಚಿಸಿ ಅಸಂಘಟಿತರಿಗೆ ಸವಲ ತ್ತು ಒದಗಿಸಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ ಕಟ್ಟಡ ಕಾರ್ಮಿಕರಿಗೆ ದೊರೆಯುವ ಪ್ರತಿ ಸವಲತ್ತುಗಳನ್ನು ಅಸಂಘಟಿತ ಟೈಲರ್ಸ್ ವೃತ್ತಿಯವರಿಗೂ ಕೊಡುವ ವ್ಯವಸ್ಥೆ ಕೈಗೊಂಡಾಗ ಟೈಲರ್ಸ್ ಬಳಗ ಸಮಾ ಜದ ಮುಂಚೂಣಿಗೆ ಬರಲು ಸಾಧ್ಯವಾಗಲಿದೆ. ಆ ನಿಟ್ಟಿನಲ್ಲಿ ವೃತ್ತಿಬಾಂಧವರು ಒಗ್ಗಟ್ಟಾಗಿ ಸಂಘಟನೆಗಳ ನೇತೃತ್ವ ದಲ್ಲಿ ಸರ್ಕಾರವನ್ನು ಒತ್ತಾಯಿಸಿದಾಗ ಮಾತ್ರ ಸೌಕರ್ಯ ಲಭಿಸಬಹುದು ಎಂದು ಹೇಳಿದರು.

Chikmagalur Tailors Association ಟೈಲರ್ಸ್ ಸಹಕಾರ ಸಂಘದ ಅಧ್ಯಕ್ಷ ಅಶೋಕ್‌ಶೆಟ್ಟಿ ಮಾತನಾಡಿ ಕಳೆದ ಎರಡು ವರ್ಷಗಳಿಂದ ಟೈಲರ್ಸ್ ಸೌಕರ್ಯದ ಬಗ್ಗೆ ಹಿಂದಿನ ಶಾಸಕರಿಗೂ ಮನವಿ ಸಲ್ಲಿಸಲಾಗಿದ್ದರೂ ಇದುವರೆಗೂ ಸಮಸ್ಯೆ ಬಗೆಹರಿದಿಲ್ಲ. ಆ ಹಿನ್ನೆ ಲೆಯಲ್ಲಿ ಹಾಲಿ ಶಾಸಕರು ಸಂಘಕ್ಕೆ ನಗರದ ಸಮೀಪದಲ್ಲೇ ಒಂದು ಕಚೇರಿಗೆ ಅವಕಾಶ ಕಲ್ಪಿಸಿದರೆ ಸಭೆ, ಸಮಾರಂಭ ನಡೆಸಲು ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಸುಧೀರ್ ಸುಮಾರು ೩೮೦ ಸದಸ್ಯರ ಬಳಗವನ್ನು ಹೊಂದಿರುವ ಟೈಲರ್ಸ್ ಅಸೋಸಿಯೇಷನ್‌ನವರು ಸಂಕಷ್ಟದಲ್ಲಿರುವ ವೃತ್ತಿಬಾಂಧವರಿಗೆ ಸ್ಪಂದಿಸುವ ಕೆಲಸದಲ್ಲಿ ನಿರತರಾಗಿದ್ದು ಆ ನಿಟ್ಟಿನಲ್ಲಿ ಪ್ರತಿ ಸದಸ್ಯರಿಂದ ದಿನಕ್ಕೆ ಒಂದು ರೂ. ಗಳಂತೆ ಸಂಗ್ರಹಿಸಿ ತುರ್ತು ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಇದೇ ವೇಳೆ ಇಬ್ಬರು ಪೌರಕಾರ್ಮಿಕರು, ಓರ್ವ ಟೈಲರ್ ವೃತ್ತಿಬಾಂಧವರಿಗೆ ಸನ್ಮಾನಿಸಲಾಯಿತು. ೨೦೨೨-೨೩ ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಗಳಿಸಿದ ಮಕ್ಕಳಿಗೆ ವಿದ್ಯಾರ್ಥಿವೇತನ ಹಾಗೂ ಕ್ರೀಡಾಕೂಟದಲ್ಲಿ ಭಾಗವಹಿಸಿ ಗೆಲುವು ಸಾಧಿಸಿದವರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಹಕಾರ ಸಂಘದ ಕಾರ್ಯದರ್ಶಿ ಸಿ.ಎನ್.ಜಾನಕಿ, ಅಸೋಸಿಯೇಷನ್ ಕಾರ್ಯದರ್ಶಿ ಅನಿಲ್‌ಕುಮಾರ್, ಗೌರವ ಅಧ್ಯಕ್ಷೆ ಜೈನಾಬಿ, ಸದಸ್ಯರಾದ ಪಾಂಡುರಂಗ, ಯುವರಾಜ್, ಬಿ.ಎಂ.ಪ್ರಕಾಶ್, ರಾಜು ಉಪಸ್ಥಿತರಿದ್ದರು.

International Migrants Day ವಲಸೆ…ಅಂತಾರಾಷ್ಟ್ರೀಯ ಸಮಸ್ಯೆ

0

International Migrants Day ವಲಸಿಗರು ಎದುರಿಸುತ್ತಿರುವ ಸವಾಲುಗಳು ಮತ್ತು ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ 18 ರಂದು ಅಂತಾರಾಷ್ಟ್ರೀಯ ವಲಸಿಗರ ದಿನ ಆಚರಿಸಲಾಗುತ್ತದೆ.

ಮಾನವ ವಲಸೆಯು ಮಾನವ ಇತಿಹಾಸದ ಮೂಲಭೂತ ಅಂಶವಾಗಿದೆ.ಆರ್ಥಿಕ ಅವಕಾಶಗಳು, ಕುಟುಂಬದ ಪುನರೇಕೀಕರಣ, ಶಿಕ್ಷಣ ಮತ್ತು ಸಂಘರ್ಷ, ಕಿರುಕುಳ ಅಥವಾ ಪರಿಸರದ ಸವಾಲುಗಳಿಂದ ತಪ್ಪಿಸಿಕೊಳ್ಳುವ ಅಗತ್ಯತೆಯಂತಹ ವಿವಿಧ ಅಂಶಗಳಿಂದ ನಡೆಸಲ್ಪಡುತ್ತದೆ.

ಜುಲೈ 1, 2020 ರಂತೆ, ಅಂತರರಾಷ್ಟ್ರೀಯ ವಲಸಿಗರ ಜಾಗತಿಕ ಸಂಖ್ಯೆಯು ಅಂದಾಜು 281 ಮಿಲಿಯನ್ ತಲುಪಿದೆ. ಇದು ವಿಶ್ವದ ಜನಸಂಖ್ಯೆಯ ಸುಮಾರು 3.5% ರಷ್ಟಿದೆ. ಈ ಅಂಕಿ ಅಂಶವು 1980 ರಲ್ಲಿ 2.3% ರಿಂದ 2000 ರಲ್ಲಿ 2.8% ಕ್ಕೆ ಸ್ಥಿರವಾಗಿ ಏರಿದೆ.

ವಲಸೆಯು ವಿವಿಧ ಕಾರಣಗಳಿಗಾಗಿ ಸಂಭವಿಸುತ್ತದೆ. ಕೆಲವು ವ್ಯಕ್ತಿಗಳು ವೈಯಕ್ತಿಕ ಅಥವಾ ವೃತ್ತಿಪರ ಕಾರಣಗಳಿಗಾಗಿ ಸ್ಥಳಾಂತರಗೊಳ್ಳಲು ಆಯ್ಕೆಮಾಡುತ್ತಾರೆ.

ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿ (UNHCR) 2022 ರ ಅಂತ್ಯದ ವೇಳೆಗೆ, UNRWA ಆದೇಶದ ಅಡಿಯಲ್ಲಿ 5.9 ಮಿಲಿಯನ್ ಪ್ಯಾಲೆಸ್ಟೈನ್ ನಿರಾಶ್ರಿತರು ಸೇರಿದಂತೆ ಸುಮಾರು 35.3 ಮಿಲಿಯನ್ ನಿರಾಶ್ರಿತರನ್ನು ಮತ್ತು ಹೆಚ್ಚುವರಿ 5.4 ಮಿಲಿಯನ್ ವ್ಯಕ್ತಿಗಳನ್ನು ಆಶ್ರಯ-ಅನ್ವೇಷಕರು ಎಂದು ವರ್ಗೀಕರಿಸಲಾಗಿದೆ ಎಂದು ವರದಿ ಮಾಡಿದೆ.

UN Migration Agency (IOM) ಪ್ರಕಾರ, ವಲಸಿಗ ಎಂದರೆ ಅಂತರರಾಷ್ಟ್ರೀಯ ಗಡಿಯ ಮೂಲಕ ಅಥವಾ ಅವನ/ಅವಳ ವಾಸಸ್ಥಳದಿಂದ ದೂರವಿರುವ ರಾಜ್ಯದೊಳಗೆ ಚಲಿಸುತ್ತಿರುವ ಅಥವಾ ಸ್ಥಳಾಂತರಗೊಂಡಿರುವ ಯಾವುದೇ ವ್ಯಕ್ತಿ;

  • ವ್ಯಕ್ತಿಯ ಕಾನೂನು ಸ್ಥಿತಿ
  • ಆಂದೋಲನವು ಸ್ವಯಂಪ್ರೇರಿತ ಅಥವಾ ಅನೈಚ್ಛಿಕವಾಗಿರಲಿ ಅಥವಾ ಇಲ್ಲದಿರಲಿ
  • ಇದಕ್ಕೆ ಕಾರಣಗಳೇನು ಚಳುವಳಿ ಅಥವಾ
  • ವಾಸ್ತವ್ಯದ ಉದ್ದ ಎಷ್ಟು ಆಗಿರಬಹುದು.

ವಲಸಿಗರು ಹೆಚ್ಚಲು ಹಲವು ಕಾರಣಗಳಿವೆ. ಯುದ್ಧ, ಪ್ರಾಕೃತಿಕ ವಿಕೋಪಗಳು, ಬಡತನ, ಆರ್ಥಿಕ ತೊಂದರೆಗಳು, ಕ್ರೌರ್ಯ ಇತ್ಯಾದಿ ಹಲವು ಕಾರಣಗಳಿಂದ ಜನರು ವಲಸೆ ಹೋಗುತ್ತಾರೆ. ಉದಾಹರಣೆಗೆ, ಇತ್ತೀಚೆಗೆ ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಸಾರಿದಾಗ ಉಕ್ರೇನ್‌ನಲ್ಲಿ ನೆಮ್ಮದಿಯಾಗಿದ್ದ ಸಾವಿರಾರು ಜನರ ಬದುಕು ಬೀದಿಗೆ ಬಂದಿದೆ. ಅವರೆಲ್ಲರೂ ಜೀವ ಉಳಿಸಿಕೊಳ್ಳುವ ಸಲುವಾಗಿ ವಿವಿಧ ದೇಶಗಳಿಗೆ ವಲಸೆ ಹೋಗಿದ್ದಾರೆ. ಇದೇ ರೀತಿ ಶ್ರೀಲಂಕಾದಲ್ಲಿ ಇತ್ತೀಚೆಗೆ ಆರ್ಥಿಕತೆ ಕುಸಿದಾಗ ಅಲ್ಲಿನ ಜನರು ದೋಣಿ ಮೂಲಕ ಭಾರತಕ್ಕೆ ಬಂದ ಘಟನೆಗಳನ್ನು ನೆನಪಿಸಿಕೊಳ್ಳಬಹುದು. ಕಳೆದ ಐವತ್ತು ವರ್ಷಗಳಲ್ಲಿ ವಲಸಿಗರ ಪ್ರಮಾಣ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ವಿಶ್ವಸಂಸ್ಥೆಯ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ.

International Migrants Day ಪ್ರಸ್ತುತ 281 ದಶಲಕ್ಷ ಜನರು ತಮ್ಮ ಸ್ವಂತದ್ದಲ್ಲದ ದೇಶದಲ್ಲಿ ವಾಸಿಸುತ್ತಿದ್ದಾರೆ. ಪ್ರತಿದೇಶವು ವಲಸಿಗರ ಸಮಸ್ಯೆಯಿಂದ ಬಳಲುತ್ತಿದೆ. ವಲಸಿಗರಿಗೆ ಸಂಬಂಧಪಟ್ಟಂತೆ ಸೂಕ್ತ ಕಾನೂನು ರೂಪಿಸುವುದನ್ನು ದೇಶಗಳು ಮುಂದುವರೆಸುತ್ತಿವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವಿನ್ನೂ ದೊರಕಿಲ್ಲ.

ಜಗತ್ತಿನಾದ್ಯಂತ ಹೆಚ್ಚುತ್ತಿರುವ ವಲಸಿಗರನ್ನು ಗಮನದಲ್ಲಿಟ್ಟುಕೊಂಡು ಅಂತರಾಷ್ಟ್ರೀಯ ವಲಸಿಗರ ದಿನ ಆರಂಭಿಸಲಾಯಿತು.

1990ರಲ್ಲಿ ಇದೇ ದಿನದಂದು ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರ ಹಕ್ಕುಗಳ ರಕ್ಷಣೆಗಾಗಿ ಅಂತಾರಾಷ್ಟ್ರೀಯ ಸಮಾವೇಶ ನಡೆಸಿತ್ತು.

ಬಳಿಕ 2000 ಇಸವಿಯಿಂದ ಡಿಸೆಂಬರ್‌ 18ನ್ನು ಅಂತಾರಾಷ್ಟ್ರೀಯ ವಲಸಿಗರ ದಿನವಾಗಿ ಆಚರಿಸುತ್ತ ಬರಲಾಗಿದೆ.

Actor Vishnuvardhan ನಟ ವಿಷ್ಣುವರ್ಧನ್ ಶೀಘ್ರ ಸ್ಮಾರಕ ನಿರ್ಮಾಣಕ್ಕಾಗಿ ಅಭಿಮಾನಿಗಳ ಒತ್ತಾಯ

0

Actor Vishnuvardhan ಸಾಹಸ ಸಿಂಹ ವಿಷ್ಣುವರ್ಧನ್‌ ಅಗಲಿ ಡಿಸೆಂಬರ್‌ 30 ಕ್ಕೆ ಬರೋಬ್ಬರಿ 14 ವರ್ಷ ಆಗಲಿದೆ. 2009ರ ಡಿಸೆಂಬರ್ 30ರಂದು ವಿಷ್ಣವರ್ಧನ್ ಇಹಲೋಕ ತ್ಯಜಿಸಿದರು.

ಅಂದಿನಿಂದಲೂ ಅವರ ಅಭಿಮಾನಿಗಳಿಂದ ವಿಷ್ಣು ಸ್ಮಾರಕ ನಿರ್ಮಾಣದ ಕುರಿತು ಚರ್ಚೆಯಾಗುತ್ತಲೇ ಇವೆ.

ಇದೀಗ ವಿಷ್ಣು ಅಭಿಮಾನಿಗಳು ಸ್ಮಾರಕಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಇದಕ್ಕೆ ಕಿಚ್ಚ ಸುದೀಪ್‌ ಮತ್ತು ಡಾಲಿ ಧನಂಜಯ ಬೆಂಬಲ ನೀಡಿದ್ದಾರೆ.

Actor Vishnuvardhan ವಿಷ್ಣುವರ್ಧನ್ ಅಂತ್ಯ ಸಂಸ್ಕಾರವಾದ ಜಾಗದಲ್ಲಿ ಪುಣ್ಯಭೂಮಿ ಆಗಬೇಕು ಎಂದು ವಿಷ್ಣು ಅಭಿಮಾನಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ. ವಿಷ್ಣುವರ್ಧನ್ ಅಭಿಮಾನಿಗಳೆಲ್ಲರೂ ಸೇರಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ

ವಿಷ್ಣವರ್ಧನ್ ಅವರು ನಿಧನರಾದಾಗಿನಿಂದಲೂ ಅಭಿಮಾನ್‌ ಸ್ಟುಡಿಯೋದಲ್ಲಿ ಅವರ ಸ್ಮಾರಕಕ್ಕೆ ಭೂಮಿ ಒದಗಿಸುವಂತೆ ವಿಷ್ಣು ಫ್ಯಾನ್ಸ್‌ ಮನೆವಿ ಮಾಡುತ್ತಿದ್ದಾರೆ. ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ ಆಗಿದ್ದರೂ ಬೆಂಗಳೂರಿನಲ್ಲಿ ಇದುವರೆಗೆ ಸ್ಮಾರಕ ನಿರ್ಮಾಣ ಕಾರ್ಯ ಆರಂಭ ಕೂಡ ಆಗಿಲ್ಲ. ಬೆಂಗಳೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕಾಗಿ ಅವರ ಅಭಿಮಾನಿಗಳು ಹೋರಾಟ ಆರಂಭಿಸಿದ್ದಾರೆ.

Chamber Of Commerce ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು- ಡಿ.ಎಸ್.ಅರುಣ್

0

Chamber Of Commerce ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಶಿಕ್ಷಣ ಜ್ಞಾನದ ಜತೆಯಲ್ಲಿ ಕೌಶಲ್ಯವು ಅತ್ಯಂತ ಅಗತ್ಯವಾದ ಸಾಧನವಾಗಿದ್ದು, ಕೌಶಲ್ಯ ಕಲಿಕೆಗೂ ವಿದ್ಯಾರ್ಥಿಗಳು ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ವಿಧಾನ ಪರಿಷತ್ ಶಾಸಕ ಡಿ.ಎಸ್.ಅರುಣ್ ಹೇಳಿದರು.

ನೂತನವಾಗಿ ಉದ್ಘಾಟನೆಗೊಂಡಿರುವ ಶಿವಮೊಗ್ಗ ನಾಲೆಡ್ಜ್ ಫೋರಂ ವತಿಯಿಂದ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿಶ್ವವಿದ್ಯಾಲಯ ಹಂತದ ಕ್ವಿಜ್ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಚರ್ಚೆ ಮಾಡುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ರಾಜ್ಯ, ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಯಶಸ್ಸು ಗಳಿಸಲು ನೆರವಾಗುತ್ತದೆ. ಇಂತಹ ಸ್ಪರ್ಧೆಗಳು ಮತ್ತು ಕೌಶಲ್ಯಗಳಿಗೆ ಶಿವಮೊಗ್ಗ ಪ್ರಮುಖ ಕೇಂದ್ರವಾಗಿ ಮಾರ್ಪಡಬೇಕು ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಜಿಲ್ಲಾ ಸಂಘವು ಸ್ಪರ್ಧಾತ್ಮಕ ಕಾರ್ಯಕ್ರಮಗಳಿಗೆ ನಿರಂತರವಾಗಿ ಪ್ರೋತ್ಸಾಹ ನೀಡುತ್ತ ಬಂದಿದ್ದು, ಮುಂದಿನ ದಿನಗಳಲ್ಲಿಯೂ ಕೌಶಲ್ಯ ಯುವ ಸಮೂಹ ಸೃಷ್ಠಿಸಲು ಪೂರಕ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಕೌಶಲ್ಯಯುಕ್ತ ವಿದ್ಯಾರ್ಥಿಗಳ ರೂಪಿಸಲು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಉನ್ನತ ಮಟ್ಟದ ಕೌಶಲ್ಯಾಭಿವೃದ್ದಿ ತರಬೇತಿ ಕೇಂದ್ರ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

Chamber Of Commerce ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿ.ಚೇತನ್ ಮಾತನಾಡಿ, ಕ್ವಿಜ್ ಸ್ಪರ್ಧೆಗಳು ವಿದ್ಯಾರ್ಥಿಗಳ ಜ್ಞಾನ ಉತ್ತಮಗೊಳಿಸುವುದರ ಜೊತೆಗೆ ಭವಿಷ್ಯ ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತದೆ. ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಎಜುರೇಟ್ ಕಾಲೇಜಿನ ಪ್ರಾಚಾರ್ಯ ಶಂಕರನಾರಾಯಣ್ ಸ್ವಾಗತಿಸಿದರು.

ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕ ಕೆ.ವಿ.ಗಿರಿಧರ್‌ರವರು ವಂದನಾರ್ಪಣೆ ನಡೆಸಿಕೊಟ್ಟರು. ಹೊಯ್ಸಳ ಕಾಲೇಜಿನ ಪ್ರಾಚಾರ್ಯ ವಿಲಿಯಂ ಡಿಸೋಜ ಉಪಸ್ಥಿತರಿದ್ದರು.

ಕಾರ್ಯದರ್ಶಿ ಸವಿತಾ ಮಾಧವ್ ಕಾರ್ಯಕ್ರಮ ನಿರೂಪಿಸಿದರು. 27 ಕಾಲೇಜುಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದರು.

MESCOM Shivamogga ಶಿವಮೊಗ್ಗ ತಾಲ್ಲೂಕಿನಲ್ಲಿ ಯಾವುದೇ ರೀತಿಯ ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗೆ ಸಂಪರ್ಕಿಸಬೇಕಾದ ಅಧಿಕಾರಿಗಳ ಫೋನ್ ಸಂಖ್ಯೆಗಳು

0

MESCOM Shivamogga ಶಿವಮೊಗ್ಗ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಯಾವುದೇ ತರಹದ ವಿದ್ಯುಚ್ಛಕ್ತಿ ಅಥವಾ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ದೂರುಗಳು ಅಥವಾ ಸಲಹೆಗಳಿದ್ದಲ್ಲಿ ಮೆಸ್ಕಾಂ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದೆಂದು ಮೆಸ್ಕಾಂ ಕಾ ಮತ್ತು ಪಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ಮೆಸ್ಕಾಂ ವ್ಯಾಪ್ತಿಯಲ್ಲಿನ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ದೂರುದಳಿದ್ದಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 1912 ಮತ್ತು ಮೆಸ್ಕಾಂ ಶಿವಮೊಗ್ಗ ನಗರ ಪ್ರದೇಶದ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ದೂರವಾಣಿ ಸಂಖ್ಯೆ : 08182-225887, 08182-222369 ನ್ನು ಸಂಪರ್ಕಿಸಬಹುದಾಗಿದೆ.

ಶಿವಮೊಗ್ಗ ತಾಲ್ಲೂಕು ನಗರ ಉಪವಿಭಾಗ-1 ರ ಉಪವಿಭಾಗಾಧಿಕಾರಿ ರವೀಂದ್ರ, ಮೊ.ನಂ:9448289448 ಈ ಅಧಿಕಾರಿಯ ವ್ಯಾಪ್ತಿಗೆ ಬರುವ ಸ್ಥಳಗಳು ಈ ಕೆಳಕಂಡಂತಿವೆ.
ಹರಿಗೆ, ಮಲವಗೊಪ್ಪ, ವಟ್ಟಿನಕೊಪ್ಪ, ಜ್ಯೋತಿನಗರ, ಮೆಹಬೂಬ್ ನಗರ, ವಾದಿಹುದಾ, ಪುಟ್ಟಪ್ಪ ಕ್ಯಾಂಪ್, ಮದಾರಿ ಪಾಳ್ಯ, ಊರುಗಡೂರು, ರತ್ನಮ್ಮ ಲೇಔಟ್, ಸೂಳೇಬೈಲು, ನಿಸರ್ಗ ಲೇಔಟ್, ಗ್ಯಾಸ್ ಗೋಡನ್ ರಸ್ತೆ, ಈದ್ಗ ನಗರ, ಮಳಲಿಕೊಪ್ಪ, ಇಂದಿರಾನಗರ, ಗುರುಪುರ, ಪುರಲೆ, ಹಸೂಡಿ ರಸ್ತೆ, ಚಿಕ್ಕಲ್, ವಿದ್ಯಾನಗರ ಈ ವ್ಯಾಪ್ತಿಯಲ್ಲಿರುವವರು ತಮ್ಮ ದೂರು ಅಥವಾ ಸಲಹೆಗಳಿದ್ದಲ್ಲಿ ಶಾಖಾಧಿಕಾರಿ ನವೀನ್ ಕುಮಾರ್ ಘಟಕ-1 ಮೊ.ನಂ:9448289662 ಇವರನ್ನು ಸಂಪರ್ಕಿಸಬಹುದಾಗಿದೆ.
ಲೂರ್ದುನಗರ, ಬಾಪೂಜಿನಗರ, ಜೋಸೆಫ್ ನಗರ, ದುರ್ಗಿಗುಡಿ, ವೆಂಕಟೇಶ್ ನಗರ, ಸೋಮಯ್ಯ ಲೇಔಟ್, ಟ್ಯಾಂಕ್ ಮೊಹಲ್ಲಾ, ಮೆಹೆಂದಿನಗರ, ಬಸವನಗುಡಿ, ವಿನಾಯಕನಗರ, ರಾಜೇಂದ್ರನಗರ, ರವೀಂದ್ರನಗರ, ಗಾಂಧಿನಗರ, ಹನುಮಂತನಗರ, ತಿಲಕ್‍ನಗರ, ಜಯನಗರ, ಚನ್ನಪ್ಪ ಲೇಔಟ್, ಅಚ್ಯುತ್‍ರಾವ್ ಲೇಔಟ್, ಜೈಲ್ ರಸ್ತೆ, ಮಲ್ಲೇಶ್ವರನಗರ, ಗುಂಡಪ್ಪಶೆಡ್, ಶೇಷಾದ್ರಿ ಪುರಂ, ಅಮೀರ್ ಅಹಮದ್ ಕಾಲೋನಿ, ನೆಹರೂ ರಸ್ತೆ, ಪಾರ್ಕ ಬಡಾವಣೆ ಈ ವ್ಯಾಪ್ತಿಯಲ್ಲಿರುವವರು ತಮ್ಮ ದೂರು ಅಥವಾ ಸಲಹೆಗಳಿದ್ದಲ್ಲಿ ಶಾಖಾಧಿಕಾರಿ ನಂದೀಶ್ ಘಟಕ-2 ಮೊ.ನಂ:944828966 ಇವರನ್ನು ಸಂಪರ್ಕಿಸಬಹುದಾಗಿದೆ.

MESCOM Shivamogga ಕುವೆಂಪುನಗರ, ಇನ್ಸ್‍ಫ್ರಾ ಸಿಟಿ, ಐರಿಶ್ ಕೌಂಟಿ, ಮ್ಯಾಕ್ಸ್ ವತ್ ಲೇಔಟ್, ಮಧುವನ ಕಾಲೋನಿ, ಎನ್.ಇ.ಎಸ್ ಲೇಔಟ್, ಸವಳಂಗ ರಸ್ತೆ, ಜ್ಯೋತಿನಗರ, ಇಂದಿರಾಗಾಂಧಿ ಬಡಾವಣೆ, ಶಿವಬಸವನಗರ, ವೀರಭದ್ರೇಶ್ವರ ಬಡಾವಣೆ, ಬೊಮ್ಮನಕಟ್ಟೆ ‘ಎ’ ಬ್ಲಾಕ್‍ಯಿಂದ ಬೊಮ್ಮನಕಟ್ಟೆ ‘ಹೆಚ್’ ಬ್ಲಾಕ್, ಹಳೇ ಬೊಮ್ಮನಕಟ್ಟೆ, ಸಾನ್ವಿ ಲೇಔಟ್, ಕೆ.ಎಂ ಲೇಔಟ್, ವಿನಾಯಕ ಲೇಔಟ್, ಮಹಾರಾಣಿ ಸ್ಕೂಲ್ ಲಿಮಿಟ್, ದೇವಂಗಿ 2ನೇ ಹಂತ, ಪರ್ಫೆಕ್ಟ್ ಅಲಾಯ್, ಜೆ.ಎನ್.ಎನ್.ಸಿ ಕಾಲೇಜ್, ದಿನಕರ ಪಾಲಿಟೆಕ್ನಿಕ್, ರೆಡ್ಡಿ ಲೇಔಟ್, ಶಾಂತಿನಗರ, ಮಲ್ಲಿಕಾರ್ಜುನನಗರ, ತ್ಯಾವರೆಚಟ್ನಳ್ಳಿ, ತರಳಬಾಳು ಬಡಾವಣೆ, ಶಾದ್‍ನಗರ, ಚೌಡೇಶ್ವರಿ ಕಾಲೋನಿ, ಹೊನ್ನಾಳಿ ರಸ್ತೆ, ಯು.ಜಿ.ಡಿ ಪ್ಲಾಂಟ್ಸ್, ದೇವಂಗಿ ತೋಟ, ಎಲ್.ಬಿ.ಎಸ್‍ನಗರ, ಅಶ್ವಥ್‍ನಗರ, ಕೀರ್ತಿನಗರ, ಬಸವೇಶ್ವರನಗರ, ಪವನಶ್ರೀ ಲೇಔಟ್, ಡಾಲರ್ಸ್ ಕಾಲೋನಿ, ಕೃಷಿನಗರ, ನವುಲೆ, ಮಾರುತಿ ಬಡಾವಣೆ, ತ್ರಿಮೂರ್ತಿನಗರ, ಸರ್ಜಿ ಕನ್ವೆನ್ಷನ್ ಹಾಲ್, ವಿಜಯಕರ್ನಾಟಕ ಪ್ರೆಸ್ ಈ ವ್ಯಾಪ್ತಿಯಲ್ಲಿರುವವರು ತಮ್ಮ ದೂರು ಅಥವಾ ಸಲಹೆಗಳಿದ್ದಲ್ಲಿ ಶಾಖಾಧಿಕಾರಿ ರವಿಕುಮಾರ್ ಕೆ.ವಿ ಘಟಕ-3 ಮೊ.ನಂ:9448289675 ಇವರನ್ನು ಸಂಪರ್ಕಿಸಬಹುದೆಂದು ಮೆಸ್ಕಾಂ ಕಾ ಮತ್ತು ಪಾ ವಿಭಾಗದ ಕಾರ್ಯನಿವಾಹಕ ಇಂಜಿನಿಯರ್ ತಿಳಿಸಿದ್ದಾರೆ.

Vikasith Sankalpa Yatra ಹೊಸನಗರ ತಾಲ್ಲೂಕು ಹೆದ್ದಾರಿಪುರದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

0

Vikasith Sankalpa Yatra ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜೀ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳಲಾಯಿತು.

Vikasith Sankalpa Yatra ಈ ಸಂದರ್ಭದಲ್ಲಿ ತೀರ್ಥಹಳ್ಳಿ ಕ್ಷೇತ್ರದ ಶಾಸಕರಾದ ಶ್ರೀ ಆರಗ ಜ್ಞಾನೇಂದ್ರ, ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.