Oxford Educational Institutions ಆಕ್ಸ್ಫರ್ಡ್ ಶಾಲೆಯಲ್ಲಿ ಆಕಾಶ ವೀಕ್ಷಣೆ
ಗಗನದ ವೈಶಾಲತೆ, ವೈಶಿಷ್ಟಗಳನ್ನು ನೋಡಿ ಆನಂದಿಸಬೇಕು- ಹರೋನಹಳ್ಳಿಸ್ವಾಮಿ
“ಆಕಾಶ ಉಚಿತ ನಿಸರ್ಗದ ಪ್ರಯೋಗ ಶಾಲೆ, ಸುಂದರ ಶನಿಗ್ರಹ, ಬೃಹತ್ ಗುರುಗ್ರಹ ಮತ್ತು ಅದರ ಚಂದ್ರರು, ಬಣ್ಣ ಬಣ್ಣದ ನಕ್ಷತ್ರಗಳು ಗ್ರಹಗಳ ಚ¯ನೆಯ ಹಿನ್ನೆಲೆಯ ರಾಶಿಚಕ್ರ ವಿವಿಧ ಆಕೃತಿಯ ನಕ್ಷತ್ರ ಪುಂಜಗಳು, ಆಗಾಗ್ಗೆ ಬೀಳುವ ಉಲ್ಕೆಗಳು, ಚಲಿಸುವ ಕೃತಕ ಉಪಗ್ರಹಗಳು, ಧನ ನಕ್ಷತ್ರ, ಭೂಮಿಯ ಚಲನೆ, ಚಿತ್ತಾರಗಳ ನಕ್ಷತ್ರಗಳ ಗುಂಪು-ಹೀಗೆ ವೈವಿಧ್ಯತೆ, ವೈಶಿಷ್ಟತೆ ಹಾಗೂ ವೈಶಾಲತೆಗಳನ್ನು ಪ್ರತಿ ಕ್ಷಣವು ರೋಮಾಂಚನ ಹುಟ್ಟಿಸುವ ಈ ಗಗನದ ಎಲ್ಲಾ ಸಂಭ್ರಮಗಳನ್ನು ನೋಡಿ ಆನಂದಿಸಬೇಕು. ಪ್ರಶ್ನಿಸುತ್ತಾ, ಆಲೋಚಿಸುತ್ತಾ ಹೋದಂತೆಲ್ಲಾ ನಿಸರ್ಗ ತಾನಾಗಿ ತನ್ನೆಲ್ಲ ನಿಗೂಢತೆಗಳನ್ನು ಬಿಚ್ಚಿಡುತ್ತಾ ಹೋಗುತ್ತದೆ. ಈ ವಿಶ್ವÀದ ರಹಸ್ಯಗಳನ್ನು ಅರಿಯುತ್ತಾ ವಿಶ್ವ ಪ್ರಜ್ಞೆ ಬೆಳಸಿಕೊಳ್ಳಬೇಕು” ಎಂದು ಹವ್ಯಾಸಿ ಖಗೋಳ ತಜ್ಞ ಹರೋನಹಳ್ಳಿಸ್ವಾಮಿ ತಿಳಿಸಿದರು.
ಆಕ್ಸ್ಫರ್ಡ್ ಶಾಲಾ ಆವರಣದಲ್ಲಿ ಬೃಹತ್ ಟೆಲಿಸ್ಕೋಪ್ ಮೂಲಕ ಸಾವಿರಾರು ವಿದ್ಯಾರ್ಥಿಗಳು ಪೋಷಕರಿಗೆ ಹಾಗು ಸಾರ್ವಜನಿಕರಿಗೆ ಗುರುಗ್ರಹ, ಚಂದ್ರನ ಕುಳಿಗಳು, ನಕ್ಷತ್ರ ಪುಂಜಗಳು, ರಾಶಿ ನಕ್ಷತ್ರ ಪಥ, ಧ್ರುವ ನಕ್ಷತ್ರಗಳನ್ನು ದರ್ಶನ ಮಾಡಿಸುವ ಮೂಲಕ ಆಕಾಶ ವೀಕ್ಷಣೆ ಕಾರ್ಯಕ್ರಮ ನಡೆಸಿಕೊಟ್ಟರು.
“Oxford Educational Institutions ಗಗನವನು ನೋಡು ಮೈನೀಲಿಗಟ್ಟುವವರೆಗೆ” ಎಂದ ಕುವೆಂಪು ನಮಗೆ ಆದರ್ಶ. ಆಕಾಶದ ಗ್ರಹಗಳ ಚಲನೆ, ರಾಶಿಗಳು, ಭೂಮಿಯ ದೈನಂದಿನ ಚಲನೆ, ಚಂದ್ರನ ಕುಳಿಗಳು, ಬೀಳುವ ಉಲ್ಕೆಗಳು, ಮಿನುಗುವ ನಕ್ಷತ್ರಗಳು, ಮಿನುಗದಿರುವ ಗ್ರಹಗಳು ಇವೆಲ್ಲವನ್ನು ನೋಡಿ ಆನಂದಿಸಿ ನಮ್ಮ ಖಗೋಳದ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಆಕಾಶ ವೀಕ್ಷಣೆ ಮಕ್ಕಳ ನೆಚ್ಚಿನ ಹವ್ಯಾಸವಾಗಬೇಕು ಎಂದು ಹರೋನಹಳ್ಳಿಸ್ವಾಮಿ ಪ್ರಾಯೋಗಿಕವಾಗಿ ತೋರಿಸಿ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಕೇಳಿದ ನೂರಾರು ಖಗೋಳ ಪ್ರಶ್ನೆಗಳಿಗೆ ಉತ್ತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಕ್ಸ್ಫರ್ಡ್ ಸಂಸ್ಥೆಯ ಅಧ್ಯಕ್ಷರಾದ ಡಿ.ಆರ್. ಶ್ರೀನಿವಾಸ್, ನೇತೃತ್ವöವನ್ನು ಮುಖ್ಯ ಶಿಕ್ಷಕಿಯವರಾದ ಶ್ರೀಮತಿ ಅಮೃತ ಬಿ.ಜಿ ರವರು ವಹಿಸಿದ್ದರು, ಸ್ವಾಗತವನ್ನು ಕು. ತಬಸುಮ್ ವಹಿಸಿದ್ದು, ಕು: ಪ್ರತೀಕ್ಷ ವಂದಿಸಿದರು. ಕಾರ್ಯಕ್ರಮದಲ್ಲಿ ಆಕ್ಸ್ಫಡ್ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
Oxford Educational Institutions ಆಕಾಶವು ನಿಸರ್ಗದ ಉಚಿತ ಪ್ರಯೋಗಶಾಲೆ- ಹರೋನಹಳ್ಳಿ ಸ್ವಾಮಿ
Manasfoorthi Learning Centre ಅಂಗನವಾಡಿ ಶಿಕ್ಷಕರಿಗೆ ಒತ್ತಡ ನಿರ್ವಹಣೆ ತರಬೇತಿ ಅತ್ಯಗತ್ಯ : ಚಂದ್ರಪ್ಪ
Manasfoorthi Learning Centre ಶಿವಮೊಗ್ಗದ ಮನಸ್ಫೂರ್ತಿ ಕಲಿಕಾ ಕೇಂದ್ರ, ಬೆಂಗಳೂರಿನ ಈಶಾನ್ಯ ಇಂಡಿಯಾ ಫೌಂಡೇಶನ್, ನಮ್ಮ ಹಳ್ಳಿ ಥಿಯೇಟರ್(ರಿ), ಶಿವಮೊಗ್ಗ ಇವರ ಸಹಯೋಗದೊಂದಿಗೆ ಜಿಲ್ಲೆಯ ಅಂಗನವಾಡಿ ಶಿಕ್ಷಕರಿಗೆ ಹಾಗೂ ಪರಿವೀಕ್ಷಕರಿಗೆ ಮನಸ್ಫೂರ್ತಿ ಕಲಿಕಾ ಕೇಂದ್ರದಲ್ಲಿ “ಬೌದ್ಧಿಕ ಮತ್ತು ಬೆಳವಣಿಗೆಯ ಹಂತಗಳು, ವಿಕಲತೆ” ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನಸ ಟ್ರಸ್ಟ್ ನ ನಿರ್ದೇಶಕರಾದ ಡಾ.ರಜನಿ.ಎ.ಪೈ ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕಲಿಕಾ ನ್ಯೂನತೆಯನ್ನು ಹೊಂದಿದ್ದರೂ ಬಹಳ ಪ್ರಯತ್ನದಿಂದ ವೈದ್ಯಕೀಯ ಶಿಕ್ಷಣವನ್ನು ಪಡೆದು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವ ವ್ಯಕ್ತಿಯನ್ನು ಉದಾಹರಿಸುವ ಮೂಲಕ ಪ್ರೇರಣೆ ನೀಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಪ್ರಭಾರಿ ಅಂಗವಿಕಲ ಯೋಜನಾಧಿಕಾರಿಗಳಾದ ಶ್ರೀ ಚಂದ್ರಪ್ಪ ತಮ್ಮ ಉದ್ಘಾಟನಾ ಭಾಷಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬಹಳ ಒತ್ತಡದ ನಡುವೆ ಕಾರ್ಯ ನಿರ್ವಹಿಸುತ್ತಾರೆ. ಇವರಿಗೆ ಇಂತಹ ತರಬೇತಿಗಳು ಆಗಾಗ ನಡೆದರೆ ಉತ್ತಮ. ಇಂತಹ ಪ್ರಯತ್ನವನ್ನು ಮನ:ಸ್ಫೂರ್ತಿ ಸಂಸ್ಥೆಯು ಬಹಳ ಹಿಂದಿನಿಂದಲೂ ನಡೆಸುತ್ತಿದೆ ಎಂದು ಶ್ಲಾಘಿಸಿದರು.
ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜಿನ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಶ್ರೀ ಮಂಜುನಾಥ ಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಈಶಾನ್ಯ ಫೌಂಡೇಶನ್ ನ ಶ್ರೀ ಮತಿ ಲಕ್ಷ್ಮೀ ಪ್ರಸಾದ್ ಹಾಗೂ ಶಿವಮೊಗ್ಗದ ನಮ್ಮ ಹಳ್ಳಿ ಥಿಯೇಟರ್(ರಿ)ನ ಅಧ್ಯಕ್ಷರಾದ ಚೇತನ್.ಸಿ.ರಾಯನಹಳ್ಳಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿಶೇಷ ಮಕ್ಕಳಿಗಾಗಿ ನಡೆಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿ ಪ್ರೋತ್ಸಾಹಿಸಿದರು.
Manasfoorthi Learning Centre ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಮನಸ್ಫೂರ್ತಿ ಕಲಿಕಾ ಕೇಂದ್ರದ ಸಂಯೋಜಕರಾದ ಶ್ರೀಮತಿ ರಂಗನಾಯಕಿ ಸ್ವಾಗತಿಸಿದರು. ಸಂಸ್ಥೆಯ ಶಿಕ್ಷಕಿಯಾದ ಶ್ರೀಮತಿ ಅನುಷಾ ಅರುಣ್ ಕಾರ್ಯಕ್ರಮದ ನಿರೂಪಣೆ ಮಾಡಿದರು ಹಾಗೂ ಕು.ಶಿಲ್ಪ.ಪಿ ವಂದನಾರ್ಪಣೆಯನ್ನು ನೆರವೇರಿಸಿದರು.
Water revenue ಫೆ.18.ಶಿವಮೊಗ್ಗದಲ್ಲಿ ನೀರಿನ ಕಂದಾಯ ಪಾವತಿ ಕೌಂಟರ್ ಗಳ ವ್ಯವಸ್ಥೆ
Water revenue ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗವು ದಿ: 18/02/2024 ರ ಭಾನುವಾರದಂದು 2023-24 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕಂದಾಯ ವಸೂಲಾತಿಗಾಗಿ ನಗರದ “ಶಿವಪ್ಪನಾಯಕ ಕೋಟೆ ಎದುರು ಎಸ್.ಪಿ.ಎಂ.ರಸ್ತೆ, ಅಶೋಕನಗರ ನಂದಿನಿ ಬೂತ್ ಪೊಲೀಸ್ ಕ್ವಾಟ್ರಸ್ ಹತ್ತಿರ, ಕನಕ ವಿದ್ಯಾ ಸಂಸ್ಥೆ ಆರ್.ಎಂ.ಎಲ್.ನಗರ, ಬ್ಯಾಂಕ್ ಆಫ್ ಬರೋಡಾ ಹತ್ತಿರ ಎಲ್.ಬಿ.ಎಸ್.ನಗರ, ಹಾಗೂ ಇಂದಿರಾಗಾಂಧೀ ಬಡಾವಣೆ ಐ.ಜಿ.ಸರ್ಕಲ್ ಹತ್ತಿರ” ಈ ಎಲ್ಲಾ ಕಡೆಗಳಲ್ಲಿ ವಿಶೇಷ ನೀರಿನ ಕಂದಾಯ ವಸೂಲಾತಿ ಕೌಂಟರ್ಗಳನ್ನು ತೆರೆಯಲಾಗಿದೆ.
ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸುವುದು ಅನಿವಾರ್ಯವಾಗಲಿದೆ.
Water revenue ಸಾರ್ವಜನಿಕರು ಸಹಕರಿಸುವಂತೆ ಕರ್ನಾಟಕ ನಗರ ನೀರುಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kuvempu University ನವದೆಹಲಿ ಗಣರಾಜ್ಯೋತ್ಸವ ಪರೇಡ್ ನಲ್ಲಿ ಪಾಲ್ಗೊಂಡ ಕೆಡೆಟ್ ಗಳಿಗೆ ಅಭಿನಂದನೆ
Kuvempu University ಕುವೆಂಪು ವಿಶ್ವವಿದ್ಯಾಲಯದಿಂದ ರಾಷ್ಟ್ರ (ನವದೆಹಲಿ) ಹಾಗೂ ರಾಜ್ಯಮಟ್ಟದ (ಬೆಂಗಳೂರು) ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭಾಗವಹಿಸಿ ನಮ್ಮ ವಿಶ್ವವಿದ್ಯಾಲಯಕ್ಕೆ ಕೀರ್ತಿ ತಂದಿರುವ ಸ್ವಯಂಸೇವಕರುಗಳಾದ ಕು. ಪ್ರಿಯಾ ಕೆ ಎನ್ ಮತ್ತು ಶ್ರೀ ದರ್ಶನ್ ಕೆ (ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಶಿವಮೊಗ್ಗ, ಕು. ಅಮೃತಾ ಜಿ (ಡಿ ವಿ ಎಸ್ ಕಾಲೇಜು, ಶಿವಮೊಗ್ಗ ) ಕು. ಅನುಷಾ ಎಲ್ (ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ, ಶಿವಮೊಗ್ಗ ) ಕು.ಸಂಧ್ಯಾ ಕೆ ಕೆ ಮತ್ತು ಶ್ರೀ ಹರ್ಷವರ್ಧನ ಹೆಚ್. ಎಂ, (ಕಟೀಲ್ ಅಶೋಕ್ ಪೈ ಕಾಲೇಜು, ಶಿವಮೊಗ್ಗ,) ಶ್ರೀ ಲಿಂಗರಾಜ್ ಎನ್ ಎಲ್ (ಎಸ್ ಆರ್ ಎನ್ ಎಮ್ ಕಾಲೇಜು, ಶಿವಮೊಗ್ಗ ) ಇವರುಗಳಿಗೆ ಕುವೆಂಪು ವಿಶ್ವವಿದ್ಯಾಲಯದ ವತಿಯಿಂದ ದಿನಾಂಕ 15-01-2024 ರಂದು ವಿಶ್ವವಿದ್ಯಾಲಯದ ನಗರ ಕಛೇರಿ ಶಿವಮೊಗ್ಗ ಇಲ್ಲಿ ಅವರವರ ಪೋಷಕರ ಸಮ್ಮುಖದಲ್ಲಿ ಅಭಿನಂದನೆಗಳನ್ನು ಸಲ್ಲಿಸಲಾಯಿತು.
Kuvempu University ವಿಶ್ವವಿದ್ಯಾಲಯದ ಸಂಯೋಜನಾಧಿಕಾರಿಗಳಾದ ಡಾ ಶುಭಾ ಮರವಂತೆ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ವಯಂ ಸೇವಕರು ಇನ್ನಷ್ಟು ಸಾಧನೆ ಮಾಡುವುದಕ್ಕೆ ಉತ್ತೇಜಿಸಿದರು.
New Ration Card ಏಪ್ರಿಲ್ 1ರಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನ
New Ration Card ಹೊಸ ಆದ್ಯತಾ ಪಡಿತರ ಚೀಟಿಯನ್ನು ಕೋರಿ ಸಲ್ಲಿಸಲಾಗಿರುವ 2,95,986 ಅರ್ಜಿಗಳನ್ನು ಇದೇ ಮಾರ್ಚ್ 31ರೊಳಗೆ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಏಪ್ರಿಲ್ 1ರಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಾಶಾಸ್ತ್ರ New Ration Card ಇಲಾಖಾ ಸಚಿವ ಕೆ.ಎಚ್.ಮುನಿಯಪ್ಪ ಅವರು ತಿಳಿಸಿದ್ದಾರೆ.
Santhwana Centres ಸಾಂತ್ವನ ಯೋಜನೆಗೆ ಸ್ವಯಂಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನ
Santhwana Centres ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಹಿಳೆಯರ ಮೇಲಿನ ವರದಕ್ಷಿಣೆ. ಕಿರುಕುಳ, ಅತ್ಯಾಚಾರ, ಲೈಂಗಿಕ ಕಿರುಕುಳ, ದೌರ್ಜನ್ಯ ಹಾಗೂ ಇನ್ನಿತರ ರೀತಿಯ ದೌರ್ಜನ್ಯಕ್ಕೆ ಒಳಗಾಗಿ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆಯನ್ನು ಅನುಭವಿಸುತ್ತಿರುವ ಮಹಿಳೆಯರಿಗೆ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಕಾನೂನು ಸಲಹೆ, ಆರ್ಥಿಕ ಪರಿಹಾರ, ತಾತ್ಕಾಲಿಕ ಆಶ್ರಯ, ರಕ್ಷಣೆ ನೀಡುವುದರ ಜೊತೆಗೆ ಸ್ವಾವಲಂಭನೆ ಸಾಧಿಸಲು ತರಬೇತಿ ನೀಡುವುದರೊಂದಿಗೆ ಇಂತಹ ಮಹಿಳೆಯರು ಸಮಾಜದಲ್ಲಿ ಇತರೆ ಮಹಿಳೆಯರಂತೆ ಧೈರ್ಯವಾಗಿ ಬದುಕುವಂತೆ ಸಶಕ್ತರನ್ನಾಗಿ ಮಾಡುವ ಉದ್ದೇಶ ಹೊಂದಿದ್ದು, ಅರ್ಹ ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಸ್ವಯಂಸೇವಾ ಸಂಸ್ಥೆಗಳು ನಿಗಧಿತ ನಮೂನೆ ಅರ್ಜಿಯನ್ನು ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆಲ್ಕೊಳ, ಶಿವಮೊಗ್ಗ ಇಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ ಫೆ. 29 ರೊಳಗಾಗಿ Santhwana Centres ಸಲ್ಲಿಸುವಂತೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಇಲಾಖಾ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-295514 ನ್ನು ಸಂಪರ್ಕಿಸುವುದು.
DC shivamogga ಭದ್ರಾವತಿಯಲ್ಲಿ ಸವಿತಾ ಮಹರ್ಷಿ ಜಯಂತಿ
DC shivamogga ಶಿವಮೊಗ್ಗದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಇಂದು ಭದ್ರಾವತಿಯ ತಾಲೂಕು ಆರೋಗ್ಯ ಕೇಂದ್ರ ಮತ್ತು ಪಶುಪಾಲನಾ ಇಲಾಖೆಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದರು.
DC shivamogga ಅಲ್ಲದೆ ಇಲಾಖೆಯ ಸಮರ್ಪಕ ಸೇವೆಗಳ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದರು.
Shivaji Maharaj Jayanti ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತಿ
Shivaji Maharaj Jayanti ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಶಿವಮೊಗ್ಗ ಇವರ ಸಂಯಕ್ತಾಶ್ರಯದಲ್ಲಿ ಫೆ.19 ರ ಬೆಳಗ್ಗೆ 11 ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತಿಯನ್ನು ಏರ್ಪಡಿಸಲಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧುಬಂಗಾರಪ್ಪ ಇವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಶಾಸಕ ಎಸ್.ಎನ್. ಚನ್ನಬಸಪ್ಪರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ತಂಗಡಗಿ ಶಿವರಾಜ್ ಸಂಗಪ್ಪ ಮತ್ತು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಹಾಗೂ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಿ. ಸುಧಾಕರ್ ಇವರುಗಳು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮದಲ್ಲಿ ಸಂಸದರು, ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ಪಾಲಿಕೆ ಮಹಾಪೌರರು, ಜನಪ್ರತಿನಿಧಿಗಳು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಜಿಲ್ಲೆಯ ಎಲ್ಲಾ ಗೌರವಾನ್ವಿತ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಮತ್ತು ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಹಾಗು ಸದಸ್ಯರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿ.ಪಂ ಸಿಇಓ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಮತ್ತು ಇನ್ನಿತರ ಗಣ್ಯರು, ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
Shivaji Maharaj Jayanti ಭದ್ರಾವತಿಯ ದಾಸರಕಲ್ಲಹಳ್ಳಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವಾಜಿ ರಾವ್ ಡಿಸ್ಲೇರವರಿಂದ ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ.
Constitution Awareness Jatha ಸಂವಿಧಾನ ಜಾಗೃತಿ ಜಾಥಾಕ್ಕೆ ಚಿಕ್ಕಜೇನಿಯಲ್ಲಿ ಅದ್ಧೂರಿ ಸ್ವಾಗತ
Constitution Awareness Jatha ರಾಜ್ಯಾದ್ಯಂತ ಸಂವಿಧಾನ ಜಾಗೃತಿ ಜಾಥಾ ನಡೆಯುತ್ತಿದ್ದು ಪ್ರತಿಯೊಂದು ಊರು ಗ್ರಾಮಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಕುರಿತು ವಿಭಿನ ರೀತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು
ಶಿಕಾರಿಪುರ ಪಟ್ಟಣದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಮೇಣದ ಬತ್ತಿಗಳನ್ನು ಹಚ್ಚುವುದರ ಮೂಲಕ ನಮ್ಮ ಸಂವಿಧಾನ ನಮ್ಮ ಹೆಮ್ಮೆ ಎಂವ ಶೀರ್ಷಿಕೆಯಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ವಸತಿ ನಿಲಯದ ವಾರ್ಡನ್ ನೃಪತುಂಗ ನಾಯ್ಕ್ ಎಸ್ ಅವರು ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆ ವಾಚನ ಮಾಡಿಸಿ ಸಂವಿಧಾನ ಕುರಿತು ಉಪನ್ಯಾಸ ನೀಡಿದರು.
Constitution Awareness Jatha ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ನಿಲಯದ ಸಿಬ್ಬಂದಿಗಳು ಸಂವಿಧಾನದ ಹೆಮ್ಮೆ ವ್ಯಕ್ತಪಡಿಸಿದರು.
Manaspoorthi Learning Center ಅಂಗನವಾಡಿ ಶಿಕ್ಷಕರಿಗೆ ಒತ್ತಡ ನಿರ್ವಹಣೆ ತರಬೇತಿ ಅತ್ಯಗತ್ಯ : ಚಂದ್ರಪ್ಪ
Manaspoorthi Learning Center ಶಿವಮೊಗ್ಗದ ಮನಸ್ಫೂರ್ತಿ ಕಲಿಕಾ ಕೇಂದ್ರ, ಬೆಂಗಳೂರಿನ ಈಶಾನ್ಯ ಇಂಡಿಯಾ ಫೌಂಡೇಶನ್, ನಮ್ಮ ಹಳ್ಳಿ ಥಿಯೇಟರ್(ರಿ), ಶಿವಮೊಗ್ಗ ಇವರ ಸಹಯೋಗದೊಂದಿಗೆ ಜಿಲ್ಲೆಯ ಅಂಗನವಾಡಿ ಶಿಕ್ಷಕರಿಗೆ ಹಾಗೂ ಪರಿವೀಕ್ಷಕರಿಗೆ ಮನಸ್ಫೂರ್ತಿ ಕಲಿಕಾ ಕೇಂದ್ರದಲ್ಲಿ “ಬೌದ್ಧಿಕ ಮತ್ತು ಬೆಳವಣಿಗೆಯ ಹಂತಗಳು, ವಿಕಲತೆ” ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನಸ ಟ್ರಸ್ಟ್ ನ ನಿರ್ದೇಶಕರಾದ ಡಾ.ರಜನಿ.ಎ.ಪೈ ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕಲಿಕಾ ನ್ಯೂನತೆಯನ್ನು ಹೊಂದಿದ್ದರೂ ಬಹಳ ಪ್ರಯತ್ನದಿಂದ ವೈದ್ಯಕೀಯ ಶಿಕ್ಷಣವನ್ನು ಪಡೆದು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವ ವ್ಯಕ್ತಿಯನ್ನು ಉದಾಹರಿಸುವ ಮೂಲಕ ಪ್ರೇರಣೆ ನೀಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಪ್ರಭಾರಿ ಅಂಗವಿಕಲ ಯೋಜನಾಧಿಕಾರಿಗಳಾದ ಶ್ರೀ ಚಂದ್ರಪ್ಪ ತಮ್ಮ ಉದ್ಘಾಟನಾ ಭಾಷಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬಹಳ ಒತ್ತಡದ ನಡುವೆ ಕಾರ್ಯ ನಿರ್ವಹಿಸುತ್ತಾರೆ. ಇವರಿಗೆ ಇಂತಹ ತರಬೇತಿಗಳು ಆಗಾಗ ನಡೆದರೆ ಉತ್ತಮ. ಇಂತಹ ಪ್ರಯತ್ನವನ್ನು ಮನ:ಸ್ಫೂರ್ತಿ ಸಂಸ್ಥೆಯು ಬಹಳ ಹಿಂದಿನಿಂದಲೂ ನಡೆಸುತ್ತಿದೆ ಎಂದು ಶ್ಲಾಘಿಸಿದರು.
ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜಿನ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಶ್ರೀ ಮಂಜುನಾಥ ಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಈಶಾನ್ಯ ಫೌಂಡೇಶನ್ ನ ಶ್ರೀ ಮತಿ ಲಕ್ಷ್ಮೀ ಪ್ರಸಾದ್ ಹಾಗೂ ಶಿವಮೊಗ್ಗದ ನಮ್ಮ ಹಳ್ಳಿ ಥಿಯೇಟರ್(ರಿ)ನ ಅಧ್ಯಕ್ಷರಾದ ಚೇತನ್.ಸಿ.ರಾಯನಹಳ್ಳಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿಶೇಷ ಮಕ್ಕಳಿಗಾಗಿ ನಡೆಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿ ಪ್ರೋತ್ಸಾಹಿಸಿದರು.
Manaspoorthi Learning Center ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಮನಸ್ಫೂರ್ತಿ ಕಲಿಕಾ ಕೇಂದ್ರದ ಸಂಯೋಜಕರಾದ ಶ್ರೀಮತಿ ರಂಗನಾಯಕಿ ಸ್ವಾಗತಿಸಿದರು. ಸಂಸ್ಥೆಯ ಶಿಕ್ಷಕಿಯಾದ ಶ್ರೀಮತಿ ಅನುಷಾ ಅರುಣ್ ಕಾರ್ಯಕ್ರಮದ ನಿರೂಪಣೆ ಮಾಡಿದರು ಹಾಗೂ ಕು.ಶಿಲ್ಪ.ಪಿ ವಂದನಾರ್ಪಣೆಯನ್ನು ನೆರವೇರಿಸಿದರು.
