Thursday, November 19, 2026
Thursday, November 19, 2026
Home Blog Page 1042

Indian National Congress ಬಿಎಸ್ ವೈ ಕುಟುಂಬಕ್ಕೆ ರಾಜಕೀಯ ಹಿನ್ನಡೆ ಒಡ್ಡಲು ಈಶ್ವರಪ್ಪನವರ ಪ್ರಯತ್ನ- ಜಿಲ್ಲಾ ಕಾಂಗ್ರೆಸ್ ಟೀಕಾ ಪ್ರಹಾರ

0

Indian National Congress ಕೊಚ್ಚೆ ನೀರಿಗೆ ಹೋಲಿಸಿದ್ದನ್ನು ಯಡಿಯೂರಪ್ಪ ಮರೆಯಲು ಸಾಧ್ಯವೇ.:ವೈ.ಬಿ.ಚಂದ್ರಕಾoತ್
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪವರು ಬಿ.ಜೆ.ಪಿ. ತೊರೆದು ಕೆ.ಜಿ.ಪಿ. ಕಟ್ಟಿದಾಗ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪರವರು, ಯಡಿಯೂರಪ್ಪರನ್ನು ತೆಗಳುವ ಭರದಲ್ಲಿ ಗಂಗಾ ನದಿಯ ಕೊಚ್ಚೆ ನೀರಿಗೆ ಹೋಲಿಸಿದ್ದನ್ನು ಮರೆಯಲು ಸಾಧ್ಯವೇ. ಅಂದಿನ ಸೇಡು ಈಶ್ವರಪ್ಪರ ಪುತ್ರ ಕೆ.ಈ.ಕಾಂತೇಶ್‌ರವರಿಗೆ ಟಿಕೆಟ್ ತಪ್ಪುವುದಕ್ಕೆ ಮುಖ್ಯ ಕಾರಣವಾಗಿದೆ ಎಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾoತ್ ಟೀಕಿಸಿದ್ದಾರೆ.

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಎರಡು ಬಾರಿ ಶಾಸಕರಾದ ಸಂದರ್ಭಗಳಲ್ಲಿ ಧರ್ಮದ ಪರ ಮತ್ತು ಮುಸ್ಲಿಂ ವಿರೋಧಿ ದೋರಣೆಯನ್ನು ಅಷ್ಠಾಗಿ ಅನುಸರಿಸಿರಲಿಲ್ಲ, ಯಾವಾಗ ತಮಗೆ ಕಳೆದ ಬಾರಿಯ ವಿಧಾನಸಭೆ ಚುನಾವಣೆಯ ಟಿಕೆಟ್ ನಿರಾಕರಿಸಲಾಯಿತೋ ಅಂದಿನಿoದ ರಾಜಕೀಯ ಅಧಿಕಾರ ಪಡೆಯುವ ಏಕೈಕ ಉದ್ದೇಶದಿಂದ ಬಾಯಿ ಬಿಟ್ಟರೆ ಸಾಕು ಕಾಂಗ್ರೇಸ್ ಪಕ್ಷ, ಸೋನಿಯಾ ಗಾಂಧಿ, ಸಿದ್ದರಾಮಯ್ಯ, ಪಾಕಿಸ್ತಾನ, ಹಿಂದು ಧರ್ಮ ಇವುಗಳನ್ನು ಬಿಟ್ಟು ಬೇರೆ ಮಾತನಾಡಲೇ ಇಲ್ಲ. ಈ ಹಿಂದಿನ ಲೋಕಸಭೆ, ವಿಧಾನಸಭೆ ಚುನಾವಣೆಗಳ ಸಂದರ್ಭಗಳಲ್ಲಿ ಕೆ.ಎಸ್. ಈಶ್ವರಪ್ಪರವರು ಎಷ್ಟು ನಿಷ್ಠೆಯಿಂದ ಎಷ್ಟರ ಮಟ್ಟಿಗೆ ಕೆಲಸ ಮಾಡಿದ್ದಾರೆಂದು ಬಿ.ಎಸ್.ಯಡಿಯೂಪ್ಪ ಆದಿಯಾಗಿ ರಾಜ್ಯದ ಜನರಿಗೆ ತಿಳಿದಿರುವ ವಿಷಯವೆ ಆಗಿದೆ ಎಂದು ವಕ್ತಾರರಾದ ವೈ.ಬಿ.ಚಂದ್ರಕಾoತ್ ಲೇವಡಿ ಮಾಡಿದ್ದಾರೆ.

ಬಿ.ಎಸ್. ಯಡಿಯೂರಪ್ಪ ಮತ್ತವರ ಮಕ್ಕಳ ರಾಜಕೀಯ ವಿಷಯದಲ್ಲಿ ನೇರವಾಗಿ ಅಲ್ಲದೆ ಇದ್ದರೂ ಹಿಂಬದಿಯ ಚಿತಾವಣೆಯನ್ನು ಕೆ.ಎಸ್.ಈಶ್ವರಪ್ಪ ಮಾಡುತ್ತಲೆ ಬಂದಿದ್ದಾರೆ. ಅದರಲ್ಲೂ ಈ ಹಿಂದೆ ಬಿ.ಎಸ್.ಯಡಿಯೂರಪ್ಪರವರು ಕೆ.ಜೆ.ಪಿ. ಕಟ್ಟಿದಾಗ ಇದೆ ಕೆ.ಎಸ್.ಈಶ್ವರಪ್ಪರವರು ವಾಗ್ದಾಳಿ ನಡೆಸಿ ಬಿ.ಎಸ್.ಯಡಿಯೂರಪ್ಪರವರು ಬಿ.ಜೆ.ಪಿ. ಪಕ್ಷದಿಂದ ಹೊರ ಹೋಗಿದ್ದು ಒಂದು ಪೀಡೆಯೇ ತೊಲಗಿದಂತೆ ಆಗಿದೆ, ಕಲುಶಿತ ಗಂಗಾನದಿ ಶುದ್ದವಾದಂತೆ ಆಗಿದೆ ಎಂದೆಲ್ಲಾ ಟೀಕಿಸುವ ಮೂಲಕ ಜಿಲ್ಲೆಯಲ್ಲಿ ತಮ್ಮ ರಾಜಕೀಯ ನೆಲೆಯನ್ನು ಮತ್ತಷ್ಟು ಭದ್ರ ಮಾಡಿಕೊಳ್ಲುವ ತಂತ್ರಗಾರಿಕೆ ಮಾಡಿದ್ದರು. ಈ ತಂತ್ರದ ಭಾಗವಾಗಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಗೆಲುವಿನ ವಾತಾವರಣ ಕಂಡು ಬಿ.ಎಸ್.ವೈ. ಕುಟುಂಬಕ್ಕೆ ರಾಜಕೀಯ ಹಿನ್ನಡೆ ಮಾಡುವ ಸಲುವಾಗಿಯೆ ತಮ್ಮ ಮಗನಿಗೆ ಟಿಕೇಟ್ ಕೇಳಿದ್ದರೆಂದು ವೈ.ಬಿ.ಚಂದ್ರಕಾoತ್ ಆರೋಪಿಸಿದ್ದಾರೆ.

Indian National Congress ಈಗ ಕಾಲ ಚಕ್ರ ಉರುಳಿದ ಮೇಲೂ ಈಶ್ವರಪ್ಪರ ಅಂದಿನ ರಾಜಕೀಯ ನಡವಳಿಕೆನ್ನು ಮರೆಯದ ಬಿ.ಎಸ್. ಯಡಿಯೂರಪ್ಪ ಅವರು ತಮ್ಮಲ್ಲಿರುವ ದಾಳಗಳನ್ನು ಬಿ.ಜೆ.ಪಿ ವರಿಷ್ಠರ ಮುಂದೆ ಕೆ.ಎಸ್.ಈಶ್ವರಪ್ಪರ ರಾಜಕೀಯ ಭವಿಷ್ಯಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದರಿಂದ ಈಶ್ವರಪ್ಪರ ಪುತ್ರ ಕೆ.ಈ.ಕಾಂತೇಶ್ ಅವರಿಗೆ ಲೋಕಸಭೆಯ ಟಿಕೆಟ್ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾoತ್ ಅವರು ಹೇಳಿದ್ದಾರೆ.

Akashavani Bhadravati ಕೇಳುಗರೊಂದಿಗೆ ಅನನ್ಯತೆ ಸಂಪಾದಿಸಿರುವ ಆಕಾಶವಾಣಿ ಭದ್ರಾವತಿ

0

ಲೇ: ಡಾ.ನಾಗಭೂಷಣ.

Akashavani Bhadravati  ಆಕಾಶವಾಣಿ ಭದ್ರಾವತಿ ಕೇಂದ್ರವು 7/ 02 /1965 ರಲ್ಲಿ ಉಕ್ಕಿನ ನಗರಕ್ಕೆ ಬಾನುಲಿಯಿಂದ ವಂದೇ ಮಾತರಂ ಎಂಬ ಘೋಷ ವಾಕ್ಯವನ್ನು ಕೇಳುಗರಿಗೆ ಮನೆ ಮನೆಗೆ ತಲುಪುವ ಮೂಲಕ ತನ್ನ ಕಾರ್ಯಕ್ರಮವನ್ನು ಆರಂಭಿಸಿತು ಆ ದಿನ ಮೊದಲ ನಿರೂಪಕರಾಗಿ ಈಶ್ವರಾವ್ ಕಾಳೇಕರ್ ಹಾಗೂ ಸರಸ್ವತಿಯವರು ಕೇಳುಗರಿಗೆ ಧ್ವನಿಯಾದರು. ಈ ನಿಲಯದ ಮೊದಲ ಮುಖ್ಯಸ್ಥರಾಗಿ ಮೊಹಮ್ಮದ್ ಸಿದಿಕ್ ಅವರು ಕಾರ್ಯಕ್ರಮ ನಿರ್ವಾಕರಾಗಿ ಕೆಲವು ವರ್ಷ ಸಹ ಪ್ರಸಾರ ಕಾರ್ಯಕ್ರಮವನ್ನು ನೀಡುತ್ತಾ, ಆಮೇಲೆ ಅಂಬೆಗಾಲು ಇಡುತ್ತ ಒಂದೊಂದೇ ಕಾರ್ಯಕ್ರಮವನ್ನು ನಿಲಯವುತನ್ನ ಮಡಿಲಿನಿಂದ ಕೇಳುಗರಿಗೆ ಉಣಬಡಿಸುತ್ತಾ ಬಂದಿತ್ತು .ಆನಂತರ ಡಾ. ವಸಂತ ಕಾವಲಿ ಅವರು ಮುಖ್ಯಸ್ಥರಾಗಿ ಬಂದಮೇಲೆ ನಮ್ಮ ಆಕಾಶವಾಣಿ ಭದ್ರಾವತಿ ಕೇಂದ್ರವು ರಶ್ಮಿ, ಕನ್ನಡ ಭಾರತಿ ,ಕಾರ್ಮಿಕರಿಗಾಗಿ ಕಾರ್ಯಕ್ರಮ ಹೀಗೆ ಮೊದಲಾದ ಹೊಸ ಹೊಸ ವಿನೂತನ ಕಾರ್ಯಕ್ರಮಗಳು ಡಾ. ವಸಂತ ಕಾವಲಿ ಅವರೇ ನೇತೃತ್ವದಲ್ಲಿ ಹೊರಹೊಮ್ಮಿತು ಆಕಾಶವಾಣಿ ಭದ್ರಾವತಿಯಿಂದ ನಂತರ ಸುಧೀಂದ್ರ ಅವರು ಡಾಕ್ಟರ್ ವಸಂತ್ ಕಾವಲಿ ಅವರ ಜೊತೆಯಲ್ಲಿ ಕಾರ್ಯನಿರ್ವಹಿಸಿದರು. ಹೊಸ ಕಾರ್ಯಕ್ರಮಗಳು ರೂಪಗೊಂಡವು ಚಂದನ, ಗೂಡಿನಿಂದ ಬಿಟ್ಟ ಹಕ್ಕಿಗಳು, ಆಸ್ವಾದ, ಕಾಫಿ ಟೈಮ್ ಹೀಗೆ ಮೊದಲಾದ ಕಾರ್ಯಕ್ರಮಗಳನ್ನ ಆಕಾಶವಾಣಿ ಭದ್ರಾವತಿಯು ಆರಂಭಿಸಿತು. ಮಕ್ಕಳಿಗಾಗಿ ಬಾಲ ಜಗತ್ತು ,ಚಿಣ್ಣರ ಬಳಗ ,ಚಿಣ್ಣರ ಚಿಲಿಪಿಲಿ ಹಾಗೇನೆ ಚಿತ್ರಗೀತೆ ಕೇಳುವವರಿಗೆ ಚಿತ್ರರಂಜನೆ ಮೆಚ್ಚಿನ ಚಿತ್ರದ ಹಾಡುಗಳು, ಚಿತ್ರರಸಿಕರಿಗಾಗಿ ನಿಮ್ಮ ಹಾಡು ನಿಮ್ಮ ಆಯ್ಕೆ, ಇನ್ನೂ ಮಹಿಳೆಯರಿಗಾಗಿ ವನಿತಾ ರಂಗ ಕಾರ್ಯಕ್ರಮ ಹೀಗೆ ರೈತರಿಗಾಗಿ ಕೃಷಿ ರಂಗ ಕಾರ್ಯಕ್ರಮ ಯುವಕರಿಗಾಗಿ ಯುವವಾಣಿ, ಯಕ್ಷಗಾನ ಪ್ರಿಯರಿಗೆ ಯಕ್ಷಗಾನ ಕಾರ್ಯಕ್ರಮ ಹೀಗೆ 10 ಹಲವು ಕಾರ್ಯಕ್ರಮಗಳನ್ನು ಆಕಾಶವಾಣಿ ತನ್ನ ಮುಡಿಗೆ ಏರಿಸಿಕೊಳ್ಳುತ್ತ ವಿಶೇಷವಾದಂತಹ ಒಂದು ವೈಶಿಷ್ಟ್ಯ ಪೂರ್ಣವಾದಂತಹ ಕಾರ್ಯಕ್ರಮವನ್ನು ನೀಡುತ್ತಾ ಬಂದಿದೆ .ಇನ್ನು ಅನೇಕ ಈ ನಿಲಯದ ಮುಖ್ಯಸ್ಥರು ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ .ಉಷಾಲತಾ , ಡಾ. ಸುಧೀಂದ್ರ , ಬಳ್ಳಾರಿ ರಾಘವೇಂದ್ರ ಅವರು ಮುಂದುವರೆದಂತೆ ಇನ್ನು ಅನೇಕ ಮಹನೀಯರು ಆಕಾಶವಾಣಿ ಭದ್ರಾವತಿಯ ಏಳಿಗೆಗಾಗಿ ಶ್ರಮಸಿದ್ದಾರೆ. ಆಕಾಶವಾಣಿಯಲ್ಲಿ ಅನೇಕ ಉದ್ಘೋಷಕರ ಕಾರ್ಯನಿರ್ವಹಿಸಿದ್ದಾರೆ ಅವರುಗಳೆಂದರೆ ರಾಣಿ ರತ್ನ ರಾವ್, ಚಿನ್ನಪ್ಪ ,ಸುಬ್ರಮಣ್ಯ , ನಳಿನಾ ಎಂ ಕೆ ಶಿವಕುಮಾರ್ ಅವರು ಕಾರ್ಯ ನಿರ್ವಹಿಸಿದ್ದಾರೆ. ಆಕಾಶವಾಣಿಯ ಕಾರ್ಯಕ್ರಮವನ್ನು ನಿರೂಪಿಸಲು ಅನೇಕ ಕೊಡುಗೆಗಳನ್ನು ನೀಡುತ್ತಾ ಬಂದಿರೋದು ನಮಗೆ ತಿಳಿದು ಬರುತ್ತದೆ.

2016-17ರ ಹೊತ್ತಿಗೆ ಇನ್ನಷ್ಟು ವಿನೂತನ ಕಾರ್ಯಕ್ರಮಗಳನ್ನ ರಂಜಿಸಿದೆ ಅದರಲ್ಲಿ ಮುಖ್ಯವಾಗಿ ನಾವು ಕಾಣುವಂತದ್ದು ನಿಮ್ ಲೈಫ್ ನಮ್ ದುನಿಯಾ, ಕಾರ್ಯಕ್ರಮ ಭಾವ ಲಹರಿ ,ಭಾವ ಚಿತ್ತಾರ ಎಲ್ಲ ಕಾರ್ಯಕ್ರಮಗಳು ಹೊಸ ಹೊಸ ಒಂದು ಆಯಾಮಗಳನ್ನು ನೀಡುತ್ತಾ ಬಂದಿದೆ ಆಕಾಶವಾಣಿ ಭದ್ರಾವತಿ. ಇಂತಹ ಆಕಾಶವಾಣಿಯಲ್ಲಿ ಕಾರ್ಯನಿರ್ವಹಿಸಿದಂತ ರಾಣಿ ರತ್ನರಾವ್ ,ನೇತ್ರಾವತಿ ಅಭಿರಾಮ್ ಮೂರ್ತಿಯವರು ,ಆಲಮಕ್ಕಿ ಮಂಜುಳಾ, ನಳಿನಮ್ಮ, ಇದರ ಜೊತೆಗೆ ನಮ್ಮ ಆಕಾಶ್ ವಾಣಿಯ ಮುಖ್ಯಸ್ಥರಾಗಿ ಕಾರ್ಯ ಎಂದರೆ ಸಿ.ಎನ್ ರಾಮಚಂದ್ರನ್ ಎಂ .ಎ ಸುದರ್ಶನ, ವೇಣುಗೋಪಾಲ್ , ಸುಂದರೇಶ್, ಸುಧೀಂದ್ರ, ಜಿ.ಕೆ ರವೀಂದ್ರ ಕುಮಾರ,ನಾರಾಯಣ ಭಟ್, ಎಂ ಎಸ್ ನಾಗೇಂದ್ರ, ಈಗ ಎಸ್ ಆರ್ ಭಟ್ಟವರು ಆಕಾಶವಾಣಿ ಭದ್ರಾವತಿ ಕಾರ್ಯಕ್ರಮದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಹಾಗೆ ಕಾರ್ಯಕ್ರಮ ನಿರ್ವಾಹಕರಾಗಿ ಎಸ್.ಎಲ್ ರಮೇಶ್ ಪ್ರಸಾದ್ ಅವರು ನಿರವಹಿಸುತ್ತಿದ್ದಾರೆ .ಈ ಎಲ್ಲರ ಒಂದು ಕೊಡುಗೆಯಿಂದಯಿಂದಾಗಿ ಆಕಾಶವಾಣಿಯು ಕರ್ನಾಟಕ ಮಾತ್ರವಲ್ಲದೆ ದೇಶವಿದೇಶಗಳಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನು ನೀಡುತ್ತಾ ತನ್ನ ಪ್ರಚಾರತೆಯನ್ನ ತನ್ನ ಪ್ರಕಾರತೆಯನ್ನು ಬೀರಿದೆ. ಇತ್ತೀಚಿಗೆ ಸುವರ್ಣ ಕರ್ನಾಟಕದ ಸಂದರ್ಭದಲ್ಲಿ ಹೊರನಾಡ ಕನ್ನಡಿಗರಿಗಾಗಿ ವಿಶೇಷವಾದಂತಹ ಕಾರ್ಯಕ್ರಮವನ್ನು ಆಕಾಶವಾಣಿ ಭದ್ರಾವತಿಯು ರೂಪಿಸಿದೆ. ಇದರೊಟ್ಟಿಗೆ ಕ್ಯಾಂಪಸ್ ಕಟ್ಟೆ ಕಾರ್ಯಕ್ರಮ ವಿದ್ಯಾರ್ಥಿಗಳಿಗಾಗಿ ಕ್ಯಾಂಪಸ್ ನೇರ ಪ್ರಸಾರದ ಕಾರ್ಯಕ್ರಮವಾಗಿದೆ ಜೊತೆಯಲ್ಲಿ ಅನೇಕ ಸಾಧಕರು ಪರಿಚಯ ಮಾಡಿರುವಂತಹ ಕಾರ್ಯಕ್ರಮ ಆಗಿದೆ. ಹಾಡು ಮಾತಾಡು ಕಾರ್ಯಕ್ರಮ ಪ್ರತಿನಿತ್ಯ ಬೆಳಗ್ಗೆ 10 ಗಂಟೆಯಿಂದ 11 ಗಂಟೆವರೆಗೂ ವಿನೂತನವಾದಂತಹ ಕಾರ್ಯಕ್ರಮವಾಗಿದೆ ಇದು. ಮೊದಲನೇ ದಿನ ಒಗಟು ಇರಬಹುದು ಪದಬಂಧ ಇರಬಹುದು ಹಾಗೇನೆ ಗಾದೆ ಬಂಡಿ ಇರಬಹುದು ಹಾಗೇನೆ ಮುಂದುವರೆದಂತೆ ಸಾಧಕರ ಪರಿಚಯಾತ್ಮಕ ಕಾರ್ಯಕ್ರಮ ಇರಬಹುದು ಹಾಗೆನೇ ವಿಜ್ಞಾನಕ್ಕೆ ಸಂಬಂಧ ಪಟ್ಟಂತೆ ರಸಪ್ರಶ್ನೆ ಕಾರ್ಯಕ್ರಮ ಕ್ರೀಡಾ ರಸಪ್ರಶ್ನೆ ಜೊತೆಗೆ ಕಥೆ ನಿಮ್ಮ ಜೊತೆ ಹೀಗೆ ಅನೇಕ ಕಾರ್ಯಕ್ರಮಗಳನ್ನು ಪ್ರಸ್ತುತ ಸಂದರ್ಭದಲ್ಲಿ ಆಕಾಶವಾಣಿ ಭದ್ರಾವತಿಯು ಅನೇಕ ಆಯಾಮಗಳಲ್ಲಿ ವಿಶೇಷವಾದಂತಹ ಕಾರ್ಯಕ್ರಮಗಳನ್ನು ರೂಪಿಸುತ್ತಾ ಕೇಳುಗರನ್ನ ಮನಸ್ಸನ್ನು ಸೂರೆಗೊಂಡಿದೆ . ಸ್ನೇಹಿತರೆ Akashavani Bhadravati  ಇಂತಹ ಆಕಾಶವಾಣಿ ಭದ್ರಾವತಿಗೆ ಈಗ 60ರ ಪ್ರಾಯ. ಅಂದ್ರೆ 59 ವರ್ಷ ತುಂಬಿ 60ನೇ ವರ್ಷಕ್ಕೆ ಈ ಫೆಬ್ರವರಿ 7ನೇ ತಾರೀಖಿನಂದು ಪಾದಾರ್ಪಣೆ ಮಾಡ್ತಾರೆ.

ಭದ್ರಾವತಿ ಆಕಾಶವಾಣಿಯ ಬೆಳವಣಿಗೆಯ ಮಜಲಿನಲ್ಲಿ ಎಸ್.ಎಸ್.ಹಿರೇಮಠ್, ಎಂ.ಎಸ್. ಶ್ರೀಹರಿ, ಸುಬ್ಬುರತ್ನ, ಜಯರಾಮನ್ ಎಂ,ಎಸ್.ವಿಜಯಾಹರನ್,ರಾಜಲಕ್ಷ್ಮೀ ಶ್ರೀಧರ್, ಡಿ.ಎಸ್.ನಾಗಭೂಷಣ, ಎಂ.ಎಸ್.ಕೆ.ಪ್ರಭು ಮತ್ತು ಎಸ್.ಎಚ್.ಆಂಜನಪ್ಪ ,ಮಹಾಬಲೇಶ್ವರ ರಾವ್, ಎ.ಪಿ.ಕದಂ,ಎಸ್ ಎಸ್ ಬನಜ್ಜ, ಡಾ. ಸದಾನಂದ ಹೊಳ್ಳ, ಡಾ. ಎಂ. ಜಿ ವೇದ ಮೂರ್ತಿ ಮತ್ತು ಮುಳ್ಳೂರ್,
ಮುಂತಾದವರ ಹೆಸರುಗಳನ್ನ ಅವಶ್ಯ ಈ ಸಂದರ್ಭದಲ್ಲಿ ಉಲ್ಲೇಖಿಸಬೇಕು.

ಚರ್ಚೆ ಸಂವಾದ ಸರ್ಕಾರದ ಇತ್ಯಾದಿ ಯೋಜನೆಗಳ ಬಗ್ಗೆ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಆಕಾಶವಾಣಿ ಭದ್ರಾವತಿಯು ತನ್ನ ದೇ ಆದ ಕಾರ್ಯ ನಿರ್ವಹಿಸಿದೆ. ಇದರೊಟ್ಟಿಗೆ ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳು, ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳು ಮೊದಲಾದ ಕಾರ್ಯಕ್ರಮಗಳನ್ನ ಆಕಾಶವಾಣಿ ನೀಡುತ್ತಾ ಬಂದಿದೆ.ಅಂದು ಇಂದು ಎಂದೆಂದಿಗೂ ಸುಮಾರು ಇಡೀ ನಮ್ಮ ಭಾರತದಾದ್ಯಂತ ಆಕಾಶವಾಣಿ ಆರಂಭವಾಗಿ 98 ವರ್ಷಗಳ ಕಾಲ ಕಳೆದಿದೆ ಆಕಾಶವಾಣಿ ತನ್ನದೇ ಆದ ಒಂದು ಪ್ರಸಾರ ಕಾರ್ಯದಲ್ಲಿ ತನ್ನದೇ ಆದ ಒಂದು ಅನನ್ಯತೆಯನ್ನು ಹೊಂದಿದೆ ಅಂತಲೇ ಹೇಳಬಹುದಾಗಿದೆ.

KLive Special Article ಪ್ರಹ್ಲಾದವ್ಯಾಸ ಮುನೀಂದ್ರ ಶ್ರೀರಾಘವೇಂದ್ರ

0

ಲೇ: ಎನ್.ಜಯಭೀಮ ಜೊಯಿಸ್.
ಶಿವಮೊಗ್ಗ.

KLive Special Article ಚತುರ್ಮುಖ ಬ್ರಹ್ಮದೇವರ ಶಾಪದಂತೆ ಶಂಕುಕರ್ಣನು
ಅಸುರರಾಜನಾದ ಹಿರಣ್ಯಕಶಿಪು ಮತ್ತು ಕಯಾದುವಿನ
ಮಗ ಪ್ರಹ್ಲಾದರಾಜರಾಗಿ ಜನ್ಮ ತಾಳುತ್ತಾರೆ.

ದೈತ್ಯ ಸಾಮ್ರಾಟನಾದ ಹಿರಣ್ಯಕಶಿಪು ಬ್ರಹ್ಮದೇವರನ್ನು ಕುರಿತು ಕಠಿಣ ತಪಸ್ಸನ್ನು ಮಾಡಲು ಮಂದರಾಚಲಕ್ಕೆ ತೆರಳುತ್ತಾನೆ.
ಅವನು ತಪಸ್ಸಿಗೆ ಹೋದಾಗಲೂ ಶ್ರೀಹರಿಯ ಪರಮ ದ್ವೇಷಿಯಾದ ಅವನಿಗೆ ಅಲ್ಲಿ ಕಲವಂಕ(ಗುಬ್ಬಿ)ಪಕ್ಷಿಗಳು
“ಓಂ ನಮೋ ನಾರಾಯಣಾಯ”ಎಂದು ಹರಿನಾಮಸ್ಮರ
ಣೆ ಮಾಡಿದವು.ಕೋಪಬಂದ ಹಿರಣ್ಯಕಶಿಪುವು ಅವನೂ
ಮೆಲ್ಲಗೆ ನಾರಾಯಣ ಎನ್ನುತ್ತಿರುವಾಗ ಅವನ ಮನಸ್ಸು
ಅವನಿಗರಿವಿಲ್ಲದಂತೆಯೇ ಪ್ರಶಾಂತವಾಗಿತ್ತು.ಇದೇ ಸಮಯವನ್ನು ನಿರೀಕ್ಷಿಸುತ್ತಿದ್ದ ಶಂಕುಕರ್ಣನು ಅವನ ದೇಹದಲ್ಲಿ ಸೇರಿಬಿಡುತ್ತಾನೆ.

ಹಿರಣ್ಯಕಶ್ಯಪ ತನ್ನ ದ್ವೇಷಿಯಾದ ಹರಿಯ ಹೆಸರನ್ನು ಕೇಳಿ ತಪಸ್ಸುಮಾಡಲು ವಿಘ್ನವಾಯಿತು ಎಂದು ವಾಪಸ್ ಅರಮನೆಗೆ ಹಿಂದಿರುಗಿ ಬಿಡುತ್ತಾನೆ.ಕಯಾದು
ತಪಸ್ಸು ಮಾಡದೇ ವಾಪಾಸ್ ಬಂದವನನ್ನು ಉಪಚರಿಸಿ
ಸೇವಾ ಮಾಡುತ್ತಾಳೆ.

ಇವನು ತಪಸ್ಸು ಮಾಡದೇ ವಾಪಸ್ ಬಂದ ಕಾರಣವನ್ನು
ಹೇಳುತ್ತಾನೆ.ತಾನು ತಪಸ್ಸಿಗೆ ಕೂಡುತ್ತಿದ್ದಂತೆಯೇ ಎರಡು ಗುಬ್ಬಿ ಪಕ್ಷಿಗಳು “ಓಂನಮೋನಾರಾಯಣಾಯ”ಎಂದು
ಮೂರುಬಾರಿ ಉಚ್ಚರಿಸಿ ಹಾರಿಹೋದವು,ನನ್ನ ಶತೃವಾದ ಹರಿಯನಾಮವನ್ನು ಕೇಳಿದ್ದರಿಂದ ಅಪಶಕುನವೆಂದು ಭಾವಿಸಿ ನಾನು ಮರಳಿ ಅರಮನೆಗೆ
ಬಂದೆನು ಎಂದು ಕಯಾದುಬಳಿ ತಿಳಿಸುತ್ತಾನೆ.

ಅರಮನೆಗೆ ಮರಳಿದ ಪತಿದೇವನನ್ನು ಕಂಡ ಕಯಾದುವಿಗೆ ಬಹಳ ಸಂತೋಷವಾಗುತ್ತದೆ.
ಮತ್ತೆ ಕೆಲವು ಕಾಲ ಮುಗಿದ ಮೇಲೆ ಹಿರಣ್ಯಕಶಿಪು ವರವನ್ನು ಪಡೆಯಲು ಗರ್ಭಿಣಿಯಾದ ಕಯಾದುವನ್ನು
ಬಿಟ್ಟು ಮಂದರಾಚಲಕ್ಕೆ ಹೋಗುತ್ತಾನೆ.
ಹಿರಣ್ಯಕಶಿಪು ತಪಸ್ಸಿಗೆಂತ ಹೊರಟ ಕೂಡಲೇ ಇಂದ್ರನು
ದೇವತೆಗಳಿಂದೊಡಗೂಡಿ ದೈತ್ಯರಾಜ್ಯವನ್ನು ಆಕ್ರಮಿಸಿ ,ದೈತ್ಯರನ್ನು ಅಲ್ಲಿಂದ ಓಡಿಸಿ ಹಿರಣ್ಯಕಶಿಪುವಿನ ರಾಣಿ ಕಯಾದು ಗರ್ಭಿಣಿಯಾಗಿರುವುದನ್ನು ತಿಳಿದು ಶತೃಶೇಷವನ್ನು ಉಳಿಸಬಾರದೆಂದು ಕಯಾದುವಿನ ಗರ್ಭವನ್ನು ನಾಶಪಡಿಸಲಿಚ್ಛಿಸಿ ,ಕಯಾದುವನ್ನು ಸೆರೆಹಿಡಿದು ಕರೆದು
ಕೊಂಡು ಹೋಗುತ್ತಾನೆ.ಅದೇ ವೇಳೆಗೆ ದೈವಯೋಗದಿಂದ ನಾರದರು ಭಗವನ್ನಾಮ ಸಂಕೀರ್ತನೆ ಮಾಡುತ್ತಾ ಅಲ್ಲಿಗೆ ಬರುತ್ತಾರೆ.ಇಂದ್ರನು ಕಯಾದುವನ್ನು
ಸೆರೆ ಹಿಡಿದಿರುವುದನ್ನು ತಿಳಿದ ನಾರದಮಹರ್ಷಿಗಳು
ಇಂದ್ರನಿಗೆ ಬುದ್ಧಿಹೇಳಿ ಕಯಾದುವಿನ ಗರ್ಭದಲ್ಲಿ ವಾಯ್ವಾವೇಶಯುಕ್ತನಾದ ,ಮಹಾಭಾಗವತೋತ್ತಮನಿರುವುದರಿಂದ ಅವನನ್ನು ಸಂಹರಿಸಲು ಯಾರೂ ಸಮರ್ಥರಲ್ಲ.ಆ ಶ್ರೀಹರಿ ಭಕ್ತನಿಂದಲೇ ದೇವತೆಗಳ ಮತ್ತು ಸಮಸ್ತ ಜಗತ್ತಿನ ಕಲ್ಯಾಣವಾಗುವುದು ಎಂದು ಮುಂತಾಗಿ ಉಪದೇಶಿಸಿ ಕಯಾದುವಿನ ಗರ್ಭವನ್ನು ರಕ್ಷಿಸಿದರು.

ದೇವೇಂದ್ರನು ಜ್ಞಾನದೃಷ್ಟಿಯಿಂದ ನಾರದಮುನಿಗಳ
ಮಾತಿನ ಸತ್ಯತೆಯನ್ನರಿತು ಕಯಾದುವಿನ ಗರ್ಭದಲ್ಲಿರುವ ಉದರಸ್ಥ ವಾಯುದೇವರಿಗೆ ನಮಿಸಿ
ಹೋಗುತ್ತಾನೆ.
ಕಯಾದುವು ಸಂತೋಷದಿಂದ ನಾರದಮಹರ್ಷಿಗಳಿಗೆ
“ಸ್ವಾಮೀ,ಕರುಣಾಳುಗಳಾದ ನೀವು ಸಕಾಲದಲ್ಲಿ ಬಂದು
ನನ್ನನ್ನೂ ,ನನ್ನ ಗರ್ಭದಲ್ಲಿರುವ ಮಗುವನ್ನು ಕಾಪಾಡಿದಿರಿ.,ನಿಮಗೆನನ್ನಅನಂತನಮಸ್ಕಾರಗಳು”ಎಂದು ತನ್ನ ಗೌರವವನ್ನು ವ್ಯಕ್ತ ಪಡಿಸಿದಳು.ನಾರದರು ಪುತ್ರಿ ನಿನ್ನ ವಿಪತ್ತು ದೂರಾಯಿತು.ಚಿಂತಿಸಬೇಡ “ನಿನ್ನ ಪತಿಯು ತಪಸ್ಸಿನಿಂದ ಹಿಂದಿರುಗುವವರೆಗೂ ನೀನು ನನ್ನ ಆಶ್ರಮದಲ್ಲಿ ಶಾಂತತೆಯಿಂದ,ಭಗವತ್ ಚಿಂತನೆಯನ್ನು ಮಾಡುತ್ತಾಇರಮ್ಮ”ಎಂದು ಹೇಳಿ ಅವಳನ್ನು ತಮ್ಮ ಆಶ್ರಮಕ್ಕೆ ಕರೆದೊಯ್ದರು.
ನಾರದ ಮಹರ್ಷಿಗಳ ಆಶ್ರಮದಲ್ಲಿಕಯಾದುದೇವಿಯು ಬಹಳಸಂತೋಷದಿಂದಕಾಲಾಯಾಪನೆಮಾಡತೊಡಗಿದಳು.ಆಶ್ರಮದಲ್ಲಿ ಋಷಿಪತ್ನಿಯರ ಸಹವಾಸದಲ್ಲಿ ಅವಳ ಮನಸ್ಸು ಅರಮನೆಯ ಭೋಗಾದಿಗಳನ್ನು ತೊರೆದು ಆಶ್ರಮದಲ್ಲಿನಜೀವನದಲ್ಲಿಸಂತೋಷಕಾಣತೊಡಗಿದಳು.ಋಷಿಪತ್ನಿಯರುಬೇಡಬೇಡವೆಂದರೂನಾರದರಆಹ್ನಿಕ-ಪೂಜಾದಿಗಳಿಗೆಬೇಕಾದ ಸಮಸ್ತ ಸಾಮಗ್ರಿಗಳನ್ನೂ ಅಣಿಮಾಡಿಡುತ್ತಿದ್ದಳು.ಸ್ವಲ್ಪವೂ ಬೇಸರವಿಲ್ಲದೆ ಶ್ರೀಹರಿಯ ಸೇವೆಯಲ್ಲಿ ಭಾಗಿಯಾಗಿ ಪುಣ್ಯಸಂಪಾದನೆ
ಮಾಡಿಕೊಳ್ಳತೊಡಗಿದಳು.ಕಯಾದುವಿನನಿರ್ಮಲವಾದ ಮನಸ್ಸು ಶ್ರದ್ಧಾ ಭಕ್ತಿ ಸೇವೆಗಳನ್ನುಕಂಡುಸ್ವಯಂನಾರದ ಮಹರ್ಷಿಗಳು ಮುಗ್ಧರಾಗುತ್ತಿದ್ದರು.ಹೀಗೆ ಕಯಾದುವು ನಾರದರ ಆಶ್ರಮದಲ್ಲಿಸದಾಚಾರಸದ್ಭಾವನಾಭರಿತಳಾಗಿ ಕಾಲಕಳೆಯುತ್ತಿದ್ದಳು.ಬ್ರಹ್ಮದೇವರು ಘೋರವಾದ ತಪಸ್ಸನ್ನು ಮಾಡುತ್ತಿದ್ದ ಹಿರಣ್ಯಕಶಿಪುವಿಗೆ ವರವನ್ನು ಕೊಡಲು ಮಂದರಪರ್ವತಕ್ಕೆ ಬರುತ್ತಾನೆ.
ಹಿರಣ್ಯಕಶಿಪುವಿನ ತಪಸ್ಸು ಎಷ್ಟು ಘೋರವಾಗಿತ್ತೆಂದರೆ
ಅವನಶರೀರವೆಲ್ಲಾಬಿದಿರುಹುಲ್ಲುಗಳಿಂದಮುಚ್ಚಿಹೋಗಿ ,ದೇಹದ ಸುತ್ತಲೂ ಹುತ್ತ ಬೆಳೆದು ಇರುವೆಹುಳಗಳಿಂದ ತುಂಬಿಅಸ್ತಿಚರ್ಮಮಾತ್ರಉಳಿದಿರುವಹಿರಣ್ಯಕಶಿಪುವಿನ ಜೀರ್ಣ ದೇಹವನ್ನು ಕಂಡುತಮ್ಮಕಮಂಡಲೋದಕದಿಂದ ಪ್ರೋಕ್ಷಿಸುತ್ತಾರೆ.ಕೂಡಲೇಕಟ್ಟಿಗೆಯಿಂದಹೊರಹೊಮ್ಮುವ ಪ್ರಕಾಶಮಾನವಾದಅಗ್ನಿಯಂತೆ,ಸರ್ವಾಂಗ ಸುಂದರನಾದ ತಾರುಣ್ಯರೂಪದಿಂದ ಕಂಗೊಳಿಸುತ್ತಾ ಹಿರಣ್ಯಕಶಿಪುವಿನಮೈಮೇಲಿದ್ದ ಹುತ್ತವೆಲ್ಲ ಕರಗಿ ಹೊರಬರತ್ತಾನೆ.
ಆಗ ಬ್ರಹ್ಮದೇವರು” ವತ್ಸ! ಏಳು ,ನಿನ್ನ ಘೋರವಾದ ತಪಸ್ಸಿಗೆ ಮೆಚ್ಚಿದ್ದೇನೆ ,ನಿನಗಿಷ್ಟವಾದ ವರವನ್ನು ಕೇಳು,
ದಾನವರಾಜ “ಎಂದು ಹೇಳುತ್ತಾರೆ.
ಸರ್ವಲೋಕ ಪಿತಾಮಹನೂ ,ತನ್ನಿಷ್ಟ ದೇವನೂ ಆದ
ಹಂಸದಮೇಲೆಕುಳಿತು,ನಗುಮೊಗದಿಂದಸುಪ್ರಸನ್ನನಾದ ಬ್ರಹ್ಮದೇವನು ತನಗೆ ದರ್ಶನವನ್ನುಕರುಣಿಸಿದ್ದನ್ನು ಕಂಡು ಹರ್ಷ ಪುಲಕಿತನಾಗಿ ದೇವರಿಗೆಸಾಷ್ಟಾಂಗ ನಮನ ಗೈದು ಕರಜೋಡಿಸಿ ನಿಂತು ಆನಂದ ಭಾಷ್ಪ ಸುರಿಸಿದವನಾಗಿ ವಿನಯಪೂರ್ವಕವಾಗಿ ಸ್ತೋತ್ರ
ಮಾಡುತ್ತಾನೆ.
ದೇವ ನನ್ನ ತಪಸ್ಸಿಗೆ ಮೆಚ್ಚಿ ವರ ಕೊಡುವಂತಿದ್ದರೆ ಇಂಥ ವರವನ್ನು ಕೊಡು ಎಂದು ಪ್ರಾರ್ಥಿಸುತ್ತಾನೆ.
“ನೀನು ಸೃಷ್ಟಿಸಿದ ಯಾವ ಪ್ರಾಣಿಯಿಂದಲೂ ನನಗೆ ಮರಣ ಬರಬಾರದು!ಒಳಗೆ-ಹೊರಗೆ-ಹಗಲು-ರಾತ್ರಿ
ದೇಹಾವಯವ,ಭಿನ್ನವಾದ ಖಡ್ಗಾದಿ ಆಯುಧಗಳಿಂದ
,ಭೂಮಿಯಲ್ಲಿ ,ಅಂತರಿಕ್ಷದಲ್ಲಿ,ಮನುಷ್ಯರಿಂದ ,ಮೃಗಗಳಿಂದಜೀವಂತಇಲ್ಲವೇಮೃತಪ್ರಾಣಿಗಳಿಂದ,ಸುರ-ಅಸುರ-ನಾಗಇವುಯಾವುದರಿಂದಲೂನನಗೆಮರಣವಾಗಬಾರದು.ಯುದ್ಧದಲ್ಲಿಯಾರೂನನ್ನನ್ನುಪ್ರತಿಸ್ಪರ್ಧಿಸಬಾರದು.ದೇಹವುಳ್ಳವರಲ್ಲಿ ಏಕಾಧಿಪತ್ಯವುನನಗಿರಬೇಕು !(ಸ್ವಾಮಿ ,ನಿನ್ನ ಮಹಿಮೆಯು ಹೇಗೆನಶಿಸುವುದಿಲ್ಲವೋ ಹಾಗೆಯೇ ಯಾವ ಕಾರಣದಿಂದಲೂನನ್ನಮಹಿಮೆಯೂ ನಶಿಸಬಾರದಂತೆವರವನ್ನು ಕೊಡು-ಹೀಗೆ ಪ್ರಾರ್ಥಿಸಿದ್ದು ಅವನು ಬ್ರಹ್ಮಪದವಿಯೂತನಗೆದೊರಕಬೇಕೆಂಬುದನ್ನು ಸೂಚಿಸುವುದು)ಎಂದು ವರವನ್ನು ಬೇಡಿದನು.
ಮನುಷ್ಯರಿಗೆ ಅತ್ಯಂತ ದುರ್ಲಭವಾದ ಈ ರೀತಿ ವರವನ್ನು ಬೇಡಿದರೂ ಶ್ರೀಹರಿಯ ಸಂಕಲ್ಪದಂತೆ ಬ್ರಹ್ಮ
ದೇವರು ಶ್ರೀಹರಿಯ ಪ್ರೇರಣೆಯಂತೆ ಇಂತಹ ಮಹತ್ತರವಾದ ವರವನ್ನು ಅನುಗ್ರಹಿಸಿ ತಮ್ಮ ಲೋಕಕ್ಕೆ
ಹಿಂದಿರುಗಿದರು.
ನಾರದರ ಆಶ್ರಮದಲ್ಲಿ ಒಂದು ಏಕಾದಶಿಯ ದಿನ ಬೆಳಗಿನಿಂದಲೂ ಭಗವಧ್ಯಾನ,ಪೂಜಾದಿಗಳಲ್ಲಿ ನಿರತಳಾಗಿದ್ದಾಳೆ.ರಾತ್ರಿಯಾಯಿತು ಏಕಾದಶಿ ಪ್ರಯುಕ್ತ ಜಾಗರಣೆ ಸೇವೆ ಪ್ರಾರಂಭವಾಗಿದೆ.ನಾರದ ಮಹರ್ಷಿಗಳು ಕೃಷ್ಣಾಜಿನದ ಮೇಲೆ ಕುಳಿತಿದ್ದಾರೆ.
ಆಗ ಕಯಾದುವು ನಾರದ ಮುನಿಗಳಿಗೆ “,ಸ್ವಾಮಿ,ನೀವು ದಯಮಾಡಿ ನನಗೆ ಶ್ರೀಹರಿಯ ಮಹಿಮಾದಿಗಳನ್ನು
ತಿಳಿಸಿ ಅನುಗ್ರಹಿಸಿರಿ ಎಂದು ಪ್ರಾರ್ಥಿಸುತ್ತಾಳೆ.ಆಗ ನಾರದರು.”ದೇವಿ,ಸಚ್ಚಿದಾನಂದವಿಗ್ರಹನಾದ ಶ್ರೀಹರಿಯನ್ನು ಭಕ್ತಿಯಿಂದ ಆರಾಧಿಸು.ಅದರಿಂದ ಸಂತುಷ್ಟನಾದನಾರಾಯಣನುಮೋಕ್ಷವನ್ನೇಕರುಣಿಸುವನು,ಶ್ರೀಹರಿಭಕ್ತರನ್ನುಯಾವಶತೃಗಳೂ,ದುಷ್ಟಶಕ್ತಿಗಳೂ,ರಾಕ್ಷಸರೂ ಹಿಂಸಿಸುವುದಿಲ್ಲ.ಮಗಳೇ !ಕರಚರಣ ಮುಂತಾದಅವಯವಗಳು ,ಕಣ್ಣು,ಕಿವಿ,ನಾಲಿಗೆ,ಮನಸ್ಸು,ಶರೀರಮುಂತಾದಸಂಪತ್ತೆಲ್ಲವನ್ನೂಶ್ರೀಮನ್ನಾರಾಯಣನ ಪೂಜೆಗೆಅರ್ಪಿಸಿ ,ನವವಿಧಭಕ್ತಿಯಿಂದಭಗವಂತನನ್ನು
ಸೇವಿಸಬೇಕು.ಶರೀರವುನಶ್ವರವಾದುದು.ಅದುಯಾವಾಗ ನಾಶವಾಗುವುದೆಂದು ಹೇಳಲಿಕ್ಕಾಗುವುದಿಲ್ಲ.
ತಾಯಿಯ ಉದರದಿಂದ ಹೊರಬರುವಾಗಲೇ ಮೃತ್ಯುವು ಜೀವನ ಬೆನ್ನು ಹತ್ತಿ ಬರುವುದು.ಆದ್ದರಿಂದ ಅಹಂಕಾರ-ಮಮಕಾರಗಳನ್ನು ಬಿಟ್ಟು ,ವ್ಯರ್ಥವಾಗಿ
ಕಾಲಕಳೆಯದೆ ಶ್ರೀಹರಿಯನ್ನುಭಕ್ತಿಯಿಂದಪೂಜಿಸಬೇಕು
.ಇಷ್ಟೆಲ್ಲಾ ನಾರದರು ಕಯಾದುವಿಗೆ ತಿಳಿಸಿಹೇಳುತ್ತಿದ್ದಂತೆ ಕಯಾದುವು ಅವಳಿಗೆ ಅರಿವಿಲ್ಲದಂತೆಯೇ ನಿದ್ರೆಗೆ ಜಾರಿದ್ದಾಳೆ.ನಾರದಮಹರ್ಷಿಗಳಿಗೆಏಕಾದಶಿಯಂದೇಕೋ ಬಹಳ ಉತ್ಸಾಹದಿಂದ ಮೈಮರೆತು ಶ್ರೀಹರಿಯ ಚರಿತ್ರೆಯನ್ನು ಹೇಳುತ್ತಿದ್ದರು.
ನಾರದ ಮುನಿಗಳು ಸಕಲ ವೇದಾದಿ ಶಾಸ್ತ್ರಗಳಿಂದ ಪ್ರತಿ
ಪಾದ್ಯನಾದ ಶ್ರೀರಮಾರಮಣನ ಸತ್ತತ್ವ ರಹಸ್ಯಗಳನ್ನೂ
ಭಗವದುಪಾಸನಾಕ್ರಮಗಳನ್ನೂ ,ಭಕ್ತಿಯವೈವಿಧ್ಯ,ವೈಶಿಷ್ಟ್ಯಾದಿಗಳನ್ನೂಉಪದೇಶಿಸಲಾರಂಭಿಸಿದರು.
ಆ ಪ್ರಶಾಂತವಾಗಿದ ಪರಿಸರದಲ್ಲಿ “ಹೂಂ ಹೂಂ”ಎಂಬ
ಧ್ವನಿ ಕೇಳಿ ಬರುತ್ತಿದೆ!ವಿಸ್ಮಯದಿಂದ ನಾರದರು ಕಯಾದುವನ್ನುನೋಡಿದರು.ಅವಳುನಿದ್ರಾಸಕ್ತಳಾಗಿದ್ದಾಳೆ.ಸುತ್ತಲೂನೋಡಿದರೆಯಾರೂಇಲ್ಲ,ಇದೇನಾಶ್ಚರ್ಯ,ಇದುಯಾರ ಧ್ವನಿ?ಯಾವಕಡೆಯಿಂದಬರುತ್ತಿದೆಯೆಂದು ನೋಡಿದರು.
ಪರಮಾಶ್ಚರ್ಯ,ಕಯಾದುರಾಣಿಯ ಉದರದಿಂದ ಈ
ಧ್ವನಿ ಕೇಳಿಬರುತ್ತಿದೆ.ಆಗ ನಾರದರಿಗಾದ ಆನಂದ ಆಶ್ಚರ್ಯ ಅವರ್ಣನೀಯ.ಪರಮಾನಂದಭರಿತರಾದರು ನಾರದರು,ಕಂಠ ತುಂಬಿ ಬಂದಿತು.
ನಿತ್ಯ ನಾರದ ಮಹರ್ಷಿಗಳು ಪ್ರತಿ ನಿತ್ಯವೂ ಕಯಾದು
ದೇವಿಗೆ ಉಪದೇಶ ಮಾಡುವ ನೆಪದಿಂದ ಸಕಲ ವೇದಶಾಸ್ತ್ರಾರ್ಥಸಾರ,ಭಾಗವತಧರ್ಮ,ಭಗವದ್ಭಕ್ತಿ,ಶ್ರೀಹರಿಯ ಮಹಿಮಾತಿಶಯಗಳನ್ನು ಕಯಾದುದೇವಿಗೂ
ಅವಳ ಗರ್ಭಸ್ತ ಶಿಶುವಿಗೂ ಉಪದೇಶಿಸಿದರು.
ಒಂದು ದಿನ ನಾರದರು ಸಂತೋಷದಿಂದ ಕಯಾದುವಿಗೆ
ಪರಮಾತ್ಮನ ಮಹಿಮೆಗಳನ್ನು ಹೇಳುತ್ತಿರುವಾಗ ಕಯಾದುವು ನಾರದರಿಗೆ ಕೈ ಮುಗಿದು”ಸ್ವಾಮಿ,ತಾವು
ನನಗೊಂದು ವರವನ್ನು ಕೊಡಬೇಕು”ಎಂದು ಪ್ರಾರ್ಥಿಸಿದಳು.ನಾರದರು ಪ್ರಸನ್ನವದರಾಗಿ “ನಿನಗೇನು
ವರಬೇಕು ಕೇಳಮ್ಮ “ಎಂದು ಕೇಳಿದರು.
ಕಯಾದುವು ನಮ್ರಳಾಗಿ “ಮುನಿವರ್ಯ!ನನ್ನ ಪತಿದೇವರು ತಪಸ್ಸು ಮುಗಿಸಿಕೊಂಡು ಬಂದು ನನ್ನನ್ನು
ರಾಜಧಾನಿಗೆ ಕರೆದುಕೊಂಡು ಹೋಗುವವರೆಗೂ,ನನಗೆ
ಪ್ರಸವವಾಗಬಾರದು!ನಾನು ತಮ್ಮಲ್ಲಿ ಇಚ್ಛಾಪ್ರಸವ ವರವನ್ನೂ ,ನನ್ನ ಉದರದಲ್ಲಿರುವ ಶಿಶುವಿಗೆ ಕ್ಷೇಮವನ್ನೂ ಬೇಡುವೆನು”ಎಂದು ಪ್ರಾರ್ಥಿಸಿದಳು.
ನಾರದ ಮಹರ್ಷಿಗಳು ಹರ್ಷದಿಂದ “ನೀನು ಸಾಧ್ವಿ!ಪತಿವ್ರತೆಯಾದ ಸ್ತ್ರೀಗೆ ಭೂಷಣವಾದ ವರವನ್ನೇ ಯಾಚಿ
ಸಿದ್ದೀಯ!ಹಾಗೇ ಆಗಲಿ,ನೀನು ಅಪೇಕ್ಷಿಸಿದಾಗಲೇ ನಿನಗೆ ಪ್ರಸವವಾಗಲಿ.ನಿನ್ನ ಹೊಟ್ಟೆಯಲ್ಲಿರುವ ಕುಮಾರನಿಗೆಯಾವಾಗಲೂಸನ್ಮಂಗಳ,ಕ್ಷೇಮವುಂಟಾಗುವುದು.ಇದು ನನ್ನ ಪ್ರಭುವಾದಶ್ರೀಹರಿಯಕಾರುಣ್ಯದಿಂದ ಸತ್ಯವಾಗಿನೆರವೇರುವುದು!ಚಿಂತಿಸಬೇಡಮ್ಮ” ಎಂದು ಹೇಳಿ ಕಯಾದುವಿಗೆ ವರಪ್ರದಾನ ಮಾಡಿದರು.
ತನ್ನಿಚ್ಛೆಯಂತೆ ಬ್ರಹ್ಮದೇವರಿಂದ ವರಪಡೆದ ಹಿರಣ್ಯಕಶಿಪು ಬಹಳ ಸಂತೋಷದಿಂದ ರಾಜಧಾನಿಗೆ
ಹಿಂದಿರುಗಿದನು.ರಾಜಧಾನಿಗೆ ಬಂದಮೇಲೆ ಹಿರಣ್ಯ
ಕಶಿಪುವಿಗೆ ತಾನು ತಪಸ್ಸಿಗೆ ಹೊರಟಾಗಿನಿಂದ ನಡೆದ
ಎಲ್ಲಾ ವಿಚಾರಗಳೂ ತಿಳಿಯುತ್ತವೆ.ದಾನವರಾಜನು
ದೇವರ್ಷಿ ನಾರದರ ಆಶ್ರಮಕ್ಕೆ ಬರುತ್ತಾನೆ.
ಹಿರಣ್ಯಕಶಿಪುವು ತಮ್ಮ ಆಶ್ರಮಕ್ಕೆ ಬಂದುದಕ್ಕೆ ಸಂತೋಷಗೊಂಡ ನಾರದರು ಅವನನ್ನು ಸ್ವಾಗತಿಸಿದರು.
ಹಿರಣ್ಯಕಶಿಪು ನಾರದರಿಗೆ ನಮಸ್ಕರಿಸಿ “ಮುನಿವರ್ಯ
ನಿಮ್ಮ ಉಪಕಾರ ಬಹಳವಾಯಿತು ನನ್ನ ಮೇಲೆ.ನನ್ನ
ಹಿತವನ್ನು ಬಯಸಿದವರು ನೀವು,ಪಿತಾಮಹನನ್ನು ಸಂತೋಷಪಡಿಸಿ ವರಪಡೆಯುವಂತೆ ಸಲಹೆನೀಡಿದಿರಿ.
ನಿಮ್ಮ ಸಲಹೆಯಂತೆ ನಾನು ತಪಸ್ಸುಮಾಡಿ ಬ್ರಹ್ಮದೇವರನ್ನು ಮೆಚ್ಚಿಸಿ ಅಸಾಧಾರಣವಾದ ವರವನ್ನು
ಪಡೆದಿರುತ್ತೇನೆ”ಎಂದು ಹೇಳುತ್ತಾನೆ.ಇನ್ನು ನಾನು ತಪಸ್ಸಿಗೆ ಹೋದಾಗ ನನ್ನಪತ್ನಿಯನ್ನು ಇಂದ್ರನಿಂದ ರಕ್ಷಿಸಿ
ದಿರಿ.ಮುಖ್ಯವಾಗಿ ಕಯಾದು ಹೊಟ್ಟೆಯಲ್ಲಿರುವ ಭಾವಿ ಯುವರಾಜನನ್ನು ಸಂರಕ್ಷಿಸಿ ನಮ್ಮ ಅಸುರವಂಶಕ್ಕೆ ಮಹೋಪಕಾರ ಮಾಡಿರುತ್ತೀರಿ.ಮತ್ತು ನಮ್ಮ ಪಟ್ಟದರಸಿಗೆ ಯಾವ ಆಪತ್ತೂ ಬರದಂತೆ ನಿಮ್ಮ ಆಶ್ರಮದಲ್ಲಿ ಆಶ್ರಯನೀಡಿ ಸಂರಕ್ಷಿಸಿರುವಿರಿ.ನಿಮ್ಮ
ಉಪಕಾರವನ್ನು ನಾನೆಂದಿಗೂ ಮರೆಯಲಾರೆ.ನೀವು ಅಪ್ಪಣೆ ಕೊಟ್ಟರೆ ನನ್ನಪತ್ನಿಯನ್ನು ರಾಜಧಾನಿಗೆ ಕರೆದು
ಕೊಂಡು ಹೋಗುತ್ತೇನೆ ಎಂದು ವಿಜ್ಞಾಪಿಸಿದನು.
ವಾರದ ಮಹರ್ಷಿಗಳು ಸಂತೋಷದಿಂದ ಕಯಾದುದೇವಿಯನ್ನು ಹಿರಣ್ಯಕಶಿಪುವಿನೊಟ್ಟಿಗೆ ಕಳಿಸಿ
ಕೊಡುತ್ತಾರೆ. ಅದೊಂದು ಶುಭದಿನ ದಾನವ ಪಟ್ಟದರಸಿ ಕಯಾದುದೇವಿ ಪರಮಮಂಗಳಕರನಾದ ಶ್ರೀವಾಯುದೇವರ ಆವೇಶಯುಕ್ತನೂ,ಶ್ರೀಹರಿಪಾದಾಬ್ಜ
ವನ್ನು ಆಶ್ರಯಿಸಿದವನೂ,ಕರ್ಮಜದೇವನೂ ಆದ ಸುಪುತ್ರನಿಗೆ ಜನ್ಮ ಕೊಡುತ್ತಾಳೆ.ಜ್ಞಾನ-ಭಕ್ತಿ-ವೈರಾಗ್ಯಗಳ ಸಾಕಾರನಾದ ಮಂಗಳಮೂರ್ತಿಯ ಜನನವಾಯಿತು.
ಸುರರು ಪುಷ್ಪವೃಷ್ಟಿಗೈದುದನ್ನೂ,ದೇವದುಂದುಭಿಗಳು
ಮೊಳಗಿದ್ದನ್ನೂ ಕಂಡು ಕೇಳಿದ ದೈತ್ಯ ಸಾಮ್ರಾಟನು
,ತನ್ನ ಭಯದಿಂದ ಭಾವಿ ದೈತ್ಯ ಸಾಮ್ರಾಟನ ಅವತಾರಕ್ಕೆ ದೇವತೆಗಳು ಆನಂದ ಸೂಚಿಸಿದರೆಂದೂ ಆನಂದಿಸಿ,ತನ್ನ
ಪರಾಕ್ರಮಕ್ಕೆ ಮೂರುಲೋಕವೂ ನಡುಗುವುದೆಂದು
ಜಂಭಪಟ್ಟನು.
ದೈತ್ಯರಾಜಧಾನಿಯಲ್ಲಂತೂ ಸಂಭ್ರಮವೋ ಸಂಭ್ರಮ
ರಾಜಧಾನಿಯವರೆಲ್ಲರೂ ಸಂಭ್ರಮೋತ್ವದಲ್ಲಿ ಭಾಗವಹಿಸಿದ್ದಾರೆ.ಮಂಗಳಸ್ನಾನವಾದಮೇಲೆ ಶುಕ್ರಾಚಾರ್ಯರನೇತೃತ್ವದಲ್ಲಿಜಾತಕರ್ಮ-ನಾಮಕರಣಾದಿಮಹೋತ್ಸವಗಳುವಿಜೃಂಭಣೆಯಿಂದನೆರವೇರಿದವು.ಅತ್ಯಂತಸುಂದರ,ಮನಮೋಹಕನೂಆದರಾಜಕುಮಾರನುಎಲ್ಲರಿಗೂಆನಂದವನ್ನುಕೊಡುವಂತಹವನಾಗಿದ್ದಾನೆ.
ಬಹುಶ:ಈ ಕಾರಣದಿಂದಲೇ ಏನೋ ದೈತ್ಯ ಗುರುಗಳು
ನಾಮಕರಣ ಕಾಲದಲ್ಲಿ ರಾಜಕುಮಾರನಿಗೆ “ಪ್ರಹ್ಲಾದ” ಎಬ ಹೆಸರನ್ನೇ ಆರಿಸಿದ್ದಾರೆ.ವಿಧ್ಯುಕ್ತವಾಗಿ ಹಿರಣ್ಯಕಶಿಪು
ಕುಮಾರನಿಗೆ “ಪ್ರಹ್ಲಾದರಾಜ” ಎಂದು ನಾಮಕರಣ
ಮಾಡುತ್ತಾರೆ.ಈ ಸಂತೋಷದ ಸಮಯದಲ್ಲಿ ರಾಜಧಾನಿಯಲ್ಲೆಲ್ಲಾ ಅನ್ನಾದಾನ,ವಸ್ತ್ರದಾನ, ನಡೆದವು
“ಶ್ರೀಪ್ರಹ್ಲಾದರಾಜರು”ಹುಟ್ಟಿದ ಸಂತೋಷಕ್ಕಾಗಿ ಸಾಮ್ರಾಜ್ಯದಲ್ಲೆಲ್ಲಾ ಹದಿನೈದು ದಿನ ಪರ್ಯಂತ ಸಂಭ್ರಮೋತ್ಸವವನ್ನು ಆಚರಿಸಲಾಯಿತು.
KLive Special Article ಹೀಗೆ ಶಂಕುಕರ್ಣರು ಪ್ರಹ್ಲಾದರಾಜರಾಗಿ ಹಿರಣ್ಯಕಶಿಪು
ಮತ್ತು ಕಯಾದುವಿನ ಮಗನಾಗಿ ಭೂಮಿಯಲ್ಲಿ ಅವತಾರಹೊಂದಿದರು.ಇದು ಶ್ರೀರಾಘವೇಂದ್ರ
ಗುರುಸಾರ್ವಭೌಮರ ಮೊದಲನೆಯ ಅವತಾರ.

S N Channabasappa ರಾಜ್ಯದ ಪತ್ತಿನ ಸಂಘಗಳ ಕಾರ್ಯಾಗಾರದ ಉದ್ಘಾಟನೆಯಲ್ಲಿ ಶಾಸಕ ಚೆನ್ನಿ

0

S N Channabasappa ಶಿವಮೊಗ್ಗ ನಗರದ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಶುಭ ಮಂಗಳ ಕಲ್ಯಾಣ ಮಂದಿರದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಪತ್ತಿನ ಸಂಘಗಳ ಮಹಾಮಂಡಳಿ ನಿಗಮದ ವತಿಯಿಂದ ಆಯೋಜಿಸಲಾಗಿದ್ದ ಒಂದು ದಿನದ ಶೈಕ್ಷಣಿಕ S N Channabasappa ಕಾರ್ಯಗಾರದ ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಭಾಗವಹಿಸಿದ್ದರು.

Chikkamagalur News ಚಿಕ್ಕಮಗಳೂರು ಜಿಲ್ಲೆಯ ಕೆಲವೆಡೆ ಸ್ವಂತ ಬೋರ್ ವೆಲ್ ನ ನೀರಿನ ಖಾಸಗಿ ಮಾರಾಟದ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಒತ್ತಾಯ

0

Chikkamagalur News ಚಿಕ್ಕಮಗಳೂರು,ಜಿಲ್ಲೆಯ ಕೆಲವು ಭಾಗಗಳಲ್ಲಿ ಸ್ವಂತಕ್ಕೆoದು ಬೋರೆವೆಲ್ ಕೊರೆಸಿ ಟ್ಯಾಂಕರ್‌ಗಳ ಮೂಲಕ ನೀರನ್ನು ಖಾಸಗೀಯಾಗಿ ಮಾರಾಟ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡರುಗಳು ಬುಧವಾರ ಉಪವಿಭಾಗಾಧಿಕಾರಿ ದಲ್ಜಿತ್‌ಕುಮಾರ್‌ಗೆ ಮನವಿ ಸಲ್ಲಿಸಿದರು.

ಈ ಕುರಿತು ಮಾತನಾಡಿದ ಕಾಂಗ್ರೆಸ್ ಮುಖಂಡ ಕೆ.ಭರತ್ ಜಿಲ್ಲೆಯ ಬಹುತೇಕ ತಾಲ್ಲೂಕು ಬರಪೀಡಿತ ವಾಗಿ ಕುಡಿಯುವ ನೀರಿಗೆ ಅಭಾವ ಸೃಷ್ಟಿಯಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ಟ್ಯಾಂಕರ್ ಗಳಲ್ಲಿ ಅರ್ಧದಷ್ಟು ನೀರನ್ನು ತುಂಬಿಸಿ ಮನೋಸೋಇಚ್ಚೆ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಜಿಲ್ಲೆಯ ಗ್ರಾಮಾಂತರ, ಪಟ್ಟಣ ಹಾಗೂ ನಗರ ಭಾಗದಲ್ಲಿ ಕೆಲವು ಮಂದಿ ವೈಯಕ್ತಿಕ್ಕಾಗಿ ಬೋರೆವೆಲ್ ಕೊರೆಸಿಕೊಂಡು ಹಣ ಮಾಡುವ ದುರುದ್ದೇಶದಿಂದ ಮಾನವೀಯತೆ ಮರೆತು ಖಾಸಗೀಯಾಗಿ ನೀರನ್ನು ಮಾರಾ ಟ ಮಾಡಲಾಗುತ್ತಿದೆ. ಕೂಡಲೇ ಸಂಬoಧಪಟ್ಟ ಇಲಾಖಾಧಿಕಾರಿಗಳು ಕ್ರಮ ಜರುಗಿಸಬೇಕು ಎಂದರು.

ನೀರಿನ ಅಭಾವದಿಂದ ತತ್ತರಿಸಿರುವ ಪ್ರದೇಶಗಳಿಗೆ ಜಿಲ್ಲಾಡಳಿತ ಖುದ್ದಾಗಿ ತೆರಳಿ ಕುಡಿಯುವ ನೀರನ್ನು ಸರಬರಾಜು ಮಾಡಬೇಕು. ಬರಗಾಲದಲ್ಲೂ ಅಕ್ರಮವಾಗಿ ನೀರಿನ ವ್ಯವಹಾರದಲ್ಲಿ ತೊಡಗಿರುವವರ ವಿರುದ್ಧ ಕಡಿವಾಣ ಹಾಕುವ ಮೂಲಕ ಬೋರೆವೆಲ್ ನೀರು ಸ್ವಂತಕ್ಕೆ ಹೊರತು, ಮಾರಾಟಕ್ಕಲ್ಲ ಎಂದು ಪರವಾನಗಿ ಕೊಡ ಬೇಕು ಎಂದು ಒತ್ತಾಯಿಸಿದರು.

Chikkamagalur News ಜಿಲ್ಲೆಯು ಮಲೆನಾಡು, ಅರೆಮಲೆನಾಡು ಹಾಗೂ ಬಯಲುಸೀಮೆ ಒಳಗೊಂಡಿರುವ ಪ್ರದೇಶವಾಗಿದೆ. ಪ್ರಕೃತಿ ವಿಕೋಪದಿಂದ ಮಳೆ ಕ್ಷೀಣಿಸಿದೆ. ಅಲ್ಲದೇ ಕೆರೆಕಟ್ಟೆಗಳಲ್ಲಿ ನೀರಿಲ್ಲದೇ ಅಂತರ್ಜಲ ಕುಸಿತ ಕಂಡಿದೆ. ಮಳೆಯಿ ಲ್ಲದೇ ಅರಣ್ಯ ನಾಶವಾಗುತ್ತಿವೆ. ಕಾಡುಪ್ರಾಣಿಗಳು ಆಹಾರವಿಲ್ಲದೇ ನಾಡಿನತ್ತ ಧಾವಿಸುತ್ತಿವೆ ಎಂದು ಆತಂಕ ವ್ಯಕ್ತ ಪಡಿಸಿದರು.
ನಾಡಿನಲ್ಲಿ ಜನ ಜಾನುವಾರುಗಳಿಗೆ ನೀರಿನ ಅಭಾವ ತಲೆದೋರಿದೆ. ಹೀಗಾಗಿ ಸರ್ಕಾರ ಎಚ್ಚೆತ್ತುಕೊಂಡು ನೀರಿನ ಮೂಲಗಳನ್ನು ಅಭಿವೃಧ್ದಿಪಡಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಗಂಗಾಧರ್, ನಗರ ಪ್ರಧಾನ ಕಾರ್ಯದರ್ಶಿ ಸೋಮ ಶೇಖರ್ ಹಾಜರಿದ್ದರು.

KLive Special Article ಅತ್ಯುತ್ತಮ ವ್ಯಕ್ತಿಯನ್ನು ಪ್ರಜೆಗಳೇ ಆಸಕ್ತಿವಹಿಸಿ ಚುನಾಯಿಸಬೇಕು- ಎಚ್.ಕೆ.ವಿವೇಕಾನಂದ

0

KLive Special Article  ಅಬ್ಬಬ್ಬಾ, ಈ ದೊಡ್ಡ ಮನುಷ್ಯರಿಗೆ ಎಷ್ಟೊಂದು ಅಧಿಕಾರದ ದಾಹ.

ಒಮ್ಮೆ ಗೆದ್ದರೆ ಇನ್ನೊಮ್ಮೆ, ಇನ್ನೊಮ್ಮೆ ಗೆದ್ದರೆ ಮತ್ತೊಮ್ಮೆ, ಮತ್ತೊಮ್ಮೆ ಗೆದ್ದರೆ ಮಗದೊಮ್ಮೆ, ಮಗದೊಮ್ಮೆ ಗೆದ್ದರೆ ಸಾಯುವವರೆಗೂ…

ಒಟ್ಟಿನಲ್ಲಿ ಅಧಿಕಾರದಲ್ಲಿ ಇರಲೇಬೇಕು. ಅಧಿಕಾರ ಇಲ್ಲದಿದ್ದರೆ ಬದುಕುವುದೇ ಕಷ್ಟ.
ರಾಜಕೀಯವೆಂಬುದು ಈ ಹಂತಕ್ಕೆ ಬಂದಿದೆಯೇ. ಕನಿಷ್ಠ ಒಬ್ಬರಾದರೂ ಒಂದೇ ಬಾರಿ ಚುನಾವಣೆಯಲ್ಲಿ ಗೆದ್ದು ಇನ್ನು ನನಗೆ ಸಾಕು ಎಂದು ಯಾವುದೇ ಒತ್ತಡವಿಲ್ಲದೆ, ಆತ್ಮ ಸಾಕ್ಷಿಗೆ ಅನುಗುಣವಾಗಿ ಬೇರೆಯವರಿಗೆ ಅವಕಾಶ ಮಾಡಿಕೊಟ್ಟಿರುವ ಉದಾಹರಣೆ ಇದೆಯೇ?

ಎಲ್ಲೋ ಅಪರೂಪದಲ್ಲಿ ಅಪರೂಪಕ್ಕೆ ಒಂದೋ ಎರಡೋ ಉದಾಹರಣೆ ಇರಬಹುದೇನೋ. ಆದರೆ, ಸಾಮಾನ್ಯವಾಗಿ ಅದು ಕಾಣುವುದೇ ಇಲ್ಲ.

ಯಾವುದೋ ಒತ್ತಡದ ಕಾರಣಕ್ಕಾಗಿ ರಾಜಕೀಯ ನಿವೃತ್ತಿಯೋ ಅಥವಾ ಬೇರೆಯವರಿಗೆ ಸಿಕ್ಕಾಗ ಅನಿವಾರ್ಯವಾಗಿ ತ್ಯಾಗ ಎಂಬ ಮುಖವಾಡ ಪ್ರದರ್ಶಿಸುವುದೇ ಹೆಚ್ಚಾಗಿದೆ.

ಸಾಮಾನ್ಯ, ಜನರಿಗೆ ಪ್ರೀತಿಯ, ತ್ಯಾಗದ, ಕರುಣೆಯ, ಶ್ರಮದ, ಕ್ಷಮೆಯ, ನಿರ್ಮೋಹದ, ನಿಸ್ವಾರ್ಥದ, ಸನ್ಯಾಸದ ಅನೇಕ ಗುಣಗಳನ್ನು ದೊಡ್ಡ ದೊಡ್ಡ ನಾಯಕರು, ಧಾರ್ಮಿಕ ಮುಖಂಡರು, ಆಧ್ಯಾತ್ಮಿಕ ಚಿಂತಕರು, ಪ್ರವಚನಕಾರರು, ಜಗದ್ಗುರುಗಳು ಎಲ್ಲರೂ ಹೇಳುತ್ತಲೇ ಇರುತ್ತಾರೆ.

ಅಧಿಕಾರ ಶಾಶ್ವತವಲ್ಲ, ಹಣ ಶಾಶ್ವತವಲ್ಲ, ಬದುಕೇ ಶಾಶ್ವತವಲ್ಲ. ಅಂತಹುದರಲ್ಲಿ ನಮಗೆ ಏನು ಸಿಕ್ಕಿದೆಯೋ ಅದನ್ನೇ ಸುಖ ಪಡುತ್ತಾ ಇನ್ನೊಬ್ಬರಿಗೆ ಮೋಸ ಮಾಡದೆ, ದುರಾಸೆ ಪಡದೆ, ಜೀವನ ಮಾಡಬೇಕು ಎಂದು…

ಸಾಮಾನ್ಯ ಜನ ಅದನ್ನು ನಂಬಿ ರಾಮನ ಆದರ್ಶ, ಕೃಷ್ಣನ ಆದರ್ಶ, ಮಾನವೀಯತೆ, ಬಸವಣ್ಣನ, ಗಾಂಧಿ, ಅಂಬೇಡ್ಕರ್, ಬುದ್ಧ ವಿವೇಕಾನಂದ, ಜೀಸಸ್, ಪೈಗಂಬರ್, ಗುರುನಾನಕ್, ಮಹಾವೀರರ ಆದೇಶವೋ ಒಟ್ಟಿನಲ್ಲಿ ಯಾವುದೋ ಒಂದು ಆದರ್ಶದ ಹಿಂದೆ ಬಿದ್ದು ಬದುಕಲು ಪ್ರಯತ್ನಿಸುತ್ತಾರೆ…

ಗೀತೆ ಕುರಾನ್ ಬೈಬಲ್ ಹೀಗೆ ನಾನಾ ಗ್ರಂಥಗಳನ್ನು ಓದಿಸುತ್ತಾ ಆದರ್ಶಗಳನ್ನು ತುಂಬಲಾಗಿರುತ್ತದೆ…

ಆದರೆ, ಈ ರಾಜಕೀಯ ನಾಯಕರು ಮಾತ್ರ ಇದ್ಯಾವುದೂ ತಮಗೆ ಸಂಬಂಧವೇ ಇಲ್ಲದಂತೆ ಅಧಿಕಾರದ ವ್ಯಾಮೋಹದಲ್ಲಿ ಬಂಧಿಗಳಾಗಿ ಅದನ್ನೇ ಉಸಿರಾಡುತ್ತಾ ಹೆಚ್ಚು ಕಡಿಮೆ ಸುಖವಾಗಿ ಇರುತ್ತಾರೆ ಅಥವಾ ಅದರಲ್ಲೇ ಒದ್ದಾಡುತ್ತಿರುತ್ತಾರೆ.

KLive Special Article  ಆದರೆ, ಅಧಿಕಾರವನ್ನು ತ್ಯಾಗ ಮಾಡುವುದು ಅವರಿಂದ ಸಾಧ್ಯವಾಗುತ್ತಿಲ್ಲ. ಎಷ್ಟು ಉದಾಹರಣೆ ಬೇಕು. ಒಬ್ಬ ಸಾಮಾನ್ಯ ಪತ್ರಕರ್ತ 10 ವರ್ಷಗಳ ಕಾಲ ಸಂಸದರಾಗಿದ್ದು, ಒಂದು ಪಕ್ಷಕ್ಕೆ ನಿಷ್ಠರಾಗಿದ್ದು, ತನ್ನ ಯೋಗ್ಯತೆಗಿಂತ ಎಷ್ಟೋ ಉತ್ತಮ ಅಧಿಕಾರ ಅನುಭವಿಸಿ ಈಗ ಸೀಟು ಸಿಗುತ್ತಿಲ್ಲ ಎಂಬ ಒಂದೇ ಕಾರಣದಿಂದ ಅಂತರ್ಯದ ಅಸಮಾಧಾನವನ್ನು ಹೊರ ಹಾಕುವುದು, ಅಳುವುದು‌. ಇನ್ನೊಬ್ಬರು ಪಕ್ಷವನ್ನು ತಾಯಿಯೆನ್ನುತ್ತಿದವರು ಈಗ ಪಕ್ಷೇತರಾಗಿ ನಿಲ್ಲುತ್ತೇನೆ ಎನ್ನುವುದು, ಏಳು ಎಂಟು ಬಾರಿ ಸಂಸತ್ ಸದಸ್ಯರಾದವರು ಮತ್ತೆ ಅದೇ ಪಕ್ಷದಿಂದ ಅದೇ ಸ್ಥಾನಕ್ಕೆ ಸ್ಪರ್ಧಿಸಲು ಹಠ ಮಾಡುವುದು, ತಮ್ಮ ಗಂಡ ಹೆಂಡತಿ ಮಕ್ಕಳಿಗೆ ಸೀಟಿಗಾಗಿ ಒದ್ದಾಡುವುದು, ಎಷ್ಟೊಂದು ದುಷ್ಟತನದ ಪರಮಾವಧಿ ಅಲ್ಲವೇ…!

ಆದರೂ, ತಮ್ಮ ಜೊತೆಯ ಸಾಮಾನ್ಯ ಕಾರ್ಯಕರ್ತರನ್ನು ಈಗಲೂ ನಂಬಿಸುತ್ತಾ, ವಂಚಿಸುತ್ತಾ, ಇವರೇ ಅಧಿಕಾರ ಅನುಭವಿಸುತ್ತಾ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಂದುವರಿಯುತ್ತಿದ್ದಾರೆ.

ಸಾಮಾನ್ಯ ಜನ ಶಾಲಾ ಫೀಜಿಗಾಗಿ, ಆಸ್ಪತ್ರೆಯ ಖರ್ಚಿಗಾಗಿ, ಮನೆ ಬಾಡಿಗೆಗಾಗಿ, ಪೆಟ್ರೋಲ್ ಖರ್ಚಿಗಾಗಿ, ಮದುವೆಗಾಗಿ ಹೀಗೆ ನಾನಾ ತರದ ಸಮಸ್ಯೆಗಳಲ್ಲಿ ಮುಳುಗೇಳುತ್ತಾ ಇಡೀ ಬದುಕನ್ನು ಸವೆಸುತ್ತಾರೆ.

ಜೀವನದಲ್ಲಿ ಒಂದು ಬಾರಿಯೂ ಐಷಾರಾಮಿ ಹೋಟೆಲ್ಗೆ ಹೋಗಿರುವುದಿಲ್ಲ, ವಿಧಾನಸೌಧದ ಒಳಗೆ ಪ್ರವೇಶಿಸಿರುವುದಿಲ್ಲ, ಸಂಸತ್ತಿನ ಒಳಗೂ ಹೋಗಿರುವುದಿಲ್ಲ, ವಿಮಾನ ಪ್ರಯಾಣ ಮಾಡಿರುವುದಿಲ್ಲ, ವಿದೇಶ ಯಾತ್ರೆ ಮಾಡಿರುವುದಿಲ್ಲ. ದೊಡ್ಡ ಕಾರುಗಳಲ್ಲಿ ಓಡಾಡಿರುವುದಿಲ್ಲ. ಆದರೂ ಚುನಾವಣೆ ಒಂದು ಪ್ರಜಾಪ್ರಭುತ್ವದ ಹಬ್ಬ ಇದರಲ್ಲಿ ನಾವು ಭಾಗವಹಿಸುವುದು ನಮ್ಮ ಹಕ್ಕು ಮತ್ತು ಕರ್ತವ್ಯ ಅದರಿಂದಾಗಿ ನಮ್ಮ ಜೀವನ ಮಟ್ಟ ಸುಧಾರಿಸುತ್ತದೆ ಎಂಬ ನಿರೀಕ್ಷೆಯಿಂದ ನಿರಂತರವಾಗಿ ಮತ ಚಲಾಯಿಸುತ್ತಾರೆ……

ಒಂದಷ್ಟು ಬದಲಾವಣೆಗಳೇನು ಆಗಿದೆ. ಅದು ವಸ್ತುರೂಪದ, ತಂತ್ರಜ್ಞಾನ ರೂಪದ, ಸಂಪರ್ಕ ರೂಪದ ಬದಲಾವಣೆಗಳೇ ಹೊರತು ನೆಮ್ಮದಿ, ಆರೋಗ್ಯ, ಸುಖದ ಬದಲಾವಣೆಗಳು ಅಷ್ಟೇನೂ ತೃಪ್ತಿಕರವಾಗಿಲ್ಲ. ಅದನ್ನು ಮನೆ ಮಾಚಲು ನೋಡುವ ದೃಷ್ಟಿಯಲ್ಲಿ ನಿಮ್ಮ ಸುಖ ಸಂತೋಷ ಅಡಗಿದೆ, ಎಲ್ಲವನ್ನು ಒಳ್ಳೆಯ ದೃಷ್ಟಿಯಲ್ಲಿ ನೋಡಿದರೆ ಜಗತ್ತು ಒಳ್ಳೆಯದಾಗುತ್ತದೆ ಎನ್ನುವ ಭ್ರಮಾಲೋಕವನ್ನು ಸಾಮಾನ್ಯ ಜನರಿಗೆ ಸೃಷ್ಟಿಸಿ ಇವರು ಮಾತ್ರ ಈ ಜನರನ್ನ ನಿರಂತರವಾಗಿ ಶೋಷಿಸುತ್ತಾ ಅಧಿಕಾರ ದಾಹದಲ್ಲಿಯೇ ಮುಳುಗುತ್ತಾರೆ.

ಗಮನಿಸಿ ನೋಡಿ, ಊಟ ತಿಂಡಿ ದಿನನಿತ್ಯದ ಮೂಲಭೂತ ಅವಶ್ಯಕತೆಗಳಿಗೇ ಈ ಜನಸಂಖ್ಯೆಯ ಮುಕ್ಕಾಲು ಪಾಲು ಜನ ಜೀವನವಿಡಿ ಸಂಘರ್ಷ ಮಾಡುತ್ತಿರುವಾಗ ರಾಜ್ಯದ ಅಥವಾ ದೇಶದ ಕೆಲವೇ ಕೆಲವರಿಗೆ ಸಿಗಬಹುದಾದ ಶಾಸಕ ಸಂಸದ ಮಂತ್ರಿ ಮುಂತಾದ ಸ್ಥಾನಗಳನ್ನು ಒಮ್ಮೆಯೋ ಎರಡನೇ ಬಾರಿಯೋ ಪಡೆದ ನಂತರವೂ ಒಂದು ವೇಳೆ ಅದು ಸಿಗದಿದ್ದರೆ ಜೀವನವೇ ಮುಗಿದು ಹೋಯಿತು ಎನ್ನುವಷ್ಟು ತೀವ್ರವಾಗಿ ಅಸಮಾಧಾನ ಆಕ್ರೋಶ ದುಃಖ ಹೊರಹಾಕುತ್ತಾರೆ.

ಆದರೆ ಇವರಿಗೆ ಹೋಲಿಕೆ ಮಾಡಿದಾಗ ಸಾಮಾನ್ಯ ಜನ ಈ ವ್ಯವಸ್ಥೆಯ ಬಗ್ಗೆ ಎಷ್ಟು ಆಕ್ರೋಶ ವ್ಯಕ್ತಪಡಿಸಬೇಕು.

ಯಾವುದೇ ವ್ಯಕ್ತಿ ಇರಲಿ, ಯಾವುದೇ ಕ್ಷೇತ್ರವಿರಲಿ ಎಲ್ಲರಿಗೂ ಎಲ್ಲಾ ಅವಕಾಶಗಳು ದೊರೆಯುವುದಿಲ್ಲ. ಕೆಲವರಿಗೆ ಅದೃಷ್ಟವೋ, ಶ್ರಮವೋ ವ್ಯವಸ್ಥೆಯ ಕೆಲವು ಅನುಕೂಲಕರ ಪರಿಸ್ಥಿತಿಯೋ ಒಟ್ಟಿನಲ್ಲಿ ಒಂದಷ್ಟು ಅವಕಾಶ ದೊರೆಯುತ್ತದೆ. ಅದು ನಿರಂತರವಾಗಿರದೆ ಏರಿಳಿತಗಳನ್ನು ಕಾಣುತ್ತದೆ. ಒಬ್ಬ ಶಾಸಕ ಎರಡನೆಯ ಬಾರಿ ಅವಕಾಶ ಸಿಗದಿದ್ದರೆ ಮತ್ತೇನನ್ನಾದರೂ ಪ್ರಯತ್ನಿಸಬಹುದು.

ಒಂದು ಪ್ರತಿಷ್ಠಿತ ಆಸ್ಪತ್ರೆಯ ವೈದ್ಯರಾಗಿದ್ದು ಎಷ್ಟೋ ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರವೂ ಈಗ ವಿಶ್ರಾಂತ ಜೀವನ ಮಾಡಿ ಅಥವಾ ಇರುವ ಸಮಯದಲ್ಲಿ ಅದೇ ಕ್ಷೇತ್ರದಲ್ಲಿ ಸಾಮಾಜಿಕ ಸೇವೆ ಮಾಡುವ ಅವಕಾಶವಿದ್ದರೂ, ಒತ್ತಡವೋ, ಆಸೆಯೋ ಅವರು ಸಹ ರಾಜಕೀಯ ಅಧಿಕಾರಕ್ಕಾಗಿ ಚುನಾವಣೆಗೆ ಸ್ಪರ್ಧಿಸುವುದು ಅಧಿಕಾರ ದಾಹದ ಉತ್ಕಟತೆಯನ್ನು ತೋರಿಸುತ್ತದೆ. ಇರಲಿ ಅವರ ಜೀವನೋತ್ಸಾಹವನ್ನು ಅಭಿನಂದಿಸೋಣ.

ಆದರೆ ಅದೇ ಜೀವನೋತ್ಸಾಹವನ್ನು ಈ ಎಲ್ಲಾ ವ್ಯಕ್ತಿಗಳು ಸಾಮಾನ್ಯ ಜನರಲ್ಲಿ ತುಂಬುವಲ್ಲಿ ವಿಫಲವಾಗಿದ್ದಾರೆ ಅಥವಾ ಅದನ್ನು ಅರ್ಥ ಮಾಡಿಕೊಳ್ಳಲು ಸಾಮಾನ್ಯ ಜನರೇ ವಿಫಲರಾಗಿದ್ದಾರೆ.

ಒಳ್ಳೆಯ ತನವನ್ನು ಸಾಮಾನ್ಯ ಜನರಿಗೆ ತುಂಬಿ ಇವರು ಮಾತ್ರ ಅಧಿಕಾರದ ದುಷ್ಟ ವ್ಯಾಮೋಹದಲ್ಲಿ ಕಳೆದುಹೋಗಿರುವುದು ಈ ಸಮಾಜದ ದುರಂತ. ಈಗ ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಅಂತರವನ್ನು ನಾವುಗಳು ಸಹ ಸೂಕ್ಷ್ಮವಾಗಿ ಗಮನಿಸಬೇಕು, ವಾಸ್ತವ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ಅವರು ರಾಜರು ನಾವು ಗುಲಾಮರು. ಇದು ನಿರಂತರ. ಪ್ರಜಾಪ್ರಭುತ್ವ ಎಂಬುದು ಅರ್ಥವನ್ನೇ ಕಳೆದುಕೊಳ್ಳುತ್ತದೆ.

ಈಗ ಚುನಾವಣೆಯಲ್ಲಿ ಸ್ಪರ್ಧಿಸಲು ಪೈಪೋಟಿ ನಡೆಸುತ್ತಿರುವವರ ಎಲ್ಲ ಪಕ್ಷಗಳ ನಾಯಕರನ್ನು ನೋಡಿದರೆ ಹಿಂದೆ ರಾಜಪ್ರಭುತ್ವದ ವಂಶಾಡಳಿತ ಸಾಮಂತರ ಪೀಳಿಗೆ ಇನ್ನೂ ಮುಂದುವರಿಯುತ್ತಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಆದ್ದರಿಂದ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಬರುವುದು ಇಡೀ ಪ್ರಜೆಗಳಲ್ಲಿ ಅತ್ಯುತ್ತಮ ವ್ಯಕ್ತಿಯನ್ನು ಪ್ರಜೆಗಳೇ ಸ್ವಯಂ ಆಸಕ್ತಿವಹಿಸಿ ಚುನಾಯಿಸಿದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿ ಎಂದು ಹೇಳಬಹುದು. ಇಲ್ಲದಿದ್ದರೆ ಪ್ರಜಾಪ್ರಭುತ್ವ ಮುಖವಾಡದ ರಾಜಪ್ರಭುತ್ವ ಎಂದು ಕರೆಯುವುದು ಸೂಕ್ತವಾಗುತ್ತದೆ. ಯೋಚಿಸಿ ನೋಡಿ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ…

ಲೇ: ವಿವೇಕಾನಂದ. ಎಚ್. ಕೆ.

Aadhaar Update ಆಧಾರ್ ಕಾರ್ಡ್ ಅಪ್ ಡೇಟ್ ಆನ್ ಲೈನ್ ಮೂಲಕ ಉಚಿತ: ಆಧಾರ್ ಕೇಂದ್ರದ ಮೂಲಕ ಆದರೆ ₹50 ಪಾವತಿ ಮಾಡಬೇಕು

0

Aadhaar Update ಆಧಾರ್‌ ಕಾರ್ಡ್‌ ಮಾಹಿತಿಯನ್ನು ಉಚಿತವಾಗಿ ಪರಿಷ್ಕರಿಸಲು ನೀಡಿದ್ದ ಗಡುವನ್ನು ಆಧಾರ್‌ ಪ್ರಾಧಿಕಾರ 2024ರ ಜೂನ್‌ 14ರವರೆಗೆ ವಿಸ್ತರಿಸಿದೆ. ಇದರೊಂದಿಗೆ ಇನ್ನೂ ಮೂರು ತಿಂಗಳು ಆಧಾರ್‌ ಕಾರ್ಡ್‌ ಬಳಕೆದಾರರು ಉಚಿತ ಆಧಾರ್‌ ಅಪ್‌ಡೇಟ್‌ ಪ್ರಯೋಜನ ಪಡೆಯಬಹುದಾಗಿದೆ.
ಆದರೆ, ಉಚಿತ ಪರಿಷ್ಕರಣೆ ಸೇವೆಯು ಆನ್‌ಲೈನ್‌ ಪೋರ್ಟಲ್‌ನಲ್ಲಿ ಮಾತ್ರ ಲಭ್ಯವಿದ್ದು, ಅಲ್ಲಿ ದಾಖಲೆಗಳನ್ನು ಅಪ್‌ಲೋಡ್‌ ಮಾಡುವ ಮೂಲಕ ತಿದ್ದುಪಡಿಗೆ ಮನವಿ ಸಲ್ಲಿಸಬಹುದಾಗಿದೆ.

Aadhaar Update ಆಧಾರ್‌ ಕೇಂದ್ರಕ್ಕೆ ಹೋದರೆ 50 ರೂ. ಪಾವತಿಸುವುದು ಕಡ್ಡಾಯ. ಉಚಿತ ಸೇವೆ ಆನ್ಲೈನ್ ಪೋರ್ಟಲ್ ಮೂಲಕ ಮಾತ್ರ ಲಭ್ಯ. ಆಧಾರ್ ಕೇಂದ್ರಕ್ಕೆ ಹೋಗುವುದಾದರೆ 50ರೂ. ಪಾವತಿ ಕಡ್ಡಾಯ

Madhu Bangarappa ಜನರನ್ನು ಕಚೇರಿಗೆ ಅಲೆಸದೇ ಉತ್ತಮವಾಗಿ ಸ್ಪಂದಿಸಬೇಕು : ಎಸ್.ಮಧು ಬಂಗಾರಪ್ಪ

0

Madhu Bangarappa ಜನರನ್ನು ಕಚೇರಿಯಿಂದ ಕಚೇರಿಗೆ ಅಲೆಸದೇ ಒಂದೇ ಸೂರಿನಡಿ ಅವರ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದ ಆಡಳಿತ ಸೌಧ ನಿರ್ಮಿಸಲಾಗಿದ್ದು, ಅಧಿಕಾರಿಗಳು ಉತ್ತಮವಾಗಿ ಸ್ಪಂದಿಸಬೇಕು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ನುಡಿದರು.
ಕಂದಾಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಇಂದು ಸಾಗರ ತಾಲ್ಲೂಕಿನ ನೂತನ ಆಡಳಿತ ಸೌಧ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಪದೇ ಪದೇ ಸರ್ಕಾರಿ ಕಚೇರಿ ಅಲೆಯುವುದನ್ನು ಅಧಿಕಾರಿಗಳು ತಪ್ಪಿಸಬೇಕು. ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪರಿಹಾರ ಒದಗಿಸಬೇಕು ಎಂದರು.
ಸರ್ಕಾರ ರಚನೆ ಆಗುವ ಪೂರ್ವದಲ್ಲಿ ನೀಡಲಾಗಿದ್ದ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಯಶಸ್ವಿಯಾಗಿ ಜಾರಿಗೆ ತಂದಿದೆ. ಸರ್ಕಾರ ನುಡಿದಂತೆ ನಡೆದು ತನ್ನ ಮಾತನ್ನು ಉಳಿಸಿಕೊಂಡಿದೆ. ಇನ್ನು ಮುಂದೆ ಅಭಿವೃದ್ದಿ ಕೆಲಸಗಳು ವೇಗ ಪಡೆದುಕೊಳ್ಳಲಿವೆ.
ಸರ್ಕಾರ 57 ಸಾವಿರ ಕೋಟಿಯನ್ನು ಬಡವರ ಮಡಿಲಿಗೆ ಹಾಕಿದೆ. ಬಡವರಿಗೆ ಹಣ ನೀಡಿದರೆ ಅವರು ಖರ್ಚು ಮಾಡು ಪುನಃ ಸರ್ಕಾರಕ್ಕೆ ಅನುಕೂಲವಾಗುವಂತೆ ಮಾಡುತ್ತಾರೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಖಜಾನೆ ಖಾಲಿಯಾಗಿಲ್ಲ.
ಇದೀಗ ತಾನೆ ಸೊರಬ ತಾಲ್ಲೂಕಿನ ಭೈರೇಕೊಪ್ಪದಲ್ಲಿ ರೂ. 18 ಕೋಟಿ ಮೊತ್ತದ ನಾರಾಯಣ ಗುರು ವಸತಿ ಶಾಲೆಗೆ ಗುದ್ದಲಿಪೂಜೆ ನೆರವೇರಿಸಿ ಬಂದಿದ್ದೇನೆ. ಹಾಗೂ ಸಾಗರ ತಾಲ್ಲೂಕಿನ ಗೆಣಸಿನಕುಣಿಯಲ್ಲಿ ರೂ.18 ಕೋಟಿ ಅಂದಾಜು ವೆಚ್ಚದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಶಂಕುಸ್ಥಾಪನೆ ಮಾಡಲಾಗುವುದು. ನನ್ನ ಇಲಾಖೆಗೆ ಸರ್ಕಾರ 44,500 ಕೋಟಿ ಅನುದಾನ ಒದಗಿಸಿದೆ.
ಬಂಗಾರಪ್ಪನವರು ಮುಖ್ಯಮಂತ್ರಿಯಾದಾಗ ರೈತರಿಗೆ 10 ಹೆಚ್ ಪಿ ವಿದ್ಯುತ್‍ನ್ನು ಉಚಿತವಾಗಿ ನೀಡಿದ್ದರು. ಹಾಗೂ ಕಾಗೋಡು ತಿಮ್ಮಪ್ಪನಂತಹವರು ರೈತರ ಬಗರ್‍ಹುಕುಂ ಭೂಮಿಗಾಗಿ ಸಾಕಷ್ಟು ಹೋರಾಟ ಮಾಡಿದರು. ರೈತರ, ಜನರ ಪರವಾಗಿ ನಿಂತರು. ಕಾಗೋಡು ತಿಮ್ಮಪ್ಪನವರ ಕನಸನ್ನು ನನಸು ಮಾಡುತ್ತೇವೆ ಹಾಗೂ ಹಿರಿಯರ ಹೋರಾಟವನ್ನು ಮುಂದುವರೆಸುತ್ತೇವೆ.
ಶರಾವತಿ ಮುಳುಗಡೆ ಸಂತ್ರಸ್ತರು, ಬಗರ್‍ಹುಕುಂ ಸೇರಿದಂತೆ ಹಲವಾರು ಸಮಸ್ಯೆಗಳು ಇವೆ. ಅದಕ್ಕಾಗಿ ನಾವು ಹೋರಾಡುತ್ತೇವೆ. ಸಂತ್ರಸ್ತರಿಗೆ ನ್ಯಾಯ ಒದಗಿಸಲು ಹಲವಾರು ಸಭೆಗಳನ್ನು ನಡೆಸಿದ್ದೇವೆ. ರಾಜ್ಯ ಸರ್ಕಾರ ತನ್ನ ಎಲ್ಲ ಪ್ರಯತ್ನವನ್ನು ಮಾಡುತ್ತಲಿದೆ. ಆದರೆ ಕೇಂದ್ರ ಸರ್ಕಾರ ಸಹಕರಿಸದಿದ್ದರೆ ಕಷ್ಟವಾಗುತ್ತದೆ. ಆದರೂ ತಮ್ಮ ಹೋರಾಟ ನಿರಂತರವಾಗಿರುತ್ತದೆ. ಅಧಿಕಾರಿಗಳು ಯಾವ ರೈತನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಅಧಿಕಾರಿಗಳು ಸಹ ರೈತರು, ಜನರೊಂದಿಗೆ ಸಹಕರಿಸುವಂತೆ ಸೂಚಿಸಿದ್ದೇವೆ ಎಂದರು.
ಶಾಸಕರು ಹಾಗೂ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ತಕ್ಷರಾದ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಸಾಗರ ಕ್ಷೇತ್ರ ಬೆಳೆಯುತ್ತಿದ್ದು, ಇನ್ನೂ ಅಭಿವೃದ್ಧಿ ಹೊಂದಬೇಕಿದೆ. ಈ ಆಡಳಿತ ಸೌಧ ಮಂಜೂರಾತಿ ಪಡೆದ ನಂತರ ಮೂರು ವರ್ಷಗಳ ಕಾಲ ಕಾಮಗಾರಿ ತಡೆಹಿಡಿಯಲಾಗಿತ್ತು. ನಂತರ ಹಂತ ಹಂತವಾಗಿ ರೂ.965 ಲಕ್ಷ ಅನುದಾನದಲ್ಲಿ ಆಡಳಿತ ಸೌಧವನ್ನು ನಿರ್ಮಿಸಲಾಗಿದ್ದು ಆದಷ್ಟು ಎಲ್ಲ ಇಲಾಖೆಗಳು ಇಲ್ಲಿ ಕಾರ್ಯ ನಿರ್ವಹಿಸಲಿವೆ. ಜನರ ಕಷ್ಟಗಳಿಗೆ ಸ್ಪಂದಿಸಿ ಅಧಿಕಾರಿಗಳು ಕೆಲಸ ಮಾಡಬೇಕು.
ಸಾಗರದ ಎಲ್ಲ ವಾರ್ಡುಗಳಿಗೆ ತಲಾ ಅಂದಾಜು 1 ಕೋಟಿ ಅನುದಾನ ನೀಡಿದ್ದೇವೆ. ರೂ.4.80 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ರಂಗಮಂದಿರ ನಿರ್ಮಿಸಲಾಗುವುದು. ನಗರದ ಮೂರು ಕಡೆ ಫುಡ್‍ಕೋರ್ಟ್‍ಗಳನ್ನು ಸ್ಥಾಪಿಸಲಾಗುವುದು. ಜನರಲ್ ಆಸ್ಪತ್ರೆಗೆ ರೂ.1.45 ಕೋಟಿ ಬಿಡುಗಡೆಯಾಗಿದ್ದು 14 ಡಯಾಲಿಸಿಸ್ ಮಷೀನ್ ಮತ್ತು ಫಿಸಿಯೋಥೆರಪಿ ಕೂಡ ಆರಂಭವಾಗಲಿದೆ. ನಗರದಲ್ಲಿ ಪಾರ್ಕುಗಳನ್ನು ನಿರ್ಮಿಸಲಾಗುವುದು. ಮೀನು ಮಾರುಕಟ್ಟೆಗೆ ರೂ.1.35 ಕೋಟಿ ಮಂಜೂರಾಗಿದೆ.
ರೂ.317 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಯೋಜನೆ ಜಾರಿಗೊಳಿಸಲಾಗಿದ್ದು ಪಂಚಾಯ್ತಿ ವ್ಯಾಪ್ತಿಯಲ್ಲಿ ಪೈಪ್‍ಲೈನ್ ಕೆಲಸ ನಡೆಯುತ್ತಿದೆ. ಯುಜಿಡಿ ಕಾಮಗಾರಿಗಳಿಗೆ ರೂ.47 ಕೋಟಿ ಮಂಜೂರಾಗಿದೆ. ಸಾಗರ ತಾಲ್ಲೂಕು ಉತ್ತಮ ಪ್ರವಾಸಿ ಕೇಂದ್ರವಾಗಿದ್ದು ಜೋಗ ಜಲಪಾತಕ್ಕೆ ನಿರಂತರವಾಗಿ ಜನರು ಬರುವಂತೆ ಮಾಡಲು ಅಭಿವೃದ್ದಿ ಯೋಜನೆಗೆ ಪ್ರಸ್ತಾವನೆ ಸಲ್ಲಿಸಿದ್ದು ಇಲ್ಲಿಯ ಹೋಟೆಲ್ ಹಾಗೂ ಇತರೆ ಪೂರಕ ಉದ್ಯಮಗಳು ಬೆಳೆಯಬೇಕು ಎಂದರು.
ನಮ್ಮ ಸರ್ಕಾರ ಬಡಜನತೆಗೆ ನೀಡಿರುವ ಐದು ಗ್ಯಾರಂಟಿಗಳು ಅತ್ಯಂತ ಉಪಯುಕ್ತವಾಗಿದ್ದು ನಿಜವಾಗಿ ಜನರಿಗೆ ಬದಕಲು ಅವಕಾಶ ಮಾಡಿಕೊಟ್ಟಿದೆ ಎಂದರು.
ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಸಾಮಾಜಿಕ ನ್ಯಾಯದ ಹರಿಕಾರ ಕಾಗೋಡು ತಿಮ್ಮಪ್ಪನವರು ಆರಂಭಿಸಿದ ಕಟ್ಟಡವನ್ನು ಅವರ ಹಸ್ತದಿಂದಲೇ ಇಂದು ಲೋಕಾರ್ಪಣೆಗೊಳಿಸಿರುವುದು ಸಂತಸದ ವಿಷಯ. ಜನರನ್ನು ಕಚೇರಿ ಕೆಲಸಗಳಿಗಾಗಿ ಅಲೆಸಬಾರದೆಂಬ ಉದ್ದೇಶದಿಂದ ಆಡಳಿತ ಸೌಧ ನಿರ್ಮಿಸಲಾಗಿದೆ.
ಬಗರ್‍ಹುಕುಂ ರೈತರಿಗೆ ನ್ಯಾಯ ಸಿಗಬೇಕು. ಕಾಗೋಡು ತಿಮ್ಮಪ್ಪನವರು ಬಗರ್‍ಹುಕುಂ ರೈತರ ಪರ ಹೋರಾಡಿ ಹಕ್ಕು ನೀಡಲು ಪ್ರಯತ್ನಿಸಿದ್ದರು. ಅದರ ಫಲವಾಗಿ ಇಂದಿಗೂ ಭೂಮಿ ಹಂಚಿಕೆ ಆಗುತ್ತಿದೆ. ಬಗರ್‍ಹುಕುಂ ರೈತರ, ಶರಾವತಿ ಮುಳುಗಡೆ ಸಂತ್ರಸ್ತರ ರಕ್ಷಣೆ ಕುರಿತು ಸರ್ಕಾರ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಉಸ್ತುವಾರಿ ಸಚಿವರು ಸಹ ಅವರ ಹಕ್ಕುಗಳ ರಕ್ಷಣೆಗಾಗಿ ಹಲವಾರು ಸಭೆಗಳನ್ನು ನಡೆಸಿದ್ದಾರೆ. ಮುಳುಗಡೆ ರೈತರು ಕಷ್ಟದಲ್ಲಿದ್ದು ಅವರ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದ ಅವರು ಉಸ್ತುವಾರಿ ಸಚಿವರು ತಮ್ಮ ಇಲಾಖೆಯಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಜನಪರವಾಗಿ ಮುಂದುವರೆಯಲಿದ್ದಾರೆ ಎಂದರು.
Madhu Bangarappa ಪಿಡಬ್ಲ್ಯುಡಿ ಎಇಇ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವರು ಹಾಗೂ ಮಾಜಿ ವಿಧಾನಸಭಾ ಸಭಾಪತಿಗಳಾದ ಕಾಗೋಡು ತಿಮ್ಮಪ್ಪನವರನ್ನು ಈ ಸಂದರ್ಭದಲ್ಲಿ ಅಭಿಂದಿಸಲಾಯಿತು.
ಸಾಗರ ಎಸಿ ಯತೀಶ್ ಆರ್ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ನಗರಸಭಾಧ್ಯಕ್ಷ ತುಕಾರಾಂ, ನಗರಸಭಾ ಸದಸ್ಯರು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಇಓ ನಾಗೇಶ್ ಬ್ಯಾಲಾಳ್ , ಸಾಗರ ತಹಶಿಲ್ದಾರ್ ಸೈಯದ್ ಕಲೀಂ ಉಲ್ಲಾ, ಇತರೆ ಅಧಿಕಾರಿಗಳು ಹಾಜರಿದ್ದರು.

Karnataka State Seed Corporation ರೈತರ ಹಿತವೇ ರಾಜ್ಯ ಸರ್ಕಾರದ ಮೊದಲ ಆದ್ಯತೆ- ಕೃಷಿ ಸಚಿವ ಎನ್.ಚಲುವರಾಯಸ್ವಾಮಿ

0

Karnataka State Seed Corporation ಹೆಬ್ಬಾಳದ ಪಶು ವೈದ್ಯಕೀಯ ಪರಿಷತ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮದ 312 ನೇ ನಿರ್ದೇಶಕ ಮಂಡಳಿ ಸಭೆ ನಡೆಸಿ ಮಾತನಾಡಲಾಯಿತು.

ಕರ್ನಾಟಕ ರಾಜ್ಯ ಬೀಜ ನಿಗಮ ಮಂಡಳಿ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಯಬೇಕಾಗಿದೆ. ನಿರ್ದೇಶಕರ ಚುನಾವಣೆಗೆ ಕೇಲವು ಕಾನೂನು ತೊಡಕುಗಳಿದ್ದು, ಅದನ್ನು ಪರಿಹರಿಸಿ ಶೀಘ್ರವಾಗಿ ಚುನಾವಣೆ ನಡೆಸುವಂತೆ ನಿರ್ದೆಶನ ನೀಡಲಾಯಿತು.

2022-23 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮವು ವಿವಿಧ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಮಾರಾಟದಿಂದ ಒಟ್ಟು ರೂ.494.50ಕೋಟಿಗಳ ವಹಿವಾಟು ಮಾಡಿ ರೂ.7.65 ಕೋಟಿಗಳ ತೆರಿಗೆ ನಂತರದ ಲಾಭ ಗಳಿಸಿರುತ್ತದೆ. ಇದು ಕಳೆದ 49 ವರ್ಷಗಳಲ್ಲಿ ನಿಗಮವು ವ್ಯಾಪಾರ ವಹಿವಾಟಿನಲ್ಲಿ ಗಳಿಸಿರುವ ಅತಿ ಹೆಚ್ಚಿನ ಲಾಭವಾಗಿರುತ್ತದೆ.

ಪ್ರಸಕ್ತ ಸಾಲಿನಲ್ಲಿ 2.73 ಲಕ್ಷ ಕ್ವಿಂಟಾಲ್ಗಳ ವಿವಿಧ ಬೆಳೆ / ತಳಿಗಳ ಬಿತ್ತನೆ ಬೀಜಗಳ ಮಾರಾಟದಿಂದ ರೂ.189.61 ಕೋಟಿಗಳಷ್ಟು ವಹಿವಾಟನ್ನು ಸಾಧಿಸಿರುತ್ತದೆ.

ಇದಲ್ಲದೆ, ಕಂಪನಿಯು ಪ್ರಸಕ್ತ ಸಾಲಿನಲ್ಲಿ 1.43 ಲಕ್ಷ ಮೆಟ್ರಿಕ್ ಟನ್ ಡಿ.ಎ.ಪಿ, ಯೂರಿಯಾ, ಕಾಂಪ್ಲೆಕ್ಸ್, ಎಂ.ಒ.ಪಿ., ಅಮೋನಿಯಂ, ಸಲ್ಫೇಟ್ ಮತ್ತು ಎಸ್.ಓ.ಪಿ ರಸಗೊಬ್ಬರಗಳನ್ನು ಕಾಪು ದಾಸ್ತಾನು ಯೋಜನೆಯಡಿ ಹಾಗೂ ತಂಬಾಕು ಮಂಡಳಿಗೆ ವಿತರಿಸಿ ರೂ.301.65 ಕೋಟಿಗಳ ವಹಿವಾಟು ಸಾಧಿಸಿದೆ. 2023-24ನೇ ಸಾಲಿನಲ್ಲಿ ರೂ.200 ಕೋಟಿಗಳ ವೆಚ್ಚದಲ್ಲಿ 2 ಲಕ್ಷ ಮೆಟ್ರಿಕ್ ಟನ್ ವಿವಿಧ ಶ್ರೇಣಿ ರಸಗೊಬ್ಬರಗಳ ವಹಿವಾಟನ್ನು ಮಾಡಲು ಯೋಜಿಸಲಾಗಿದೆ.

ಸಂಸ್ಥೆಯ ಎಲ್ಲಾ ವಹಿವಾಟು ಪಾರದರ್ಶಕವಾಗಿರಬೇಕು ಹಾಗೂ ಸಕಾಲದಲ್ಲಿ ಸದಸ್ಯರಿಗೆ ಮಾಹಿತಿ ನೀಡಬೇಕು. ಲೋಪದೋಷಗಳಾದರೇ ಅಧಿಕಾರಿಗಳೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ.

ನಿಗಮದ ಚಟುವಟಿಕೆಗಳಲ್ಲಿ ಹಲವು ರಚನಾತ್ಮಕ ಬದಲಾವಣೆಗಳಿಗೆ ಸಲಹೆ ಸೂಚನೆ ನೀಡಿದೆ. ರೈತರಿಗೆ ಅನುಕೂಲವಾಗುವಂತೆ ಹಾಗೂ ಉತ್ಪಾದನೆ ಹೆಚ್ಚಳಕ್ಕೆ ಪೂರಕವಾಗಿ ಬಿತ್ತನೆ ಬೀಜ ಪೂರೈಸಲು ನಿರ್ದೇಶನ ನೀಡಲಾಯಿತು.

Karnataka State Seed Corporation ಸಭೆಯಲ್ಲಿ ಕರ್ನಾಟಕ ಬೀಜ ನಿಗಮದ ನಿರ್ದೇಶಕ ಮಂಡಳಿ ಸದಸ್ಯರಾದ ಕೃಷಿ‌ಇಲಾಖೆ ಕಾರ್ಯದರ್ಶಿ ಶ್ರೀ ಅನ್ಬುಕುಮಾರ್, ಆಯುಕ್ತರಾದ ಶ್ರೀ ವೈ.ಎಸ್ ಪಾಟೀಲ್, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಹೆಚ್.ಎಸ್ ದೇವರಾಜ್ ಮತ್ತಿತರರು ಹಾಜರಿದ್ದರು.‌

G. S. Shivarudrappa ಕುವೆಂಪು ವಿವಿಯ ಕನ್ನಡ ಭಾರತಿ ಕಟ್ಟಿ ಬೆಳೆಸಿದ ಪ್ರೊ.ಶ್ರೀಕಂಠ ಕೂಡಿಗೆ

0

ಲೇ: ಡಾ.ಬಿ.ಎಂ.ಪುಟ್ಟಯ್ಯ.
ಕನ್ನಡ ವಿವಿ.ಹಂಪಿ.

G. S. Shivarudrappa ಈ ಸಲದ ಜಿ.ಎಸ್. ಶಿವರುದ್ರಪ್ಪ ಪ್ರಶಸ್ತಿ ನೆಚ್ಚಿನ ಪ್ರೊ. ಶ್ರೀಕಂಠ ಕೂಡಿಗೆಯವರಿಗೆ ಬಂದಿದೆ. ಕೂಡಿಗೆ ಸರ್ಗೆ ಗೌರವಪೂರ್ವಕ ಅಭಿನಂದನೆಗಳು.

ಜಿ.ಎಸ್.ಎಸ್. ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರವನ್ನು ಕಟ್ಟಿಬೆಳೆಸಿದ್ದು ಕನ್ನಡ ಸಾಹಿತ್ಯ ಸಂಸ್ಕೃತಿ ಇತಿಹಾಸದಲ್ಲಿ ದೊಡ್ಡ ಮೈಲಿಗಲ್ಲು. ಸಾಧನೆ’ ಪತ್ರಿಕೆ, ವಿಚಾರ ಸಂಕಿರಣಗಳು, ವಿಚಾರ ಸಂಕಿರಣದ ಕೃತಿಗಳು, ಸಾಮಾನ್ಯನಿಗೆ ಕನ್ನಡ ಸಾಹಿತ್ಯ ಚರಿತ್ರೆಯ ಸಂಪುಟಗಳು ಇಂತಹವು ಮುಖ್ಯ ಅಕಾಡೆಮಿಕ್ ಕೊಡುಗೆಗಳು. ಕನ್ನಡ ಅಧ್ಯಯನ ಕೇಂದ್ರದ ಅಧ್ಯಾಪಕರ ಬಳಗದ ವಿದ್ವತ್ತು ಇಡೀ ನಾಡಿನ ಪ್ರಜ್ಞಾವಂತರನ್ನು ಬೆಳೆಸಿದೆ.
ಜಿ.ಎಸ್.ಎಸ್. ಅವರು ಆಧುನಿಕಪೂರ್ವ ಮತ್ತು ಆಧುನಿಕ ಸಾಹಿತ್ಯ, ಸಾಹಿತ್ಯ ವಿಮರ್ಶೆ, ಕಾವ್ಯಮೀಮಾಂಸೆಗಳ ಅಧ್ಯಯನಕ್ಕೆ ವೈಚಾರಿಕ ಸ್ಪರ್ಶ ನೀಡಿದವರು. ಕುವೆಂಪು ಅವರ ಶಿಷ್ಯರಾಗಿದ್ದ ಜಿ.ಎಸ್.ಎಸ್. ಅವರು ಕುವೆಂಪು ದರ್ಶನಕ್ಕಿಂತ ಭಿನ್ನವಾದ ವೈಚಾರಿಕತೆಯನ್ನು ರೂಪಿಸಿಕೊಂಡವರು.

1977ನೇ ಇಸವಿಯಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ, ಕನ್ನಡ ಅಧ್ಯಯನ ಕೇಂದ್ರದಲ್ಲಿ, ಕುವೆಂಪು ಸಾಹಿತ್ಯ ಕುರಿತ ವಿಚಾರ ಸಂಕಿರಣಕ್ಕೆ ಕುವೆಂಪು ಕೃತಿಗಳಲ್ಲಿ ದಲಿತ ಪಾತ್ರ ಚಿತ್ರಣ’ ಎಂಬ ವಿಷಯ ಕುರಿತು ಪ್ರಬಂಧ ಮಂಡಿಸಲು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸ್ಥಾಪಕರಾದ ಪ್ರೊ. ಬಿ. ಕೃಷ್ಣಪ್ಪ ಅವರನ್ನು ಜಿ.ಎಸ್.ಎಸ್. ಅವರು ಕರೆದಿದ್ದರು. ಆ ಪ್ರಬಂಧದಲ್ಲಿ ಪ್ರೊ. ಬಿ. ಕೃಷ್ಣಪ್ಪನವರು ಕುವೆಂಪು ಅವರ ಸಾಹಿತ್ಯ ಸೃಷ್ಟಿಯ ಬುಡವನ್ನು ಹಿಡಿದು ಅದರ ಮೂಲ ವೈರುಧ್ಯಗಳನ್ನು ಎತ್ತಿತೋರಿಸಿದರು. ಇದು ಆ ಇಡೀ ಸೆಮಿನಾರನ್ನು ಬೆಚ್ಚಿಬೀಳಿಸಿತು. ಇದನ್ನು ಆಲಿಸಿಕೊಂಡವರ ಪ್ರಕಾರ ಇಡೀ ಸಭೆ ಎರಡು ನಿಮಿಷ ಮೌನವಾಯಿತು. ಕುವೆಂಪು ಅವರನ್ನು ಮೇಲುಸ್ತರದಲ್ಲಿ ಓದುವ ಅಭಿಮಾನಿಗಳಿಗೆ ಇದು ನುಂಗಲಾರದ ತುತ್ತಾಯಿತು; ಇವತ್ತಿಗೂ ಕೂಡ. ಕೃಷ್ಣಪ್ಪನವರ ಆ ವಿಮರ್ಶಾ ಲೇಖನ ಸಾಹಿತ್ಯದ ಸಾಮಾಜಿಕ ನೆಲೆಯ ಪ್ರಾಯೋಗಿಕ ಅಧ್ಯಯನಕ್ಕೆ ಮತ್ತು ಮಹಿಳಾದೃಷ್ಟಿಯ ಅಧ್ಯಯನಕ್ಕೆ
ಭದ್ರವಾದ ಬುನಾದಿ ಹಾಕಿತು. ಸಾಹಿತ್ಯ ರಚನೆಯಲ್ಲಿ ಅಧಿಕೃತತೆಯ ಪ್ರಶ್ನೆಯನ್ನು ಇದು ವಿದ್ಯುಕ್ತವಾಗಿ ಆರಂಭಿಸಿತು. ಒಬ್ಬ ಹೋರಾಟಗಾರನನ್ನು ಸಾಹಿತ್ಯದ ಸೆಮಿನಾರಿಗೆ ಕರೆದ ಜಿ.ಎಸ್.ಎಸ್. ಸಾಹಿತ್ಯ ಅಧ್ಯಯನದ ದಿಕ್ಕನ್ನೇ ಬದಲಿಸಲು ಮುಖ್ಯ ಕಾರಣರಾದರು.

G. S. Shivarudrappa ಜಿ.ಎಸ್.ಎಸ್. ತೀರಿಕೊಂಡಾಗ ಅವರನ್ನು ಕಲಾ ಗ್ರಾಮದಲ್ಲಿ ಯಾವುದೇ ಪೂಜೆ ಇತ್ಯಾದಿಗಳಿಲ್ಲದೆ ಸಂಸ್ಕಾರ ಮಾಡಲಾಯಿತು. ಆಗ ಅಲ್ಲಿ ಒಂದು ಕಡೆ ಜಿ.ಎಸ್.ಎಸ್. ಅವರ ಭಾವಗೀತೆಗಳನ್ನು, ಇನ್ನೊಂದು ಕಡೆ ತತ್ವಪದಗಳನ್ನು ಹಾಡುತ್ತಿದ್ದರು. ಮತ್ತೊಂದು ಕಡೆ
`ಜಾತಿ ಬಿಡಿ! ಮತ ಬಿಡಿ! – ಮಾನವತೆಗೆ ಜೀವ ಕೊಡಿ!’ ಎಂದು ಘೋಷಣೆ ಕೂಗುತ್ತಿದ್ದರು. ಶವ ಸಂಸ್ಕಾರದಲ್ಲಿ ಇಂತಹ ಘೋಷಣೆ ಸಾಧ್ಯವೆ? ಟಿ.ವಿ.ಯ ಲೈವ್‌ನಲ್ಲಿ ನೋಡುತ್ತಿದ್ದ ನನ್ನ ನರನಾಡಿಗಳನ್ನು ಈ ಘೋಷಣೆ ರೋಮಾಂಚನಗೊಳಿಸಿತು. ನಾನು ಭಾಗವಹಿಸಿದ್ದ ಎಷ್ಟೋ ಮೆರವಣಿಗೆಗಳು ಸಡನ್ನಾಗಿ ಕಣ್ಣಮುಂದೆ ಬಂದವು! ೮೦ರ ದಶಕದ ಆರಂಭದಲ್ಲಿ ಪ್ರೊ. ಬಿ. ಕೃಷ್ಣಪ್ಪನವರು ಡಿ.ಎಸ್.ಎಸ್. ಹೋರಾಟಕ್ಕೆ ಈ ಘೋಷಣೆಯನ್ನು ಬರೆದಿದ್ದರು. ಇದು ಆಗಿನ ಕರಪತ್ರಗಳಲ್ಲಿ, ಗೋಡೆ ಬರಹಗಳಲ್ಲಿ, ಪ್ರತಿಭಟನಾ ಮೆರವಣಿಗೆಗಳ ಘೋಷಣೆಗಳಲ್ಲಿ ಶಕ್ತಿಶಾಲಿಯಾದ ವೈಚಾರಿಕ ಸ್ಪೂರ್ತಿ ನೀಡಿತ್ತು. ಬುದ್ದ, ಬಸವ, ಡಾ. ಬಾಬಾಸಾಹೇಬರ ಆಶಯವೂ ಇದೇತಾನೆ? ಅಬ್ಬಾ! ಅಲ್ಲಿ ಕೂಗಿದ ಈ ಘೋಷಣೆಯನ್ನು ಕೇಳಿ ಜಿ.ಎಸ್.ಎಸ್. ಬದುಕು ಸಾರ್ಥಕ ಎನಿಸಿತು.

ಶ್ರೀಕಂಠ ಕೂಡಿಗೆಯವರು 1973ನೇ ಇಸವಿಯಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿ, 1974ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವು
ಭದ್ರಾವತಿ ತಾಲೂಕಿನ ಬಿ.ಆರ್. ಪ್ರಾಜೆಕ್ಟ್ನಲ್ಲಿ ಸುರುಮಾಡಿದ್ದ ಸ್ನಾತಕೋತ್ತರ ಕೇಂದ್ರದ ಕನ್ನಡ ಭಾರತಿಯಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಮುಂದುವರಿಸಿದರು. 2007, ಡಿಸೆಂಬರ್‌ನಲ್ಲಿ ನಿವೃತ್ತಿಯಾದರು. 34 ವರ್ಷ ಅಧ್ಯಾಪನ ವೃತ್ತಿಯಲ್ಲಿ ದುಡಿದಿದ್ದಾರೆ. ಜನಪದ ಸಾಹಿತ್ಯ, ಮಹಾಕಾವ್ಯ, ಸಾಹಿತ್ಯ ವಿಮರ್ಶೆಯ ಪ್ರಕಾರಗಳಲ್ಲಿ ಹಲವು ಕೃತಿಗಳನ್ನು ರೂಪಿಸಿದ್ದಾರೆ. ಇವರ ಮುದ್ದಾದ ಅಕ್ಷರಗಳು ನಾಡಿನಲ್ಲಿ ಹೆಸರುವಾಸಿ.

ಅಧ್ಯಾಪಕರು ಸಾಮಾನ್ಯವಾಗಿ, 1. ತರಗತಿಗಳ ಅಧ್ಯಾಪನ, 2. ಸಾಹಿತ್ಯ ನಿರ್ಮಾಣ, 3. ವಿವಿಧ ಶೈಕ್ಷಣಿಕ ಮಂಡಳಿಗಳ ಕೆಲಸ, 4. ಆಡಳಿತದ ಕೆಲಸ, ಈ ನಾಲ್ಕು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾರೆ. ಶ್ರೀಕಂಠ ಕೂಡಿಗೆಯವರು ಈ ನಾಲ್ಕೂ ಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಇವಲ್ಲದೆ ಮತ್ತೊಂದು ಕೆಲಸವಿದೆ; ಅದು ಓರಿಯೆಂಟ್ ಮಾಡುವುದು; ವಿದ್ಯಾರ್ಥಿಗಳಲ್ಲಿ ಸಾಮಾಜಿಕ ದೃಷ್ಟಿಕೋನವನ್ನು ಮತ್ತು ಸಾಮಾಜಿಕ ಕಳಕಳಿಯನ್ನು ಹುಟ್ಟಿಸುವುದು, ಮೂಡಿಸುವುದು. ಪಿ.ಯು.ಸಿ.ವರೆಗಿನ ಅಧ್ಯಾಪಕರು ವಿದ್ಯಾರ್ಥಿಗಳನ್ನು ಎಜುಕೇಟ್ ಮಾಡುತ್ತಾರೆ. ಮುಂದಿನ ತರಗತಿಗಳ ಅಧ್ಯಾಪಕರು ವಿದ್ಯಾರ್ಥಿಗಳನ್ನು ಓರಿಯೆಂಟ್ ಮಾಡಬೇಕು. ಆದರೆ ಈ ಕೆಲಸ ಎಲ್ಲರಿಂದಲೂ ಸಾಧ್ಯವಿಲ್ಲ. ಶ್ರೀಕಂಠ ಕೂಡಿಗೆಯವರು ಈ ಕೆಲಸ ಮಾಡಿದ್ದಾರೆ ಎಂಬುದು ಬಹಳ ಮುಖ್ಯ.

ಇವರು ಅಧ್ಯಾಪಕರಾಗಿದ್ದ ಮೊದಲ ಹಂತದ ಕಾಲವು ಕರ್ನಾಟಕ ಮತ್ತು ಭಾರತದ ಸಾಮಾಜಿಕ ಬದುಕಿನಲ್ಲಿ ಹಲವು ಪಲ್ಲಟಗಳನ್ನು ಕಾಣುತ್ತಿದ್ದ ಕಾಲ. ಭಾರತಕ್ಕೆ ಅಧಿಕಾರ ಹಸ್ತಾಂತರವಾಗಿ ಎರಡು ಶತಮಾನ ಕಳೆದಿದ್ದರೂ ಕೂಡ ಪ್ರಭುತ್ವ ಜನಸಾಮಾನ್ಯರ ಬದುಕಿನಲ್ಲಿ ಯಾವುದೇ ಮಹತ್ವದ ಬದಲಾವಣೆಗಳನ್ನು ತರಲಿಲ್ಲ. ಇದು ಜನತೆಯ ನೆಲೆಯಲ್ಲಿ ಅಸಮಾಧಾನ, ಅಸಹನೆ ಮತ್ತು ಪ್ರತಿರೋಧಗಳನ್ನು ಹುಟ್ಟಿಸಿತು. ಪ್ರಜ್ಞಾವಂತ ಮತ್ತು ಸೂಕ್ಷ್ಮ ಅಧ್ಯಾಪಕರು, ಬುದ್ದಿಜೀವಿಗಳು ಇದರಿಂದ ಹೊರಗುಳಿಯುವ ಸಾಧ್ಯತೆ ಇರಲಿಲ್ಲ. ಆಗ ಕರ್ನಾಟಕದಲ್ಲಿ ದಲಿತ ಚಳುವಳಿ, ಕಾರ್ಮಿಕ ಚಳುವಳಿ, ರೈತ ಚಳುವಳಿ, ಹಂಗಾಮಿ ನೌಕರರ ಚಳುವಳಿಗಳು ಹುಟ್ಟಿಕೊಂಡವು. ಅನ್ಯ ಭಾಷೆಗಳಿಂದ, ಅಸಮಾನತೆ ಮತ್ತು ಮೂಢನಂಬಿಕೆಗಳನ್ನು ವಿರೋಧಿಸುವ ಸಾಹಿತ್ಯ ಕನ್ನಡಕ್ಕೆ ಬಂದಿತು.

ಮುಖ್ಯವಾಗಿ, ಬಾಬಾಸಾಹೇಬ್ ಅಂಬೇಡ್ಕರ್, ಲೋಹಿಯಾ, ಪೆರಿಯಾರ್, ಕೌಂಟ್ ಕೊವೂರ್, ರಾಹುಲ ಸಾಂಸ್ಕೃತ್ಯಾಯನ ಮುಂತಾದವರ ಸಾಹಿತ್ಯ ಬಂದಿತು. ಕಾಲದ ಒತ್ತಡವೇ ಶ್ರೀಕಂಠ ಕೂಡಿಗೆಯವರು ಈ ಸಾಹಿತ್ಯವನ್ನು ಓದುವಂತೆ ಪ್ರೇರೇಪಿಸಿತು.

ಶ್ರೀಕಂಠ ಕೂಡಿಗೆಯವರು ಪ್ರತಿಭಾವಂತ ಮತ್ತು ಪರಿಣಾಮಕಾರಿ ಸಾರ್ವಜನಿಕ ಭಾಷಣಕಾರರು. ಸೊಗಸಾದ ಭಾಷೆ, ನವಿರಾದ ಹಾಸ್ಯ, ಅಸಮಾನತೆ ಮತ್ತು ಶೋಷಣಾ ವ್ಯವಸ್ಥೆಯನ್ನು ಕಟುವಾಗಿ ಹಾಗೂ ರಚನಾತ್ಮಕವಾಗಿ ಟೀಕೆ ಮಾಡುವಿಕೆ, ರಾಜಿರಹಿತವಾದ ಬದ್ದತೆ ಇವು ಇವರ ಭಾಷಣದ ಮುಖ್ಯ ಸ್ವರೂಪ. ಇಡೀ ರಾಜ್ಯದ ವಿಶ್ವವಿದ್ಯಾನಿಲಯಗಳ ಅಧ್ಯಾಪಕರಲ್ಲಿ ಈ ಪ್ರತಿಭೆ ಇದ್ದುದು ಶ್ರೀಕಂಠ ಕೂಡಿಗೆಯವರಲ್ಲಿ ಮಾತ್ರ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಇವರು ಕರ್ನಾಟಕದ ಬೀದರ್‌ನಿಂದ ಕೊಡಗಿನವರೆಗೆ, ಕೋಲಾರದಿಂದ ಬೆಳಗಾಂವರೆಗೆ, ಕಾಲೇಜುಗಳ, ಟಿ.ಸಿ.ಎಚ್.ಗಳ, ಬಿ.ಎಡ್. ಕಾಲೇಜುಗಳ ಹಲವು ಕಾರ್ಯಕ್ರಮಗಳಲ್ಲಿ ಮತ್ತು ವಿಶ್ವವಿದ್ಯಾನಿಲಯಗಳು, ಇತರೆ ಸಂಸ್ಥೆಗಳಲ್ಲಿ, ಹಲವು ಹೋರಾಟದ ವೇದಿಕೆಗಳಲ್ಲಿ, ಸರಳ ಮದುವೆಯ ವೇದಿಕೆಗಳಲ್ಲಿ ಉಪನ್ಯಾಸ ನಿಡಿದ್ದಾರೆ. ಸಾಮಾಜಿಕ ಆರ್ಥಿಕ ನೆಲೆಯ ಅಸಮಾನತೆಯ ಪರಿಣಾಮಗಳು, ಅನಕ್ಷರತೆ ಮತ್ತು ಮೂಢನಂಬಿಕೆಗಳ ಪರಿಣಾಮಗಳು, ಆಳುವ ರಾಜಕಾರಣಿಗಳ ಶೋಷಕ ಪ್ರವೃತ್ತಿಗಳನ್ನು ತಮ್ಮ ಉಪನ್ಯಾಸಗಳಲ್ಲಿ ಹಸಿಹಸಿಯಾಗಿ ಬಿಡಿಸಿಟ್ಟಿದ್ದಾರೆ. ಬುದ್ದ, ಬಸವ, ಬಾಬಾಸಾಹೇಬ್ ಅಂಬೇಡ್ಕರ್, ಲೋಹಿಯಾ, ಕುವೆಂಪು ಮುಂತಾದವರ ವೈಚಾರಿಕ ತಿಳುವಳಿಕೆಯನ್ನು ಹಂಚಿದ್ದಾರೆ. ಇವರ ಉಪನ್ಯಾಸಗಳನ್ನು ವಿಡಿಯೋ ರೆಕಾರ್ಡ್ ಮಾಡಿದ್ದಿದ್ದರೆ ಇದೊಂದು ಅದ್ಭುತವಾದ ಬೌದ್ಧಿಕ ಸಂಪನ್ಮೂಲವಾಗುತ್ತಿತ್ತು. ಶ್ರೀಕಂಠ ಕೂಡಿಗೆಯವರ ಬೌದ್ದಿಕ ಸಂಪನ್ಮೂಲ ಇವರ ಆಕರ್ಷಕವಾದ ಭಾಷಣಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಇದು ಇವರ ಪ್ರಕಟಿತ ಸಾಹಿತ್ಯವನ್ನು ಮೀರಿದ ಬೌದ್ಧಿಕ ಪರಿಣಾಮವನ್ನು ಬೀರಿದೆ. ನಾಡಿನ ಎಷ್ಟೋ ಟಿ.ಸಿ.ಎಚ್. ಮತ್ತು ಬಿ.ಎಡ್. ವಿದ್ಯಾರ್ಥಿಗಳು ಇವತ್ತೂ ಕೂಡ ಶ್ರೀಕಂಠ ಕೂಡಿಗೆಯವರ ಭಾಷಣದ ತುಣುಕುಗಳನ್ನು ನೆನಪಿಸುತ್ತಾರೆ.

ಶ್ರೀಕಂಠ ಕೂಡಿಗೆಯವರ ತರಗತಿಯೊಳಗಿನ ಪಾಠಗಳ ವಿಶಿಷ್ಟತೆ ಅನನ್ಯವಾದುದು. ಕೇವಲ ಪರೀಕ್ಷೆಗಳಿಗೆ ಸಿದ್ದತೆ ಮಾಡಿಸುವುದು ಇದರ ಗುರಿಯಾಗಿರಲಿಲ್ಲ. ಪ್ರತಿಯೊಂದು ತರಗತಿಯಲ್ಲೂ ಕನಿಷ್ಠ ಹತ್ತಕ್ಕಿಂತ ಹೆಚ್ಚು ಪುಸ್ತಕಗಳ ಸಂಪೂರ್ಣ ಮಾಹಿತಿ ಕೊಡುತ್ತಿದ್ದರು. ಕೆಲವು ಪುಸ್ತಕಗಳ ಮುಖ್ಯ ಭಾಗಗಳನ್ನು ಉಲ್ಲೇಖ ಮಾಡುತ್ತಿದ್ದರು. ನಮ್ಮ ಎಂ.ಎ. ತರಗತಿಯ ಬೆಳಗಿನ ಅವಧಿಯಲ್ಲಿ ಒಂದು ದಿನ ಭರತೇಶ ವೈಭವ’ದ
‘ಉಪ್ಪರಿಗೆ ಸಂಧಿ’ ಮತ್ತು ಸಂಭೋಗ ಸಂಧಿ’ಯ ಕೆಲವು ಸಾಲುಗಳನ್ನು ಅತ್ಯಂತ ರಸವತ್ತಾಗಿ, ಭಾವತುಂಬಿ ಹೇಳಿದರು. ಅದೇ ದಿನ ಮದ್ಯಾನ ನೋಡಿದರೆ, ನಮ್ಮ ತರಗತಿಯ ಅಷ್ಟೂ ಸಹಪಾಠಿಗಳು ಗ್ರಂಥಾಲಯಕ್ಕೆ ಮುತ್ತಿಗೆ ಹಾಕಿ, ಭರತೇಶ ವೈವಭ’ ಕಾವ್ಯದ ಹುಡುಕಾಟದ ತೀವ್ರ ಪೈಪೋಟಿಯಲ್ಲಿ ಮುಳುಗಿದ್ದರು. ಒಬ್ಬ ಸೃಜನಶೀಲ ಅಧ್ಯಾಪಕ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಸಂವೇದನೆಯನ್ನು ಹುಟ್ಟಿಸುವ ಪರಿಣಾಮಕಾರಿ ಮತ್ತು ಶಕ್ತಿಶಾಲಿ ಕೆಲಸಕ್ಕೆ ಇದೊಂದು ಉದಾಹರಣೆ ಅಷ್ಟೆ.

ಸಾಹಿತ್ಯವನ್ನು ಕುರಿತ ಇವರ ತರಗತಿಗಳಲ್ಲಿ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ವಿಷಯಗಳು ಸಾಹಿತ್ಯವನ್ನು ಅಪ್ಪಿಕೊಂಡು ಬರುತ್ತಿದ್ದವು. 1990ರಿಂದ 1992ರಲ್ಲಿ ನಾನು ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಎಂ.ಎ. ಓದಿದವನು. ಆಗ ಇವರ ಪಾಠದಲ್ಲಿ, ಕೊಲ್ಲಿ ವಾರ್, ಬಾಬ್ರಿ ಮಸೀದಿಯ ಧ್ವಂಸ, ಐ.ಎಂ.ಎಫ್. ಸಾಲದ ಪರಿಣಾಮಗಳು, ಮಂಡಲ್ ವರದಿ ಜಾರಿಯ ವಿಷಯ ಇವೆಲ್ಲವೂ ಸಾಹಿತ್ಯದ ಚರ್ಚೆಯೊಳಗೆ ಬೆರೆತುಬರುತ್ತಿದ್ದವು. ಕೆಲವು ಸಲ ಇವರ ತರಗತಿಗಳಿಗೆ ಬೇರೆ ವಿಭಾಗದ ವಿದ್ಯಾರ್ಥಿಗಳೂ ಬರುತ್ತಿದ್ದರು.

ಹಳ್ಳಿಗಳಲ್ಲಿ ಜಮೀನ್ದಾರರು ದಲಿತರನ್ನು, ಮಹಿಳೆಯರನ್ನು ನಡೆಸಿಕೊಳ್ಳುವ ಬಗೆಗೆ ಇವರ ವರ್ಣನೆ; ಅನಕ್ಷರಸ್ಥರ ಭಾಷೆ, ಗದ್ದೆಗಳಲ್ಲಿ ಮಾಡುವ ನಾನಾ ಕೆಲಸಗಳ ವರ್ಣನೆ ಒಂದೇ ಎರಡೇ! ನೂರಾರು! ಕನ್ನಡದ ಯಾವ ಕಥೆಗಳಲ್ಲೂ, ಕಾದಂಬರಿಗಳಲ್ಲೂ ಇವು ಇಷ್ಟೊಂದು ಸೂಕ್ಷ್ಮವಾಗಿ ಬಂದಿಲ್ಲ ಎಂದು ನಾನು ಧೈರ್ಯವಾಗಿ ಹೇಳಬಲ್ಲೆ. ಬರೆದರೆ ಕೂಡಿಗೆ ಮೇಷ್ಟ್ರ ತರಗತಿಯ ಜಗತ್ತು’ ಎಂಬ ಕಿರುಪುಸ್ತಕವನ್ನೇ ಬರೆಯಬಹುದೇನೋ. ಜನ್ನನ ಯಶೋದರ ಚರಿತೆ’ಯನ್ನು ಪಾಠ ಮಾಡುತ್ತಾ, ಹಳ್ಳಿಗಳಲ್ಲಿ ಹುಡುಗರು ಮುತ್ತುಗದ ಹೂವುಗಳ ಮಧ್ಯದಲ್ಲಿರುವ ದಂಟಿನಿಂದ ಪೀಪಿ ಮಾಡಿ ಊದುವುದನ್ನು ವರ್ಣಿಸುತ್ತಿದ್ದರು. ನಾನೂ ಕೂಡ ಹೀಗೆ ಪೀಪಿ ಮಾಡಿ ಊದಿದವನೆ. ಹಾಗಾಗಿ ಅಂತಹದ್ದೆಲ್ಲ ನನಗೆ ಬಹಳ ಇಷ್ಟವಾಗುತ್ತಿತ್ತು.

ನಾನು ಎಂ.ಎ.ಗೆ ಬರುವಾಗಲೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ದಲಿತ ವಿದ್ಯಾರ್ಥಿ ಒಕ್ಕೂಟದ ಒಳಗಿನವನಾಗಿದ್ದೆ. ಕೂಡಿಗೆ ಮೇಷ್ಟ್ರ ತರಗತಿಯ ಪಾಠಗಳ ದೃಷ್ಟಿಕೋನಕ್ಕೂ ಮತ್ತು ಡಿ.ಎಸ್.ಎಸ್.ನ ದೃಷ್ಟಿಕೋನಕ್ಕೂ ಸಾಮ್ಯತೆ ಇತ್ತು. ಇದರಿಂದ ಇವರ ವಿಚಾರಗಳು ನನಗೆ ಇಷ್ಟವಾದವು. ಸುಮಾರು 50 ವರ್ಷಗಳ ಕಾಲ ನಾಡಿನಾದ್ಯಂತ ಇವರು ತಮ್ಮ ವಿಚಾರಗಳನ್ನು ಹಂಚಿದ್ದಾರೆ. ಇವರ ಆಲೋಚನೆಗಳಿಂದ ಪ್ರಭಾವಿತರಾದ ಹಲವರು ಅಧ್ಯಾಪಕರಾಗಿದ್ದಾರೆ; ಅಧಿಕಾರಿಗಳಾಗಿದ್ದಾರೆ. ನೌಕರರಾಗಿದ್ದರೆ. ಇವರಲ್ಲೇ ಕೆಲವರು ಕೂಡಿಗೆ ಮೇಷ್ಟ್ರ ಜೀವನದೃಷ್ಟಿಯ ಸಾಮಾಜಿಕ ನೈತಿಕತೆಯ ಚೌಕಟ್ಟಿನ ಆಚೆಗೆ ವ್ಯವಹಾರ ನಡೆಸಿದ್ದಾರೆ. ಅಂತಹವರನ್ನು ನೆನೆಸಿಕೊಂಡು ಮೇಷ್ಟ್ರು ಅಯ್ಯೊ, ಅವರು ಹಾಗಾದರಲ್ಲ’ ಎಂದು ವ್ಯಥೆ ಪಡುತ್ತಾರೆ. ಇರಲಿ.

ಕೂಡಿಗೆ ಮೇಷ್ಟ್ರನ್ನು ಪ್ರೀತಿಸುವ, ಗೌರವಿಸುವ, ಇವರ ಆರೋಗ್ಯ ಚೆನ್ನಾಗಿರಲಿ ಎಂದು ಆಶಿಸುವ ನೂರಾರು ಮನಸ್ಸುಗಳು ನಾಡಿನಲ್ಲಿವೆ. ಮೇಷ್ಟ್ರಿಗೆ ನಾಳೆ ಜಿ.ಎಸ್.ಎಸ್. ಪ್ರಶಸ್ತಿ ಪ್ರದಾನ ಎಂಬುದು ಅವರ ಜೊತೆಗೆ ನಮಗೆಲ್ಲರಿಗೂ ಸಂತೋಷ.

ಜಿ.ಎಸ್.ಎಸ್. ಅವರ ಸಾಹಿತ್ಯಕ ಮತ್ತು ಸಾಮಾಜಿಕ ಬದ್ದತೆಯನ್ನು ಕಾಯ್ದುಕೊಂಡಿರುವ ಕೂಡಿಗೆ ಮೇಷ್ಟ್ರಿಗೆ ಜಿ.ಎಸ್.ಎಸ್. ಪ್ರಶಸ್ತಿ ಬಂದು, ಆ ಪ್ರಶಸ್ತಿ ತನೆಗತಾನೆ ಸಾರ್ಥಕವಾಗಿದೆ.

ಲೇ: ಡಾ.ಬಿ.ಎಂ.ಪುಟ್ಟಯ್ಯ.