ಪಾತರಗಿತ್ತಿ ಎಂದು ಕರೆಯಲ್ಪಡುವ ಜೀವಿ ಅಂದ್ರೆ, ಅದು ಚಿಟ್ಟೆ. ಈ ಚಿಟ್ಟೆ ಮೈಮೇಲೆ ಬಣ್ಣಬಣ್ಣದ ಬಣ್ಣಗಳನ್ನು ಒಳಗೊಂಡಿರುತ್ತದೆ. ಆ ರಂಗಿನ ಚಿತ್ತಾರವನ್ನು ನೋಡಿದ್ರೆ… ಎಂಥವರಿಗೂ ಕೂಡ ಮನಸ್ಸಿಗೆ ಉಲ್ಲಾಸ ವಾಗುತ್ತೆ.
ಚಿಟ್ಟೆ ನಾ ಇಷ್ಟ ಪಡೆದಿರುವವರೇ ಇಲ್ಲ. ಯಾಕಂದ್ರೆ… ಅದರ ರೆಕ್ಕೆಯ ಮೇಲೆ ಅನೇಕ ಬಣ್ಣಗಳಿಂದ ಚಿತ್ರತವಾಗಿರುತ್ತದೆ. ಆದ್ದರಿಂದ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಈ ಪಾತರಗಿತ್ತಿ ಅಂದರೆ ಬಲು ಅಚ್ಚುಮೆಚ್ಚು.
ಚಿಟ್ಟೆ ಅಥವಾ ಪಾತರಗಿತ್ತಿಯ ಜೀವನಚಕ್ರ ಅಂದ್ರೆ ಸಂಪೂರ್ಣ ರೂಪ ಪರಿವರ್ತನೆ. ಇದರಲ್ಲಿ ಮೊಟ್ಟೆ, ಕಂಬಳಿಹುಳು, ಕೋಶಾವಸ್ಥೆ ಮತ್ತು ಪ್ರೌಢವಸ್ಥೆ ಎಂಬ 4 ಹಂತಗಳಿರುತ್ತವೆ.
ಮೊಟ್ಟೆಯಿಂದ ಹೊರಬರುವ ಕಂಬಳಿಹುಳು ಅತಿಥೇಯ ಸಸ್ಯದ ಎಲೆಗಳನ್ನು ತಿನ್ನುತ್ತಾ ಸೂಕ್ತ ಗಾತ್ರಕ್ಕೆ ಬೆಳೆದಾಗ, ತನ್ನ ಸುತ್ತ ಕೋಶವನ್ನು ರಚಿಸಿ ಕೊಳ್ಳುತ್ತದೆ. ಕೋಶದಲ್ಲಿ ಕಂಬಳಿಹುಳುವು ಕ್ರಮೇಣವಾಗಿ ಚಿಟ್ಟೆಯಾಗಿ ಮಾರ್ಪಡುತ್ತದೆ.
ಕೆಲವು ಕಂಬಳಿಹುಳುಗಳು ಆಹಾರವನ್ನು ತಿಂದು ಬೆಳವಣಿಗೆಯಾದ್ರೆ,ಇನ್ನು ಕೆಲವು ಕಂಬಳಿ ಹುಳು ಪೊರೆಯನ್ನು ಕಳಚಿ ದೇಹವನ್ನು ಬೆಳೆಸಿಕೊಳ್ಳುತ್ತವೆ. ಈ ಜೀವಿಯ ಮತ್ತೊಂದು ವಿಶೇಷ ಏನೆಂದರೆ ಕಂಬಳಿ ಹುಳುವಿನಿಂದ ಪ್ರೌಢ ಚಿಟ್ಟೆ ಯಾಗಲು ಬೇಕಾಗುವಷ್ಟು ಆಹಾರವನ್ನು ದೇಹದಲ್ಲಿ ಶೇಖರಿಸಿಟ್ಟುಕೊಂಡು ನಂತರ, ಆಹಾರ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸುತ್ತವೆ.
ಪೂರ್ತಿಯಾಗಿ ಬೆಳೆದಂತಹ ಹುಳು ಒಂದು ವಿಶಿಷ್ಟ ದ್ರವವನ್ನು ಸ್ರವಿಸಿ, ರೇಷ್ಮೆ ದಾರದ ಒಂದು ಮೆತ್ತೆಯನ್ನು ತಯಾರಿಸುತ್ತವೆ. ಅದನ್ನು ರೆಂಬೆ ಅಥವಾ ಎಲೆಗಳ ಕೆಳಗೆ ಆಧಾರಕ್ಕೆ ಅಂಟಿಸಿ ಕೊಳ್ಳುತ್ತವೆ. ಅದಕ್ಕೆ ತನ್ನ ದೇಹದ ಒಂದು ತುದಿಯನ್ನು ಮೆತ್ತಿಗೆ ಸಿಕ್ಕಿಸಿ, ತಲೆಕೆಳಗಾಗಿ ಜೋತಾಡುತ್ತವೆ. ನಂತರ ಚರ್ಮವನ್ನು ಕಳಚಿ ತನ್ನ ಸುತ್ತ ಕೋಶ ನಿರ್ಮಿಸಿಕೊಳ್ಳುತ್ತದೆ. ಈ ಕೋಶದಿಂದ ಹೊರಬರಬೇಕಾದರೆ ಸಂಪೂರ್ಣವಾಗಿ ಚಿಟ್ಟೆಯಾಗಿ ಹೊರಬರುತ್ತದೆ. ಆಹಾ..! ಈ ಪರಿವರ್ತನೆಯ ಪ್ರಕ್ರಿಯೆ ಎಷ್ಟೊಂದು ಸುಂದರ ಆಗಿದೆ ಅಲ್ವಾ…
ಹೂವಿನ ತೋಟದಲ್ಲಿ ನಾವು ಅನೇಕ ಕಲರ್ ಫುಲ್ ಚಿಟ್ಟೆಗಳನ್ನು ನೋಡಿರುತ್ತೇವೆ. ಸಾಮಾನ್ಯವಾಗಿ ನಾವು ಚಿಟ್ಟೆಗಳನ್ನ ಸಂತೋಷದ ಸಂಕೇತವಾಗಿ ಬಳಸುತ್ತೇವೆ.
ಒಂದೊಮ್ಮೆ ನಿಮ್ಮ ಮನಸ್ಸಿಗೆ ಬೇಸರವಾದಾಗ, ಈ ರಂಗಿನ ಚಿತ್ತಾರವನ್ನು ಒಳಗೊಂಡಿರುವ ಚಿಟ್ಟೆಯನ್ನು ನೋಡಿ… ಅದೇಷ್ಟೇ, ದೊಡ್ಡ ಬೇಸರವಾಗಿ ದ್ರೂ ಸಹ ಒಮ್ಮೆಲೆ ಎಲ್ಲವನ್ನು ಮರೆಸುವಂತಹ ಶಕ್ತಿ ಈ ಚಿಟ್ಟೆಗಿದೆ.
ಮುಂಜಾನೆ ಮತ್ತು ಮುಸ್ಸಂಜೇಲಿ ನಿಮ್ಮ ಹೂ ತೋಟಕ್ಕೆ ಬಂದಿರುವ ಚಿಟ್ಟೆಯಿಂದ ಗಮನಿಸಿ. ಆ ಚಿಟ್ಟೆಯ ಹಾರಾಟ , ಒಂದು ಹೂವಿನಿಂದ ಇನ್ನೊಂದು ಹೂವಿಗೆ ಚಲಿಸುವುದು ಮತ್ತೊಂದು ಹೂವಿಗೆ ಚಲಿಸುವುದು ಅದು ತನ್ನದೇ ಆದಂತಹ ಲೋಕದಲ್ಲಿ ಮುಳುಗಿರುತ್ತದೆ. ಅದರ ವರ್ತನೆಯನ್ನ ಸುಮ್ಮನೆ ಕುಳಿತು ವೀಕ್ಷಿಸಿ ನೋಡಿ, ಆಗ ಉತ್ತರ ನಿಮಗೆ ಗೊತ್ತಾಗುತ್ತೆ…
ವಾ…! ಚಿಟ್ಟೆಯನ್ನು ವರ್ಣಿಸೋಕೆ, ಪದಗಳೇ ಸಾಲದು…
ಯಾಕಂದ್ರೆ, ಅದರ ಮೃದುವಾದ ರೆಕ್ಕೆಗಳು, ಇಳಿ ಸೂರ್ಯನ ಕಿರಣಗಳಿಗೆ ಗೋಲ್ಡನ್ ಕಲರ್ ಆಗಿ ಹೊಳೆಯುವುದನ್ನು ನೋಡಿದ್ರೆ ಒಂದು ಕ್ಷಣ ನಮ್ಮನ್ನೇ ನಾವು ಮರೆತು ಹೋಗ್ತಿವಿ…
ಆದ್ರೇ,ಒಂದು ವಿಷಾದದ ಸಂಗತಿ ಅಂದ್ರೆ, ಇಷ್ಟೆಲ್ಲಾ ಮನಸ್ಸಿಗೆ ಖುಷಿ ಕೊಡೋ ಪಾತರಗಿತ್ತಿಯ ಆಯಸ್ಸು ಮಾತ್ರ ಒಂದು ವಾರವಷ್ಟೇ.
ನಿಜಕ್ಕೂ, ಈ ಪರಿಸರವೇ ವಿಭಿನ್ನ ಅಲ್ಲಿರುವ ಜೀವಿಗಳನ್ನು ರಮಣೀಯ… ಒಟ್ಟಿನಲ್ಲಿ ಈ ರಂಗುರಂಗಿನ ಚಿತ್ತಾರವನ್ನು ಸೃಷ್ಟಿಸಿದ ಸೃಷ್ಟಿಕರ್ತನಿಗೆ ನಮ್ಮದೊಂದು ನಮನ…
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Latest News on WhatsApp
Why Keelambi Media Lab Pvt Ltd ?
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.