ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿರುವ ಎರಡು ಸೇನಾ ನೆಲೆಗಳ ಮೇಲೆ ಬಲೂಚಿಸ್ತಾನ ಲಿಬರೇಷನ್ ಆರ್ಮಿ ಸಂಘಟನೆಯ ಉಗ್ರರು ದಾಳಿ ನಡೆಸಿದೆ.
ಪಾಕಿಸ್ತಾನದ ನೂರು ಸೈನಿಕರನ್ನು ಹತ್ಯೆಗಯ್ಯಲಾಗಿದೆ ಎಂದು ಮಾಹಿತಿ ದೊರಕಿದೆ. ಇನ್ನೊಂದೆಡೆ ಗುಂಡಿನ ಚಕಮಕಿಯಲ್ಲಿ 4 ಸೈನಿಕರು ಮೃತಪಟ್ಟಿದ್ದಾರೆ. ಯೋಧರ ಗುಂಡಿಗೆ 15 ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ಪಾಕ್ ಸರ್ಕಾರ ತಿಳಿಸಿದೆ.
ಪಂಜ್ಗುರ್ ಮತ್ತು ನೋಶ್ಕಿ ಜಿಲ್ಲೆಗಳಲ್ಲಿ ಎರಡು ನೆಲೆಗಳ ಮೇಲೆ ಉಗ್ರರು ದಾಳಿ ಮಾಡಿದ್ದಾರೆ. ಇದಕ್ಕೆ ಪಾಕ್ ಸೈನಿಕರು ಸಹ ಪ್ರತಿ ದಾಳಿ ನಡೆಸಿದ್ದಾರೆ.
ಉಗ್ರರ ವಿರುದ್ಧದ ಹೋರಾಟದಲ್ಲಿ ಸೇವೆಗೆ ಭಾರಿ ಮುನ್ನಡೆ ದೊರೆತಿದೆ. ನೋಶ್ಕಿ ಯಲ್ಲಿ ಒಂಬತ್ತು ಉಗ್ರರು ಮತ್ತು ನಾಲ್ವರು ಸೈನಿಕರು ಮೃತಪಟ್ಟಿದ್ದಾರೆ. ಪಂಜ್ಗುರ್ ನಲ್ಲಿ ಆರು ಉಗ್ರರ ಹತ್ಯೆ ಮಾಡಲಾಗಿದೆ ಎಂದು ಗೃಹಸಚಿವ ಶೇಕ್ ರಶೀದ್ ಅಹಮದ್ ತಿಳಿಸಿದ್ದಾರೆ.
ಪಾಕಿಸ್ತಾನದ ಎರಡು ನೆಲೆಗಳನ್ನು ದ್ವಂಸ ಮಾಡಿದ್ದೇವೆ. ನೆಲೆಗಳು ನಮ್ಮ ನಿಯಂತ್ರಣದಲ್ಲಿಯೇ ಇವೆ. ನಮಗೆ ಪ್ರತಿರೋಧ ಒಡ್ಡುವ ಲ್ಲಿ ಸೈನಿಕರು ವಿಫಲರಾಗಿದ್ದಾರೆ. ಇನ್ನು ಕಾರ್ಯಾಚರಣೆ ಮುಂದುವರಿಯುತ್ತಿದೆ ಎಂದು ಬಿಎಲ್ಎ ಹೇಳಿಕೊಂಡಿದೆ.
ಪ್ರತ್ಯೇಕ ಬಲೂಚಿಸ್ತಾನಕ್ಕಾಗಿ ಬಿಎಲ್ಎ ಹೋರಾಡುತ್ತಿದೆ. ಕಳೆದ ವಾರವಷ್ಟೇ ಪಾಕ್ ನೆಲೆಗಳ ಮೇಲೆ ದಾಳಿ ಮಾಡಿ 10 ಸೈನಿಕರ ನಾವು ಹತ್ಯೆಗೈದಿದ್ದಾರೆ.